ನನಗೆ ಗೊತ್ತು ತಲೆ ಬರಹವನ್ನು ನೋಡಿದೊಡನೆಯೇ ನೀವೆಲ್ಲ ಏನೇನು ಕಲ್ಪನೆ ಮಾಡಿಕೊಂಡಿರ್ತೀರ ಅಂತ. ! ಹುಡುಗೀರು ಎಂದೊಡನೆ ಒಂದು ಹತ್ತು ವರುಷಗಳ ಹಿಂದೆ ನೆನಪಿಗೆ ಬರುತ್ತಿದ್ದದ್ದು ಕಾಲ್ಗೆಜ್ಜೆಯ 'ಘಲ್ ಘಲ್',ಉದ್ದದ ಲಂಗ, ಒಂದಿಷ್ಟು ನಾಚಿಕೆಯ ರಂಗು,ಕಿಲ ಕಿಲ ನಗು. ಆದರೆ ಈಗ ? ಪರಿಸ್ಥಿತಿ ಬದಲಾಗಿದೆ ಕಣ್ರೀ low waist ಪ್ಯಾಂಟ್, ಕೃತಕವಾಗಿ straightning ಮಾಡಿಸಿದ ಕೂದಲು, ತುಟಿಯ ತುಂಬಾ ಘಾಡ ವರ್ಣದ lipstick,ಕೃತಕ ನಗುವನ್ನು ಇಟ್ಟುಕೊಂಡು, ತರಹೇವಾರಿ ಉಂಗುರಗಳನ್ನು ಸಿಕ್ಕಿಸಿಕೊಂಡು ತಾವೇನು ಯಾವ ಹುಡುಗರಿಗೆ ಕಮ್ಮಿ ಎನುತ್ತ ಧಂ ಎಳೆಯೋ ಹುಡುಗೀರು. ಪಬ್ಬು-ಕ್ಲಬ್ಬುಗಳಲ್ಲಿ ಮಿನಿ, ಮೈಕ್ರೋ ಮಿನಿಯನ್ನು ಸಿಕ್ಕಿಸಿಕೊಂಡು ನಶೆಯೇರಿ ನಿಶೆಯಲ್ಲಿ ಗಾಡಿ ಚಲಾಯಿಸೋ ಹುಡುಗೀರು. ಏನೇ ಮಾಡಲಿ ಏನೇ ಇರಲಿ ಇದು ಹುಡುಗೀರ ದುನಿಯಾ.
ಇಲ್ಲಿ ನಾನು ಯಾರನ್ನು ದೂಷಿಸುತ್ತಿಲ್ಲ. ಯಾರೆಡೆಗೂ ಬೆರಳು ತೋರಿಸುತ್ತಿಲ್ಲ, ಒಬ್ಬಳು ಹುಡುಗಿಯಾಗಿ ಹುಡುಗಿಯರ ಜಗತ್ತಿನ ಕುರಿತು ನನಗೆ ತಿಳಿದಿದ್ದನ್ನು,ಕಂಡಿದ್ದನ್ನು, ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನಾನೂ ಕಾಲೇಜಿನ ಹುಡುಗಿಯರ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಕಂಡಿದ್ದೇನೆ. ಪಕ್ಕದಲ್ಲಿ ಕುಳಿತ ಸ್ವಾತಿಯ ಬಳಿ 'ಅವಳ ಸಲ್ವಾರ್ ಚೆಂದಕಿದೆ ' ಎಂದಿದ್ದೇನೆ. ಉದ್ದ ಕೂದಲಿನ ಹುಡುಗಿಯ ಕಂಡು 'ನನ್ನದೂ ಮೊದಲು ಹೀಗೆ ಇತ್ತು' ಎಂದು ಹೇಳುತ್ತಾ ಈಗಿನ 'ಜುಟ್ಟು' ಕಟ್ಟಿದ್ದೇನೆ. ಕಾಲೇಜಿನ ಆ ಹೊಸ chocolate boy ಲುಕ್ಕಿನ ಹುಡುಗ ಯಾರೆಂದು ಪಿಸುಗುಟ್ಟಿದ್ದೇನೆ. ಹುಡುಗಿಯರ ಜಗತ್ತಿನಲ್ಲಿ ಹುಡುಗಿಯಾಗಿ ಕಂಡದ್ದನ್ನು ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನ.
ಹುಡುಗಿಯರದೊಂದು ಭಾರಿ ಕುತೂಹಲಕಾರಿ ಜಗತ್ತು. ' ಮಾಫಿಯ' ಜಗತ್ತಿಗಿಂತ ಒಂದು ಕೈ ಮೆಲೆಂದೇ ಹೇಳಬಹುದೇನೊ. ನೀವು ಒಂದು ಟ್ರೈನಲ್ಲಿ ಹೊರಟಿರುತ್ತೀರಿ ರೈಲಿನಲ್ಲಿ ನಿಮ್ಮ ಬೋಗಿಯೊಳಗೆ ಒಂದು ೫-೬ ಜನ ಹುಡುಗಿಯರ ಗುಂಪು ಇರುತ್ತದೆ. ಹಾಗೆ ಒಂದು ಹುಡುಗರ ಗುಂಪು ಇದೆ. ಆದರೆ ಆ ಹುಡುಗಿಯರ ಗುಂಪಿಗೇ 'the force of atraction' ಜಾಸ್ತಿ ಇರುತ್ತದೆ. ಆ ಹುಡುಗಿಯರ ಗುಂಪಿನಲ್ಲಿ ಸಿಗರೇಟಿನ ಹೊಗೆಯಿಲ್ಲ, ಹೆಂಡದ ನಶೆಯೂ ಇಲ್ಲ. ಬೊಬ್ಬೆ-ಗಲಾಟೆಯೂ ಇಲ್ಲ. ಆದರೆ ಮಿಂಚು ಕೋಲುಗಳ ನೆನಪಿಸುವ ಒಂದೆಳೆಯ ಕಾಡಿಗೆ ಕಂಗಳ ಹೊಳಪಿದೆ. ಕಿಲ ಕಿಲ ನಗುವಿನ ಕಚಕುಳಿಯಿದೆ.ಒಂದಿಷ್ಟು ಗಾಸಿಪ್ ಇದೆ.ಚಾಂಚಲ್ಯದ ಚಮಕ್ ಇದೆ.
ಮಾನವ ಜೀವಿಗಳಲ್ಲಿ ಗಂಡು -ಹೆಣ್ಣು ಎರಡೂ ಬ್ರಹ್ಮ ಸೃಷ್ಟಿ ಎಂದುಕೊಂಡರೂ.ಈ ಹೆಣ್ಣು ಎಂಬುದನ್ನು ಆ ಬ್ರಹ್ಮ ಬಹಳ ಜತನದಿಂದ , ಸೃಷ್ಟಿಸಿರಬೇಕು. !ಇತಿಹಾಸದಲ್ಲಿ ಬಹು ಚರ್ಚಿತ ವಿಷಯಗಳಲ್ಲಿ ಮುಖ್ಯವಾಗಿರುವುದೇ 'ಧರ್ಮ' ಮತ್ತು 'ಹೆಣ್ಣು'. ಹೆಣ್ಣಿಗಾಗಿ ನಡೆದ ಯುದ್ಧಗಳು ಹಲವು. ಅವಳ ಒಂದು ಕಣ್ಣೋಟ ಹುಡುಗರ ನಿದ್ದೆಗೆಡಿಸಬಹುದು. ಪ್ರೀತಿಯ ಮಾತು ಹುಚ್ಚನಾಗಿಸಬಹುದು. ಹೆಣ್ಣಿನ ಕುರಿತು ಕವನ ಬರೆಯದ ಕವಿಯೇ ಇಲ್ಲ ಎನ್ನಬಹುದೇನೋ. ಈ ಚಿತ್ರಕಾರರ ಪಾಡೂ ಹಾಗೆ. the world of modeling ನಲ್ಲೂ ಇದೇ ಹಾಡು. ಎಲ್ಲ ವಸ್ತ್ರ ವಿನ್ಯಾಸಗಾರರ,ಮಾರ್ಕೆಟಿಂಗ್ ಗುರುಗಳ ಮುಖ್ಯ ಗುರಿ ಹೆಣ್ಣೇ. ನೋಡಿ ಬೇಕಾದರೆ miss world, miss universe, miss asia-pacific, miss earth, Miss International, ಹೀಗೆ ಸಾಗುತ್ತದೆ ನೋಡಿ. ಅದೇ Mr.World ಸ್ಪರ್ಧೆ ಹೇಳ ಹೆಸರಿಲ್ಲದೆ ನಡೆದಿರುತ್ತದೆ. ಯಾರು ಗೆದ್ದರೋ ಏನೋ ಗೆದ್ದವರಿಗೂ ನೆನಪಿರುತ್ತದೆಯೋ ಇಲ್ಲವೋ .!
ಸಾನಿಯಾ,ಪ್ರಿಯಾಂಕ , ಕರೀನಾ, ಐಶ್, ಕತ್ರೀನಾ,ಕರೀನಾ ಇವರೆಲ್ಲರ hair style ಬದಲಾದರೂ ಸುದ್ದಿ, ಅವರು ತೆಳ್ಳಗಾದರೂ ಸುದ್ದಿ,ದಪ್ಪಗಾದರೂ ಸುದ್ದಿ. Celebrities ಗಳ ಮಾತು ಬಿಡಿ. ಕಾಲೇಜಿನ ಬ್ಯೂಟಿ ಕ್ವೀನ್ ಗಳ ಸುತ್ತಲೂ ಗಾಸಿಪ್ ಇದ್ದೆ ಇರುತ್ತದೆ. 'she changed her boy friend. she changed her hair style, ಅಯ್ಯೋ ಈ ಸರಣಿಗೆ ಕೊನೆಯೇ ಇಲ್ಲ ಹಿಜುಬುಲ್ ಮುಜಾಹಿದ್ದೀನ್ ಸಂಘಟನೆಗಳ ಸರಣಿ ಬಾಂಬ್ ಸ್ಫೋಟದಂತೆ.
ಯಾಕೆ ಹೀಗೆ.ಈ ಹುಡುಗಿಯರಲ್ಲಿ ಅಂಥದ್ದೇನಿದೆ ? ಇರುವ ಹುಡುಗಿಯರೆಲ್ಲರೂ ಸುರ ಸುಂದರಿಯರೋ ? ಖಂಡಿತ ಅಲ್ಲ ಮಾರಾಯ್ರೆ. ಸೌಂದರ್ಯವೊಂದೆ ಅವರ ಬಂಡವಾಳ ಅಲ್ಲ. ಅಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ, ಕುತೂಹಲ-ಮನೋನಿಗ್ರಹ, ಪ್ರೀತಿ ವಾತ್ಸಲ್ಯದ ಸೆಳೆತವಿದೆ, ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ.ನಾಜೂಕು-ನಯವಿದೆ. ನಗು-ಅಳುವಿನ ಹುಚ್ಚು ಹೊಳೆಯಿದೆ. ಚಾಣಾಕ್ಷತೆ-ಪೆದ್ದುತನ ಎರಡೂ ಸೇರಿಕೊಂಡಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. ಈ ಹುಡುಗಿಯರ ಬಗ್ಗೆ ಜಗತ್ತಿನ ಜನರೆಲ್ಲಾ ಒಂದೊಂದು Ph.D ಪ್ರಬಂಧ ಮಂಡಿಸಬಹುದೇನೋ. ಒಂದೊಂದು ಹುಡುಗಿಯೂ ಒಂದೊಂದು ಅದ್ಭುತ ಪ್ರಬಂಧಕ್ಕೆ ವಸ್ತುವಾಗಬಹುದು.
ಒಮ್ಮೆ ಒಬ್ಬ ಹುಡುಗ ತಪಸ್ಸಿಗೆ ಕುಳಿತನಂತೆ, ಬೆಂಗಳೂರಿನ ಅದ್ಯಾವ್ದೋ ಬಹುಮಹಡಿ ಕಟ್ಟಡದ ಬಳಿ. ಅಂತೂ ದೇವರು ಪ್ರತ್ಯಕ್ಷನಾಗಿಯೂ ಬಿಟ್ಟನಂತೆ, ದೇವರು ತನ್ನ ಮಾಮೂಲಿ ವರಸೆಯಲ್ಲಿ "ಅದೇನು ವರ ಬೇಕು ಕೇಳೋ ಹುಡುಗ "ಎಂದಾಗ, ಈ ಪುಣ್ಯಾತ್ಮ " ನನಗೆ ಬೆಂಗಳೂರಿನ traffic ನಿಂದ ಬಚಾವು ಮಾಡು " ಎಂದುಬಿಟ್ಟ. ಆಗ ದೇವರು " ಸಾಧ್ಯವಿಲ್ಲ. ಬೇರೆ ಕೇಳು " ಎಂದಾಗ ನಮ್ಮ ಹುಡುಗ "ನನ್ನ ಗರ್ಲ್ ಫ್ರೆಂಡ್ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಸು ಸಾಕು ಎಂದ." ಭಗವಂತ ಕಂಗಾಲಾಗಿ ಮೊದಲಿಗೆ ಕೇಳಿದ್ದನ್ನೇ ಮಾಡುತ್ತೇನೆ ಮಾರಾಯ ಎಂದು ಬೆಂಗಳೂರಿಗೆ 'Metro' ಕೊಟ್ಟ .! 'ಮೀನಿನ ಹೆಜ್ಜೆಯನ್ನಾದರೂ ಹುಡುಕಬಲ್ಲೆ, ಆದರೆ ಹುಡುಗಿಯರ ಮನಸನ್ನು ಅರಿಯಲಾರೆ ' ಎಂದು ಆ ಭಗವಂತನೇ ಹೇಳಿದ್ದನಂತೆ.
ಹುಡುಗಿಯರ ಬಣ್ಣಗಳು : ಎಲ್ಲರೂ ಹೇಳುವಂತೆ ಹುಡುಗಿಯೆಂದರೆ 'ಅಸೂಯೆ' .! ಇರಬಹುದೇನೋ ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಈ 'ಅಸೂಯೆ' ಜಾಸ್ತಿ ಎಂದೇ ಹೇಳಬೇಕು. ನೀವೆಲ್ಲ ಅನುಭವಿಸಿರಬಹುದು ಅಥವಾ ನೋಡಿರಬಹುದು, ನಿಮ್ಮೆಲ್ಲರ ಶಾಲಾ ದಿನಗಳಲ್ಲಿ ಪರೀಕ್ಷೆಗಳಲ್ಲಿ ತನಗಿಂತ ಒಂದು ಮಾರ್ಕು ಜಾಸ್ತಿ ಬಂದವರ ಪೇಪರ್ ತೆಗೆದು ನೋಡುತ್ತಾ. ಗುಸು ಗುಸು ಪಿಸು ಪಿಸು ಎನ್ನುತ್ತಾ. ಮಾಸ್ತರರಿಗೆ ತನಗಿಂತಾ 'ಆ ಹುಡುಗಿಯ 'ಕಂಡರೆ ಜಾಸ್ತಿ ಇಷ್ಟವೆಂದು ಗೊಣಗುತ್ತ.ಕಣ್ಣಲ್ಲಿ ಜೋಗ ಹರಿಸುತ್ತಿದ್ದ ಹುಡುಗಿಯರನ್ನು. ಈ ಹುಡುಗಿಯರ ಕಂಗಳು ಉತ್ತರ ಭಾರತದ ಜೀವನದಿಗಳಂತೆ!
ಸಿನಿಮಾದಲ್ಲಿ ಒಂದು ಪಾತ್ರದೊಳಗೆ ಪ್ರವೇಶ ಮಾಡಿ ಆ ಸಿನಿಮಾವನ್ನು ಅನುಭವಿಸುವುದರಲ್ಲೂ ಈ ಹುಡುಗಿಯರದ್ದೇ ಮೇಲುಗೈ. ಸಿನಿಮಾವನ್ನು ಭಾವುಕರಾಗಿ ನೋಡುತ್ತಾರವರು. कुच कुच होता है ಸಿನಿಮಾದಲ್ಲಿ ಎಲ್ಲರನ್ನು ಬಿಟ್ಟು ಊರಿಗೆ ಹೊರಟಿರುವ ಕಾಜೋಲ್ ತನ್ನ ಕೆಂಪು ದುಪ್ಪಟ್ಟವನ್ನು ಗಾಳಿಯಲಿ ಹಾರಿ ಬಿಟ್ಟು ರೈಲಿನಲ್ಲಿ ಕೈಬೀಸುತ್ತ ಸಾಗುವಾಗ intermission ಬಿದ್ದಿರುತ್ತದೆ ಆಗಲೇ ಹುಡುಗಿಗೆ ಅರಿವಾಗುತ್ತದೆ ಕಣ್ಣಂಚು ಒದ್ದೆಯಾದದ್ದು. ಹಾಗೆ ತಾನು ಇಪ್ಪತ್ನಾಲ್ಕನೇ ಸಲ ಈ ಫಿಲಂ ನೋಡುತ್ತಾ ಇರುವುದು ಎಂದು .!
ಹುಡುಗಿಯರ ಹಾಸ್ಟೆಲಿನಲ್ಲಿ ಇದ್ದು (ಹುಡುಗರ ಹಾಸ್ಟೆಲಿನಲ್ಲಿ ನನಗೆ ಎಂಟ್ರಿ ಇಲ್ಲವಲ್ಲ ಹ್ಹ ಹ್ಹ ಹ್ಹಾ )ಹುಡುಗಿಯರನ್ನು ಕಂಡಿದ್ದೇನೆ. ಹುಡುಗಿಯರ ಹಾಸ್ಟೆಲಿನ ಎದುರಿನ ರಸ್ತೆಯೆಂದರೆ ಹಾಗೆ, ದಾರಿ ಹೋಕರ ಕಣ್ಣು ಎದುರಿಗಿಂತಲೂ ಜಾಸ್ತಿ ಹಾಸ್ಟೆಲಿನ ಕಡೆಗೆ ನೆಟ್ಟಿರುತ್ತದೆ. ಹುಡುಗನೊಬ್ಬ ಒಂಟಿಯಾಗಿ ಹೋಗುತಿದ್ದರೆ ಸಾಕು ಹಾಸ್ಟೆಲಿನ ಕಿಟಕಿ, ಟೆರೇಸಿನಿಂದಲೇ ಕೇಕೆ, commentsಗಳ ಸರಮಾಲೆ ಹುಡುಗನ ಕೊರಳಿಗೆ ಬಿದ್ದಿರುತ್ತದೆ.
ಸಿನಿಮಾ ತಾರೆಯರನ್ನು ದೂರುತ್ತಲೇ ಅವರ ಅನುಕರಣೆ ಮಾಡುವುದು ಹುಡುಗಿಯರ ಮೂಲ ಗುಣದಲ್ಲೊಂದು. ನಾನು ಹಾಸ್ಟೆಲಿನಲ್ಲಿದ್ದಾಗ , ಮೂಗಿನ ಬೊಟ್ಟು,ಹಾಗು ಕಾಲ್ಗೆಜ್ಜೆಗಳನ್ನು ಬಂಧನದ ಸಂಕೇತವೆಂದು ಕಿತ್ತೆಸೆದಿದ್ದ, ಮಲೆನಾಡಿನ ಮೂಲದ ಬೆಡಗಿಯೊಬ್ಬಳು.ಸಾನಿಯಾಳನ್ನು ನೋಡುತ್ತಲೇ,ಅವಳನ್ನು ಬಯ್ಯುತಲೇ ಅವಳ ಥರದ ಮೂಗುತಿಯನ್ನು ತನ್ನದಾಗಿಸಿಕೊಂಡಳು.
'ಹೆಣ್ಣಿಗೆ ಹೆಣ್ಣೇ ಶತ್ರು' ಎಂದು ಹಿರಿಯರು ಹೇಳಿರಬಹುದು. ಆದರೆ ಅದೇ ಹುಡುಗಿ ಒಬ್ಬ ಹುಡುಗನ ಆತ್ಮೀಯ ಸ್ನೇಹಿತೆಯಾಗಬಲ್ಲಳು. ಅವನನ್ನು ಒಬ್ಬ ಹುಡುಗನಿಗಿಂತ ಜಾಸ್ತಿಯಾಗಿ ಅರಿತುಕೊಳ್ಳಬಲ್ಲಳು. ಪ್ರೀತಿಯನ್ನು ಕಳೆದುಕೊಂಡು ನಲುಗುತ್ತಿರುವ ಹುಡುಗನಿಗೆ,ಗೆಳೆಯನ ಜೊತೆಗಿನ ಬಾರಲ್ಲಿಯ ಹೆಂಡದ ನಶೆಗಿಂತ, ಆತ್ಮೀಯ ಗೆಳತಿಯ ಭುಜ ಅದೆಷ್ಟೋ ಹಿತವಾಗಿರುತ್ತದೆ.!
ಹುಡುಗರ ವಿಷಯದಲ್ಲಾದರೆ ಒಮ್ಮೆ ವೈಮನಸ್ಸು ಬಂದು ಕಿತ್ತಾಡಿದರೆಂದರೆ ಆ ಸಂಬಂಧ ಅಲ್ಲಿಗೆ ಮುಗಿಯಿತೆಂತಲೇ ಅರ್ಥ. ಆದರೆ ಹುಡುಗಿಯರ ವಿಷಯದಲ್ಲಿ ಹಾಗೆ ಎಂದೂ ಯೋಚಿಸಬೇಡಿ. ಜಗಳವಾಡುತ್ತಲೇ ಆತ್ಮೀಯರಾಗಿಬಿಡುವ ಬೇತಾಳಗಳು ಈ ಹುಡುಗಿಯರು.! ಇಡೀದಿನ ಕಿತ್ತಾಡುವ ಹುಡುಗಿಯರೇ ಬಿಟ್ಟಿರದ ಸ್ನೇಹಿತೆಯರಾಗಿಬಿಡುತ್ತಾರೆ.!
ಸಾಮಾನ್ಯವಾಗಿ ಹುಡುಗರು ಧರಿಸುವ ಧಿರಿಸುಗಳು ಎನಿಸಿಕೊಂಡ pant, T-shirt, formal pants, shirts ಅಲ್ಲದೆ, long skirts, mini skirts micro-mini skirts,shorts, ಸಲ್ವಾರ್, ಸೀರೆ,ಸುಮಾರಾಗಿ ಲುಂಗಿಯನ್ನು ಹೋಲುವ wrap-around, ಇನ್ನೂ ಏನೇನೋ ಹೆಸರು ಇಲ್ಲದ ಉಡುಗೆಗಳು ಹುಡುಗಿಯರ ಸ್ವತ್ತು. ಅದೇ ಒಂದು ಹುಡುಗ ಸೀರೆ ಸುತ್ತಿಕೊಂಡು ಹೊರಟರೆ ಜನ ಏನೆಂದು ಆಡಿಕೊಳ್ಳುವರು ಎಂದು ನಿಮಗೆ ಗೊತ್ತೇ ಇದೇ ಅಲ್ವಾ?ಈ ಹುಡುಗಿಯರು ಏನೇ ಧರಿಸಿದರೂ ಅದೊಂದು ಹೊಸ ಫ್ಯಾಶನ್ ಆಗಿಬಿಡುತ್ತದೆ. !
ಹುಡುಗಿಯರ ನಾಜೂಕುತನ ಅವರಲ್ಲಷ್ಟೇ ಅಲ್ಲ, ಅವರ ನಡಿಗೆಯಲ್ಲಷ್ಟೇ ಅಲ್ಲ, ಅವರು ಸೆಲೆಕ್ಟ್ ಮಾಡುವ gift, ಕಾರ್ಡ್ ಗಳಲ್ಲಿಯೂ ಎದ್ದು ತೋರುತ್ತದೆ. ಅಲ್ಲೊಂದು uniqueness ಇರುತ್ತದೆ ಇದು ಹುಡುಗಿಯದ್ದೇ selection ಎಂದು ತಿಳಿದೇ ಬಿಡುತ್ತದೆ.!
ಹುಡುಗಿ ಅಲಂಕಾರಪ್ರಿಯೆ. ಒಂದು ರೀತಿಯಲ್ಲಿ 'ಅಲಂಕಾರ' ಹುಡುಗಿಯರ ಮೂಲಭೂತ ಹಕ್ಕುಗಳಲ್ಲಿ ಒಂದು.!'ಅದಾವ ಕನ್ನಡಿಯೂ ಒಂದು ಹುಡುಗಿಯನ್ನು "ನೀ ಸುಂದರಿಯಲ್ಲ ಹುಡುಗಿ.." ಎಂದು ಹೇಳೇ ಇಲ್ಲವಂತೆ'. ಅದಕ್ಕೆ ಕನ್ನಡಿಯ ಮುಂದೆ ಚೂರು ಜಾಸ್ತಿ ಹೊತ್ತು ಕೂರುತ್ತಾರೆ.ಎಲ್ಲರ ಗಮನ ತನ್ನ ಮೇಲಿರಬೇಕು ಎನ್ನುವುದು ಹುಡುಗಿಯರ ಸಹಜ ತುಡಿತ. ಅದಕ್ಕೆಂದೇ ತನ್ನ ಇಷ್ಟದ ಜೊತೆಗೆ, ಪರರ ಮೆಚ್ಚುಗೆಯನ್ನು ಗಳಿಸಲು ತನ್ನ ತಾನು ಅಲಂಕರಿಸಿಕೊಳ್ಳುತ್ತಾರೆ. !
ಪಟಪಟನೆ ಮಾತನಾಡಿ ಮೊದಲ ನೋಟಕ್ಕೆ 'ವಾಚಾಳಿ','ಗಂಡು ಬೀರಿ' ಎನ್ನಿಸಿಕೊಳ್ಳುವ ಹುಡುಗಿಯರದು ಸಾಮಾನ್ಯವಾಗಿ ನಿಷ್ಕಲ್ಮಶ ಹೃದಯ. ಆದರೆ 'Silent water & silent woman are very deep & Dangerous'. ತಣ್ಣಗಿರುವ, ಮೌನಿ ಹುಡುಗಿಯ ಧ್ಯಾನ ಎತ್ತ ಕಡೆಗಿದೆ ಎಂದು ಹೇಳುವುದು, ಯೋಚನಾ ಲಹರಿಯ ಜಾಡು ಹಿಡಿಯುವುದು ಭಾರಿ ಕಷ್ಟ.!
ಹುಡುಗರೇ ನಿಮಗೊಂದು ಕಿವಿಮಾತು ಅಪ್ಪಿ ತಪ್ಪಿಯೂ ನಿಮ್ಮ ಹುಡುಗಿಯ ಬಳಿ ಇನ್ನೊಬ್ಬ ಹುಡುಗಿಯನ್ನು ಹೊಗಳ ಬೇಡಿ. ಕೊನೆಗೆ film actressಗಳನ್ನೂ ಹೋಗಳಬೇಡಿ. ಹೊಗಳಿದಿರೋ ನಿಮಗೆ ಗ್ರಹಚಾರ ಕಾದಿದೆ ಎಂದೇ ಅರ್ಥ. ಅಸೂಯೆಯ ಕೋಳಿಯು ಅಲ್ಲೇ ಮೊಟ್ಟೆ ಇಟ್ಟೇ ಬಿಡುತ್ತದೆ. ಆ ದಿನವೇ ನಿಮ್ಮ ಹತ್ತಿರ ರಂಪಾಟ, ಜಗಳಾಟವಾಡಿ,ಮಾತು ಬಿಟ್ಟು ನಿಮ್ಮ ತಲೆ ಪೂರ್ತಿಯಾಗಿ ಕೆಟ್ಟು ಹೋಗುವಂತೆ ಮಾಡಿ ಬಿಡುತ್ತಾರೆ. ತನ್ನ ಮುಂದೆ ಪರ ಹುಡುಗಿಯ ಹೊಗಳಿಕೆಯನ್ನು ಅವರೆಂದೂ ಸಹಿಸರು. ಅವರ ಮುಂದೆ film actressಗಳನ್ನೋ,ಕಾಲೇಜಿನ beauty-queen ಗಳನ್ನೋ ತೆಗಳಿಬಿಡಿ, ನಿಮ್ಮ ಹುಡುಗಿ ಫುಲ್ ಖುಷ್ ಆಗದಿದ್ದರೆ ಹೇಳಿ.!
ಜೀವನದ ಅದಾವುದೋ ಭಾಗದಲ್ಲಿ ನಿಮಗೆ ಅನಿಸಿರಬಹುದು 'ಈ ಹುಡುಗಿಯರು ಧನಪಿಶಾಚಿಗಳು', ಹಣ ಇರುವವನ ಹಿಂದೆ ಬೀಳುವವರು ಎಂದು. ಇರಬಹುದು ಬದುಕಿನ safty ವಿಚಾರದಲ್ಲೂ ಹುಡುಗಿಯರು ಮುಂದು. ಭವಿಷ್ಯದ ಕನಸುಗಳನ್ನು ವಾಸ್ತವದ ತಳಹದಿ ಮೇಲೆ ಹೆಣೆಯುತ್ತಲೇ ಇರುತ್ತಾರೆ ಈ ಮಿಂಚು ಕಂಗಳ ಹುಡುಗಿಯರು .
ಹುಟ್ಟಿದ ಮನೆಯ ಬೆಸುಗೆ, ಬಾಂಧವ್ಯಕ್ಕೆ , ಮರ್ಯಾದೆಗೆ ಬೆಲೆಕೊಟ್ಟು .. ಮನಸಾರೆ ಪ್ರೀತಿಸಿದ ಹುಡುಗನ ಬಿಟ್ಟು ಇನ್ನೊಬ್ಬನ ತಾಳಿಗೆ ಕೊರಳು ಒಡ್ಡಿಕೊಳ್ಳುವ ಹುಡುಗಿ ಆ ಕ್ಷಣಕ್ಕೆ cheat ಅಂತ ಅನಿಸಬಹುದು..
ಹುಡುಗರಲ್ಲಿ ಆಕಾಂಕ್ಷೆ , ಛಲ ಜಾಸ್ತಿ ಇದ್ರೆ .. ಹುಡುಗೀರು ಹುಟ್ತಾ ಕನಸುಗಾರ್ತಿಯರು..ಭಾವನೆಗಳನ್ನು ಮೂಟೆಕಟ್ಟಿ , ಕನಸುಗಳಿಗೆ ಕೊಳ್ಳಿ ಇಟ್ಟು ಸಪ್ತಪದಿ ತುಳಿಯುವ ಹುಡುಗಿಯ ಮದುವೆಗೆ ಹೋಗಿಬನ್ನಿ ನಿಮಗೂ ಅರ್ಥ ಆಗತ್ತೆ.. ಪಕ್ಕದಲ್ಲಿ ಮುಂದಿನ ಜೀವನದ ಒಡೆಯ... ಎದುರಲ್ಲಿ ಮನದ ಪ್ರೀತಿಯನ್ನೆಲ್ಲಾ ಧಾರೆಯೆರೆದು ಪ್ರೀತಿಸಿಕೊಂಡ ಹುಡುಗ .. ಇದ್ರೆ..?!! ಜೀವನದ ಒಂದು ಹಂತದಲ್ಲಿ ಅವಳ ಗಂಡನಲ್ಲೂ ಒಂದು levelಗೆ ಅವಳ 'ಹುಡುಗನನ್ನ ' ಹುಡುಕೇ ಹುಡುಕುತ್ತಾಳೆ... !
ನಿಮ್ಮನ್ನ ಪ್ರೀತಿಸೋವಾಗ ನಿಮ್ಮ ಡಬಲ್ ಪ್ರೀತಿ ಕೊಟ್ಟಿರ್ತಾಳೆ .. ಅದ್ಕೆ ಅವಳು unforgetable ..!! ಅವಳಲ್ಲಿ ಪ್ರೀತಿಸೋ ಅಮ್ಮ ಇರ್ತಾಳೆ .. ಕಾಲೆಳೆಯೋ ತಂಗಿ ಇರ್ತಾಳೆ.. care ಮಾಡೋ ಅಕ್ಕ ಇರ್ತಾಳೆ .. ಬೇಕಾದಾಗ guide ಮಾಡೋ friend ಇರ್ತಾಳೆ ...ಅದ್ಕೆ ಬಿಟ್ಟು ಹೋಗ್ತಾಳೆ ಅನ್ನೋ ಭಯ ಇದ್ರೂ.. ಗೊತ್ತಿದ್ರೂ ನೀವು ಪ್ರೀತಿಸ್ಬಿಡ್ತೀರಾ ... ಅಲ್ವಾ???
ಹುಡುಗರಿಗಿಂತ ಮಾನಸಿಕವಾಗಿ ಹುಡುಗಿಯರೇ ಗಟ್ಟಿಗಿತ್ತಿಯರು, ಅಥವಾ ನಿಸರ್ಗ, ಅಥವಾ ಪರಿಸ್ಥಿತಿ ಅವರನ್ನು ಹಾಗೆ ಮಾಡಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಇನ್ನೊಬ್ಬನ ಜೊತೆ ಹಾಯಾಗಿ ಹಿಂದಿನದೆಲ್ಲ ಮರೆತು (?) ಇದ್ದುಬಿಡುತ್ತಾರೆ. ಅಥವಾ ಎಂಥದ್ದೋ ಸನ್ನಿವೇಶಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇದು ಅರಿವಾಗಿಯೇ ನಮ್ಮ ಯೋಗರಾಜ ಭಟ್ಟರು "ಹೆಣ್ಣಮಕ್ಳೆ ಸ್ಟ್ರಾಂಗು ಗುರು" ಅಂದು ಹೇಳಿದ್ದಿರಬೇಕು .!
ಜಗತ್ತಿನ ಮನೋವಿಜ್ನಾನಿಗಳೆಲ್ಲ ಇನ್ನೊಂದು P.Hd ಬರೆಯುವಷ್ಟಿರೋ ವಿಷಯದ ಬಗ್ಗೆ 0.01% ಬರೆದಿದ್ದೇನೆ. ಓದಿ ನೋಡಿ 'ನಮ್ಮ ದುನಿಯಾ' ಹೇಗಿದೆ ಹೇಳಿ .
ಓರ್ವ ಹುಡುಗಿಯನ್ನು ಆತ್ಮೀಯ ಸ್ನೇಹಿತೆಯಾಗಿ,ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿ. ಆಗ ನಿಮಗೆ ನಿರ್ಮಲ ಸ್ನೇಹದ ಜೊತೆಗೆ, ಪ್ರೀತಿಯ ಉದ್ದಗಲಗಳ ದರ್ಶನವಾಗುತ್ತದೆ. ಜಗತ್ತಿನ ಜೀವಂತ ವಿಸ್ಮಯಗಳ ದರ್ಶನವಾಗುತ್ತದೆ.!
ಹುಡುಗೀರ ಬಗ್ಗೆ ನೋ ಕಮೆಂಟ್ಸ್ :)
ReplyDeleteಚೆನ್ನಾಗಿದೆ ನಿಮ್ ದುನಿಯಾ.
:)nice soumya iShTa aytu baraha.
ReplyDeleteಹುಡುಗಿರ ದುನೀಯಾ ಬಗ್ಗೆ ಚೆನ್ನಾಗಿ ಬರೆದಿದ್ದಿರಾ, ಅದ್ರೆ ನೀವು ಹೇಳಿದಂತೆ ಪ್ರೀತಿಸಿದರೆ ಅದು ಕ್ರತ್ರೀಮ ಅಂತ ನನ್ನಾ ಭಾವನೆ ......
ReplyDeleteಹುಡುಗಿಯರ ದುನಿಯಾ ಸೂಪರ್,
ReplyDeleteಆದ್ರೆ ಮದುವೆಯಾದ ನಂತರದ ಹುಡುಗಿಯರ ದುನಿಯಾ ನಿಮಗೆ ಗೊತ್ತಾ? ಮದುವೆಯಾದಮೇಲೆ ಗೊತ್ತಾಗುತ್ತದೆ ಅಲ್ವಾ? ಆ ತರಹದ ದುನಿಯಾವೇ ಬೇರೆ....ಏನಂತೀರಿ...
thank u vi.ra.he and sumakka :)
ReplyDelete@ mady
ReplyDelete@maddy ನಾನು ಹೇಳಿದ್ದು ಸ್ನೇಹಿತರ ಲೋಕದ ಪ್ರೀತಿಯ ಬಗ್ಗೆ. ಪ್ರೀತಿ ಎನ್ನುವ ಪದಕ್ಕೆ ಅರ್ಥ ತುಂಬಾ ದೊಡ್ಡದು ಇದೇ ಇಲ್ವಾ ? thank u :)
shivu sir ನಾನು ಬರೆದದ್ದು 'ಹುಡುಗಿಯರ ಬಗ್ಗೆ' ಮದುವೆಯಾದ ಮೇಲಿನ ಜೀವನ ನಂತರದ ಕಥೆ :) ಧನ್ಯವಾದಗಳು :)
ReplyDeleteBaraha sooper..Ishtondu vishya gottirle illa.
ReplyDelete:)nice write up, thanx
ReplyDeleteHudugira bagge comments madoke hedrike ri,
ReplyDeletenimde sangha sansthe antella bandre enu madodu :)
chennagide lekhana
ಹುಡುಗಿಯರ ಬಗ್ಗೆ ತುಂಬಾ ಚೆನ್ನಾಗಿ ಬರದ್ದೆ ಸೌಮ್ಯ...interesting article
ReplyDelete"ಪಟಪಟನೆ ಮಾತನಾಡಿ ಮೊದಲ ನೋಟಕ್ಕೆ 'ವಾಚಾಳಿ','ಗಂಡು ಬೀರಿ' ಎನ್ನಿಸಿಕೊಳ್ಳುವ ಹುಡುಗಿಯರದು ಸಾಮಾನ್ಯವಾಗಿ ನಿಷ್ಕಲ್ಮಶ ಹೃದಯ. ಆದರೆ 'Silent water & silent woman are very deep & Dangerous'. ತಣ್ಣಗಿರುವ, ಮೌನಿ ಹುಡುಗಿಯ ಧ್ಯಾನ ಎತ್ತ ಕಡೆಗಿದೆ ಎಂದು ಹೇಳುವುದು, ಯೋಚನಾ ಲಹರಿಯ ಜಾಡು ಹಿಡಿಯುವುದು ಭಾರಿ ಕಷ್ಟ.! "...i liked this kane... :-)
ReplyDeleteNice one.... :) Istella observation kuda Orva hudugiyE maadOke sadhya.. alva? :)
ReplyDeleteಸೌಂದರ್ಯವೊಂದೆ ಅವರ ಬಂಡವಾಳ ಅಲ್ಲ. ಅಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಳಿತವಿದೆ, ಕುತೂಹಲ-ಮನೋನಿಗ್ರಹ, ಪ್ರೀತಿ ವಾತ್ಸಲ್ಯದ ಸೆಳೆತವಿದೆ, ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ.ನಾಜೂಕು-ನಯವಿದೆ. ನಗು-ಅಳುವಿನ ಹುಚ್ಚು ಹೊಳೆಯಿದೆ. ಚಾಣಾಕ್ಷತೆ-ಪೆದ್ದುತನ ಎರಡೂ ಸೇರಿಕೊಂಡಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. this was superb,,ree,sowmya,,neevu simply great kanri,,,,,keep writing,,u wl rock,,,,
ReplyDeleteNICE ONE.......HUDUGARA BAGGENU BARIRI
ReplyDeleteಸೌಮ್ಯ,
ReplyDeleteಚಂದ ಬರದ್ರಿ.ಇಸ್ಟ ಆತು.
ಇದು ಹುಡುಗಿಯರ ಇಂಟರ್ ವೆಲ್ವರೆಗಿನ ದುನೀಯಾ.
ಕುಸುಮಾ ಹೆಗಡೆ
thumba chennagide ree...
ReplyDeleteidee dina kittaduva hudugiyare bittirada snehiteyaragibiduttare..... oudu, neevu heliruva prathiyondu mathu nijaree.. nan ee thesis na approve madtheeni.. go ahead...
really superb..
ಯಾವುದೇ ವಿಚಾರಗಳನ್ನು ಧೈರ್ಯವಾಗಿ ಹೇಳುವ ಕಲೆ ನಿಮಗೆ ಸಿದ್ದಿಸಿದೆ. ಹುಡುಗಿಯರ ಪ್ರಪಂಚದ ಅನೇಕ ಮಜಲುಗಳನ್ನು ಸುಂದರವಾಗಿ ವಿವರಿಸಿದ್ದೀರ.ಉತ್ತಮ ನಿರೂಪಣೆ.ಗುಡ್ ಸೌಮ್ಯ ನೀವು ಬರಿತಾಯಿರಿ. ನಾವು ಓದ್ತಾ ಹೊಗ್ತೇವೆ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
Hi Soumya.. Nice Article.
ReplyDeleteJust one point I want to emphasize here.
"ಹುಡುಗರಿಗಿಂತ ಮಾನಸಿಕವಾಗಿ ಹುಡುಗಿಯರೇ ಗಟ್ಟಿಗಿತ್ತಿಯರು, ಅಥವಾ ನಿಸರ್ಗ, ಅಥವಾ ಪರಿಸ್ಥಿತಿ ಅವರನ್ನು ಹಾಗೆ ಮಾಡಿದೆ."
ಅಂತ ಹೇಳಿದಿರಲ್ಲ.. ಖಂಡಿತವಾಗಿಯೂ ಒಪ್ಪಿಕೊಳ್ತ್ಹೇನೆ.. ಆದ್ರೆ, ಹೇಳುವುದಾದರೆ, ಹೆಣ್ಣುಮಕ್ಕಳಿಗೆ ಸಿಗುವಷ್ಟು ಸಹಾನುಭೂತಿ ಹಾಗು
ಸಾಮಾಜಿಕ ನೆರವು ಗಂಡುಮಕ್ಕಳಿಗೆ ದೊರೆತಿದೆಯೇ? ಈ ಕಾರಣದಿಂದಲೇ ಅಲ್ಲವೇ ಗಂಡುಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ
ನೂರು ಬಾರಿ ಯೋಚನೆ ಮಾಡ ತಕ್ಕದ್ದು..?
Consequences could be extremely severe if anything goes wrong, whatever may be the quantum of the issue;
and if this happens, the price tendered by boys is extremely dear I would say.
If this substantiation of mine is felt incorrect or incompetent, you are most welcome to correct the same..
ಪಾಚು, ಜಿತೇಂದ್ರ, ಗುರು ಸರ್ ,ದಿವ್ಯಾ, ವಾಣಿ,ತೇಜಕ್ಕ,ಸತ್ಯಾ,ಗಿಳಿಯಾರ,ಕುಸುಮಾ,ಕಾವ್ಯ ಸುಗಂಧ,ಬಾಲು ಎಲ್ಲರಿಗೂ ಧನ್ಯವಾದಗಳು :)
ReplyDeleteಸುದರ್ಶನ್ ಅವರೆ ಮೊದಲಿಗೆ ಧನ್ಯವಾದಗಳು :)
ReplyDeleteನಾನು ಓರ್ವ ಸ್ತ್ರೀವಾದಿ ಚಿಂತಕಿಯಾಗಿ, ಅಥವಾ ಪೂರ್ವಾಗ್ರಹ ಪೀಡಿತಳಾಗಿ ಈ ಲೇಖನವನ್ನು ಬರೆದಿಲ್ಲ. ಇದು ಒಂದು ತಿಳಿ ಹಾಸ್ಯದ ಲೇಪವಿರುವ ಲೇಖನ. ಇಲ್ಲಿ ಮಹಿಳೆ ಅಥವಾ ಓರ್ವ ಹುಡುಗಿಯ ಸಾಮಾಜಿಕ ಸ್ಥಿತಿಗಳನ್ನು ಕೆಣಕಿಲ್ಲ. ಹಾಗೆ ಬರೆಯುವಂತಿದ್ದರೆ ಲೇಖನ ತೀವ್ರ ಸ್ವರೂಪವನ್ನು ತೆಗೆದುಕೊಳ್ಳುತ್ತಿತ್ತು. ನೀವು ಕೇಳಿರುವ ಪ್ರಶೆ ನನ್ನ ಲೇಖನದ ಭಾಗವಾಗಿ ಬರುವುದಿಲ್ಲ ಕ್ಷಮಿಸಿ.
ನಿಮ್ಮ ಎಲ್ಲಾ ಬರಹಗಳನ್ನು ಓದಿದೆ. ನಿಮ್ಮ ಬರಹಗಳಲ್ಲಿ ಒಂದು ವಿಶಿಷ್ಟವಾದ ಸದಭಿರುಚಿಯ ತುಂಟತನ , ವಾಸ್ತವಿಕ ವಿಮರ್ಶೆ ಅಭಿಪ್ರಾಯ ಮಂಡನೆ ಇದೆ . ಹೀಗೆ ಬರೆಯುತ್ತಾ ಇರಿ.
ReplyDeleteಸೌಮ್ಯ ಅವರೆ ನಿಮ್ಮ ದುನಿಯಾ ತುಂಬಾ ಚೆನ್ನಾಗಿದೆ ಕಣ್ರಿ.ನಿಮ್ಮ ಲೇಖನದಲ್ಲಿ ನನಗೆ ಎಲ್ಲಾ ಇಷ್ಟವಾಯಿತು, ಆದರೆ
ReplyDelete""ಜೀವನದ ಅದಾವುದೋ ಭಾಗದಲ್ಲಿ ನಿಮಗೆ ಅನಿಸಿರಬಹುದು 'ಈ ಹುಡುಗಿಯರು ಧನಪಿಶಾಚಿಗಳು', ಹಣ ಇರುವವನ ಹಿಂದೆ ಬೀಳುವವರು ಎಂದು."" ಎಂಬಾ ಹುಡುಗರ ಈ ಭಾವನೆಗೆ ನೀವು ಕೊಟ್ಟ ಸಮರ್ಥನೆ, ಯಾಕೋ ಸರಿಯಾದ ಸಮರ್ಥನೆ ಎನಿಸಲಲ್ಲ. ತಾನು ಪ್ರೀತಿಸುವ ಹುಡುಗ ಆರ್ಥಿಕವಾಗಿ ಚೆನ್ನಾಗಿದ್ದಾನೋ ಇಲ್ಲವೋ ಎಂದು ನೋಡಿಕೊಂಡು ಪ್ರೀತಿಸಿದರೆ ಇನ್ನೂ ಚೆನ್ನಾಗಿರುತ್ತದೆ ಅಲ್ಲವೆ??
ಸೌಮ್ಯ , ನೀವು ಬರೆಯುವ ಶೈಲಿ ಯಾವಾಗಲು ಮನೋಜ್ಞ್ಯವಾಗಿ ಇರುತ್ತೆ. ನೀವು ಕಾಣುವ ಕನಸಿನ ಲೋಕಕ್ಕೆ ಒಯ್ದು ಹೊಸ ಪ್ರಪಂಚಾನೆ ತೋರಿಸ್ತೀರ, ಒಂಥರಾ ಸಿನಿಮಾ ನೋಡಿದಂಗಿರುತ್ತೆ. ಹೀಗೆ ಬರೆಯುತ್ತಿರಿ.
ReplyDelete"Hudugeera manasu, vaichitrya ariyalaaradee oddado, HUDUGARge koncha secrets bituukottideera sou..." baraha aaramaagi, lahariyalli odisikondu hoguthe .... BHASHE chennagidhe
ReplyDeleteನಿಮ್ಮ (ಹುಡುಗೀರ) ದುನಿಯಾ ಚೆನ್ನಾಗಿದೆ ಸೌಮ್ಯಾ,
ReplyDeleteಇದಕ್ಕೂ ಜಾಸ್ತಿ ನಾನೇನು ಹೇಳಲ್ಲ, ನಿಮ್ಮ "ಹುಡುಗೀರ ದುನಿಯಾ" ಬಗ್ಗೆ.
ಗೆಳೆಯ,
ಅನಂತ ಹೆಗಡೆ
ಹೆಣ್ ಮಕ್ಳೆ ಸ್ಟ್ರಾಂಗು ಗುರು ಹೌದು ಗುರು ... :)
ReplyDeleteHi Soumya,
ReplyDeleteGood article..
Hi.. Soumya.. Really nice..
ReplyDeletehudugir artha madikollalu hodre nave vyarth agtivi bidi
ReplyDeleteಇವತ್ ನನೆನದ್ರು A to Z ಲ್ ಏನಾದ್ರು ಒಂದ್ ಆಗಿದಿನಿ ಅಂದ್ರೆ ಆದು ಒಬ್ಬ ಹೆಣ್ಮಗಳಿಂದ. I REST MY CASE..
ReplyDelete