ಕಂಡ ಎಲ್ಲ ಕನಸುಗಳು ನನಸಾಗಿ ಬಿಟ್ಟರೆ ,ಕನಸು ಕಾಣಲು ಇರುವ ಅರ್ಥವೇನು ?
ಎಲ್ಲಿಂದಲೋ ಬಂದೆ ಮೇಘಮಾಲೆಯಂತೆ
ಪ್ರೀತಿಯ ಸೋನೆಯಲಿ ..
ಮನವ ತೋಯಿಸಿದೆ..
ಹಸಿಯಾದ ಮನದಲ್ಲಿ
ಹೆಜ್ಜೆಗುರುತು ಮೂಡಿಸಿದೆ..
ಸುಳಿವೊಂದ ನೀಡದೆ
ಹೊರಟು ಹೋದೆಯಲ್ಲ.....
ಬೆತ್ತಲಾಗಿ ನಿಂತಿದೆ ಮನಸು...
ಶಿಶಿರದ ಬೋಳು ಮರದಂತೆ..
ಕಾಯುತಿದೆ ಮನಸು... ನಿನ್ನ..
ಈ ಇಳೆಯು ಆ ಮಳೆಯ ಕಾಯುವಂತೆ.. !
No comments:
Post a Comment