ನಮ್ಮ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು "ಕವನ ರಚನಾ ಸ್ಪರ್ಧೆ".ಒಂದು ರೂಮಿನೊಳಗೆ ಕೂರಿಸಿ ಒಂದು ವಿಷಯವನ್ನು ಕೊಟ್ಟಿದ್ದರು .ಒಂಥರಾ ಆಶು ಕವನ ಬರೆದಂತೆ . ಆ ದಿನದ ವಿಷಯ "ಪ್ರೇಮ ಕವನ ". in English the subject was "the love " . ಸ್ವಲ್ಪ ಹೊತ್ತು ತಲೆಯೊಳಗೆ ಎಲ್ಲ ಖಾಲಿಯಾದ ಭಾವ. ನಂತರ ನಾನು ಬರೆದದ್ದು ಹೀಗೆ :
ನನ್ನ ಮನದ ಭಾವನೆಗಳು
ಕವನವಾಗಿ ಹೊರ ಹೊಮ್ಮುತಿವೆ
ಪ್ರಿಯೆ ನಿನ್ನ ಕಂಡ
ಆ ಕ್ಷಣದಿಂದ ..!
ಆ ಕ್ಷಣದಿಂದ ..!
ನಿನ್ನ ತುಟಿಯಂಚಿನ
ಮುಗುಳು ನಗೆಯೊಂದು
ಕನಸುಗಳ ಅಲೆಯನೆಬ್ಬಿಸಿದೆ
ಮನದ ಸಾಗರದಲ್ಲಿ ..
ನಿನ್ನ ಕಂಗಳ ಕುಡಿನೋಟವದು
ನನ್ನ ನಿದ್ದೆಯ ಹರಣ ಮಾಡಿ
ಚುಕ್ಕಿಗಳನೆಣಿಸುವಂತೆ ಮಾಡಿದೆ
ನಿಶೆಯ ಬಾನಂಗಳದಲ್ಲಿ
ನಿಶೆಯ ಬಾನಂಗಳದಲ್ಲಿ
ವಿವಶವಾಗಿದೆ ಮನಸು
ನಿನ್ನ ನಗು ನೋಟಗಳಲ್ಲಿ
ಜೀವ ತುಂಬಿರುವೆ
ಮನದ ಭಾವಗಳಿಗೆ
ಈ ಪುಟ್ಟ ಕವನದಲ್ಲಿ ..!
ಮಧುರ ಪ್ರೇಮ ಅಮರವಾಗಲು
ತಾಜಮಹಲನ್ನು ನಾನು ಕಟ್ಟಲಾರೆ
ಬಾನತಾರೆಗಳ ಹೊಳಪನ್ನು ನಾಚಿಸುವ
ಹರಳ ಹಾರವ ತಂದು
ಕೊರಳಿಗೆ ತೊಡಿಸಲಾರೆ .!
ಆದರೆ .....
ನನ್ನ ಕನಸುಗಳ
ನರುಗಂಪ ತುಂಬಿರುವ
ಚೆಂಗುಲಾಬಿ ಹೊವೊಂದ ಕೊಡಬಲ್ಲೆ
ಚೆಂಗುಲಾಬಿ ಹೊವೊಂದ ಕೊಡಬಲ್ಲೆ
ನಿನ್ನ ಚಿಗುರು ಬೆರಳುಗಳಿಗೆ
ಮುತ್ತೊಂದ ನೀಡಿ ಧನ್ಯನಾಗಬಲ್ಲೆ ...!
ಪ್ರೀತಿಯಿರಲಿ ಈ ಭೂಮಿಯಲ್ಲಿ
ಪ್ರೀತಿಯಿರಲಿ ವಿಶ್ವ ಶಾಂತಿಯಲ್ಲಿ ..!
ನನಗೆ first prize ಬಂದಿತ್ತು.
ಈಗಲೂ ಸಹ ಮೊದಲ ಬಹುಮಾನವೇ...... ತುಂಬಾ ಚೆನ್ನಾಗಿದೆ......
ReplyDeleteದಿನಕರ ಹೇಳಿದ್ದು ನಿಜ.. ಈ ಸುಂದರ ಕವನಕ್ಕೆ ಈಗಲೂ ಮೊದಲ ಬಹುಮಾನ ಗ್ಯಾರಂಟೀ... ತುಂಬಾ ಚೆನ್ನಾಗಿದೆ..
ReplyDeleteಧನ್ಯವಾದಳು ದಿನಕರ್ ಮತ್ತು ದಿಲೀಪ್ ಅವರಿಗೆ
ReplyDeleteಉತ್ತಮ ಕವನ.
ReplyDeleteಸೌಮ್ಯ, ಚನ್ನಾಗಿದೆ ಪದಗೊಳೊಂದಿಗಿನ ನಿಮ್ಮ ಆಟ..
ReplyDeleteವಿವಶವಾಗಿದೆ ಮನಸು
ನಿನ್ನ ನಗು ನೋಟಗಳಲ್ಲಿ
ಜೀವ ತುಂಬಿರುವೆ
ಮನದ ಭಾವಗಳಿಗೆ
ಈ ಪುಟ್ಟ ಕವನದಲ್ಲಿ ..!
ಈ ಸಾಲುಗಳ ಭಾವಾರ್ಥ ನಿಮ್ಮ ಪೂರ್ಣ ಕವನಕ್ಕೆ ಸಲ್ಲುವುದರಿಂದ ಅಂತಿಮ ಸಾಲುಗಳಾಗಿದ್ದರೆ ಚೆನ್ನಿತ್ತು.
ಅರ್ರೆ! ಅವತ್ತು ನಿಮ್ಮ ಆರ್ಕುಟ್ ಫ್ರೊಫೈಲ್ ನೋಡಿದಾಗಲೇ ಅಂದುಕೊಂಡಿದ್ದೆ ನೀವು ಚೆನ್ನಾಗಿ ಬರೆಯುತ್ತೀರ ಅಂತ. ನಿಮ್ಮ ಬ್ಲಾಗ್ ಇರುವುದು ಗೊತ್ತಿರಲಿಲ್ಲ. ಚೆನ್ನಾಗಿ ಬರೆದಿದ್ದೀರಿ. ಎಲ್ಲಾ ಪೋಸ್ಟ್ ಗಳನ್ನು ಓದಬೇಕು. thanks
ReplyDeleteಚಂದದ ಕವನ.... you deserved a first prize :)
ReplyDeletedarshan
ReplyDeletehai you know why love is temprovery
ReplyDeletesuper
ReplyDelete