Monday, May 7, 2012

ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ..

ತ್ತದೇ ಬೀದಿಯಲ್ಲಿ ಇಳಿದಿದ್ದ ಚಿಕ್ಕ ಚಿಕ್ಕ ಕಂಗಳ ಮಂದ ಹುಬ್ಬುಗಳ ಹುಡುಗ , ಬರೋಬ್ಬರಿ ಮೂರು ವರುಷಗಳ ನಂತರ. ಅವನ ಕಾಲುಗಳು ತಂತಾನೇ ಅವನ ಎಳೆದು ಹೊರಟಿದ್ದವು ಅದೇ ಆಂಜನೇಯ ದೇವಸ್ತಾನಕ್ಕೆ. ಸುತ್ತಲೂ ಕಣ್ಣಾಡಿಸುತ್ತ,ಮನದಲ್ಲೇ ನಗುತ್ತ  ಸಾಗಿದ್ದ ಅವನು.  ದೇವಸ್ಥಾನದ ಎದುರಲ್ಲೇ ಇದ್ದ  ಮಂಡಕ್ಕಿಹಾಗೂ ಭಜ್ಜಿಯ ಅಂಗಡಿ ಬೇರೆಡೆಗೆ ಸ್ಥಳಾಂತರವಾದದ್ದು ಬಿಟ್ಟರೆ, ಅದೇನು ಅಂಥ ಬದಲಾವಣೆ ಏನಿರಲಿಲ್ಲ  ಆ   ಬೀದಿಯಲ್ಲಿ. !


ಬೊಂಡದಂಗಡಿಯ ಅಜ್ಜ ಪರಿಚಯದ ನಗೆಯನ್ನು ಬೀರಿದಾಗಲೇ ಅವನಿಗೆ ಅನಿಸಿದ್ದು ತಾನು ಮತ್ತದೇ ಬೀದಿಯಲ್ಲಿದ್ದೇನೆ ಎ ನ್ನುವುದು. ಚಪ್ಪಲಿ ಕಳಚಿಟ್ಟು ದೇವಳದ ಒಳಹೊಕ್ಕು ಕೈಮುಗಿದ. ಕಣ್ಣುಗಳು ಅದೇನನ್ನೋ ಹುಡುಕುತ್ತಲೇ ಇದ್ದವು. ಅದೇ ಕನಸುಕಂಗಳು, ಅಮಲು ಕಂಗಳು. ಥಟ್ಟನೆ ಎಚ್ಚೆತ್ತ "ಅದೇನು ಹುಚ್ಚು ತನಗೆ, ಇನ್ನೆಲ್ಲಿ ಬರುತ್ತಾಳೆ ಅವಳು ಇಲ್ಲಿ?". ಎಂದು ತನ್ನಷ್ಟಕ್ಕೆ ನಕ್ಕು ಹೊರನಡೆದ. ಅವಳೊಂದು ಮಾಯೆಯೆ? ಅಲ್ಲ.. ತಾಯೆ ? ಯಾರವಳು ತನಗೇನಾಗಿದೆ? ಅವಳನೇಕೆ ಮರೆಯಲಾಗುತ್ತಿಲ್ಲ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತ್ತೊಮ್ಮೆ ಬಂದಿದ್ದ ದೂರದ ಮಿಜೋರಾಂನಿಂದ. ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯಲಿ ಅನಿಸಿತ್ತವನಿಗೆ ಇಲ್ಲಿಗೆ ಬಂದಮೇಲೆ.


ನಾಲಕ್ಕು ವರ್ಷಗಳ ಹಿಂದಿನ ಮಾತದು. ಇದೇ ಊರಿನಲ್ಲಿ ಕಲಿಯುತ್ತಿದ್ದ ಹುಡುಗ. .


 ಅವನಿಗೆ ಅವಳ ಪರಿಚಯ ಆದದ್ದೇ ಅಚಾನಕ್ಕಾಗಿ..3 ದಿನದ ದೀಪಾವಳಿಯ ರಜೆಗೆಂದು ಗೋವೆಯ ಚಿಕ್ಕಮ್ಮನ ಮನೆಗೆ ಹೊರಟಿದ್ದ. ಅವನ ಎದುರಿನ ಸೀಟಿನಲ್ಲಿ ಅವಳೂ ಇದ್ದಳು. ಅವಳ ಪಾಡಿಗವಳು ಅದ್ಯಾವುದೋ ಪುಸ್ತಕವನ್ನೋದುವುದರಲ್ಲಿ ಮಗ್ನಳಾದವನ್ನು ಕದ್ದು ದಿಟ್ಟಿಸಿದ್ದ ಹುಡುಗ. ನೀಳ ಕಣ್ರೆಪ್ಪೆಯ, ಉದ್ದನೆಯ ಕೂದಲ, ಶಾಂತ ಮುಖ ಮುದ್ರೆಯ ಹುಡುಗಿ. ಇನ್ನೂ ಮಾಸದ ಮುಗ್ಧತೆ ಮೊಗದಲ್ಲಿ. ಥಟ್ಟನೆ ಪುಸ್ತಕದಿಂದ ತಲೆಯೆತ್ತಿ ನೋಡಿದಳು ಮುಗುಳ್ನಕ್ಕಳು. ಅಲ್ಲಿಂದ ಶುರುವಾಯಿತು ಮಾತುಕತೆ. ಹುಡುಗ ಸಂಕೋಚದ ಪೊರೆಯಲ್ಲಿದ್ದುಕೊಂಡೇ ಮಾತಾಡುತ್ತಿದ್ದ. ಅವಳೋ ಮಳೆಗಾಲದ ಅರಬ್ಬೀ ಸಮುದ್ರಕ್ಕಿಂತ ಒಂದು ಪಟ್ಟು ಹೆಚ್ಚೇ ಎನಿಸುವ ಭೋರ್ಗರೆತದ ಮಾತು. ಮಾತುಕತೆಯಲ್ಲಿ ತಿಳಿದಿದ್ದು ಇಷ್ಟು ಇಬ್ಬರದ್ದೂ ಒಂದೇ ಆಯ್ಕೆಯ ವಿಷಯ. ಅವಳಿರುವುದೂ ಅವನ ರೂಮಿಗಿಂತ ೩ ಕಿಲೋಮೀಟರು ದೂರದಲ್ಲಿ. ಅವಳಿಗಿಂತ ಎರಡು ವರ್ಷಕ್ಕೆ ಕಿರಿಯ ಆತ.  


ಹೀಗೆ ಮಾತಿನ ನಡುವೆ ಅವಳು ಅವನಿಷ್ಟವ ಕೇಳಿದಾಗ. "ಏನಿಲ್ಲ" ಎಂದು ಅಮಾಯಕ ನಗು ನಕ್ಕಿದ್ದ. ಅವಳು ಕಣ್ಣರಳಿಸಿ "ಏನೂ ಇಷ್ಟ ಇಲ್ಲವಾ ?" ಎಂದಾಗ . "ಗಿಟಾರ್ ಇಷ್ಟವಿತ್ತು " ಎಂದು ಮಾತು ತಿರುಗಿಸಿದ್ದ. ಅದೇನೋ ಆತ್ಮೀಯತೆ ಮೂಡಿ ಬಿಟ್ಟಿತ್ತು ಅವರಿಬ್ಬರ ನಡುವೆ.ಅವಳು ಇಳಿವ station ಬರುವುದರೊಳಗೆ. 
 "ನಾನು ನಿನಗಿಂತ ಎರಡು ವರ್ಷಕ್ಕೆ ದೊಡ್ಡವಳು, ಅಕ್ಕಾ ಎಂದುಕೊಂಡು ಬಿಡು. ವಿಷಯಗಳಲ್ಲಿ ಅದ್ಯಾವುದೂ ತಲೆಗೆ ಹತ್ತದಿದ್ದರೂ ಕೇಳು. ನನಗೆ ತಿಳಿದಷ್ಟು ಹೇಳಿ ಕೊಡುತ್ತೇನೆ." ಅದೆಷ್ಟು ಸಲೀಸಾಗಿ ಸ್ನೇಹದ ಹಸ್ತ ಚಾಚಿಬಿಟ್ಟಳು ಹುಡುಗಿ ಎಂದು ಅವಾಕ್ಕಾದ. ಯಾರನ್ನೂ ಹಚ್ಚಿಕೊಳ್ಳದ ಅಂತರ್ಮುಖಿ, ಮುಗುಳು ನಗುತ್ತಿದ್ದ. ಎಂದೂ ತಾನಾಗಿ ಮಾತನಾಡದ ಹುಡುಗ. " may i have your contact number please.. ಎಂದಿದ್ದ. sure... ಎಂದೆನ್ನುತ್ತ ಅವಳು ಉಲಿದ ನಂಬರನ್ನು 'Dragon' ಎಂದು save ಮಾಡಿದ್ದ.! 

ನಂತರದ್ದೆಲ್ಲ ಇತಿಹಾಸವೀಗ. ಅವನ ನೆನಪಿನ ಹಂದರದೊಳಗೆ ಎಂದೂ ಬಾಡದ ಹೂಗಳು ಅವಳ ಜೊತೆಗೆ ಕಳೆದ ಕೆಲವು ಸಂಜೆಗಳು.!ಅವಳ  ಶನಿವಾರದ ಆಂಜನೇಯ ದೇವಸ್ಥಾನದ ಅಲೆದಾಟಕ್ಕೆ ಜೊತೆಯಾದ. ಬರುವಾಗ ಮಸಾಲೆ ಮಂಡಕ್ಕಿ , ಭಜ್ಜಿ, ಎಳನೀರು. ಅವರು ಮಾತನಾಡುತ್ತಿದ್ದ ವಿಷಯಗಳಲ್ಲಿ ಮುಖ್ಯವಾಗಿರುತ್ತಿದ್ದುದೇ ಆಧ್ಯಾತ್ಮ. ಪ್ಲಾಂಚೆಟ್, ಪುನರ್ಜನ್ಮ, ಎಂದು ಅವಳು ಅವನ ತಲೆ ತಿನ್ನುತ್ತಿದ್ದರೆ. ಅವನು ನಗುತ್ತಲೇ ತನಗೆ ಗೊತ್ತಿರುವುದನ್ನು ಹೇಳುತ್ತಿದ್ದ. ಅನಂತ ಆಗಸವ ದಿಟ್ಟಿಸಿ ಅನ್ಯಗ್ರಹ ಜೀವಿಗಳ ಬಗ್ಗೆ, ಹಾರುವ ತಟ್ಟೆಗಳ ಬಗ್ಗೆ  ಅವಳು ಹೇಳುತ್ತಿದ್ದರೆ ಥೇಟ್ ಮಗುವೆ ಅವಳು.. ಹುಡುಗ ನಕ್ಕು "hey a am gonna change your name to Kiddu " ಎಂದಿದ್ದ . ಅವಳು ಥಟ್ಟನೆ ವಿಷಯಪಲ್ಲಟ ಮಾಡಿ "Adam is like Brahma right ? " ಎಲ್ಲ ತನಗೆ ಗೊತ್ತು ಎಂಬಂತೆ ಕೇಳಿದ್ದಳು.!  "Not exactly, he is like Manu." ಎಂದಿದ್ದ ಅವ !.  ಕ್ರೈಸ್ತ ಹುಡುಗನಾದರೂ. ಅದೇಕೆ ಕೊರಳಲ್ಲಿ ಮಣಿ ಸರವಿಲ್ಲ. ? .ಕೈ ಮೇಲೆ cross ಚಿಹ್ನೆಯಿಲ್ಲ ಎಂದು ಮಗುವಿನ ಮುಗ್ಧತೆಯಲ್ಲಿ ಕೇಳಿದ ಅವಳಿಗೆ, " ಅದನ್ನು ಧರಿಸಬೇಕಾದರೆ ಮನಸ್ಸು ಪರಿಶುದ್ಧವಾಗಿರಬೇಕು ಹುಡುಗೀ, ನಾನೇನು ಅಷ್ಟು ಶುದ್ಧನೆಂದು ನನಗೆ ಅನಿಸುವುದಿಲ್ಲ, ಜೊತೆಗೆ ನಾನು ಕ್ರೈಸ್ತನೆಂದು ಜಗತ್ತಿಗೇನು ಹೇಳಬೇಕಾಗಿಲ್ಲವಲ್ಲೆ " ಎಂದಿದ್ದ. ಎಲ್ಲ ಧರ್ಮಗಳ ಕುರಿತು ಆಳ ಜ್ಞಾನವ  ಕಂಡು ಸಣ್ಣಗೆ ಬೆಚ್ಚಿ ಬಿದ್ದಿದ್ದಳವಳು.!

ಮ್ಮೆ ಜಾತ್ರೆಯಲಿ ಸಿಗುವ  ಎರಡು ತಂತಿಯ ಮರದ ವಾದ್ಯವೊಂದನು ತಂದು ತನಗೆ ಕಲಿಸೆಂದು ಹಠ ಹಿಡಿದುಕೂತಿದ್ದಳು  "ಇದೆಲ್ಲ ನುಡಿಸಲು ತನಗೆ ಬರುವುದಿಲ್ಲವೆಂದು ಹೇಳಿದರೂ ಕೇಳುತ್ತಿರಲಿಲ್ಲ.  "You are a Kid ..and you have proved it  " ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ.ಬಂದ ಕೋಪಕ್ಕೆ ಬೆನ್ನ ಮೇಲೆ ಗುದ್ದಿದ್ದಳು. ಹಠ ಹಿಡಿದು ಒತ್ತಾಯಿಸಿ ಮತ್ತೆ ಗಿಟಾರ್  ಹಿಡಿಸಿದವಳೂ ಅದೇ ಹುಡುಗಿಯೇ . ಅಮ್ಮ ಹೋದಮೇಲಿಂದ ಹುಡುಗ  ಗಿಟಾರ್ ಹಿಡಿದಿರಲಿಲ್ಲ. ಅವನ ಅಂತರ್ಮುಖ ಭಾವನೆಗಳೆಲ್ಲ ತಂತಿಯ ಮೇಲೆ ದನಿಯಾಗುತ್ತಿತ್ತು. ಸಮುದ್ರದ  ದಡದಲ್ಲಿ ಅವನ  ಹಾಡಿಗೆ ಅವಳೊಬ್ಬಳೇ ಪ್ರೇಕ್ಷಕಳು.! ಸಮುದ್ರದ ಅಲೆಗಳ ಭೋರ್ಗರೆತವೇ drum, rhythm pad ಎಲ್ಲ !  ಇಂಥ ಅದೆಷ್ಟೋ ಸಂಜೆಯ ನೆನಪುಗಳು ಅವನ ಮನದ ಜೋಳಿಗೆಯಲ್ಲಿ  ಇದ್ದವು .!

 ಒಮ್ಮೆ ಅದ್ಯಾವುದೋ ಹಬ್ಬವನ್ನು ಮುಗಿಸಿಕೊಂಡು ಬರುತ್ತಿದ್ದ ಗೆಳೆಯರ ಗುಂಪುಗಳಲ್ಲಿ ಅವರಿಬ್ಬರೂ ಇದ್ದರು. ಅವಳ ಬಳಿ ಇದ್ದದ್ದು ಬಣ್ಣಬಣ್ಣದ ಬೆಳಕು ಚೆಲ್ಲುವ ಆಟಿಕೆ. ಅದನ್ನು ಕಸಿದುಕೊಂಡು, ಗುಂಪಿನಿಂದ ಬೇರೆಯಾಗಿ ಹೊರಟುಬಿಟ್ಟ ಹುಡುಗ.!ಅವಳು ಅದೆಷ್ಟು ಗೋಗರೆದರೂ ತಿರುಗಿ ನೋಡಲೂ ಇಲ್ಲ. ರೂಮಿಗೆ ಬಂದು ಜೀವದ ಗೆಳತಿಯ ಬಳಿ ಅವಳು ನಡೆದುದ್ದೆಲ್ಲವ ಅರುಹಿದಾಗ ಗೆಳತಿಯೆಂದದ್ದು "ಅವ ನಿನ್ನ ಪ್ರೀತಿಸುತ್ತಿದ್ದಾನೆ ಹುಚ್ಚಿ.. " ಹುಡುಗಿ ವಿರೋಧಿಸಿದ್ದಳು. ತಕ್ಷಣವೇ cell phone ಕೈಗೆತ್ತಿಕೊಂಡು  "ನೀನೆಂದರೆ ಒಬ್ಬ ಒಳ್ಳೆಯ ಗೆಳೆಯ.. ಜೊತೆಗೆ ನನ್ನ ತಮ್ಮನಂತೆ. ನಿನ್ನ ಮೇಲೆ ವಾತ್ಸಲ್ಯ ಹೆಚ್ಚಾದದ್ದು ನಿನಗೆ ಅಮ್ಮನಿಲ್ಲ ಎಂದು " ಮೆಸೇಜ್ ಮಾಡಿಯೂ ಬಿಟ್ಟಳು.!
ಹುಡುಗನ ಮನದಲ್ಲಿ ತಳಮಳ. ಅವಳ್ಯಾರು ತನಗೆ ? ಎಂದು ಭೂತವನ್ನೆಲ್ಲ ತಡಕಾಡಿದಾಗ ಸಿಕ್ಕ ಉತ್ತರ "ಪ್ರೀತಿ ". ಮನದಲ್ಲಿ ಅವಳ ಅಕ್ಷರಶಃ ಆರಾಧಿಸುತ್ತಿದ್ದ. ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡವ. ಇಂಚಿಂಚಾಗಿ ಪ್ರೀತಿಯ ಸುಳಿಗೆ ಸಿಲುಕಿದ್ದ ಸಣ್ಣ ಸುಳಿವೂ ಇಲ್ಲದೆ..! 

ಮರುದಿನ ಭಾನುವಾರ ಬೆಳಿಗ್ಗೆ ಆರರ ಹೊತ್ತಿಗೆ ಬಾಗಿಲು  ಬಡಿದ ಶಬ್ದಕ್ಕೆ ಎಚ್ಚರವಾಗಿ ಹುಡುಗಿ ಬಾಗಿಲು ತೆರೆದರೆ ಬಣ್ಣದ  ಆಟಿಕೆಯೊಂದಿಗೆ ಹುಡುಗ ನಿಂತಿದ್ದ. ಆಟಿಕೆಯ  ಜೊತೆಗೊಂದು ಮಡಿಸಿದ  ಹಾಳೆಯ  ನೀಡಿ ಹೊರಟು  ಹೋಗಿದ್ದ. ನಿದ್ದೆಗಣ್ಣಿನಲ್ಲಿ ಹಾಳೆಯ ಬಿಡಿಸಿದರೆ ಅದರಲ್ಲಿ ಇದ್ದದ್ದಿಷ್ಟು:

My little princess,

ಅದೀಗ ತಾನೇ ಎದ್ದ ನಿನ್ನ ಮೊಗವನ್ನೊಮ್ಮೆ ನೋಡಬೇಕು ಎಂದುಕೊಂಡಿದ್ದೆ ಅದೆಷ್ಟೋ ದಿನಗಳಿಂದ. ಇವತ್ತು ಈ ಆಟಿಕೆಯ ಹಿಂತಿರುಗಿಸುವ ನೆಪವೂ ಸಿಕ್ಕಿಬಿಟ್ಟಿತು ನೋಡು .ಬೆಳಿಗ್ಗೆ ಎದ್ದು ಬಂದುಬಿಟ್ಟೆ.  ಜೀವನದಲ್ಲಿ ಅದ್ಯಾರನ್ನೂ ತಾನು ಪ್ರೀತಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದೆ ಹುಡುಗೀ ಈಗ ನೋಡು ನಿನ್ನ ಪ್ರೀತಿಯ ಸುಳಿಯಲ್ಲಿ ಸುಳಿವಿಲ್ಲದೆ ಸಿಕ್ಕಿಬಿದ್ದಿದ್ದೇನೆ. ಮೊದಲ ಬಾರಿಗೆ ನನ್ನ ಅಮ್ಮನ ಬಿಟ್ಟು ಇನ್ನೊಬ್ಬರನ್ನು ಹಚ್ಚಿಕೊಂಡಿದ್ದೇನೆ. ಅಮ್ಮ ಮಗುವನ್ನು ಪ್ರೀತಿಸಿದಂತೆ ನಿನ್ನ ಪ್ರೀತಿಸುತ್ತೇನೆ ಎಂದು ಸುಳ್ಳು ಹೇಳಲಾರೆ. ಆದರೂ ನೀನೊಂದು ಮಗುವೆ. ನಿನ್ನನ್ನು ಪ್ರೀತಿಸುತ್ತೇನೆ.. ಆರಾಧಿಸುತ್ತೇನೆ. ನೀ ತೋರುವ  ಕಾಳಜಿಗೆ, ಹುಷಾರಿಲ್ಲದೆ ಇದ್ದಾಗ ತಂದುಕೊಟ್ಟ ಕಷಾಯಕ್ಕೆ,ದೂರದ ಊರಿನಲ್ಲಿ ಅನಾಥ ಎಂಬ ಭಾವ ಕಾಡಿದಾಗ ನೀ ತೋರಿದ ವಾತ್ಸಲ್ಯಕ್ಕೆ,  ಕಬ್ಬಿಣದ ಕಡಲೆಯಂಥ ವಿಷಯಗಳ ನೀ ಮನದಟ್ಟು ಮಾಡಿಸುವ ಬಗೆಗೆ ಶರಣಾಗಿದ್ದೇನೆ. ಒಮ್ಮೊಮ್ಮೆ ನೀನು ಸಾಕ್ರಟಿಸ್ ನ ಮೀರಿಸುವ ತತ್ವಜ್ಞಾನಿ ಮತ್ತೊಮ್ಮೆ ಐದರ ಹರೆಯದ ನನ್ನ ಅಕ್ಕನ ಮಗಳು 'ರಿನಿ'ಯಂಥ ಮಗು.!  ಭೂಮಿ ಬಾನಿನ ವ್ಯತ್ಸಾಸ ನಿನ್ನೊಬ್ಬಳಲ್ಲೇ ..!  ಅಮ್ಮ ಭೌತಿಕವಾಗಿ ನನ್ನ ಜೊತೆ ಇಲ್ಲ ಅಷ್ಟೇ. ನನ್ನ ಮನದಲ್ಲಿ, ನೆನಪುಗಳಲ್ಲಿ ಇನ್ನೂ ಅವಳಿದ್ದಾಳೆ. ನೀನು ನನ್ನ ಬಾಳಿಗೆ  ಜೊತೆಯಾಗುತ್ತೀಯಾ   ಎಂದೆಣಿಸಿ ನಿನ್ನ ಪ್ರೀತಿಸಿದೆ ಎಂದುಕೊಂಡೆಯ ? ಅದು ಈ ಜನುಮದಲ್ಲಿ ಸಾಧ್ಯವಿಲ್ಲ. ನಿನಗೆ ನನ್ನೆಡೆಗೆ ಒಂದು ಸೋದರ ಭಾವವ ಬಿಟ್ಟರೆ ಬೇರೇನೂ ಇಲ್ಲ ಎಂದೂ ಗೊತ್ತಿದೆ. ನಿನ್ನ ನಿಷ್ಕಲ್ಮಶ ಸ್ನೇಹಕ್ಕೆ ದ್ರೋಹವೆಸಗಲಾ ? ಅಥವಾ ನನ್ನ ಆತ್ಮವ ವಂಚಿಸಲಾ.? ಒದ್ದಾಡಿದ್ದೇನೆ ಅಕ್ಷರಶಃ ಅತ್ತ ಬಾನಲ್ಲೂ ಇರದೇ..  ಭೂಮಿಗೆ ಬೀಳಲೂ ಆಗದೆ ಉರಿಯುವ ಉಲ್ಕೆಯಂತೆ. ನೀನು ಅದ್ಯಾವ ಹುಡುಗನ ಬಾಳಿನಲ್ಲಿ ಹೋಗುತ್ತೀಯೋ ಗೊತ್ತಿಲ್ಲ. ಆದರೆ ಆ ಹುಡುಗ ಮಾತ್ರ ಪುಣ್ಯವಂತ ಎಂದು ಮಾತ್ರ ಹೇಳಬಲ್ಲೆ. ! ಆದರೆ ನಾನು ಪ್ರೀತಿಸಿದಂತೆ ಇನ್ಯಾರೂ ನಿನ್ನ ಪ್ರೀತಿಸಲು ಸಾಧ್ಯವಿಲ್ಲವೇ ಹುಡುಗೀ ... ನನ್ನ ಫೋನಿನ್ನಲ್ಲಿ ನಿನ್ನ ಹೆಸರು Dragon - kiddu- lil princess ಎಂದು ಬದಲಾವಣೆ ಆಗುತ್ತಲೇ ಇದೆ ಥೇಟ್ ನಿನ್ನ ಮನಸಿನಂತೆ.! ನೀನಿಲ್ಲದೆ ಬದುಕಲಾರೆ ಎಂದೆಲ್ಲ ಸುಳ್ಳು ಹೇಳಲಾರೆ. ಆದರೆ ನಿನ್ನ ನೆನಪು ಚಿರನೂತನ, ನಿರಂತರ...ನಿನ್ನ ಮಾತು, ನಗು, ಪ್ರಶ್ನೆಗಳ ನೆನಪುಗಳನ್ನು ಈ ಜನುಮಕೆ ಸಾಕಾಗುವಷ್ಟು ತುಂಬಿಕೊಂಡಿದ್ದೇನೆ..... ಅಮ್ಮ ಈ ಜಗವ ಬಿಟ್ಟು ಹೋದಾಗಲೂ ಕಣ್ಣಲ್ಲಿ ನೀರು ಹನಿಸಿರಲಿಲ್ಲ..  ಅದ್ಯಾಕೋ ಇಂದು ಜಗವೆಲ್ಲ ಮುಂಜು ಮಂಜು... "

ಜೊತೆಗಿದ್ದ ಜೀವದ ಗೆಳತಿ ಬೇಡ ಹುಡುಗೀ ಅವನ ಭಾವನೆಗಳ ಜೊತೆಗಿನ ಆಟ ಬೇಡ. ನಿನ್ನ ಪಾಡಿಗೆ  ನೀನಿದ್ದುಬಿಡು  ಎಂದಿದ್ದಳು. ಅಂದಿನಿಂದ ಹುಡುಗಿ ವನ ಜೊತೆಗಿನ ಒಡನಾಟವನ್ನು  ಕಡಿಮೆ ಮಾಡಿದ್ದಳು. 
ಶನಿವಾರದ ಆಂಜನೇಯ ದೇವಸ್ಥಾನದ ಓಡಾಟವನ್ನೂ ನಿಲ್ಲಿಸಿಬಿಟ್ಟಿದ್ದಳು. ಹುಡುಗನೊಬ್ಬನೇ ದೇವಳಕ್ಕೆ ಹೋಗಿ ಬಂದು ಆ ಬೀದಿಯಲ್ಲೇ ಕಾದು ನಿಂತಿರುತ್ತಿದ್ದ ಅದೆಷ್ಟೋ ಶನಿವಾರದ  ಸಂಜೆಗಳಲ್ಲಿ..! 

 ಓದು ಮುಗಿದ ತಕ್ಷಣ ಕೆಲಸ ಹುಡುಕಿ ದೂರದ ಊರೊಂದ ಸೇರಿ ಬಿಟ್ಟಿದ್ದಳು  ಹುಡುಗಿ. ಮಾತೊಂದನ್ನೂ ಹೇಳದೆ...! ದಿನವೂ ಬರುತ್ತಿದ್ದ, ಅವನ  ಮೆಸೇಜುಗಳನ್ನು ಸದ್ದಿಲ್ಲದೇ ಅಳಿಸಿಬಿಡುತ್ತಿದ್ದಳು. ಅದೆಷ್ಟು ಭಾವುಕನಾಗಿ ಮೆಸೇಜು ಮಾಡಿದರೂ ಉತ್ತರ ಇರುತ್ತಿರಲಿಲ್ಲ. ತನ್ನ ಸೋದರ ಭಾವಕ್ಕೆ ಅವ ಮೋಸ ಮಾಡಿದ ಕೋಪ ಹುಡುಗಿಯಲ್ಲಿ..! ಒಮ್ಮೊಮ್ಮೆ ಅದ್ಯಾವ್ಯಾವುದೋ ನಂಬರಿನಿಂದ call ಮಾಡಿ ಮಾತನಾಡದೆ, ಅವಳ ಧ್ವನಿಯನ್ನಷ್ಟೇ ಆಲಿಸುತ್ತ ಕುಳಿತುಬಿಡುತ್ತಿದ್ದ ಹುಡುಗ .! unknown ನಂಬರಿನ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿಬಿಟ್ಟಿದ್ದಳು ಹುಡುಗಿ.

ವರ್ಷಗಳೆರಡು ಉರುಳಿ ಅವನೂ ಆ  ಊರ  ಬಿಟ್ಟು ತನ್ನೂರಿಗೆ ಹೊರಟಿದ್ದ  ಅವಳ  ನೆನಪಿನ  ಮೂಟೆಯೊಂದಿಗೆ. ಅಲ್ಲೇ ಕೆಲಸ  ಮಾಡಲೂ ಶುರು ಮಾಡಿದ್ದ . 

ಅಲ್ಲಿ ಪರಿಚಯವಾದ, ಸ್ನೇಹಿತೆಯಾದ  ಚಿಕ್ಕ ಕಂಗಳ ಚೋರಿ ಒಂದು ವರುಷದ ಬಳಿಕ "ಅವನ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುತ್ತೇನೆ ನಿನ್ನ " ಅಂದಾಗ ಹುಡುಗ ಗೊಂದಲಕ್ಕೆ ಬಿದ್ದಿದ್ದ.! ಸ್ವಲ್ಪ ಸಮಯ ಬೇಕು ನನಗೆ ಅಂದಿದ್ದ. "ಯಾಕೋ ಮತ್ತೆ ಹಳೆಯ ನೆನಪಾ ? "ಎಂದು ಅವಳು ಉಸುರಿದಾಗ ಅಲ್ಲಿ ನಿಲ್ಲಲಾಗದೆ. ಇಲ್ಲಿ ಬಂದುಬಿಟ್ಟಿದ್ದ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕಿ.. 
ಬೀದಿಯಲಿ ಹಳೆಯದೆಲ್ಲವೂ ನೆನಪಾಗಿತ್ತು.. 
ದಾರಿ ಮಸುಕಾಗಿ ಕಣ್ಣೊರೆಸುತ್ತ  ಒಮ್ಮೆ ತಲೆ ಎತ್ತಿ ಆಗಸವ ದಿಟ್ಟಿಸಿದ್ದ. ಪಡುವಣದಲ್ಲಿ ಬೆಳ್ಳಿ ಚುಕ್ಕಿಯೊಂದು ಕಂಡಿತ್ತವನಿಗೆ. ಅದರ ಕುರಿತೇ ಅದೆಷ್ಟು ಮಾತನಾಡುತ್ತಿದ್ದಳು ಆ ಹುಡುಗಿ. ಕಳೆದೇ ಹೋಗುತ್ತಿದ್ದಳು ಆಗಸದಲ್ಲಿ. ಅರೆರೆ ಅದರ ಜೊತೆ ಇನ್ನೊಂದು ಚುಕ್ಕಿಯೂ ಇದೆಯಲ್ಲ ಇಂದು. ಇನ್ಯಾವುದೋ ಗ್ರಹ ಇರಬೇಕೆಂದುಕೊಂಡ. ತಡೆಯಲಾಗಲಿಲ್ಲ ಅವನಿಗೆ. cell phone ತೆಗೆದು ಅದೇನೋ ಬರೆದು ಕಳುಹಿಸಿದ. ಚಿಕ್ಕ ಚಿಕ್ಕ ಕಂಗಳಲ್ಲಿಯ ನೀರಿನಲ್ಲಿ ಪಡುವಣದ ಚುಕ್ಕಿ ಬಿಂಬ ನೋಡಿಕೊಳ್ಳುತ್ತಿತ್ತು.

ಮದರಂಗಿಯ ಬಣ್ಣದಲ್ಲಿ ಕೈಯ ತುಂಬಿಸಿಕೊಂಡ ಹುಡುಗಿ. ಮೊಬೈಲ್ ಫೋನ್ ಬೀಪ್ ಕೇಳಿ ಕೈಗೆತ್ತಿಕೊಂಡಳು. ಮತ್ತದೇ ನಂಬರಿನಿಂದ  ಮೆಸೇಜ್ "Missing you my little angel.. "  ಉತ್ತರಿಸಿದಳು ಹೀಗೆ.. "ನಾಳೆ ಬೆಳಗಾದರೆ ನನ್ನ ಮದುವೆ ಪೋರ, ನಿನ್ನ ಪ್ರೀತಿಯ ಬಗೆಗೊಂದು ಸಲಾಂ. ಎಲ್ಲೋ ನೀನಂದಿದ್ದು ನಿಜ್ಜ..ನಿನ್ನ ಬಗೆಯಲ್ಲಿ ಅದ್ಯಾರೂ ಪ್ರೀತಿಸಲಾರರು ನನ್ನ. ಸಾಧ್ಯವಾದರೆ ಕ್ಷಮಿಸಿಬಿಡು ಒಮ್ಮೆ. ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...i'll miss you forever .... " send option ಒತ್ತಿದಾಗ ಮೊಬೈಲ್ ಪರದೆ ಮಸುಕಾಗುತ್ತಿತ್ತು . ಅವಳ ಮುಂಗೈ ಮೇಲೊಂದು ಕಣ್ಣ ಹನಿಯು ಜಾರಿ ಬಿತ್ತು ಸದ್ದಿಲ್ಲದೇ...

24 comments:

 1. nicely narrated soumya... touchy.

  ReplyDelete
 2. Dina kaledanthe adbhuthavaada ondu olleya awesome posting... Miss U anno padakke arthava kandanthaythu... kanna mundhe haleya nenapu haadu hoythu... nimma ee lines manava kalaakithu "ಅವನ ಅಂತರ್ಮುಖ ಭಾವನೆಗಳೆಲ್ಲ ತಂತಿಯ ಮೇಲೆ ದನಿಯಾಗುತ್ತಿತ್ತು." SUPPPPPPPPPPPPPPPPPPEEEEEEEEEEEEEEEEEEEEERRRRRRRRRRRRRRRRRRRRRRBBBBBBBBBBBBBBBBBBBBBBBBBBB.....

  ReplyDelete
 3. ತುಂಬಾ ಚೆನ್ನಾಗಿದೆ.. ಮೈ ಮರೆತು ಓದುವ ಹಾಗಿದೆ..:)
  ಧನ್ಯವಾದ ಇಂಥಹ ಬರವಣಿಗೆಗೆ..

  ReplyDelete
 4. ತುಂಬಾ ಧನ್ಯವಾದಗಳು ಕಾಂತೇಶ್ :)

  ReplyDelete
 5. wonderful narration as usual ... there is a kind of midas touch in ur writing ..

  ReplyDelete
 6. ಹಾಯ್ ಸೌ......

  ತುಂಬಾ ದಿನಗಳ ಬಳಿಕ ನಿನ್ನ ಬರಹ ಓದುತ್ತಿದ್ದೇನೆ....

  ತುಂಬಾ ಕುತೂಹಲದಿಂದ.... ತುಂಬು ಮನಸ್ಸಿನಿಂದ...

  ಅವೆಲ್ಲವುಗಳಕ್ಕಿಂತ ಹೆಚ್ಚು ಭಾವುಕತೆಯಿಂದ....

  ನಾನಾಗಿ ತಂದುಕೊಂಡಿದ್ದಲ್ಲ,,,,
  ಅದಾಗಿಯೇ ಬಂದದ್ದು....

  ಎಷ್ಟೋ ಸಂಬಂಧಗಳು ಏರ್ಪಡೋದೇ ಹೀಗೆ.....
  ಕಳಚಿಕೊಳ್ಳೋದೂ ಸಹ....

  ತದ್ವಿರುದ್ಧವಾಗಿ .......
  ಹೇಳಿದರೆಲ್ಲಿ ಸಂಬಂಧ ಕಳಚಿಬೀಳುತ್ತೋ ಅನ್ನೋ ಭಯ..... -ಅವನಲ್ಲಿ.....
  ಒಂದು ಬಾರಿ ಹೇಳಿಬಿಡೋ ಹುಡುಗಾ........ - ಅವಳಲ್ಲಿ.....

  ಇಲ್ಲೂ ಮತ್ತದೇ ತ್ರಿಶಂಕು ಅಲೆದಾಟ...........
  ಅಂಥವೆಷ್ಟು ಬೇರ್ಪಡದೇ.... ಏರ್ಪಡದೇ ಇರುವ ಸಂಬಂಧದ ಎಳೆಗಳೋ....

  ಚನ್ನಾಗಿದೆ ಬರಹ... ತುಂಬಾ ಇಷ್ಟ ಆತು......

  ReplyDelete
 7. ಪ್ರೀತಿಗೆ ಭಾಷ್ಯ ಬರೆವ ಪ್ರಯತ್ನ...ಹೆಣ್ಣು-ಗಂಡಿನ ನಡುವಣ ಸಂಬಂಧವನ್ನು ಪ್ರೀತಿಯಲ್ಲಿ ಬಂಧಿಸುವ ಪ್ರಯತ್ನ ...
  ಸೊಗಸಾಗಿ ಓದಿಸಿಕೊಂಡು ಹೋಗುವ ಸರಳ-ಸುಂದರ ಶೈಲಿ...ಅಲ್ಲಲ್ಲಿ ತುಸು ಕಲಸಿಹೋದಂತಿದೆ... ಎಂದಾದರೂ, ಯಾವದಕ್ಕಾದರೂ, ಮತ್ತೊಮ್ಮೆ ತಿದ್ದಿ ಬರೆದಾಗ ಮನನೀಯ ಕತೆಯಾಗುತ್ತದೆ.

  ReplyDelete
 8. ತುಂಬಾನೇ ಚೆನ್ನಾಗಿದ್ದು..

  ReplyDelete
 9. its too good.. very impressive!!
  pls do continue n come back soon with new post..
  waiting.. !! :)

  ReplyDelete
 10. ಸೌಮ್ಯ: ಗಂಡು ಹೆಣ್ಣಿನ ಸಂಭಂದಗಳು, ಅವರ ನಡುವಿನ ಪ್ರೀತಿ...ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ. ಇಷ್ಟವಾಯ್ತು.

  ReplyDelete
 11. yes. thumba chennagide. but bhasheyalli swalpa tadakadiddira ansatte. adu katha shrustiya sanniveshagalalli smanya ansatte. bt nim profile nodi alliruva padagalige ondu coment kodbekansitu. kanasu kanodu nijavagade hodare adu kuda nenapina battalikeyolage iratte. bt kanasu nanasadante hosa hosa kanasu a jagavanna tumbatte. hosa neeru haridaage...

  ReplyDelete
 12. ಸೂಪರಾಗಿದೆ ಕಣ್ರಿ. ಓಂದು ಪ್ರೀತೀನ , ಅದರ ಕಥೆ, ವ್ಯಥೇನ ಸುಧೀರ್ಘವಾಗಿ ಬರೆದೂ ಕೊನೆವರೆಗೂ ಎಲ್ಲೂ ಕುತೂಹಲ ಮಾಸಿಲ್ಲ. ಕೊನೆವರೆಗೂ ಓದಿಸಿಕೊಂಡ ನಿಮ್ಮ ಶೈಲಿಗೆ, ಕಥೆಗೆ ಒಂದು ಸಲಾಂ. ಕಥೆಯ ದುರಂತ ನೋವು ತಂದರೂ, ಇಷ್ಟವಾಯಿತು

  ReplyDelete
 13. ನಾಜೂಕಾದ ಭಾವನೆಗಳನ್ನ ಅಕ್ಷರಕ್ಕಿಳಿಸಿ ನವಿರಾಗಿ ಹೆಣದಿದ್ದೀರಿ... ತುಂಬಾ ಚೆನ್ನಾಗಿದೆ.. :)

  ReplyDelete
 14. Thumba chennagidhe sowmya... istavayethu, modalinindha konevaregu bavukatheindha kutuhalabarithavagitu... mathe mathe odhabekenisuthe... Thanks for wrighting and posting this one :)

  ReplyDelete
 15. ಲಯಕ ಮಾಡಿ ಬರ್ದಿದೆ ಹೆಣ..hinge bari

  ReplyDelete
 16. ಮನಸಿನ ಭಾವನೆ !ಸುಂದರ ಪದಗಳ ಜೋಡಣೆ !ಸುಂದರವಾಗಿದೆ ಗೆಳತಿ !ಪ್ರೀತಿ ಅಮರ ! ತ್ಯಾಗ ?

  ReplyDelete
 17. bahala chennagide.. gandu hennina sambandada begigina bhavanegalannu chennagi vyaktapadisiruve.. good narration.:) i liked it a lott..!:)

  ReplyDelete
 18. wonderfull narration.... tumba chennagide... it gt a tear in my eye.. :):).. very impressive..:)

  ReplyDelete
 19. ultimate lines u wrote.................so beatiful lines,tumba tumba tumba tumba ista agive ivella lines........................

  ReplyDelete