Saturday, January 23, 2010






ಕೋಟಿತಾರೆಗಳು ಜೊತೆಗಿದ್ದರೂ ...

ಚಂದಿರ ಏಕಾಂಗಿ !

ಪಕ್ಕದಲ್ಲೇ ರೋಹಿಣಿಯಿದ್ದರೂ

ನೋಡುವ ಮನಸ್ಸಿಲ್ಲ .

ತಾರೆಗಳ ಇಣುಕು ನೋಟದಿಂದ ತಪ್ಪಿಸಿಕೊಳ್ಳುವ

ಅಮಾವಸ್ಯೆಯೇ ಪ್ರಿಯವಾಗಿದೆ.. !!



ಏಕಾಂತ ವಿಹಾರಿ ಆತ

ಮೋಡದೊಳಗೆ ಹೊರಗೆ..

ಕನಸುಗಳ ಕಂಡೂ ಕಂಡೂ ಬೋರಾಗಿದೆ

ನಿಶೆಯ ನೀರವ ಬೇಸರಿಸಿದೆ

ಬೀಸುವ ತಂಗಾಳಿಗೆ

ಮೈ ಮನ ಚುಚ್ಚುತ್ತಿದೆ .... !!



ದೂರದಿಂದೆಲ್ಲೋ ತೇಲಿ ಬರುವ

ವಿರಹಿಯೋಬ್ಬನ ವೇಣುಗಾನ..

ಚಂದಿರನ ಮೊಗದಲ್ಲೊಂದು

ಮುಗುಳ್ನಗೆಯ ಸುಳಿಮಿಂಚು..

ನನ್ನಂತೆ ಇರುವನಲ್ಲ ಇನ್ನೊಬ್ಬ ಏಕಾಂಗಿ ಎಂದು... !



ಮಳೆ ಬಿಸಿಲುಗಳ ಮೇಳಕ್ಕೆ ಕಟ್ಟುವ ಮಳೆಬಿಲ್ಲಿನ

ಮೇಲೆ ಜಾರುವ ಹಂಬಲ

ಈ ಚಂದಿರನಿಗೆ ಅದೇಕೆ ಬಂತೋ ಗೊತ್ತಿಲ್ಲ..

ಶಶಿಯ ಹೊಟ್ಟೆಯೊಳಗೆ

ತಣ್ಣನೆಯ ಹೊಟ್ಟೆಕಿಚ್ಚು..!!

2 comments: