ಬಾಲ್ಯದ ದಿನಗಳೇ..
ಎಲ್ಲಿ ಕಳೆದು ಹೋದಿರಿ ?
ಆಧುನಿಕತೆಯ ಜಾತ್ರೆಯಲಿ..
ಹಾರುವ ಚಿಟ್ಟೆಯ ಹಿಡಿಯ ಹೋಗಿ
ಮುಳ್ಳು ಚುಚ್ಚಿಸಿಕೊಂಡ ನೆನಪು
ಇನ್ನೂ ಹಸಿರು ...
ಗಾಳಿಪಟವ ಹಾರಿಸಿ ಹಾರಿದ
ನೆನಪೇ ಈಗ ಉಸಿರು..
ಅಡುಗೆ, ಗೊಂಬೆ ಆಟಗಳ
ಮಜವೇ ಬೇರೆ..
ಗೋಲಿ ಲಗೋರಿ ಆಟಗಳ
ಮರೆಯಲಿ ಹೇಗೆ..?
ಕಳೆದು ಹೋಗಿವೆ ಈಗ
ಆ ಎಲ್ಲ ಆಟಗಳು
ಬಾಲ್, ಬ್ಯಾಟ್ , ಕ್ರಿಕೆಟ್ಗಳ ಮುಂದೆ..
ಕಂಪ್ಯೂಟರ್ , ಗೇಮ್ಸ್ ಗಳ ನಡುವೆ..
ನೆನಪಾಗುತಿವೆ
ಬಾಲ್ಯದ ದಿನಗಳು..
ಒಮ್ಮೆ ಬರಬಾರದಿತ್ತೆ ಮತ್ತೆ..
ನೆನಪಿನ ಸುರುಳಿಗಳು ಬಿಚ್ಚಿದಾಗ..
ಅವು ನಮ್ಮ ಸಂಗಾತಿಗಳು ಅಷ್ಟೆ.....!
No comments:
Post a Comment