ಹಲೋ ಸ್ನೇಹಿತರೆ,
ಪ್ರೀತಿ, ಕಥೆಗಳು, ಗಂಭೀರ ಲೇಖನದತ್ತಲೇ ಗಿರಕಿಹೊಡೆಯುತ್ತಿದ್ದೆ ಅಲ್ವಾ ನಾನು ? But ಇದು ಲಘು ಹಾಸ್ಯದ ಲೇಪನವಿರುವ ಲೇಖನ. ಇತ್ತೀಚಿಗೆ ನನ್ನ ಗಮನಕ್ಕೆ ಬಂದ ಹಾಸ್ಯ ಸಂಗತಿಗಳು, ನಡೆದ ಘಟನೆಗಳನ್ನು ನನ್ನದೇ ಪದಗಳಲ್ಲಿ ಇಡುತ್ತಿದ್ದೇನೆ. ಚಿನಕುರುಳಿ ಉತ್ತರಗಳಿಗೆ, ಹಾಸ್ಯಕ್ಕೆ ತಲೆದೂಗಿದ್ದೇನೆ. ಹಾಗೆ ನಿಮ್ಮ ಮುಂದೆಯೂ ಇಡುತ್ತಿದ್ದೇನೆ. ಇಲ್ಲಿನ ಹಾಸ್ಯವನ್ನು ಮಾತ್ರ ತೆಗೆದುಕೊಳ್ಳಿ. ಯಾರನ್ನೂ ನೋಯಿಸುವ ದುರುದ್ದೇಶವಂತೂ ಇಲ್ಲವೇ ಇಲ್ಲ. ಈಗ ಓದಿದರೆ ನಗು ಅಷ್ಟು ನಗು ಬರಲಿಕ್ಕಿಲ್ಲ ಆದರೆ ಆ ಚಟಾಕಿಗಳ timing ಇದೆಯಲ್ಲ, ಅದರ ಪರಿಣಾಮ ಮಾತ್ರ ಅದ್ಭುತ !
Long skirt ಪಜೀತಿ:
ನನಗೆ long skirtಗಳ ವಿಪರೀತ ಹುಚ್ಚಿದೆ. ಯಾವುದೇ ಪಟ್ಟಣಗಳಿಗೆ ಹೋದರೂ ಬಟ್ಟೆ ಪ್ರಸಿದ್ಧ ಬಟ್ಟೆ ಅಂಗಡಿಗಳಲ್ಲಿ long skirts ಕೇಳುತ್ತ ನಡೆದು ಬಿಡುತ್ತೇನೆ.ಒಂದು ವಾರದ ಹಿಂದೆ ಹುಬ್ಬಳ್ಳಿಗೆ ಹೋಗಿದ್ದೆ. ದೊಡ್ಡದು ಎನಿಸುವ ಪ್ರಸಿದ್ಧ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ನನ್ನ ಮಾಮೂಲಿ ವರಸೆಯಲ್ಲಿ "Long skirts ತೋರಿಸ್ರಿ" ಎಂದೆ. sales boy ಸರೀ ಎಂದು ಒಂದು ದೊಡ್ಡ box ಎತ್ತಿ ತಂದ. "ಯಾವ ಕಲರ್ರೀ ಅಕ್ಕಾರೆ ?" ಎಂದ. ನೋಡುವ ಎಂದು ಇಣುಕಿದರೆ 'ಸೀರೆಗೆ ಹಾಕುವ ಲಂಗಗಳು' ಯಾವ ಬಣ್ಣದ ಲಂಗಗಳು ಬೇಕಾದರೂ ಇದ್ದಿದ್ದವು.!
ನಾನು ಕಕ್ಕಾ ಬಿಕ್ಕಿ ನನ್ನ ಗೆಳೆಯ ಗೆಳತಿಯರೆಲ್ಲ ನಗುತ್ತಿದ್ದರು. ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ. ಉದ್ದದ ಲಂಗ, ಉದ್ದನೆಯ skirt, ನೆರಿಗೆ ಇರುವ skirt ಯಾವ ಬಗೆಯಲ್ಲಿ ಹೇಳಿದರೂ ಅಲ್ಲಿದ್ದ ನಾಲ್ಕಾರು ಜನರಿಗೂ ತಿಳಿಯಲೇ ಇಲ್ಲ. "ಅದಾವಲ್ರೀ ಇಲ್ಲೇ ಇದಕೂ ಉದ್ದದ್ದು ಬೇಕೆನ್ರೀ ?"ಎಂದು ಸೀರೆಯ ಲಂಗದ ಕಡೆಗೇ ತೋರಿಸುತ್ತಿದ್ದ..! ನನಗೆ ನಗು ತಡೆಯಲಾಗಲೇ ಇಲ್ಲ. "ಈ ಥರದ್ದು ಅಲ್ಲ, ನಾನಿನ್ನು ಬರುತ್ತೇನೆ " ಎಂದು ಹೊರಟವಳಿಗೆ. ನನ್ನ ಕನ್ನಡದ ಮೇಲೆ doubt ಬರುತ್ತಿತ್ತು !
ಸಮಾಜಕ್ಕೆ ಹೆದರುವುದಿಲ್ಲ:
ಮೊನ್ನೆ ಮೊನ್ನೆ ನಾವು ಗೆಳೆಯರೆಲ್ಲ ಸೇರಿ ಮಾತನಾಡುತ್ತಿದ್ದೆವು. ಗುಂಪಿನಲ್ಲಿ ಹುಡುಗಿಯೊಬ್ಬಳು "ನನ್ನ ದಾರಿಯೇ ಬೇರೆ ತಾನು ಸಮಾಜಕ್ಕೆ ಹೆದರುವುದಿಲ್ಲ" ಎಂದು ಉದ್ದುದ್ದ ಭಾಷಣವನ್ನು ಕೊಡುತ್ತಿದ್ದಳು. ಅವಳ ಆವೇಶ ಭರಿತ ಮಾತುಗಳನ್ನು ಕೇಳುತ್ತಿದ್ದ ನನ್ನ ತಮ್ಮ ಮುಗುಮ್ಮಾಗಿ ಉತ್ತರಿಸಿದ "ನನಗೊತ್ತಿದೆ ಬಿಡೆ, ನೀನು ಹೆದರಿದ್ದು ಗಣಿತ ಮತ್ತು Englishಗೆ ಎಂದು...! " ಎಲ್ಲರೂ ಹೋ ಎಂದು ಬೊಬ್ಬಿಟ್ಟೆವು.! ನಾನು ತಮ್ಮನ ಮುಷ್ಟಿಗೆ, ನನ್ನ ಮುಷ್ಟಿಯನ್ನು ಗುದ್ದಿದೆ.
ಚಿನ್ನ-ರನ್ನ ಈ ಪದದ ಹಿಂದಿನ ಗುಟ್ಟು :
ನಾವು ಮೂವರು ಗೆಳತಿಯರು ಮಾತನಾಡುತ್ತಿದ್ದೆವು. ಗೆಳತಿಯೊಬ್ಬಳು ಅವಳ ಹುಡುಗನ ಬಗ್ಗೆ ಹೇಳುತ್ತಾ "ನನ್ನ ಹುಡುಗ ನನ್ನ ಚಿನ್ನ, ಬಂಗಾರ ಅಂತ ಕರೀತಾನೆ." ಅದಕ್ಕೆ ಇನ್ನೊಬ್ಬಳ ಉತ್ತರ ನೋಡಿ "KGF ನಲ್ಲಿ ಕೆಲಸ ಮಾಡಿದಾನಾ? ಅಥವಾ ಬಂಗಾರದ ಕೆಲಸ ಮಾಡ್ತಾನಾ ?" ನಾನು ನಗೆ ತಡೆಯಲಾಗದೆ ಆಚೆ ಹೋದೆ.
Album ದರ (Incredible Indians):
ಒಮ್ಮೆ Digital studio ಒಂದಕ್ಕೆ ಹೋಗಿದ್ದೆ ಒಂದಿಷ್ಟು ಫೋಟೋಗಳ ಪ್ರಿಂಟ್ ಹಾಕಿಸಲು. ಅಷ್ಟರಲ್ಲಿ ಬಂದ ಒಬ್ಬ ಆಸಾಮಿಯ ಬಳಿ ಸ್ಟುಡಿಯೋದವ "ಏನು ಬೇಕು ?" ಎಂದ. ಅದಕ್ಕೆ ಆ ಆಸಾಮಿಯ ಉತ್ತರ "ಆಲ್ಬಮ್ ಕೊಡಿ". ಸ್ಟುಡಿಯೋದವ ಕೇಳಿದ "ಯಾವ size?". ಆ ಆಸಾಮಿ ಉತ್ತರಿಸಿದ "ಒಂದು ಐವತ್ತು ರೂಪಾಯಿಯೊಳಗೆ ಕೊಡಿ". ನಗುತ್ತ ಮನದೊಳಗೆ ಎಂದುಕೊಂಡೆ incredible Indians...!
ಬೀಗ ಉಂಟಾ ?
ಒಮ್ಮೆ ನನ್ನ ಚಿಕ್ಕಮ್ಮನ ಮಗನ ಜೊತೆ Digital cameraವನ್ನು ಕೇಳಿಕೊಂಡು ಮಂಗಳೂರಿನ ಪ್ರತಿಷ್ಠಿತ ಮಳಿಗೆಯೊಂದಕ್ಕೆ ಹೋಗಿದ್ದೆವು. ನಾಲ್ಕಾರು modelಗಳ ಕ್ಯಾಮೆರಾಗಳನ್ನು ಕೇಳಿದರೂ ಒಂದೂ ಅವರ ಬಳಿ ಇರಲಿಲ್ಲ. ಥಟ್ಟನೆ ನನ್ನ ಚಿಕ್ಕಮ್ಮನ ಮಗ "ನಿಮ್ಮಲ್ಲಿ ಬೀಗ ಸಿಗಬಹುದಾ?" ಎಂದು ಕೇಳಿದ. ಅದಕ್ಕೆ ಆ sales man "ಎದುರಿನ ಅಂಗಡಿಯಲ್ಲಿ ಸಿಗಬಹುದು" ಎಂದ. ತಕ್ಷಣ ನನ್ನ ಚಿಕ್ಕಮ್ಮನ ಮಗ "ಹಾಗಾದರೆ ಒಂದು ಬೀಗ ತಂದು ಈ ಅಂಗಡಿಗೆ ಜಡಿಯಿರಿ.!" ಎಂದ. ! sales man ಕೆಕ್ಕರಿಸಿ ನೋಡುತ್ತಿದ್ದ ನಾವು ನಗುತ್ತ ಕಾಲು ಕಿತ್ತಿದ್ದೆವು..!
But i like you:
ನಾವೆಲ್ಲಾ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಸಂಕ್ರಾಂತಿ ಬಂದರೆ ಸಾಕು greeting cardಗಳ ವಿನಿಮಯ ಶುರುವಾಗುತ್ತಿತ್ತು. ಅದೊಂದು ಬಗೆಯ ಹುಚ್ಚು, ಮಜ. ಮತ್ತೆ ಈಗ ಬರದ ಸುವರ್ಣ ಕಾಲ ಆ ಬಾಲ್ಯ. ಏನೆಂದು ಅರ್ಥಗಳೇ ಗೊತ್ತಿಲ್ಲದ, ವ್ಯತ್ಯಾಸವನ್ನು ಅರಿಯದ ಆ ಮುಗ್ಧ ಮನಸು. ಆ ಬಣ್ಣ ಬಣ್ಣದ card, sheetಗಳ ಒಳಗೆ ಅದೇನೇನೋ ಸಾಲುಗಳು, ಅಂತ್ಯ ಪ್ರಾಸಗಳು. ಎಲ್ಲ ಬಾಲ ಕವಿಗಳಾಗಿ ಬಿಡುತ್ತಿದ್ದರು ಸಂಕ್ರಾಂತಿ ಬಂತೆಂದರೆ. card ಒಳಗಿನ quotesಗಳ sample ಒಂದನ್ನು ನೋಡಿ:
ಭಟ್ಟ like ಜುಟ್ಟ
ಜುಟ್ಟ like ಹೂವು
ಹೂವು like ಪರಿಮಳ
But I like You ..!
ಎತ್ತಣ ಮಾಮರ ಎತ್ತಣ ಕೋಗಿಲೆ? ಎಲ್ಲೆಲ್ಲಿಯ ಸಾಲುಗಳು ನೋಡಿ. ಆಂಗ್ಲ ಭಾಷೆಯನ್ನೂ ಸಲೀಸಾಗಿ ಕೊಲೆ ಮಾಡಿ ಬಿಡುತ್ತಿದ್ದೆವು. ಸಂಕ್ರಾಂತಿಯ ಎಳ್ಳು ಬೆಲ್ಲದ ನಡುವೆ ಬಾಲ್ಯದ ನೆನಪುಗಳು ಕಾಡಿದ್ದವು. ಹಾಗೆ ಒಂದು greeting card ಎತ್ತಿಕೊಂಡು ಬರೆದಿದ್ದೆ ನನ್ನ ಬಾಲ್ಯದ ಗೆಳತಿಗೆ ಹಳೆ quoteನ improved version
ಭಟ್ಟ likes ಜುಟ್ಟ
ಜುಟ್ಟ likes ಹೂವು
ಹೂವು likes ಪರಿಮಳ
But I like you !
greeting card ಗೆಳತಿಗೆ ಕೊಟ್ಟೆ. ಇಬ್ಬರೂ ನಗುತ್ತಿದ್ದೆವು. ಬಾಲ್ಯದ ನೆನಪುಗಳ ಮಳೆಗೆ ಮನಸು ಮತ್ತೊಮ್ಮೆ ಒದ್ದೆಯಾಗಿತ್ತು .!