Wednesday, January 20, 2010

ನೆನಪಿನ ಸುರುಳಿ ಬಿಚ್ಚಿದಾಗ ...











ನಿನ್ನೆ ಮಂಗಳೂರಿನಲ್ಲಿ ಮಳೆ, ಸಂಜೆ ೫ರ ಮಳೆ . ನನ್ನ ಬಣ್ಣದ ಕೊಡೆ ಹಿಡಿದು ಒಂದು ವಾಕ್ ಹೋಗಿ ಪಾನಿಪುರಿ ತಿಂದು ಬರೋಣ ಅಂದುಕೊಂಡವಳಿಗೆ , ಹೊಸ ಚಪ್ಪಲಿ ಹಾಳಾಗೋದ್ರೆ ಅಂತ ಅನಿಸಿ , ಸುಮ್ಮನೆ ಬಂದು ಕೂತೆ ಕಿಟಕಿಯ ಸನಿಹ . ಗಾಜು ಸರಿಸಿ ಮಳೆಹನಿಯನ್ನು ನೋಡುತ್ತಾ ಕುಳಿತವಳಿಗೆ. ಅದೇನೋ ನೆನಪಾಗಿ ಥಟ್ಟನೆ ಎದ್ದು ನನ್ನ ಹೈಸ್ಕೂಲು ಜೀವನದ Autograph ಬುಕ್ ತೆರೆದೆ . ಈ ಮಳೆಯನಿಗಳ ಚಟಪಟಕ್ಕೆಹಳಿಯ ನೆನಪುಗಳ ಕೆಣಕೋ ತಾಕತ್ತಿದೆ . ಅಲ್ವಾ ?

ಕಂಡೂ ಕಾಣದ ತುಂಟನಗೆಯೊಂದು ಮಿಂಚಿ ಮಾಯವಾಗಿತ್ತು, ಮನದೊಳಗೆ ಏನೋ ಒಂದು ಸಮ್ಮಿಶ್ರ ಭಾವ . ಮತ್ತೆ ಅದೇ ಹೈಸ್ಕೂಲ್ ಜೀವನದ ಉನಿಫಾರ್ಮ್ ತೊಟ್ಟು ಜುಟ್ಟಿಗೆ ರಿಬ್ಬನ್ ಕಟ್ಟಿದ ಅನುಭವ.
ಹಾಗೆಯೇ ಪುಟಗಳನ್ನೂ ತಿರುವುತ್ತ ನಗುತ್ತಿದ್ದ, ನೆನಪಿನ ಬಲೆಯೊಳಗೆ ಸಿಲುಕಿದ್ದ ನನ್ನನ್ನು ಹೊರೆಗೆಳೆದದ್ದು ಹರಿದು ಹೋದ ಒಂದು ಹಾಳೆಯ ಕುರುಹು. ಥಟ್ಟನೆ flash backಗೆ ಹೋದೆ ಥೇಟ್ ಸಿನೆಮಾಗಳಲ್ಲಿ ತೋರಿಸುವ ಹಾಗೆ. !

ಆ ಹಾಳೆಯನ್ನು ನಾನೇ ಹರಿದು ಒಲೆಗೆ ಹಾಕಿದ್ದೆ. ಅದರಲ್ಲಿದ್ದಿದ್ದು ಇಷ್ಟೇ :
"ರವಿ ಇರದ ಬಾನು
ಸಿಹಿ ಇರದ ಜೇನು
ನೀನಿರದ ನಾನು
ಬರೆಯಲಿ ಇನ್ನೇನು?"
"ನನ್ನ ಈ ಪುಟ್ಟ ಹೃದಯದ ತುಂಬಾ ನಿನ್ನದೇ ನೆನೆಪುಗಳ ನಿನಾದ .!"
ನನ್ನ classmate ಹುಡುಗನ ಹಸ್ತಾಕ್ಷರದಲ್ಲಿ .ಹುಡುಗ ನನ್ನನ್ನು ಬೇಜಾನ್ ಇಷ್ಟ ಪಡ್ತಾ ಇದ್ದ. it was a crush ..! ಕೊನೆಗೆ ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು ಬರೆದಿದ್ದ .ಅಮ್ಮ ಬೇಡ ಎಂದರೂ ಕೇಳದೆ, ಹರಿದು ಒಲೆಗೆ ಹಾಕಿದ್ದೆ ಸಿಟ್ಟಿನಿಂದ. ಅದರ ನಂತರ ಮಾತನ್ನೂ ಕಡಿಮೆ ಮಾಡಿದ್ದೆ ಅವನಲ್ಲಿ. ಆದರೆ ಆ ಸಾಲುಗಳು ಮನದಲ್ಲಿ print ಆಗಿತ್ತು. ಹಾಗೆ ಕಾಲಕ್ಕೆ ಸಿಕ್ಕಿ ಮರೆತಿತ್ತು ಕೂಡ .
ಆದರೆ ನಿನ್ನೆ ಹುಡುಗ ನೆನಪಾಪಾಗಿ ಬಿಟ್ಟಿದ್ದ, ಕಾಡುತ್ತಿದ್ದ ಕೂಡ...ಅದೇನಾದರಾಗಲಿ ಎಂದುಕೊಂಡು cyberಗೆ ನಡೆದಿದ್ದೆ. orkut search ನಲ್ಲಿ ಅವನ ಹೆಸರು ಹಾಕಿ ಹುಡುಕಾಡಿದೆ. ಸಿಕ್ಕಿಬಿತ್ತಿದ್ದ ಅದೇ ಆ ನಗುಮೊಗದ ಹುಡುಗ. ಅದೇ ನಗೆಯ ಫೋಟೋದಲ್ಲಿ.!profile ತೆರೆದೆ ಕಾತುರತೆಯಿಂದ ......ಕೆಳಗಡೆ committed ಎಂದು ಇತ್ತು. ಹುಡುಗನ ಮನದಲ್ಲೊಮ್ಮೆ ಇಣುಕಿ ನೋಡೋಣ ಎಂದು ಹೊರಟವಳಿಗೆ ಮನಸ್ಸಾಗಲೇ ಇಲ್ಲ .!ನೆನಪುಗಳ ಕೆಣಕುವುದು ಬೇಡ ಅನಿಸಿ ಸೀದಾ ಹೊರಬಂದಿದ್ದೆ ..!
ಪಡುವಣದ ಸೂರ್ಯ ಮೋಡವನ್ನು ಬಿಟ್ಟು ಈಚೆ ಬಂದಿದ್ದ, ತುಂತುರು ಮಳೆ ಎಳೆಬಿಸಿಲ ಮೇಳಕ್ಕೆ ಕಟ್ಟಿದ ಮಳೆಬಿಲ್ಲು ಆಗಸದಲ್ಲಿ ! ಎಲ್ಲ ಮರೆತು almost ಕೂಗಿದ್ದೆ "hey..... rainbow ...!"

2 comments:

  1. Crush isn't Crime! ಹುಡುಗ just ಪುಟದಲ್ಲಿ ಬರೆದಿದ್ದ.. ನೀವು ಆ ಪುಟವನ್ನು ಹರಿದುಹಾಕಿ, ಅದನ್ನು ನಿಮ್ಮ ಹೃದಯದಲ್ಲಿ ಹಚ್ಚಾಕಿದ್ದಿರಿ. ನಿಮಗರಿವಿಲ್ಲದಂತೆಯೇ ಮಧುರ ಭಾವನೆಗಳನ್ನೂಳಗೊಂಡ ಅವನ ಸಿಹಿ ಮಾತುಗಳನ್ನು ಮನದಲ್ಲಿ ಜೋಪಾನವಾಗಿಸಿದಿರಿ. Hats off 2u!

    ReplyDelete
  2. ತರ್ಲೆ ಪ್ರಶ್ನೆ ಅಂತ ಅನ್ಕೊಂಡ್ರು ಪರ್ವಾಗಿಲ್ರಿ ನೀವು ಎದ್ದು cyberಗೆ ಹೋಗೊವಾಗ ಮಳೆ ನಿಂತ್ ಹೋಗಿತ್ತ?? ಅತ್ವಾ ನಿಮ್ಮ್ ಚಪ್ಪಲಿ ನೆನೆದರೂ ಪರವಾಗಿಲ್ಲ ಎಂಬ ನಿರ್ಧಾರನಾ??

    ReplyDelete