ಹಸಿರಂಚಿನ ಲಂಗ ಘಲಘಲಿಸುವ ನೂಪುರ
ಕಣ್ಣಿಗೆ ನಿರೀಕ್ಷೆಯ ಕಾಡಿಗೆ ..
ಇನ್ನೂ ಕಾಯುತಿಹಳು ರಾಧೆ ವೃಂದಾವನದಲಿ
ಅದೇ ಕೃಷ್ಣನಿಗಾಗಿ .. ರಾಧೆಯ ಕೃಷ್ಣನಿಗಾಗಿ ...
ಎಲ್ಲಿಂದಲೋ ತೀಲಿಬರುತಿದೆ ವೇಣುಗಾನ
ಕಳೆದುಹೋಗಿದ್ದಾಳೆ ರಾಧೆ
ನೆನಪುಗಳ ಮೆರವಣಿಗೆಯಲ್ಲಿ
ಕನಸುಗಳ ಜಾತ್ರೆಯಲ್ಲಿ ..
ಕೃಷ್ಣ ಅರಮನೆಯನು ಬಿಟ್ಟು
ಭಾಮೆ- ರುಕ್ಮಿಣಿಯರ ಮರೆತು ಬಂದು
ಕೊಳಲನೂದುವನು....
ಕಾಲ ಗೆಜ್ಜೆಯ ದನಿಗೆ ಮರುಳಾಗುವನು
ಕೇದಗೆ,ಜಾಜಿಯ ಮಾಲೆ ಕಟ್ಟಿ ಮುಡಿಸುವನು
ಕಣ್ಣಲಿ ಕಣ್ಣಿಟ್ಟು ಚಂದಿರನ ಬಿಂಬವ ಹುಡುಕುವನು
ತೋಳ ತೆಕ್ಕೆಯಲಿ ಬಂಧಿಸುವನು ..
ಅದೇನೋ ಮಂಪರು ...
ಸೆರಗಿನಂಚನು ಯಾರೋ
ಹಿಡಿದೆಳೆದಂತೆ ಭಾಸವಾಗುತಿದೆ
ಹೃದಯ ತಾಳ ತಪ್ಪಿದೆ
ಕಣ್ಣೆವೆಗಳು ಅರೆಮುಚ್ಚಿ, ಗಲ್ಲಗಳು ಕೆಂಪೇರಿವೆ
ಇನ್ನೇನು ಬಂಧಿಸಿ ಬಿಡುವನು ಬಾಹುಗಳ ಬಿಗಿಯಲ್ಲಿ...
ಅರೆ ಏನಾಗಿದೆ ?
ಗೋಪಾಲನ ಮೈಯಲರಿಲ್ಲ
ಬಿಸಿಯುಸಿರೂ ಇಲ್ಲ !
ಹಿಂದಿರುಗಿ ನೋಡಿದರೆ ...
ಮುಳ್ಳಿಗೆ ಸಿಕ್ಕಿಕೊಂಡಿದೆ ಸೆರಗು
ಬಿಡಿಸುವಾಗ ಕೈಗೆ ಮುಳ್ಳೊಂದು ಚುಚ್ಚಿದೆ..
ಅದಾವುದರ ಪರಿವೆಯಿಲ್ಲ ರಾಧೆಗೆ ...
ಕಣ್ಣಂಚಲಿ ಅದೇ ನಿರೀಕ್ಷೆ ....
ಮತ್ತೆ ಕಾಯುತಿರುವಳು ರಾಧೆ ಕೃಷ್ಣನಿಗಾಗಿ
ಅದೇ ರಾಧೆಯ ಕೃಷ್ಣನಿಗಾಗಿ ...
ನಿರೀಕ್ಷೆಯೇ ಹೆಚ್ಚಿನ ಸ೦ತೋಷವನ್ನು ಕೊಡುವುದಲ್ಲವೇ?.
ReplyDeleteಸೊಗಸಾಗಿ ಮೂಡಿ ಬ೦ದಿದೆ ಕವನ
ನಿರೀಕ್ಷೆಯಲ್ಲಡಗಿದ ಜೀವನದ ನಾಡಿಯನ್ನು
ReplyDeleteಅದೆಷ್ಟು ಚೆನ್ನಾಗಿ ಹಿಡಿದಿದ್ದೀರಿ!
ಸುಂದರ ಕವನ..
Wov... tumba tumba ne chennagiddu...
ReplyDeleteಮತ್ತೆ ಬರುವನಾ ಮುರಳಿ
ರಾಧೆಯ ಹುಡುಕಿ ಮರಳಿ
?
ಗೊತ್ತಿಲ್ಲ.. ಆದರೆ ಇನ್ನೊಂದು ಮಾತಲ್ಲಿ
ಬರುವುದೇಕೆ?
ಅವನು ದೇವ
ಎಲ್ಲೆಲ್ಲೂ ಇರುವ
ರುಕ್ಮಿಣಿ, ಸತ್ಯಭಾಮೆ..
ಮತ್ತೆ ಹದಿನಾರು ಸಹಸ್ರ...
ಹಾಗೆ ರಾಧೆಯ ಜೊತೆಗೂ....
ಪ್ರವಿ
nanna nenapina saalige omme banni
http://nenapinasalu.blogspot.com/
dhanyavaadagalu protsahakke..... praveen nimma saalugalooo chennagive
ReplyDeleteಕೃಷ್ಣ ಹಾಗು ರಾಧೆಯ ಮೇಲೆ ಬರೆದಷ್ಟು ಕವಿತೆಗಳು ಬಹುಶಃ ಬೇರಾವ ಪಾತ್ರಗಳ ಮೇಲೂ ಹುಟ್ಟಿರಲಿಕ್ಕಿಲ್ಲ:) ಒಳ್ಳೆಯ ಕವಿತೆ ...........
ReplyDeletegood one. Nice poem. Keep writing :)
ReplyDeletewow superb......
ReplyDeletesuper
ReplyDelete