Monday, January 18, 2010

life won't give one more chance to live


Give me some sunshine
Give me some rain
Give me another chance
Wanna growup once again...
ಏನ್ ಚೆನ್ನಾಗಿವೆ ಮೇಲಿನ ಸಾಲುಗಳು . 3 idiots movie ನೋಡಿದಾಗಿನಿಂದ ತುಂಬಾನೆ ಕಾಡ್ತಾ ಇರೋ ಸಾಲುಗಳು ಇವು . ಸಾಲದ್ದಕ್ಕೆ ಈ ಹಾಡಿನ ಚಿತ್ರಣವೂ ಸಕತ್ ಆಗಿ ಬಂದಿದೆ. ಗಿಟಾರ್ ಹಿಡಿದು Give me another chance ಅಂತಾ ಹಾಡ್ತಾ, ಆ chanceಗೆ ಕಾಯದೆ ಆತ್ಮಹತ್ಯೆ ಮಾಡ್ಕೊಳ್ಳೋ ಆ ಹುಡುಗ ಕನಸು ಕಾಣ್ತಾನೆ , ಒಂದು ಶಿಕ್ಷಣ ಸಂಸ್ಥೆಯನ್ನ ಅಣಕಿಸ್ತಾನೆ, ಕೊನೆಗೆ ಶವವಾಗ್ತಾನೆ ... ನಮ್ಮನ್ನೂ ಕಾಡ್ತಾನೆ ...!!
ಮಣ್ಣಲ್ಲಿರೋ ಒಂದು ಬೀಜಕ್ಕೆ ಸೂರ್ಯನ ಬೆಳಕು, ನೀರು ಸರಿಯಾಗಿ ಬಿದ್ದರೆ ಮಾತ್ರ , ಆ ಬೀಜ ಮೊಳೆತು ಸಸಿಯಾಗೋದು ಅಲ್ವಾ?? ಅದ್ಯಾಕೋ ನಮ್ಮ ಸಮಾಜಕ್ಕೆ ಸಸಿಯು ಚಿಗುರುವಾಗಲೇ ಚಿವುಟಿ , ಅವರಿಗೆ ಬೇಕಾದ ಆಕಾರದ ಗಿಡ ಮಾಡ್ಕೊಳ್ಳೋದು ಅಭ್ಯಾಸವಾಗಿ ಬಿಟ್ಟಿದೆ ಅನಿಸ್ತಿದೆ .
ಇಷ್ಟುದ್ದ ಪೀಠಿಕೆಯ ನಡುವೆ ನೆನಪಾದವನು my little friend 'ಆಕಾಶ್'. ಸೂಕ್ಷ್ಮಮನಸಿನ, ನಕ್ಷತ್ರಗಳ ಹೊಳಪನ್ನು ಬಾಚಿ ತನ್ನ ಕಂಗಳಲ್ಲಿ ತುಂಬಿಕೊಂಡ, ಮುದ್ದುಮುಖದ ,17ರ ಹರೆಯದಲ್ಲೇ ಕನಸುಗಳನ್ನು ಕಣ್ಣಲ್ಲೇ ಬಚ್ಚಿಟ್ಟು ಗೋರಿ ಸೇರಿದ ಹುಡುಗ ..!
ಕಾಲೇಜ್ನಲ್ಲಿ ನನ್ನ junior ಆಗಿದ್ದ ಹುಡುಗನಲ್ಲಿ ತುಂಬಾ ಸಲುಗೆಯಿತ್ತು . ನನ್ನ ಕಂಡಾಗಲೆಲ್ಲ 'hey sweetheart' ಅಂತಿದ್ದ ಕಣ್ಣು ಹೊಡೆದು , ಗೆಳೆಯರ ಗುಂಪಲ್ಲಿರುತ್ತಿದ್ದ ನಾನು ಕಣ್ಣಲ್ಲೇ ಗದರುತ್ತಿದ್ದೆ . ಆಗ ನಗುತ್ತ 'my sweet sis' ಎಂದು ಬದಲಾಯಿಸಿ ನಕ್ಕು ಬಿಡ್ತಿದ್ದ.
ಸರಿಯಾಗಿ ನೆನಪಿದೆ ಆ ದಿನ ನನಗೆ ತಿಂಡಿ ತಿನ್ನುತ್ತಿದ್ದ ನನ್ನನ್ನು ನನ್ನ cellphone ಕರೆದಿತ್ತು . ಗೆಳತಿ 'ಇಂಚರ' call ಮಾಡಿ "ಹೇ 'ಆಕಾಶ್' ಇನ್ನಿಲ್ಲ.!" ಅಂದಿದ್ದಳು ಬಿಕ್ಕುತ್ತ . ವಿಚಾರಿಸಿ ನೋಡಿದರೆ, physics lab exam ಮುಗಿಸಿ ಹೋಗಿದ್ದ ಹುಡುಗ ನೇಣಿಗೆ ಶರಣಾಗಿದ್ದ . ಯಾವುದೋ ಒಬ್ರು lecturer ಅವನದಲ್ಲದ ತಪ್ಪಿಗೆ ಕೆನ್ನೆಗೆ ಹೊಡೆದು ಅವಮಾನಿಸಿದ್ದನ್ನು ಸಹಿಸದೇ ಜಗತ್ತಿಗೆ good bye ಹೇಳಿದ್ದ . ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನಮ್ಮ ಅದೇ ದಿನ ನದಿಗೆ ಹಾರಿದರು . ಮೊಮ್ಮಗ , ಮಗಳು ಇಬ್ಬರ ಸಾವನ್ನು ಕೇಳಿದ ಮುದಿಜೀವ ಅವನ ಅಜ್ಜಿಯೂ ಅವರದೇ ದಾರಿ ಹಿಡಿದರು . ಒಂದೇ ದಿನ 3 ಸಾವು ಆ ಮನೆಯಲ್ಲಿ.! ಹೇಗಿರಬೇಡ ..?
ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ ಮಲಗಿಬಿಟ್ಟಿದ್ದ ಚಿರವಾಗಿ break ಇರದ ಕನಸುಗಳನ್ನ ಕಾಣುತ್ತ. ಗೆಳೆಯರು ಅವನ ಅಂತಿಮ ದರ್ಶನಕ್ಕೆ ಕರೆದರೂ ನಾನು ಒಲ್ಲೇ ಎಂದಿದ್ದೆ ..
ಅದ್ಯಾಕೋ ಅವನ ಕನಸುಕಂಗಳ ಹೊಳಪು ಕಂಡಿದ್ದ ನನ್ನಲ್ಲಿ, ಅವನ ಮುಚ್ಚಿದ ಕಂಗಳನ್ನು ನೋಡುವ ಧೈರ್ಯವೇ ನನ್ನಲ್ಲಿ ಇರಲಿಲ್ಲ ..!
Life won't give one more chance to live..!! ಅಲ್ವಾ?

3 comments:

  1. Life won't give one more chance to live..!!

    True.. Everyone should think of this before they decide to give UP

    ReplyDelete
  2. never never never give up....................

    ReplyDelete