Wednesday, December 30, 2009

ಭಾವನೆಗಳ ನಡುವೆ... ಒಂದಿಷ್ಟು...




ಹೊಳೆ ದಂಡೆ ಅಂಚಿನಲಿ ಹುಡುಗನ ಭುಜಕ್ಕೊರಗಿ ಕುಳಿತ ಹುದುಗಿಯ ಮನದಲ್ಲೊಂದು ಆಲೋಚನೆಯ ಮಿಂಚು !ಹೇಳಿದಳು ತಲೆಯೆತ್ತಿ ಪ್ರೀತಿ ಒಂದು 'ಕನಸು' ಎಂದು .. ಪ್ರೀತಿ 'ವಾಸ್ತವ' ಕಣೆ ಎಂಬುದು ಅವನ ವಿವರಣೆ ...ಪ್ರೀತಿ 'ಮುಂಗಾರು ಮಳೆ' ಎಂದಳು ಆಕೆ.. ಪ್ರೀತಿ 'ಮುಂಜಾವು' ಅದು ನಿತ್ಯ ನೂತನ ಎಂದ ಆತ..ಅವಳೆಂದಳು ಪ್ರೀತಿ ಸಮುದ್ರದಂತೆ 'ಭೋರ್ಗರೆದರೆ' ಚಂದ. ಮೌನ ನದಿಯಂತೆ ಹರಿದರೆ ಚಂದ ಎಂದನಾತ ..ಪ್ರೀತಿ 'ಹೂವಿನಂತೆ' ಮಘಮಘಿಸುತ್ತದೆ ಎಂದಳು ಹುಡುಗಿ ..ಇಲ್ಲ ಕಣೆ ಪ್ರೀತಿ 'ಹುಲ್ಲಿನಂತೆ' ಎಲ್ಲಾದರೂ ಚಿಗುರುತ್ತದೆ ಎಂದ ಹುಡುಗ ..ಕೊನೆಗೂ "ಪ್ರೀತಿ " ಎಂದರೇನು? ಎನ್ನುವ ಗೊಂದಲದ ನಡುವೆಯೇ ಎದ್ದು ನಡೆದು ಬಿಟ್ಟಳು ಹುಡುಗಿ 'ನೀ ನನ್ನ ಪ್ರೀತ್ಸಲ್ವೋ ...' ಎನ್ನುತ್ತಾ. ಹುಡುಗ ಮುಗುಳ್ನಕ್ಕ "ಉತ್ತರ" ಎಂಬಂತೆ ...
.ಮರುದಿನ..
ಕುಳಿತಿದ್ದರು ಎಂದಿನಂತೆ ಅದೇ ನದಿದಂಡೆ .. ಅದೇ ಹಸಿ ಮರಳು ..ಅದೇ ಮುಸ್ಸಂಜೆ ಸೂರ್ಯ ..ಆದರೆ...ಹುಡುಗ ಹುಡುಗಿಯ ನಡುವೆ ಒಂದಡಿಯ ಅಂತರ ..!ಮೌನವೇ ಸಂಭಾಷಣೆ ..ಹುಡುಗಿ ಥಟ್ಟನೆ ಸರಿದಳು ಅವನಂಚಿಗೆ..! ಭುಜಕ್ಕೊರಗಿ ಕಣ್ಮುಚ್ಚಿ ಅಂದಳು ..ಪ್ರೀತಿ ವಾಸ್ತವದೊಳಗಿನ ಕನಸು, ಮುಂಜಾವಿನ ಮುಂಗಾರು ಮಳೆ, ಸಮುದ್ರ ಸೇರುವ ನದಿ ..ಹುಲ್ಲಿನಲ್ಲಿಯ ಹೂವು, ... ಕೊನೆಗೆ ಪ್ರೀತಿ ಅಂದ್ರೆ ...."ನಾನು - ನೀನು ".... ಅಂದಳು.. ಪಡುವಣದ ಸೂರ್ಯ ನಗುತ್ತಿದ್ದ..ಈ ಹುಡುಗಿಯ ಹುಡುಗ ಕೂಡ...!!!!

2 comments:

  1. Good One.. This article can be full proof to the statement "Love is Everything..."

    ReplyDelete
  2. ಪ್ರೀತಿ ಬಗ್ಗೆಯ ವ್ಯಾಖ್ಯಾನ ಚೆನ್ನಾಗಿದ್ದು! ....ಪ್ರೀತಿ ವಾಸ್ತವದೊಳಗಿನ ಕನಸು, ಮುಂಜಾವಿನ ಮುಂಗಾರು ಮಳೆ, ಸಮುದ್ರ ಸೇರುವ ನದಿ ..ಹುಲ್ಲಿನಲ್ಲಿಯ ಹೂವು, ... ಕೊನೆಗೆ ಪ್ರೀತಿ ಅಂದ್ರೆ ...."ನಾನು - ನೀನು ".........ಇದು ಎಲ್ಲ ತರಹದ ಪ್ರೀತಿಗೂ ಅನ್ವಯ ಆಗ್ತು ಅಲ್ದನೆ??

    ReplyDelete