Wednesday, January 27, 2010

ನನ್ನ ಬಿಂಬ ಮಾತ್ರ ನಾಪತ್ತೆ.. !!!




ಕನಸುಗಳ ಕಾವಲಿದ್ದ
ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!

2 comments:

  1. ಪ್ರೀತಿಯ ಕಲ್ಲಿಂದ ಭಾವನೆಗಳ ಅಲೆ ಎದ್ದಾಗ..
    ನಾನು ಕಳೆದು ಹೋಗಿದ್ದೆ..
    ಒಳ್ಳೆಯ ಕವನ.ಸೌಮ್ಯಾ..

    ReplyDelete
  2. ಭಾವನೆಗಳ ಸೊಗಸಾದ ಎರಕ. ಚೆನ್ನಾಗಿದೆ

    ReplyDelete