Monday, February 8, 2010

ನಾನು ಹೇಳುವುದ ಕೇಳು ಒಮ್ಮೆ..!!



ನನ್ನ ಕಣ್ಣ ಅಂಚಿನಲಿ
ಹನಿಯು ಜಾರುವ ಮುನ್ನ
ನಿನ್ನ ಅಂಗೈಯನ್ನು ಹಿಡಿದುಬಿಡು ಒಮ್ಮೆ .!


ನನ್ನ ಮನದ ಹಾಡು
ಮರೆತು ಹೋಗುವ ಮೊದಲು
ನನ್ನೆದುರು ಕುಳಿತು ಕೇಳಿಬಿಡು ಒಮ್ಮೆ..!

ನನ್ನೊಳಗಿನ ನಾನು
ಕಳೆದು ಹೋಗುವ ಮೊದಲು
ಓಡಿಬಂದೆನ್ನನು ಅಪ್ಪಿಬಿಡು ಒಮ್ಮೆ ..!


ನನ್ನ ಮನದ ಕನಸುಗಳು
ಬಾಡಿ ಹೋಗುವ ಮುನ್ನ
ನಿನ್ನ ಪ್ರೀತಿಯ ಜಲವ ಸುರಿದುಬಿಡು ಒಮ್ಮೆ .!




ನನ್ನೆದೆಯ ಬಡಿತವದು
ನಿಂತು ಹೋಗುವ ಮೊದಲು
ನಿನ್ನ ಹೆಸರನ್ನು ಕೇಳಿಬಿಡು ಒಮ್ಮೆ.. !




























8 comments:

  1. Tumba tumba.. tumba cholo iddu bhavanegalu kavanadallu photodallo.. tumba chennagi vyakthavaydu

    Pravi

    ReplyDelete
  2. ಚಿತ್ರಗಳ ಜೊತೆ ಭಾವಗಳ ಉತ್ಕಟತೆಯನ್ನು ಹಣೆದಿದ್ದೀರಿ.
    ಸೌಮ್ಯರವರೆ,ಚೆನ್ನಾಗಿದೆ ಕವನ.

    ReplyDelete
  3. chennaagive kavana... olle photo choose maadiddeeri....

    ReplyDelete
  4. ಭಾವ ಉಕ್ಕಿ ಹರಿತಾ ಇದೆ, ತು೦ಬಾ ಚೆನ್ನಾಗಿದೆ.

    ಇನ್ನೊ೦ದು ಚರಣ ಸೇರಿಸಲಾ?

    ನಗುಮೊಗದ ಛಾಯೆ
    ಮಾಸಿ ಹೋಗುವ ಮುನ್ನ
    ಹಿ೦ತಿರುಗಿ ನೋಡಿಬಿಡೊಮ್ಮೆ !

    ReplyDelete
  5. ಚೆನ್ನಾಗಿದೆ ಪರಮ ಆರನೇ ಚರಣ

    ReplyDelete
  6. This comment has been removed by a blog administrator.

    ReplyDelete
  7. Very nice, liked it very much

    ReplyDelete