Saturday, February 6, 2010

ಸಂಜೆ ಮುಳುಗುವ ಮುನ್ನ...!!









ಅಂದು ಶನಿವಾರ ..ಸುಮ್ಮನೆ ನಡೆಯುತ್ತಿದ್ದೆ ನನ್ನ ನೆಚ್ಚಿನ M.G roadನ ಉದ್ದಕ್ಕೆ, ಸಂಜೆ ಬೀಳುವುದರಲ್ಲಿತ್ತು , ಅದೇನೋ ಖುಷಿ ಆ ಜನಜಂಗುಳಿಯಲ್ಲಿ ಒಂಟಿಯಾಗುವುದು .! ವಾಹನಗಳಲ್ಲಿ ಓಡಾಡುವ ನಮಗೆ ಒಂದು ರಸ್ತೆ ತನ್ನಲ್ಲಿ ಏನೆಲ್ಲವನ್ನು ಬಚ್ಚಿಟ್ಟುಕೊಂಡಿರುತ್ತದೆ ಎಂದು ತಿಳಿದೇ ಇರುವುದಿಲ್ಲ.!

ದಿನದ ಗಲಾಟೆಯ ಮುಗಿಸಿ ಪಡುವಣದ ಬಾನಲ್ಲಿ ತನ್ನ ರುಜು ಹಾಕಿ ಹೊರಡಲು ತಯಾರಿಯಲ್ಲಿದ್ದ ಸೂರ್ಯ . ಮನೆಯ ಸೇರುವ ಗಡಿಬಿಡಿಯಲ್ಲಿದ್ದ ಮಹಿಳೆಯರು ,ಟ್ಯೂಶನ್ ಮುಗಿಸಿ ಸುಸ್ತಾಗಿದ್ದ ಮಕ್ಕಳು . ನಾನು high school ನಲ್ಲಿ ಇದ್ದಾಗ ಚಿತ್ರಕಲಾ ಪ್ರದರ್ಶನದಲ್ಲಿ 'ಜನಸಂಖ್ಯಾ ಸ್ಪೋಟ ' ತಲೆಬರಹದ ಅಡಿ ಜನರನ್ನು ಭರ್ತಿ ತುಂಬಿಕೊಂಡು ಒಂದು ಕಡೆ ವಾಲಿಕೊಂಡಿದ್ದ ಬಸ್ಸು ಇಲ್ಲಿ ಜೀವಂತವಾಗಿತ್ತು . !
ಬಹುಮಹಡಿಯ ಕಟ್ಟಡದ ತುದಿಗೆ ಏರಿ ಬಣ್ಣ ಬಳಿಯುವುದರಲ್ಲಿ ನಿರತರಾಗಿದ್ದ ಮೂವರು , ಅಜ್ಜನ ಕೈಹಿಡಿದು walking ಗೆ ಹೊರಟಿದ್ದ ಕೆಂಪು ಅಂಗಿಯ ಪೋರಿಯ ಹೆಜ್ಜೆಗಳಲ್ಲಿ ಅದೇನೋ ಹುರುಪು .!ಗೂಡಂಗಡಿಯ ಬಳಿ ನಿಂತು ಬೀಡಿ ಎಳೆಯುತ್ತಿರುವ ಕೂಲಿಯ ಮುದುಕನ ಹಣೆಯಲ್ಲಿ ನೆರಿಗೆಗಳ ಮೆರವಣಿಗೆ. courierಗಳ ಹಾವಳಿಯಿಂದಾಗಿ ಮೆಲ್ಲನೆ ಉಸಿರಾಡುತ್ತಿರುವ ಅಂಚೆ ಕಚೇರಿಯ ಪಕ್ಕದ ಖಾಲಿ ಜಾಗದಲ್ಲಿ ಒಲೆ ಹೊತ್ತಿಸಿರುವ ಜೋಪಡಿ ಕುಟುಂಬ. ಮೂರುವರೆ ಕಾಲುಗಳಲ್ಲಿ ಓಡಾಡಿಕೊಂಡಿದ್ದ ನಾಯಿಯನ್ನು ಕಂಡು ಮನಸು 'ಅಯ್ಯೋ' ಅಂದರೂ, ಬದುಕುವ ಪರಿ ಕಂಡು ಖುಷಿಗೊಂಡಿತು. ರಸ್ತೆಯ ಪಕ್ಕದ ಮನೆಯೊಂದರಲ್ಲಿ ಕಂಪೌಂಡಿನ ಈಚೆ ಇಣುಕುತ್ತಿದ್ದ 'ಬೋಗನ್ವಿಲ್ಲಾ'(ಮಾಮೂಲಿ ಕನ್ನಡದಲ್ಲಿ ಕಾಗದದ ಹೂವು ) ಹೂಗಳ ಕಂಡು ನಮ್ಮಮನೆಯಲ್ಲಿರದ ಬಣ್ಣವನ್ನು ಹುಡುಕುತ್ತಿದ್ದ ನನ್ನ ಕಂಗಳು.ಮಂಗಳೂರಿನ ಮನೆಗಳಲ್ಲಿ ನಮ್ಮ ಮನೆಯ ಬಿಂಬವ ಹುಡುಕುವ ಕಳ್ಳ ಮನಸಿನ ಪರಿಗೆ ನಕ್ಕು ಮುಂದೆ ನಡೆದಿದ್ದೆ.
Infosysನ ಎದುರುಗಡೆಯ ಅಂಗಡಿ ಸಾಲುಗಳಲ್ಲಿ ಸಿಗರೇಟ್ ಸುಡುತ್ತ stress free ಆಗುತ್ತಿದ್ದ ನಮ್ಮ software ಯುವಕರು . ರೊಯ್ಯನೆ ಸದ್ದು ಮಾಡುತ್ತಾ ಸಾಗುವ bikeಗಳ ಮೌನ ಲಹರಿ ನನ್ನ ಮನಸ್ಸಿಗೆ ಅದೇನೋ ವಿಚಿತ್ರ ಆನಂದವನ್ನು ಕೊಟ್ಟಿತ್ತು.. !ಬೆನ್ನಿಗಂಟಿ ಕುಳಿತಿದ್ದ girl friend ಜೊತೆ ಬೈಕೇರಿದ್ದ ಹುಡುಗನ ಕಣ್ಣುಗಳು ಮಂಗಳೂರಿನ low waist pant ಹುಡುಗಿಯರ ಗುಂಪಿನಲ್ಲಿ. !
virgin mobile ಜಾಹಿರಾತಿನ ದೊಡ್ಡ ಪೋಸ್ಟರಿನಲ್ಲಿ ಜೆನಿಲಿಯಾ ಮತ್ತು ರಣಭೀರ್ ಜೋಡಿಯನ್ನು ನೋಡಿ ಕಣ್ಣು ಮಿಟುಕಿಸಿದೆ . !foot pathನಲ್ಲಿಯ ಪುಸ್ತಕಗಳ ರಾಶಿಯಲ್ಲಿ 'wings of fire' .!softballಗಳನ್ನು ಮಾರುತ್ತಿದ್ದ ಬಿಹಾರಿ ಹುಡುಗನ ಕಂಗಳಲ್ಲಿ ನಿರೀಕ್ಷೆ, ಯಾಚನೆ.. !'ಶಿವ ಕೈಲಾಸ್ ' ಭೇಲ್ ಪುರಿಯ ಅಂಗಡಿಯ ಬಳಿ ಘಮ್ಮೆನುವ ಮಸಾಲೆಯ ಪರಿಮಳ .!

ಹಾಗೆ ನಡೆಯುತ್ತಾ ನಾನು ಬಂದು ನಿಂತದ್ದು ಬೊಂಡ (ಎಳನೀರು ) ಕುಡಿಯಲು ಮಾಮೂಲಿ ಅಜ್ಜನ ಅಂಗಡಿಯ ಹತ್ತಿರ, ಸಾವಿರ ನೆರಿಗೆಗಳು ಬಿದ್ದ ಕೈಗಳು ಕೆಲಸ ಮಾಡುತ್ತಿದ್ದರೂ ನನ್ನನು ಕಂಡ ಅಜ್ಜನ ಮುಖದಲ್ಲಿ ಆತ್ಮೀಯತೆಯ ನಗು. "ಎಂಚ ಉಲ್ಲೆರ್?" ಎಂದು ಕೇಳುತ್ತಲೇ ಅಜ್ಜನ ಬೊಚ್ಚು ಬಾಯಿ ಇನ್ನಷ್ಟು ಅಗಲ. ಇಳಿವಯಸ್ಸಿನಲ್ಲೂ ತಣಿಯದ ಅವರ ಜೀವನೋತ್ಸಾಹ ನನಗೆ ಅಚ್ಚರಿ ತರುತ್ತದೆ .!

ಬೊಂಡ ಕುಡಿದು,ಅವರ ಕಷ್ಟ-ಸುಖ ವಿಚಾರಿಸಿ ನಗಿಸಿ,ರೂಮಿಗೆ ಬಂದ ನನಗೆ,ಮೈಯೆಲ್ಲಾ ಬೆವರಿ ಅಂಟಂಟು ಆದದ್ದು ನೆನಪಾಯಿತು . ಹಾಗೆ ತಣ್ಣೀರು ಸ್ನಾನ ಮಾಡಿದ ನನ್ನಲ್ಲಿ . ಮುಂದಿನ ಒಂದು ವಾರಕ್ಕಾಗುವಷ್ಟು ಚೈತನ್ಯ ತುಂಬಿತ್ತು .!ಮನಸ್ಸು ಆಗ ತಾನೇ ಸೋನೆ ಮಳೆಯಲ್ಲಿ ಮಿಂದ ಚಿಗುರಿನಂತಾಗಿತ್ತು .!










2 comments: