Thursday, February 11, 2010

ಪ್ರೀತಿ ನೀನು ಹೀಗೇಕೆ ?.............?







"ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು ...!"ಮೊನ್ನೆ ಅಣ್ಣನಂತಿರುವ ಗೆಳೆಯನೊಬ್ಬ ಅವನ ಪ್ರೀತಿಯ ಬಗ್ಗೆ ಹೇಳಿ "ಈ ಪ್ರೀತಿ ಹಿಂಗೇಕೆ ಮಾಡತ್ತೆ ?" ಎಂದು ಕೇಳಿದಾಗ ಆ ಕ್ಷಣಕ್ಕೆ ಮೌನವೇ ನನ್ನ ಉತ್ತರವಾಗಿತ್ತು . ನಂತರ ಮನಸ್ಸು ಹಿಡಿದದ್ದು ಯೋಚನೆಯ ಹಾದಿಯನ್ನು .

"Love can't be explained but it can be expressed..! "ಪ್ರೀತಿಯ ರೂಪ ವಿವಿಧವಾದರೂ, ಗುಣ ಒಂದೇ .!ಪ್ರೀತಿ ಪ್ರೀತಿನೇ ಅಲ್ವಾ? ಅಂಗುಲಿಮಾಲನಂಥ ಅಂಗುಲಿಮಾಲನೆ ಭಗವಾನ್ ಬುದ್ಧನ ಪ್ರೀತಿಗೆ ಕರಗಿರುವಾಗ ಇನ್ನು ನಮ್ಮ ನಿಮ್ಮಂಥವರ ಪಾಡೇನು .?

ಇಲ್ಲಿ ನಾನು ಹುಡುಗರ ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದೇನೆ .ಒಂದು ಶುದ್ಧ ಪ್ರೀತಿ ಏಕೆ ಕಾಡತ್ತೆ ? ಹೇಗೆ ಕಾಡತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೇನೆ .. ಓದಿ ..


ಈ ಹುಡುಗರಿದ್ದರಲ್ವಾ?ನಿಜಕ್ಕೂ ಅಜೀಬ್ ಅನಿಸಿ ಬಿಡ್ತಾರೆ ಕಣ್ರೀ ."ಹೆಣ್ಣಿನ ಮನಸು ಮೀನಿನ ಹೆಜ್ಜೆ ಒಂದೇ ಥರ" ಅಂತ ಹೇಳ್ತಾರೆ . ಆದ್ರೆ ಹುಡುಗರು ನಿಜಕ್ಕೂ ಇನ್ನೂ ನಿಗೂಢ !.ಇವ್ನನೆಂಥ ಒರಟ.! ಎಂದು ಅನ್ಕೊಳ್ಳೋವಷ್ಟರಲ್ಲೇ ಅವನ ಮುಗ್ಧ ಮಗುವಿನ ಮನಸಿನ ಅನಾವರಣವಾಗಿರುತ್ತದೆ .!cute and sweet boy ಅನ್ಕೊಂಡಿರ್ತೇವೆ ..ಆದರೆ ಅವ್ನಲ್ಲಿರೋ ತಾರಕಾಸುರನ ದರ್ಶನ ಆಗಿರತ್ತೆ.!

ಸುಮ್ಮನೆ flirt ಮಾಡೋಕೆ, bikeನಲ್ಲಿ ಕೂರಿಸ್ಕೊಂಡು ಓಡಾಡಲಿಕ್ಕೆ ಚೆಂದದ ಹುಡುಗಿ ಬೇಕೆಂದರೂ. ಮನಸಿನ ಹುಡುಗಿ ಆರಿಸಿಕೊಳ್ಳುವಾಗ ಮಾತ್ರ ಅವಳ ಗುಣಕ್ಕೆ ಪ್ರಾಧಾನ್ಯತೆ. !ಅವಳ ಮುಗ್ಧ ಮೊಗಕ್ಕಿಂತ ಮನಸ್ಸಿಗೆ ಸೋತಿರ್ತಾರೆ .ಈ ಹುಡುಗರು .!ಕೆಲವು ಹುಡುಗರಿಗೆ 'ಬೊಮ್ಮರಿಲ್ಲು' ಫಿಲ್ಮಿನ 'ಹಾಸಿನಿ' ಇಷ್ಟ ಆದರೆ, ಇನ್ನು ಕೆಲವರಿಗೆ 'ವಿವಾಹ್'ನ 'ಪೂನಂ' ಇಷ್ಟ ಆಗ್ತಾಳೆ, ಮತ್ತೂ ಕೆಲವರಿಗೆ 'jub we met'ನ 'ಗೀತ್' ಇಷ್ಟ ಆಗ್ತಾಳೆ .!

ಹುಡುಗರು ಬೇಜಾನ್ ಪ್ರೀತಿ ಮಾಡೋದು ಅವರ ಮೊದಲ ಪ್ರೀತಿಯನ್ನ . ಅದೊಂಥರ innocent ಲವ್ .ಆದರೆ ವಿಪರ್ಯಾಸ ನೋಡಿ most of the time ಆ ಪ್ರೀತಿ ಅವರಿಗೆ ಸಿಕ್ಕಿರೋದಿಲ್ಲ ..! ಕಣ್ಣುಮುಚ್ಚಾಲೆ ಆಡತ್ತೆ ಆ ಪ್ರೀತಿ . ..ಸಿಗದ ಪ್ರೀತಿಗೆ ಮನಸ್ಸು ಕನವರಿಸುತ್ತದೆ, ಹಪಹಪಿಸುತ್ತದೆ .. !, ಎಷ್ಟರವರೆಗೆ ಅಂದ್ರೆ life partner ಅಂತ ಅನಿಸಿಕೊಂಡವರ ಜೊತೆಗೂ ಆ ಅದೇ ಪ್ರೀತಿಯನ್ನು ಮನಸು ಬಯಸುತ್ತದೆ . ಜೀವನದ ಕೊನೆ ಉಸಿರಿರೋ ವರೆಗೂ ಅದೊಂಥರ 'sweet pain' ಆಗೇ ಕಾಡ್ತಾ ಇರತ್ತೆ .
ಆ ಮೊದಲ ಪ್ರೀತಿ ಮೂಡಿರೋ ಹೊತ್ತಿನಲ್ಲಿ life settle ಆಗಿರೋದಿಲ್ಲ ..!

ಪ್ರೀತಿಯನ್ನು ಕಳೆದುಕೊಂಡ ಹುಡುಗನ ದುಃಖ ಇನ್ನೊಬ್ಬರಿಗೆ ಅರ್ಥವಾಗೋದು ಕಷ್ಟ .!ಒಬ್ಬಳು ಹುಡುಗಿ ಇಡೀ ಮನಸ್ಸನ್ನೆಲ್ಲ ಆವರಿಸಿ ಕೊನೆಗೆ ದೊಡ್ಡದೊಂದು ಶೂನ್ಯ ಬಿಟ್ಹೊಗಿರ್ತಾಳೆ..!ಅವಳಿಲ್ಲದ ಬದುಕನ್ನು ಎದುರಿಸೋದು ಹೇಗೆ ? ಅನ್ನೋ ಪ್ರಶ್ನೆ ಎದ್ದಿರುತ್ತದೆ .ಒಂದು ಮುಗ್ಧ ಪ್ರೀತಿ ಸದ್ದಿಲ್ಲದೇ ಬಾಡಿರುತ್ತದೆ, ಮನಸು ಸದ್ದಿಲ್ಲದೇ ಒಡೆದಿರುತ್ತದೆ,ಕಣ್ಣೀರು ಸದ್ದಿಲ್ಲದೇ ಹರಿದಿರುತ್ತದೆ ."ಪ್ರೀತಿ ಕುರುಡಾದರೆ, break up ಮೂಕಾಗಿರುತ್ತದೆ.!"

ಅವಳಿನ್ನು ನನ್ನ ಪಾಲಿಗಿಲ್ಲ ಅನ್ನೋ ಯೋಚನೆಗೆ ಜೀವ ಬರಡಾಗುತ್ತದೆ. ಉಸಿರಾಗಿ ಇದ್ದವಳು ಹೊರತು ನಿಂತಾಗ ಜೀವ ಚಡಪಡಿಸದೇ ಇರತ್ತಾ?

ಜಗಳ, ಅವಳ ಕಣ್ನೀರು,ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು(ಪುಟ್ಟ ಮನೆ,ಸಂಸಾರ ಮಕ್ಕಳ ಹೆಸರು ),ಆ possessiveness, ಒಟ್ಟಿಗೆ ಕೂತು ಕೇಳಿದ ಹಾಡುಗಳು ,ನೋಡಿದ ಸಿನೆಮಾಗಳು, ಅವನಿಗಾಗಿ ಇವಳು, ಇವಳಿಗಾಗಿ ಅವನು ಹಾಡಿದ ಹಾಡುಗಳು,ಚೆಂದನೆಯ giftsಗಳು (teddy bear ಕೊಡೋದು ಜಾಸ್ತಿ ಅಲ್ವಾ?)ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ garden bench, ಅಥವಾ ಯಾವುದೋ ಒಂದು ಮಾಮೂಲಿ ಜಾಗ,"ನನ್ನ ಬಿಟ್ಟು chocolate ತಿನ್ನ ಬೇಡವೋ" ಅಂದ ಹುಡುಗಿಯ ಮಾತು, ಬೆನ್ನಿಗೆ ಬೆನ್ನು ಕೊಟ್ಟು ಕುಳಿತ ಸಮುದ್ರದ ದಂಡೆ .ಇವೆ ಅಲ್ವಾ ಕಾಡೋದು ಕಂಗೆಡಿಸೋದು ...!?

ಪ್ರೀತಿ ಇಲ್ಲದ ಮೇಲೆ ? ಬಾಳಿಗೆಲ್ಲಿದೆ ಅರ್ಥ ?show me the meaning of being lonely ಹಾಡು ಇಷ್ಟ ಆಗತ್ತೆ ಅಲ್ವಾ? ಮನಸಿನ ಮೂಲೆಯಲ್ಲಿ 'ಹುಡುಗೀರೆಲ್ಲ ಹೀಗೆ' ಅನ್ನೋ ಭಾವ. ಪ್ರೀತಿಯ ಗಂಗೆ ಹರಿಯುತ್ತಿದ್ದರೂ ಕುಡಿವವರಿಲ್ಲ ..!

ಹುಡುಗಿ ಕೊಟ್ಟ ಗ್ರೀಟಿಂಗ್ ಕಾರ್ಡ್ ಇನ್ನೂ ಭದ್ರವಾಗಿದೆ ಹುಡುಗನ ಬಳಿ .ಹಲವು ವರ್ಷಗಳ ನಂತರ ಗಡಿಬಿಡಿಯ ಜೀವನದಲ್ಲೋ ಆ ಕಾರ್ಡು ಕೈಗೆ ಸಿಕ್ಕಾಗ ಮುಖದಲ್ಲೊಂದು ಮುಗುಳು ನಗೆಯ ಸುಳಿ.ಅವಳ ನೆನಪುಗಳನ್ನು ಭದ್ರವಾಗಿ ಇಟ್ಟಿದ್ದಾನೆ .ಸಮುದ್ರದಂಚಲಿ ಒಮ್ಮೊಮ್ಮೆ ಹೋದಾಗ ಗೊತ್ತಾಗುತ್ತದೆ ಕಣ್ನೀರು ಉಪ್ಪು ಎಂದು .!ಅದೇ ಕಲ್ಲು ಬೆಂಚನ್ನು ಸವರಿ ಬರ್ತಾನೆ . ನಿರ್ಜೀವ ಕಲ್ಲಿನಲ್ಲೂ ಹುಡುಗಿಯ ನೆನಪು ...FM ನಲ್ಲಿ ಅವಳು ಹಾಡಿದ ಹಾಡು ಕೇಳಿದಾಗ ಹಳೆಯ ನೆನಪುಗಳು ಮತ್ತೊಮ್ಮೆ ಕಾಡುತ್ತವೆ .!ತನ್ನಷ್ಟಕ್ಕೆ ನಗ್ತಾನೆ ಹುಡುಗ .. !


ಮುಂದೆ ಕೂದಲು ಬೆಳ್ಳಗಾಗಿ ,ಬಾಯಿ ಬೊಚ್ಚಾಗಿ (ಹಲ್ಲು set ಇರತ್ತೆ ಬಿಡಿ ) ,ಅರವತ್ತರ ಅರಳು-ಮರಳಿನಲ್ಲೂ ಮೊದಲ ಪ್ರೀತಿ ಕಾಡ್ತಾನೇ ಇರತ್ತೆ 'ಅದೇ ಹುಡುಗಿಯ' ಹೆಸರು ಕೇಳಿದಾಗ ಅಜ್ಜ ನಗ್ತಾನೆ ..!ಗಲ್ಲ ಕೆಂಪಾಗಲೂಬಹುದು ..!ಪ್ರೀತಿ ನೀ ಹೀಗೇಕೆ ???








13 comments:

  1. ನಿಮ್ಮ ಟಾಗ್ ವಾಕ್ಯ ತುಂಬ ಚೆನ್ನಾಗಿದೆ..
    """ಕಂಡ ಎಲ್ಲ ಕನಸುಗಳು ನನಸಾಗಿ ಬಿಟ್ಟರೆ , ಕನಸು ಕಾಣಲು ಇರುವ ಅರ್ಥವೇನು?? ಅದಿಕ್ಕೆ ಕೆಲವು ಕನಸುಗಳು ಕನಸಾಗೆ ಇದ್ದರೆ ಚೆನ್ನ ....! """

    ReplyDelete
  2. ಏನು ಹುಡುಗರನ್ನ ಬಹಳ ಅರ್ಥ ಮಾಡ್ಕೊಂಡ ಹಾಗೆಇದೆಯಲ್ಲ?? ಎನ್ ಸಮಾಚಾರ?? is der a person who explained these things to u??? ;)

    ReplyDelete
  3. no... sumanakka..... what i felt i wrote....... and as i undrstd my guy friends

    ReplyDelete
  4. Love guru-na neevu? :P May be you should start a consultancy services :)

    ReplyDelete
  5. ಕಳೆದು ಹೋದ ನೆನಪುಗಳನ್ನು ಹುಡುಹುಡುಕ್ಕಿ ತಂದಂತೆ ಅನಿಸುತ್ತ ಇದೆ.. ಮನಸ್ಸಿನ ಭಾವನೆಗಳಿಗೆ ಪದಗಳ ರೂಪ ಕೊಟ್ಟ ನಿಮ್ಮಗೆ ಧನ್ಯವಾದ...

    ReplyDelete
  6. ಏನು ಹೇಳಬೇಕೋ ತಿಳಿಯುತ್ತಿಲ್ಲ.. ಆದರೆ ಪ್ರೀತಿ ಕಳೆದುಕೊಂಡ ನೋವಿನಲ್ಲಿಯು, ಅವಳ ನೆನಪಿನಲ್ಲಿ ಖುಷಿ ಕಾಣುವ ಪರಿ ಮಾತ್ರ ಚೆನ್ನ . ಒಂದು ಕಡೆ ಕಣ್ಣಿರು ಬಂದರೆ , ಮತ್ತೊಂದು ಕಡೆ ಮುಗುಳ್ನಗೆ.. Mixed feelings ಅಂತಾರಲ್ಲ ಹಾಗೆ . Post ತುಂಬಾ ಚೆನ್ನ .. keep it up..

    ಆದರೆ ಒಂದು ಪ್ರಶ್ನೆ ಯಾವಾಗಲು ಕಾದುತೆ .. Most of the ಹುಡುಗೀರು ನಿಜವಾಗಿ ಪ್ರೀತಿ ಮಾಡುವ ಹುಡುಗನನ್ನು ತೊರೆದು ಮೋಸ ಮಾಡುವವನನ್ನ ಹೆಚ್ಹಾಗಿ ನಂಬಿರುತ್ತಾರೆ.. ನಂತರ ತಿಳಿದು ಗೋಳಾಡುತ್ತಾರೆ ....ಯಾಕೆ..??

    ReplyDelete
  7. Naanu yarnadru love madbeku anstha ede but inocent girl sigbekalla!!!!!!!!!!

    ReplyDelete
    Replies
    1. Love madbeku-anta anstu anta madbardu. Taanagiye aagbeku.
      Bartale kaayri :)

      Delete
    2. good solutoin my dear freind

      Delete
  8. abhilash neevu ankondirodu tappu paapa yella olle hudugiru haage yella olle hudugaru ondu saari mosa hoda mele kettavaragodu olle hudugarige olle hudugiru sigolla olle hudugarige olle hudugiru sigolla edu e jagada allalla preethiya niyama kuda

    ReplyDelete
  9. ಈ ಬಡ್ಡಿಮಗಂದ್ ಪ್ರೀತಿ ಅನೋದೋ ನಮ್ ಉಪೇಂದ್ರ ಅವ್ರ ಪಿಕ್ಚರ್ ಈದ್ ಹಂಗೆ ಆದ ಎಲ್ ಶುರು ಅಗತೋ ಯಾವಾಗ್ ಹಾಡ ಬರತೊ ಯಾವಾಗ್ ಫೈಟ್ ಬರತೊ ಯಾವಾಗ್ ಮುಗ್ದಹಂಗ ಆಗಿ ಪುನ ಶುರು ಅಗತೋ ಒಂದು ಗೊತಗಲ್ಲ ಕೊನೆಗೆ ಪಿಕ್ಚರ್ ನೋಡ್ಕೊಂಡ್ ಶಿವ ಅಂತ ಮನೆಗ್ ಬಂದ್ದಿದೆ ಭಾಗ್ಯ...

    ReplyDelete
  10. ನಿಜ ಪ್ರೀತಿಯನ್ನು ತುಂಬಾ ಸೊಗಸಾಗಿದೆ ವರ್ಣಿಸಿದ್ದೀರಿ ! Thank you.

    ReplyDelete
  11. ."ಪ್ರೀತಿ ಕುರುಡಾದರೆ, break up ಮೂಕಾಗಿರುತ್ತದೆ.!" Ultimate... I strongly agree with this.
    ಸಮುದ್ರದಂಚಲಿ ಒಮ್ಮೊಮ್ಮೆ ಹೋದಾಗ ಗೊತ್ತಾಗುತ್ತದೆ ಕಣ್ನೀರು ಉಪ್ಪು ಎಂದು.
    Entha maatu. Nija neevu hudugr mansalli parakaaya pravesha made ee maat aadirbeku :)

    ReplyDelete