Tuesday, August 31, 2010

ಹರಟೆ -ಲೈನ್ ಹೊಡ್ಯೋದು ..!




ನನ್ನ ಹಿಂದಿನ ಬ್ಲಾಗ್ ಪೋಸ್ಟ್ ಇದ್ದದ್ದು ಪ್ರೀತಿಯ ಬಗ್ಗೆ. ಸ್ವಲ್ಪ ಸೀರಿಯಸ್ ವಿಷ್ಯ ಆಗಿತ್ತು ಬೇರೆ. ಕೆಲವು ಸ್ನೇಹಿತರು ಕೇಳ್ತಿದ್ರು ಸ್ವಲ್ಪ funny ಆಗಿ ಒಂದು ಪೋಸ್ಟ್ ಹಾಕಬಾರದಾ ? ಅಂತ. ಆದ್ರೆ ಈವಾಗ ಯಾಕೋ ನಿಮ್ಮೆಲ್ಲರ ತಲೆ ಸ್ವಲ್ಪ ತಿನ್ನೋಣ ಅನ್ನಿಸ್ತಿದೆ. (ತಲೆ ತಿನ್ನೋದು ಒಂಥರಾ ನನ್ನ ಜನ್ಮಸಿದ್ದ ಹಕ್ಕು ಇದ್ದಂಗೆ. )ಇದರಿಂದ ಎರಡು ಲಾಭ ಇದೆ 1.ನಂಗೆ ತಲೆ ತಿಂದ ಖುಷಿ ಸಿಗತ್ತೆ 2.ನಿಮಗೆ ತಲೆ ಇದೆ ಅನ್ನೋದು ಗೊತ್ತಾಗತ್ತೆ. ಏನಂತೀರಾ? ನೀವು ಓದ್ತೀರಾ ಅಂದ್ರೆ ನಂಗೇನು ಪ್ರಾಬ್ಲಮ್ ಇಲ್ಲ. ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ.


ಈ ಹುಡುಗೀರನ್ನ ನೋಡೋ ಕ್ರಿಯೆಗೆ (ಕದ್ದುಮುಚ್ಚಿನೋ ನೇರವಾಗೋ ಅದು ಸೆಕೆಂಡರಿ) ನಾವೆಲ್ಲಾ ಮಾಮೂಲಾಗಿ ಕೊಡೊ ಟೈಟಲ್ಲು 'ಲೈನ್ ಹೊಡಿಯೋದು','ಸೈಟ್ ಹೊಯೋದು', 'ಡವ್ ಹೊಡ್ಯೋದು' ಇತ್ಯಾದಿ ಇತ್ಯಾದಿ ಅಲ್ವಾ? ಹುಡುಗ್ರು/ ಹುಡುಗೀರು ನಾವು ಎಷ್ಟೇ ಡೀಸೆಂಟು ಅಂತ ಪೋಸ್ ಕೊಟ್ರೂ ಒಂದಲ್ಲ ಒಂದು ಸಲ ಲೈನ್ ಹೊಡೆದೇ ಇರ್ತಾರೆ. ಇದು ಆ ಸೂರ್ಯ ಚಂದ್ರರ ಆಣೆಗೂ ಸತ್ಯ. ಸೂರ್ಯ ಚಂದ್ರರು ಇರುವಷ್ಟೇ ಸತ್ಯ. (ಅಮಾವಾಸ್ಯೆ ದಿನ ಚಂದ್ರ ಇರೋದಿಲ್ಲ ಮರಿ ಅಂತೀರಾ?) ನಾನು ಈಗ ಕೊರಿಯೋ ವಿಷ್ಯ ಯಾವ್ದು ಅಂತ ಗೊತ್ತಾಯ್ತಲ್ವಾ?


ಈಗ ನಾನು ಕೇಳೋದು ಏನು ಅಂದ್ರೆ.....ಅದ್ಕೆ ಲೈನ್ ಹೊಡಿಯೋದು ಅಂತಾನೆ ಯಾಕೆ ಹೇಳ್ತಾರೆ ? ಎಷ್ಟು ಥರ ಲೈನ್ ಹೊಡೀಬಹುದು? ಹುಡ್ಗೀರು ಲೈನ್ ಹೇಗೆ ಹೊಡೀತಾರೆ? ಸುಲಭವಾದ ವಿಧಾನ ಯಾವುದು ? ಯಾರಿಗೂ ತಿಳಿಯದೆ ಲೈನ್ ಹೊಡಿಯೋದು ಹೇಗೆ ? ಜೊತೆಗೆ ಇಂಥದ್ದೆಲ್ಲ ಪ್ರಶ್ನೆಗಳಿಗೆ ನನ್ನದೇ ಆದ ಉತ್ತರವನ್ನೂ ಕೊಡ್ತಾ ಇದೇನೆ. opinion changes from person to person ಅಲ್ವಾ ? ನಾನಿಲ್ಲಿ ಬರೆದದ್ದು just for entertainment. ಇದರಲ್ಲಿ ಬೇರೆ ಯಾವುದೇ ದುರುದ್ದೇಶಗಳು ಇಲ್ಲ. ಇಲ್ಲಿಬರುವ ಪಾತ್ರಗಳೆಲ್ಲ ಕೇವಲ ಕಾಲ್ಪನಿಕ.ಯಾವುದೇ ವ್ಯಕ್ತಿಯ ಜೊತೆ ಹೋಲುವಂತಿದ್ದರೆ ಅದು ಕಾಕತಾಳೀಯ ಮಾತ್ರ. !



ಹೌದು ಲೈನ್ ಹೊಡಿಯೋದು ಅಂತಾನೆ ಅಂತ ಯಾಕೆ ಹೇಳ್ತಾರೆ ? ನಮ್ಮ ಎದುರಲ್ಲಿರೋ ಒಂದು ಸುಂದರ ಹುಡುಗಿ/ ಹುಡುಗ್ರನ್ನ ಮಧ್ಯದಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಿಸಿಕೊಂಡು ನೋಡೋದನ್ನ ಮುಂದುವರಿಸ್ತೇವೆ ಅಲ್ವಾ ?ನೇರವಾಗಿ ನೋಡ್ತಾನೇ ಇರ್ತೇವೆ. ಆ ಕಡೆ ಜನ ಏನೆಂದುಕೊಳ್ಳಬಹುದು ಅನ್ನೋ ಯೋಚನೆ ತಪ್ಪಿ ಕೂಡ ಬರಲಿಕ್ಕಿಲ್ಲ. ಬಂದರೂ ಎದುರಿಗಿರುವ ಆಕರ್ಷಣಾ ಶಕ್ತಿಯೇ, ವಿಚಾರಶಕ್ತಿಗಿಂತ ಬಲಯುತವಾಗಿರುತ್ತದೆ (ನ್ಯೂಟನ್ನನಿಗೆ ಇದ್ಯಾಕೆ ಹೊಳೆಯಲಿಲ್ಲ? ಇಂತದ್ದೊಂದು ವಾದವಿದ್ದರೆ ಪುಸ್ತಕದಲ್ಲಿರೋ ನ್ಯೂಟನ್ನನ ಮೂರು ನಿಯಮಗಳೇನು 10 ನಿಯಮಗಳಿದ್ದರೂ ಬಾಯಲ್ಲೇ ಫಿಲಂ ಹಾಡುಗಳ ತರಹ ನಲಿಯುತ್ತಿದ್ದವೇನೋ) .



ಈಗ ಈ ಲೈನ್ ಹೊಡ್ಯೋದ್ರಲ್ಲಿ ಮುಖ್ಯವಾಗಿ ಮೂರು ಥರ ಇದೆ (ನನ್ನದೇ ಸಂಶೋಧನೆ ಇದು, ಉದಾಹರಣೆಯ ಸಹಿತ ವಿವರಿಸುತ್ತೇನೆ ಓದಿ):

1. Direct Lining (Straight Lining )

2.Zigzag Lining

3. Indirect Lining

Illustration1:

ಒಂದು ಸುಮಾರಂಥ ಪಟ್ಟಣದ ಬಸ್ಸು. ಸೀಟುಗಳೆಲ್ಲ ಭರ್ತಿಯಾಗಿ ಕೆಲವರು ನಿಂತಿದ್ದಾರೆ. ಒಂದು stylish ಸುಂದರ ಹುಡುಗಿ ಜೀನ್ಸ್ ತೊಟ್ಟು ಮುಂದೆ(ಡ್ರೈವರ್ ಹಿಂದೆ) ನಿಂತಿದ್ದಾಳೆ. ಒಂಥರಾ attitude ಬೇರೆ ಇರೋ ಹಾಗಿದೆ. ಬಸ್ಸಿನಲ್ಲಿರೋ ಹೆಣ್ಣು ಜಾತಿಗಳಿಗೆಲ್ಲ ಹೊಟ್ಟೆಯಲ್ಲಿ ಹುಣಸೆಹಣ್ಣು ಕಿವುಚಿದ ಭಾವ.ಬಸ್ಸಿನಲ್ಲಿರೋ ಗಂಡು ಜಾತಿಗಳಿಗೆಲ್ಲ (ವಯೋಮಿತಿಯಿಲ್ಲ)ಒಳಗೊಳಗೇ ಪುಳಕ,ಬೇಡವೆಂದರೂ ಕಣ್ಣುಗಳು ಅವಳನ್ನೇ follow ಮಾಡುತ್ತಿವೆ. ನೇರವಾಗಿ ಅವಳನ್ನೇ ನೋಡುತ್ತಿದ್ದಾರೆ, ಕಣ್ಣು ಕೂಡ ಮಿಟುಕಿಸದೆ, ತಿಂದೇ ಬಿಡುವಂತೆ. ಇದು Direct Lining. (ಹುಡುಗಿಯ ಎದುರಿಗೆ ಕೊಂಬುಗಣ್ಣ ಆಸಾಮಿ ಏನಾದರೂ ಇದ್ದು, ಹುಡುಗಿ ಗಟ್ಟಿಗಿತ್ತಿ ಇದ್ದು, ಹುಡುಗಿಗದು ತಿಳಿಯದೆ. ಕಪಾಳ ಮೋಕ್ಷಮಾಡಿ ....ಅದೆಲ್ಲ ಈಗ ಬೇಡ ಬಿಡಿ ).

Illustration 2:

ಮಂಗಳೂರು-ವೆರ್ಣ ಪ್ಯಾಸೆಂಜರ್ ಟ್ರೇನು. ಸಲ್ವಾರ್ ಹಾಕಿಕೊಂಡಿರುವ ಮುದ್ದಾದ ಹುಡುಗಿ (ಹುಡುಗೀರೆ ಮುದ್ದಾಗಿರ್ತಾರಾ?). ಎದುರಿಗೊಬ್ಬ so called ಡೀಸೆಂಟು ಹುಡುಗ.ಒಂದೆಳೆಯ ಕಾಡಿಗೆಯ ಮಿಂಚು ಆ ಹುಡುಗಿಯ ಕಣ್ಣುಗಳಲ್ಲಿ . ಕವಿಗಳು ವರ್ಣಿಸುವ ಕಮಲಲೋಚನೆಯ ಕಣ್ಣೋಟಕ್ಕೆ, ನಮ್ಮ ಡೀಸೆಂಟು ಹುಡುಗ ಕಪಿಯಾಗಿದ್ದಾನೆ. ಸೀದಾ ಡೈರೆಕ್ಟ್ ಲೈನ್ ಹೊಡಿಯೋಕೆ ಪೂರ್ತಿ ಧೈರ್ಯ ಸಾಲುತ್ತಿಲ್ಲ ಪಾಪ. ಒಮ್ಮೆ ಅವಳನ್ನು ನೋಡಿ ಅವಳು ಇವನತ್ತ ನೋಡುವಾಗ ದೃಷ್ಟಿ ಬದಲಿಸುತ್ತಿದ್ದಾನೆ. ಅವಳು ಬೇರೆಕಡೆ ನೋಡುವಾಗ ಅವಳ ಮೊಗದಲ್ಲೇ ಲೀನ ಹುಡುಗ.ಇದು ZIGZAG lining ಗೆ ಉದಾಹರಣೆ.


Illustration 3:
ಇನ್ನು ಕೆಲವು ಹುಡುಗರಿರ್ತಾರೆ ಸ್ವಲ್ಪ ಬಿಗುಮಾನ. ಹುಡುಗೀರೆ ಬೇಕಾದ್ರೆ ನಮ್ಮನ್ನ ನೋಡ್ಬೇಕು.ನಾವು ಅವರತ್ತ ತಿರುಗಿ ಕೂಡ ನೋಡೋದಿಲ್ಲ (ನೆನಪಿಡಿ ಬರೀ ತಿರುಗಿ ನೋಡೋದಿಲ್ಲ ). ಆದರೂ ಮನಸು ಕೇಳಬೇಕಲ್ಲ ? ಬೈಕಿನಲ್ಲಿ ಹೋಗೋವಾಗ ಹಿಂದೆ ಕುಳಿತ ಗೆಳೆಯ ತಿವಿದು ಹೇಳ್ತಾನೆ "ಗುರು ಫಿಗರ್ರೂ ಸುಪರ್ರೋ ".! ಏನ್ ಮಾಡೋದು ? ಬಿಗುಮಾನದ ಹುಡುಗ ಬೈಕ್ ಮಿರರ್ ನಲ್ಲಿ ಹಿಂದೆ ಇರೋ ಹುಡುಗಿನಾ ನೋಡ್ತಾನೆ . ಕಾಲೇಜ್ entrenceನಲ್ಲಿ ಹುಡುಗಿಯರಿಗಿಂತ ಮೊದಲು ಬಂದು notice ಬೋರ್ಡಿನಲ್ಲಿ ತಲೆ ಕೂದಲು ಬಾಚ್ತ ಹಿಂದೆ ಇರೋ ಹುಡ್ಗೀರ್ನ ನೋಡ್ತಾನೆ. ಇದು Indirect Lining ..!


ಇದೇನು ಎಲ್ಲ ಹುಡುಗರ ಬಗ್ಗೆ ಹೇಳ್ತೀರಲ್ಲ ಅಂತೀರಾ ? ನಿಲ್ರೀ ಸ್ವಲ್ಪ.ಒಂದ್ಸಲ ನನ್ನ ಸ್ನೇಹಿತ ಒಬ್ಬ ಕೇಳಿದ್ದ, "ಹುಡುಗಿರೇನು ಲೈನ್ ಹೊಡಿಯೋದೇ ಇಲ್ವಾ ?" ಅಯ್ಯೋ! ಯಾರು ಇಲ್ಲ ಅಂದ್ರು. ಮನುಷ್ಯರಲ್ವಾ ಹುಡುಗೀರು? ಹೊಡಿದೇ ಹೊಡೀತಾರೆ. ಇಲ್ದಿದ್ರೆ ನಮ್ಮ chocolate boys ರಣಭೀರ್, ಇಮ್ರಾನ್ ಖಾನ್ ಇವರಿಗೆಲ್ಲ ಫ್ಯಾನ್ಸ್ ಎಲ್ಲಿರ್ತಿದ್ರು ? (ಮನೇಲಿ ಸೀಲಿಂಗೋ, ಟೆಬಲ್ಲೋ ಫ್ಯಾನ್ಸ್ಇರ್ತಿತ್ತು ಅಷ್ಟೇ).ರೋಡ್ನಲ್ಲಿ ಚೆನ್ನಾಗಿರೋ ಹುಡುಗರು ಹೋದರೆ ನೋಡೇ ಇರ್ತಾರೆ ಬಿಡಿ ಈ ಹುಡುಗೀರು. ಆದ್ರೆ ನಾವು ನೋಡೇ ಇಲ್ಲ ಅನ್ನೋ ಥರ ಆಡ್ತಾರೆ ಅಷ್ಟೇ. .! ಅದ್ಕೆ ನಮ್ಮ ಮಂಗಳೂರು ಹುಡುಗೀರು ಮಳೆಗಾಲದಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡೆ ಇರ್ತಾರೆ .!ಆರ್ದೂ ಹುಡುಗೀರು zigzag lining ಇಷ್ಟ ಪಡ್ತಾರೆ. ನಮ್ಮ ಸಮಾಜ ಹುಡುಗೀರನ್ನ ಬೆಳೆಸಿರೋದೆ ಹಾಗೆ direct line ಏನಾದರೂ ಹೊಡೆದರೆ, ಅವಳಿಗೆ ಇಲ್ಲಸಲ್ಲದ ಪಟ್ಟ ಗ್ಯಾರಂಟೀ.


safe ಆಗಿ ಲೈನ್ ಹೊಡಿಬೇಕೋ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ತಿರುಗಾಡಿ. ಯಾರಿಗೂ ನೀವು ಯಾರನ್ನ ನೋಡ್ತಿದೀರಿ ಅನ್ನೋದೇ ಗೊತ್ತಾಗೋದಿಲ್ಲ. styleಗೆ ಸ್ಟೈಲು ಆಯ್ತು, ಲೈನ್ ಹೊಡೆದಂಗೂ ಆಯ್ತು. ಒಂದೇ ಗುಂಡಿಗೆ ಎರಡು ಹಕ್ಕಿಗಳು.!


ಇಷ್ಟೆಲ್ಲಾ ಹೇಳ್ತೀಯಲ್ಲ ನೀನು ಏನ್ ಮಾಡ್ತಿಯ ಅಂತ ಕೇಳ್ತೀರಾ ? ನಾನು ನೋಡಿ frank ಆಗಿ ಹೇಳ್ಬಿಡ್ತೇನೆ ನಾನು ಹುಡುಗ್ರನ್ನ ನೋಡ್ತೇನೆ , ಆದರೆ ಕೆಟ್ಟ ದೃಷ್ಟಿಯಿಂದ ಅಲ್ಲ .ಸೌಂದರ್ಯ ಇರೋದೇ ನೋಡೋದಿಕ್ಕೆ ಹೊಗಳೋದಿಕ್ಕೆ ಅಲ್ವಾ ? ಗಾಂಧೀಜಿಯವರ 'ಕೆಟ್ಟದ್ದನ್ನು ನೋಡಬೇಡಿ' ಅನ್ನೋದನ್ನು ಅವರ ಕ್ಷಮೆಯೊಂದಿಗೆ 'ಕೆಟ್ಟದಾಗಿ ನೋಡಬೇಡಿ ' ಅಂತ ಸಣ್ಣ ತಿದ್ದುಪಡಿ ಮಾಡಿ. ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. .!


ನಿಮ್ಮ ಸಮಯವನ್ನು ಹಾಳು ಮಾಡಿ, ನಿಮ್ಮಲ್ಲಿ ನಗೆಯ ಹಾಲುಕ್ಕಿದರೆ ನನ್ನ ಮೊದಲ ಹಾಸ್ಯಲೇಖನ ಸಾರ್ಥಕವಾದಂತೆ .!

53 comments:

  1. ಅಯ್ಯೋ...ನಿನ್ನ ಬರಹ ಓದಿ..'ನಾನು ಯಾವಾಗ್ಲಾದ್ರೂ ಲೈನ್ ಹೊಡೆದಿದ್ದು ನೆನಪು ಆಗ್ತಾ' ಅಂತ ಯೋಚ್ನೆ ಬಂತು..

    ಚೆನ್ನಾಗಿ ಬರದ್ದೆ. ಅಂತೂ ಸಕತ್ತಾಗಿದ್ದು! ಪ್ರಕೃತಿಯ ಸಹಜವಾದನಡವಳಿಕೆಗೆ ಇಷ್ಟೀಲ ವಿವರ ನೀಡಿದ ನಿನಗೆ ಶುಭಾಶಯಗಳು!!

    ReplyDelete
  2. ಥ್ಯಾಂಕ್ಸ್ a lot ಸುಮನಕ್ಕ .

    ReplyDelete
  3. ಹ್ಹ ಹ್ಹ ಸೂಪರ್..:))..ನಿನ್ನ ಸಂಶೋಧನೆ ಸಕತ್ತಾಗಿದ್ದು..!!

    ReplyDelete
  4. ಅಬ್ಬಾ..ಏನ್ ಬರೀತಿಯೇ ಮಾರಾಯಗಿತ್ತಿ..Superb. ನಂಗೆ ನಿನ್ನ autograph ಬೇಕು..ಮತ್ತೆ ಹುಡುಗಿಯರು zigzag lining ಕೊಟ್ಟಿದ್ದಕ್ಕೆ ಹುಡುಗರು ಕನಸಿನ ಲೋಕಕ್ಕೆ ಹೋಗ್ತಾರೆ.,ಅಕಸ್ಮಾತ್ direct lining ಕೊಟ್ಟಿ ಬಿಟ್ರೆ ಮುಗ್ದೋಯ್ತು :)

    ReplyDelete
  5. yaa harshad devre gati alwa? thank u.... :)

    ReplyDelete
  6. ಓಹೋ! ಹುಡುಗೀರು ಲೈನ್ ಹೊದಿತಾರಂಥಾ ಗೊತ್ತಿತು. ಕೂಲಿಂಗ ಗ್ಲಾಸ್ ಹಿಂದಿನ ಕಣ್ಣುಗಳ ಮಸಲತ್ತು ಏನೋ? ಹುಶಾರಿರಬೇಕು!
    ಚೆಂದದ ಲೇಖನ. ಹುಡುಗರಿಗೆ ಉಪಯೋಗ ವಾಗುತ್ತೆ. ನಂಗೆ too late ಬಿಡಿ!

    ReplyDelete
  7. ಏನೋ ಅವರವರ ಪಾಡು ಅವೆವರದು ಅಂದ್ಕೋತಿಸಿ. ಆದ್ರು ತುಂಬಾ ಕಥೆ ತುಂಬಾ interesting ಆಗಿ ಇತ್ತು. ಧನ್ಯವಾದಗಳು.

    ವಸಂತ್

    ReplyDelete
  8. ವಾವ್ ಏನ್ರೀ ಮೇಡಂ ಇಷ್ಟೊಂದು ಚೆನ್ನಾಗಿ ಲೈನ್ ಹೊಡಿಯೋ ಬಗ್ಗೆ ಬರ್ದಿದ್ದೀರ.ನಮ್ಮೂರ ಹೈಕಳು ನಾವ್ ಹೆಂಗೆ ಲೈನ್ ಹೊಡಿತಾ ಇದೀವಿ ಅಂತಾ ಚರ್ಚೆ ಶುರು ಮಾಡಿದ್ದಾರೆ,ಇನ್ನು ನಮ್ಮೂರ ಕನ್ನಡಕದ ಅಂಗಡಿಗಳಲ್ಲಿ ಕಪ್ಪು ಕೂಲಿಂಗ್ ಗ್ಲಾಸ್ ಸೋಲ್ಡ್ ಔಟ್ ರೀ .........!!!!! ಚೆನ್ನಾಗಿದೆ ಮುಂದುವರೆಸಿ.

    ReplyDelete
  9. ಸೌಮ್ಯ,
    ಅದಕ್ಕೆನಾ ಮಂಗಳೂರಿನ ಸುಮಾರು ಹುಡುಗಿಯರು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಓಡಾಡೋದು...... ತಿಳಿಸಿದ್ದಕ್ಕೆ ಧನ್ಯವಾದ...... ಹ್ಹ ಹ್ಹಾ... ಲೈನ್ ಹೊಡಿಯೋದರ ಬಗ್ಗೆ ಡಾಕ್ಟರೇಟ್ ಕೊಡಲು ನಾವೆಲ್ಲಾ ಬ್ಲಾಗ್ ಸ್ನೇಹಿತರ ಸಿಫ್ಹಾರಸ್ಸು ನಿಮಗೆ ಸಿಗುತ್ತದೆ .... ಹ್ಹ ಹ್ಹಾ..... ತುಂಬಾ ಚೆನ್ನಾಗಿ ಬರೆದಿದ್ದಿರಾ....

    ReplyDelete
  10. ಸೌಮ್ಯ ಲೈನ್ ಹೊಡೆಯೋದ್ರಲ್ಲಿ ಪಿ ಹೆಚ್ ಡಿ ಮಾಡೋ ತಯಾರಿ ಇದ್ದಂಗಿದೆ !! (ಅಂದ್ರೆ ಆ ಸಬ್ಜೆಕ್ಟ್ ನಲ್ಲಿ ಅಂತ ) ಹ..ಹ..ಹ ನಿನ್ನ ಪ್ರಥಮ ಹಾಸ್ಯ ಲೇಖನ ತುಂಬ ಚೆನ್ನಾಗಿದೆ. ಹೀಗೆ ಬರೀತಾ ಇರು .

    ReplyDelete
  11. I have't getting any words to comment on this.... It's Simply Superb.....
    "Nanage Cooling Glass Mahatva Gottirlilla... "

    ReplyDelete
  12. ಸೌಮ್ಯ... ಡವ್ ಹೊಡಿಯದು ಹೆಂಗಂತ ಹೇಳ್ಕೋಡೆ.... ;-) kidding ...nice write up... :-)

    ReplyDelete
  13. Hi Sowmya,

    Line hodeyo vishayadalli nanage tiliyada kelavu vishyagalannu tilkonde, kelavu uttama maahitigalannu kottiddiri, dhanyavadagalu, Madve aadmelu line hodeyo bagge enaadru vishesha maahiti nimmalli unte ?????

    Just kidding...Nice writing....keepit up...

    ReplyDelete
  14. ಸೌಮ್ಯ ಬೆಂಗಳೂರಿನಲ್ಲಿ ಎಲ್ಲರು- ಅಂದರೆ ಮುದುಕರಿಂದ ಸ್ಕೂಲ್ ಹುಡುಗರವರೆಗೆ - ಹುಡುಗಿಯರಿಗೆ most of the time direct ಲೈನ್ ಹೊಡಿಥಿರ್ತಾರೆ..! ಒಂದು ಚೂರು ನಾಚಿಕೆ ಇಲ್ಲ e ಗಂಡು ಜಾತಿಯವರಿಗೆ..! ನಾನು zigzag ಲೈನ್ ಹೊಡೆಯೋ ಹುಡುಗ..! ಅದನ್ನ ಒಪ್ಪಿಕೊಳ್ತ್ಹಿನಿ, ಆದರೆ ಕೆಟ್ಟದಾಗಿ ನೋಡೋದಿಲ್ಲ..

    ಹುಡುಗಿಯರು ಬಹಳ ಫಾರ್ವರ್ಡ್ ಇಲ್ಲಿ. ಅವರು ವಿಧ ವಿಧವಾಗಿ ಲೈನ್ ಹೊಡೆಯೋದನ್ನ ನೋಡಿದ್ದೆನಿ..!

    I love your post.. :)
    Your first funny post is really humorous..!
    Keep writing..! :D

    ReplyDelete
  15. TUMBAA VICHARASHILA 'BARAHA', FUNNY AAGI PRARAMBHAVAADARU NIMMA BARAHADALLI 'YUVAJANARA' ARTHVILLADA KAARYAGALA BAGGE MATTU SAMAAJADALLI 'HENNINA' BAGGE KEELAAGI KAANUVAVARA BAGGE SUKSHMAVAAGI TILISIDDIRAA....

    TUMBAA ARTHAPOORNA CHINTANE....

    ReplyDelete
  16. ಹೌದಾ?? ಧನ್ಯವಾದಗಳು ಸುಬ್ಬು ಸರ್ .and vasant

    ReplyDelete
  17. doctorate ಕೊಡ್ತೇವೆ ಅಂತ ಮತ್ತೆ ಕೂಲಿಂಗ್ ಗ್ಲಾಸ್ ಕೊಟ್ಟುಬಿಟ್ಟರೆ ಕಷ್ಟ :) thank u Divakar Sir

    ReplyDelete
  18. ಹ್ಹ ಹ್ಹ ... ಅಶೋಕ್ ಸರ್ ನೀವು ಇದನ್ನು ಪ್ರಯತ್ನಿಸಬಹುದು ಆದ್ರೆ ನನ್ನ ತತ್ವವನ್ನ ಅಳವಡಿಸಿಕೊಂಡು ..:P

    ReplyDelete
  19. thank u tarun .....ಲೈನ್ ಹೊಡೀವಾಗ ನಾನ್ನ ಲೇಖನದ ನೆನಪು ಮಾಡ್ಕೊಳ್ಳಿ ..:) ;)

    ReplyDelete
  20. ಹಮ್ ಏನ್ರೀ ಮೇಡಂ ಇಷ್ಟೊಂದು ಚೆನ್ನಾಗಿ ಲೈನ್ ಹೊಡಿಯೋ ಬಗ್ಗೆ ಬರ್ದಿದ್ದೀರ... ದಿನಾ ಬಸ್ ಅಲ್ಲಿ ಕುತು ಬೆಜಾರ್ ಅದಾಗ ಲೈನ್ ಹೊಡಿಯೋ ನಮಗೆ ಸರಿಯಾಗಿ ಗೊತಿರ್ಲಿಲ್ಲ ಇವೆಲ್ಲ.. ನಾನು ನಿಮ್ಮ Direct Lining (Straight Lining ) ಮತ್ತು Zigzag Lining ಎರಡರಲ್ಲಿ Zigzag better ಕರ್ಣ... because in direct only few seconds they look beautiful.. after that they look scrap, if she is a beautiful girl also.. i tried cleaning my glass also that time they look more scrap... but in zigzag at least 50% of time they look good.. :)
    ನಾನು ನೊಡೊದು ಯಾವುದೆ ಕೆಟ್ಟ ಬಾವನೆ ಇಂದಲ್ಲ ಮೇಡಂ.. ಪ್ರಕೃತಿಯ ನೈಜ ಸೌಂದರ್ಯವನ್ನು ನೊಡುವ ಅಸೆಯಿಂದಾಸ್ಟೆ, ಬೇರೆಯವರು ನಮ್ಮ ಬಗ್ಗೆ ತಪ್ಪು ತಿಳಿದರೆ ಅದು ಅವರವರ ಅವಕ್ಕೆ ಅವರವ ಬಾವಕ್ಕೆ ಬಿಟ್ಟ ವಿಷಯ.. :) good one very funny, nice and real fact .. :)

    ReplyDelete
  21. soory yaar.. mis agi delete madbitte so maatte add mad de... kandita ri line hoDivaaga kanDita nimma leKanada adarada mele hoditini... :)

    ReplyDelete
  22. ಅಬ್ಬಬ್ಬ ಹಿಂಗೆಲ್ಲ ಮಾಡ್ತಾರ? ಮುಂದಿನ್ಸರ್ತಿ ಲೈನ್ ಹೊಡಿಲಿ ನೋಡ್ಕೊತೀನಿ! :P

    ReplyDelete
  23. ನಂದು ಒಂಥರಾ indirect line.. ಹಹಹ..
    ನೀವು ಹಾಕಿರೋ ಚಿತ್ರ ನೋಡಿ.. ಆ ರೀತಿ ಚಮಕ್ ಷೋ ಮಾಡ್ತಾ ಹೋದ್ರೆ ನೋಡದೆ ಇರೋಕೆ ಆಗುತ್ತಾ.??
    ಹೊಸ ಪ್ರಯೋಗ ಚೆನ್ನಾಗಿದೆ..

    ReplyDelete
  24. ರೀ ಸೋಮ್ಯ ಈ ತರ ಎಲ್ಲ ಸಿಕ್ರೆಟ್ ಹೇಳಿ ಬಿಟ್ರೆ DAVE ಹೊಡೆಯೋ ಹುಡುಗರಿಗೆ ಮಜಾ ಇರೋಲ್ಲ ಮಾರಾಯಿತಿ ... ಚಂದದ ಹಾಸ್ಯ ಲೇಖನ

    ReplyDelete
  25. Line hodiyor secreat ella horage hakbityalle..

    mast baradde...

    line hodiyorigella jai ho !!!

    Pravi

    ReplyDelete
  26. hi Soumya..

    Tumba channagi/ Sakattagi bharediddirri..
    shubhashayagalu
    Manjunath C N

    ReplyDelete
  27. thumba channagi bardhidhira......
    nimindha thumba help agbodhu namge!!!!!

    ReplyDelete
  28. ಹೀಗೆ ನಿಮ್ಮ ಬ್ಲಾಗ್ ಕಿಂಡಿಗೆ ಬಂದೆ. ಲೇಖನ ನೋಡಿ ಓದುವ ಅನಿಸಿತು. ಬರಹ ಲೈವ್ಲಿ ಆಗಿದೆ. ಹುಡುಗಿಯರ ಮನಸ್ಸಿನ ಇನ್ನಷ್ಟು ಆತಂಕ, ಖುಷಿ, ದಿಗಿಲುಗಳನ್ನೂ ಮಡಿವಂತಿಕೆ ಬಿಟ್ಟು ಬರೆಯುತ್ತಾ ಹೋಗಬಹುದು ನೀವು ಅನಿಸುತ್ತದೆ. just try.

    ReplyDelete
  29. ಸೌಮ್ಯ ಮೇಡಂ, ಲೇಖನ ಸೂಪರ್. ನಾನ೦ತು ನೀವು ಹೇಳಿದ 3 ತರದ ಲೈನ್ ಉಪಯೋಗಿಸ್ತಾ ಇದ್ದೀನಿ. ಆದರೆ ಹೆಸರು ಇಟ್ಟಿರಲಿಲ್ಲ ಅಷ್ಟೇ.
    ....ಶ್ರೀ:-)

    ReplyDelete
  30. wawwww.. so nice lekhanari soumya... ellaru elladanna madeirtare but navu hege madiddivinta gotte iralla... nimma words odta haledella nenpaitu...
    adre innodu doubt obbobru nodene line hoditaralla like through orkut or sms and all adak yav line antira?(Distence liningaa) and interestingly aa line tumba strong and successfullu agirotte as per my experiance.

    ReplyDelete
  31. superb.......line hodeyuvaga enadru problem bandre....... solution kodtira taane??

    ReplyDelete
  32. ಹುಡುಗಿಯರ ಕೆಲ ಖಾಸಗಿ ವಿಷಯಗಳ ಬಗ್ಗೆ ಅವರೇ ಹೇಳಿಕೊಂಡ್ರೆ ಚೆನ್ನಾಗಿರುತ್ತದೆ.
    ಬಹುಷಃ ನಮ್ಮ ಬ್ಲಾಗ್ ಲೇಖನಗಳಲ್ಲಿ ನಿಮ್ಮ ಲೇಖನ ವಿಶಿಷ್ಟವಾದದ್ದು.ನೀವು ಆರಿಸಿಕೊಳ್ಳೋ ವಿಷಯಗಳು ಇದನ್ನು
    ಇನ್ನೂ ಆಸಕ್ತಿದಾಯಕ ಮಾಡುತ್ತವೆ.ಮುಂದುವರೆಸಿ....ಅಭಿನಂದನೆಗಳು..

    ReplyDelete
  33. Line hodiyodanna Line______(Gere (kannadadalli)) yeledastte sulaba madibitte.. excellent..:)

    ReplyDelete
  34. Wow! really super kanri sowmya.. neevu ee vishayada bagge eshtu research madidiralla!! wonderful!

    ReplyDelete
  35. tumba chennagide kanri... worth reading it :)

    ReplyDelete
  36. inmele line odibekadhrey nimma kathey nenapu agodhu guarentee

    ReplyDelete
  37. sou, line odiodrudu name galu chennagide, almost jasti mems zigzag ansutte ;)
    nanantu inmel 3 use madtinappa(samayakke takkaage) ;) sumne thamashege.....
    nice chennagide nimma baraha.....

    ReplyDelete
  38. Hai soumya ,,,, nivu tumba chennage baritiri ,,, nanu nimma blog post odiddu first time adarallu idanne first odiddu ,, nimma bhavanegalu tumba chenagive ,,, idanna odid mele nange tumba santosha aaytu ,, nimmalliro E 'Bhavanatmaka Kale' Adbutha !!!!
    ondriti GODGIFT antane helbahudu ,,
    So thank you kanri ,,

    ReplyDelete
  39. hai soumya.. yako gottille, akka heli karyavu ansta iddu.. so soumyakka hele helti.. nang nin bagge gottille. adru ni nange ishta aade. ni bardid e lekhana matra od di.. tumba ishta aatu. cholo barite..:-) n line hodya reeti hekottiddakke danyavadagalu..:-P

    ReplyDelete
  40. wow.....super kanri.....nim lekhana galannu ide tara odidre....devre gati!!!!!!! its so funny and true also.......

    ReplyDelete
  41. ayo naanu super agi line hodithini but yav huduginu enu Propos madila yake adare yes anthalo elva anth abhya aste

    ReplyDelete
  42. ನಿಮ್ಮ ಕನ್ನಡ ಲೇಕನ ಚನ್ನಾಗಿದೆ... ಕನ್ನಡದ ಕಂಪು ನಿಮ್ಮ ಬರಹದ ಸರಳತೆಯಲ್ಲಿ ಅಡಗಿದೆ...
    ಇದನ್ನ ಹಗೆ ಮುಂದುವರಿಸಿ... ನಮಗೂ ಸಹ ಕನ್ನಡದ ಕಂಪನ್ನ ಸುಸುತ್ತಿರಿ ಸುಗಂದಬರಿತ ಲೇಕನವಾಗಿರಲಿ...
    ಎಲ್ಲರಿಗೂ ಹಿತವೆನಿಸಲಿ.....

    ReplyDelete
  43. ಗಾಂಧೀಜಿಯವರ 'ಕೆಟ್ಟದ್ದನ್ನು ನೋಡಬೇಡಿ' ಅನ್ನೋದನ್ನು ಅವರ ಕ್ಷಮೆಯೊಂದಿಗೆ 'ಕೆಟ್ಟದಾಗಿ ನೋಡಬೇಡಿ ' ಅಂತ ಸಣ್ಣ ತಿದ್ದುಪಡಿ ಮಾಡಿ. ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. .!

    ಸೂಪರ್......

    ReplyDelete