Monday, August 16, 2010

ಪ್ರೀತಿ ಪುರಾಣ .............!


ಪ್ರೀತಿಯೆಂದರೆ.......?? ಹೀಗೊಂದು ಯೋಚನೆ ಎಲ್ಲರಿಗೂ ಬಂದಿರಬಹುದು. ಪದಗಳಲ್ಲಿ ಸರಿಯಾಗಿ ವ್ಯಕ್ತಪಡಿಸಲಾಗದ, ಭಾವನೆಗಳ ಮಹಾಪೂರ. ಪಶ್ಚಿಮದ ದೇಶದಲ್ಲಾದರೆ 'i love you' ಅನ್ನುವ ಒಂದೇ ಒಂದು ವಾಕ್ಯದಲ್ಲಿ ಹೇಳಲಾಗುವ ಭಾವನೆ. ಅಪ್ಪ, ಅಮ್ಮ, ತಮ್ಮ, ಗೆಳತಿ, ಹೆಂಡತಿ ಎಲ್ಲ ಸಂಬಂಧಗಳಿಗೂ ಅದೇ ಮೂರು ಶಬ್ದಗಳನು ಉಪಯೋಗಿಸಿ ಬಿಡುತ್ತಾರೆ, ಆ ಮಾಹಾಜನರು. (ರಾಹುಲ್ ಮಹಾಜನನಿಗೆ ಅದರರ್ಥ ಗೊತ್ತಿಲ್ಲ ಬಿಡಿ) ಇಲ್ಲಿ ನಮ್ಮಲ್ಲಾದರೆ ? ಪ್ರೇಮಿಗಳಿಗೆ ತಪ್ಪಿದರೆ ಸ್ನೇಹಿತರಿಗೆ ಮಾತ್ರ ಉಪಯೋಗಿಸಲ್ಪಡುವ ಶಬ್ದ (ನಾನು ಹೇಳ ಹೊರಟಿರುವುದು ಮಾಮೂಲಿ ಪಟ್ಟಣದ ವಿಷಯ). ಹೋಗಿ ಅಜ್ಜನಿಗೋ, ಅಜ್ಜಿಗೋ ಹೇಳಿ ನೋಡೋಣ ' i love you' ಎಂದು....! ಇವಳಿಗೆ ಯಾವಾಗಿಂದ ಹುಚ್ಚು ಅನ್ನಬಹುದು.


Love is blind ಪ್ರೀತಿ ಕುರುಡು ಇದು ಎಲ್ಲರಿಗೂ ಗೊತ್ತಿರೋ ವಿಷಯ. Its deaf and dumb too ಮಾರಾಯರೇ. ಪ್ರೇಮಿಸುತ್ತಿರುವ ಒಂದು ಯುವ ಜೋಡಿಗೆ ನೀವು ಏನು ಹೇಳಿದರೂ ಕೇಳೋದೇ ಇಲ್ಲ,ಅವ್ರು ಅಂದಿದ್ದೆ ಸರಿ ಅಂತಾರೆ. ಇದು deaf ಆಯ್ತು ಇನ್ನು dumb?? ಮೂಕ ಪ್ರೀತಿ ಅಂತ ಕೇಳಿರಬೇಕಲ್ವಾ? ಪ್ರೀತಿಯನ್ನು ಪದಗಳಲ್ಲಿ ಸೆರೆ ಹಿಡಿಯೋಕೆ ಆಗೋದೇ ಇಲ್ಲ. ಅದಕ್ಕೆ 'ಪ್ರೇಮ ಪತ್ರಗಳು' ಇನ್ನು ಜೀವಂತ. ಹುಡುಗ ಯಾವುದೇ ಪುಸ್ತಕ ಓದದಿದ್ದರೂ ಹುಡುಗಿಗೆ ಲವ್ ಲೆಟರ್ ಕೊಡೊ ಸಂದರ್ಭ ಬಂದ್ರೆ 'ಪ್ರೇಮ ಪತ್ರದ link' ಖಂಡಿತ ಹುಡುಕೆ ಹುಡುಕ್ತಾನೆ. !


ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ. ನಾನು ಮೇಲೆ ಹೇಳಿರೋದಕ್ಕೆ, ಈಗ ಬರ್ಯೋದಕ್ಕೆ ಅಷ್ಟೊಂದು ಸಂಬಂಧ ಇಲ್ಲ ಬಿಡಿ. ಆದರೂ ನಿಮ್ ತಲೆ ತಿಂದೆ,.... ಯಾಕೆ ಸುಮ್ನೆ ಒಂದೇ ಸಲ ಸಿರಿಯಸ್ ಯಾಗೋದು ಹೇಳಿ?


ಮೊನ್ನೆ ಅಕ್ಕನ ಜೊತೆ ಚಾಟ್ ಮಾಡ್ತಿದ್ದೆ g-talk ನಲ್ಲಿ ಯಾರೋ ಮಾತಿಗೆ ಎಳೆದರು.ಅಷ್ಟೇನೂ ಗೊತ್ತಿರದ orkut friend. ನನ್ನ ಬಗ್ಗೆ ವಿಚಾರಿಸುತ್ತಲೇ "Do u 've Boy fren?" ಎಂದು ಬಿಟ್ಟಿತ್ತು ಆ ಆಸಾಮಿ. " yup many guy frens are der" ಅನ್ನೋ ಉತ್ತರ ಕೊಟ್ಟೆ. " no no i mean lover"ಅಂದಿತ್ತು ಆ ಕಡೆ ಪಾರ್ಟಿ."nope i don belive in love" ಎನ್ನುತ್ತಲೇ log out ಆಗಿದ್ದೆ.


ಉತ್ತರವೇನೋ ಕೊಟ್ಟಿದ್ದೆ ಆದರೆ ಪ್ರೀತಿ ಎಂದರೇನು ಅನ್ನೋ ವಿಷಯ ಹುಳವಾಗಿ ತಲೆ ಹೊಕ್ಕಿತ್ತು. ಕೆಲವು ಗೆಳೆಯ/ಗೆಳತಿಯರಿಗೆ message ಮಾಡಿಬಿಟ್ಟೆ. ಉತ್ತರ ಬರಲಾರಂಭಿಸಿತು... ಎಲ್ಲರೂ ತತ್ವಜ್ಞಾನವನ್ನೇ ಹೇಳುತ್ತಿದ್ದರೇ ವಿನಃ sweet and simple ಆಗಿ ಹೇಳಲೇ ಇಲ್ಲ ..ಅಥವಾ ನನ್ನ ಮನದೊಳಗಿದ್ದ ಉತ್ತರವನ್ನು ಯಾರೂ ಕೊಡಲೇ ಇಲ್ಲ..!


ಹಾಗೆ ಯೋಚಿಸುತ್ತಲೇ ಇದ್ದ ನನ್ನ ಮನದಲ್ಲಿ ಒಂದಿಷ್ಟು ಘಟನೆಗಳು ಹಾದುಹೋದವು... ಪ್ರೀತಿಯನ್ನು ನಾವು ಶಬ್ದಗಳಲ್ಲಿ ಕಟ್ಟಿಹಾಕಲಾರೆವು ಸರಿ. ಆದರೆ ಇದು ಪ್ರೀತಿ ಎಂದು ಮನಸು ಒಂದು ಘಟನೆಯನ್ನು ನೋಡಿದ ತಕ್ಷಣ ನಿರ್ಧರಿಸಿ ಬಿಡುತ್ತದೆ ಅಲ್ವಾ ? ನನ್ನ ಜೀವನದಲ್ಲಿ ನಡೆದ, ನಾನು ನೋಡಿದ ಘಟನೆಗಳು ಇವು .....


*ಇಸ್ತ್ರಿ ಮಾಡುವಾಗ ತನ್ನ ಅಚ್ಚುಮೆಚ್ಚಿನ ಸೀರೆಯ blouse ಸುಟ್ಟುಕೊಂಡ ಅಮ್ಮ, ದುಃಖ ತಡೆಯಲಾಗದೆ ಜಿನುಗಿದ ಕಣ್ಣೀರು. ಅಮ್ಮ ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಪೇಟೆಗೆ ಹೋಗಿ ಹೊಸ matching blouse ತಂದುಕೊಟ್ಟ ಪಪ್ಪ.


*ದನಗಳನ್ನು ಪ್ರೀತಿಯಿಂದ ಸಾಕಿ ಅವುಗಳಿಗೆ ಹೆಸರಿಟ್ಟು ಕರೆಯುವ ಪಕ್ಕದ ಮನೆಯ ಮುಸ್ಲಿಂ ಕುಟುಂಬ.


*ನಾನು ಮಂಗಳೂರನ್ನು ಬಿಟ್ಟು ಬರುವಾಗ ತನ್ನ ಪ್ರೀತಿಯ teddybearನ್ನುನನ್ನ ಕೈಗಿತ್ತು "ಎಲ್ಲಿ ಹೋದರೂ ಇದನ್ನು ತಗೊಂಡು ಹೋಗು ಸೌಮ್ಯ ನನ್ನ ನೆನಪಿಗೆ" ಎಂದು ಕಣ್ಣೀರಾದ ಗೆಳತಿ.


*ಗೆಳೆಯನ revaluation ಗೋಸ್ಕರ ತನ್ನ ಹೊಸ hand-setನ್ನೇ ಮಾರಿದ ನನ್ನ ಸ್ನೇಹಿತ .!


*ಡೈರಿಯ ಹಾಳೆಗಳ ಮಧ್ಯೆ ಬಣ್ಣಗೆಟ್ಟು ಮುಗುಮ್ಮಾಗಿ ಕುಳಿತಿರುವ ಪ್ರತಿ friendship day & valentines day ಗಳಿಗೆ ಆತ್ಮೀಯ ಗೆಳೆಯ ಕೊಟ್ಟ ಹಳದಿ ಗುಲಾಬಿ ಹೂಗಳು.


*ಬೀದಿ ನಾಯಿ ಬಂದಿಲ್ಲವೆಂದು ತನಗೆ ಹಾಕಿದ ಊಟವನ್ನು ಮುಟ್ಟದೆ ಕುಳಿತಿದ್ದ ಗೆಳತಿಯ ಮನೆಯ ಬೆಕ್ಕು.


*ಕಳೆದು ಹೋದ ಗೆಳತಿಯ ನೆನಪಲ್ಲಿ ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿ ಬಂದು school-book companyಯ ಎದುರಿನ ಜನಜಂಗುಳಿಯಲ್ಲಿ ಅವಳನ್ನು ಹುಡುಕುವ ಕ್ರಿಶ್ಚಿಯನ್ನರ ಹುಡುಗ .!


*ಜೀವದ ಗೆಳೆಯ ಕೊಟ್ಟ chocolateನ್ನು ತಾನೊಬ್ಬಳೆ ತಿಂದು ಉಳಿದ ಗೆಳತಿಯರಿಗೆ ಅಂಥದ್ದೇ ಬೇರೆ chocolate ತಂದು ಕೊಡುವ ನನ್ನ ಗೆಳತಿ ..! (ಅದೇಕೆ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ " ನಾನು ಅವನ ಪ್ರೀತಿಯನ್ನು ಬೇರೆಯವರಿಗೆ ಹಂಚಲಾರೆ..!" )


*ಕೊಟ್ಟಿಗೆಯಲ್ಲಿ ಕಟ್ಟಿ ಹಾಕೆಂದು ಮನೆಯ ವರೆಗೆ ಬಂದು ಅಜ್ಜನನ್ನು ಕರೆದುಕೊಂಡು ಹೋಗುವ ಅಜ್ಜನ ಪ್ರೀತಿಯ ಎಮ್ಮೆ.


*ಶಾಲಾದಿನಗಳಲ್ಲಿ ಉದ್ದಕಿದ್ದ ನನ್ನ ಕೂದಲನ್ನು ಹೆಣೆದು ಜಡೆ ಕಟ್ಟುತ್ತಿದ್ದ, ಈಗಲೂ ಅದೇ ಪ್ರೀತಿಯಂದ ನನ್ನ ಮೋಟು ಕೂದಲಿಗೆ ಜುಟ್ಟು ಹಾಕುವ ನನ್ನ ಅಮ್ಮ.


*ತಟ್ಟೆ ಇಟ್ಟು ಪ್ರೀತಿಯಿಂದ ಬಡಿಸಿ ಊಟ ಮುಗಿಯುವ ವರೆಗೂ ಅದೂ-ಇದೂ ಸುದ್ದಿ ಹೇಳುತ್ತಲೇ ಇದ್ದು ನಂತರ ತಾನು ಉಣ್ಣುವ ನನ್ನ ಅಜ್ಜಿ . ಅದೆಷ್ಟು ಹೊತ್ತಾದರೂ ಸರಿ ಅಜ್ಜ ಬರದೇ ಊಟ ಮಾಡಲೊಲ್ಲದ ನನ್ನ ಅಜ್ಜಿ .

* ಗಿಡಗಳಲ್ಲಿ ಅದೆಷ್ಟೇ ಹೂಗಳಾದರೂ ಅದನ್ನು ಕಿತ್ತು ಮುಡಿಯದ, ಬೇರೆಯವರು ಕೀಳುವುದನ್ನೂ ವಿರೋಧಿಸುವ ಅಮ್ಮ .

*ನಾನು ಜ್ವರ ಬಂದು ಮಲಗಿದಾಗ ರಾತ್ರಿಯೆಲ್ಲಾ ಎಚ್ಚರವಿದ್ದು ನೋಡಿಕೊಂಡ ಹಾಸ್ಟೆಲಿನ ಗೆಳತಿ.

*ಸಾಯುವ ಮೊದಲು ತನ್ನ ಪ್ರೀತಿಯ ಹುಡುಗಿಯ ಹೆಸರನ್ನು ಕನ್ನಡದಲ್ಲಿ ಡೈರಿ ಪೂರ್ತಿ ಬರೆದ ಮಿಜೋರಾಮಿನ ಹುಡುಗ..
*ಬೆಂಗಳೂರಿಗೆ ಬಂದಾಗ ಅದೆಷ್ಟೋ ವರ್ಷದ ಸ್ನೇಹಿತೆಯಂತೆ ಆತ್ಮೀಯತೆಯಿಂದ ನೋಡಿಕೊಂಡ orkut ಗೆಳತಿ, ಹಂಚಿಕೊಂಡ ಸಣ್ಣ ಪುಟ್ಟ ಸಂಗತಿಗಳು. ಅದೆಷ್ಟೋ ವರ್ಷಗಳಿಂದ ಜೊತೆಯಿದ್ದ ಜೋಡಿ ನವಿಲಿನ ಕ್ಲಿಪ್ ಒಂದನ್ನು ನನಗೆ ಕೊಟ್ಟ ಕ್ಷಣ ..!
*ಹಾಸ್ಟೆಲಿನಲ್ಲಿ ಬರೀ ಒಂದು ತಿಂಗಳು ನನ್ನ ಜೊತೆಗಿದ್ದು. CET ಕೋಚಿಂಗ್ ಕ್ಲಾಸ್ ಮುಗಿಸಿ ಹೊರಡುವ ಹಿಂದಿನ ರಾತ್ರಿಯೆಲ್ಲ ನನ್ನ ಕೈ ಹಿಡಿದು ಮಂಚಕ್ಕೆ ಒರಗಿದ್ದ ಪೋರಿ ..!
*ಅಮ್ಮನಂತೆ ಸ್ನೇಹಿತೆಯಂತೆ ನನ್ನ ನೋಡಿಕೊಂಡ PG ಆಂಟಿ .

ಇಂಥಹ ಅದೆಷ್ಟೋ ಘಟನೆಗಳು ನಿಮ್ಮೊಂದಿಗೂ ನಡೆದಿರುತ್ತವೆ. ಆದರೆ ಪ್ರೀತಿ ಎಂದೊಡನೆ ಬರೀ ಹೆಣ್ಣು- ಗಂಡಿನ ನಡುವಣ ಸಂಬಂಧ ಎನ್ನುವುದೇತಕ್ಕೋ ? ಮಮತೆ, ಪ್ರೇಮ, ಪ್ರೀತಿ, ಕಾಮ ಇದೆಲ್ಲರ ವ್ಯತ್ಯಾಸವೇ ಅರಿಯದಂತೆ ಆಡುವುದು ಏತಕ್ಕೆ ?

ಪ್ರೀತಿ ಹುಟ್ಟಿ.. ಸಲ್ಲದ ಸಂಬಂಧ ಬೆಳೆದು. ಮಕ್ಕಳಾಗಿ ..ಮದುವೆಯಾಗಿ ಒಂದೇ ವರುಷಕ್ಕೆ divorce ಗೆ ತಿರುಗುವ ಪಾಶ್ಚಿಮಾತ್ಯ ದೇಶದ ಈ ಒಂದು ಅನುಕರಣೆ ಬೇಕೇ ? ಪ್ರೀತಿ ಪ್ರೀತಿ ಎಂದು ದೈಹಿಕ ಕಾಮನೆಗಳ ತೀಟೆ ತೀರಿಸಿಕೊಳ್ಳುವ ಈ ಜನಕ್ಕೆ 'boy-friend, girl friend' ಎಂದು ಸ್ನೇಹಕ್ಕೆ ಮಸಿಬಳಿಯುವುದು ಯಾಕೆ ?
ಪ್ರೀತಿಗೆ ಕೃಷ್ಣ - ರಾಧೆಯರ ಉದಾಹರಣೆ ಕೊಡುವ ದೇಶ ನಮ್ಮದು. ದೇಶವನ್ನೂ ನಾವು ಮಾತೆಯಾಗಿ ಕಾಣುತ್ತೇವೆ ಅಲ್ವಾ ? ಈ boy friend- girl friend ಸಂಸ್ಕೃತಿ ನಮ್ಮದಲ್ಲ. ಗಂಡು ಹೆಣ್ಣಿನ ನಡುವೆ ನಿಷ್ಕಲ್ಮಶ ಸ್ನೇಹವೂ ಇರುತ್ತದೆ. ಒಂದು ವೇಳೆ ಬರೀ ಸ್ನೇಹಕ್ಕೆ ಬಳಸುತೀರೀ ಆ ಶಬ್ದವನ್ನು ಎಂದಾದರೆ ಸ್ನೇಹದಲ್ಲಿ ಗಂಡು ಹೆಣ್ಣೆಂಬ ಭೇದ ಯಾಕೆ ?


ಪ್ರೀತಿ ಯಾವತ್ತಿದ್ದರೂ ಪ್ರೀತಿಯೇ ಅದಕ್ಕೊಂದು ನಿರ್ಮಲವಾದ ಪರಿಶುದ್ಧವಾದ ಅರ್ಥವಿದೆ. ಅದೊಂದು ಶುದ್ಧ ಸರೋವರ ದಯವಿಟ್ಟು ಅದರಲ್ಲಿ ಅಶ್ಲೀಲತೆಯ ಕಲ್ಲೆಸೆಯಬೇಡಿ .

59 comments:

 1. ಸೌಮ್ಯ, ಅದ್ಭುತ ಚಿಂತನೆ!! ಈಗಿನ ಎಲ್ಲಾ ಯುವಕ-ಯುವತಿಯರು ಹೀಗೆಯೇ ಯೋಚಿಸುವಂತಾದರೆ ಅದೆಷ್ಟು ಚೆನ್ನ??!!

  ReplyDelete
 2. ವಂದನೆಗಳು ನಿಮ್ಮ ಚಿಂತನೆಗೆ... ನಿಜ, ಪ್ರೀತಿಯನ್ನು ಪ್ರೀತಿಯಿಂದ ನೋಡಿದರೆ ಅದು ಅಶ್ಲೀಲ ಎನಿಸಲಾರದು...

  ReplyDelete
 3. ಸೌಮ್ಯ,
  ಪ್ರೀತಿಯ ಸೀಮಿತ ಅರ್ಥ ತಿಳಿದವರು ಮಾತ್ರ ಹಾಗೆಲ್ಲಾ ಮಾತನಾಡುತ್ತಾರೆ.... ಪ್ರೀತಿಯಾ ಅರ್ಥ ವಿಶಾಲ ಮತ್ತು ಆಳ.... ಒಮ್ಮೊಮ್ಮೆ ಪ್ರೀತಿಸಿದವನ ಪ್ರೀತಿಗಿಂತ ಗೆಳೆಯನ ಪ್ರೀತಿ ಅಪ್ಯಾಯಮಾನವೆನಿಸುತ್ತದೆ.... ಅದಕ್ಕೆ ಪ್ರೀತಿಗೆ ಬಣ್ಣವಿಲ್ಲ... ನಿಮ್ಮಮಾತು ಸತ್ಯ

  ReplyDelete
 4. ಪ್ರೀತಿಗೆ ಯಾವುದೇ definition ಇಲ್ಲ ಸೌಮ್ಯ , ಜೀವನದಲ್ಲಿ ಎಲ್ಲರೂ ವಯಸ್ಸಿಗೆ ತಕ್ಕಂತೆ ಪ್ರೀತಿಯನ್ನು ಹುಡುಕುತ್ತಾರೆ . ಮಗುವಿದ್ದಾಗ ತಾಯಿ , ತಂದೆ, ಅಕ್ಕ ,ಹೀಗೇ ಎಲ್ಲರಿಂದಲೂ ಪ್ರೀತಿಯನ್ನು ಬಯಸುತ್ತಾರೆ ,ಹಾಗೆ ಪ್ರೌಡ ವಯಸ್ಸಿಗೆ ಬಂದಾಗ ಸಂಗಾತಿಯ ಪ್ರೀತಿಯನ್ನು ಬಯಸುತ್ತಾರೆ .ಕೆಲವೊಬ್ಬರು ಪ್ರೀತಿಯ ಹಿಂದೆ ಅಲೆಯುತ್ತಲೇ ಇರುತ್ತಾರೆ ಅವರಿಗೆ ಬಯಸಿದ ಪ್ರೀತಿಯು ಸಿಗುವುದಿಲ್ಲ ಅಥವ ಉಳಿಸಿಕೊಳ್ಳಲು ಬರುವುದಿಲ್ಲ (ರಾಹುಲ್ ಮಹಾಜನ್) . ತುಂಬಾ ಚೆನ್ನಾಗಿ ಬರೆದಿದ್ದೀರಿ .

  ReplyDelete
 5. The thing which u notice first abt this post is ur hate for English ways.
  Mareyabedi, adu avara life, avaru balutthare. If they truly love their wife/husband then y is there a need for a divorce? That's not love in the first place. That's just infatuation/attraction.
  Namma jana avara lifestyle paalisi antha avaru enu bandu namage force maduthilla.
  If you like someone deeply leaving aside the physical attractions, then that is true love and that's worth it. Not the valentine's day Romeo & Juliets who believe in one year boyfriend/gf status.
  You said v don't tell our mom/dad v love them. Its because even their mindsets wud be too narrow. They'l think v have fallen for someone.
  Anyway, thumba chennagide post :)

  ReplyDelete
 6. superb superb:) just superb :) i like it very much Soumya :)

  ReplyDelete
 7. Replies
  1. soumya
   I Like the your Story Please Give the your Mind.................

   Delete
 8. ಪ್ರೀತಿಸಿದವನ ಪ್ರೀತಿಗಿಂತ ಗೆಳೆತನದ ಪ್ರೀತಿಯಲ್ಲಿ ಒಂದು ಆಪ್ಯಾಯಮಾನತೆ ಇರುತ್ತದೆ. thank u.. dinakar

  ReplyDelete
 9. i am not blaming the life style of west. ಅದು ಅವರ ದೇಶಕ್ಕೆ ಸರಿ ಇರಬಹುದು.ನಮ್ಮ ಜನ (ಹದಿಹರೆಯದವರು) ಅನುಕರಣೆ ಮಾಡುವುದು ಜಗತ್ತಿನ celebrityಗಳನ್ನು. ನಾನೇನು ಪಾಶ್ಚಿಮಾತ್ಯರ ಎಲ್ಲ ಆಚರ ವಿಚಾರಗಳನ್ನು ದೂಷಿಸುವುದೂ ಇಲ್ಲ. ಅನೇಕ ವಿಷಯಗಳಲ್ಲಿ ಅವರನ್ನು ಅನುಸರಿಸುವುದೂ ತಪ್ಪಲ್ಲ( ಅಭಿವ್ರದ್ಧಿಶೀಲತೆ, ಕೆಲಸ ಮಾಡುವ ಪರಿ, ಸ್ವಚ್ಛತೆ (ಸ್ವಚ್ಛಂದತೆ ಅಲ್ಲ )).ಅದರಂತೆ 'ಭಾರತೀಯ' ಎಂದು ಗುರುತಿಸಲ್ಪಡುವುದು ಅನೇಕ ವಿಷಯಗಳಲ್ಲಿ ನಿಷ್ಕಲ್ಮಶ ಪ್ರೀತಿಯೂ ಒಂದು . ಭಾರತದ ಕುಟುಂಬ ವ್ಯವಸ್ಥೆ ಸುಂದರವಾದದ್ದು. ಇಲ್ಲಸಲ್ಲದ್ದನ್ನು ಇಲ್ಲಿ ಎಳೆಯುವುದು ತರವಲ್ಲ ಎಂದು ಹೇಳಿದ್ದೇನೆ.
  ಬರೀ ಬಾಯಲ್ಲಿ 'ಪ್ರೀತಿಸುತ್ತೇನೆ' ಎಂದು ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳಿದರೆ ಅದು ಪ್ರೀತಿಯೇ ? the matter of narrow or broad mind does'nt come at all......thanks a lot girish

  ReplyDelete
 10. thank u prashant ..ಲೇಖನ ಓದಿದ ಕೆಲವರ ಮನದಲ್ಲಾದರೂ ಈ ವಿಚಾರ ಬಂದರೆ ನಾ ಬರೆದದ್ದು ಸಾರ್ಥಕವಾದಂತೆ

  ReplyDelete
 11. ಸೌಮ್ಯಾ

  ಪ್ರೀತಿಗೆ ಅರ್ಥ ಹುಡುಕುವುದಕ್ಕಿಂತ ಅದನ್ನು ಅದರಷ್ಟಕ್ಕೆ ಬಿಡುವುದು ಒಳ್ಳೆಯದು ಎನಿಸುತ್ತದೆ

  ಪ್ರೀತಿ ಒಂದು ಅಭಿವ್ಯಕ್ತಿ

  ಅದು ಹೀಗೆ ಎನ್ನಲು ಸಾದ್ಯವಿಲ್ಲ

  ಅಥವಾ ಇಂಥವರಿಗೆ ಮಾತ್ರ ಎನ್ನಲು ಸಾದ್ಯವಿಲ್ಲ

  ಅದೊಂದು ಮಹಾ ಸಾಗರ

  ಈಜಿದವನಿಗೆ ಗೊತ್ತು ಅದರ ಪರಿಚಯ ಅಲ್ಲವೇ?

  ತುಂಬಾ ಸೊಗಸಾಗಿ ಬರೆದಿದ್ದೀರಿ

  ಬರೆಯುತ್ತಿರಿ

  ReplyDelete
 12. Nice One... Your Writing Style & Subject..

  ReplyDelete
 13. ಅದ್ಬುತ ಚಿಂತನೆ,, ಚೆನ್ನಾಗಿ ವಿವರಿಸಿದ್ದಿರ,, ಪ್ರೀತಿಯ ಸೊಭಗನ್ನು... ಹಾಗು ಅದರ ಅರ್ಥ ವನ್ನು....

  * ಪ್ರೀತಿ ಎಂಬುದು,,,," ಯಾವಾಗ ಅಮ್ಮ ತನ್ನ ಮುದ್ದಿನ ಮಕ್ಕಳಿಗೆ ಮುತ್ತು ಕೊಡುತ್ತಾರೋ....."
  * ಪ್ರೀತಿ ಎಂಬುದು... " ಯಾವಾಗ ತಂದೆ, ತನ್ನ ಮಗ ಅಥವಾ ಮಗಳ ಬಗ್ಗೆ,, ಹೆಮ್ಮೆ ಪಡುತ್ತ ಹೇಳಿ ಕೊಳ್ಳುತ್ತಾರೋ....
  * ಪ್ರೀತಿ ಎಂಬುದು...." ಯಾವಾಗ ಅಣ್ಣ,, ತನ್ನ ತಂಗಿಗೆ,,,ನಿನಗೊಂದು ಹುಡುಗನನ್ನು ನೋಡಿದ್ದೇನೆ ಅಂತ ಹೇಳುತ್ತಾನೋ....
  * ಪ್ರೀತಿ ಎಂಬುದು .." ಯಾವಾಗ ಅಕ್ಕ ಅಥವಾ ತಂಗಿ,,,ನಮ್ಮ ಕೆಲಸಗಳನ್ನೆಲ್ಲ ಮಾಡುತ್ತಾ,," ನಾನು ಹೋದ ಮೇಲೆ ನಿಂಗೆ ಇದೆಲ್ಲ ಯಾರು ಮಾಡುತ್ತಾರೋ ಅಂತ ಕೇಳುವುದು.....
  * ಪ್ರೀತಿ ಎಂಬುದು.. " ಯಾವಾಗ ಸ್ನೇಹಿತರು..." Idiot ,,ಒಬ್ಬನೇ ಎಲ್ಲಿಗೆ ಹೋಗುತ್ತಿಯ ,, ನಾವು ನಿನ್ನ ಜೊತೆ ಬರ್ತೇವೆ... ಅಂತ ಹೇಳಿದಾಗ....
  * ಪ್ರೀತಿ ಎಂಬುದು..." ಹೆಂಡತಿ ಯಾದವಳು.....ಏನು ಯೋಚನೆ ಮಾಡಬೇಡಿ,,, ನಾನು ನಿಮ್ಮ ಜೊತೆ ಇದ್ದೀನಿ ಅಂತ ಹೇಳಿ ಧೈರ್ಯ ತುಂಬುವುದು..
  Love dsnt always mean sayin "i love u". its a feeling of care & affectn 4 sum1 frm ur HEART...

  :-)
  (ಯಾವುದೊ ಒಂದು SMS ಬಂದಿತ್ತು,,, ಅದನ್ನ ಹಾಗೆ ಸೇವ್ ಮಾಡಿ ಇಟ್ಟಿದ್ದೆ.....ಇವಾಗ ಸ್ವಲ್ಪ ಚೇಂಜ್ ಮಾಡಿ ಹೇಳಿದ್ದೇನೆ.. )

  ReplyDelete
 14. ಸೌಮ್ಯ, ಪ್ರೀತಿಗೆ ಎಷ್ಟೊಂದು ಮುಖಗಳು...! ಪರಿಚಯಿಸಿದ್ದಕ್ಕೆ ಧನ್ಯವಾದಗಳು

  ReplyDelete
 15. ಒಂದಕ್ಕಿಂತ ಒಂದು touching incidents :-)

  ಸುಂದರ ಲೇಖನ.

  ReplyDelete
 16. ಪ್ರೀತಿಯ ಬಗ್ಗೆ ತುಂಬ ಅರ್ಥ ಪೂರ್ಣ ಲೇಖನ.ಬಹಳ ಚೆನ್ನಾಗಿದೆ

  ReplyDelete
 17. uttama yochane, uttama baraha soumya..

  ReplyDelete
 18. ಅದ್ಭುತ ಬರಹ ಸೌಮ್ಯ.. ತುಂಬಾ ಅಂದ್ರೆ ತುಂಬಾನೇ ಇಷ್ಟ ಆಯ್ತು..
  --

  ReplyDelete
 19. ಧನ್ಯವಾದಗಳು ಗುರುಮೂರ್ತಿ ಸರ್ .........

  ReplyDelete
 20. ಧನ್ಯವಾದಗಳು ಸೀತಾರಾಮ್ ಸರ್ ಹಾಗೂ ಹರೀಶ ರವರೆ

  ReplyDelete
 21. thank u vanithakka.. love u tooo ......:);)

  ReplyDelete
 22. ಅದ್ಭುತ ಲೇಖನ , ಈಗಿಂದ ನಾನು ನಿಮ್ಮ fan :)

  ReplyDelete
 23. ಹಳೇ ಪ್ರೇಮ ಪುರಾಣ ...

  ಹಳೆ ಹೊಸ ವ್ಯಾಖ್ಯಾನ

  ನೀನು ವರ್ಣಿಸಿದ ವಿಧಾನ

  ನೋಡಿ ಮೂಡಿ ಬಂತು ಅಭಿಮಾನ....

  yes.. preeti arthakke sigodu kasta.. adu vishala samudra.. adaralliro sundara chippannu ettikottiddakke dhanyavada

  Pravi

  ReplyDelete
 24. ya ya... nice poem pravi.... thanks a lot

  ReplyDelete
 25. ತುಂಬಾ ಚೆನ್ನಾಗಿ ಪ್ರೀತಿಯ ವಿಧಗಳನ್ನು ವಿವರಿಸಿದ್ದೀರಿ..

  ಪಾಶ್ಚಾತ್ಯರ 'ಲವ್' ಗೆ ಪಾಶ್ಚ್ಯಾತ್ಯರಂತೆ ಪ್ರತಿಕ್ರಿಯಿಸುತ್ತಿರುವ ಈಗಿನ ಥರ್ಡ್ ಕ್ಲಾಸ್ ಯುವಜನತೆ ನೋಡಿ ಅಸಹ್ಯವಾಗುತ್ತದೆ..
  ನನ್ನ ಗೆಳೆಯನೊಬ್ಬ 'ಲವ್ ಎಂದರೇನು?' ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದ..
  ..'ಒಂದು ಹುಡುಗಿಯ ಮೇಲೆ ಆಸೆ ಆದರೆ ಅವಳ ಜೊತೆ ತನುವಾಸೆ ತೀರಿಸಿಕೊಳ್ಳಲು ನೇರವಾಗಿ ಆಕೆಯನ್ನು ಆಹ್ವಾನಿಸಲು ಆಗೋಲ್ಲ.. ಆದ್ದರಿಂದ 'ಲವ್' ಎಂಬುವುದರ ಮೂಲಕ ಹೋಗಿ ಆಹ್ವಾನಿಸಿದರೆ ಆಕೆಯನ್ನು ಸುಲಭವಾಗಿ ಮಂಚಕ್ಕೆ ಎಳೆಯಬಹುದು..' ಎಂದಿದ್ದ..
  ಈ ಉತ್ತರ ಎಷ್ಟು ಸರಿ..?
  'ಸ್ನೇಹ' ಎಂದರೆ ಹೂ ಚಿತ್ರದಲ್ಲಿ ಆನಂದ್ ಮತ್ತು ಜಾಸ್ಮಿನ್ ನಡುವೆ ಇದ್ದಂತೆ ಇರಬೇಕು ಅಲ್ವೇ..?

  ReplyDelete
 26. ಅಭಿನಂದನೆಗಳು ಗೆಳತಿ ನಿಮ್ಮ ಅರ್ಥಪೂರ್ಣ ಚಿಂತನೆಗಳಿಗೆ,
  ನಮ್ಮ ಸಂಸ್ಕೃತಿಯ ಬಗ್ಗೆ ನಿಮ್ಮಲ್ಲಿರುವ ಕಾಳಜಿಗೆ ಅನಂತ ವಂದನೆಗಳು.. .
  ನಿಮ್ಮ ವಿಚಾರಶೀಲ ಪ್ರಬುದ್ಧ ಚಿಂತನೆಗಳು, ನನಗೆ ತುಂಬಾ ಹತ್ತಿರದ ಆತ್ಮವೊಂದು ಕಣ್ಣ ಮುಂದೆ ಬಂದು ನನ್ನೊಂದಿಗೆ ಚರ್ಚಿಸಿದಂತಾಯಿತು, ಏಕೆಂದರೆ ನನ್ನ ವಿಚಾರಗಳು ಕೂಡ ಅದೇ ಹಾದಿಯಲ್ಲಿವೆ ...
  ಈ ಸಂಬಂದ ನನ್ನ ಕೆಲವು ಕವನಗಳು ಅದೇ ರೀತಿಯ ಚಿಂತನೆಗಳಲಿ ಹಾದು ಹೋಗಿವೆ, ನೀವು ಓದಿರಲುಬಹುದು ಆದರು ನಾನು ಮತ್ತೊಮ್ಮೆ ಇಲ್ಲಿ ಪ್ರಕಟಿಸುತ್ತಿದ್ದೇನೆ ...

  ಮತ್ತೊಂದು ವಿಷಯ ನಿಮ್ಮಲ್ಲಿ ಇಲ್ಲಿ ನಾನು ಚಿಂತನೆಗಳನ್ನು "ಕವನ" ಎಂದು ಕರೆದಿದ್ದರು ಸಹ ಅವು ಕವನಗಳಲ್ಲ, ಯಾಕೆಂದರೆ ನನಗೆ ಯಾವ ರೀತಿ ಬರೆಯಬೇಕು, ಅದರ ಪದಗಳು ಹೇಗಿರಬೇಕು ಎಂಬುದು ಕೂಡ ಗೊತ್ತಿಲ್ಲ, ಆದರು ಸಹ ನನ್ನ ಮನಸಿನ ಆತ್ಮದಲಿ ಮೂಡಿದ ವಿಚಾರಶೀಲ ಚಿಂತನೆಗಳನ್ನು "ಪದಗಳಲ್ಲಿ ಬಂದಿಸಿದ್ದೇನೆ ....

  "ಇದು ಹೀಗೆಕೊ, ನಾನರಿಯೇ!?"


  ಕಾಮ, ಕ್ರೋಧ
  ಮಧ, ಮಾತ್ಸರ್ಯವಿಲ್ಲದ
  ಜಗದ ಜನನ
  ನೀ ಕಾಣಲಾರೆ,
  ಹಿಂದೆ ಮುಂದೆ ನೀನೆಂದೂ!
  ಅವುಗಳಿಲ್ಲದ ಮನವು
  ಮರಳುಗಾಡಿನ ಮನಸ್ಸೆಂದು
  ಬೆಳೆಯುವುದೇ,ಪೈರು ಪಚ್ಚೆ ಎಂದೆಂದೂ?
  ಆ ನಾಲ್ಕರಲ್ಲಿದೆ, ಈ ಜಗಮಾಯಾಟದಾರ್ಥ
  ಇದು ಹೀಗೆಕೊ ನಾನರಿಯೇ ?....

  ಆಸೆ, ಆಕಾಂಕ್ಷೆ
  ನೆನಪು, ನೀರೀಕ್ಷೆ
  ಈ ಮನದ ಆಪೇಕ್ಷೆ
  ಯಾರಿಗಾಗಿ ಈ ಪರೀಕ್ಷೆ
  ಇವುಗಳಿಂದಲೇ, ಈ ಜಗದ ಕಕ್ಷೆ
  ಆ ನಾಲ್ಕರಲ್ಲಿದೆ, ಈ ಜಗಮಾಯಾಟದಾರ್ಥ
  ಇದು ಹೀಗೆಕೊ,ನಾನರಿಯೇ ?....

  ಸ್ವಾರ್ಥ, ಕಪಟ
  ಮೋಸ, ವಂಚನೆ
  ಈ ಲೋಕವನ್ನಾಳುವ ನಿಯಮಗಳು
  ಇನ್ನು ಜೀವಿಸುವುದೆಲ್ಲಿ
  ನಿಷ್ಕಲ್ಮಶ ಮನಸ್ಸುಗಳು
  ಸೇರಿಹೋಗಿವೆ 'ರತ್ನಗಳು'
  ಪಾಪಿಗಳ ಕೊಳದಲ್ಲಿ
  ಗೊಬ್ಬುನಾತದ ಈ ಜಗದಲಿ
  ಆ ನಾಲ್ಕರಲ್ಲಿದೆ, ಈ ಜಗಮಾಯಾಟದಾರ್ಥ
  ಇದು ಹೀಗೆಕೊ, ನಾನರಿಯೇ ? ....

  ಹೆಣ್ಣು, ಹೊನ್ನು
  ಮಣ್ಣು, ಸಂಸ್ಕ್ರತಿ
  ನಮ್ಮ ಕಣ್ಣು
  ಎಂದು ಹೊಗಳಿಹರು
  ಸಿರಿವಂತ ಹೃದಯಗಳೆಂದೋ
  ಭೋಗ, ಮಾರಾಟದ ವಸ್ತುಗಳಾಗಿವೆ ಇಂದು
  ಆ ನಾಲ್ಕರಲ್ಲಿದೆ, ಈ ಜಗಮಾಯಾಟದಾರ್ಥ
  ಇದು ಹೀಗೇಕೋ, ನಾನರಿಯೆ ?...

  ಆಸೆಯೇ, ದುಃಖಕ್ಕೆ ಮೂಲ
  ಸಂಸ್ಕೃತಿಯೇ, ನಮ್ಮ ಜೀವಾಳ
  ಹೆಣ್ಣೇ, ಈ ಲೋಕದ ಮೂಲ
  ಮಣ್ಣೇ, ನಮ್ಮ ಅಸ್ತಿತ್ವದ ಜಾಲ
  ಎಂದು ಜ್ಞಾಪಿಸಿದ ಮಹಾನ್ಫ್ ಜೀವಿಗಳ
  ತಿಳಿದವರೆಷ್ಟು ಈ ಜಗದಲ್ಲಿ ?
  ಆಸೆಯಿಲ್ಲದೆ, ಬದುಕಲಾಗುವುದೇ ಇಂದಿಲ್ಲಿ
  ಸಂಸ್ಕ್ರತಿಯ, ಉಳಿಸುವರ್ಯಾರಿಲ್ಲಿ
  ಹೆಣ್ಣ ಸಿರಿ, ಕಮಾಂದದಲ್ಲಿ
  ಮಣ್ಣು, ಬಿರಿದಿದೆ ರಂದ್ರಗಳಲ್ಲಿ
  ಆ ನಾಲ್ಕರಲ್ಲಿದೆ, ಈ ಜಗದ ನಿಜದರ್ಥ
  ರಕ್ಷಿಸಲಾರೆಯಾ ಓ ಜಗದೊಡೆಯಾ
  ಇದು ನಿಜವಾಗುವುದೇ , ನಾನರಿಯೇ ?....

  - ಶೂಜ್ಞ್ಯ

  'ಬೆಕ್ಕ ನಡೆ - ಕಪ್ಪು ಪ್ರೀತಿ'

  ನೂರು ಭಾವನೆಗಳು
  ಪ್ರೀತಿಯಲಿ ಮೂಡಿ
  ನೂರಾರು ಸ್ವಾರ್ಥಗಳು
  ಪ್ರೀತಿಯಾ ಹೊರದೂಡಿ
  ಮೈಲೈಸಿವೆ
  ಚರ್ಮಸುಖವ ಕೋರಿ
  ಕ್ಷಣಿಕದಲಿ ಮರೆತು
  ಪ್ರೀತಿಗೆ ಕಪ್ಪುಮಸಿಯನ್ನುಲಿಸಿ
  ಮನಸಿಗೆ ಬೆಕ್ಕ
  ನಡೆ ಕಲ್ಸಿ
  ಪ್ರೀತಿಯೇ ನಾನು
  ಎನ್ನುವ ಮಲ್ಲ ಕಪಿಗಳಿಗೆ
  ಕ್ಷಮೆ ಬೇಕೇ, ?
  ಕೇಳಿ ನಿಮ್ಮ ಮನವರಳಿಸಿ.....

  - ಶೂಜ್ಞ್ಯ

  "ಎಲ್ಲಿದೆ ನಮ್ಮೂರು"!?

  ಭರತ ಕಟ್ಟಿದ ಚಿನ್ನದಸಿರುನೂರು
  ವೇದ ಪುರಾಣಗಳ ಜೀವದೂರು
  ಹೆಣ್ಣ ಪೂಜೆಗೈಯುವ ಜಗದೇಕದೂರು
  ಮಾತಪಿತೃಗಲೇ ದೈವವೆಂದೂರು
  ಮನಸಿರಿಯ ಮಾನವತ್ವದ 'ಮುತ್ತಿನೂರು'
  ಜಗಕೆ ಮಾದರಿ ನಮ್ಮೂರು .....

  ಇಂದೆಲ್ಲಿದೆ ಆ ಚಿನ್ನದೂರು
  ಭರತನ ಅಷ್ಟ ದಿಕ್ಕುಗಳು
  ಸೈತಾನನ ಕಪಿ ಚೆಷ್ಟೇಯಲಿ
  ನಿತ್ಯಚಾರಣವು ಜೀವಭಯದಲಿ
  ಉಸಿರಾಡಿಹರು ಜೀವಚ್ಚವದಲಿ
  ಈಗ ನಾವಿರುವುದು ಯಂತ್ರದೂರಲ್ಲಿ ....

  ಮರೆತ ವೇದಸಾರಗಳು
  ಸಾರಾರ್ಥವಿಲ್ಲದ,
  ಇಂದಿನ ನಿಲುವುಗಳು
  ಸುಖದಾಸೆಯ ಕಂದರಗಳು
  ಕೊಳೆಯುತ್ತಿರುವ ಸು-ಗುಣಗಳು
  ಮುನ್ನಡೆಯುತ್ತಿವೆ ಜೀವಿಗಳು
  ಗುರಿಯಿಲ್ಲದ ಬಾಣಗಳಂತೆ....

  ಭಾರತಾಂಬೆಯ ಮಕ್ಕಳಿವರು
  ಸುಸಂಸ್ಕೃತಿಯ ರಕ್ಷಕರಿವರು
  ಇಂದೆಲ್ಲಿಹರು, ಆ ತೇಜಸ್ಸಿನ ಯುವಜನತೆ
  ಬಿದ್ದಿಹರು, ಗಡಿಗಲಾಚೆಯ
  ಹೀನ ಸಂಸ್ಕೃತಿಯ ಮತ್ತಿನಲ್ಲಿಹರು
  ಕೆಂಪುದೀಪಗಳಹಚ್ಚಿಹರು ಊರೆಲ್ಲಾ
  ದೀನ ಸ್ಥಿತಿಗೆ ತಂದಿಹರು
  ಯಾರದೋ ಮನೆಯ ಬೆಳಗುವವರೆನ್ನೆಲ್ಲಾ ....

  ಜಗದ ಆದಿ, ಅಂತ್ಯವ
  ಅರಿತವಳು ನೀನೆ
  ಮನೆಯ ಬೆಳಕು ನೀನೆ
  ಸೃಷ್ಟಿಯ ಉಸಿರು ನೀನೇನೆ
  ಇದು ನಿನಗೆ ಸರಿಯೇನು !?
  ಪ್ರೇಮದ ಹುಚ್ಚಿನಲ್ಲಿ
  ಕಾಮದ ಮತ್ತಿನಲ್ಲಿ
  ನಿನ್ನ ಹೆಣ್ನಸಿರಿಯ ಬಳಕೆಯಲಿ
  ನಿನ್ನ ನೀನೆ ಕಳೆದಿರುವೆ
  ಇನ್ನಾದರೂ ತಿಳಿ, ನೀನಿರುವೆ
  ಹೆಣ್ಣ ಪೂಜೆಗೈಯುವ ಜಗದೇಕದೂರಲ್ಲಿ....

  ತಾಯಿಗಿಂತ ಬಂದುವಿಲ್ಲ
  ತಂದೆಗಿಂತ ರಕ್ಷಕನಿಲ್ಲ
  ಅದೆನಾಗಿದೆಯಿವರಿಗೆ,
  ಹಸುಗಂದಗಳ ಕೊಳ್ಳುತ್ತಿರುವರಲ್ಲ
  ಸ್ವಾರ್ಥದ ಆಸೆಗಳಿಗೆ
  ಕಾಮತ್ರುಷೆಗಳಿಗೆ
  ಮುಗ್ಧ ಮಕ್ಕಳು ಬಳಿಯಾಗಿಹರಲ್ಲ
  ತಾನು ನಿಂತ ನೆಲವೇ
  ಬಿರಿದರೆ ಎಲ್ಲಿಹುದು ಉಳಿಗಾಲ
  ನಿಮಗೆ ತಿಳಿಯದೆ ಇದು,
  ಮಾತಪಿತೃಗಲೇ ದೈವವೆಂದೂರು....

  ಮುತ್ತು, ರತ್ನಗಳ ಹಾಸಿದೂರು
  ಚಿನ್ನ,ರನ್ನಗಳ ಮುತ್ತಿನೂರು
  ಸಿರಿಮನಗಳ ಆಳಿದೂರು
  ಮಾನವತ್ವದ ಮನುಜರೂರು
  ಹೀಗೆಲ್ಲಿ ಹುಡಕಲಿ, ಆ ಸುವರ್ಣದೂರು....

  ಇನ್ನೆಲ್ಲಿಯ ನಮ್ಮೂರು
  ಎಚ್ಚತ್ತರೆ ಉಳಿಯುವುದಿವೂರು
  ಭಿನ್ನತೆಯಲ್ಲಿ ಏಕತೆ ನಮ್ಮೂರು
  ಮನೆ ಜಗಳ ಬಿಟ್ಟು
  ಊರ ರಕ್ಷಿಸುವವರ್ಯಾರು !?
  ಇದು ನಮ್ಮೂರು, ನಮ್ಮರೆಲ್ಲರೂರು ....

  - ಶೂಜ್ಞ್ಯ.

  ReplyDelete
 27. ಜನುಮ- ಜನುಮದ ಪ್ರೀತಿ ಹೋಗಿ ಈಗ ವೀಕೆಂಡ್ ಪ್ರೀತಿ ಬಂದುಬಿಟ್ಟಿದೆ ...ಎಲ್ಲರೂ ನಿಮ್ಮ ತರಹ ಯೋಚನೆ ಮಾಡಿದರೆ ನಮ್ಮ ಸಂಸ್ಕೃತಿ ಸ್ವಲ್ಪ ಮಟ್ಟಿಗೆ ಉಳಿಯುತ್ತದೆ..ಚನ್ನಾಗಿದೆ ಬರವಣಿಗೆ.

  ReplyDelete
 28. This comment has been removed by the author.

  ReplyDelete
 29. Namaskaara..

  Nimma blog haagu neevu hididhu bareyuva vishayagalu chennagive..

  Haagu kannadadalli bareyutthiruvudharindha, abhinandanegalu. Bhaashaa praveenyathe illade bareyuvudu nijakkoo kashta, adhu nimagidhe!

  Neevu barediruva, bekku-naayi preethi haagu nimma snehithana mobile phone-revaluation vishayagalu nannannu nijavaagiyu mookanannaagi maadiside.

  Nimma blog nijaakko yashaswi - nannalli innu mele kailaada sahaaya haagu preethi inda koodidha jeevana saarthaka ennuva bhaavane mane maadidhe!

  Dhanyavaadagalu!

  Goodluck :)

  ReplyDelete
 30. ಹ್ಮಂ ಎಸ್ಟೊಂದು ತಿಲ್ಕೊಂಡಿದಿರಪ್ಪ ನೀವು ಚನ್ನಗಿದ್ ಬರ್ದಿದಿರಾ ನಾವು ಸ್ವಲ್ಪ ತಿಳ್ಕೊಬೇಕು

  ReplyDelete
 31. ನಿನ್ನ ಬರಹವನ್ನ ನೀನು ಹಾಕಿದ ತಕ್ಷಣ ಓದಿದ್ರೂ ಪ್ರತಿಕ್ರಿಯೆ ಹಾಕಿರ್ಲೆ
  ...ಎಷ್ಟೆಲ್ಲಾ ಯೋಚನೆಗಳು ಹಾದು ಹೋದ ಗೊತ್ತಿದ್ದಾ??? ಪ್ರೀತಿ ಅನ್ನೋದು ಅನುಭವಿಸುವ ಭಾವನೆ ಮಾತ್ರ..ಬೇರೆ ಬೇರೆ ವಿಧದಲ್ಲಿ ವ್ಯಕ್ತ ಆಗ್ತು..ಆದ್ರೆ ಅದನ್ನ ಯಾವುದೇ ಅಪೇಕ್ಷೆ ಇಲ್ದೇ ಅನುಭವಿಸಿದಾಗ ಮಾತ್ರ ನಮಗೆ ಅದರ ನಿಜವಾದ ಅನುಭವ ಆಗದು ಅಂತ ನನ್ನ ಭಾವನೆ.. ನಿಂಗೂ ನಾನು ಆ ಅನುಭವ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಕ್ಕಾ????
  --ಪ್ರೀತಿಯಿಂದ ಸುಮನಕ್ಕ!!

  ReplyDelete
 32. tumba chennagi barediddiri..nimma manasina bhavane tilisiddiri..hige munduvareyali...

  ReplyDelete
 33. Nice thoughts... Liked your writeup..

  ReplyDelete
 34. edondu sundaravada lekhana nevobbru uttama lekhakakru.....e lekhanavannu nanna blognalli hakiddini (without ur permision......)entha lekhanagalu inastu barali

  ReplyDelete
 35. i cant under stand u r language si i have no coment on that , whats u r language...... i like u r rofile ...thnks

  ReplyDelete
 36. When ever i try to read Articles like these, i never read it fully... I think this is my first post which i read fully... Good one... :)

  ReplyDelete
 37. This comment has been removed by the author.

  ReplyDelete
 38. Simply Good :)..No words to say.. just remembered my just past of engg..But sad part is .. I did it n so many for some One in my life.. now that love is not Loving Me :(.. Of course not for a girls fiend but Sister..

  ReplyDelete
 39. Thuma esta ayithu.
  nimma prithiya alochane thumba mugda vagide....
  prithi andrene agde ero nange nimma
  lekanada prithina nodi thumba santhosa ayithu.


  prathipala ellade yaru yarannu prithsolla....!

  ondvele prithisidre adralli ero(sigo)

  happyness bere allu eralla (sigalla)

  a thara yaradru prithi madthara sowmya???????!!!

  sigthara??????!!!!!!!!!!!!!!!!!!!!!!!!!!!!

  ReplyDelete
 40. ನಾವ್ ಹುಟ್ಟಿದಗ್ಲಿನ್ದನು ಪ್ರೀತಿ ಅನೋದನ್ನ ನಮಗೆ ಗೊತ್ತಿಲದಹಾಗೆ ಮಾಡಕ್ ಶುರು ಮಾಡಿರ್ತಿವಿ. ಆದು ಒಂದ್ ವಸ್ತು ಮೇಲಾಗಿರ್ ಬಹುದು ಒಂದ್ ವಿಷ್ಯ ಇಲ್ಲ ಒಬ್ಬ ವ್ಯಕ್ತಿ ಯಾವುದಾದರೊಂದು.so ನಾನ್ ಪ್ರೀತಿಸ್ತೀನಿ, ಪ್ರೀತಿಸ್ತಇದ್ದೀನಿ, ಪ್ರೀತಿಸ್ತ ಇದ್ದೆ ಅನೋದಕ್ಕಿಂತ ನಾವೆಲ್ಲರು ಪ್ರೀತಿಸ್ತಾನೆ..ಇರ್ತಿವಿ ಅನೋದು ಸರಿಯೇ. ನೀವು ಹೇಳಿದಹಾಗೆ ಅದಕ್ಕಿನೇನು ಬೆರೆಸದೆ, ಒಂದು ಲೋಟ ಬಿಸಿ ಬಿಸಿ ಹಾಲಿಗೆ ಸಕ್ಕರೆ ಬೆರೆಸಿ ಕುಡಿದು ಬರುತ್ತೇನೆ.

  ReplyDelete
 41. ಕನ್ನಡದ ಪದಗಳನ್ನ ನಿಮ್ಮ ಅದ್ಬುತ ಶೈಲಿಯಾ ಮೂಲಕ ಸೋಗಸಾಗಿ ಜೋಡಿಸಿ ಪದ ಪುಂಜಗಳನ್ನ ಹೊರ ಹಾಕಿ ಓದುಗರ ಹೃದಯ ಬಡಿತವನ್ನ ಇನ್ನು ಕೂತಹಲ ಮೂಡುವ ಹಾಗೆ ಮಾಡಿದ ನಿಮ್ನತನವನ್ನ ನಿಮ್ಮ ಅಕ್ಷರ ದಾಸೊಹದಲ್ಲಿ ನಾನು ನೋಡಿದೆ..ಸಾಗಲಿ‌ ನಿಮ್ಮ ಈ ಪಯಣ ..ಸೌಮ್ಯಾ --

  ReplyDelete
 42. ಪ್ರೀತಿ ತು೦ಬಿ ತುಳುಕುತ್ತಿದೆ............ಸೂಗಸಾದ ಬರವಣಿಗೆ..........:)

  ReplyDelete