Thursday, July 28, 2011

ದೋಸ್ತಿಗೊಂದು hats off

ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಗಳೆಲ್ಲ ಮುಗಿದು, ಬಾರಲ್ಲಿ ಬೀಯರ್, ವೋಡ್ಕಾ, ರಮ್, ಹೀರುತ್ತಿರುವ Final year ಹುಡುಗರ ಗುಂಪು ಅದು . ಮಾಮೂಲಿಯಾಗಿ ಇರುತ್ತಿದ್ದಂತೆ ಗಲಾಟೆಯೇ ಇಲ್ಲ ಅಲ್ಲಿ. ಬದಲಾಗಿ ಅಲ್ಲಿರುವುದು ಕಾಲು ಮುರಿದು ಬಿದ್ದಿರುವ ಮೌನ..! ಗ್ಲಾಸಿನಲ್ಲಿಯ ಕೊನೆಯ ಗುಟುಕನ್ನೂ ಹೀರಿ ಏಳುವಾಗ, ಎಲ್ಲರ ಕಣ್ಣಂಚು ಒದ್ದೊದ್ದೆ. examಗಳೆಲ್ಲ ಮುಗಿದು ಇಂಜಿನಿಯರಿಂಗ್ ಮುಗಿಸಿದ ಖುಷಿಗೋ. ಅಥವಾ ನೆನಪುಗಳ ಮೂಟೆ ಹೊತ್ತು, ಗೆಳೆಯರ ಬಳಗವನ್ನು ಬಿಟ್ಟು 
 ಹೊರಡುವುದಕ್ಕೋ ತಿಳಿಯದ ಭಾವ. ಕಣ್ಣ ಕೊನೆಯ ಹನಿಗೆ ಕಾರಣವೇ ತಿಳಿಯದಂತ ವಿಚಿತ್ರ ಸನ್ನಿವೇಶ.!
ಮೊನ್ನೆ ಬಸ್ಸಿನಲ್ಲಿ ಸಿಕ್ಕ ಗೆಳೆಯನೊಬ್ಬ ಹೀಗೆ ಹೇಳುತ್ತಿದ್ದರೆ, ನನ್ನ ಕಣ್ಣ ಅಂಚು ಒದ್ದೊದ್ದೆ. ಮನದೊಳಗೆ ತಣ್ಣನೆಯ ಹೊಟ್ಟೆಕಿಚ್ಚು. ನಾನು ಹುಡುಗನಾಗಬೇಕಿತ್ತೆಂದು ಆ ಘಳಿಗೆಗೆ ಅನಿಸಿದ್ದಂತೂ ಸುಳ್ಳಲ್ಲ.


ಎಲ್ಲೋ ಇಂಥದ್ದೊಂದು ಘಳಿಗೆಯಲ್ಲೇ ಸ್ನೇಹಕ್ಕೆ ನಾವು hats off ಎನ್ನುವುದು. ಜೊತೆಗೆ 'ಪ್ರೇಮಲೋಕ'ಕ್ಕಿಂತ 'ಸ್ನೇಹಲೋಕ' ಬೇರೆಯಾಗಿ ನಿಲ್ಲುವುದು!
ಈ ಸ್ನೇಹಲೋಕವೇ ತೀರಾ ವಿಚಿತ್ರ. ವಯಸ್ಸು, ಲಿಂಗ, ಜಾತಿ, ಧರ್ಮ ಎಲ್ಲವನ್ನು ಮೀರಿ ಬೆಳೆಯುವ ಗೆಳೆತನಕ್ಕೆ ಸರಿ ಸಾಟಿ ಗೆಳೆತನವೇ.!
ಜೀವನದ ದಾರಿಯ ಅದ್ಯಾವುದೋ ತಿರುವುಗಳಲ್ಲಿ ಸಿಗುವ ಸ್ನೇಹಿತರು ನೆಂಟರಿಗಿಂತ ಆಪ್ತರೆನಿಸಿ ಬಿಡುತ್ತಾರೆ. ಭಾವನಾ ಜೀವಿ ಎನಿಸಿಕೊಳ್ಳುವ ಮನುಷ್ಯ ಹುಟ್ಟಿದಂದಿನಿಂದ ಕೊನೆಯುಸಿರಿರುವ ತನಕವೂ ಸ್ನೇಹಿತರ ತಲಾಶಿನಲ್ಲೇ ಇರುತ್ತಾನಂತೆ.

ಗೆಳೆತನ ಎನ್ನುವುದು ಬಾಲ್ಯದಿಂದಲೇ ಇರುತ್ತದೆಯಾದರೂ.ಅದಕ್ಕೆ ಅರ್ಥ ಬರತೊಡಗುವುದು ಹದಿಹರೆಯದ ಸಮಯದಲ್ಲೇ.ಒಬ್ಬ ಮನುಷ್ಯನ ಏಳ್ಗೆ ಅಥವಾ ಅವನತಿ ಅವನ/ಅವಳ ಹದಿಹರೆಯದಲ್ಲಿ  ಸಿಗುವ ಸ್ನೇಹಿತರ ಮೇಲೆ ಅವಲಂಬಿತ ಎಂದರೆ ಅತಿಶಯೋಕ್ತಿ ಅಲ್ಲ.ಬಾಲ್ಯದಲ್ಲಿ ಆಟಕ್ಕೆ ಜೊತೆಯಾಗುವವರೆಲ್ಲ ಗೆಳೆಯರೇ. ಹೆಣ್ಣು ಮಗುವಿಗಾದರೆ ಅವಳ 'ಜುಟ್ಟು ಗೊಂಬೆ' ಆತ್ಮೀಯ ಗೆಳತಿ ಎನಿಸಿ ಬಿಡುತ್ತಾಳೆ. 'ಮಗುವಿನ ನಿರ್ಜೀವ ಗೊಂಬೆಯೊಂದಿಗಿನ ಸಂಭಾಷಣೆ ಜೀವಕ್ಕೆ ಗೆಳೆತನವೊಂದರ ಮಹತ್ವವನ್ನು ಆಗಲೇ ತಿಳಿಸುತ್ತದೆ'. 


ಒಂದು ಮಗು ಬೆಳೆದು ಹದಿಹರೆಯವನ್ನು ತಲುಪಿದಾಗಲೇ ಒಂದು ಜೀವಕ್ಕೆ ಹತ್ತಿರವಾದ ಗೆಳೆತನದ ಅವಶ್ಯಕತೆ ಬೇಜಾನ್ ಕಾಡುತ್ತದೆ.

ಹುಡುಗರಲ್ಲಿ ಬಯಲಲ್ಲಿ ಕ್ರಿಕೆಟ್ ಆಡುವ,ಚಿನ್ನಿದಾಂಡು ಆಡುವ ಗೆಳೆಯರ ಬಳಗ ಬಾಲ್ಯದಲ್ಲಿ ಸಾಮಾನ್ಯ. ಹುಡುಗಿಯರದಾದರೆ ಅಡುಗೆ ಆಟ, ಕುಂಟು ಬಿಲ್ಲೆಯಾಟದ ಗೆಳತಿಯರು. 'ಬಾಲ್ಯದಲ್ಲಿ 'ಸ್ನೇಹ' ಎಂದರೆ ಆಟಕ್ಕೆ ಜೊತೆಯಾಗುವವರು'. ಜೀವನದ ಆಟದಲ್ಲಿ ಜೊತೆಯಾಗುವವರೆಲ್ಲ ಸ್ನೇಹಿತರು ಎಂಬುದನ್ನು ಬಾಲ್ಯದಲ್ಲಿಯೇ ಬದುಕು ಕಲಿಸುತ್ತದೆ ಎನಿಸಿಬಿಡುತ್ತದೆ.

ಗೆಳೆತನ ಅರಳಿಕೊಳ್ಳುವ ಬಗೆಯೇ ಒಂದು ಗಿಡದಲ್ಲಿ ಮೊಗ್ಗು ಅರಳಿ ಹೂವಾದಂತೆ ನವಿರು. ಕಡಲ ಅಲೆಗಳಿಗೆ ದಡದ ಸಾಂತ್ವನದಂತೆ, ಸಾಂಗತ್ಯದಂತೆ. ಜೀವದ ಭಾವಗಳಿಗೆಲ್ಲ ಜೊತೆ ಗೆಳೆತನ. 'ನೀನು ಅತ್ತಾಗಲೆಲ್ಲ ನಿನಗೆ ಭುಜವಾಗುವೆ. ನೀನು ನಕ್ಕಾಗ ನಿನ್ನ ಕಂಗಳ ಅಂಚಿನಲ್ಲಿ ಮೂಡುವ ಗೆರೆಗಳಾಗುವೆ. ಜೀವನ ಎನ್ನುವುದರಲ್ಲಿ ಇರುವುದು ಮುಖ್ಯವಾಗಿ ಎರಡೇ ಭಾವ ನಗು- ಅಳು. ಅದೆರದಕ್ಕೆ ಜೊತೆಯಾಗುವೆ ಎನ್ನುವ ಸ್ನೇಹವನ್ನು ಜೀವನ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ ಅಲ್ವಾ ?

ಮನುಷ್ಯ ತನ್ನಲ್ಲಿಲ್ಲದ್ದನ್ನು ಹುಡುಕುತ್ತಲೇ ಇರುತ್ತಾನೆ. ಸಿಕ್ಕಾಗ ಅದರೆಡೆಗೆ ಆಕರ್ಷಿತವಾಗುವುದು ಸಹಜ.  ಈ ಸ್ನೇಹ ಬೆಳೆಯುವುದೇ ಪರಸ್ಪರ ವಿರುದ್ಧ ಸ್ವಭಾವದವರೊಂದಿಗೆ.ಅಭಿರುಚಿ,ಆಸಕ್ತಿ,ಹವ್ಯಾಸಗಳು ಒಂದೇ ಬಗೆಯಾಗಿರುವವರು ಒಳ್ಳೆಯ ಸ್ನೇಹಿತರಾಗಬಹುದು. ಆದರೆ ಆತ್ಮೀಯತೆ, ಜೀವದ ಗೆಳೆತನ ಬೆಳೆಯುವುದು ವಿರುದ್ಧ ಸ್ವಭಾವದವರೊಂದಿಗೆ. ಪರಸ್ಪರ ಅಂತರ ಗಳನ್ನು ಗೌರವಿಸಿದಾಗಲೇ ಅಲ್ಲಿ ಆತ್ಮೀಯತೆಯ ಮೊಳಕೆಯೊಂದು ಮೂಡುವುದು. ಜೀವನ 'ಜೀವನ' ಎನಿಸಿಕೊಳ್ಳುವುದೂ   ಕೂಡ ಎಲ್ಲೋ ಅದೇ ಹಂತದಲ್ಲಿ. 

ಜಗಳವಾಡುತ್ತಲೇ ಇರುವ ಗೆಳತಿಯರು ಜೀವದ ಗೆಳತಿಯರು:
ಹುಡುಗಿಯರ ನಡುವಿನ ಸ್ನೇಹದ ಜಗತ್ತೇ ಬೇರೆ.ಆ ಜಗತ್ತಿನಲ್ಲಿ ಗಾಸಿಪ್ ಗಳಿವೆ, ಬಣ್ಣಬಣ್ಣದ ಚಂದನೆಯ ಅಂಗಿಗಳಿವೆ. ಕ್ಲಿಪ್ನಿಂದ ಹಿಡಿದು ಚಪ್ಪಲಿಯವರೆಗಿನ ಮ್ಯಾಚಿಂಗ್ ಸಂಗತಿಗಳಿವೆ. ಅದ್ಯಾವುದೋ ಚಾನೆಲ್ಲಿನ, ಅದ್ಯಾವುದೋ ಧಾರಾವಾಹಿಯ ಕಥೆಯಿದೆ. ನೇರ ಕೂದಲಿನ, ಮೊನಚು ಕಂಗಳ ಹುಡುಗನ ನೋಟದ ಬಗ್ಗೆ 'ಗುಸು ಗುಸು' 'ಪಿಸು ಪಿಸು' ಇದೆ. ಬೆಂಚಿನಲ್ಲಿ ಪಕ್ಕ ಕೂರುವ ಗೆಳತಿಗೆ chemistry  ಪೇಪರಿಗೆ ಹೆಚ್ಚು ಅಂಕ ಬಂದದ್ದಕ್ಕಾಗಿ  ಹೊಟ್ಟೆಯೊಳಗೊಂದು  ತಣ್ಣನೆಯ ಹೊಟ್ಟೆ ಕಿಚ್ಚಿದೆ. ಬಳಸುವ ಶಾಂಪೂ, ನೈಲ್ polishಗಳ ಕುರಿತು ಗಂಭೀರವೆನಿಸುವ ಚರ್ಚೆಯಿದೆ. ಇನ್ನೊಬ್ಬಳ ಸಲ್ವಾರಿನ ಬಗ್ಗೆ, V neck ಟೀಶರ್ಟ್ ಬಗ್ಗೆ, ಹೊಸ hair style ಕುರಿತು ಕಾಮೆಂಟುಗಳಿವೆ. ರಾತ್ರಿ ತಾನು  ಮೆಸೇಜ್ ಮಾಡಿದರೆ ಬೈಯ್ಯುವ, ಅಣ್ಣ ಮಧ್ಯ ರಾತ್ರೆಗೆ ಫೋನ್ ನಲ್ಲಿ ಮಾತನಾಡಿದರೂ ಏನೂ ಹೇಳದ ಅಮ್ಮನ ಬಗ್ಗೆ ಆಕ್ಷೇಪವಿದೆ. ಹುಚ್ಚು ಹಿಡಿಸುವ ಭಾವಗೀತೆಯೊಂದರ ಸಾಲಿದೆ.  

ಈ possessiveness ಕೂಡ ಹುಡುಗಿಯರ ಗುಂಪಿನಲ್ಲೇ ಜಾಸ್ತಿ. ಆತ್ಮೀಯ ಗೆಳತಿ ಇನ್ನೊಬ್ಬರ ಜೊತೆ ಹೊರಟರೆ ಈಕೆಗೆ ಅದೇನೋ ಒಂದು ಬಗೆಯ ಬೇಸರ. ಸಂಜೆ ಒಟ್ಟಾಗಿ ಮನೆಗೆ ಹೋಗುವಾಗ ಮನಸ್ಸಿನಲ್ಲಿಯ ಸಿಟ್ಟು ಮೌನದ ದಾರಿ ಹಿಡಿದಿರುತ್ತದೆ. ಒಮ್ಮೊಮ್ಮೆ ಸಿಟ್ಟು ಜಾಸ್ತಿಯಾಗಿ ಗೆಳತಿಗೂ ಕಾಯದೆ ಬೇರೆ ದಾರಿಯಿಂದ ಮನೆಗೆ ಹೋಗುವುದೂ ಇದೆ. ಪಿಕ್ನಿಕ್ ಗೆಂದು ಹೊರಟ ಗೆಳತಿಯರ ಗುಂಪೊಂದರ ಮಧ್ಯೆ ಜಗಳವಾಗಿ ಎಲ್ಲರೂ ವಾಪಸ್ ಮನೆಗೆ ಮರಳದ್ದೂ ಇರುತ್ತದೆ. ಆದರೂ ಸದಾ ಜಗಳ ಆಡುತ್ತಲೇ ಇರುವ ಗೆಳತಿಯರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತಾರೆ. ಮೆದುವಾಗಿ ಸದ್ದಿಲ್ಲದೇ ಜಗಳದ ಹಂದರದೊಳಗಿನಿಂದಲೇ ಆತ್ಮೀಯತೆಯ ಕುಸುಮವೊಂದು ಸದ್ದಿಲ್ಲದೇ ಮೂಡಿರುತ್ತದೆ. ಕಣ್ಣೀರು, ಜಗಳ ಇವೆಲ್ಲ ಹುಡುಗಿಯರ ದೋಸ್ತಿಯಲ್ಲಿ ಮಾಮೂಲಿಯ ಸಂಗತಿಗಳು.ಒಬ್ಬ ಹುಡುಗಿಗೆ  ಹುಡುಗರಲ್ಲಿ ಅದೆಷ್ಟೇ ಆತ್ಮೀಯ ಗೆಳೆಯರಿರಲಿ ಆದರೆ ಅವಳು ತನ್ನ ಮನದಾಳದ ಭಾವದ ಮಾತುಗಳನ್ನೆಲ್ಲ ಬಿಚ್ಚಿಟ್ಟು 'ಅವಳಾ'ಗುವುದು ಒಬ್ಬ 'ಸ್ತ್ರೀ' ಕುಲಕ್ಕೆ ಸೇರಿದವರ ಬಳಿ ಮಾತ್ರ. ಅದು ಅಮ್ಮನಾಗಿರಬಹುದು, ಅಜ್ಜಿಯಾಗಿರ ಬಹುದು, ಅಕ್ಕ ಅಥವಾ ಗೆಳತಿಯಾಗಿರಬಹುದು. ಹುಡುಗಿಗೆ ಮದುವೆಯಾಗಿ ಸಂಸಾರಿ ಎನಿಸಿದಾಗ ಗೆಳೆತನ ಒಂದು phone callಗೋ, ಮೆಸೇಜಿಗೋ ಸೀಮಿತವಾಗುತ್ತದೆ.

ಒಮ್ಮೆ ಜಗಳವಾಡಿದರೆ ಮತ್ತೆ ಬೆಸೆಯಲು ಕಷ್ಟ ಎನಿಸುವ ಹುಡುಗರ ಸ್ನೇಹ

ಮೊದಲಿನಿಂದಲೂ ನನಗೆ ಹುಡುಗರ ಸ್ನೇಹಲೋಕವೇ ಇಷ್ಟ. ಹೆಗಲಿಗೆ ಹೆಗಲು ಕೊಡುವುದನ್ನೂ, ಆಪತ್ತಿನಲ್ಲಿ ಒಂದಾಗುವುದನ್ನು ಹುಡುಗರ ಬಳಿಯೇ ಕಲಿಯಬೇಕು.

ಅಲ್ಲಿ ಶರಾಬಿನ  ನಶೆಯಿದೆ, ಸಿಗರೇಟಿನ ಹೊಗೆಯಿದೆ, ರಾಜಕೀಯ, ಕ್ರೀಡೆಗಳ ಚರ್ಚೆಯಿದೆ. ಮರಿಯಾ ಶರಪೋವ, ಪ್ರಿಯಾಂಕ ಚೋಪ್ರಳ ಬಗ್ಗೆ 'too hot ಮಗಾ'  ಎಂಬ ಉದ್ಗಾರವಿದೆ ಇದೆ. royal enfield ಬೈಕಿನ ಕಿಕ್ಕಿದೆ. ಮೊನ್ನೆ ಮೊನ್ನೆ ಕಾಲೇಜನ್ನು  ಸೇರಿಕೊಂಡ ಹೊಸ ಹುಡುಗಿಯ ಬಗ್ಗೆ ಕುತೂಹಲವಿದೆ. ರಾತ್ರಿಯ ನೀರವ ರಾತ್ರಿಗಳಲ್ಲಿ ಟೆರೆಸಿನಲ್ಲಿ ಆಡುವ ಇಸ್ಪೀಟಾಟದ ಕಾರ್ಡುಗಳಿವೆ. ನಿರ್ಜನ ರಸ್ತೆಗಳಲ್ಲಿ ಹುಚ್ಚಾಗಿ ಓಡಿಸುವ ಬೈಕಿನ ಸದ್ದಿದೆ. ಕರೆಂಟಿಲ್ಲದ ರಾತ್ರಿಯ ರೂಮಿನಲ್ಲಿ ಯಾರೊಬ್ಬರೂ ದೀಪ ಹಚ್ಚಲು ಹೋಗದೆ ಹಾಡಿದ ಹಾಡಿನ ಸಾಲುಗಳಿವೆ. ಹುಡುಗಿ ಬಿಟ್ಟು ಹೋದದಿನ ಬೇಜಾನ ಕುಡಿದು, ಗೆಳೆಯನ ಹೆಗಲಿಗೆ ತಲೆಯಿಟ್ಟು ಬಿಕ್ಕಳಿಸಿದ ಪ್ರತಿಧ್ವನಿಯಿದೆ. ಸುಮ್ಮನೆ ಔಟ್ ಎಂದು ತೀರ್ಪು ಕೊಟ್ಟ ಅಂಪೈರ್ ಬಗ್ಗೆ ಅಸಮಾಧಾನದ ಮಾತಿದೆ. 

ಆದರೆ ಒಮ್ಮೆ ಜಗಳವಾಗಿ ಮುರಿದು ಹೋದ ಹುಡುಗರ ನಡುವಿನ ಸ್ನೇಹವನ್ನು  ಮೊದಲಿನ ಜಾಡಿಗೆ ತರುವುದು ನಿಜಕ್ಕೂ ಕಷ್ಟ. ಜೀವಕ್ಕೆ ಜೀವ ಕೊಡುವ ಗೆಳೆಯರು ಒಬ್ಬರನ್ನೊಬ್ಬರ ಮುಖ ನೋಡಲು ಇಷ್ಟ ಪಡದವರಾದ ಉದಾಹರಣೆ ಬಹಳಷ್ಟಿದೆ. ಜಗತ್ತ್ನಲ್ಲಿ ನಿಷ್ಕಲ್ಮಶ ಸ್ನೇಹ, ಪ್ರೀತಿ ಸಿಗುವುದು ಬಹಳ ಅಪರೂಪ. 

**misunderstandingನಿಂದಾಗಿ ವರ್ಷಗಟ್ಟಲೆ ಮಾತನಾಡದ, ಆದರೂ ಒಬ್ಬನ್ನೊಬ್ಬರು ಮಿಸ್ ಮಾಡುತ್ತಿದ್ದ ಇಬ್ಬರು ಗೆಳೆಯರು. ಒಬ್ಬ ಕುಡಿದಾಗಲೆಲ್ಲ ಮಾತನಾಡುವುದು ತನ್ನ ಇನ್ನೊಬ್ಬನ(ಮಾತನಾಡದ)ಗೆಳೆಯನ ಬಗ್ಗೆಯೇ, ಅವನ್ನನ್ನು ಮಿಸ್ ಮಾಡುತ್ತಿರುವ ಬಗ್ಗೆಯೇ.  ಇನ್ನೋರ್ವ ego-problemನಿಂದಾಗಿ ನಿರ್ಲಿಪ್ತ. "ನಾನೇಕೆ sorry ಕೇಳಲಿ ?" ಇದು ಇಬ್ಬರ ಮನದ ಪ್ರಶ್ನೆ. ! ಉಳಿದ ಗೆಳೆಯರಿಗೆಲ್ಲ ಅವರಿಬ್ಬರನ್ನು ಒಂದು ಮಾಡಲೇ ಬೇಕೆಂಬ ಹಠ.

ಒಂದು ಮಬ್ಬುಗತ್ತಲಿನ ಸಂಜೆ, ಇಬ್ಬರೂ ಅಕ್ಕ ಪಕ್ಕ ನಿಂತಿದ್ದರೂ ಇಬ್ಬರ ನಡುವೆ ego ಕಂದಕ. ಅವರಲ್ಲೊಬ್ಬ ಸೇತುವೆಯ ಕಟ್ಟಿಯೇ ಬಿಟ್ಟ..! ಮಬ್ಬುಗತ್ತಲಿನಲ್ಲಿಯೇ ಇನ್ನೊಬ್ಬನ ಮುಖವ ನೋಡುತ್ತಾ "sorry ಮಗಾ " ಅಂದ್ಬಿಟ್ಟ..! ಇನ್ನೊಬ್ಬನ ಕಣ್ಣಲ್ಲಿ ನೀರು! ಒರೆಸುತ್ತಾ ಅಂದ  "ನಂದೂ ತಪ್ಪಿದೆ, sorry  ಕಣೋ ". ಕೊನೆಗೆ ತಿಳಿದದ್ದೇನೆಂದರೆ ಅಲ್ಲಿ ಇದ್ದವರೆಲ್ಲ ಅತ್ತಿದ್ದರು! ಇಲ್ಲಿಯೇ ಸ್ನೇಹ ಅಪರೂಪ ಅನಿಸುವುದು.

ಅತಿ ವಿಶಿಷ್ಟ ಹುಡುಗ-ಹುಡುಗಿಯ ಸ್ನೇಹ :
ಅತಿ ನಾಜೂಕಿನ ಸಂಬಂಧ ಇದು. ಪ್ರೇಮ -ಸ್ನೇಹಗಳಿಗೆ ಒಂದು ಹೆಜ್ಜೆಯ ಅಂತರ ಅಷ್ಟೇ. ನಿಜವಾದ ನಿಷ್ಕಲ್ಮಶ ಸ್ನೇಹ ಸಿಕ್ಕಿದ್ದೇ ಆದರೆ ನಿಮ್ಮಂತ ಲಕ್ಕಿಗಳು ಇನ್ಯಾರಿಲ್ಲ.! ಮುಂದೆ ಆಕೆಯ ಗಂಡನಾದವನು ಅರಿಯಬಹುದದಕ್ಕಿಂತ ಚೆನ್ನಾಗಿ ಆ ಹುಡುಗ ಅವಳನ್ನು ಅರ್ಥ ಮಾಡಿಕೊಂಡಿರುತ್ತಾನೆ. ಎಲ್ಲೇ ಅಡ್ಡಾಡುವುದಿದ್ದರೂ  ಅವಳಿಗೆ ಅವನೇ ಬೇಕು. ಸಲ್ವಾರ್ ಸೆಲೆಕ್ಟ್ ಮಾಡುವಾಗಲೂ ಅವನು ಬಾಲಂಗೋಚಿ. "ಇದು ಬೇಡ ಕಣೆ ಆ ನವಿಲ ಬಣ್ಣದ್ದು ತಗೋ ನಿನಗೆ ಒಪ್ಪತ್ತೆ." ಅವಳು ಕೊಂಡಿದ್ದೂ  ಅದೇ ! ಅದೇ ರೋಡಿನ ಕೊನೆಯಲ್ಲಿ ಪಾನಿಪುರಿ ತಿನ್ನುವಾಗ ಜಗಳ. ಇದೆಲ್ಲ ಮಾಮೂಲಿ ಅವರಿಬ್ಬರಲ್ಲಿ. ಜನ ತಲೆಗೊಂದು ಮಾತನಾಡುತ್ತಾರೆ. ಅವನ ಬಗ್ಗೆ ಇಲ್ಲದಿದ್ದನ್ನು ಹೇಳುವ ಗೆಳತಿಯರು. ಹುಡುಗಿ ಅದ್ಯಾವುದಕ್ಕೂ 'ಕ್ಯಾರೆ' ಅನ್ನುವುದಿಲ್ಲ! ಅವನು ಅವಳ ಆತ್ಮೀಯ ಸ್ನೇಹಿತ. ! 

ಅವರಿಬ್ಬರೂ ಕಾಲೇಜಿನ ಎದುರಿನ ಹುಲ್ಲುಹಾಸಿನ ಮೇಲೆ ಕೂತು ಲೈನ್ ಹೊಡೆಯುತ್ತಾರೆ. ಆ ಹಸಿರು ಸಲ್ವಾರಿನ ಹುಡುಗಿ ಚಂದಕಿದ್ದಾಳೆಂದು ತೋರಿಸುತ್ತಾಳೆ. "ನಾನು ನಿನ್ನನ್ನೇ ಮದುವೆ  ಆಗುವುದೆಂದು ಕಿಚಾಯಿಸುತ್ತಾಳೆ." 
ಆದರೆ  ಒಂದು ನಿಷ್ಕಲ್ಮಶ ಸ್ನೇಹ ಒಂದು ಬಿಟ್ಟರೆ ಅದ್ಯಾವ ಭಾವವೂ ಸುಳಿಯುವುದೇ ಇಲ್ಲ.! 

**ಕುಡಿದಾಗಲೆಲ್ಲ ಆತ್ಮೀಯ ಗೆಳತಿಗೆ "ಬಾರಿನಲ್ಲಿದ್ದೇನೆ" ಎಂದು  ಮೆಸೇಜು ಮಾಡುವ ಹುಡುಗ. ಹಾಸ್ಟೆಲಿನ ಹುಡುಗರು 'ಯಾವುದು ಕುಡಿದ್ಯೋ ?' ಎಂದು ಕೇಳಿದರೆ. ಅವನ ಗೆಳತಿ "drive careful, put a message when you reach the hostel". ಆದಷ್ಟು ಹುಡುಗರು ಸುತ್ತಲಿದ್ದರೂ ಅದೇ ಆತ್ಮೀಯ ಗೆಳತಿಯನ್ನು ಮಿಸ್ ಮಾಡುತ್ತಾನೆ ಹುಡುಗ. ಅರೆಬರೆಯ ಮಂಪರಿನಲ್ಲೂ ಹಾಸ್ಟೆಲ್ ತಲುಪಿದ ತಕ್ಷಣ ಮೆಸೇಜ್ ಮಾಡುತ್ತಾನೆ. "reached safe ". ಹುಡುಗಿ ಮುಗುಳ್ನಗುತ್ತಾಳೆ.!

**ಪ್ರೀತಿಸಿಕೊಂಡ ಹುಡುಗಿಯ ಮದುವೆಯ ದಿನ. ಅಕ್ಷರಶಃ ಒಂಟಿ ಆದ ಭಾವನೆ ಹುಡುಗನ ಮನಸ್ಸಿನಲ್ಲಿ. ಆತ್ಮೀಯ ಗೆಳತಿಗೊಂದು ಫೋನ್ ಮಾಡಿ "ಮೈಥಿಲಿ ಮದುವೆ ಕಣೆ ಇವತ್ತು " ಎಂದ. "ನಿನ್ನ ಜೊತೆ ಮಾತಾಡಬೇಕು PG ಹೊರಗಡೆ ಬಾರೋ" ಎಂದಳು ಗೆಳತಿ. ಬಂದವನ ಜೊತೆ ಬರೋಬ್ಬರಿ ಎರಡು ಕಿಲೋ ಮೀಟರುಗಳ ದೂರ ನಡೆದಳು. ಮಾತಿಲ್ಲ ಕಥೆಯಿಲ್ಲ. ಈಗ ಹುಡುಗನಿಗೆ ಒಂಟಿ ಎನಿಸುತ್ತಿಲ್ಲ. "ಥ್ಯಾಂಕ್ಸ್ ಕಣೆ." ನಿಯೋನ್ ದೀಪದ ಬೆಳಕಿನ ಅಡಿಯಲ್ಲಿ ಕಂಡಿದ್ದು ಇಬ್ಬರ ಕಣ್ಣಲ್ಲೂ ನೀರು. ಭುಜತಟ್ಟಿ "everything will be fine " ಎಂದಳು. ಹುಡುಗ ಮುಗುಳ್ನಕ್ಕ.!


ಆತ್ಮೀಯ ಗೆಳತಿಯ  ಮದುವೆಯಲ್ಲಿ ಮನೆಜನರಂತೆ ಓಡಾಡುವ ಹುಡುಗ. ಬದುಕಿನಲ್ಲಿ ಅವಳು ಸುಖವಾಗಿರಲೆಂದು ಮನದುಂಬಿ ಹಾರೈಸುತ್ತಾನೆ. 
ಇಂತಲ್ಲೇ ಗೆಳೆತನ ಪ್ರೇಮಕ್ಕಿಂತ ಭಿನ್ನವಾಗಿ ನಿಲ್ಲುವುದು. ಬದುಕಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನು  ಬಳಿಯುವುದು.

ಕುಟುಂಬದಲ್ಲಿ ಗೆಳೆತನವಿದೆ :
** ಹರೆಯದ ಹುಡುಗಿಗೆ ಅಮ್ಮನೇ ಆತ್ಮೀಯ ಸ್ನೇಹಿತೆ. ದೊಡ್ಡವಳಾಗುವುದಕ್ಕಿಂತ  ಮೊದಲು ಪಪ್ಪನ ಹೆಗಲಿಗೆ ಜೋತು ಬೀಳುವ ಹುಡುಗಿ. ನಂತರ ಅಮ್ಮನಿಗೇ ಆಪ್ತ.! 

**ಒಂದು ಹಂತದ ನಂತರ ಅಕ್ಕ ತಂಗಿಯರು ಜೀವದ ಗೆಳತಿಯರಾಗಿ ಬಿಡುತ್ತಾರೆ. 

**ಅಕ್ಕ, ತಮ್ಮನಿಗೆ ಬರೀ ಸ್ನೇಹಿತೆಯಲ್ಲ. ಎರಡನೇ ಅಮ್ಮನೇ ಆಗಿ ಬಿಡುತ್ತಾಳೆ. ಮಾರ್ಗದರ್ಶನ ಮಾಡುತ್ತಾಳೆ.

**ಅಪ್ಪಮಗ ಒಟ್ಟಿಗೇ barcelona vs real madrid match ನೋಡುತ್ತಾರೆ. ಮಗ barcelona ತಂಡಕ್ಕೆ ಸಪೋರ್ಟ್ ಮಾಡಿದರೆ ಪಪ್ಪನದು real madrid. ಇಬ್ಬರಿಗೂ ಜಗಜಿತ್ ಸಿಂಗ್, ರಫಿ ಇಷ್ಟ. ಮಗನ ಬೆಸ್ಟ್ ಫ್ರೆಂಡ್ ಪಪ್ಪನೆ ಅಲ್ಲಿ. !

ಮುಖ ನೋಡಿರದೆಯೂ ಆತ್ಮೀಯತೆಯ ಗೂಡು ಕಟ್ಟಿಸುವ  ಇಂಟರ್ ನೆಟ್ ಸ್ನೇಹ:

 ಈ social  networkಗಳಿಂದಾಗಿ ಸ್ನೇಹಿತರ ಬಳಗ ಬೆಳೆಯುತ್ತಿದೆ. ಯಾರ್ಯಾರೋ ಮುಖತಃ ಭೇಟಿಯಾಗದವರೂ ಆತ್ಮೀಯರಾಗುತ್ತಾರೆ. ಅದೊಂದು ಬಗೆಯ ಭ್ರಾಮಿಕ ಜಗತ್ತಿನಂತೆ ಅನಿಸಿದರೂ ನಾವು ಅಂತಹ ಸ್ನೇಹಿತರನ್ನೇ ಬಯಸುತ್ತೇವೆ. ಆತ್ಮೀಯತೆ ಬೆಳೆಯುತ್ತದೆ. 'ನಲವತ್ತಾರರ ಜಗತ್ತಿನ ಅದ್ಯಾವುದೋ ಮೂಲೆಯ ವ್ಯಕ್ತಿಗೆ, ಚುರುಕಿನ ಇಪ್ಪತ್ತರ ಹುಡುಗ ಆತ್ಮೀಯ ಸ್ನೇಹಿತ. ತನ್ನ ಹಳೆಯ ಪ್ರೀತಿಯ ಕಥೆಯನೆಲ್ಲ ಹೇಳುವ ಅವರು, ಇವನಿಗೆ ಬರೀ ಸ್ನೇಹಿತರಷ್ಟೆ ಅಲ್ಲ ಉತ್ತಮ ಮಾರ್ಗದರ್ಶಿ ಕೂಡ.   ಆದರೂ ಒಬ್ಬರನ್ನೊಬ್ಬರು ಇನ್ನೂ ಭೇಟಿ ಮಾಡಿಲ್ಲ. 
best friend ಜೀವನ  ಸಂಗಾತಿ  ಆದಾಗ:
 friendship= love-sex+reason
love=friendship+sex-reason
ಕೆಲವೊಮ್ಮೆ ಅದ್ಯಾವುದೋ ಘಳಿಗೆಯಲ್ಲಿ  ಆತ್ಮೀಯ ಸ್ನೇಹಿತೆ/ತ   ಜೀವನ ಸಂಗಾತಿ ಆಗಲಿ ಎಂದೆನಿಸಲೂಬಹುದು. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುವಾಗ, ಪ್ರೀತಿ ಒಡಮೂಡಿ ಜೀವನ ಸಾಥಿ ಯಾಕಾಗಬಾರದು ಎನಿಸಿದರೂ. ಸ್ನೇಹ ಸ್ನೇಹವಾಗಿಯೇ ಇರಲಿ ಎಂದೇ ಮನಸ್ಸು ಹೇಳುತ್ತದೆ. 


ಸ್ನೇಹ ನಿಷ್ಕಲ್ಮಶವಾಗಿ ಪವಿತ್ರವಾಗಿ ಇರಲಿ. ಪ್ರೇಮದಲ್ಲಿ ಸ್ನೇಹ ಇರಲಿ ಆದರೆ ಸ್ನೇಹ ಸ್ನೇಹವಾಗಿಯೇ ಇರಲಿ. ಬದುಕಿನ ಮುಸ್ಸಂಜೆಯಲ್ಲಿ ಈ ಸ್ನೇಹ ಹದವಾಗಿ ಕಾಡುವಂತೆ ಇರಲಿ. railway station ದಾರಿಯ ನೋಡಿದಾಗ ಜಗಳ ವಾಡುವ ಸ್ನೇಹಿತೆ ನೆನಪಾಗಿ ಕಾಡಬಹುದು. ಗೂಡಂಗಡಿಯ ನೋಡಿದಾಗ ಸ್ನೇಹಿತನ ಜೊತೆ ಬೈಟು ಸಿಗರೇಟು ಸೇದಿದ್ದು ನೆನಪಾಗಬಹುದು. ಪಾನಿಪುರಿ ಅಂಗಡಿಯ ನೋಡಿದಾಗ ನಿಮ್ಮ ಪ್ಲೇಟಿನದ್ದೆಲ್ಲವನ್ನು ಕಸಿಯುವ ಗೆಳತಿ ನೆನಪಾಗಬಹುದು. 


ಜೀವನದ ಗಡಿಬಿಡಿಯ ದಿನದ ಓಘದಲ್ಲಿ ಗೆಳೆತನ ಅರ್ಥ ಕಳೆದುಕೊಳ್ಳುತ್ತಿದೆ. ಸ್ವಾರ್ಥದ, ದ್ವೇಷದ,ಇಗೋ , attitude ಗಳ ನಡುವೆ  ನಲುಗುತ್ತಿದೆ. ಎಲ್ಲವನ್ನು ಬದಿಗೊತ್ತಿ. ಅದೆಲ್ಲೋ ಕಳೆದುಹೋದ ದೊಸ್ತಿಯನ್ನೊಮ್ಮೆ ನೆನೆದುಬಿಡಿ. ಅದೇನನ್ನು ಕಳೆದುಕೊಂಡಿದ್ದೀರಿ ಎಂಬುದು ತಿಳಿಯುತ್ತದೆ. 

ಅದೆಲ್ಲೋ ಬದುಕಿನ ಮುಸ್ಸಂಜೆಯಲ್ಲಿ ,ಛತ್ರಿಯಡಿಯಲ್ಲಿ  ಮೊಮ್ಮಗಳ ಜೊತೆ ನಡೆದು ಹೋಗುತ್ತಿರುವಾಗ. "ಇಲ್ಲೇ ನಾನು ಪಾನಿ ಪುರಿ ತಿಂತಾ ಇದ್ದದ್ದು" ಎಂದು ಮೊಮ್ಮಗಳನ್ನು ಅದೇ ಅಂಗಡಿಗೆ ಕರೆದೊಯ್ಯುತ್ತೀರಿ. ತುಂತುರು ಮಳೆ, ಕನ್ನಡಕ ಮಸುಕು ಮಸುಕು. ಮಳೆ ನೀರಿನಿಂದಲೋ ಏನೋ ಗೊತ್ತಿಲ್ಲ. ಕಿಸೆಯಿಂದ ಕರವಸ್ತ್ರವ ತೆಗೆದು ಒರೆಸುತ್ತಾ ಮುಗುಳು ನಗುತ್ತೀರಿ. यारो दोस्ती बड़ी ही हँसी है... ये न हो तो क्या फिर बोलो ये ज़िन्दगी है ..ಹಾಡು FM ನಲ್ಲಿ.! 

ಇಂಥ ದೋಸ್ತಿಗೊಂದು hats off ಹೇಳಲೇ ಬೇಕು ಅಲ್ವಾ?

A friend is someone with whom you dare to be yourself.! 

33 comments:

 1. ಏನು ಬರೆಯಲಿ ಅಂತಾನೆ ತೋಚ್ತಾ ಇಲ್ಲ .. ಪ್ರತಿಯೊಂದು ಲೈನ್ ಓದುವಾಗಲು ಮನಸ್ಸಿನಲ್ಲಿ ಏನೋ ಒಂದು ರೀತಿಯ ತಳಮಳ . ಕೊನಯಲ್ಲಿ ಕಣ್ಣಂಚು ಒದ್ದೆ ..
  ಸ್ನೇಹದ ವಿಧಗಳ ವಿವರಣೆ ತುಂಬಾ ಇಷ್ಟವಾಯ್ತು .. ಅನುಭವಿಸಿ ಬರೆದಂತಹ ಲೇಖನ .. Hats off ..
  Keep writing ...

  ReplyDelete
 2. ಬರಹದ ಬಗ್ಗೆ ಮಾತಿಲ್ಲ.. ಅನುಭವಿಸಿಯೇ ತೀರಬೇಕು.. ಬರಿತ ಇರು ಹೀಗೆ..

  ReplyDelete
 3. channagidhey berey heloke gothagtha illa

  ReplyDelete
 4. dosti bagge ishtu sakattagi bareda nimage hats off !!
  nice one..

  ReplyDelete
 5. ಅಬ್ಬ!! ಸ್ನೇಹದಲ್ಲಿ ಎಷ್ಟೊಂದು ವಿಧಗಳು! ಒಳ್ಳೆಯ ಲೇಖನ ಇಷ್ಟ ಆಯ್ತು ಸೌಮ್ಯ :)

  ReplyDelete
 6. hey hats off to you!!!"ಈ ಸ್ನೇಹಲೋಕವೇ ತೀರಾ ವಿಚಿತ್ರ. ವಯಸ್ಸು, ಲಿಂಗ, ಜಾತಿ, ಧರ್ಮ ಎಲ್ಲವನ್ನು ಮೀರಿ ಬೆಳೆಯುವ ಗೆಳೆತನಕ್ಕೆ ಸರಿ ಸಾಟಿ ಗೆಳೆತನವೇ.!" ishta aaytu tumba...
  thanq vry mch.

  ReplyDelete
 7. ತುಂಬಾ ಚನಾಗಿ ಬರದ್ದೆ ಸೌ..ಇಷ್ಟ ಆತು...:-)

  ReplyDelete
 8. super like.. ಸಕ್ಕತ್ತಾಗಿದೆ ಬರವಣಿಗೆ.. ವಿಷಯ ಮತ್ತು the way:)keep it up..

  ReplyDelete
 9. ಏನು ಹೇಳೋದು ಅಂತ ನಿಜಕ್ಕೂ ತೋಚ್ತಾ ಇಲ್ಲ ! ತುಂಬಾ ಚೆನ್ನಾಗಿ ಬರೆದಿದ್ದೀರ!!!ಮನಸ್ಸಿಗೆ ತುಂಬಾ ಆಪ್ತವೆನಿಸಿತು

  ReplyDelete
 10. Hi,
  ಸೌಮ್ಯ, ಬಹಳ ಚೆನ್ನಾಗಿ ಬರೆದಿದ್ದೀರಾ. ಅಧುನಿಕ ಕಾಲದ ಹುಡುಗಿಯಾಗಿ ಬರವಣಿಗೆಯ ಕಲೆಯನ್ನು ಅಳವಡಿಸಿ ಕೊಂಡಿದ್ದಕ್ಕೆ ಮೊದಲು ಖುಷಿಯಾಯ್ತು. ಗುಡ್, ನಿಮ್ಮಲ್ಲಿ ಉತ್ತಮ ಆಸಕ್ತಿ ಇದೆ ಎನ್ನುವುದಕ್ಕೆ ಬರವಣಿಗೆಯಾ ಸ್ಟೈಲ್ ಹೇಳುತ್ತೆ. ಮುಂದುವರಿಸಿ, ಯಾವುದೇ ಕಾರಣಕ್ಕೂ ಬ್ರೇಕ್ ಮಾಡಬೇಡಿ.

  ReplyDelete
 11. *misunderstandingನಿಂದಾಗಿ ವರ್ಷಗಟ್ಟಲೆ ಮಾತನಾಡದ, ಆದರೂ ಒಬ್ಬನ್ನೊಬ್ಬರು ಮಿಸ್ ಮಾಡುತ್ತಿದ್ದ ಇಬ್ಬರು ಗೆಳೆಯರು


  loved it true line experienced this :)

  ReplyDelete
 12. ಕೆಲವೊಮ್ಮೆ ಅದ್ಯಾವುದೋ ಘಳಿಗೆಯಲ್ಲಿ ಆತ್ಮೀಯ ಸ್ನೇಹಿತೆ/ತ ಜೀವನ ಸಂಗಾತಿ ಆಗಲಿ ಎಂದೆನಿಸಲೂಬಹುದು. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುವಾಗ, ಪ್ರೀತಿ ಒಡಮೂಡಿ ಜೀವನ ಸಾಥಿ ಯಾಕಾಗಬಾರದು ಎನಿಸಿದರೂ. ಸ್ನೇಹ ಸ್ನೇಹವಾಗಿಯೇ ಇರಲಿ ಎಂದೇ ಮನಸ್ಸು ಹೇಳುತ್ತದೆ.

  this is true dear :) loved it

  ReplyDelete
 13. Friendship=love-sex+reason
  superb!!
  Bt nanu,
  Friendship=love+sex+reason
  kooda nodiddeeni(nodiddeenashte!!)

  ReplyDelete
 14. ದೋಸ್ತಿನೆ ಹಾಗೆ, ಅಳು ನಗು ಇಲ್ಲವೂ ಇರ್ತವೆ, ಬೇವು ಬೆಲ್ಲದ ಥರ....

  ReplyDelete
 15. ಎಲ್ಲ ಅಕ್ಷರಶಃ ಸತ್ಯ... ಈಗಿನ ಪೀಳಿಗೆಯ ಮಕ್ಕಳು ನಾವೆಲ್ಲ ಅನುಭವಿಸಿದ ಎಷ್ಟೋ ಸುಮಧುರ ಕ್ಷಣಗಳನ್ನ ಕಳ್ಕೊತ ಇದ್ದಾರ ಅನಿಸುತ್ತೆ.. ಆಧುನೀಕರಣ ಅವಶ್ಯಕತೆ ಆದ್ರೂ, ಎಲ್ಲೋ ಒಂದು ಕಡೆ ದುರಂತವೂ ಹೌದು..

  ReplyDelete
 16. ತುಂಬಾ ಚೆನ್ನಾಗಿದ್ದು. ಗೆಳತಿಯರು, ಮಬ್ಬುಗತ್ಲಿನ ಸ್ನೇಹಿತರ ಭೇಟಿ, ನಿಯಾನ್ ದೀಪ, ನವಿಲು ಬಣ್ಣದ ಬಟ್ಟೇಲಿ ನೆನಪಾಗೋ ಸ್ನೇಹಿತ-ಸ್ನೇಹಿತೆ, ಅಪ್ಪ-ಮಗ, ಅಕ್ಕ-ತಂಗಿ ಎಲ್ಲಾ ಸೂಪರ್..ಓದ್ತಾ ಇದ್ರೆ ನನ್ನ ಕಣ್ಣೆದ್ರುಗೆ ಅದೆಲ್ಲಾ ನಡೆದಂಗೆ ಅನಿಸ್ತಾ ಇತ್ತು. ನನ್ನ ಪರವಾಗಿಯೂ ಅಂಥ ಮಧುರ ಸ್ನೇಹಕ್ಕೆ hats off.

  ReplyDelete
 17. tumba channagide......life li snehakke unnatavaada sthaana ide. naavu yavodo vishayakke tale kedisikondu, frustration ge hogiddaga, "stupid.....enagide ninge?? heegirabeda..." e0du baidaaga adaralli sigo santoshave bere.........nijakku adbhta.....:)

  ReplyDelete
 18. ಸೌಮ್ಯ , ಸ್ನೇಹ ಸಂಭಂದಗಳ ಬಗ್ಗೆ ಬಹಳ ಚೆನ್ನಾಗಿ ವಿಮರ್ಶೆ ಮಾಡಿ ಬರೆದಿದ್ದೀರಿ. ನಿಮ್ಮ ಗಮನಿಸುವುಕೆಗೆ ಜೈ ಹೋ. ಅನ್ನಬೇಕು. ಯಾವುದೇ ತರಹದ ಆತ್ಮೀಯ ಸಂಭಂದಗಳಿಗೆ ಮೊದಲು ನಮ್ಮ ನಡವಳಿಕೆ ಸರಿ ಇರಬೇಕು. ನಮ್ಮ ಸುತ್ತಲಿನ ನಮ್ಮ ಸಂಭಂದ ಕನ್ನಡಿಯಂತೆ ನಮ್ಮ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರುತ್ತದೆ. ಬರಹ ಸೊಗಸಾಗಿದೆ. ರಿಸರ್ಚ್ ಮಾಡಲು ಒಳ್ಳೆಯ ಸಬ್ಜೆಕ್ಟ್ ಅನ್ಸುತ್ತೆ. ಗುಡ್

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 19. ಒಳ್ಳೆಯ ಬ್ಲಾಗ್ ರೂಪಿಸಿದ್ದೀರಿ. ತುಂಬಾ ಒಳ್ಳೆಯ ಲೇಖನ.


  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com
  www.badaripoems.wordpress.com

  Face book Profile : Badarinath Palavalli

  ReplyDelete
 20. ತುಂಬಾ ಚೆನ್ನಾಗಿದೆ ಬರಹ... ಆಕಸ್ಮಿಕವಾಗಿ ಓದಿದೆ.. ಖುಷಿಯಾಯ್ತು :)

  ReplyDelete
 21. ಹುಡುಗರ ಗೆಳೆತನದ ಲೋಕ ಭಿನ್ನವೇ, ಅಲ್ಲಿ ಭಾವನೆ ಮಾತಾಗುವುದಿಲ್ಲ, ಅಳುವೋ ನಗುವೋ ಆಗುವುದಿಲ್ಲ. ಅದು ಘನೀಕರಿಸುತ್ತಾ ಹೋಗುತ್ತದೆ, ದಿನಕಳೆದ ಹಾಗೆ, ಗೆಳೆತನ ಬೆಳೆದ ಹಾಗೆ. ಆದರೆ ಹಾಗಾಗದೆ ಹೋದರೆ ಈಗೋ ಹೆಡೆಯೆತ್ತಿ ನಿಂತಿರುತ್ತದೆ.ಅವರು ಮಾತನಾಡಲೂ ಹಿಂಜರಿಯುವ ಕ್ಲಾಸುಮೇಟುಗಳಾಗುತ್ತಾರೆ, ಗೆಳೆಯರಾಗರು. ಆಗಲೂ ಮಾತು ಕರಗುವುದಿಲ್ಲ, ಜಗಳ ಆಗುವುದಿಲ್ಲ, ಒಂದು ಸ್ನೇಹ ಸತ್ತಿರುತ್ತದೆ. ಅವರ ಪಾಡು ಇದೆಯಲ್ಲಾ, ಅದನ್ನು ನನ್ನಂತವರ ಹತ್ತಿರ ಕೇಳಬೇಕು.
  ಅದಿರಲಿ ಬಿಡಿ, ನಿಮ್ಮ ಬರಹ ಸುಂದರವಾಗಿದೆ.ಮನಮುಟ್ಟುವ ಹಾಗೆ. ಸ್ವಲ್ಪ ರವಿ ಬೆಳಗೆರೆಯವರ ಬರಹದಿಂದ ಸ್ಪೂರ್ತಿ ಪಡೆದ್ದೀರಿ ಎನಿಸಿತು, ಆದರೆ ಒಂದು ಲೇಖನದಲ್ಲಿ ನೀವು ಅವರನ್ನು ಓದಿಲ್ಲ ಎಂದು ಬರೆದದ್ದರಿಂದ ಮತ್ತೊಂದಿಷ್ಟು ಖುಷಿಯಾಯಿತು. ಸ್ವಂತಿಕೆಯಲ್ಲಿ ಮೂಡುವ ಬರಹ ಎಂದಿಗೂ ಒಂದು ಕವಡೆ ಹೆಚ್ಚು ಮೌಲ್ಯವನ್ನು ಪಡೆದಿರುತ್ತದೆ. ಬರವಣಿಗೆ ನಿಜವಾಗಿಯೂ ಇಷ್ಟವಾಯಿತು, ರವಿ ಬೆಳಗೆರೆಯವರಷ್ಟೇ!
  ಅಂದ ಹಾಗೆ ನಾನೂ ನಿಮ್ಮಂತೆ ಓದುತ್ತಿರುವುದು ಇಂಜಿನಿಯರಿಂಗ್, ಇಷ್ಟಪಡುವುದು ಸಾಹಿತ್ಯವನ್ನು. ಬೆಂಗಳೂರಿನ ವೇಗದ ಜೀವನಕ್ರಮಕ್ಕೆ ಹೊಂದಿಕೊಂಡು ಏನೋ ಮನಕ್ಕೆ ತೋಚಿದ್ದನ್ನು ಗೀಚುತ್ತೇನೆ. ಸುಮ್ಮನೇ ಹೇಳಬೇಕೆನ್ನಿಸಿತು.

  ReplyDelete
 22. HI Sowmya,

  Nima baraha thumbanee cheenagidee, u made me remeber all my friends and time spent wt them.
  Thanks a lot for taking me back to those days of sweet memories by your writing..........

  Adre friedship anodu nimitha swalpa dinagalvaregu adhu namage sugar thara sweet hage idre...., nathara dinagalleee adhee sena namage sakare rogadanteee.... jeevanparyatha adra neepugalu matra iruthadeee..
  ...... (Manoj)

  ReplyDelete
 23. Hi Sowmya,

  All your blogs are Very Fantastic and very inspire to me. you wrote a one blog like "ಅತಿ ವಿಶಿಷ್ಟ ಹುಡುಗ-ಹುಡುಗಿಯ ಸ್ನೇಹ" its very related to my life. Hats off to you........ you keep these type blogs in future.......

  ReplyDelete
 24. really nice...........

  ReplyDelete