Thursday, January 28, 2010


ಕುಮಟಾ ಜಾತ್ರೆಗೂ ನನಗೂ ಅದಾವ ಸಂಬಂಧವೋ ಗೊತ್ತಿಲ್ಲ , ಪ್ರತಿಸಲದ ಜಾತ್ರೆಯ timeನಲ್ಲಿ ನಾನು ಮನೆಗೆ ಬಂದಿರ್ತೇನೆ. ಅದೇನೋ ಸಂಭ್ರಮ ,ಖುಷಿ, ಒಂಥರದ ಕುತೂಹಲ, ಜನರ ಗದ್ದಲ, ಎಲ್ಲ. ವರುಷಕ್ಕೊಮ್ಮೆ ಬರುವ ಏಳನೇ ಋತು ಅನ್ನಬಹುದೇನೋ .!
ಮಂಗಳೂರಿನಲ್ಲಿ ದಿನವೂ ಜನ ಜಾತ್ರೆಯನ್ನು ನೋಡುವ ನನಗೆ ಜನಜಂಗುಳಿಯೇನು ಹೊಸದಲ್ಲ, low waist pant ಹಾಕೋರನ್ನ ನೋಡಿ ನೋಡಿ ಸಾಕಾಗಿದೆ. ಎಲ್ಲ rock star ಅಥವಾ model ಥರ ಕಣೋ artificial ಮುಖಗಳೇ ಹೆಚ್ಚು .
ಆದರೆ ಮೊನ್ನೆ ಜಾತ್ರೆ ಮುಗಿದ ಮಾರನೆ ದಿನ ಅಮ್ಮನ ಜೊತೆ ಹೋಗಿತ್ತು ನನ್ನ ಸವಾರಿ.ನಾನು ತುಂಬಾ miss ಮಾಡೋ childhood days ಸಿಕ್ಕಿದ ಹಾಗೆ ಅನಿಸಿತ್ತು . ಅದೇನೋ ಖುಷಿ ಅಮ್ಮನ ಜೊತೆ ಜಾತ್ರೆಯ ಪೇಟೆಗೆ ಹೋಗುವುದು ಅಂದ್ರೆ.
ಸುಮ್ಮನೆ ಅಮ್ಮನ ಹಿಂದೆ ಓಡಾಡುತ್ತ ಜನರನ್ನು ನೋಡುತ್ತಿದ್ದೆ ಅದೇನು ಕುತೂಹಲ ಜನರಲ್ಲಿ ಈ ಜಾತ್ರೆಯ ಬಗ್ಗೆ ? ಅಲ್ಲಿಯ ಅಂಗಡಿಗಳ ಬಗ್ಗೆ? ಸಿಹಿತಿಂಡಿಗಳ ಬಗ್ಗೆ ? ಸುತ್ತಲಿನ ಹಳ್ಳಿಗಳ ಜನರು, ಪೇಟೆಯ ಜನರು ಎಲ್ಲ ಜಾತ್ರೆಯ ಜಂಗುಳಿಯಲ್ಲಿ 'ಜಾತ್ರೆಯ ಜನರೇ' . ಬೇಧ ಭಾವ ಏನಿಲ್ಲ . ಅದೆಷ್ಟು ಅಂಗಡಿಗಳು..ಮೇಲಿಂದ ಬಗೆಬಗೆಯ ಹೆಸರುಗಳು ಆ ಬಣ್ಣದ ಬಳೆಗಳಿಗೆ !! 'ಮಳೆಯಲಿ ಜೊತೆಯಲಿ ಬಳೆ','ಮಗಧೀರ ಬಳೆ', 'all izz well ಬಳೆ' ...ಗಿರಾಕಿಗಳ ಸೆಳೆಯಲು ವಿವಿಧ ಹೆಸರಿನ ಮೇಳ .!ಹೆಂಗಸರ , ಹುಡುಗಿಯರ ಕುತೂಹಲ, ಚೌಕಾಶಿ,ಖರೀದಿ ..ಅದೆಲ್ಲ ಕೇಳುವುದೇ ಒಂಥರಾ ಮಜಾ. .!ಏನೋ ಒಂದು ಸುಂದರ ಕನಸಿನ ಲೋಕದಂತೆ ಭಾಸವಾದದ್ದು ಮೊದಲ ಸಲ .!
ಹುಡುಗಿಯರಿಗೆ ಲೈನ್ ಹೊಡೆಯಲು ಬರುವ ಒಂದಿಷ್ಟು ಹುಡುಗರ ಗುಂಪು. ತನ್ನ ಕಾಡಿಗೆಯ ಕಣ್ಣಂಚಲಿ ಓರೆನೋಟ ಬೀರುವ ಹುಡುಗಿಯರ ಒಂದು ನೋಟಕ್ಕೆ ನಮ್ಮ ಪಡ್ಡೆ ಹೈಕಳು ಕಲಾಸ್ ..!!ಎಲ್ಲವನ್ನು scan ಮಾಡುತ್ತಿದ್ದವು ನನ್ನ ನಯನ ದ್ವಯಗಳು.
ಜಾತ್ರೆಯಲಿ ಸಿಕ್ಕ ನನ್ನ ಹಳೆ ಗೆಳೆಯ ಗೆಳತಿಯರು . ಒಂದು ಮಾತು ಹೇಳದೆ ಕೊರಳಲ್ಲಿ ಕರಿಮಣಿ ಸರ ಹಾಕಿಸಿಕೊಂಡು ಸಿಕ್ಕಿಬಿದ್ದ ಗೆಳತಿ , ಫೋನ್ ನಂಬರ್ ವಿನಿಮಯ ! ಮತ್ತೆ ಚಿಗುರಿದ ಹಳೆ ಸ್ನೇಹ .
ಯಾವ classಗೂ ಹೋಗದೆ ಅದ್ಭುತವಾಗಿ ಕೊಳಲು ಬಾರಿಸುತ್ತ,ಮಾರುವ ಹುಡುಗನ fan ಆಗಿ ಹೋಗಿದ್ದೆ ನಾನು .ಪುಟ್ಟ ಮಕ್ಕಳ ಕುತೂಹಲದ ನೋಟಕ್ಕೆ ಬೆರಗಾಗಿದ್ದೆ,ಮಾರಾಟಗಾರರ ಮಾತಿನ ಮೋಡಿಗೆ ಮರುಳಾಗಿದ್ದೆ , ಹಲವು ಬಣ್ಣಗಳ ಜಗತ್ತಿನೊಂದಿಗೆ ಕಳೆದುಹೋಗಿದ್ದೆ.
ಏನು ಖರೀದಿಸದೇ ಸುಮ್ಮನೆ ನೋಡುತಿದ್ದ ನನ್ನ ಪರಿಗೆ ಅಮ್ಮಂಗೆ ಅಚ್ಚರಿಯೋ ಅಚ್ಚರಿ ..! ಅಲ್ಲಿಯ ವರೆಗೆ ಸುಮ್ಮನಿದ್ದ ಅವರು ಕೊನೆಗೆ ಕೇಳಿದ್ದರು "ಎಂತೂ ತಗಂಜೆ ಇಲ್ಯಲೇ "ವಾಸ್ತವಕ್ಕೆ ಬಂದು ಸುಮ್ಮನೆ ನಕ್ಕು "ಗುಳ್ಳೆ ಮಾಡೂದು (bubler)ಬೇಕು"ಎಂದು ಕೇಳಿದ್ದೆ ಅಮ್ಮನನ್ನು ೫ ರ ಪುಟ್ಟ ಹುಡುಗಿಯಂತೆ .!ಅಮ್ಮ ಕೊಡಿಸಿದ್ದರು ಮಾರುವ ಹುಡುಗ ನಗುತ್ತಿದ್ದ . ನಾನೂ ನಕ್ಕಿದ್ದೆ ಖುಷಿಯಿಂದ .ನನ್ನ ಬಾಲ್ಯ ನನಗೆ ಸಿಕ್ಕಿತ್ತು ಮುಷ್ಟಿಯಲ್ಲಿ . ಆ ಬಣ್ಣದ ಗುಳ್ಳೆಗಳಲ್ಲಿ. ಮೊದಲ ಸಲ ಜಾತ್ರೆಯನು ನೋಡುತ್ತಿದ್ದಂತೆ ಭಾಸವಾಗಿತ್ತು ನನಗೆ .
ಮೊದಲು ಹೀಗೆಲ್ಲ ಅನಿಸ್ತಿರ್ಲಿಲ್ಲ. ಜಾತ್ರೆ ಅಂದ್ರೆ ಒಂದಿಷ್ಟು ಖರೀದಿ,ಗಮ್ಮತ್ತು,ಖುಷಿ ಅಷ್ಟೇ .ಆದ್ರೆ ಮೊನ್ನೆ ನನ್ನ ವಿಚಾರಗಳನ್ನು ನೋಡಿ ಮಂಗಳೂರು ನನ್ನನ್ನು ಇಷ್ಟೊಂದು sensitive ಮಾಡಿದೆಯಾ ? ಎಂದುಕೊಂಡೆ . !!

2 comments:

  1. ತುಂಬಾ ಸುಂದರವಾದ ಲೇಖನ,
    ನನಗು ನನ್ನ ಬಾಲ್ಯ ನೆನಪಾಯಿತು
    ಅಜ್ಜನ ಊರಿನ ಜಾತ್ರೆ, ಎತ್ತಿನಗಾಡಿ ಸವಾರಿ, ಹೊಲಗದ್ಯೆಯ ತಂಪು,
    ಈ ಬೆಂಗಳೂರ್ ಅನ್ನೋ Concrete ಗುಡಿಗೆ ಸೇರ್ಕೊಂಡು ಎಲ್ಲ ಮಿಸ್ ಮಾಡ್ಕೊಂಡೆ ಅನಿಸುತ್ತೆ .

    Anyway ನಿಮ್ಮ ಭಾವನೆಗಳನ್ನ ಸೊಗಸಾಗಿ ಹಂಚಿಕೊಂಡಿದ್ದಿರ.

    ReplyDelete
  2. ಹೌದು ಮೊದಲೆಲ್ಲ ಗೆಳತಿಯರ ಜೊತೆ ತಿರಗವು ಕಾಣದು ಈಗ ಮಾತ್ರ ತೇರಿಗೆ ಅಮ್ಮನ ಜೊತೇನೆ ಹೋಪನ ಕಾಣ್ತು ... :) :)

    ReplyDelete