Showing posts with label ಸ್ನೇಹ. Show all posts
Showing posts with label ಸ್ನೇಹ. Show all posts

Monday, August 16, 2010

ಪ್ರೀತಿ ಪುರಾಣ .............!


ಪ್ರೀತಿಯೆಂದರೆ.......?? ಹೀಗೊಂದು ಯೋಚನೆ ಎಲ್ಲರಿಗೂ ಬಂದಿರಬಹುದು. ಪದಗಳಲ್ಲಿ ಸರಿಯಾಗಿ ವ್ಯಕ್ತಪಡಿಸಲಾಗದ, ಭಾವನೆಗಳ ಮಹಾಪೂರ. ಪಶ್ಚಿಮದ ದೇಶದಲ್ಲಾದರೆ 'i love you' ಅನ್ನುವ ಒಂದೇ ಒಂದು ವಾಕ್ಯದಲ್ಲಿ ಹೇಳಲಾಗುವ ಭಾವನೆ. ಅಪ್ಪ, ಅಮ್ಮ, ತಮ್ಮ, ಗೆಳತಿ, ಹೆಂಡತಿ ಎಲ್ಲ ಸಂಬಂಧಗಳಿಗೂ ಅದೇ ಮೂರು ಶಬ್ದಗಳನು ಉಪಯೋಗಿಸಿ ಬಿಡುತ್ತಾರೆ, ಆ ಮಾಹಾಜನರು. (ರಾಹುಲ್ ಮಹಾಜನನಿಗೆ ಅದರರ್ಥ ಗೊತ್ತಿಲ್ಲ ಬಿಡಿ) ಇಲ್ಲಿ ನಮ್ಮಲ್ಲಾದರೆ ? ಪ್ರೇಮಿಗಳಿಗೆ ತಪ್ಪಿದರೆ ಸ್ನೇಹಿತರಿಗೆ ಮಾತ್ರ ಉಪಯೋಗಿಸಲ್ಪಡುವ ಶಬ್ದ (ನಾನು ಹೇಳ ಹೊರಟಿರುವುದು ಮಾಮೂಲಿ ಪಟ್ಟಣದ ವಿಷಯ). ಹೋಗಿ ಅಜ್ಜನಿಗೋ, ಅಜ್ಜಿಗೋ ಹೇಳಿ ನೋಡೋಣ ' i love you' ಎಂದು....! ಇವಳಿಗೆ ಯಾವಾಗಿಂದ ಹುಚ್ಚು ಅನ್ನಬಹುದು.


Love is blind ಪ್ರೀತಿ ಕುರುಡು ಇದು ಎಲ್ಲರಿಗೂ ಗೊತ್ತಿರೋ ವಿಷಯ. Its deaf and dumb too ಮಾರಾಯರೇ. ಪ್ರೇಮಿಸುತ್ತಿರುವ ಒಂದು ಯುವ ಜೋಡಿಗೆ ನೀವು ಏನು ಹೇಳಿದರೂ ಕೇಳೋದೇ ಇಲ್ಲ,ಅವ್ರು ಅಂದಿದ್ದೆ ಸರಿ ಅಂತಾರೆ. ಇದು deaf ಆಯ್ತು ಇನ್ನು dumb?? ಮೂಕ ಪ್ರೀತಿ ಅಂತ ಕೇಳಿರಬೇಕಲ್ವಾ? ಪ್ರೀತಿಯನ್ನು ಪದಗಳಲ್ಲಿ ಸೆರೆ ಹಿಡಿಯೋಕೆ ಆಗೋದೇ ಇಲ್ಲ. ಅದಕ್ಕೆ 'ಪ್ರೇಮ ಪತ್ರಗಳು' ಇನ್ನು ಜೀವಂತ. ಹುಡುಗ ಯಾವುದೇ ಪುಸ್ತಕ ಓದದಿದ್ದರೂ ಹುಡುಗಿಗೆ ಲವ್ ಲೆಟರ್ ಕೊಡೊ ಸಂದರ್ಭ ಬಂದ್ರೆ 'ಪ್ರೇಮ ಪತ್ರದ link' ಖಂಡಿತ ಹುಡುಕೆ ಹುಡುಕ್ತಾನೆ. !


ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ. ನಾನು ಮೇಲೆ ಹೇಳಿರೋದಕ್ಕೆ, ಈಗ ಬರ್ಯೋದಕ್ಕೆ ಅಷ್ಟೊಂದು ಸಂಬಂಧ ಇಲ್ಲ ಬಿಡಿ. ಆದರೂ ನಿಮ್ ತಲೆ ತಿಂದೆ,.... ಯಾಕೆ ಸುಮ್ನೆ ಒಂದೇ ಸಲ ಸಿರಿಯಸ್ ಯಾಗೋದು ಹೇಳಿ?


ಮೊನ್ನೆ ಅಕ್ಕನ ಜೊತೆ ಚಾಟ್ ಮಾಡ್ತಿದ್ದೆ g-talk ನಲ್ಲಿ ಯಾರೋ ಮಾತಿಗೆ ಎಳೆದರು.ಅಷ್ಟೇನೂ ಗೊತ್ತಿರದ orkut friend. ನನ್ನ ಬಗ್ಗೆ ವಿಚಾರಿಸುತ್ತಲೇ "Do u 've Boy fren?" ಎಂದು ಬಿಟ್ಟಿತ್ತು ಆ ಆಸಾಮಿ. " yup many guy frens are der" ಅನ್ನೋ ಉತ್ತರ ಕೊಟ್ಟೆ. " no no i mean lover"ಅಂದಿತ್ತು ಆ ಕಡೆ ಪಾರ್ಟಿ."nope i don belive in love" ಎನ್ನುತ್ತಲೇ log out ಆಗಿದ್ದೆ.


ಉತ್ತರವೇನೋ ಕೊಟ್ಟಿದ್ದೆ ಆದರೆ ಪ್ರೀತಿ ಎಂದರೇನು ಅನ್ನೋ ವಿಷಯ ಹುಳವಾಗಿ ತಲೆ ಹೊಕ್ಕಿತ್ತು. ಕೆಲವು ಗೆಳೆಯ/ಗೆಳತಿಯರಿಗೆ message ಮಾಡಿಬಿಟ್ಟೆ. ಉತ್ತರ ಬರಲಾರಂಭಿಸಿತು... ಎಲ್ಲರೂ ತತ್ವಜ್ಞಾನವನ್ನೇ ಹೇಳುತ್ತಿದ್ದರೇ ವಿನಃ sweet and simple ಆಗಿ ಹೇಳಲೇ ಇಲ್ಲ ..ಅಥವಾ ನನ್ನ ಮನದೊಳಗಿದ್ದ ಉತ್ತರವನ್ನು ಯಾರೂ ಕೊಡಲೇ ಇಲ್ಲ..!


ಹಾಗೆ ಯೋಚಿಸುತ್ತಲೇ ಇದ್ದ ನನ್ನ ಮನದಲ್ಲಿ ಒಂದಿಷ್ಟು ಘಟನೆಗಳು ಹಾದುಹೋದವು... ಪ್ರೀತಿಯನ್ನು ನಾವು ಶಬ್ದಗಳಲ್ಲಿ ಕಟ್ಟಿಹಾಕಲಾರೆವು ಸರಿ. ಆದರೆ ಇದು ಪ್ರೀತಿ ಎಂದು ಮನಸು ಒಂದು ಘಟನೆಯನ್ನು ನೋಡಿದ ತಕ್ಷಣ ನಿರ್ಧರಿಸಿ ಬಿಡುತ್ತದೆ ಅಲ್ವಾ ? ನನ್ನ ಜೀವನದಲ್ಲಿ ನಡೆದ, ನಾನು ನೋಡಿದ ಘಟನೆಗಳು ಇವು .....


*ಇಸ್ತ್ರಿ ಮಾಡುವಾಗ ತನ್ನ ಅಚ್ಚುಮೆಚ್ಚಿನ ಸೀರೆಯ blouse ಸುಟ್ಟುಕೊಂಡ ಅಮ್ಮ, ದುಃಖ ತಡೆಯಲಾಗದೆ ಜಿನುಗಿದ ಕಣ್ಣೀರು. ಅಮ್ಮ ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಪೇಟೆಗೆ ಹೋಗಿ ಹೊಸ matching blouse ತಂದುಕೊಟ್ಟ ಪಪ್ಪ.


*ದನಗಳನ್ನು ಪ್ರೀತಿಯಿಂದ ಸಾಕಿ ಅವುಗಳಿಗೆ ಹೆಸರಿಟ್ಟು ಕರೆಯುವ ಪಕ್ಕದ ಮನೆಯ ಮುಸ್ಲಿಂ ಕುಟುಂಬ.


*ನಾನು ಮಂಗಳೂರನ್ನು ಬಿಟ್ಟು ಬರುವಾಗ ತನ್ನ ಪ್ರೀತಿಯ teddybearನ್ನುನನ್ನ ಕೈಗಿತ್ತು "ಎಲ್ಲಿ ಹೋದರೂ ಇದನ್ನು ತಗೊಂಡು ಹೋಗು ಸೌಮ್ಯ ನನ್ನ ನೆನಪಿಗೆ" ಎಂದು ಕಣ್ಣೀರಾದ ಗೆಳತಿ.


*ಗೆಳೆಯನ revaluation ಗೋಸ್ಕರ ತನ್ನ ಹೊಸ hand-setನ್ನೇ ಮಾರಿದ ನನ್ನ ಸ್ನೇಹಿತ .!


*ಡೈರಿಯ ಹಾಳೆಗಳ ಮಧ್ಯೆ ಬಣ್ಣಗೆಟ್ಟು ಮುಗುಮ್ಮಾಗಿ ಕುಳಿತಿರುವ ಪ್ರತಿ friendship day & valentines day ಗಳಿಗೆ ಆತ್ಮೀಯ ಗೆಳೆಯ ಕೊಟ್ಟ ಹಳದಿ ಗುಲಾಬಿ ಹೂಗಳು.


*ಬೀದಿ ನಾಯಿ ಬಂದಿಲ್ಲವೆಂದು ತನಗೆ ಹಾಕಿದ ಊಟವನ್ನು ಮುಟ್ಟದೆ ಕುಳಿತಿದ್ದ ಗೆಳತಿಯ ಮನೆಯ ಬೆಕ್ಕು.


*ಕಳೆದು ಹೋದ ಗೆಳತಿಯ ನೆನಪಲ್ಲಿ ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿ ಬಂದು school-book companyಯ ಎದುರಿನ ಜನಜಂಗುಳಿಯಲ್ಲಿ ಅವಳನ್ನು ಹುಡುಕುವ ಕ್ರಿಶ್ಚಿಯನ್ನರ ಹುಡುಗ .!


*ಜೀವದ ಗೆಳೆಯ ಕೊಟ್ಟ chocolateನ್ನು ತಾನೊಬ್ಬಳೆ ತಿಂದು ಉಳಿದ ಗೆಳತಿಯರಿಗೆ ಅಂಥದ್ದೇ ಬೇರೆ chocolate ತಂದು ಕೊಡುವ ನನ್ನ ಗೆಳತಿ ..! (ಅದೇಕೆ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ " ನಾನು ಅವನ ಪ್ರೀತಿಯನ್ನು ಬೇರೆಯವರಿಗೆ ಹಂಚಲಾರೆ..!" )


*ಕೊಟ್ಟಿಗೆಯಲ್ಲಿ ಕಟ್ಟಿ ಹಾಕೆಂದು ಮನೆಯ ವರೆಗೆ ಬಂದು ಅಜ್ಜನನ್ನು ಕರೆದುಕೊಂಡು ಹೋಗುವ ಅಜ್ಜನ ಪ್ರೀತಿಯ ಎಮ್ಮೆ.


*ಶಾಲಾದಿನಗಳಲ್ಲಿ ಉದ್ದಕಿದ್ದ ನನ್ನ ಕೂದಲನ್ನು ಹೆಣೆದು ಜಡೆ ಕಟ್ಟುತ್ತಿದ್ದ, ಈಗಲೂ ಅದೇ ಪ್ರೀತಿಯಂದ ನನ್ನ ಮೋಟು ಕೂದಲಿಗೆ ಜುಟ್ಟು ಹಾಕುವ ನನ್ನ ಅಮ್ಮ.


*ತಟ್ಟೆ ಇಟ್ಟು ಪ್ರೀತಿಯಿಂದ ಬಡಿಸಿ ಊಟ ಮುಗಿಯುವ ವರೆಗೂ ಅದೂ-ಇದೂ ಸುದ್ದಿ ಹೇಳುತ್ತಲೇ ಇದ್ದು ನಂತರ ತಾನು ಉಣ್ಣುವ ನನ್ನ ಅಜ್ಜಿ . ಅದೆಷ್ಟು ಹೊತ್ತಾದರೂ ಸರಿ ಅಜ್ಜ ಬರದೇ ಊಟ ಮಾಡಲೊಲ್ಲದ ನನ್ನ ಅಜ್ಜಿ .

* ಗಿಡಗಳಲ್ಲಿ ಅದೆಷ್ಟೇ ಹೂಗಳಾದರೂ ಅದನ್ನು ಕಿತ್ತು ಮುಡಿಯದ, ಬೇರೆಯವರು ಕೀಳುವುದನ್ನೂ ವಿರೋಧಿಸುವ ಅಮ್ಮ .

*ನಾನು ಜ್ವರ ಬಂದು ಮಲಗಿದಾಗ ರಾತ್ರಿಯೆಲ್ಲಾ ಎಚ್ಚರವಿದ್ದು ನೋಡಿಕೊಂಡ ಹಾಸ್ಟೆಲಿನ ಗೆಳತಿ.

*ಸಾಯುವ ಮೊದಲು ತನ್ನ ಪ್ರೀತಿಯ ಹುಡುಗಿಯ ಹೆಸರನ್ನು ಕನ್ನಡದಲ್ಲಿ ಡೈರಿ ಪೂರ್ತಿ ಬರೆದ ಮಿಜೋರಾಮಿನ ಹುಡುಗ..
*ಬೆಂಗಳೂರಿಗೆ ಬಂದಾಗ ಅದೆಷ್ಟೋ ವರ್ಷದ ಸ್ನೇಹಿತೆಯಂತೆ ಆತ್ಮೀಯತೆಯಿಂದ ನೋಡಿಕೊಂಡ orkut ಗೆಳತಿ, ಹಂಚಿಕೊಂಡ ಸಣ್ಣ ಪುಟ್ಟ ಸಂಗತಿಗಳು. ಅದೆಷ್ಟೋ ವರ್ಷಗಳಿಂದ ಜೊತೆಯಿದ್ದ ಜೋಡಿ ನವಿಲಿನ ಕ್ಲಿಪ್ ಒಂದನ್ನು ನನಗೆ ಕೊಟ್ಟ ಕ್ಷಣ ..!
*ಹಾಸ್ಟೆಲಿನಲ್ಲಿ ಬರೀ ಒಂದು ತಿಂಗಳು ನನ್ನ ಜೊತೆಗಿದ್ದು. CET ಕೋಚಿಂಗ್ ಕ್ಲಾಸ್ ಮುಗಿಸಿ ಹೊರಡುವ ಹಿಂದಿನ ರಾತ್ರಿಯೆಲ್ಲ ನನ್ನ ಕೈ ಹಿಡಿದು ಮಂಚಕ್ಕೆ ಒರಗಿದ್ದ ಪೋರಿ ..!
*ಅಮ್ಮನಂತೆ ಸ್ನೇಹಿತೆಯಂತೆ ನನ್ನ ನೋಡಿಕೊಂಡ PG ಆಂಟಿ .

ಇಂಥಹ ಅದೆಷ್ಟೋ ಘಟನೆಗಳು ನಿಮ್ಮೊಂದಿಗೂ ನಡೆದಿರುತ್ತವೆ. ಆದರೆ ಪ್ರೀತಿ ಎಂದೊಡನೆ ಬರೀ ಹೆಣ್ಣು- ಗಂಡಿನ ನಡುವಣ ಸಂಬಂಧ ಎನ್ನುವುದೇತಕ್ಕೋ ? ಮಮತೆ, ಪ್ರೇಮ, ಪ್ರೀತಿ, ಕಾಮ ಇದೆಲ್ಲರ ವ್ಯತ್ಯಾಸವೇ ಅರಿಯದಂತೆ ಆಡುವುದು ಏತಕ್ಕೆ ?

ಪ್ರೀತಿ ಹುಟ್ಟಿ.. ಸಲ್ಲದ ಸಂಬಂಧ ಬೆಳೆದು. ಮಕ್ಕಳಾಗಿ ..ಮದುವೆಯಾಗಿ ಒಂದೇ ವರುಷಕ್ಕೆ divorce ಗೆ ತಿರುಗುವ ಪಾಶ್ಚಿಮಾತ್ಯ ದೇಶದ ಈ ಒಂದು ಅನುಕರಣೆ ಬೇಕೇ ? ಪ್ರೀತಿ ಪ್ರೀತಿ ಎಂದು ದೈಹಿಕ ಕಾಮನೆಗಳ ತೀಟೆ ತೀರಿಸಿಕೊಳ್ಳುವ ಈ ಜನಕ್ಕೆ 'boy-friend, girl friend' ಎಂದು ಸ್ನೇಹಕ್ಕೆ ಮಸಿಬಳಿಯುವುದು ಯಾಕೆ ?
ಪ್ರೀತಿಗೆ ಕೃಷ್ಣ - ರಾಧೆಯರ ಉದಾಹರಣೆ ಕೊಡುವ ದೇಶ ನಮ್ಮದು. ದೇಶವನ್ನೂ ನಾವು ಮಾತೆಯಾಗಿ ಕಾಣುತ್ತೇವೆ ಅಲ್ವಾ ? ಈ boy friend- girl friend ಸಂಸ್ಕೃತಿ ನಮ್ಮದಲ್ಲ. ಗಂಡು ಹೆಣ್ಣಿನ ನಡುವೆ ನಿಷ್ಕಲ್ಮಶ ಸ್ನೇಹವೂ ಇರುತ್ತದೆ. ಒಂದು ವೇಳೆ ಬರೀ ಸ್ನೇಹಕ್ಕೆ ಬಳಸುತೀರೀ ಆ ಶಬ್ದವನ್ನು ಎಂದಾದರೆ ಸ್ನೇಹದಲ್ಲಿ ಗಂಡು ಹೆಣ್ಣೆಂಬ ಭೇದ ಯಾಕೆ ?


ಪ್ರೀತಿ ಯಾವತ್ತಿದ್ದರೂ ಪ್ರೀತಿಯೇ ಅದಕ್ಕೊಂದು ನಿರ್ಮಲವಾದ ಪರಿಶುದ್ಧವಾದ ಅರ್ಥವಿದೆ. ಅದೊಂದು ಶುದ್ಧ ಸರೋವರ ದಯವಿಟ್ಟು ಅದರಲ್ಲಿ ಅಶ್ಲೀಲತೆಯ ಕಲ್ಲೆಸೆಯಬೇಡಿ .

Saturday, February 27, 2010

stupid miss u... ಎಂದು ಬಿಡು ....





Hello ಬೊಡ್ಡ ,
ಯಾಕೋ ಏನಾಗಿದೆ ನಿನಗೆ ? ಮಾತಿಲ್ಲ, ಕಥೆಯಿಲ್ಲ.. ಕೊನೆಪಕ್ಷ ಒಂದು message ಕೂಡ ಮಾಡೋದು ಮರೆತು ಹೋಯ್ತಾ ?ನಂಗೊತ್ತು ಕಣೋ ಜೀವದ ಗೆಳತಿ ಸಿಕ್ಕಿದ್ದಾಳೆ ನಿನಗೆ ಅಂತಾ. ಆದರೂ ನಿನ್ನ ಪ್ರಾಣ ಸ್ನೇಹಿತರನ್ನ ಮರ್ತೋಗಿ ಬಿಡೋದಾ ? ಮೊನ್ನೆ ಆಗ್ನೇಯ phone ಮಾಡಿದ್ದ ಅವ್ನೂ ಹೇಳ್ತಿದ್ದ ಮಾರಾಯ "ನಿಶು ಕಳ್ದೋಗಿದಾನೆ ಸುಮಿ ಮೊದಲಿನ ಥರ ಇಲ್ಲ ಅವ್ನು" ಅಂದಿದ್ದ .! But ನಾನು ಒಪ್ಪಲೇ ಇಲ್ಲ . "no no he can't change " ಅಂದಿದ್ದೆ. ಆದ್ರೆ ಮೊನ್ನೆ ಅನಿಸ್ತು ನೀನು ಬದಲಾಗಿದ್ದೀಯ, avoid ಮಾಡ್ತಾ ಇದ್ದೀಯ ಎಂದು .

ಅತ್ತು ಬಿಟ್ಟೆ ನಿಶು ... ನಿನ್ನೆ ರೂಮನಲ್ಲಿ . ಯಾಕೆ ನಿನ್ನನ್ನು ಅಷ್ಟೊಂದು ಹಚ್ಕೊಂಡೆ ಗೊತ್ತಿಲ್ಲ . mostly ನಮ್ಮಿಬ್ಬರ nature ಒಂದೇ ಆಗಿತ್ತು, or ನಿನ್ನಂಥ ಗೆಳೆಯನ ನಿರೀಕ್ಷೆಯಲ್ಲಿದ್ದೆ ..ನೀನು ಸಿಕ್ಕಿಬಿಟ್ಟಿದ್ದೆ.



Best friends ಅನ್ನೋ ಹಣೆಪಟ್ಟಿ ನಾವೆಂದೂ ಕಟ್ಕೊಳ್ಳಿಲ್ಲ . ಆದರೆ ನಾನು ಮನೆಗೆ ಹೋದಾಗ ಒಬ್ಬರನ್ನೊಬ್ರು ಅದೆಷ್ಟು ಮಿಸ್ ಮಾಡ್ತಾ ಇದ್ದೆವು ಹೇಳು.


ಮೊನ್ನೆ ideals ವರೆಗೆ ಹೋಗಿ ವಾಪಸ್ ಬಂದೆ ಕಣೋ ನಿನ್ನ ಜೊತೆ ಕಿತ್ತಾಡದೇ,'ಶಾಲು' ಹೊಟ್ಟೆ ಉರಿಸದೇ ಹೇಗೋ ತಿನ್ನಲಿ 'tiraamisu' ice-cream..! Friendship day, valentine day ಗಳಿಗೆ ನೀನು ಕೊಟ್ಟ 'ಹಳದಿ ' ಗುಲಾಬಿ ಹೂಗಳು ಅಳ್ತಾ ಇವೆ ಡೈರಿ ಹಾಳೆಗಳ ಮಧ್ಯೆ .ನನ್ನ ಕಳೆದ ಹುಟ್ಟಿದ ಹಬ್ಬಕ್ಕೆ ನೀನು ಕೊಟ್ಟ card ನಲ್ಲಿ ಹಲ್ಕಿರಿದುಕೊಂಡಿರೋ ಚಿಂಪಾಂಜಿ ನಗೋದನ್ನ ನಿಲ್ಸಿರಬಹುದು . ಜೋರು ಮಳೆಯಲ್ಲಿ ನಿನ್ನ ಜೊತೆ ಜಗಳ ಆಡ್ತಾ ice-cream ತಿಂದದ್ದು, M.G.roadನ ಕೊನೆಯಲ್ಲಿನ ಭೇಲ್ ಪುರಿ stallನಲ್ಲಿ ಕಿತ್ತಡ್ಕೊಂಡು 'ಶೇವು ಪುರಿ'ತಿಂದದ್ದು ಇನ್ಮುಂದೆ ಬರೀ ನೆನಪು ಮಾತ್ರಾನಾ ?'ಹೌದು' ಅನ್ನೋ ಉತ್ತರ ಬರದಿರಲಿ ಎಂದು fingers cross ಮಾಡಿದೇನೆ .
ಅದ್ಯಾಕೆ ನಿನ್ನ ಅಷ್ಟೊಂದು ಮಿಸ್ ಮಾಡ್ತೇನೆ ಅಂತ ಯೋಚನೆ ಮಾಡಿದಾಗ, ನೆನಪುಗಳೊಂದಿಗೆ ಗುದ್ದಾಡಿದಾಗ ಹೊಳೆದದ್ದು ಇಷ್ಟು ..! ನಿನ್ನ ಜೊತೆ ಇರೋವಾಗ ನಾನೊಬ್ಳು ಹುಡುಗಿ ಅನ್ನೋ ಫೀಲಿಂಗ್ ಯಾವತ್ತು ಬಂದಿಲ್ಲ .ಹುಡುಗರ ಥರಾನೆ treet ಮಾಡ್ತಾ ಇದ್ದೆ. ಅದೆಷ್ಟು ತಲೆ ತಿಂತಿದ್ದೆ ನಾನು. 'ನಗುವನ್ನ ಮಾತ್ರ ಹಂಚಬೇಕು ಅಳುವನ್ನಲ್ಲ' ಎನ್ನುವ ನನ್ನ theory ಬುಡಮೇಲಾದದ್ದು ನಿನ್ನ ನಿಷ್ಕಲ್ಮಶ ಸ್ನೇಹದ ಧಾರೆಯಲ್ಲಿ.ನನ್ನ ಮನದೊಳಗಿನ ನಿಷ್ಕಲ್ಮಶ ಸ್ನೇಹದ definitionಗೆ ನೀನು ಉದಾಹರಣೆ. ಕಣ್ಣೀರಿನ ಸಿಂಚನ, ನಗುವಿನ ಎಳೆಬಿಸಿಲಿಗೆ ಮೂಡಿದ ಕಾಮನ ಬಿಲ್ಲಿನ ಸ್ನೇಹ ನಮ್ಮದು ಅನ್ಕೊಂಡಿದ್ದೆ . . ನನ್ನ ಕಣ್ಣೀರನ್ನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ.ಎಷ್ಟು ಸಲ ಜಗಳಾಡಿದ್ದೇವೋ ಲೆಕ್ಕಕ್ಕಿಲ್ಲ. ನಿನ್ನ ಜೊತೆ ಕಣ್ಣೀರಾದ ಘಳಿಗೆಗಳನ್ನು ಹೇಗೋ ಮರೆಯಲಿ ?


ಅದೆಷ್ಟು ತಲೆ ತಿಂತಿದ್ದೆ ನಾನು. ಆ ದಿನ ಒಂದೇ messageನ್ನು 50 ಸಲ ಕಳುಹಿಸಿ ನೀನೂ cellphone switch off ಮಾಡಿದ್ದೆ ನೋಡು . ಮತ್ತೆ land line ನಿಂದ ಫೋನ್ ಮಾಡಿ ಬಯ್ದಾಗ ನಾನು ಕಣ್ಣಲ್ಲಿ ನೀರು ಬರೋವಷ್ಟು ನಕ್ಕಿದ್ದೆ. ಉದ್ದ ಸ್ಕರ್ಟ್ ಹಾಕೆ 'ಬೊಮ್ಮರಿಲ್ಲು' ಜೆನಿಲಿಯ ಥರ,ನಿಂಗೆ push up bottom ಸಲ್ವಾರ್ ಚೆನ್ನಾಗಿ ಕಾಣತ್ತೆ,ಈ earing ಚೆನ್ನಾಗಿದೆ. ಅಂತ ಹೇಳೋವಾಗ ನಂಗೆ control ಮಾಡೋಕೆ ಆಗದಿರೋ ಅಷ್ಟು ನಗು ಬರ್ತಿತ್ತು .


ನನ್ನ stupid poemಗಳ ಕೇಳುಗ ನೀನಾಗಿದ್ದೆ, ನಿನ್ನ ಪ್ರೀತಿಯ ಹುಡುಗಿ ಮೈಥಿಲಿಯ ಮದುವೆಯ ದಿನ ರಾತ್ರಿ ೯ ಗಂಟೆಗೆ "ಸುಮಿ ಒಂದ್ಸಲ ಮಾತಾಡಬೇಕು ನಿನ್ನತ್ರ ಪ್ಲೀಸ್ ಹಾಸ್ಟೆಲ್ ನಿಂದ ಹೊರಗೆ ಬಾರೆ" ಅಂದಾಗ ಅದೇನೇನೋ ಹೇಳಿ ಹೊರಗೆ ಬಂದು ಒಂದು ಪುಟ್ಟ walk ಬಂದಿದ್ದೆನಲ್ವಾ? ಇಡೀ ದಿನ F.M ಥರ ವಟವಟ ಅನ್ನೋಳು ಮೌನವಾಗಿ ನಡೆದಿದ್ದೆ ನಿನ್ನ ಜೊತೆ .!ಕೊನೆಗೆ ನೀನು "ಥ್ಯಾಂಕ್ಸ್ ಸುಮೀ" ಅನ್ನೋವಷ್ಟರಲ್ಲಿ ರಸ್ತೆಯ ದೀಪದ ಬೆಳಕಿಗೆ ಕಂಡದ್ದು ಒದ್ದೆ ಕಂಗಳು ..!


ಮನದಲ್ಲಿ ಅದೆಂಥ ನೋವಿದ್ದರೂ ಹೊರಗಡೆಯಿಂದ ನಗುತ್ತಲೇ ಇರುತ್ತಿದ್ದ ನಿನಗೆ ಯಾವತ್ತೋ ಮನದಲ್ಲೇ hats off ಹೇಳಿದ್ದೆ .ನಿನ್ನಿಂದ ಎಷ್ಟೋ ಕಲ್ತಿದೇನೆ ನಿಶು ... ಬರೀ best friend ಅಲ್ಲ ನೀನು the Bestest friend .!


ನೀನು ಹೇಳ್ತಿದ್ದೆ ಅಲ್ವಾ ? "ಯಾವತ್ತೂ ಬದಲಾಗಬೇಡ ಸುಮಿ ..ಈಗ ಇದ್ದಂಗೆ ಇರು.. ನನ್ನ ಮಕ್ಕಳಿಗೆ ''jub v met'ಫಿಲ್ಮ್ ತೋರಿಸಿ ನಂಗೂ ಒಬ್ಳು ಥೇಟ್ 'ಗೀತ್' ನಂಥ best friend ಇದ್ಳು ಅಂತ ಹೇಳ್ತೇನೆ "ಎಂದು ..


ತುಂಬಾ ಮಿಸ್ ಮಾಡ್ತಿದೇನೆ ಕಣೋ ನಿನ್ನ .ನೀ ಜೊತೆಗಿಲ್ಲದ m.g road ಬೇಡ ಅನ್ಸ್ತಿದೆ. ಒಮ್ಮೆ ಮೆಸೇಜ್ ಮಾಡಿ "stupid miss u too" ಅಂದುಬಿಡೋ. . ಎಲ್ಲೋ ಒಂದು ಕವನ ಓದಿದಾಗ , ಉದ್ದ skirtನ ಹುಡುಗಿಯ ಕಂಡಾಗ ಮಳೆಗಾಲದಲ್ಲಿ ice-cream ನೆನಪಾದಾಗ .ನಾನು ಕಾಡಬಹುದು. ನನ್ನ ಮಿಸ್ ಮಾಡಬಹುದು ಆಗ ಒಂದೇ ಒಂದು message ಮಾಡಿಬಿಡು "stupid miss you " ಎಂದು .ಕಾಯ್ತಾ ಇರ್ತೇನೆ ಅದೇ 'ಸೈಬಿನ್ ' complexನ ಅದೇ ನಾಲ್ಕನೆ ಖುರ್ಚಿಯಲ್ಲಿ ..!








Your stupid friend
ಸುಮಿ...







Wednesday, February 3, 2010

Its all about Friendship..!






freinds ಅನ್ನೋ ಜೀವಿಗಳೇ ವಿಚಿತ್ರ..!Friendship ಬೆಳೆಯೋ ರೀತಿ ಇನ್ನೂ ವಿಚಿತ್ರ ..!ರಕ್ತ ಸಂಬಂಧದ ವಯ್ಯಾರವಿಲ್ಲದೆ,ಜಾತಿ,ಮತ ,ಧರ್ಮ,ದೇಶ, ಭಾಷೆ ಇವೆಲ್ಲವುಗಳ ಬೇಲಿಯನ್ನು ದಾಟಿ ಹಬ್ಬಿ ಬೆಳೆಯೋ ಬಳ್ಳಿ ಈ 'ಸ್ನೇಹ' !.ಅಣ್ಣ ತಮ್ಮಂದಿರು ದಾಯಾದಿಗಳಾಗಬಹುದು,ಜೀವದಂತೆ ಪ್ರೀತಿಸಿದ ಹುಡುಗ /ಹುಡುಗಿ ಕೈಕೊಟ್ಟವರು ಎನಿಸಿ ಕೊಳ್ಳಬಹುದು ಆದರೆ 'Friends' ಮಾತ್ರ ಯಾವತ್ತು Friends .! .

True friends ಅನಿಸಿಕೊಂಡಿರ್ತಾರಲ್ವಾ? ಅವ್ರು ನಿಮ್ಮ boy/girl friendಗಿಂತ ಜಾಸ್ತಿ ಪ್ರೀತಿಸಿರ್ತಾರೆ ! ನಮ್ಮ ಬಗ್ಗೆ posessive ಆಗಿರ್ತಾರೆ, ಅಕ್ಕ ತಂಗಿಯರಿಗಿಂತ ಜಾಸ್ತಿ ಕಾಡ್ತಾರೆ, ಅಣ್ಣ ತಮ್ಮಂದಿರ ಥರ ಜಗಳ ಆಡ್ತಾರೆ, ಅಪ್ಪನ ಥರ guide ಮಾಡ್ತಾರೆ ,ಎಲ್ಲೋ ಒಂದು ಹತಾಶ ಗಳಿಗೆಯಲ್ಲಿ ಅವರ ಮಡಿಲಲ್ಲೋ ,ಭುಜದ ಮೇಲೋ ತಲೆಯಿಟ್ಟು ಮಲಗಿದಾಗ ಅಮ್ಮನ ಥರ ಅನಿಸಿದರೂ ಅದ್ರಲ್ಲಿ ಆಶ್ಚರ್ಯವಿಲ್ಲ .!
ಅದೇ ಸ್ನೇಹಿತರು ನಿಮ್ಮನ್ನ ಒಂದು dipression ನಿಂದ ಎತ್ತಿರ್ತಾರೆ , 'i can't ' ಎಂದು ಕುಸಿದು ಕುಳಿತ ಘಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ 'you can'ಎಂದು ಹೇಳ್ತಾರೆ . ಅಂಥಾ ಸ್ನೇಹಿತರು ಜೀವನದ ಯಾವುದೋ ಒಂದು ತಿರುವಿನಲ್ಲಿ ಕಳೆದುಹೋಗ್ತಾರೆ ಅಲ್ವಾ? ಎಲ್ಲೋ ಒಂದು ದಿನ ಫಕ್ಕನೆ ನೆನಪಾಗ್ತಾರೆ ..! ಅವರೊಂದಿಗೆ ಗಂಟೆಗಟ್ಟಲೆ ಹರಟಿದ ಘಳಿಗೆ ,small stupid fights, ಅಡ್ಡಹೆಸರು , long ride, ಯಾವುಒದೋ ಒಂದು trip, ಅವರೊಂದಿಗೆ ಕುಡಿದ ಬೈ-ಟು ಕಾಫಿ,ಸೇದಿದ ಬೈ-ಟು ಸಿಗರೇಟ್,(it shows the depth of the friendship it seams),class ನಲ್ಲಿ ಹೊರಗೆ ಹಾಕಿದಾಗ ಬೇಕಾಬಿಟ್ಟಿ ಅಡ್ಡಾಡಿದ್ದು,ಯಾವ್ದೋ ಬಾರಲ್ಲಿ ಗುಂಡು ಹಾಕಿದ್ದು ,ಹುಡುಗೀರನ್ನು follow ಮಾಡಿದ್ದು..... ಇವನ್ನೇ ಅಲ್ವಾ? ನಾವು ಕೊನೆಗೆ ಮಿಸ್ ಮಾಡೋದು ?
ನಮ್ಮ ಜೀವನದಲ್ಲಿ ಯಾರೋ ಒಂದು ಹೊಸ ವ್ಯಕ್ತಿಯ ಆಗಮನವಾದಾಗ ಗೆಳೆಯರನ್ನು ಮರೆತಿರ್ತೇವೆ ಅಥವಾ ಒಂದು ಜಗಳ, ಭಿನ್ನಾಭಿಪ್ರಾಯಕ್ಕೆ ಅದ್ಭುತ ಸ್ನೇಹಿತರನ್ನ ಕಳೆದುಕೊಂಡಿರ್ತೇವೆ . ಆ ಕ್ಷಣಕ್ಕೆ ಮನಸು ಅವರನ್ನು ಕ್ಷಮಿಸಿಯೇ ಇರುವುದಿಲ್ಲ .ಸ್ನೇಹದ ಸೇತುವೆ ಸದ್ದಿಲ್ಲದೇ ಮುರಿದು ಬಿದ್ದಿರುತ್ತದೆ . ನಮ್ಮ ego,attitudeಗಳ ನಡುವೆ ಸ್ನೇಹದ ಹೂವು ಬಾಡಿರುತ್ತದೆ .
Dear friends ನಿಮ್ಮ ಜೀವನದಲ್ಲೂ ಇಂಥ ಘಟನೆಗಳು ಆಗಿದ್ದಿರಬಹುದು ಅಥವಾ ಮುಂದೆ ಆಗಲೂಬಹುದು..ಗೆಳೆಯರನು ಅವರ ಸಣ್ಣ ತಪ್ಪುಗಳಿಗೆ ಕಣ್ಮುಚ್ಚಿ ಕ್ಷಮಿಸಿಬಿಡಿ. ಯಾಕೆಂದ್ರೆ life is too short .! ಈ ಭೂಮಿಯಲ್ಲಿ ಮಾನವರಾಗಿ ಹುಟ್ಟಿದ್ದೇವೆ. ಹೃದಯಗಳನ್ನು ಗೆಲ್ಲೋಣ ,ಸ್ನೇಹ ಪ್ರೀತಿಗಳನ್ನು ಹರಡೋಣ.. ನಾಳೆ ಎಂಬುದು ಯಾರಿಗೆ ಗೊತ್ತು ? ಬಂದಾಗಲೇ ನಿಜ ಅಲ್ವಾ? A Friend is some one with whom you can dare to be yourself ..! Hats off to Friends and Friendship..!!