ಅದೊಂದು ಹಿಮ ಕಣಿವೆ. ಹಿಮಾಚ್ಛಾದಿತ ಬೆಟ್ಟ ಗುಡ್ಡಗಳು, ಸುಂದರ ಹೂ ಬನಗಳು, ಸ್ವಚ್ಛ ತಿಳಿನೀರ ಸರೋವರಗಳು, ಹಿಮನದಿಗಳು, ನೀರ ಬುಗ್ಗೆಗಳು ಅಲ್ಲಿಯ ನಿತ್ಯ ನೋಟವಾಗಿತ್ತು. ಹೊಸತಾಗಿ ಮದುವೆಯಾದವರಿಗೆ ಅದು ಸ್ವರ್ಗ.ಅಲ್ಲಿನ ಜನರೂ ತಿಳಿನೀರ ಮನಸಿನ, ನಗುಮೊಗದ, ಹಿಮದಂಥ ಮೈಬಣ್ಣದವರೇ. ಆದರೆ ಅದು ಶಾಪಗೃಸ್ಥ ಕಿನ್ನರಲೋಕವಿರಬೇಕು.! ಅಲ್ಲಿನ ಜನರಿಗೆ ನೆಮ್ಮದಿ, ನಿರಾಳತೆ ಎನ್ನುವುದು ಒಂದು ಮರೀಚಿಕೆ, ಶಬ್ದಕೋಶದಲ್ಲಷ್ಟೇ ಅರ್ಥ ಸಿಗುವ ಒಂದೆರಡು ಪದಗಳು. ಹೌದು ..!ನಾನು ಈಗ ಹೇಳ ಹೊರಟಿರುವುದು ಭಾರತ ಮಾತೆಗೆ ಕಿರೀಟದಂತೆ ಇರುವ ಕಾಶ್ಮೀರದ ಬಗ್ಗೆ.
ಒಮ್ಮೆ ಕಣ್ಮುಚ್ಚಿ ಭಾರತದ ಭೂಪಟವನ್ನು ಕಲ್ಪಿಸಿಕೊಳ್ಳಿ ಒಂದು ಮಾನವಾಕೃತಿಯಂತೆ ಇದೆ ಅಲ್ವಾ? ಅದರಲ್ಲೂ ಕೈತೆರೆದು ನಿಂತ ಮಾನವಾಕೃತಿ ( ಈಶಾನ್ಯ ರಾಜ್ಯಗಳಿರಿವುದು ಎಡಗೈ, ಗುಜರಾತ್ ಬಲಗೈ). ಪಾದವಿಡಲು ಪುಟ್ಟ ಜಾಗ ಸಾಕಲ್ಲವೇ?ದಕ್ಷಿಣದ ಕೊನೆ ಪುಟ್ಟದಾಗೆ ಇದೆ ..! (ಜಗತ್ತಿನ ಮತ್ತಾವ ದೇಶವೂ ಇದರಂತೆ ಇರಲಿಕ್ಕಿಲ್ಲ.) ಅದಿಕ್ಕೆ ಭಾರತ ಮಾತೆ ಎಂದು ಕರೆದಾಗ ದೇವಿಯ ಕಲ್ಪನೆ ಮೂಡಿಬಿಡುತ್ತದೆ. ದೇವಿಗೆ ಕಿರೀಟವಿರದಿದ್ದರೆ ?? ತಲೆಗಿಂತ ಕಿರೀಟ ಸ್ವಲ್ಪ ದೊಡ್ಡದಿರಬೇಕು right? ಉತ್ತರದ ಕೊನೆಯನ್ನೊಮ್ಮೆ ನೋಡಿ, ಕಾಶ್ಮೀರ ಕಿರೀಟದಂತೆ ಕಾಣುತ್ತಿದೆ.
ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ (ಉಗ್ರರು), ಆಫ್ಗಾನ್, ಟಿಬೆಟ್ ಎಲ್ಲ ಕಡೆಯ ನಿರಾಶ್ರಿತರು ಬರುವುದು ಭಾರತಕ್ಕೇ. ಅವರಿಗೂ ಭಾರತ ಕೈತೆರೆದು ನಿಂತ ತಾಯಿಯಾಗಿ ಕಂಡಿರಬೇಕು. ಅಥವಾ ರಾಜಕಾರಣಿಗಳ ದೊಂಬರಾಟದ ದೇಶವಾಗಿ ಕಂಡಿದೆಯೋ ...! ಜಗತ್ತಿನ ಇನ್ಯಾವ ದೇಶ ಇಷ್ಟೊಂದು ನಿರಾಶ್ರಿತರಿಗೆ ಜಾಗ ಕೊಟ್ಟಿದೆ ಹೇಳಿ ?
ಅಮೆರಿಕದಂಥ ಪಶ್ಚಿಮದ ದೇಶಗಳು ಭಾರತದ ಪ್ರತಿಭೆಗಳಿಗೆ ಮಣೆ ಹಾಕಿದೆಯೇ ಹೊರತು ನಿರಾಶ್ರಿತರಿಗಲ್ಲ.
ಕಾಶ್ಮೀರ ಮೊದಲಿನಿಂದಲೂ ಹಾಗೆ, ಅದು ವಿವಾದಿತ ಪ್ರದೇಶ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ. ಕಾಶ್ಮೀರವು ಸ್ವತಂತ್ರ ದೇಶವಾಗಬೇಕು ಎಂದುಕೊಂಡಿದ್ದ ಅಲ್ಲಿನ ಮಹಾರಾಜ ಹರಿಸಿಂಗ್. ನಂತರ ಪಾಕ್ ಗೆರಿಲ್ಲಾ ಮಾದರಿಯಲ್ಲಿ ದಂಡೆತ್ತಿ ಬಂದಾಗ ವಿಧಿಯಿಲ್ಲದೇ ಭಾರತಕ್ಕೇ ಶರಣಾಗಿದ್ದ. ಭಾರತಕ್ಕೆ ಕಿರೀಟ ದೊರಕಿತ್ತು. ಅದೆಲ್ಲ ಈಗ ಇತಿಹಾಸ .!
ಆದರೂ ಕಾಶ್ಮೀರ ಹರಿದು ಹಂಚಿ ಹೋಗಿದೆ. ಪಾಕಿಸ್ತಾನವು ವಾಯುವ್ಯ ಭಾಗವನ್ನು(ಉತ್ತರ ಭಾಗದ ಪ್ರದೇಶಗಳು & ಆಜಾದ್ ಕಾಶ್ಮೀರ), ಭಾರತವು ಕೇಂದ್ರೀಯ & ದಕ್ಷಿಣ ಭಾಗದ (ಜಮ್ಮು& ಕಾಶ್ಮೀರ,) & ಹಾಗೂ ಲಡಾಖ್‌ನ್ನು ನಿಯಂತ್ರಿಸಿದರೆ, ಚೀನಾವು ಈಶಾನ್ಯ ಭಾಗವನ್ನು (ಅಕ್ಸಾಯ್ ಚಿನ್ ಮತ್ತು ಟ್ರಾನ್ಸ್-ಕರಕೋರಂ ಟ್ರಾಕ್ಟ್) ನಿಯಂತ್ರಿಸುತ್ತದೆ.
ಅಲ್ಲಿಂದ ಶುರುವಾದ ರಕ್ತ ಸಿಕ್ತ ಇತಿಹಾಸ ಇನ್ನೂ ಮುಂದುವರೆದಿದೆ. ಕಾಶ್ಮೀರದ ಜನರೂ ಶಾಂತಿಪ್ರಿಯರೇ.ಹಿಂದೂಗಳು ಹಾಗೂ ಮುಸ್ಲಿಮರು ಸೌಹಾರ್ದಯುತ ಜೀವನವನ್ನೇ ನಡೆಸುತ್ತಿದ್ದರು. ಆದರೆ ಇತ್ತೀಚಿನ ಒಂದು ದಶಕದಲ್ಲಿ ಪರಿಸ್ಥಿತಿ ಬಿಗಡಾಯಿಸಿ ಹೋಗಿದೆ. ಪ್ರವಾಸೋದ್ಯಮ ಸಂಪೂರ್ಣವಾಗಿ ಕುಸಿದಿದೆ. ಬೆಳಗಾದರೆ ದೇವಾಲಯಗಳಲ್ಲಿ ಘಂಟೆಗಳ ನಾದವಿಲ್ಲ, ಸುಂದರ ಕಣಿವೆಗಳಲ್ಲಿನ ಹೂವುಗಳಿಗೂ ಅರಳಲು ಭಯ, ಭಯದ ಚಾದರವನ್ನೇ ಹೊದ್ದು ಶಾಲೆಗೆ ಹೋಗುವ ಮುಗ್ಧ ಕಂದಮ್ಮಗಳು,ಹೊರಗೆ ಹೋದ ಮನೆಯ ಜನ ಜೀವಂತ ಬಂದಾಗಲೇ ಸತ್ಯ ಅವರು ಬದುಕಿದ್ದದ್ದು. ಬಂದೂಕಿನ ನಳಿಕೆಯ ತುದಿಗಳಲ್ಲೇ ಇರುವ ಯಮಪಾಶ, ಜನರು ಸಾವಿನ ನೆರಳಲ್ಲೇ ಓಡಾಡುತ್ತಾರೆ. ಶೆಲ್,ಗ್ರೆನೇಡ್ A.K47 ಇವೆಲ್ಲ ಅಲ್ಲಿನ ಮಕ್ಕಳಿಗೆ ಸಾವಿಗೆ ಪರ್ಯಾಯವಾದ ಶಬ್ದ. ಕೋಮುಗಲಭೆ, ರಾಜಕೀಯ ದೊಂಬರಾಟ, ಬಸ್ಸಿಗೆ ಬೆಂಕಿ , ಕಲ್ಲು ತೂರಾಟ, ಕೈ ಬಾಂಬ್ ಎಸೆತ , ರಕ್ತದೋಕುಳಿ, ಎಲ್ಲ ಮುಗಿದ ಮೇಲೆ ಕರ್ಫ್ಯೂ. ನಂತರ 'ಶಾಂತಿ' ಎಂಬ ಪದದ ಹುಡುಕಾಟ. ಇಷ್ಟೇ ಆಗಿದೆ ಅಲ್ಲಿನ ಅವಸ್ಥೆ . A to Z ಶ್ರೇಣಿಯ ಭದ್ರತೆಯಲ್ಲಿ ಓಡಾಡುವ ರಾಜಕಾರಣಿಗಳಿಗೆಲ್ಲಿ ತಿಳಿಯಬೇಕು ಜನ ಸಾಮಾನ್ಯನೊಬ್ಬನ ಬದುಕು? ಮನೆಯ ಹೊರಬಂದು ಆಡಲಾಗದ ಆ ಮುದ್ದು ಕಂದಮ್ಮಗಳ ಕಣ್ಣಲ್ಲಿರುವ ಭಯ.!
ಹಬ್ಬಗಳ ಗಲಾಟೆಯಲ್ಲಿ ಒಂದು ಲಕ್ಷ್ಮೀ ಪಟಾಕಿಯ ಶಬ್ದಕ್ಕೆ ಕಿವಿ ಮುಚ್ಚಿಕೊಳ್ಳುತ್ತೇವೆ ನಾವು. ಇನ್ನು ಕಣ್ಣೆದುರಿಗೆ ಮದ್ದು ಗುಂಡುಗಳ ಸುರಿಮಳೆಯಾಗಿ, ರಕ್ತ ಕೋಡಿಯಾಗಿ ಹರಿದು, ಸಾವು ತಾಂಡವವಾಡಿದರೆ? ಒಮ್ಮೆ ಯೋಚಿಸಿ ಗೆಳೆಯರೇ ....
ಅಲ್ಲಿಯ ಗಲಾಟೆ ನೋಡಿ ದೇವರೂ ಮುನಿಸಿಕೊಂಡಿದ್ದಾನೆ. ನೆಲದಲ್ಲಿನ ಬಾಂಬ್ ಸ್ಪೋಟಕ್ಕೆ ಸರಿಯಾಗಿ, ಬಾನಲ್ಲಿ ಮೇಘ ಸ್ಪೋಟ..! ಮತ್ತೆ ಕಂಗಾಲಾಗಿದ್ದಾರೆ ಜನ. ಮತ್ತೊಂದಿಷ್ಟು ಸಾವು,ನೋವು, ನರಳಾಟ, ಕಣ್ಣೀರು...
ಇನ್ನಾದರೂ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳಲಿ. ಕಾಶ್ಮೀರದ ಕಣಿವೆಗಳಲ್ಲಿ ಶಾಂತಿಯ ಹೂ ಅರಳಲಿ. ಮುಗ್ಧ ಕಂದಮ್ಮಗಳು ನಿರ್ಭೀತಿಯಿಂದ ಆಡಲಿ, ದಾಲ್ ಸರೋವರದಲ್ಲಿ ಮತ್ತೊಮ್ಮೆ ಜೋಡಿ ಹಕ್ಕಿಗಳು ತೇಲಲಿ....ಭಾರತದ ಮುಕುಟದಲ್ಲಿನ ಹಿಮರಾಶಿ ಸೂರ್ಯ ರಶ್ಮಿಗೆ ಹೊಳೆಯಲಿ. ಎಂದು ಹಾರೈಸುವುದಷ್ಟೇ ನಮ್ಮ ಪಾಲಿಗೆ ಉಳಿದದ್ದು ...
ಲಡಾಕಿನ ಗಿರಿ, ಪರ್ವತದಲ್ಲಿ ಬಂದೂಕನ್ನು ಹೆಗಲಿಗೇರಿಸಿಕೊಂಡು ಗಡಿ ಕಾಯುತ್ತಿರುವ ಯೋಧನೂ ದೇವರಲ್ಲಿ ಬೇಡಿಕೊಳ್ಳುತ್ತಾನೆ.ಕಾಶ್ಮೀರದಲಿ ಶಾಂತಿ ನೆಲೆಸಿ, ಮತ್ತೊಮ್ಮೆ ಮನದನ್ನೆಯ ಕಣ್ಣುಗಳಲ್ಲಿನ ನಕ್ಷತ್ರಗಳನ್ನು ಹುಡುಕುವಂತಾಗಲೆಂದು.. !
ಹಿಮ ತಣ್ಣಗಿರಬೇಕು.ಎಂತಹ ವಿಪರ್ಯಾಸ!ಹಿಮ ಕಣಿವೆಯಲ್ಲಿ ದ್ವೇಷದ ಜ್ವಾಲೆ ಹತ್ತಿ ಉರಿಯುತಿದೆ!ಇದಕ್ಕೆ ಕೊನೆ ಎಂದೋ!?ಉತ್ತಮ ಬರಹ.ಅಭಿನಂದನೆಗಳು.
ReplyDeleteಸೌಮ್ಯ ಅವರೇ,
ReplyDeleteಹೌದು, ದೇವತೆಗಳ ಸ್ವಂತ ನೆಲವಾದ ಕಾಶ್ಮೀರ ಕಣಿವೆ ಇಂದು ದ್ವೇಷ, ಅಸೂಯೆ, ಉಗ್ರತೆಗಳಿಗೆ ಮೂಕ ಸಾಕ್ಷಿಯಾಗಿ ನಿಂತಿದೆ. ಅದಕ್ಕೆ ಪೂರಕವೆಂಬಂತೆ ಪ್ರಕೃತಿಯ ಅಟ್ಟಹಾಸ ಜನರಲ್ಲಿ ಹಾಹಾಕಾರವೆಬ್ಬಿಸಿದೆ!
ದೇವತೆಗಳು ಕೋಪಗೊಂಡಿರಬಹುದು.
ಲೇಖನ ಮಾಹಿತಿಯುಕ್ತವಾಗಿದೆ.
ಸೌಮ್ಯ..
ReplyDeleteಹಿಮದ ಹಿಂದಿನ ಸತ್ಯವಾದ ಮಾತುಗಳು ಇವು..... ದೂರದಿಂದ ಕಂಡ ಹಾಗೆ ಇಲ್ಲ ಅಲ್ಲಿ..... ರಾಜಕೀಯ , ಧರ್ಮ , ಪಾಕಿ ತಂತ್ರ ಗಳ ಫಲವೇ ಕಾಶ್ಮೀರ ಸಮಸ್ಯೆ..... ಈಗ ಆಗಿರೋದು ನಿಜಕ್ಕೂ ಭಯಾನಕ..... ದೇವರು ಕಾಪಾಡಲಿ....ಮತ್ತೆ ಮೊದಲಿನ ಕಾಶ್ಮೀರ ನಮಗೆಲ್ಲಾ ಸಿಗಲಿ....
soumya nimma kalakali yellarigoo arthavaadare ee lekhana saarthaka vaagutte. olleya lekhana chennaagide. thanks.
ReplyDeletekaashmirada bagge olleya lekhana soumya .
ReplyDeleteಸುಂದರ ಬರಹ
ReplyDeleteಮನಸು ತನ್ನಗಿದ್ದರೆ ಎಲ್ಲವೂ ಚೆಂದ
ಬೆಂಕಿ ಉಗುಳಿದರೆ ಹಿಮವೂ ಕರಗುತ್ತದೆ
ಮಾಹಿತಿಗಳು ಚೆನ್ನಾಗಿವೆ...
ReplyDeleteಉಪಯುಕ್ತ ಮಾಹಿತಿ, ಅದರ ಹಿ೦ದಿರುವ ನಿಮ್ಮ ಕಳಕಳಿ, ಮತ್ತು ಉತ್ತಮ ನಿರೂಪಣೆಗೆ ಧನ್ಯವಾದಗಳು ಸೌಮ್ಯ ಅವರೆ.
ReplyDeleteಅನ೦ತ್
hmm tampagirabekadaja jaagadalli kempagide.. rakthadokuli agta ide... rajakeeyadavara swartha dombaratavallade berenu karana alla...
ReplyDeletebenki hodeyaduttirabekkiddare aarisibidabeku.. illadiddare beekara kadgichchu agutte.. igaagiddu kooda ade.. baraha sakalika..
ಉತ್ತಮ ಬರಹ..
ReplyDeleteಹೌದು..!!
ರಕ್ತದೋಕುಳಿಯಲ್ಲಿ ಮೀಯುತ್ತಿರುವ ಮೊಗ್ಗು ಅರಳಿ ಹೂವಾಗುವುದಾದರೂ ಹೇಗೆ?
ಕಣ್ಣಿಗೆ ಮುದ ನೀಡೋ ಹಿಮಾಲಯ, ರುದ್ರ ರಮಣೀಯ ಕಣಿವೆಗಳನ್ನು ಹೊಂದಿರೋ ಭೂಲೋಕದ ಸ್ವರ್ಗದಲ್ಲಿ ಜನ ರಕ್ತದೋಕುಳಿ ಹರಿಸಿರೋದು ಎಂಥ ವಿಪರ್ಯಾಸ....
ReplyDeleteSowmya...tumbaa uttama baraha.....sakaalika lekhana...
ReplyDeletethank u all :)
ReplyDelete