ನಾನು ಏಕಾಂಗಿಯಲ್ಲ
ನನ್ನ ನೆರಳು ಜೊತೆಗಿದೆ
ನಿನ್ನ ನೆನಪು ನನ್ನ ಬಳಿಯಿದೆ.
ಏಕಾಂಗಿತನ ನನ್ನೊಂದಿಗಿದೆ..
ಒಣಗಿದ ಕನಸುಗಳ ಗೂಡಿನಲ್ಲಿ
ನಿನ್ನ ನೆನಪಿನ ದೀಪವೊಂದು ಉರಿಯುತಿದೆ
ಕತ್ತಲಲ್ಲಿ ಕಳೆದುಹೋಗುವ ಭಯದಲ್ಲಿರುವ
ನನ್ನ ನೆರಳಿಗಾಗಿ..
ನಿನ್ನ ನೆನಪುಗಳ ಚಿತ್ರಗಳಿಗೊಂದು
ಬೆಚ್ಚನೆಯ ಭಾವದ ಫ್ರೇಮು ಹಾಕಿಸಿ
ತೂಗುಬಿಟ್ಟಿದ್ದೇನೆ
ನನ್ನ ಮನದ ಗೋಡೆಯಮೇಲೆ ..
ಬದುಕಿನ ಕಾಲುದಾರಿಯಲ್ಲಿ
ಹೊರಟಿದ್ದೇನೆ ಗೆಳೆಯ
ಏಕಾಂಗಿತನದ ಕೈ ಹಿಡಿದು
ನಿನ್ನ ಹೆಜ್ಜೆಗಳ ಹುಡುಕುತ್ತ...!
enri estodu olle kavite galannu bareddiddira,, really so awesome,,
ReplyDelete