ಯಾವ ಕಲಾವಿದನ ಕಲ್ಪನೆಯ ಕಲಾಕೃತಿ ?
ಅರಳಿ ನಗುತಿದೆ ವಸಂತದ ಮಡಿಲಲ್ಲಿ ಪ್ರಕೃತಿ..
ಬಂತಿದೋ ವಸಂತ ತಂತಿದೋ ಸಂತಸ ll ಪ ll
ಋತುಗಳ ರಾಜನ ಆಗಮನ
ಗಿಡಗಳಲ್ಲೆಲ್ಲ ಚಿಗುರಿನ ನರ್ತನ
ಸೃಷ್ಟಿಯಲಿ ಹಸಿರಿನ ಸಿಂಚನ
ಜೀವಜಾಲಕೆ ರೋಮಾಂಚನ
ಬಂತಿದೋ ವಸಂತ ತಂತಿದೋ ಸಂತಸll ೧ ll
ಮಾವಿನ ತೊಪಲಿ ಬೇವಿನ ಕಂಪಲಿ
ದುಂಬಿಯ ಹಿಂಡಿನ ಝೇಂಕಾರ
ರಸ್ತೆಯ ಬದಿಯಲಿ ಹೊಲದ ಬೇಲಿಯಲಿ
ವನಕುಸುಮಗಳ ವಯ್ಯಾರ
ಬಂತಿದೋ ವಸಂತ ತಂತಿದೋ ಸಂತಸ ll೨ll
ಎಲೆಗಳನುದುರಿಸಿದ ಗಿಡಗಳಿಗೆಲ್ಲ
ಚಿಗುರೆಲೆಗಳ ನವೋಲ್ಲಾಸ
ಮುದದಲಿ ಹಾಡುವ ಕೋಗಿಲೆಗೆ
ಇನ್ನೆಲ್ಲಿಯ ಆಯಾಸ?
ಬಂತಿದೋ ವಸಂತ ತಂತಿದೋ ಸಂತಸ ll ೩ ಲ್
ಜಡದಲಿ ಮುಳುಗಿದ ಪ್ರಕೃತಿಗೆ ಚೇತನ
ನೀಡುವ ವಸಂತದ ರೂಪ ವಿನೂತನ
ಹರುಷದಿ ನಲಿಯಲಿ ಜನಮನ
ಬಂತಿದೋ ವಸಂತ ತಂತಿದೋ ಸಂತಸ ll ೪ ll
No comments:
Post a Comment