Tuesday, February 23, 2010

ಚುಕ್ಕಿಗೊಂದು ಚಂದ್ರಮ ಸಿಕ್ಕ ...!








ಪುಟ್ಟಿ ಕೂತಿದ್ದಾಳೆ ಗೊಂಬೆಗಳ ಜೊತೆಗೆ, ಕೈಯಲ್ಲಿ ಅದೇ ಅವಳ favorite ಹಳದಿ ಬಣ್ಣದ teddy bear. ಹಳೆಯ teddy ಅದು.ಬಣ್ಣ ಸ್ವಲ್ಪ ಮಾಸಿದೆ. ಆದರೂ ಅದೇಕೋ ಈ ಪೋರಿಗೆ ಉಳಿದ ಬಣ್ಣ ಬಣ್ಣದ modern ಗೊಂಬೆಗಳಿಗಿಂತ ಅದೇ teddy ಇಷ್ಟ .ಹೆಸರು ಬೇರೆ ಇಟ್ಟಿದ್ದಾಳೆ 'ಚುಕ್ಕಿ' ಎಂದು.! ಆಟ,ಊಟ,ಪಾಠ ಕೊನೆಗೆ ನಿದ್ದೆ ಮಾಡುವಾಗಲೂ 'ಚುಕ್ಕಿ' ಇರಲೇಬೇಕು .!


ಅಮ್ಮನ ಕಾಯುತ್ತ ಕೂತಿದ್ದಾಳೆ ಪುಟ್ಟಿ ಮಂಚದಮೇಲೆ . ಸಂಜೆ ಬಂದು ರೂಮಿನ ಬಾಗಿಲಲ್ಲಿ ಇಣುಕಿದ ಅಮ್ಮನಿಗೆ ಕಂಡಿದ್ದು 'ಚುಕ್ಕಿ' ಯನ್ನು ಎದೆಗವಚಿಕೊಂಡು ಮಲಗಿದ್ದ ಪುಟ್ಟಿ . ಮಂಚದ ಬದಿಗೆ ಜರುಗಿದ ಅಮ್ಮ 'ಚುಕ್ಕಿ'ಯನ್ನು ಪುಟ್ಟಿಯ ಕೈಗಳಿಂದ ಬಿಡಿಸಿದ್ದಾಳೆ . ಮುದ್ದು ಪುಟ್ಟಿಯ ಹಣೆಗೆ ಹೂಮುತ್ತನಿಕ್ಕಿ 'ಚುಕ್ಕಿ'ಯನ್ನು ಎದೆಗವಚಿಕೊಂಡಿದ್ದಾಳೆ..! ನೆನಪಿನ ತೆಕ್ಕೆಗೆ ಜಾರಿದ್ದಾಳೆ ..!
ಅದೇ ಆ ಹಳದಿ teddy ಪುಟ್ಟಿಯ ಅಮ್ಮನದು ..! ಅವಳು ಮನಸಾರೆ ಪ್ರೀತಿಸಿದ್ದ ಹುಡುಗ ಅವಳ ಹುಟ್ಟಿದಹಬ್ಬಕ್ಕೆ ಚೆಂದನೆಯ cardನೊಂದಿಗೆ ಈ teddyಯನ್ನು ಅವಳ ಕೈಗಿತ್ತಿದ್ದ .ಆ ಹುಡುಗ ಅಮ್ಮನನ್ನು ಕರೆಯುತ್ತಿದ್ದದ್ದು 'ಚುಕ್ಕಿ' ಎಂದೇ ..! ಕೊನೆಗೆ ಮನೆಯವರ ಒತ್ತಾಯಕ್ಕೆ ಮಣಿದು ಮುದ್ದಾದ cardಗಳೊಂದಿಗೆ ಆ ಮುಗ್ಧ ಪ್ರೀತಿಯನ್ನು ಸುಟ್ಟುಬಿಟ್ಟಿದ್ದಳು.ಆದರೆ ಹುಡುಗನ ನೆನಪುಗಳನ್ನು ಈ ಹಳದಿ teddy ಯಲ್ಲಿ ಬಚ್ಚಿಟ್ಟಿದ್ದಳು. ಗಂಡನೊಂದಿಗೆ ಬರುವಾಗ teddyಯನ್ನೂ ಜೊತೆಗೆ ತಂದಿದ್ದಳು . ಅವಳ wardrobeನಲ್ಲಿ teddy ಬೆಚ್ಚಗೆ ಕುಳಿತಿತ್ತು .

ಪುಟ್ಟಿ ಹುಟ್ಟಿದ ನಂತರ ಲಾಲನೆ, ಪೋಷಣೆಗಳ ಮಧ್ಯೆ ಕಳೆದು ಹೋಗಿದ್ದಳು ಅಮ್ಮ . ಹಳೆಯ ನೆನಪುಗಳ ಮೇಲೆ ಮಂಜಿನ ಪದರವೊಂದು ಹಾಸಿತ್ತು .


ಅದೆಲ್ಲಿ ಕಂಡಿದ್ದಳೋ ಪುಟ್ಟಿ ಆ ಹಳದಿ teddyಯನ್ನು ಗೊತ್ತಿಲ್ಲ . ತನ್ನ ಐದನೇ ಹುಟ್ಟಿದ ಹಬ್ಬದ ದಿನ ಅದು ಬೇಕೆಂದು ಹಠ ಹಿಡಿದು ಕೂತಿದ್ದಳು ಕೊನೆಗೆ ಮಣಿದ ಅಮ್ಮ teddyಯನ್ನು ಪುಟ್ಟಿಯ ಕೈಗೆ ಕೊಟ್ಟಾಗ ಪುತ್ತಿಗೆ ಜಗತ್ತನ್ನೇ ಗೆದ್ದ ಖುಷಿ .ಮುದ್ದು ಮುದ್ದಾಗಿ 'ಚುಕ್ಕಿ' ಎಂದು ನಾಮಕರಣ ಮಾಡಿದಾಗ ಅಮ್ಮನಿಗೆ ಘೋರ ಆಚ್ಚರಿ ..! ನಂತರದ ದಿನಗಳಲ್ಲಿ 'ಚುಕ್ಕಿ' ಪುಟ್ಟಿಯ ಸರ್ವಸ್ವವಾಗಿತ್ತು.


ಇಂದು ಪುಟ್ಟಿಯ 19ನೇ ಹುಟ್ಟಿದ ಹಬ್ಬ ಅವಳ ಜೀವದ ಗೆಳೆಯ ಮುದ್ದಾದ cardನೊಂದಿಗೆ ತಿಳಿ ಗುಲಾಬಿ ಬಣ್ಣದ teddy bear ಒಂದನ್ನು ತಂದು ಪುಟ್ಟಿಯ ಕೈಗಿತ್ತಿದ್ದಾನೆ . ಪುಟ್ಟಿಯ ಕಣ್ಣುಗಳಲ್ಲಿ ಮಿಂಚು ..!


ರೂಮಿನೊಳಗೆ ಓಡಿ ಬಂದು 'ಚುಕ್ಕಿ'ಯಪಕ್ಕ ಹೊಸ teddy bear ಇಟ್ಟಿದ್ದಾಳೆ. ಬಾಗಿಲಿಗೊರಗಿ ನಿಂತ ಗೆಳೆಯ ನಗುತ್ತಿದ್ದಾನೆ. ಕಣ್ಣ ಅಂಚಲ್ಲಿ ನೀರ ಪಸೆ .

'ಚುಕ್ಕಿ'ಗೆ 'ಚಂದ್ರಮ' ಸಿಕ್ಕ ಸಂತಸ.. !!!!

6 comments: