ಬಹಳ ದಿನಗಳಿಂದ ಒಂದು ಸರಳ ಕಥೆ ಮನಸಿನಲ್ಲಿತ್ತು. ಓದಿ ಹೇಗಿದೆ ಹೇಳಿ :
ಅವರಿಬ್ಬರೂ ಇದ್ದದ್ದೇ ಹಾಗೆ. ಅವನು ಉತ್ತರ ಧ್ರುವವಾದರೆ. ಅವಳು ದಕ್ಷಿಣ. ಅವಳು ಬಾಯಿಬಡುಕಿ ಇಡೀದಿನ ವಟವಟ ಅನ್ನುತ್ತಲೇ ಇರುವವಳಾದರೆ, ಅವನು ಮೌನಿ. ಅವನು ಅಂತರ್ಮುಖಿ, ಅವಳು ಬಹಿರ್ಮುಖಿ. ಅವಳು ಚಂಚಲೆ, ಹುಡುಗಾಟದ ಹುಡುಗಿ ಅವನು ಪ್ರಬುದ್ಧ, ಗಂಭೀರ ಹುಡುಗ...! ತದ್ವಿರುದ್ಧ ಸ್ವಭಾವ.
ಅವರಿಬ್ಬರ ಭೇಟಿ ಆದದ್ದೇ ಅಚಾನಕ್ ಆಗಿ. ಹುಡುಗಿಯರೆಂದರೆ ಮಾರು ದೂರ ಓಡುತ್ತಿದ್ದ ಹುಡುಗ,ಸಮುದ್ರದದ ಅಲೆಗಳಲ್ಲಿ ಪಾದ ತೋಯಿಸಿಕೊಳ್ಳುತ್ತಿದ್ದ ಹುಡುಗಿಯನ್ನು ಸುಮ್ಮನೆ ಮಾತನಾಡಿಸಿದ್ದ.. ಹಾಗೆ ದಡದತ್ತ ನಡೆದು ಬಂದ ಹುಡುಗಿ ಪಟಪಟನೆ ಮಾತನಾಡಿದ್ದಳು. ಹಳೆಯ ಸ್ನೇಹಿತರ ಆತ್ಮೀಯತೆಯಲ್ಲಿ.ವಾಚಾಳಿ ಹುಡುಗಿಯ ಮಾತಿನ ಮೋಡಿಗೆ,ತೋರಿದ ಆತ್ಮೀಯತೆಗೆ ಬೆರಗಾಗಿದ್ದ ಹುಡುಗ. .! ಅವಳು ಮಾತನಾಡಿದ ಪರಿಗೆ ನಕ್ಕಿದ್ದ, ಮೊದಲ ಬಾರಿಗೆ ಮನದುಂಬಿ ಕಣ್ಣಲ್ಲಿ ನೀರಿಳಿಯುವಷ್ಟು..! ಅದೇನೋ ಆಕರ್ಷಣೆಯಿತ್ತು ಆ ಹುಡುಗಿಯ ಮುಗ್ಧ ಮಾತುಗಳಲ್ಲಿ, ಅವಳ ಆ ಅಮಾಯಕ ಕಣ್ಣುಗಳಲ್ಲಿ.
ಅಂದು ಸಮುದ್ರತೀರ ಬಿಡುವಾಗ ಉಳಿದದ್ದು, ಅವಳ ಒದ್ದೆ ಪಾದಗಳಿಗಂಟಿದ ಮರಳಿನ ಕಣಗಳು, ಜೊತೆಗೆ ಹುಡುಗನ ಮನದಲ್ಲಿ ಆ ಹುಡುಗಿಯ ಜೊತೆ ಕಳೆದ ನೆನಪು.!ಇಬ್ಬರ ಹವ್ಯಾಸಗಳು ಒಂದೇ. ಇಬ್ಬರಿಗೂ ನಿಸರ್ಗ, ಮಳೆ,ಬೆಳದಿಂಗಳು,ಸಂಗೀತ, ಸಾಹಿತ್ಯ ಅಂದರೆ ಇಷ್ಟ. ಹವ್ಯಾಸಗಳು ಇಬ್ಬರನ್ನೂ ಹತ್ತಿರ ತಂದಿದ್ದವು.
ಅವನಿಗೆ ಕೇಳುಗರು ಇಹ ಮರೆಯುವಂತೆ ಕೊಳಲು ನುಡಿಸುವುದು ಗೊತ್ತು. ಅವಳಿಗೆ ಹೃದಯ ಕರಗುವಂತೆ ಹಾಡುವುದು ಗೊತ್ತು. ಇಡೀ ದಿನ ಮಾತಾಡುತ್ತಲೇ ಇರುವ ಹುಡುಗಿ ಹಾಡಿದಳೆಂದರೆ,ಮೋಡವೂ ಕರಗಿ ಮಳೆ ಸುರಿಯಬೇಕು.
ದಿನಗಳೆದಂತೆ ಸ್ನೇಹ ಗಾಢವಾಗುತ್ತಲೇ ಹೋಯಿತು. ವಾರದ ಕೊನೆಯ ಸಂಜೆ ಹೊತ್ತಲ್ಲಿ ಹಾಡು, ಇವಳ ಮಾತು, ಅವನ ಕೊಳಲ ಗಾನ ಇವಿಷ್ಟೇ ಅವರ ಪ್ರಪಂಚ. ಹುಡುಗಿ ಮಾತನಾಡುತ್ತಲೇ ಹೋದರೆ ಹುಡುಗ ಮನದುಂಬಿ ನಗುತ್ತಿದ್ದ. ಅದೇ ಸಮುದ್ರದ ಅಲೆಗಳು,ಹಸಿ ಮರಳು. ಅವಳ ಹೆಜ್ಜೆಗುರುತುಗಳು, ನಗು, ನೋಟ ಎಲ್ಲ ಇಷ್ಟ ಅವನಿಗೆ. ಇವನ ಹೆಜ್ಜೆಯ ಮೇಲೆ ಅವಳು ಕಷ್ಟಪಟ್ಟು ಹೆಜ್ಜೆ ಇಡುತ್ತ ಸಾಗುವ ರೀತಿಗೆ ಶರಣಾಗಿದ್ದ. ಕಂಡೂ ಕಾಣದಂತೆ ಮುಗುಳ್ನಕ್ಕಿದ್ದ .ಮೌನಿ ಹುಡುಗ ಅವಳ ಧ್ಯಾನಿಯಾಗುತ್ತ ಹೋದ. ಅವಳಿಗೂ ಅವನೆಂದರೆ ಇಷ್ಟವೆಂದು ಅವಳ ಕಂಗಳೇ ಹೇಳುತ್ತಿದ್ದವು. ಆದರೆ ಯಾರೊಬ್ಬರೂ ಬಾಯಿ ಬಿಡಲಿಲ್ಲ...!
ಅಂದು ಪೌರ್ಣಿಮೆ. ಬಾನಿನಲ್ಲಿ ಚಂದ್ರ -ಬೆಳದಿಂಗಳು. ಅವನ ಜೊತೆ ಅವಳ ಮೊದಲ ಹುಟ್ಟಿದ ಹಬ್ಬ. ಹುಟ್ಟಿದ ಹಬ್ಬವ ಅದೇ ಸಮುದ್ರ ತಟದಲ್ಲಿ ಆಚರಿಸಿ ಸಂಭ್ರಮಿಸಿದ್ದ. ನಿಶೆಯ ನೀರವವ ಸಮುದ್ರದ ಅಲೆಗಳ ಶಬ್ದಕ್ಕೆ ಕರಗಿತ್ತು. ಮುದ್ದು ಹುಡುಗಿಗೆ ಒಂದು ಚಂದದ Teddyಯ ಜೊತೆ ಸಮುದ್ರದ ಚಿಪ್ಪುಗಳ ಹಾರವನ್ನು ನೀಡಿದ್ದ. ಹುಡುಗಿಯ ಕಣ್ಣಲ್ಲಿದ್ದ ನೀರಿನಲ್ಲಿ ಚಂದಿರ ತನ್ನ ಮುಖ ನೋಡಿ ಮೆಲ್ಲನೆ ಮೋಡದ ಮರೆಗೆ ಸರಿದಿದ್ದ. ಹುಡುಗ ಮುಗುಳ್ನಕ್ಕು "Be happy Dear" ಎಂದು ಹೇಳಿ ನಡೆದು ಬಿಟ್ಟಿದ್ದ.
ಅಲ್ಲಿಂದ ಏನಾಯಿತೋ ಗೊತ್ತಿಲ್ಲ. ಹುಡುಗ ಅವಳನ್ನು ಸುಮ್ಮನೆ avoid ಮಾಡತೊಡಗಿದ. ಅವಳ ಯಾವ ಪ್ರಶ್ನೆಗೂ ಉತ್ತರವೇ ಇರಲಿಲ್ಲ ಅವನ ಬಳಿ. ಕಾಡಿಸಿ ಪೀಡಿಸಿ ಕೇಳಿದಾಗ ಹುಡುಗ ಹೇಳಿದ್ದಿಷ್ಟೇ " ನಾವಿಬ್ಬರೂ ಭೂಮಿಯ ಎರಡು ಧ್ರುವಗಳು ಒಂದಾಗಲು ಸಾಧ್ಯವೇ ಇಲ್ಲ ಹುಡುಗೀ". ಹುಡುಗಿ ಕಂಗಾಲಾದಳು.ಕಣ್ಣೀರಾದಳು ಕೊನೆಗೆ ಸುಮ್ಮನಾದಳು. ವಾರದ ಕೊನೆಗೆ ಭೇಟಿಯಾಗದೆ ತಿಂಗಳುಗಳು ಕಳೆದವು.ಕಡಲ ತಡಿಯಲ್ಲಿ ಕೊಳಲ ಗಾನವಿಲ್ಲ, ಸಮುದ್ರವೇ ಕಂಗಾಲಾಗುವಂತೆ ಮಾತಾಡುವ ಹುಡುಗಿಯೂ ಇಲ್ಲ. ಅವಳ ಭಾವಗೀತೆಯೂ ಇಲ್ಲ.
ಹುಡುಗಿ ನಿರ್ಧರಿಸಿದ್ದಳು. ಅವನ ಕೊನೆಯ ಬಾರಿ ಭೇಟಿ ಮಾಡುವುದೆಂದು. ಮುಂದೆಂದೂ ಸಿಗಲೂ ಬಾರದು ಅವನಿಗೆ. ಅವನು ಕೊಟ್ಟ ಕಾಣಿಕೆಗಳನ್ನೆಲ್ಲ ಅವನಿಗೇ ಒಪ್ಪಿಸಿ ಬಿಡಬೇಕು. ಕರೆದಳು ಅವನ ಕಡಲ ತಡಿಗೆ "ಕೊಳಲಿನೊಂದಿಗೆ ಬಾ " ಎಂದು. ಮತ್ತದೇ ಬೆಳದಿಂಗಳ ರಾತ್ರಿ, ಹಸಿಮರಳು, ಹುಡುಗಿಯ ಕೈಯಲ್ಲಿ ಅದೇ teddy,ಅದರ ಕುತ್ತಿಗೆಯಲ್ಲಿ ಚಿಪ್ಪಿನ ಸರ.!
ಹುಡುಗನೂ ಬಂದ. ಅದೇ ಮುಗುಳುನಗೆ. ಹುಡುಗಿಯ ಪಕ್ಕದಲ್ಲಿ ಕುಳಿತ. ಹುಡುಗಿ ಮೌನಿಯಾಗಿದ್ದಳು. ಮೌನವೇ ಮೇಳೈಸಿತ್ತು ಅವರಿಬ್ಬರ ನಡುವೆ ..! "ಕೊನೆಯ ಬಾರಿ ಒಮ್ಮೆ ಕೊಳಲ ನುಡಿಸ್ತೀಯಾ?, ಇನ್ಯಾವತ್ತು ಕೇಳುವುದಿಲ್ಲ ಕಣೋ " ಅಂದಳು ಹುಡುಗಿ ಮೌನವ ಮುರಿದು. ಹುಡುಗ ಮುಗುಳ್ನಕ್ಕ ಮತ್ತೊಮ್ಮೆ, ಕೊಳಲಿಗೆ ಉಸಿರು ಕೊಟ್ಟ. ಉಸಿರು ದನಿಯಾಗಿ, ನಾದವಾಗಿ ಹೊಮ್ಮಿತು. ಸಮುದ್ರದ ಭೋರ್ಗರೆತವ ಮೀರಿ..!
ಹುಡುಗ ಕೊಳಲು ಊದುವುದನ್ನು ನಿಲ್ಲಿಸಿದ. "ಒಂದು ಹಾಡು ಹೇಳೇ ಎಂದ ". ಹುಡುಗಿ ಮೌನವಬಿಟ್ಟಳು, ಹಾಡಾದಳು. "ನೀನಿಲ್ಲದೆ ನನಗೇನಿದೆ .... ... " ಭಾವನೆಗಳ ಬಿಚ್ಚಿಟ್ಟು ಹಾಡಿದಳು. ಅವಳು ತನ್ಮಯನಾಗಿ ಹಾಡುತ್ತಿದ್ದರೆ, ಹುಡುಗ ಕಣ್ಣೀರಾಗಿದ್ದ. ಬಂದು ಬಿಗಿದಪ್ಪಿದಾಗಲೇ ಹುಡುಗಿಯು ವಾಸ್ತವಕ್ಕೆ ಬಂದದ್ದು. ಇಬ್ಬರ ಕಣ್ಣಲ್ಲೂ ನೀರು... "ಎಲ್ಲೂ ಹೋಗಬೇಡವೇ, ನೀನಿಲ್ಲದೆ ನಾನಿಲ್ಲ ಹುಡುಗೀ .." ಹುಡುಗನೆಂದ. ಹುಡುಗಿ ಮೂಗೊರೆಸುತ್ತ, ಕಣ್ಣಲ್ಲಿ ಮಿಂಚು ತುಳುಕಿಸುತ್ತ ಎಂದಳು, "ನಾವಿಬ್ಬರೂ ಭೂಮಿಯ ಎರಡು ಧ್ರುವಗಳಲ್ಲ ಹುಡುಗ, ಆಯಸ್ಕಾಂತದ ಎರಡು ವಿರುದ್ಧ ಧ್ರುವಗಳು..! "ಹುಡುಗ ನಕ್ಕುಬಿಟ್ಟ ಅದೇ ಅವನ ಹಳೆ ಸ್ಟೈಲಿನಲ್ಲಿ. .! ಬಾನಲ್ಲಿ ಚಂದ್ರ ನಗುತ್ತಿದ್ದ. ಮರಳಲ್ಲಿ ತಣ್ಣಗೆ ಕುಳಿತ ಕೊಳಲಿನ ಕಡೆ ನೋಡಿ, ಚುಕ್ಕಿಯೊಂದು ಕಣ್ಣು ಮಿಟುಕಿಸಿತು ... !
"ನೀನಿಲ್ಲದೆ ನನಗೇನಿದೆ .... ... " ಹಾಡಿನಲ್ಲಿ ಇಷ್ಟೊಂದು ಪ್ರಭಾವ ಇದೆಯೆಂದು ಗೊತ್ತಿರಲಿಲ್ಲ... ಒಮ್ಮೆ ಟ್ರೈ ಮಾಡಿ ನೋಡಿಯೇ ಬಿಡೋಣ ಎಂ. ಎನ್. ವ್ಯಾಸ ರಾವ್ ಅವರ ಗೀತೆ ಸಾತ್ ಕೊಡುತ್ತೋ ಇಲ್ವೋ ಅಂತ...!! ;)
ReplyDeleteBeautiful :-)
ReplyDeleteಕಹಾನಿಯಲ್ಲಿ ಸುಂದರ ತಿರುವುಗಳಿವೆ.ಕಡಲ ಕಿನಾರೆ, ಅಲೆಗಳು, ಮರಳು . ಕೊಳಲ ನಾದ , ಹಾಡು, ಜೊತೆಗೆ ಭಾವಗೀತೆ [ನೀನಿಲ್ಲದೆ], ಭಾನಿನ ಚಂದಿರ , ಚುಕ್ಕಿ ಇದರ ಜೊತೆಗೆ ಅವನು ಅವಳು !!!! ಎಲ್ಲ ಅಲಂಕಾರ ಮಾಡಿ ಸಣ್ಣ ಕಥೆ ಬರೆದಿದ್ದೀರ !!!ಇಷ್ಟ ಆಯ್ತು .
ReplyDeleteSooper!!! soumya..sakkattagi baradde.... :-)loved it.. ;)
ReplyDeleteninillade nanagenide haade haage..
ReplyDelete@ sudarshan try ಮಾಡಿ ನೋಡಿ. go ahead.. all the best.
ReplyDeleteThanks vanitakka :)
@ subbu sir ಹುಡುಗಿ ಅಲಂಕಾರಪ್ರಿಯೆ ಅಲ್ವಾ ? ;) thank u.. :)
thank u Divya.. :)
@ವಾಣಿ ಹೌದೆ ....ಆ ಹಾಡೇ ಹಾಂಗೆ ...! :)
good...:)
ReplyDeletesimply wow....!
ReplyDeletehi sowmya..varnane,,super,,,,,keep writing,,
ReplyDeleteತುಂಬಾ ಸರಳ ಮತ್ತು ಸುಂದರವಾದ ಕಥೆ.
ReplyDeleteಕಥೆ ಹೇಳುವ ರೀತಿ ಇಷ್ಟ ಆಯಿತು.
moral of the story ::"ವಿರುದ್ದ ಧ್ರುವಗಳಾಗಿದ್ದರೂ, ಅಯಸ್ಕಾಂತದ ವಿರುದ್ದ ಧ್ರುವಗಳಾಗಿರಬೇಕು"
Its an amazing writing....!!
ReplyDeleteIt came out Nicely.....!!
No words!!!!! simply superb,awesome as usual...
ReplyDeleteKeep writing dear....Hats off to your thinking style...
"ನಾವಿಬ್ಬರೂ ಭೂಮಿಯ ಎರಡು ಧ್ರುವಗಳಲ್ಲ ಹುಡುಗ, ಆಯಸ್ಕಾಂತದ ಎರಡು ವಿರುದ್ಧ ಧ್ರುವಗಳು..! Loved this line :)...Very nice imagination....
Kathe chennagiddu.. bt tumba sandehagalannu tannalle bachchitkobitidu... avnu avoid madid yake antale gotagle... Bareda shaili nice...
ReplyDeletePravi
soumya,
ReplyDeletewonderful......... no words.......
Beautifull ಸೌಮ್ಯ ಅವರೆ.. :)
ReplyDeleteಶುದ್ಧ ಪ್ರೀತಿ ಅಂದ್ರೇನೆ ಹಾಗೆ..
ಭಾವನೆಗಳನ್ನು ಅಳಿಸಲಾಗುವುದಿಲ್ಲ..
ಉತ್ತರ ದ್ರುವ ಆದ್ರೇನು.. ದಕ್ಷಿಣ ಆದ್ರೇನು..
Good narration! Keep it up :)
ReplyDeleteಧನ್ಯವಾದಗಳು Va, ವೆಂಕಟೇಶ್ ಸರ್ .& ಸತ್ಯ .. ನಿಮ್ಮ ಪ್ರೋತ್ಸಾಹ ಹೀಗೆಇರಲಿ ..:)
ReplyDeleteಧನ್ಯವಾದಗಳು ನಾಗರಾಜ ಅವರೆ. moral of the story ಹೇಳಿದ್ದಕ್ಕೆ ..:)
Thank you Anant.. :)
Thanks a lot Shantu to be frank you r the inspiration to complete this story.. :)
ಧನ್ಯವಾದಗಳು ದಿನಕರ್ ಸರ್ .. :)
Thanks a lot Kantesh ..:)
ಧನ್ಯವಾದಗಳು ತೇಜಕ್ಕ ...:)
@praveen ಹೌದು ಪ್ರವೀಣ್ ನೀವು ಹೇಳಿದ್ದು ಸರಿ. ಕಥೆ ಇನ್ನೂ ದೊಡ್ಡದಾಗುತ್ತದೆ ಎಂದೆಣಿಸಿದೆ ನಾನು.. ಕಥೆ ತುಂಬಾ ಸರಳ ವಾದದ್ದರಿಂದ ನಿರೂಪಣೆಯ ಕಡೆ ಗಮನ ಹರಿಸಿದೆ. ನಿಮ್ಮ ಸಲಹೆಗೆ ಧನ್ಯವಾದಗಳು... :)
ReplyDeletesimpli nice :)
ReplyDeleteಹೇ ಹುಡುಗಿ...ಎಷ್ಟು ಚೆಂದಾದ ನಿರೂಪಣೆ ...ಆ ಹುಡುಗಿಯಲ್ಲಿ ನಿನ್ನನ್ನೇ ಕಂಡೆ!! ಪ್ರವೀಣ್ ಹೇಳಿದಂಗೆ avoidಮಾಡಿದ ಕಾರಣ ಹೇಳಿದ್ರೆ ಸ್ವಲ್ಪ ಒಳ್ಳೇದಾಗ್ತಿತ್ತು!! ಹಿಂಗೆ ಬರೀತಿರು..
ReplyDeleteನೀನಿಲ್ಲದೇ ನನಗೇನಿದೆ...ಹಾಡನ್ನು ಗೋಳ್ಕಿ೦ಡಿಯವರ ಕೊಳಲಿನ ಮಾಧುರ್ಯದಲ್ಲಿ ಕೇಳಿದ೦ತಾಯ್ತು..ನಿರೂಪಣೆಗೆ.. ನಿರುತ್ತರ!
ReplyDeleteಶುಭಾಶಯಗಳು
ಅನ೦ತ್
chennagide madam.. super... nirupane antu bombat agide...
ReplyDeletethank u jitendra... :)
ReplyDelete@ಸುಮನಕ್ಕ, ನಂಗೆ ಹಾಡುಲೆ ಬತ್ತಿಲ್ಯೇ . ಆ ಹುಡುಗಿ ನನ್ನ ಕಲ್ಪನೆಯ ಹುಡುಗಿ ಅಷ್ಟೇ. ಸ್ವಭಾವ ವಿರುದ್ಧ ಇರೋದು ನೋಡಿ ಹುಡುಗ ಭೂಮಿಯ ಎರಡು ಧ್ರುವ ಹೇಳ್ತಾ. ಅದಕಾಗೆ avoid ಮಾಡಲೇ ಶುರು ಮಾಡ್ತಾ. ಒಂದೇ lineನಲ್ಲಿ ಕಾರಣ ಹೇಳಿದ್ದೆ. titleನಲ್ಲೆ ..:) thanks a lot ... :)
thanks a lot Anant sir. & tarun .. :)
cholo bardri, rashinu ishta aatu nivu bardid shyli
ReplyDeleteಹ್ಯಾಪಿ ಎಂಡಿಂಗ್ ಕುಶಿ ಆಯಿತು ...ಚನ್ನಾಗಿದೆ ಕಥೆ :)
ReplyDeleteನೀನಿಲ್ಲದೆ ನನಗೇನಿದೆ ..ಗೀತೆಯನ್ನು ಚೆನ್ನಾಗಿ ಬಳಸಿಕೊ೦ಡಿದ್ದೀರಿ. ಕಥೆ ಇಷ್ಟವಾಯಿತು.
ReplyDeleteಶ್ರೀ :-)
ಸುಂದರ..ಸುಮಧುರ..
ReplyDeleteಅತಿಮಧುರವಾದ ಲೇಖನ....
ReplyDeleteನನ್ನ 'ಮನಸಿನಮನೆ'ಗೂ ಬನ್ನಿ..
ತು೦ಬಾ...ಹಿಡಿಸಿತು.
ReplyDeleteಭಾವನೆಗಳನ್ನು ವ್ಯಕ್ತಪಡಿಸಿದ ಶೈಲಿ.. ಒ೦ದು ಕ್ಷಣ ಓದುತ್ತಿದ್ದೇನೆ ಎ೦ಬುದನ್ನು ಮರೆಸಿಬಿಟ್ಟಿತು.
simply great love story. even now i didn't undrestand why people love those who is of entirely different character.
ReplyDeleteಸೂಪರ್ ಕಣ್ರೀ ಸೋಮ್ಯ ......
ReplyDeleteಯಾಕೆ ಗೊತ್ತಾ ...?
ನಿಮ್ಮ ಈ ಲೇಖನ ಓದುತ್ತ ಓದುತ್ತ...! ಎಲ್ಲೋ ನೋಡಿದ ಮತ್ತು ಕೇಳಿದ ನೆನಪು ಆಮೇಲೆ ಯೋಚನೆ ಮಾಡಿದರೆ ಇದು " ಜೆಸ್ಟ್ ಮಾತ್ ಮಾತಲ್ಲಿ " ಸಿನಿಮಾದ್ ಸ್ಟೋರಿ ವಾಹ್ಹ್ ಸೂಪರ್ ಕಣ್ರೀ ನಿಮ್ಮ ಬರವಣಿಯ ರೀತಿ ತುಂಬಾ ಚನ್ನಾಗಿದೆ ಕಣ್ರೀ ಸೂಪರ್ ...
ಹಾಗೇ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ ...
ಓಹ್, ಚೆನ್ನಾಗಿದೆಯಲ್ರೀ. ಚಿಕ್ಕ ಚೊಕ್ಕ ಕಥೆ
ReplyDeletethanks a lot chandru, shrikanth, and shri.. :) ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ
ReplyDeletethanks a lot vinkatakrishna sir, guru and manamukta.. :)
ReplyDelete@ rohit the power of attraction of oposite character is high i guess.. :)
thank u ಸಂತೋಷ್ ಅವರೆ.... ಇದು just maath maathalli film kathe alla.. ಈ ಥರ ವಿರುದ್ಧ ಸ್ವಭಾವದ ನಾಯಕ ನಾಯಕಿಯ ರನ್ನು ಇಟ್ಟುಕೊಂಡು ಬಹಳ ಸಿನಿಮಾಗಳು ಬಂದಿವೆ. ust maath maathalli ಸಿನೆಮಾದಲ್ಲಿ ನಾಯಕನಿಗೆ ಕೊಳಲೂ ಬರುವುದಿಲ್ಲ, ನಯಕಾಯಿ ಹಾಡು ಗಾರ್ತಿಯೂ ಅಲ್ಲ. ಸಿನಿಮಾಕ್ಕೆ happy end ಕೂಡ ಇಲ್ಲ. ಇಲ್ಲಿ ನಾನು ನಿಸರ್ಗದ ಜೊತೆಗೆ ಪ್ರೀತಿಯನ್ನು ಬೇರೆಸಿದ್ದೇನೆ.
ReplyDeletethank u ದೀಪಸ್ಮಿತಾ ..:)
ಕಥೆ ಹೇಳುವ ಶೈಲಿ ವಿಶಿಷ್ಟವೆನಿತು. ಕಥಾವಸ್ತು ಸಾಕಷ್ಟು ಪರಿಚಿತದಿದ್ದರೂ ಶೈಲಿಯಿಂದಾಗಿ ಬಿಡದೆ ಓಡಿಸುತ್ತದೆ. ವಿಶಿಷ್ಟ ವಸ್ತುವಿನೊಡನೆ ನಿಮ್ಮ ಈ ಕಥಾಶೈಲಿ
ReplyDeleteಸಾಹಿತ್ಯಲೋಕಕ್ಕೆ ಹೊಸ ಆಯಾಮ ನೀಡಬಹುದು.
thank u ಸಂತೋಷ್ ಅವರೆ....
ReplyDeleteನನ್ನ ಹೆಸರು ಸಂತೋಷ್ ಅಲ್ಲಾ ಸತೀಶ್
ಬೇಸರಿಸದಿರಿ ತಮಾಷೆ ಹಾಗೆ ಹೇಳಿದ್ದು
ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ ......
ನನ್ನವಳಲೋಕಕ್ಕೆ ನಿಮಗೆ ಸ್ವಾಗತ
Really nice!i loved it.. is so magical..
ReplyDeleteWell written Madam :)
ReplyDeleteAwesome short story Sowmya avare...Bhaasheya melina hiDita, bhaavanegaLu, niroopaNe, content, flow ella sogasaagi bandide. KaDalige jeeva bandantide nimma kathe odidaaga...Bareetha iri, nimma baravaNigeyalli hosatana ide :)
ReplyDeleteThank u Sitaram sir,Manasa,Kiran Jayanth,Dejemonos :)
ReplyDeleteChennagide...
ReplyDeleteNivyaake idanna kaadambariyaagisbaaradu?
very nice
ReplyDeletetumba sundaravagide kathe Soumya..:)
ReplyDeleteFeels so good with such happy endings:)