ನಾಲ್ಕೈದು ದಿನಗಳ ಹಿಂದೆ ರೈಲ್ವೆ ಸ್ಟೇಶನ್ನಲ್ಲಿ ರೈಲಿಗಾಗಿ ಕಾಯುತ್ತಿದ್ದೆ. (ರೈಲ್ವೆ ನಿಲ್ದಾಣದಲ್ಲಿ ಮತ್ತೇನು ಬಸ್ಸಿಗೆ ಕಾಯ್ತಾರಾ?) ಟ್ರೈನ್ ಬರಲು ಇನ್ನೂ ಇಪ್ಪತ್ತೈದು ನಿಮಿಷಗಳು ಇದ್ದವು. ಹಾಗೆ ನಾನು ಕೂತದ್ದು ಅಲ್ಲಿಯ ಕಲ್ಲು ಬೆಂಚಿನ ಮೇಲೆ. ನಾಲ್ಕು ಹದಿನೈದಿರಬಹುದು ಸಮಯ. ಸೂರ್ಯ ಇನ್ನೂ ಸುಮಾರಾಗಿ ಪ್ರಖರವಾಗಿಯೇ ಇದ್ದ. ಮಾತನಾಡಲು ಪರಿಚಯದವರಾರು ಕಾಣಿಸಲಿಲ್ಲ. ಕೈಯಲ್ಲಿ ಯಾವ ಪುಸ್ತಕವೂ ಇರಲಿಲ್ಲ. ಮುಂದೇನು ಎಂದು ಯೋಚಿಸುವಷ್ಟರಲ್ಲೇ ಪಕ್ಕದಲ್ಲಿ ಒಂದು ಪುಟ್ಟ ಹೆಣ್ಣು ಮಗು ಅದರ ಅಣ್ಣನೊಂದಿಗೆ ಆಡುತ್ತಿದ್ದದ್ದು ಕಂಡಿತು. ಎಲ್ಲೋ ಒಂದು ಒಂದುವರೆ ಹರೆಯದ್ದಿರಬಹುದು. ಚಂದನೆಯ ಫ್ರಿಲ್ ಗಳಿರುವ ಅಂಗಿಯನ್ನು ಹಾಕಿಕೊಂಡು ಅದು ಅಡ್ಡ-ತಿಡ್ದ ವಾಗಿ ಕಾಲು ಎತ್ತಿ ಹಾಕಿ ನಡೆದಾಡುವ ಮೋಡಿಯಿಂದಲೇ ತಿಳಿಯುತ್ತಿತ್ತು, ಅದು ತೀರಾ ಇತ್ತೀಚಿಗೆ ನಡೆಯಲು ಕಲಿತ ಮಗು ಎಂದು. ನನಗೆ ನನ್ನ ಜುಟ್ಟು ಗೊಂಬೆ ಮತ್ತೊಮ್ಮೆ ನೆನಪಾಗಿ ಬಿಟ್ಟಿತ್ತು. ಜಗತ್ತಿನ ಕುತೂಹಲಗಳೆಲ್ಲವನ್ನೂ ಅದರ ಕಣ್ಣಲ್ಲೇ ಕಂಡ ಭಾವನೆ. ಅವರಿಬ್ಬರತ್ತಲೇ ದೃಷ್ಟಿ ನೆಟ್ಟಿದ್ದೆ.
ಆರರ ಹರೆಯವಿರಬಹುದು ಅದರ ಅಣ್ಣನಿಗೆ. ಅದೆಷ್ಟು ಪ್ರೀತಿ ತನ್ನ ತಂಗಿಯೆಂದರೆ ! ಅವಳನ್ನು ನಡೆಯಲು ಬಿಡದೆ, ಆಗದಿದ್ದರೂ ಎತ್ತಿಕೊಂಡೇ ಓಡಾಡುತ್ತಿದ್ದ.ಅದೇನೇನೋ ತಿನ್ನಿಸುತ್ತಿದ್ದ. ತಾನೂ ತಿನ್ನುತ್ತಿದ್ದ . ಅಣ್ಣ ಮರಾಠಿ ಹಾಡುಗಳನ್ನು ಹಾಡುತ್ತಿದ್ದರೆ ತಂಗಿ ಕುಣಿಯುತ್ತಿದ್ದಳು ಬಹಳ ಮುದ್ದಾಗಿ. ಅದೇನು ಬೆಲ್ಲಿ ನೃತ್ಯವೋ , ರಶಿಯನ್ ಬ್ಯಾಲೆಯೋ ? ದೇವನೇ ಬಲ್ಲ ..! ಅವಳು ಕುಣಿಯುವುದ ಕಂಡು ಮತ್ತೆ ಎತ್ತಿ ಮುದ್ದಿಸುತ್ತಿದ್ದ.
ನನಗೂ ಒಬ್ಬ ಅಣ್ಣ ಇರಬೇಕೆನಿಸಿ ಬಿಟ್ಟಿತು. ತುಂಬಾ ಪ್ರೀತಿಸುವ ಜಗಳಾಡುವ, ಹೊಡೆದಾಡುವ ತಮ್ಮನಿದ್ದಾನೆ. ಆದರೂ ಅಣ್ಣನ ಬೈಗುಳವೆಂದರೆ ಅದೇನೋ ಪ್ರೀತಿ. ಆ ವಾತ್ಸಲ್ಯವೇ ಅಂಥದ್ದು. ಅಣ್ಣ ತಂಗಿಯರನ್ನು ನೋಡಿದಾಗ ಹೊಟ್ಟೆಯೊಳಗೊಂದು ತಣ್ಣನೆಯ ಹೊಟ್ಟೆ ಕಿಚ್ಚು ಶುರುವಾಗಿ ಬಿಡುತ್ತದೆ ಮಾರಾಯ್ರೆ ! ಇರುವುದೆಲ್ಲವ ಬಿಟ್ಟು, ಇರದುದನ್ನೇ ನೆನೆಯುತ್ತೇವೆ ಅಲ್ವಾ ?
ಸುಮ್ಮನೆ ಹಾಗೆ ಸುತ್ತಲೂ ಕಣ್ಣಾಡಿಸಿದೆ, ಅವರಿಬ್ಬರ ಅಪ್ಪ ಅಮ್ಮನ ಹುಡುಕಲು. ಅದೊಂದು ಮರಾಠಿಗರ ಕುಟುಂಬವಾಗಿತ್ತು. ಕೊಂಕಣಿಯನ್ನು ಸಲೀಸಾಗಿ ಮಾತನಾಡುವ ನನಗೆ, ಮರಾಠಿ ತಕ್ಕ ಮಟ್ಟಿಗೆ ಅರ್ಥವಾಗುತ್ತದೆ. ಅಜ್ಜಿ ಅಜ್ಜನ ಜೊತೆ ಪಪ್ಪ ಇದ್ದದ್ದು ಕಂಡಿತು. ಅಮ್ಮ ಕಾಣಲಿಲ್ಲ. ತೊದಲು ನುಡಿಯಲ್ಲಿ ಅದೇನೇನೋ ಹೇಳುತ್ತಿತು ಮಗು, ತನ್ನ ಅಜ್ಜಿಯ ಬಳಿ ಬಂದು. ಕುಕ್ಕರಗಾಲಲ್ಲಿ ಕುಳಿತ ಅಜ್ಜಿಯ ಬಳಿ ಅದೇನೇನೋ ತಿನಿಸುಗಳು.
ಪುಟ್ಟ ಹುಡುಗಿ ಅಜ್ಜಿಯ ಬಳಿ ಕುಡಿಯಲು ನೀರು ಕೇಳುತ್ತ, ತನ್ನ ಗೆಜ್ಜೆಕಾಲುಗಳ ಹೆಜ್ಜೆಯನ್ನು ಎರ್ರಾಬಿರ್ರಿ ಹಾಕುತ್ತ ಹೋದರೆ,ಅಣ್ಣ ಅವಳು ತಿಂದು ಬಿಸಾಕಿದ್ದೆಲ್ಲವನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಿದ್ದ. ಮನದಲ್ಲೇ ಹುಡುಗನಿಗೆ 'ಶಹಬ್ಬಾಸ್' ಎಂದುಬಿಟ್ಟೆ. ಮುಖದಮೇಲೊಂದು ಕಿರು ನಗೆ ಅನಾಯಾಸವಾಗಿ ಹಾದು ಹೋಯಿತು.
ಅದೇನೋ ಖುಷಿಯಾಯಿತು ಮನಸ್ಸಿಗೆ. ಅಷ್ಟರಲ್ಲಿ ಟ್ರೇನು ಬಂದಿತ್ತು.ಟ್ರೈನಿನೊಳಗೆ ಜಾಗ ಹಿಡಿದು ಕುಳಿತವಳ ಮನಸಿನಲ್ಲಿ ಮತ್ತದೇ ಪುಟ್ಟ ಹುಡುಗಿಯ ಅಣ್ಣನೇ ಕಾಣುತ್ತಿದ್ದ,ಕಸಗಳನ್ನೆತ್ತಿ ಕಸದ ಬುಟ್ಟಿಗೆ ಹಾಕಿದ ಅವನ ಪುಟ್ಟ ಕೈಗಳೇ ಕಾಣುತ್ತಿದ್ದವು.ಆರರ ಹುಡುಗ ರೈಲ್ವೆ ನಿಲ್ದಾಣದಲ್ಲಿಯ ಹಲವು ಬುದ್ಧಿ ಜೀವಿಗಳಿಗೆ ಮುಗ್ಧವಾಗಿ ಪಾಠ ಕಲಿಸಿ ಬಿಟ್ಟಿದ್ದ. !
ಹೌದು ಸ್ನೇಹಿತರೆ ಚಿಕ್ಕಂದಿನಲ್ಲಿ ನಮ್ಮಲ್ಲಿರುವ ಪ್ರಕೃತಿ ಪ್ರೇಮ, ದೇಶ ಭಕ್ತಿ, ಪರಿಸರದ ಬಗ್ಗಿನ ಕಾಳಜಿ ಎಲ್ಲ ದೊಡ್ದವರಾಗುತ್ತಿದ್ದಂತೆ ಕಳೆದುಹೊಗುತ್ತಿರುವುದೇಕೆ ? ಸ್ವಾರ್ಥತೆಯೇ? ಅಥವಾ ನಮ್ಮನ್ನು ನಾವೇ ಬಂಧಿಸಿಕೊಳ್ಳುವ ಬಗೆಗೋ ?
ನಾವು ವಿದೇಶದಲ್ಲಿ ಅಲ್ಲಿಯ ನಿಯಮಗಳನ್ನು ಪಾಲಿಸುತ್ತೇವೆ. ಅದೇ ಭಾರತದಲ್ಲಾದರೆ ತಿಂಡಿ ತಿನಿಸುಗಳನ್ನು ತಿಂದು ಕಸವನ್ನು ಬೇಕಾಬಿಟ್ಟಿಯಾಗಿ ಬಿಸಾಡುತ್ತೇವೆ. ಹಾಗೆ ಭಾರತದಲ್ಲಿ ಶಿಸ್ತಿಲ್ಲ, ಗಲೀಜು ದೇಶ ಎಂದು ಅದೆಷ್ಟು ನಿರಾಯಾಸವಾಗಿ ಹೇಳುತ್ತೇವೆ ಅಲ್ವಾ ?
ಆದಷ್ಟು Garbage binಗಳಲ್ಲೇ ಕಸವನ್ನು ಹಾಕೋಣ. ನಮ್ಮ ಸುತ್ತಲಿನ ಪರಿಸರದ ಕಾಳಜಿ ನಮ್ಮದು ಅಲ್ವಾ ಸ್ನೇಹಿತರೆ? ಕೊನೆಯ ಪಕ್ಷ ಬುದ್ಧಿಜೀವಿಗಳು ಎನಿಸಿಕೊಳ್ಳುವ ಒಂದಿಷ್ಟು ಜನ ತಮ್ಮ ಜವಾಬ್ದಾರಿಯನ್ನು ಅರಿತರೆ, ಎಲ್ಲೆಲ್ಲೋ ಬೀಳುವ ಕಸ ಒಂದಿಷ್ಟು ಕಡಿಮೆಯಾಡಿತು.
ಇವಿಷ್ಟು ಮನಸಿನಲ್ಲಿ ಮೂಡುವ ಹೊತ್ತಿಗೆ ಉಡುಪಿ ನಿಲ್ದಾಣ ಬಂದಿತ್ತು. ಟ್ರೈನ್ನಿಂದ ಇಳಿಯುತ್ತಿದ್ದೆ. ನನ್ನ ಕುರ್ತಾ ಅದೆಲ್ಲೋ ಸಿಕ್ಕಿ ಹಾಕಿಕೊಂಡಿತ್ತು. ಬಿಡಿಸಲು ಹಿಂತಿರುಗಿದರೆ. ಮುದ್ದಾದ ಪುಟ್ಟ ಮಗುವೊಂದರ ಮುಷ್ಠಿಯೊಳಗೆ ಕುರ್ತಾದ ಅಂಚು ಬಂಧಿಯಾಗಿತ್ತು. ನಿಧಾನಕ್ಕೆ ಬಿಡಿಸಿಕೊಂಡು ಇಳಿದೆ. ಪುಟ್ಟ ಮಗುವಿನ ಕೈಯ ಸ್ಪರ್ಶದ ಅನುಭವ ಮುಖದಲ್ಲೊಂದು ಮುಗುಳುನಗೆಯನ್ನು ಮತ್ತೊಮ್ಮೆ ಮೂಡಿಸಿತ್ತು.
"ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ಜೀವನ......... "
ReplyDeleteಸುಮ್ಮನೇ ಹೇಳಿದ್ದಾರಾ ನಮ್ಮ "ಅಡಿಗರು" ಇದನ್ನಾ, ಜೀವನವೇ ಹಾಗೆ ಸೌಮ್ಯಾ....
ಅಣ್ಣ, ತಂಗಿಯರ ಭಾಂದವ್ಯವನ್ನು ತೋರಿಸುವುದರ ಜೊತೆಗೆ, ನಮ್ಮಲ್ಲಿ ಪರಿಸರದ ಕಾಳಜಿಯನ್ನೂ ಬಿಂಬಿಸುತ್ತಿದೆ ನಿನ್ನ ಬರಹ.
ಇದನ್ನು ಓದಿದವರಾದರೂ ಜಾಗ್ರತರಾಗಲಿ ಎನ್ನುವ ಆಶಯದೊಂದಿಗೆ,
ಗೆಳೆಯ,
ಅನಂತ ಹೆಗಡೆ
nice...
ReplyDeletenice write up.. :-)
ReplyDeleteಸೌಮ್ಯ ಅವರೆ;ತುಂಬಾ ಆಪ್ತ ಎನಿಸುವಂತಹ ಬರಹ.ಇಷ್ಟವಾಯಿತು.ನನ್ನ ಬ್ಲಾಗಿಗೊಮ್ಮೆ ಬನ್ನಿ.ನಮಸ್ಕಾರ.
ReplyDeletetouching...:)
ReplyDeleteಬರಹವನ್ನು ಓದುತ್ತಿದ್ದರೆ ಮನಸ್ಸಿಗೆ ಆಪ್ತವೆನಿಸುತ್ತದೆ...ತುಂಬಾ ಇಷ್ಟವಾಯಿತು..
ReplyDeleteಮಧುರ ಅತಿ ಮಧುರ ಭಾವನೆಗಳ ಸಂಗಮ.. ಮನಸ್ಸು ಪುಳಕಗೊಂಡಿತು..
ReplyDeleteನನಗೆ ಯಾವತ್ತು ನನಗೊಬ್ಬ ಅಣ್ಣ ಬೇಕಿತ್ತು ಅಂತ ಅನಿಸಲೇ ಇಲ್ಲ..ನಾನು ಹಾಗೆ ಬೆಳೆದಿದ್ದೇನೆ..ಆದರೆ ರಕ್ಷಾ ಬಂಧನದ ದಿನ ನನ್ನ ಸ್ನೇಹಿತೆಯರೆಲ್ಲರು ರಾಖಿ ಕೊಳ್ಳುವಾಗ ನಾನು ನೊಂದಿದ್ದೇನೆ..ಒಳ್ಳೆಯ ಬರಹ ಸೌಮ್ಯ...ಬಾಲ್ಯದ ಮುಗ್ಧತೆ ಮತ್ತೆ ಸಿಗಲಾರದು.. ಅಥವಾ ನಾವೇ ಕಳೆದು ಕೊಂಡು ಬಿಟ್ಟೇವೆ..??
ReplyDeleteಸೌಮ್ಯ, ನಾನು ಕೂಡ ತಂಗಿ ಇಲ್ಲದೇ ನೊಂದಿದ್ದೆ. ಈ ಅಂತರ್‍ಜಾಲದಲ್ಲಿ ನನಗೊಬ್ಬ ಪ್ರೀತಿಯ ತಂಗಿ ದೊರಕಿದ್ದಾಳೆ, ನಿಮಗೆ ಧನ್ಯವಾದಗಳು.. ಹೃದಯಸ್ಪರ್ಶಿ ಬರಹಕ್ಕಾಗಿ............
ReplyDeletegood one...
ReplyDeletenie one yaar..
ReplyDeletesundaravagide... manusya chikkavanagiddaga
iruva samjika kalakali doddavaragutta tamma swartadinda dadda agoguttane..
chenagi barediddra..
danyavaadagalu..
ಸೌಮ್ಯ ಅಣ್ಣನಿಲ್ಲದ ಭಾವನೆಯನ್ನು ನಿಮ್ಮಲಿ ಮೂಡಿಸಿ , ಕಸದ ಬುಟ್ಟಿಯಲ್ಲಿ ಕಸವನ್ನು ಹಾಗುವ ಮೂಲಕ ನಿಮ್ಮ ಮನಗೆದ್ದ ಆ ಪುಟ್ಟ ಮಗುವಿಗೆ ನನ್ನದೊಂದು ಸಲಾಂ,ಬರಹ ಚೆನ್ನಾಗಿದೆ.ಅಣ್ಣ ನಿಲ್ಲದ ಕೊರಗು ಬೇಡ ಬ್ಲಾಗ್ ಕುಟುಂಬದಲ್ಲಿ ಎಷ್ಟೊಂದು ಅಣ್ಣಂದಿರು ಇದ್ದಾರೆ ನೋಡಿ.[ನನ್ನನ್ನೂ ಸೇರಿದಂತೆ.] ಜಿತೇಂದ್ರ ಹಿಂಡುಮನೆ ಮಾತಿಗೆ ನನ್ನ ಸಹಮತವಿದೆ. ನಿಮ್ಮ ಬರಹಕ್ಕೆ ಜೈ ಹೋ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ನನಗೂ ಅಣ್ಣ /ತಮ್ಮ ಇರಬೇಕಿತ್ತು ಅನ್ನಿಸಿತ್ತು ಕಣೆ..( though I have many cousins) ಅನ್ನಿಸಿತ್ತು ..Nice write up...:-)
ReplyDeletetumba chennagide lekhana manasige hattiravaytu
ReplyDeleteನನಗೂ ಅಡಿಗರ ಅದೇ ಸಾಲುಗಳು ನೆನಪಾದವು. ಧನ್ಯವಾದಗಳು ಅನಂತ್ :)
ReplyDeleteThank you Digwas and Kanti :)
ReplyDelete@ ಸುಬ್ರಮಣ್ಯ :))
ಧನ್ಯವಾದಗಳು ಕೃಷ್ಣಮೂರ್ತಿ ಸರ್. ಖಂಡಿತ ಬರುತ್ತೇನೆ :)
ReplyDelete@ ಚುಕ್ಕಿಚಿತ್ತಾರ thank u :)
Thanks a lot shivu sir :)
ReplyDeleteಧನ್ಯವಾದಗಳು ಪ್ರದೀಪ್
ಅಣ್ಣನ ಪ್ರೀತಿ, ಬೈಗುಳ, careಗಳೇ ವಿಶಿಷ್ಟ ವಾಣಿ. ನನ್ನ ತಮ್ಮ ಮತ್ತು ಚಿಕ್ಕಮ್ಮನ ಮಗ ಇಬ್ಬರೂ ನನ್ನ ಬಹಳ ಪ್ರೀತಿಸಿದರೂ ಅದೇಕೆ ಒಬ್ಬ ಅಣ್ಣನನ್ನು ಮಿಸ್ ಮಾಡ್ತೇನೆ ಗೊತ್ತಿಲ್ಲ :(
ReplyDeleteಒಬ್ಬ ಅಣ್ಣನಿರಬೇಕೆಂದು ನನಗು ಚಿಕ್ಕಂದಿನಲ್ಲಿ ಅನ್ನಿಸುತ್ತಿತ್ತು. ಎಂದಿನಂತೆಯೇ ಸುಂದರವಾದ ಬರಹ ಸೌಮ್ಯ . ಇಷ್ಟ ಆಯಿತು .
ReplyDeleteಹೌದು ಈ ಬ್ಲಾಗ್ ಲೋಕದಿಂಗಾಗಿ ಹಲವರು ಆತ್ಮೀಯರಾಗಿದ್ದಾರೆ. ಧನ್ಯವಾದಗಳು ಜೆತೇಂದ್ರ ಅಣ್ಣ :)
ReplyDeletethank u Dinakar sir :)
ಧನ್ಯವಾದಗಳು ತರುಣ್. ಸ್ವಾರ್ಥದಿಂದ ನಮ್ಮೊಳಗಿನ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಅಲ್ವಾ ?
ReplyDeleteತುಂಬಾ ಧನ್ಯವಾದಗಳು ಬಾಲು ಸರ್ :) ಎಷ್ಟೊಂದು ಪ್ರೀತಿ ತೋರಿದ್ದಕ್ಕೆ ತೋರುತ್ತಿರುವುದಕ್ಕೆ :) ತುಂಬಾ ಸಂತಸವಾಗುತ್ತಿದೆ :)
ReplyDeleteಮತ್ತೊಮ್ಮೆ same pinch ದಿವ್ಯಾ :)
ReplyDelete@ ಮನಸು thank u :)
ReplyDeletethanks a lot ಸುಮಕ್ಕ :)
super.... :)
ReplyDeleteGood one.. ಬಾಲ್ಯದಲ್ಲಿರುವ ಸೋದರ ಮಮತೆ ಬೆಳೆದು ತನ್ನದೇ ಪ್ರಪಂಚವಾಗುತ್ತಿರುವಂತೇ ಸ್ವಂತ ತಂಗಿಯನ್ನು ಕಡೆಗಣಿಸುವ ಅಣ್ಣಂದಿರನ್ನೂ ಬಹು ಹತ್ತಿರದಿಂದ ನೋಡಿದ್ದೇನೆ. ಆ ನೋವಿನಲ್ಲೇ ಬೆಂದ ತಂಗಿಯರನ್ನು ಕಂಡಿದ್ದೇನೆ. ಹಾಗಾಗಿ ನನಗೆ ಅಣ್ಣ/ತಮ್ಮ ಇಲ್ಲ ಎನ್ನುವ ಕೊರಗನ್ನು ಸಾಕಷ್ಟು ಕಡಿಮೆ ಮಾಡಿಕೊಂಡಿದ್ದೇನೆ.
ReplyDeleteನಿಜ... ಇದ್ದರೆ ಸದಾ ಕಾಲ ಅಣ್ಣನಂತಿರುವ ಅಣ್ಣನಿರಬೇಕು... :)
ನಾನು ಕೂಡ ಒಬ್ಬನೇ. ಓದಿ ನನಗೂ ಅಕ್ಕ ತ೦ಗಿನೊ ಅಥವಾ ಅಣ್ಣ ತಮ್ಮನೋ ಇರಬೇಕು ಅನ್ನಿಸಿದ್ದು ಮಾತ್ರ ನಿಜ. ಅದರಲ್ಲೂ ರಾಖಿಯಾ ದಿನ ಮನಸ್ಸಿಗೆ ತು೦ಬಾ ಬೇಜಾರಾಗುತ್ತೆ. ಒಟ್ಟಾರೆ ಬರಹ ಸೂಪರ್....keep it up
ReplyDeleteSRi:-)
ಆರರ ಹುಡುಗ ರೈಲ್ವೆ ನಿಲ್ದಾಣದಲ್ಲಿಯ
ReplyDeleteಹಲವು ಬುದ್ಧಿ ಜೀವಿಗಳಿಗೆ ಮುಗ್ಧವಾಗಿ
ಪಾಠ ಕಲಿಸಿ
ಬಿಟ್ಟಿದ್ದ . ! Nice line...
hey...nice article...
ReplyDeleteTumba Chennagide Sowmya... Ninagyake ee Anna illa anno koragu.. Navella ilva illi..
ReplyDeleteBAREUVA STYLE chennagide...mansige tumba hattiravada baraha...
ReplyDeletethank you Va. shri, ಕನ್ನಡಬ್ಲಾಗ್ ಲಿಸ್ಟ್, anusha and Giliyar :) :)
ReplyDeleteಹೌದು ತೇಜಕ್ಕ ಆ ಚಿಕ್ಕಂದಿನ ಪ್ರೀತಿ ದೊಡ್ಡವರಾದ ಮೇಲೆ ಜಂಜಾಟದ ನಡುವೆ ಇರುವುದಿಲ್ಲ ಎಂದೆನಿಸಿದರೂ. ಆ ಮುಗ್ಧತೆ ಇಷ್ಟವಾಗಿತ್ತೆನಗೆ. ಧನ್ಯವಾದಗಳು :)
ReplyDelete@ Adesh thanks a lot :)
ಸೌಮ್ಯ..ಹೆಣ್ಣು ಮಕ್ಕಳಿಗೆ ತಮ್ಮ ಅಥವಾ ಅಣ್ಣನಿರಬೇಕೆಂಬ ಬಯಕೆ ಇರುವಂತೆಯೇ ಗಂಡು ಮಕ್ಕಳಿಗೆ ಆಸೆ ಇರುತ್ತೆ ತಂಗಿಯೋ ಅಥವಾ ಅಕ್ಕನೋ ಇರಬೇಕೆಂದು ಆದರೆ ಇದು ಹೆಣ್ಣುಮಕ್ಕಳಿಗಿರುವ ಉತ್ಕಟವಾಗಿರೊಲ್ಲ ಅನ್ನೊದಂತೂ ನಿಜ...ಚನ್ನಾಗಿದೆ ಬಾಂಧವ್ಯಗಳ ಮಧ್ಯದ ನವಿರುಗಳನ್ನು ಬಿಡಿಸಿದ ಲೇಖನ.
ReplyDeletesowmya.B...,
ReplyDeleteಒಮ್ಮೊಮ್ಮೆ ಹೀಗೂ ಆಗುವುದು..
ಹೌದಲ್ವ.. ಮಕ್ಕಳ ಆತ ನೋಡೋಕೆ ಚೆನ್ನ..
ಒಮ್ಮೊಮ್ಮೆ ನನಗೂ ಸೋದರಿ ಇರಬೇಕಿತ್ತು ಎನಿಸುತ್ತದೆ..
ತು೦ಬಾ ಧನ್ಯವಾದಗಳು ಸೌಮ್ಯಾ
ReplyDeleteಈಗ ಓದಿದೆ. ಚನಾಗಿದೆ. ಇಷ್ಟ ಆಯ್ತು. :-)
ReplyDeleteಮುದ್ದು ಕಂದಮ್ಮಗಳ ಮನಸನ್ನ ತುಂಬಾ ಚೆನ್ನಾಗಿ ವರ್ಣಿಸಿ ಒಂದು ಒಳ್ಳೆ ಸಂದೇಶವನ್ನ ಕೊಟ್ಟಿದ್ದಿರಿ . ಅಧ್ಬುತ .
ReplyDelete-ಬಸು