Sunday, March 14, 2010

ನದಿಯ ತೀರದಲ್ಲೊಂದು ಒಂಟಿ ದೋಣಿ ..




ಮಂಗಳೂರಿನಿಂದ ಕುಮಟಾಕ್ಕೆ ಬರುವ ಹಾದಿಯಲ್ಲಿ ಏನಿಲ್ಲವೆಂದರೂ ಹನ್ನೆರಡು ನದಿ-ತೊರೆಗಳು ಸಿಗುತ್ತವೆ. ನದಿ ಎಂದಮೇಲೆ ಅದಕ್ಕೆರಡು ದಡಗಳು ಇರಲೇಬೇಕಲ್ಲವೇ ? ಆ ನದಿಗಳ ದಡದಲ್ಲಿ ಲಂಗರು ಹಾಕಿರುವ ಬೆಸ್ತರ ದೋಣಿಗಳು ನನ್ನನ್ನು ಬಹುವಾಗಿ ಕಾಡುತ್ತಿದ್ದವು. ಚಿಕ್ಕಂದಿನಿದಲೂ ಪ್ರಕೃತಿ ದ್ರಶ್ಯವಿರುವ ಚಿತ್ರ ಪಟಗಳು ನನ್ನನ್ನು ಸೆಳೆಯುತ್ತಿದ್ದವು. ಅದರಲ್ಲೂ ನದಿದಂಡೆ, ಅಲ್ಲೊಂದು ದೋಣಿ , ನದಿಯಲ್ಲಿ ಸಾಗುತ್ತಿರುವ ಹಾಯಿದೋಣಿ ಇರುವ ಚಿತ್ರಗಳೆಂದರೆ ಇದೇನೋ ಇಷ್ಟ. ಆ ಒಂಟಿ ದೋಣಿಗಳು ಅದೇನೇನೋ ಹೇಳುತ್ತಿರುವಂತೆ ಭಾಸವಾಗುತ್ತದೆ ನನಗೆ. ಅದಕ್ಕೆ ಜೀವವಿಲ್ಲ ಸರಿ, ಆದರೆ ನಮಗೆ ಜೀವವೂ ಇದೆ,ಭಾವವೂ ಇದೆ ಅಲ್ಲವೇ.?
ಒಂದು ಬಗೆಯ ಕುತೂಹಲ, ಒಂದು ಬಗೆಯ ಕಾಯುವಿಕೆ, ಒಂದು ಬಗೆಯ ಹತಾಶೆ , ಒಂದು ಬಗೆಯ ನಿರೀಕ್ಷೆ, ಒಂದು ಬಗೆಯ ನೆಮ್ಮದಿ ,ಏನೋ ಒಂದು ಖುಷಿ, ಮನದೊಳಗಿನ ಸಣ್ಣ ಭಯ.. ಹೀಗೆ ಹಲವು ಭಾವಗಳ ಸಮ್ಮಿಶ್ರಣ. ನವರಸಗಳ ಕೂಟ . ಆ ಒಂಟಿದೋಣಿ.


ಕಾಲಿಗೆ ಹಗ್ಗ ಹಾಕಿ ಮಂಚಕ್ಕೆ ಕಟ್ಟಿದ ತುಂಟ ಮಗುವಿನ ಸ್ಥಿತಿ ಆ ದೋಣಿಯದು .!ಒಂದು ಬಗೆಯ ಸ್ವಾತಂತ್ರ್ಯ , ಒಂದು ಬಗೆಯ ಬಂಧನವನ್ನು ಅನುಭವಿಸುವ ತ್ರಿಶಂಕು ಮನೋಸ್ಥಿತಿ . ಮಲೆನಾಡಿನ ತೋಟಗಳ ಮಧ್ಯದಲ್ಲಿರುವ ತೋಡುಗಳ ಮಧ್ಯ ಮಗುವೊಂದು ತನ್ನ ಅಂಗಿಯನ್ನು ಎತ್ತಿ ನಿಂತಂತೆ ಕಾಣುತ್ತದೆ ಆ ಒಂಟಿ ದೋಣಿ. ಒಂದೆಡೆ ನೀರಾಟದ ಮಜವಾದರೆ ಅಮ್ಮ ಎಲ್ಲಿ ಬೈಯ್ಯುವಳೋ ಎಂಬ ಸಣ್ಣ ಭಯ. ತನ್ನ ಹುಡುಗಿಯ ಜೊತೆ ಜಗಳವಾಡಿ ಬಂದು ಸಮುದ್ರದ ಅಂಚಿನಲ್ಲಿ ಸೂರ್ಯಾಸ್ತ ನೋಡುತ್ತಾ 'ಅವಳನ್ನು'miss ಮಾಡುತ್ತಿರುವ ಹುಡುಗನಂತೆ ಕಾಣುತ್ತದೆ ಒಮ್ಮೆ. ಮಗದೊಮ್ಮೆ ವೃದ್ಧಾಶ್ರಮದ ಮುಂದಿರುವ ಪುಟ್ಟ ಹೂದೋಟದ ಕೊನೆಯಲ್ಲಿರುವ ಹಳದಿ 'ಗುಲ್ಮೊಹರ್' ಗಿಡದ ಕೆಳಗೆ ಕಲ್ಲು ಬೆಂಚಿನಲ್ಲಿ ಕುಳಿತು ನೆನಪಿಗೆ ಬಾರದ ನೆನಪುಗಳ ಹುಡುಕಾಟದಲ್ಲಿರುವ ಅಜ್ಜನಂತೆ .!ಕೆಲವೊಮ್ಮೆ ಹೊಳೆಯಂಚಲಿ ಕುಳಿತು ತನ್ನ ಮುಂಗುರುಳುಗಳ ಜೊತೆ ಆಟವಾಡುತ್ತ ಇನಿಯನ ನೆನೆಯುತ್ತಿರುವ ಹುಡುಗಿಯಂತೆ. ಒಮ್ಮೊಮ್ಮೆ ಘೋರ ತಪಸ್ಸಿನಲ್ಲಿರುವ ಋಷಿಯಂತೆ. ವಿದೇಶಕ್ಕೆ ಹೋದ ಗಂಡ ವಾಪಸ್ಸಾಗುವ ಹಡಗಿನ ನಿರೀಕ್ಷೆಯಲ್ಲಿರುವ ರವೀಂದ್ರರ ಕಾದಂಬರಿಯ ಹೆಣ್ಣಂತೆ ಕಾಣುತ್ತದೆ .ಕೋಟಿ ಜನರ ನಡುವೆ ಇದ್ದರೂ ಕಾಣುವ ಆ ಏಕಾಂಗಿತನದ ಛಾಯೆ ಹೊತ್ತ ವ್ಯಕ್ತಿಯಂತೆ ಕಾಣುತ್ತಿದೆ, ಸಾವಿರ ಪುಟ್ಟ ಪುಟ್ಟ ಅಲೆಗಳ ಜೊತೆ ನಿಂತ ಆ ಒಂಟಿ ದೋಣಿ .ಕೆಲವೊಮ್ಮೆ ಕನ್ನಡ ಶಾಲೆ (ನಮ್ಮ ಕಡೆ primary ಸ್ಕೂಲ್) ಮೇಷ್ಟ್ರು ಹೊರ ಹಾಕಿದ ಹುಡುಗನಂತೆ ಭಾಸವಾಗುತ್ತದೆ . ಗಡಿ ಕಾಯುತ್ತಿರುವ ಯೋಧನಂತೆ ಕಂಡರೂ ಅಚ್ಚರಿಯಿಲ್ಲ .ಅಥವಾ ನಾವಿಕನಿಲ್ಲದೆ ಬದುಕಿಲ್ಲ ಎಂದು ಸಾರುತ್ತಾ ಶೂನ್ಯವನು ದಿಟ್ಟಿಸುತ್ತ ನಿಂತ ಬೈರಾಗಿ ಯಾಗಿಕಾಣುತ್ತಿದೆ . ಅಥವಾ ಅನಂತತೆಯಲ್ಲಿ ಒಂದಾಗುವ ವಿಶ್ವ ಮಾನವ ಸಂದೇಶವನ್ನು ಹೇಳುತ್ತಿದೆಯೋ?
ಕೊನೆಗೆ ಅಂದುಕೊಂಡೆ ಈ ಎಲ್ಲ ಕಾರಣಗಳಿಗೆ ಬೆಸ್ತರ ಜೀವನ ನೌಕೆ, ಕಲಾವಿದರಿಗೆ ಒಂಟಿ ದೋಣಿಯಾಗಿ ಕಾಡುತ್ತಿರಬೇಕು. ಜಡತೆಯಲ್ಲಿ ಚೇತನ ತುಂಬಲು, ಕಾಣಲು ಸೃಜನ ಶೀಲ ಮನಸೊಂದು ಬೇಕಷ್ಟೇ.. !

9 comments:

  1. ಕನಸುಗಳು ನನಸಾಗಿ ಬಿಟ್ಟರೆ , ಕನಸು ಕಾಣಲು ಇರುವ ಅರ್ಥವೇನು?? i liked this caption.
    those who travel by konkan railway they can enjoy the nature as u explained

    ReplyDelete
  2. I liked it...but ella kadeyallu hudugaranne compare maadiddu koncha besaravaaytu...udaaharanege...kannada shaaleyalli huduganaa horage haakiddu...:) but Kalpane tumba chanaagi moodi bandide... :) Keep writing Soumya...

    ReplyDelete
  3. ನಿಮ್ಮ ಕಲ್ಪನೆಗಳು ಅದೆಷ್ಟು ಮುಗ್ಧ, ಸುಂದರ, ಮತ್ತು ಚೇತೋಹಾರಿಯಾಗಿವೆಯೆಂದರೆ ಅದರೆದುರು ವಾಸ್ತವವನ್ನಿರಿಸಿದರೆ ಅವುಗಳಿಗೆ ನೀರೆರೆಚಿದಂತಾಗುತ್ತದೇನೋ ಎಂಬ ಭಯವಾಗುತ್ತದೆ. ನೀರುಂಡು (ವಾಸ್ತವದ ಅರಿವಿನಲ್ಲೇ) ಚಿಗುರಲಿ ಎಂಬ ಆಶಯದೊಂದಿಗೆ ಆ ವಾಸ್ತವವನ್ನು ತಿಳಿಸಲು ಇಷ್ಟಪಡುತ್ತೇನೆ.
    ಅದೇನೆಂದರೆ ನಿಮ್ಮಲ್ಲಿ ಅಂತಂತಹ ಲಹರಿಗಳನ್ನು ಹುಟ್ಟಿಸಿದ ಆ ದೋಣಿಗಳು (ಮಂಗಳೂರಿನಿಂದ ನಿಮ್ಮೂರತನಕ) ಬಹುತೇಕ ೯೦% ರಷ್ಟು ಅಕ್ರಮ ಮರಳು ದಂಧೆಯ ಕಾರ್ಯಾಗಾರಗಳು! (ಅಲ್ಲಲ್ಲಿ ಹಿನ್ನೀರ ಮೀನುಗಾರಿಕೆಗೂ ಉಪಯೋಗವಾಗುತ್ತವೆ) ಯುಗಾಂತರದ ಸವಕಳಿ ಮತ್ತು ಸಾರಿಗೆಯಿಂದ ನದಿಯ ಒಡಲಲ್ಲಿ ಶೇಖರವಾದ ಮರಳನ್ನು ಬಗೆಬಗೆದು ಮತ್ತೆಲ್ಲೋ ಹಣವಂತರಿಗೆ ಅನುಕೂಲವಾಗಲೆಂದು ಕಟ್ಟಲ್ಪಡುತ್ತಿರುವ ಕಟ್ಟಡಗಳಿಗೆ, ಸರಕಾರಿ -ಖಾಸಗಿ ದರೋಡೆಕೋರರ ಪ್ರಾಜೆಕ್ಟುಗಳಿಗೆ ಮೂಲವಸ್ತುವನ್ನು ಒದಗಿಸುವ ಮೌನ ಕಾರ್ಖಾನೆಗಳು. ಇದರ ಪರಿಣಾಮ ದಿನದಿಂದ ದಿನಕ್ಕೆ ಮರಳು ದುರ್ಲಭ ಮತ್ತು ದುಬಾರಿಯಾಗಿ, ನೀರಿನ ಹರಿವಿನಲ್ಲಿ ವ್ಯತ್ಯಾಸವಾಗಿ, ಜಲವಾಸಿ ಜೀವರಾಶಿಗಳಿಗೆ ಸರಿಯಾದ ಖನಿಜಾಂಶ ಸಿಗದೆ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಬಡ ಮದ್ಯಮವರ್ಗಗಳ ಮನೆಯ ಕನಸ್ಸು ಕನಸಾಗೆ ಉಳಿಯುವಂತಾಗುತ್ತಿದೆ.(ಕೆಲವು ಕನಸುಗಳು ಕನಸಾಗೆ ಇದ್ದರೆ ಚೆನ್ನ ....!ಎಂಬುದಿಲ್ಲಿ ವಿಡಂಬನೆಯಷ್ಟೆ)
    ಸುಂದರ ಕಲ್ಪನೆಗಳ ಜೊತೆಗೆ ವಾಸ್ತವದ ಅರಿವೂ ಸೇರಿದರೆ ಕನಸುಗಳಿಗೆ ಅದೆಂತಹ ಮಾರ್ಖಾಂಡೇಯ ಶಕ್ತಿ ಬರುತ್ತದಲ್ಲವೆ?

    ReplyDelete
  4. ಕಲ್ಪನೆ ಬಹಳ ಚೆನ್ನಾಗಿದೆ

    ReplyDelete
  5. ಸೌಮ್ಯ...ಮಂಗಳೂರಿನ ಸುಮಾರು ೯-೧೦ ವರ್ಷದ ನನ್ನ ಕಾಲೇಜ್ ಸಮಯದಲ್ಲಿ ನಮಗೂ ದೋಣಿಗಳಿಗೂ ವಿಶೇಷ ನಂಟಿತ್ತು....ಸಮುದ್ರಕ್ಕೂ ಹೋಗುತ್ತಿದ್ದೆವು....ದೂರ ದೂರ ಯಾಂತ್ರೀಕೃತ ದೋಣಿಯಲ್ಲಿ.....ಚನ್ನಾಗಿದೆ ನಿಮ್ಮ ಲೇಖನದ ಶೈಲಿ..ಮುಂದುವರೆಯಿರಿ....

    ReplyDelete
  6. ಸತ್ಯ... ತುಂಬಾ ಸತ್ಯ... ""ಜಡತೆಯಲ್ಲಿ ಚೇತನ ತುಂಬಲು, ಕಾಣಲು ಸೃಜನ ಶೀಲ ಮನಸೊಂದು ಬೇಕಷ್ಟೇ.. ! ''' ... ತುಂಬಾ ಚೆನ್ನಾಗಿದೆ ನಿಮ್ಮ ಬರಹ ಶೈಲಿ....

    ReplyDelete
  7. ಎಲ್ಲರಿಗೂ ಧನ್ಯವಾದಗಳು... ನೂತನರವರೆ.. ನೀವು ಹೇಳಿರುವುದೆಲ್ಲವೂ ಸತ್ಯ..ಅಕ್ರಮ ಮರಳು ಸಾಗಣೆಗೆ ದೋಣಿಗಳು ಬಳಕೆಯಾಗುತ್ತಿವೆ . ಅದನ್ನೂ ನಾನು ನೋಡಿದ್ದೇನೆ. ಅಕ್ರಮ ಗಣಿಗಾರಿಕೆ ಇದ್ದಂತೆ ಇದೂ ಒಂದು ಪಿಡುಗಾಗುತ್ತಿದೆ. ಉಳ್ಳವರೂ ಸಿಗರೇಟು ಸೇದಿ ಬಾರಲ್ಲಿ ಕುಡಿದರೆ. ಇಲ್ಲದವರು ಬೀಡಿ ಸೇದಿ ಕಂಟ್ರಿ ಸಾರಾಯಿ ಕುಡಿದಂತೆ ..!

    ReplyDelete
  8. ಹಹ :D :D ಹೊಸ ಹೊಸ ಗಾದೆಗಳೂ...simply superb :)

    ReplyDelete