ಕಾಲು ಚಾಚಿ ಕುಳಿತ ನಾನು ದೃಷ್ಟಿಹರಿಸಿದ್ದು ಅನಂತ ಆಗಸದತ್ತ. ಮೋಡಗಳಿಲ್ಲದ ನಿರಭ್ರ ಆಗಸವದು. ಅದೆಷ್ಟು ದಿನವಾಗಿತ್ತು ಹೀಗೆ ಈ ಆಗಸವ ಗಮನಿಸದೆ ಎಂದು ಯೋಚಿಸಿದೆ. ನೆನಪೇ ಇರಲಿಲ್ಲ ಅದ್ಯಾವಾಗ ನೋಡಿದ್ದೆ ಎನ್ನುವುದು. ಒಂದಾದ ಮೇಲೊಂದರಂತೆ ಕಳೆದು ಹೋಗುವ ದಿನಗಳ ಓಘದಲ್ಲಿ ಮರೆತೇ ಹೋಗಿತ್ತು ಈ ಆಕಾಶ ವೀಕ್ಷಣೆ.
ಈ ಸಂಜೆ ಕಳೆದು ರಾತ್ರಿ ಆವರಿಸುವ ಪರಿಯೇ ಅದ್ಭುತ. ನೋಡ ನೋಡುತ್ತಲೇ ಬಾನ ಸೀರೆಗೆ ನಕ್ಷತ್ರಗಳ ಕಸೂತಿಯ ತುಂಬುತ್ತಲೇ ಹೋಗುವ ನಿಶೆ. ಗಾರುಡಿಗನೊಬ್ಬ ಬಾನ ತುಂಬೆಲ್ಲ ಮುತ್ತು, ವಜ್ರಗಳ ಚೆಲ್ಲಿಬಿಡುತ್ತಾನೆ. ಒಂದೊಂದೇ ಚುಕ್ಕಿಗಳು ಪೈಪೋಟಿಗೆ ಬಿದ್ದಂತೆ ಕಾಣಿಸತೊಡಗಿದವು. ramp walk ಮಾಡುವ ಥಳಕು ಬಳುಕಿನ modelಗಳು ನೆನಪಾಗಬೇಕು ಅದೆಷ್ಟೋ ದೂರದಿಂದ ಮಿನುಗುವ ಈ ಚುಕ್ಕಿಗಳ ಕಂಡರೆ. !
ನನ್ನಿಷ್ಟದ ವಿಷಯಗಳಲ್ಲಿ ಖಗೋಳ ವಿಜ್ಞಾನವೂ ಒಂದು. ಸೂರ್ಯನೂ ಒಂದು ನಕ್ಷತ್ರ, ಎಂದೂ ಗೊತ್ತಿದೆ. ನಕ್ಷತ್ರಗಳ ಬಗ್ಗೆ ವೈಜ್ಞಾನಿಕ ಸತ್ಯಗಳೂ ಗೊತ್ತಿವೆ. ಆದರೆ ಒಂದು ಕುತೂಹಲವಿದೆ, ಪ್ರೀತಿಯಿದೆ, ತಣ್ಣನೆಯ ಹೊಟ್ಟೆ ಕಿಚ್ಚೂ ಇದೆ ಆ ಜಗತ್ತಿನ ಬಗ್ಗೆ, ಆ ತಾರೆಗಳ ಬಗ್ಗೆ. ಚಂದಿರನ ಶೀತಲ ಕಿರಣದ ನೆರಳಲಿ ಸರಸವಾಡುವ ಚುಕ್ಕಿಗಳೆಲ್ಲವೂ ಅದಮ್ಯ ಪ್ರೀತಿಯ ಸಂಕೇತದಂತೆ ಭಾಸವಾಗುತ್ತವೆ. ನಿಶೆಯ ಸೆರಗಿಡಿದು ಬಾನಿನಲ್ಲಿ ಪ್ರತ್ಯಕ್ಷವಾಗುವ ಚುಕ್ಕಿಗಳಿಗೆಲ್ಲ ಚಂದಿರನ ಮೇಲೆ ಅದೇನೋ ಪ್ರೀತಿಯಂತೆ.!ದಿನದಿನವು ನಡೆಯುವ 'ಬಾನ ಜಾತ್ರೆ'. ಏನು ಕೊಳ್ಳುವರೋ ಗೊತ್ತಿಲ್ಲ. ಆದರೆ ಕೋಟಿ ನಕ್ಷತ್ರಗಳ ಹಾಜರಾತಿಯಂತೂ ಬೇಕೇ ಬೇಕು. ನಕ್ಷತ್ರಗಳೆಲ್ಲವೂ ಒಂದೊಂದು ಸೂರ್ಯನಂತೆ ಪ್ರಖರವಾದ ಬೆಂಕಿಯ ಚೆಂಡುಗಳು ಎಂದು ಈ ಮನಸ್ಸು ಒಪ್ಪುವುದೇ ಇಲ್ಲ ನೋಡಿ.! ಅದ್ಯಾರದೋ ಮೂಗುತಿಯ೦ತೆ ಕಾಣುವ, ಅಜ್ಜಿಯ ಕಿವಿಯ ಓಲೆಗಳ ನೆನಪಿಸುವ, ಹುಡುಗಿಯರ ಕಣ್ಣ ಹೊಳಪನ್ನು ನಾಚಿಸುವ ನಕ್ಷತ್ರಗಳಿಗೆ 'ಚುಕ್ಕಿ'ಗಳೆಂದೇ ಕರೆಯಬೇಕೆನಿಸುತ್ತದೆ.!
ಈಗ ಆಗಸದೆಡೆಗಿನ ನನ್ನ ಪ್ರೀತಿ ಹಾಗೆ ಇದ್ದರೂ, ಕಾಲದ ಹೊಡೆತಕ್ಕೆ ಸಿಕ್ಕ ಯೋಚನಾ ಧಾಟಿಯಲ್ಲಿ ಸ್ವಲ್ಪ ಏರುಪೇರು. ಇದನ್ನು ಅರಿತ ಮನಸ್ಸು ಹೊಸಯೋಚನೆಗಳ ಮೇಲೊಂದು ಮುಸುಕನ್ನು ಎಳೆದು, ನಿರುಮ್ಮಳವಾದ ಬಾಲ್ಯದ ಯೋಚನಾ ಜಾಡನ್ನು ಹಿಡಿದು ಬಿಟ್ಟಿತ್ತು, ನನಗೇ ಗೊತ್ತಿಲ್ಲದಂತೆ..!
ಹೌದು ತಾರೆಗಳ ನೋಡುತ್ತಾ ಅದೆಷ್ಟೋ ಕನಸುಗಳ ಹೆಣೆದಿದ್ದೆ. ಚಂದಿರನವರೆಗೂ ಉದ್ದದೊಂದು ಏಣಿ ಹಾಕುವ. ಚಂದಿರನ ಮನೆಗೆ ಕನ್ನ ಹಾಕುವ ಅಮೋಘವಾದ ಕನಸು ನನ್ನ ಬಾಲ್ಯದ ದಿನಚರಿಗಳಲ್ಲಿ ಮಾಮೂಲಾಗಿತ್ತು.! ಇನ್ನು ಅನ್ಯಗ್ರಹ ಜೀವಿಗಳು ಬರಬಹುದೆಂದು ಅದೆಷ್ಟೋ ರಾತ್ರಿಗಳ ಬಾನಂಗಳವನ್ನು ಎವೆಯಿಕ್ಕದೆ ವೀಕ್ಷಿಸಿದ್ದೆ, ಹಾರುವ ತಟ್ಟೆಗಳಿಗಾಗಿ ಕಾದಿದ್ದೆ. ಕೊನೆಗೆ ವಾಸ್ತವಗಳ ತಿಳಿದು ಬೇಸರಿಸಿದ್ದೆ. ತಮ್ಮನೊಂದಿಗೆ ಗಂಟೆಗಟ್ಟಲೆ ಕುಳಿತು ನಕ್ಷತ್ರ ಪುಂಜಗಳ ಗುರುತಿಸಿ ಕೇಕೆ ಹಾಕಿದ್ದೆ, ಪುಟ್ಟ ವಿಜ್ಞಾನಿಯೆಂದು ಬೀಗಿದ್ದೆ.! ಉರಿದು ಬೀಳುವ ಉಲ್ಕೆಗಳ ಮೇಲೆ ಹಾರೈಕೆಯೊಂದನ್ನು ಕಟ್ಟಿದ್ದೆ. ಚಂದ್ರಗ್ರಹಣವ ನೋಡಲು, 2 ಗಂಟೆಯ ಅಪರಾತ್ರಿಯಲಿ ಎದ್ದು, ಹೊರಗೆ ಹೋಗಲು ಹೆದರಿ, ಪಪ್ಪನ ಎಬ್ಬಿಸಿ ಬೈಸಿಕೊಂಡಿದ್ದೆ. ಪಪ್ಪನಿಗೆ ಅಂಟಿಕೊಂಡು ಕುಳಿತೇ ಚಂದ್ರಗ್ರಹಣವ ನೋಡಿದ್ದೆ. ಬಾಣ ಬಿರುಸುಗಳ ಉಲ್ಕಾಪಾತವ ಬೆಟ್ಟದ ಮೇಲಿಂದ ನೋಡಿ ಸಂಭ್ರಮಿಸಿದ್ದೆ. ನನ್ನ ಪುಟ್ಟ ಬೊಗಸೆಯಲ್ಲಿ ನೀರು ತುಂಬಿ ಚಂದಿರನ ಬಿಂಬವ ಹಿಡಿದು ಚಂದಿರ ಸಿಕ್ಕಿದಷ್ಟೇ ಸಂಭ್ರಮಿಸಿದ್ದೆ. ಪಪ್ಪನ ಹತ್ತಿರ ಹಠ ಮಾಡಿ telescope ಒಂದನ್ನು ತರಿಸಿಕೊಂಡಿದ್ದೆ. ಕಲ್ಪನಾ ಚಾವ್ಲ ಬಾನಿನಲ್ಲಿ ಬೂದಿಯಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅದೇನೋ ಖುಷಿಯಿತ್ತು ಆ ಕಾಯುವಿಕೆಯಲ್ಲಿ, ಬೇಸರಿಕೆಯಲ್ಲಿ, ಆ ಕೇಕೆಯ ಪ್ರತಿಧ್ವನಿಗಳಲ್ಲಿ, ಆ ಮುಗುದ ಯೋಚನೆಗಳಲ್ಲಿ. ಆದರೆ ನಾವು ಎಲ್ಲವನು ತಿಳಿದುಕೊಳ್ಳುವ ಹಂಬಲದ ಭರದಲ್ಲಿ ಅದೆಷ್ಟೋ ಅಮೂಲ್ಯವಾದದ್ದನ್ನು ಕಳೆದು ಕೊಂಡು ಬಿಡ್ತೇವೆ. ತಿಳುವಳಿಕೆ ಜಾಸ್ತಿಯಾಗುತ್ತ ಹೋದಂತೆ ಮುಗ್ಧತೆ ಮರೆಯಾಗುತ್ತಲೇ ಸಾಗುತ್ತದೆ ಅಲ್ವಾ?
ಪುಟ್ಟ ಮಗುವಾಗಿದ್ದಾಗ 'ಮಾಮ'ನಾಗಿದ್ದ ಚಂದಿರ. ಕನ್ನಡ ಶಾಲೆಗೆ ಹೋಗುತ್ತಿದ್ದಾಗ ರಾತ್ರಿ ಬಾನಲ್ಲಿ ನಡೆಯುವ ಶಾಲೆಯ ಮಾಸ್ತರನಾಗಿದ್ದ. ಹರೆಯಕ್ಕೆ ಕಾಲಿಡುತ್ತಿದ್ದಂತೆ ಚಂದಿರ ಪ್ರೇಮಿಯಂತೆ ಭಾಸನಾಗುತ್ತಾನೆ. ಹುಣ್ಣಿವೆಯ ಹತ್ತಿರದ ದಿನಗಳಲ್ಲೆಲ್ಲ ಚಂದಿರನ ನೋಡಿದಷ್ಟೂ ಸಾಕಾಗುವುದಿಲ್ಲವೆನ್ನುವ ಮನಸ್ಸು. ಒಂದು ಬಗೆಯ possessiveness ಬೇರೆ ಅವನ ಮೇಲೆ!. ಆ ತಾರೆಗಳೆಲ್ಲ ಸವತಿಯರಂತೆ ಕಾಣುತ್ತವೆ. ಅದೆಷ್ಟು ವಿಚಿತ್ರ ನೋಡಿ ...!
ಹೀಗೆ ಕನಸುಗಳು, ನೆನಪುಗಳು ಒಂದೇ ಸಮನಾಗಿ ಸಾಗುತ್ತಲೇ ಇದ್ದವು. ಎರಡರ ನಡುವೆ ಭೇದವೇ ಇಲ್ಲದಂತೆ ಕಳೆದೇ ಹೋಗಿದ್ದೆ ಅಕ್ಷರಶಃ.. ಆ ಬಾನ ತಾರೆಗಳ ನೋಡುತ್ತಾ ಲಹರಿಯಲ್ಲಿ. 'ಬಾನ ಜಾತ್ರೆ'ಗೆ ತಾರೆಗಳು ಸೇರುತ್ತಲೇ ಇದ್ದವು. ತಮ್ಮ ಕೂಗುತ್ತಿದ್ದ "ಅಕ್ಕಾ map ತಗಂಬಾರೆ, ಇದ್ಯಾವ star cluster ಹೇಳೇ ..... " .ಅವನ ಆ ಕೂಗಿಗೆ ವಾಸ್ತವಕ್ಕೆ ಬಂದೆ.
ಅರೆರೆ ಎಲ್ಲಿದ್ದಾನೆ ನಮ್ಮ ಚಂದಿರ.! ಥಟ್ಟನೆ ನೆನಪಾಗಿದ್ದವನ ಪಡುವಣದ ಅಂಚಲ್ಲಿದ್ದ ಕಂಡೆ.! ಮುಗುಳುನಗೆ ತಂತಾನೇ ಮೂಡಿತ್ತು . ಅವನೂ ಕಣ್ಣು ಹೊಡೆದು ಬಿಟ್ಟ ನೋಡಿ "ಈಗ ನನ್ನ ನೆನಪಾಯ್ತಾ?" ಎಂದು ..! ಸಪ್ತರ್ಷಿ ಮಂಡಲ (the great bear) ನೆತ್ತಿಯ ಮೇಲೆ ತೂಗುತ್ತಿತ್ತು . map ತರಲು ರೂಮಿಗೆ ಹೊರಟೆ. ಮನಸ್ಸು ನೆನಪು- ಕನಸುಗಳ ಸೋನೆಮಳೆಯಲ್ಲಿ ಮಿಂದೆದ್ದಿತ್ತು. ಮಧುರಾನುಭೂತಿಯ ಹೊಸ ಲಹರಿಯಲ್ಲಿ ತೇಲುತ್ತಿದ್ದೆ.
ಗೆಳೆಯರೇ, ನಮ್ಮ ಬಗ್ಗೇ ಯೋಚಿಸಲು ಪುರುಸೊತ್ತಿಲ್ಲದ ಈ ಧಾವಂತದ ದಿನಗಳಲ್ಲಿ, ಒಂದು week endನ ಸಂಜೆ ನಕ್ಷತ್ರಗಳ ಜಾತ್ರೆಗೆ ಹೋಗಿ ಬನ್ನಿ.ನಿಮ್ಮದೇ ಲಹರಿಯಲ್ಲಿ ಕಳೆದು ಹೋಗಿ. ನಿಮಗೆ ನಿಮ್ಮ ಬಾಲ್ಯ ನೆನಪಾದೀತು, ಹಳೆಯ ಮುಗುದ ಕನಸುಗಳು ನೆನಪಾಗಿ ತುಂಟ ನಗೆಯೊಂದು ತುಟಿಯಂಚಲಿ ಮೂಡಬಹುದು,ಯಾರದೋ ನೆನಪು ಧಿಗ್ಗನೆ ಎದ್ದು ಬಂದು ನಕ್ಷತ್ರಗಳು ಮಸುಕಾಗಬಹುದು. ಕೆನ್ನೆ ಮೇಲಿಳಿದ ಕಣ್ಣೀರ ಹನಿಯಲ್ಲಿ ಚುಕ್ಕಿಯೊಂದು ಪ್ರತಿಬಿಂಬವ ನೋಡಿ ನಕ್ಕಂತೆ ಅನಿಸಬಹುದು. ಜಾತ್ರೆ ಮುಗಿಸಿ ಭೂಮಿಗಿಳಿದು ಬಂದಾಗ ನಿಮ್ಮ ಬೇಸರದ ಭಾವವೆಲ್ಲ ಕಳೆದು ಮುಗುಳ್ನಗೆಯೊಂದು ಮೂಡದಿದ್ದರೆ ಆಗ ಹೇಳಿ ..!
ಖಂಡಿತವಾಗಿ ನೀವು ಹೇಳಿದಂತೆ ಈ ವಾರಾಂತ್ಯದಲ್ಲಿ ಒಮ್ಮೆ ಆಕಾಶವೀಕ್ಷಣೆ ಮಾಡಬೇಕೆಂದಿದ್ದೇನೆ.. ಮತ್ತೆ ಆ ಹಳೆ ನೆನಪುಗಳನ್ನು ನೆನೆಸಿಕೊಂಡು ನಮಗೂ ನೆನಪಿಸಿದಕ್ಕೆ ಧನ್ಯವಾದಗಳು.. ಸಣ್ಣವರಿದ್ದಾಗ ಹಳ್ಳಿಯಲ್ಲಿ ಎಷ್ಟೋ ಬಾರಿ ರಾತ್ರಿಯೆಲ್ಲಾ ಕರೆಂಟ್ ಇರುತ್ತಿರಲಿಲ್ಲ. ಆಗ ಆಕಾಶ ವೀಕ್ಷಣೆ ಹವ್ಯಾಸವಾಗಿತ್ತು. ಈಗ ತೆಲೆಯೆತ್ತಿ ಮೇಲೆ ನೋಡಿ ಎಷ್ಟೋ ದಿನವಾಗಿ ಹೋಗಿದೆ. ಸಮಯವಾದಾಗ ನನ್ನ ಬ್ಲಾಗ್‍ಗೊಮ್ಮೆ ಭೇಟಿ ನೀಡಿ.. http://poemsofpradeep.blogspot.com
ReplyDeleteಹೌದು...ರಾತ್ರಿ ಆಗಸ ವೀಕ್ಷಿಸುವುದು ನನ್ನ ಇಷ್ಟದ ಹವ್ಯಾಸಗಲ್ಲಿ ಒಂದು.ಏನೋ ಒನ್ ತರಹ ಸಂತೋಷ ಆಗುತ್ತೆ ಆಕಾಶ ನೋಡ್ತಾ ಇದ್ರೆ.ಅಲ್ಲಿರೋ ನಕ್ಷತ್ರಗಳು,ನಮ್ಮನ್ನ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಯಾರ ಜೊತೆಯೂ ಬಯಸದೇ ಸುಮ್ಮನೆ ಆಗಸ ನೋಡುತ್ತಾ ಘಂಟೆಗಟ್ಟಲೆ ನಾನೂ ಕಳೆಯುತ್ತೇನೆ.
ReplyDeleteಗೆಳತಿಯರು ಹೇಳುತ್ತಾರೆ, "ಕತ್ಲೇಲಿ ಎಂತ ಮಾಡ್ತಾಲೇನೋ ಇವ್ಳು" !! ಅಂತ. "Only some people feel the rain others just get wet"..so we must be happy that we are also blessed to feel...:) nice write up
I enjoyed it ..:)
aakaash vikshaNe nanagU ishTa.... antarishada koutukada bagge naanu tumbaa hutuhaliga...
ReplyDeletetumbaa chennaagi barediddiraa....
saNNavaniddaaga beach ge hogi inchinche muLuguva suryanannu noDi baruttidde..
elli hodavo aa dinagalu.....?
ಖಾಲಿ ಬಾನು....?!!
ReplyDeleteSoumya,
ReplyDeleteakaasha veekshane nangoo tumba ista
aa nakshatragala lokadalli kaleduhoguva soubhaagya ve bere
olle baraha.. nakshatra veekshanege telescope togondu bangalore inda horage hogo plan maadtaa iddeve. naanu oorallirbekaadre dina map itkondu aakasha nododu nanna havyaasa aagittu.. eega street light nodkondu samaadhana patkobekaste.:-(
ReplyDeleteಊರಲ್ಲಿದ್ದಾಗ ನಾನೂ ಸಹ ಇದೆ ತರ ಆಕಾಶ ನೋಡ್ತಾ, ಆಕಾಶದಲ್ಲಿನ ಚುಕ್ಕಿಗಳ ಚಿತ್ತಾರವನ್ನ ಸವಿಯುತ್ತಾ, ಅಲ್ಲೊಂದು ಇಲ್ಲೊಂದು ತಾರೆಗಳು ತಮ್ಮ ಆಯುಷ್ಯ ಸವೆಸಿ ಗೊತ್ತು ಗುರಿ ಇಲ್ಲದಂತೆ ಓಡೋದನ್ನ ನೋಡ್ತಾ ಕಾಲ ಕಳೆಯುತ್ತಿದ್ದುದು ನೆನಪಾಯ್ತು.. ಇಲ್ಲಿಯೂ ಅದೇ ತರ ಆಕಾಶದೆಡೆಗೆ ಮುಖ ಮಾಡಿ ವಿಸ್ಮಯಕ್ಕೆ ಬೆರಗಾಗಬೇಕು ಅಂತ ಆಸೆ.. ಆದರೆ ಶಹರದ ಕೋರೈಸುವ ನಿಯಾನ್ ದೀಪಗಳ ಬೆಳಕಿನಲ್ಲಿ ಅಲ್ಲೊಂದು ಇಲ್ಲೊಂದು ಗಟ್ಟಿ ಕುಳಗಳಂತಿರುವ ನಕ್ಷತ್ರಗಳು ಮಾತ್ರ ಕಣ್ಣಿಗೆ ಬೀಳುತ್ತವೆ.. ಚೆನ್ನಾಗಿದೆ ಬರಹ...
ReplyDeleteOlleya lekhana..Chennagi barediddiri..Tumba dinavaaytu e tara taregala nodi..adu blore nalli nododakkinta oorige hodaga noduvudendare mattu ishta...e weekend oorige hoguttiddene..khandita noduttene..thanks..
ReplyDeleteಸಹೋದರಿ ಸೌಮ್ಯ , ನಿಮ್ಮ ಆಕಾಶ ವೀಕ್ಷಣೆ ಲೇಖನ ಚೆನ್ನಾಗಿ ಮೂಡಿ ಬಂದಿದೆ.ನಾನು ಅಡವಿಯಲ್ಲಿ ಕಗ್ಗತ್ತಲಲ್ಲಿ ಕುಳಿತು ನಿಶ್ಯಬ್ದ ವಾತಾವರಣದಲ್ಲಿ ನಕ್ಷತ್ರ ಹಾಗು ಚಂದಿರನ ವೀಕ್ಷಣೆ ಮಾಡಿದ್ದೇನೆ. ಸುಂದರ ಅನುಭವ ನೆನಪಿಗೆ ತಂದ ಲೇಖನ ನಿಮ್ಮದು . ಗುಡ್. .
ReplyDeleteಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
Nice One Soumya..... !!
ReplyDeletenice one............
ReplyDeleteಹೌದು ಪ್ರದೀಪ್ ಅವರೇ ಖಂಡಿತ ಆಕಾಶ ವೀಕ್ಷಣೆ ಮಾಡಿ ಧನ್ಯವಾದಗಳು :)
ReplyDelete"Only some people feel the rain others just get wet"..so we must be happy that we are also blessed to feel...:)
ReplyDeletewell said Divya :) thanks a lot :)
only few can feel that light in that darkness .... others just say twinkling stars ..... :))
ಹೌದು ದಿನಕರ್ ಸರ್ ಇಂಚಿಂಚಾಗಿ ಸಮುದ್ರದಲ್ಲಿ ಕರಗುವ ಸೂರ್ಯನ ಪರಿ ಅನುಭವಿಸಿದವರಿಗಷ್ಟೇ ಗೊತ್ತು . ಧನ್ಯವಾದಗಳು :)
ReplyDelete@ವಿಚಲಿತ No its full of stars ... :)) ;)
ಖಂಡಿತ ಗುರು ಸರ್ .. ಅದು ಸೌಭಾಗ್ಯವೇ ಹೌದು ... :)
ReplyDeleteಕಾಂತಿ ನಿಮ್ಮ plan ಮುಗಿದಮೇಲೆ ಅದರಬಗ್ಗೆ ಬರೆಯುತ್ತೀರೆಂಬ ನಂಬಿಕೆ ಇದೆ .. :) ಧನ್ಯವಾದಗಳು
ಧನ್ಯವಾದಗಳು ದಿಲೀಪ :) ನಿಯಾನ್ ಬೆಳಕಿನಲ್ಲಿ ಮಬ್ಬಾದ ನಕ್ಷತ್ರ :)) ಹೊಸತೊಂದು ವಿಚಾರ ಹೊಳೆಯುತ್ತಿದೆ ನಿಮ್ಮ ಸಾಲುಗಳ ನೋಡಿ :)
ReplyDeleteಕವಿತಾ ನೀವೊಮ್ಮೆ ತಾರೆಗಳ ಜಾತ್ರೆಗೆ ಹೋಗಿ ಬಂದರೆ ನಾ ಬರೆದದ್ದು ಸಾರ್ಥಕವಾದಂತೆ. ಧನ್ಯವಾದಗಳು :))
ReplyDeleteಧನ್ಯವಾದಗಳು ಬಾಲು ಸರ್ :)
Thank you Anant and knPrashu :))
ReplyDeleteಪುಟ್ಟ ಮಗುವಾಗಿದ್ದಾಗ 'ಮಾಮ'ನಾಗಿದ್ದ ಚಂದಿರ. ಕನ್ನಡ ಶಾಲೆಗೆ ಹೋಗುತ್ತಿದ್ದಾಗ ರಾತ್ರಿ ಬಾನಲ್ಲಿ ನಡೆಯುವ ಶಾಲೆಯ ಮಾಸ್ತರನಾಗಿದ್ದ. ಹರೆಯಕ್ಕೆ ಕಾಲಿಡುತ್ತಿದ್ದಂತೆ ಚಂದಿರ ಪ್ರೇಮಿಯಂತೆ ಭಾಸನಾಗುತ್ತಾನೆ. nija chandra namma grhikege takka haage kaanasiguttane...
ReplyDeleteಹನಿ ಹನಿ ಮೂನಿನ ಕತೆ ಮಜವಾಗಿದೆ!!!!
ReplyDeleteಬನ್ನಿ ನಮ್ಮನೆಗೂ
http://chinmaysbhat.blogspot.com
ಹೇಯ್, ಮಸ್ತ್ ಬರಿದ್ಯೆ. ಶಬ್ಧ,ವಾಕ್ಯ ರಚನೆ-ಬಳಕೆ ಅಂತೂ ವಾವ್..'ಚಂದ'.
ReplyDeleteSuperbbbbb.....Tumbaa Chennagide...
ReplyDeletehttp://ashokkodlady.blogspot.com/
hai soumya.... super kanri...nan e thara storys odthirlilla but nim blog nodi.. odbeku ansuthe nange intarnal idru nim blog odtha kurthini.. super agi ide e post anthu nan life nallu kelavu ede gataneglu nadedive... once again thaks..for posting this...
ReplyDelete