Monday, October 4, 2010

ಪ್ರೀತಿಸಿಕೊಂಡವರು ಸಿಗಬೇಕೆಂದೆನಿಲ್ಲ...



ಮೊನ್ನೆ ಗೆಳೆಯರೆಲ್ಲ ಒಟ್ಟಿಗೆ ಸೇರಿದ್ದವು. ಬರೀ ಹುಡುಗಿಯರೇ ಇದ್ದಿದ್ದರೆ dress,earing,shopping,bollywood gossip ಇವಿಷ್ಟೇ ವಿಷಯವಾಗಿರುತ್ತಿತ್ತೇನೋ, ಒಂದಿಷ್ಟು ಹುಡುಗರೂ ಇದ್ದರಲ್ಲ..ಅಯೋಧ್ಯೆ,ಪಂಚರಂಗಿ, ಎಲ್ಲಾಮುಗಿದಮೇಲೆ ವಿಷಯ ಹೊರಳಿದ್ದು ಪ್ರೀತಿಯ ಕಡೆಗೆ. ನನ್ನ ಆತ್ಮೀಯ ಗೆಳೆಯರೆಲ್ಲಒಂಥರಾ ಭಗ್ನಪ್ರೇಮಿಗಳೇ.!ಹುಡುಗಿಯ ನೆನಪಿನ ನೆಪದಲ್ಲಿ ಬಾರಲ್ಲಿ ಕುಳಿತು ಗುಂಡು ಹಾಕಿದವರೇ ..! ಕೆಲವರು ಹಳೆ ಹುಡುಗಿಯ 'ಹ್ಯಾಂಗ್ಓವರ್'ನಲ್ಲಿ ಇನ್ನೂ ಇದ್ದರೆ, ಇನ್ನು ಕೆಲವರು ಹೊಸ ಹುಡುಗಿಯ ಶೋಧದಲ್ಲಿ ಇರುವವರು..!

ಹಾಗೆ ಪ್ರೀತಿಯ ಬಗ್ಗೆ ಮಾತನಾಡ್ತಾ ಇರೋವಾಗ, 'ಶಿವೂ ಹುಡುಗಿ ಮದ್ವೆ ಅಂತೆ ಮಾರಾಯ್ತೀ...' ಎಂದ ಮನೋಜ್. LICA lab ನಲ್ಲಿ 5V ಶಾಕ್ ಹೊಡೆದ ಅನುಭವ ನನಗೆ...! ಅವರಿಬ್ಬರಿದ್ದದ್ದೇ ಹಾಗೆ, made for each otherಎಂಬಂತೆ. ಇದ್ರೆ ಅವರಿಬ್ರ ಥರ ಇರಬೇಕು ಅನ್ನೋವಷ್ಟು. 'ಹುಡ್ಗ ಕೂಲಾಗಿದಾನೆ .. ಏನು ಬಾಯ್ಬಿಡ್ತಾ ಇಲ್ಲ' ,ಅಂದ್ಬಿಟ್ಟ ಮನು, ಮುಂದೆ ಪ್ರಶ್ನೆಗಳಿಗೆ ಅವಕಾಶ ಕೊಡದೆ...


ಯಾಕೋ ಮಾತನಾಡಬೇಕು 'ಶಿವು' ಹತ್ರ ಅನಿಸಿಬಿಡ್ತು.ಮನೆಗೆ ಬಂದ ತಕ್ಷಣ ಫೋನ್ ಮಾಡಿದೆ."ನಿನ್ನ ಹತ್ರ ಅವತ್ತೇ ಮಾತಾಡಬೇಕು ಅನ್ಸಿತ್ತು sou. ಹುಡುಗಂಗೆ ಈಗನಾವೆಲ್ಲಾ ನೆನಪಾಗಿದೇವೆ ಅಂತ ಅಂದ್ಕೊಳ್ತೀರಾ ಎಂದು ಸುಮ್ನಿದ್ಬಿಟ್ಟೆ"ಅಂದ. "ಅದೆಲ್ಲ ಇರಲಿ ಬಿಡು ಏನಾಯ್ತುಅದನ್ನ ಹೇಳು" ಅಂದೆ. ಹುಡುಗ ಮಾತನಾಡ್ತಾ ಹೋದ..


"ಅವಳು ಬರೀ lover ಆಗಿದ್ದಿದ್ರೆ ಇಷ್ಟು ಹೊತ್ತಿಗೆ 'ಕೈ ಕೊಟ್ಟ ಹುಡುಗಿ' ಅಂತ ಹೇಳ್ಬಿಡ್ತಿದ್ನೇನೋ, she is one my best friends as you know. ನನ್ನ ಅವಳ ನಡುವೆ 'ಪ್ರೇಮ' ಅನ್ನೋದಕ್ಕಿಂತ 'ಪ್ರೀತಿ' ಜಾಸ್ತಿಇತ್ತು.ಜೊತೆಯಾಗಿಬಾಳುವ ಕನಸನ್ನು ಹೆಣೆದಿದ್ದೆವು ಬಿಡು ಅದು ಬೇರೆ ವಿಷಯ. ಮೊನ್ನೆ ಹುಡುಗಿ ಬಂದು ನನ್ನ ಕೈಹಿಡ್ಕೊಂಡು ನನ್ನಮದ್ವೆ ಕಣೋ ಅಂದಾಗ ಏನಂತ ಹೇಳಲಿ ಹೇಳು? she is a matured girl sou ಬದುಕನ್ನುನನಗಿಂತ ಇನ್ನೂಚೆನ್ನಾಗಿ ಅರ್ಥ ಮಾಡಿಕೊಂಡ ಹುಡುಗಿ . ನಾನು ದಾರಿತಪ್ಪಿದಾಗ್ಲೆಲ್ಲ ತಿದ್ದಿದಾಳೆ, ಕ್ಷಣ ಕ್ಷಣಕ್ಕೂಬದಲಾಗುವ ನನ್ನಮನೋಸ್ತಿತಿಯ ಅರ್ಥ ಮಾಡ್ಕೊಂಡು ನನ್ನ ಹತಾಶೆಗೆಲ್ಲ ಆಶಾ ಕಿರಣ ಆಗಿದ್ದಂಥವಳು .ಬದುಕಿನ ಕಷ್ಟಕರತಿರುವುಗಳಲ್ಲಿ ಸಾಥ್ ಕೊಟ್ಟಿದಾಳೆ.ನಂದಿನ್ನು settle ಆಗಿರದ ಬದುಕು. ಇನ್ನೆರಡು ವರ್ಷಕಾಯ್ತೀಯಾ? ಅಂತ ಹೇಗೆಕೇಳಲಿ? ಹೇಳು ... ಅದೆಲ್ಲ ಸರಿ ಕಣೆ ಪ್ರೀತಿ ಮಾಡಿದವರೆಲ್ಲ ಮದ್ವೆ ಆಗ್ಲೇ ಬೇಕು ಅಂತಇದ್ಯಾ? ಕನಸೆಲ್ಲನನಸಾಗಲೇ ಬೇಕಾ? 'ಕೈಗೆಟುಕದ ದ್ರಾಕ್ಷಿ ಹುಳಿ' ಅಂತ ಹೇಳ್ತಿಲ್ಲ..ಮೊದಲಿಂದಾನೂಅನ್ಕೊಂಡಿದ್ದೆ, ಆವಾಗವಾಗನಿನ್ ಹತ್ರಾನೂ ಹೇಳ್ತಿನಲ್ವಾ? ಬೇಜಾನ್ ಪ್ರೀತಿ ಮಾಡಿದವರನ್ನು ಮದ್ವೆ ಆಗ್ಬಾರ್ದೆಅಂತ. ಅವರು ಜೀವನದುದ್ದಕ್ಕೂಸಿಹಿ ನೆನಪಾಗಿ ಕಾಡ್ತಾನೆ ಇರ್ಬೇಕು ಅಂತ. ಅವಳು life ನಲ್ಲಿ ಬಂದಮೇಲೆಮರ್ತೆ ಹೋಗಿತ್ತು ಎಲ್ಲ..ಈಗ life ಮತ್ತೆನೆನಪುಮಾಡಿ ಕೊಟ್ಟಿದೆ ನನ್ನ ಹೇಳಿಕೆನ" ಅಂದ.. ! ಅದೇನೂ ಹೇಳಬೇಕುಅನಿಸಲೇ ಇಲ್ಲ. ಮೌನವಿದ್ದುಸಮ್ಮತಿಸಿದೆನೋ, ಅಥವಾ ಆ ಕ್ಷಣಕ್ಕೆ ಅದೇ ಸರಿಯಾಗಿ ಕಂಡಿತೋ ತಿಳಿಯಲಿಲ್ಲ.ಫೋನಿಟ್ಟ ನನ್ನಲ್ಲಿ ವಿಚಾರಗಳಸರಣಿ.


ಹೌದು ಸ್ನೇಹಿತರೇ ಬದುಕಿನ ವಿವಿಧ ಮಜಲುಗಳಲ್ಲಿ, ವಿವಿಧ ರೂಪಗಳಲ್ಲಿ ಹರಡಿಕೊಂಡಿರುವ 'ಪ್ರೀತಿ' ದೇವರುtimeತಗೊಂಡು ಸೃಷ್ಟಿಸಿದ ಒಂದು masterpiece.ಎಲ್ಲದ್ದಕ್ಕೂ ಒಂದೊಂದು ದೇವರಿರುವ ಗ್ರೀಕರಿಗೆ, 'aphrodite'ಪ್ರೀತಿಗೆ ಅಧಿದೇವತೆ.ಪ್ರೀತಿಗೆ ಅದೇನು ಬೇಕಾದರೂ ಮಾಡಿಸುವ ಶಕ್ತಿ ಇದೆಯಂತೆ (ದೊಡ್ಡೋರುಹೇಳ್ತಾರೆ).ಅಂದರೆ ಪ್ರೀತಿ ಒಂದು ಶಕ್ತಿ.ಸರಿನಾ? ಅಂದರೆ the law of conservation of energy (ಶಕ್ತಿಯಪರಿವರ್ತನೆಯನಿಯಮ)ಇದಕ್ಕೂ ಅನ್ವಯವಾಗಲೇ ಬೇಕು. ನಿಯಮ ಹೇಳುವುದೇನೆಂದರೆ, Energy can neither be created nor destroyed: it can only be transformed from one state to another. (ಶಕ್ತಿಯನ್ನುಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ: ರೂಪವನ್ನು ಬದಲಾಯಿಸಬಹುದಷ್ಟೇ.)


ಶುದ್ಧ ನಿಷ್ಕಲ್ಮಶಪ್ರೀತಿ, ಅದೊಂದು ಅನುಭೂತಿ. ಅನುಭವಿಸಿದವ ಪ್ರೀತಿಯನ್ನು ದೇವರೆಂದ.ಸಿಗದೇ ಇದ್ದವಪ್ರೀತಿ ನರಕವೆಂದ.ನಿಜಕ್ಕೂ ಪ್ರೀತಿಯೆಂದರೆ ಏನು ?ಇದೊಂದು ಉತ್ತರವಿದ್ದೂ ಹೇಳಲಾಗದ ವರ್ಣಿಸಲಾಗದ ಸ್ಥಿತಿ. ಅಥವಾಹಲವಾರುಉತ್ತರಗಳಿದ್ದು ಕೊನೆಗೆ ಶೂನ್ಯವೆನಿಸುವ ಭಾವವೇ ? ಅವರವರ ಭಾವಕ್ಕೆ ತಕ್ಕಂತೆ ಪ್ರೀತಿಯ definition ಬದಲಾಗುತ್ತಲೇ ಹೋಗುತ್ತದೆ.ನವಜಾತ ಮಗುವಿಗೆ ಪ್ರೀತಿಯೆಂದರೆ ಅಮ್ಮ ಅಷ್ಟೇ.! ಅದೇ ಮಗು ಬೆಳೆದಂತೆಲ್ಲಪ್ರೀತಿಯ ವ್ಯಾಖ್ಯಾನ ವಿಸ್ತಾರ ಪಡೆದುಕೊಳ್ಳುತ್ತಾ ಹೋಗುತ್ತದೆ.


ಅದೆಲ್ಲ ಇರಲಿ ಬಿಡಿ ಈಗ ನನ್ನ ಸ್ನೇಹಿತ ನನ್ನಲ್ಲಿ ಕೇಳಿ, ನನ್ನನ್ನು ಮೌನದ ಓಣಿಯಲ್ಲಿ ಬಿಟ್ಟ ಪ್ರಶ್ನೆಗೆ ನನ್ನದೇಆದರೀತಿಯಲ್ಲಿ ಉತ್ತರಿಸುತ್ತಿದ್ದೇನೆ. ಇದೇನು ಅನುಭವ ವಾಣಿಯಲ್ಲ. ನಾನೇನು ಅಷ್ಟು ಪ್ರೌಢಳೂ ಅಲ್ಲ. ಆದರೆಒಬ್ಬರಮನೋಸ್ಥಿತಿಯನ್ನು ಅರ್ಥೈಸಿಕೊಳ್ಳುವ,ಗೌರವಿಸುವ ಶಕ್ತಿಯು ನನ್ನಲ್ಲಿ ಇದೆ ಎಂದಷ್ಟೇ ಹೇಳಬಯಸುತ್ತೇನೆ.

ಪ್ರೀತಿ ಮನಸಿಗೆ ಸಂಬಂಧಿಸಿದ ವಿಷಯ.ಆ ಪ್ರೀತಿಯಲ್ಲಿ ಎಳಸುತನವಿರುತ್ತದೆ,ಮುಂದಿನದರ ಚಿಂತೆ ಮಾಡದೆ, ಈ ಕ್ಷಣಕ್ಕಾಗಿ ಬದುಕುತ್ತಾರೆ.ಆದರೆ ವಿಪರ್ಯಾಸವೆಂದರೆ ಆ ಪ್ರೀತಿ ಎಲ್ಲರಿಗೂ ಅದು ಸಿಗುವುದಿಲ್ಲ.ಸಿಕ್ಕಿದ್ದೇಆದರೆ ಅವನು/ ಅವಳು ಪುಣ್ಯವಂತರು.ಮನಸು ಪ್ರೌಢವಾದಂತೆಲ್ಲ ಚಿಂತೆ,ಚಿಂತನೆಗಳು ಹೆಚ್ಚಾಗಿ ಮುಗ್ಧತೆಯ ಚಿಪ್ಪಿನಿಂದ ಹೊರಬಂದುಜಗವನ್ನುನೋಡಿದಾಗ ಭವಿಷ್ಯದ ಯೋಚನೆಯು ಹೆಚ್ಚಾಗುತ್ತದೆ. ಮನದಲ್ಲಿ ಪ್ರೀತಿಯ ಜೊತೆಗೆ ಇನ್ನೊಂದಿಷ್ಟು ಭಾವಗಳು ಮೊಳೆತು, ಮನಸ್ಸನ್ನು ಕೊಚ್ಚೆಯನ್ನಾಗಿಸುತ್ತದೆ. ಅಲ್ಲಿಗೆ ಒಂದು ಮುಗ್ಧ ಪ್ರೀತಿ ಅನ್ಯಾಯವಾಗಿಸತ್ತಿರುತ್ತದೆ..!


ಒಂದು ಜೋಡಿ ( ಹುಡುಗ- ಹುಡುಗಿ)..! ಬೇಜಾನ ಪ್ರೀತಿಸಿರುತ್ತಾರೆ. ಅವರಿಬ್ಬರು ಅಲೆದಾಡದ ಜಾಗವಿಲ್ಲ,ನೋಡದಸಿನೆಮಾವಿಲ್ಲ, ತಿನ್ನದ ತಿಂಡಿಯಿಲ್ಲ ಮದುವೆಯೂ ನಡೆಯುತ್ತದೆ ಬಿಡಿ.(ಮೊನ್ನೆ ಗೆಳತಿಯೊಬ್ಬಳುಹೇಳುತ್ತಿದ್ದಳುಪ್ರೀತಿಸಿ ಮದುವೆಯಾದರೆ ಅಲ್ಲಿ ಆ ಪ್ರೀತಿಯ ಎಂಬುದರ ಕೊಲೆ ಆಗಿರುತ್ತದೆ ಎಂದು.) ಮೊದಲೆರಡು ವರ್ಷ ಸರಿ.ಅವರಷ್ಟು ಸುಖಿಷ್ಟರು ಯಾರೂ ಇಲ್ಲ ಎಂದರೂ ತಪ್ಪಲ್ಲ. ಪ್ರೀತಿಯ ದ್ಯೋತಕವಾಗಿ ಮಕ್ಕಳೂ ಆಗುತ್ತವೆ.ಮಕ್ಕಳಲಾಲನೆ-ಪೋಷಣೆ. ಅವರ ವಿದ್ಯಾಭ್ಯಾಸ. ಕೊನೆಗೆ ಅನ್ನಿಸಿಬಿಡಲೂಬಹುದು ಲೈಫು ಇಷ್ಟೇನಾ ? ಪ್ರೀತಿಎಂದರೆಇದಿಷ್ಟೇನಾ ?ಎಂದು ..


ಅದೇ ಒಂದು ಹುಡುಗ ಹುಡುಗಿ ಬೇಜಾನ ಪ್ರೀತಿ ಮಾಡಿಯೂ ಮದುವೆ ಆಗಲು ಸಾಧ್ಯವಾಗಲಿಲ್ಲ ಎಂದಿಟ್ಟುಕೊಳ್ಳೋಣ. ಸಿಗದ ಪ್ರೀತಿಯ ಬಗ್ಗೆ ಕನವರಿಕೆ ಜಾಸ್ತಿ ಅಲ್ಲವೇ? ಇರುವುದೆಲ್ಲವ ಬಿಟ್ಟುಸಿಗದಿರುವುದರಕಡೆಯೇ ತುಡಿತ ಹೆಚ್ಚು. (ಇದು ನಾವು normal human beings ಎನ್ನುವುದಕ್ಕೆ ಒಂದು ಪುಟ್ಟconfirmatory test ..! ಹ್ಹ ಹ್ಹ ಹ್ಹಾ ).ಹುಡುಗಿ/ಹುಡುಗ ಸಿಗಲಿಲ್ಲ ಎನ್ನುವುದೊಂದು ಕೊರಗು ಮನದ ಮೂಲೆಯೊಂದರಲ್ಲಿ ಇದ್ದೆ ಇರುತ್ತದೆ ಬಿಡಿ.ಕನಸುಕನಸಾಗಿದ್ದು ಕನವರಿಕೆಯನ್ನು ಬಿಟ್ಟು ಹೋಗಿರುತ್ತದೆ. ಪ್ರೀತಿಯನ್ನು ಪ್ರೀತಿಯಾಗೆ ಇರಲು ಬಿಟ್ಟು ಬಿಡಿ.ಜೀವನದ ಪಯಣದಲ್ಲಿ ಆ ಹುಡುಗ/ಹುಡುಗಿಯ ಹೆಸರನ್ನುಕೇಳಿದಾಗ ಮುಖದಲ್ಲೊಂದು ಮುಗುಳುನಗೆ ತಂತಾನೆಹಾದು ಹೋಗುತ್ತದೆ.

ಮುಂದೊಂದು ದಿನ ಪಾರ್ಕಲ್ಲಿ ಹೋಗಿ ಹಿಂದೆ ಅವಳೊಡನೆ/ಅವನೊಡನೆ ಕುಳಿತ ಕಲ್ಲು ಬೆಂಚುಗಳನ್ನುಸವರಿಬರಬಹುದು, ಅವಳ ಜೊತೆ ice-cream ತಿಂದ ಅಂಗಡಿಗೆ ಹೋಗಿ ನಿಮ್ಮ ಮೊಮ್ಮಕ್ಕಳ ಜೊತೆ, ಅವರಅಜ್ಜಿ/ಅಜ್ಜ(ನಿಮ್ಮ ಹೆಂಡತಿ/ಗಂಡ ) ಜೊತೆ ಹೋಗಿ ತಿಂದು ಬರಬಹುದು..ಅದೇ ಅವಳದ್ದೇ ಪರಿಮಳ ಬಂದಂಥ ಅನುಭವ,ಭ್ರಮೆ...ಎಲ್ಲಿದ್ದಿರಬಹುದು? ಹೇಗಿದ್ದಿರಬಹುದು? ಒಂಥರದ ಕುತೂಹಲ ಥೇಟ್ ನಿಮ್ಮಮೊಮ್ಮಕ್ಕಳಲ್ಲಿರುವಂತೆ .. ..!ನಿಮ್ಮ ಈ ಹೊಸ ಪರಿಗೆ ನಿಮಗೆ ನಗು. ನಿಮ್ಮ ಜೊತೆಗಾರ್ತಿಗೂ ಏನಾಗಿದೆ ಇವರಿಗೆಎಂದು ಒಂದು ಬಗೆಯ possessivness ಮೂಡಿದರೂ ಅಚ್ಚರಿಯಿಲ್ಲ ..!


ನೋಡಿ ಸ್ನೇಹಿತರೆ ನಮ್ಮ ಬದುಕನ್ನು ನಾವು ಹೇಗೆ ಕಾಣುತ್ತೇವೋ ಹಾಗೆ ಇರುತ್ತದೆ ಅಲ್ಲವೇ ? ಅದು ಬಿಟ್ಟುಹುಡುಗಿಸಿಗಲಿಲ್ಲವೆಂದು ''ದೇವದಾಸ್' ಆಗಿ ಬಾರಲ್ಲಿ ಸೆಟ್ಲಾಗಿ ಬಿಟ್ರೆ ಹೇಗೆ ಹೇಳಿ ? ಬದುಕು ತುಂಬಾ ಸುಂದರವಾಗಿದೆ. ನೀವುಪ್ರೀತಿಸಿದ ಹುಡುಗಿ ಸಿಗದಿದ್ದರೆ ಏನಂತೆ ಮನೆಯನ್ನು ಮನವನ್ನು ತುಂಬಲು ಇನ್ನೊಬ್ಬಳುಬಂದೇಬರುತ್ತಾಳೆ.ಎಲ್ಲೋ ಒಂದು ಮೆಸೇಜ್ ಓದಿದ ನೆನಪು 'जब तुम किसी को खुदा से मांगो और वो तुम को ना मिले तो समाज जावो की तुमे खुदा से कोयी ओर मांग चूका है..!'


ಭವಿಷ್ಯದ ಎಲ್ಲೋ ಒಂದು ದಿನ ನಿಮ್ಮ ಪ್ರೀತಿಯನ್ನು ಭೇಟಿಯಾಗುತ್ತೀರಿ ಎಂದಿಟ್ಟುಕೊಳ್ಳೋಣ.ಕೂದಲೆಲ್ಲಬೆಳ್ಳಗಾಗಿದೆ ಆಕೆಯದು, ನಿಮ್ಮ ಗುರ್ತು ಹಿಡಿಯುತ್ತವೆ ಕನ್ನಡಕದೊಳಗಿನ ಆಕೆಯ ಕಂಗಳು. ಅವಳ ಕೃತಕ ಹಲ್ಲುಗಳಲ್ಲಿ ಮಿಂಚುತ್ತದೆ, ಖುಷಿಯ ನಗು. ಮಾತುಗಳೇ ಬರಿದಾದಂತೆ ನಗು. ಕಣ್ಣುಗಳಲ್ಲೇ ಭಾವನೆಗಳವಿನಿಮಯ.ಅಷ್ಟರಲ್ಲಿ ಬಂದ ಹದಿಹರೆಯದ ಹುಡುಗನನ್ನು ಪರಿಚಯಿಸುತ್ತಾಳೆ ನಿಮಗೆ, My grand son.......ಅರೆರೆನಿಮ್ಮದೇ ಹೆಸರು.... ಅಜ್ಜಿ ಮತ್ತೊಮ್ಮೆ ಕಣ್ಣು ಮಿಟುಕಿಸುತ್ತಾಳೆ, ಕಾರಲ್ಲೇರಿ ಟಾ ಟಾ ಹೇಳುತ್ತಾ. ಅಜ್ಜನ ಕಣ್ಣಲ್ಲಿಹೊಸಮಿಂಚು, ತುಟಿಯಲ್ಲೊಂದು ತುಂಟನಗು ಪ್ರೀತಿ ಸಾರ್ಥಕ್ಯವನು ಪಡೆಯುವುದು ಇಲ್ಲೇ ಅಲ್ಲವೇ ?

40 comments:

  1. ಸೌಮ್ಯ ಅವರೇ... ನಿಮ್ಮ ಲೇಖನ ಓದ್ತಿದ್ರೆ ನಾನೂ ಲೇಖನ ಬರೀಬೇಕು ಅನ್ಸತ್ತೆ...ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ... ಟಾಪಿಕ್ ಸು different ಆಗಿರುತ್ತೆ ..

    ReplyDelete
  2. ಸೌಮ್ಯ,
    ತುಂಬಾ ಪ್ರೌಡಿಮೆಯ ಬರಹ..... ನನ್ನ ಗೆಳೆಯನೊಬ್ಬ ತನ್ನ ಗೆಳತಿಗೆ ಹೇಳಿದ್ದಾನೆ..." ನಾನು ಹಣ್ಣು ಹಣ್ಣು ಮುದುಕನಾಗಿ ನಿನಗೆ ಸಿಕ್ಕರೂ ನಿನ್ನನ್ನು ಮದುವೆಯಾಗಲು ಪ್ರೊಪೊಸ್ ಮಾಡುತ್ತೇನೆ.." ಎಂದು.... ಹೀಗೆ ಪ್ರೀತಿ ಕಾಲಕ್ಕೆ ಮುಗಿಯುವುದಲ್ಲ.... ಅದನ್ನು ನಾವು ಹೇಗೆ ಕ್ಯಾರಿ ಮಾಡುತ್ತೇವೊ ಅದರ ಮೇಲೆ ಅದರ ಆಯುಷ್ಯ, ಭವಿಷ್ಯ ನಿಂತಿರುತ್ತದೆ ಎಂದು ನನ್ನ ಭಾವನೆ.....

    ReplyDelete
  3. edyako bore aytu guru
    nimma tira sahaja baravanigene lovely
    so keep that up

    ellondu gitu nodi ello keliddu

    preeti bele estendu
    keluveya huchha?
    jeevamanavidi dudidaru
    barisalare mobile
    currencya vechha

    ReplyDelete
  4. Thanks a lot pragati ..... :) nimma blog kooda nodiddene.... :)

    ReplyDelete
  5. ಪ್ರಭುದ್ಧ ಬರವಣಿಗೆ. ಚೆಂದದ ಲೇಖನ.

    ReplyDelete
  6. ಧನ್ಯವಾದಗಳು ದಿನಕರ್ ಸರ್... ಹೌದು ಪ್ರೀತಿಗೆ ಸಾವಿಲ್ಲ ಅಲ್ವಾ ?

    ReplyDelete
  7. thank u ragu.... ಹೌದು.... ನನ್ನ ಬರವಣಿಗೆ ಇರತ್ತೆ ... ಯಾಕೋ ನನ್ನ ಕೆಲವು ಗೆಳೆಯರಿಗೆ ಡೆಡಿಕೇಟ್ ಮಾಡ್ಬೇಕು ಅಂತ ತುಂಬಾ ದಿನದಿಂದ ಅನ್ಕೊಂಡಿದ್ದೆ.

    ReplyDelete
  8. ಈ ಪ್ರೀತಿ ಪ್ರೇಮದ ಬಗ್ಗೆ ಹುಡುಗಿಯರು ಬರೆಯುವ ಲೇಖನ ಅಪ್ಯಾಯವಾಗಿರುತ್ತವೆ.ನಿಮ್ಮ ಲೇಖನವೂ ಸೊಗಸಾಗಿದೆ ವಿಭಿನ್ನ ಅನುಭವ ಕೊಡುತ್ತದೆ ನಿಮಗೆ ಬಿಡುವಿದ್ದರೆ usdesai.blogspot.com ಗೆ ಭೇಟಿ ಕೊಡ್ರಿ

    ReplyDelete
  9. ಪ್ರೀತಿಗೆ ಒಂದು ಹೊಸ defination ಕೊಟ್ಟಿದ್ದಿರಿ.. ಸುಂದರ ಬರಹ ಸೌಮ್ಯ...

    ReplyDelete
  10. ಒಳ್ಳೆಯ ಲೇಖನ ಸೌಮ್ಯ. ಪ್ರೀತಿಸಿದವಳು ಸಿಗಲಿಲ್ಲವೆಂದು ಮುಖಕ್ಕೆ acid ಎರಚುವ , ಕೊಲೆಮಾಡಲೂ ಮುಂದಾಗುವ ಇಂದಿನ ಯುವಜನತೆಗೆ ಮಾರ್ಗದರ್ಶನ ನೀಡುವಂತಿದೆ. ಆದರೆ ಪ್ರೀತಿಸುತ್ತೇವೆಂದು ಕಮಿಟ್ ಮಾಡಿಕೊಂಡು ಊರೆಲ್ಲ ಸುತ್ತಾಡಿ ಕೊನೆಗೆ ಏನೋ ಕ್ಷುಲ್ಲಕ ನೆಪಗಳನ್ನೊಡ್ಡಿ ತಿರಸ್ಕರಿಸುವ ಪ್ರವೃತ್ತಿ ಒಳ್ಳೆಯದಲ್ಲವೆಂದು ನನ್ನ ಅನಿಸಿಕೆ.

    ReplyDelete
  11. thanks a lot umesh sir.... ಖಂಡಿತ ಭೆಟ್ಟಿ ಕೊಡುತ್ತೇನೆ :)

    ReplyDelete
  12. thank u ವಾಣಿಶ್ರೀ ..........:)

    ReplyDelete
  13. ನೀವು ಹೇಳಿದ್ದು ಸತ್ಯ ಸುಮಕ್ಕ... ಇಲ್ಲಿ ನಾ ಹೇಳಿದ್ದು ಒಂದು ಸುಂದರ ನಿಷ್ಕಲ್ಮಶ ಪ್ರೀತಿಯ ಬಗ್ಗೆ ....... ಅದಾವುದೋ ಕಾರಣದಿಂದ ಸಿಗದ ಪ್ರೀತಿಯ ಬಗ್ಗೆ . thank u sumakka ........... :)

    ReplyDelete
  14. ಪ್ರೀತಿ/ಸ್ನೇಹ ಗಳ ನಡುವೆ ಇರೋ ನಾಜೂಕಾದ ಎಳೆಯನ್ನು ಚೆನ್ನಾಗಿ ಸೆರೆ ಹಿಡಿದ್ದೀರಿ. ಲೇಖನದ ಕೊನೆಯ ಕೆಲ ಸಾಲುಗಳು sooperb
    'जब तुम किसी को खुदा से मांगो और वो तुम को ना मिले तो समाज जावो की तुमे खुदा से कोयी ओर मांग चूका है..!....ಚೆನ್ನಾಗಿದೆ
    ಶ್ರೀ:-)

    ReplyDelete
  15. olleya lekhana..naanondu kshana lekhanavannu odutta anubhavada olage hogi bande..

    ReplyDelete
  16. ನೀವ್ ಯಾರಂತಾ ಗೊತ್ತಿಲ್ಲಾ..search ಮಾಡ್ದಾಗಾ ಸಿಕ್ಕಿದು.. ಆದ್ರು ಓದಿ ಖುಷಿ ಆಯ್ತು..nice one..

    ReplyDelete
  17. ನೀವು ನಿಷ್ಕಲ್ಮಶ ಪ್ರೀತಿಯ ಬಗ್ಗೆ ಹೇಳಿದ್ದು Extraordniary...Hats off..

    ReplyDelete
  18. ಪ್ರೀತಿ ಪ್ರೇಮದ ಬಗ್ಗೆ ವಿಭಿನ್ನವಾಗಿ ಬರೆಯುತ್ತೀರಿ ಅಂತ ಈ ಲೇಖನ ಓದಿದಾಗ ಅನ್ನಿಸುತ್ತದೆ. ಓದಿಸಿಕೊಂಡು ಹೋಗುತ್ತದೆ. keep it up!

    ReplyDelete
  19. ಹುಚ್ಚು ಹುಡುಗಿ ಅಂತೀರಾ..
    ಪ್ರಬುದ್ಧ ಸಾಲುಗಳನ್ನೇ ಬರೀತೀರ..

    ReplyDelete
  20. Soumya,

    nimma ella barahagalu prabhuddhavaagive, lekhana tumbaa ishta aitu, nimma yochana lahari tumbaa chennagide, keep it up....

    ReplyDelete
  21. hai soumya....preetiya vividha majalugalu haagu preetiya bagge nimma vyaakyaana superb,,,,keep writing,,nimma baravanigeyalli odugarannu hidididuva saamartyavide,,,,,

    ReplyDelete
  22. ಧನ್ಯವಾದಗಳು ಶ್ರೀ ಹಾಗೂ ಗಣೇಶ್ ರವರೆ .... :)
    welcome kantesh ... thanks a lot..:)

    ReplyDelete
  23. thank u pras ನಿಷ್ಕಲ್ಮಶ ಪ್ರೀತಿನೆ ಅಂಥದ್ದಲ್ವಾ ? ಜೀವೆನದ ಕೊನೆಯ ಉಸಿರಿರೋವರೆಗೆ ನೆನಪಿರುವ ಪ್ರೀತಿ ಅದು ... :)

    ReplyDelete
  24. TUMBA CHENNAGIDHE. Parishuddha Preetigaagi Meesaliruva NAMMA MAASIKA 'SAVI SAVI PREETHI' yalli prakatisabahudhe ?? Nimma oppige needidre prakatisthene.
    - Manikya Satish

    ReplyDelete
  25. 'जब तुम किसी को खुदा से मांगो और वो तुम को ना मिले तो समाज
    जावो की तुमे खुदा से कोयी ओर मांग चूका है..!'

    यह बात १००% सच है जी.. इसी आशा से लोग निरुत्सक न होकर एक अच्छी सी उम्मीद
    को साथ में लेकर ज़िन्दगी बीतना चाहिए.. मुझे यह फिलोसोफी बहुत पसंद आया जी..

    ReplyDelete
  26. 'जब तुम किसी को खुदा से मांगो और वो तुम को ना मिले तो समाज जावो की तुमे खुदा से कोयी ओर मांग चूका है..!'

    Wonderfull !!

    ReplyDelete
  27. Akka lekana thumba Chennagide.. first enda thumba serious age odikond bande climax nalli kanner barbhoudu ankonde adre sakath comedy agide last para odi nagu banthu. but thumba chennadgide akka.

    ReplyDelete
  28. ಕಂಡ ಎಲ್ಲ ಕನಸುಗಳು ನನಸಾಗಿ ಬಿಟ್ಟರೆ ,ಕನಸು ಕಾಣಲು ಇರುವ ಅರ್ಥವೇನು ?
    this is simply superb....!
    really thats true....!
    it has meaning....!

    ReplyDelete
  29. dreams are free and dont need others permission to see them....... but that dreams should not spoil u r life,,,!

    ReplyDelete
  30. so bad,naa enu yarnu love madila ,,love madi 1 week le kelbidthini time pas ga antha

    ReplyDelete
  31. Interesting blog ! So matured. So neat. Keep writing :)

    ReplyDelete
  32. ಎರಡು ಸರಳ ರೇಖೆಗಳು ಒಂದನ್ನೊಂದು ಸಂಧಿಸುವುದೇ ಇಲ್ಲಾ... ಆದರೆ ಒಂದರ ಪಕ್ಕ ಮತ್ತೊಂದು ಸಾಗಬಹುದು... ಅದೇ ನಿಜವಾದ ಪ್ರೀತಿ....
    ಸೊಗಸಾಗಿದೆ ಬರಹ ಸೌ.. .. ಧನ್ಯವಾದಗಳು

    ReplyDelete
  33. ಆ ದೇವ್ರು ಹೆಣ್ಣು ಗಂಡು ಅಂತ ಶ್ರಷ್ಟಿ ಮಾಡ್ ಕೈ ಬಿಟ್ಟಿದ್ರೆ ಆಗಿರದು ಮದ್ಯದಲ್ಲಿ ಈ ಮನಸ್ಸು, ಪ್ರೀತಿ ಅಂತ ಎರಡ್ fitting ಇಟ್ಟಾ ನೋಡಿ ಅಲ್ಲಿಗೆ ಮುಗಿತು ನಮ್ ಕತೆ.

    ReplyDelete
  34. Pratiyondu line oduvaglu tuti mele mugulnagu ittu. :)
    Hudgi siglillanta bejarallidde. ond reeti solution siktu.

    ReplyDelete