Sunday, October 10, 2010

ಮುರಿದ ಸಾಲುಗಳು ...


ಕಾಲೇಜಿನಲ್ಲಿ ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳಿವು. ಬ್ಲಾಗಿನಲ್ಲಿ ಹಾಕಲೋ ಬೇಡವೋ ಅಂತಿದ್ದೆ. ಮೊನ್ನೆ ನನ್ನ ಹಳೆ note books ಎಲ್ಲ ಜೋಡಿಸಿಡುತ್ತಿರುವಾಗ ಕೊನೆಯ ಪೇಜಿನಲ್ಲಿ ಕಂಡವು. ಅದೇನೋ ಅಕ್ಕರೆ ಈ ಕೊನೆಯ ಹಾಳೆಯ ಮೇಲೆ. ಶಾಲಾ ದಿನದಿಂದಲೂ ಕೊನೆಯ ಪೇಜಿನಲ್ಲಿ ಬರೆಯುವ ಚಟ ಇತ್ತು. ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ತುಂಬಾ ಜನರಿಗೆ ಈ ಹವ್ಯಾಸ ಅಥವಾ ಚಟ ಇದೆ ಅಂದು ಕೊಂಡಿದ್ದೇನೆ. ಶಾಲಾ ದಿನಗಳ stupid crushಗಳ ಹೆಸರನ್ನು ಬರೆಯಲು ಬಳಕೆಯಾಗುತ್ತಿದ್ದ ಆ ಕೊನೆಯ ಹಾಳೆ. ನಂತರ ಮನದ ಭಾವಗಳನ್ನು ಸಾಲಾಗಿ ನಿಲ್ಲಿಸಿ ಅದೇನೋ ಒಂದು ವಿಚಿತ್ರ ರೂಪ ಕೊಟ್ಟು ಬಿಡುವಷ್ಟು ಬೆಳೆದು ನಿಂತಿತ್ತು.






ನಿಮಗೂ ನಿಮ್ಮ note bookನ ಕೊನೆಯ ಪೇಜು ನೆನಪಿಗೆ ಬರಬಹುದು. ಅದರಲ್ಲೂ ಒಂದಿಷ್ಟು ಸಾಲುಗಳಿರಬಹುದು ಅಲ್ವಾ ? ಒಂದೊಂದು ಸಾಲು ವಿಚಿತ್ರ ಎನಿಸಬಹುದು. ಅದಾವ ಭಾವವಿದೆ ಎಂದು ಅರಿಯುವ ಮೊದಲೇ ನಿಮ್ಮ ಹಳೆಯ ಪ್ರೀತಿ ನೆನಪಾಗಬಹುದು. ಕಳೆದು ಹೋದ ಒಂದಿಷ್ಟು ದಿನಗಳು ನೆನಪಾಗಬಹುದು...!
ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ನೋಡಿ ಪ್ರತಿಕ್ರಿಯಿಸಿ.


** ಮುರಿದು ಬಿದ್ದ ಹಕ್ಕಿಯ ಗೂಡೊಂದರ ಮೇಲೆ ಮಂಜಿನ ಹನಿಯೊಂದು ಕೂತು ಕನಸು ಕಾಣುತ್ತಿತ್ತು.


**ಅಮಾವಾಸ್ಯೆಯ ಇರುಳಲ್ಲೂ ಶಶಿಗಾಗಿ ಕಾದು ಕುಳಿತಿರುವ ಚುಕ್ಕಿ, ಚುಕ್ಕಿಯ ನೆನಪಲ್ಲೇ ಬೆಳಗುವ ಮಿಂಚು ಹುಳು ..!


**ನಾನು ಕಾಡಿಸಿದೆ, ಪ್ರೀತಿಸಿದೆ, ಕೊನೆಗೆ ನಿನಗಾಗಿ ಕಾದೆ ... ನೀನು ನನ್ನ ಬದುಕಿಂದ ಎದ್ದೆ ...!


**ಮೊನ್ನೆ ಮೊನ್ನೆ, ಕನ್ಯತ್ವ ಕಳೆದುಕೊಂಡೆ, ಎಂದು ಬಿಕ್ಕಿದ ಕನ್ಯಾ ರಾಶಿಯ ಹುಡುಗಿ ...!


** ಹುಡುಗಿಯ ಕೆನ್ನೆ ಮೇಲಿನ ಕಣ್ಣ ಹನಿಯಲಿ ನಕ್ಷತ್ರವೊಂದು ತನ್ನ ಬಿಂಬವ ನೋಡಿ ನಕ್ಕಿತು ..!


** ಒಂದಿಷ್ಟು ನೆನಪುಗಳ ಹೂತು ಗೋರಿ ಮಾಡಿದೆ. ರಾತ್ರೆ ಬಿದ್ದ ಕನಸೊಂದು ಗೋರಿಯೊಳಗಿದ್ದ ನೆನಪುಗಳ ಎಬ್ಬಿಸಿ ಬಿಟ್ಟಿತ್ತು ..!


**ಉಸಿರೊಂದಕ್ಕೆ ತಾನು ದನಿಯಾಗಬಹುದು ಎಂಬುದನ್ನು ಮರೆತು, ದನಗಾಹಿ ಹುಡುಗನೊಬ್ಬನ ಕೊಳಲ ಗಾನವ ಕೇಳುತ್ತ ಮೈಮರೆತ ಬಿದಿರ ಕೋಲು ..!




**ವರ್ತಮಾನದಲಿ ಕುಳಿತ ಮನಸಿಗೆ ಭೂತ-ಭವಿಷ್ಯಗಳ ಚಿಂತೆ ..!


**ಸಂಜೆ ಮುದುಡುವ ಚಿಂತೆ ಇಲ್ಲದೆ, ಅರಳುವ ಹೂಗಳು..!


**ಮುಟ್ಟಿನ ದಿನ ಹತ್ತಿರ ಬಂದ ಶಾಲಾ ಹುಡುಗಿಗೆ. ಶನಿವಾರದ ಬಿಳಿ ಸ್ಕರ್ಟಿನ ಚಿಂತೆ ...!


** ಮನದ ಗೋರಿಯೊಳಗೆ ಹೂತು ಹಾಕಿದ್ದ ಕನಸುಗಳು ಮತ್ತೆ ಎದ್ದು ಬರದಂತೆ ಕಾದು ಕುಳಿತವು ನೆನಪುಗಳು ..

**ಕೆರೆಯ ನೀರಲ್ಲಿ ಕಲ್ಲೆಸೆದು ಅಲೆಯ ಉಂಗುರವನ್ನು ನೋಡುತ್ತಾ ಕುಳಿತ ಹುಡುಗನಿಗೆ, ತನ್ನ ಕೈಯಲ್ಲಿನ ಉಂಗುರ ಕಳೆದದ್ದೇ ಗೊತ್ತಿರಲಿಲ್ಲ .!


**ಭಾವನೆಗಳಿಗೆ ಆಣೆಕಟ್ಟು ಕಟ್ಟಿದೆ ಮನಸು ಮರುಭೂಮಿಯಾಯ್ತು,ಮಾತಿಗೆ ಮೌನದ ಫ್ರೇಮು ಹಾಕಿದೆ ಕಣ್ಣೀರಾಯ್ತು...!




**ಹಸಿ ಮಣ್ಣಿಗೂ,ಹಸಿ ಮನಸಿಗೂ ಎಲ್ಲಿಯ ಸಂಬಂಧ ? ಎರಡರಲ್ಲೂ ಹೆಜ್ಜೆ ಗುರುತುಗಳು ಮೂಡುವುದು ಬೇಗ ..!




**ಅದ್ಯಾರದೋ ಕನಸು ಉರಿದು ಉಲ್ಕೆಯಾಗಿ ಬೀಳುತ್ತಿರುವಾಗ ಹುಡುಗನೊಬ್ಬ ಕನಸೊಂದರ ನನಸಿಗಾಗಿ ಪ್ರಾರ್ಥಿಸುತ್ತಿದ್ದ ..!


**ಪಕ್ಕಾ ಪಾತರಗಿತ್ತಿಯಂತಿರುವ ಈ ಕನಸುಗಳು ..!


** ಅವಳ ನೆನಪಿನ ನಗು-ಅಳುವಿನ ಮೋಡಿಗೆ ಹುಡುಗನ ಮನದಲ್ಲೊಂದು ಕಾಮನ ಬಿಲ್ಲು ...!

** ಅದಾವುದೋ ಹಾಡಿನ ರಾಗದೊಂದಿಗೆ ಹುಡುಗಿ ನೆನಪಾಗುತ್ತಿದ್ದಾಳೆ ಅವನಿಗೆ, ಹಾಡಿನೆ ಸಾಲುಗಳೇ ಮರೆತುಹೋಗಿವೆ ಜೊತೆಗೆ ಹುಡುಗಿಯ ಮುಖವೂ ....!




ಅದ್ಯಾವ ಭಾವದಲ್ಲಿ ಬರೆದಿದ್ದೆ ನನಗೆ ಗೊತ್ತಿಲ್ಲ ಕೆಲವನ್ನು ಈಗ ಓದಿದರೆ ನನಗೆ ಅರ್ಥವಾಗ್ತಾ ಇಲ್ಲ .....!


ಹೆಚ್ಚಿನವು ಕ್ಲಾಸಿನಲ್ಲಿ ಕುಳಿತು ಬರೆದದ್ದು. ಅಷ್ಟೊಂದು ಶಕ್ತಿಯಿದೆಯಾ? ಈ ಬೋರ್ ಹೊಡಿಸೋ subjectsಗಳಿಗೆ? ಲೆಕ್ಚರರುಗಳಿಗೆ??

34 comments:

  1. kelavobru heltare preetiyalli bidrene kavi agtane antha.but class alli kootu paata kelidre saku,avar paatakke nave kavi,actor,devadaas ella agtivi :)

    ReplyDelete
  2. ಹುಚ್ಚು ಹುಡುಗಿಯೇ.. ನಿನ್ನ 'ಮುರಿದ ಸಾಲುಗಳಲ್ಲಿ' ಅಡಗಿರುವ 'ಬ್ರಹ್ಮಾಂಡ' ಮೊಗೆದಷ್ಟು ಇದೆಯಲ್ಲೇ!!!

    ReplyDelete
  3. ha ha ha well said harshad............ :) thank u....... :)

    ReplyDelete
  4. phrasesಗೆ ಮುರಿದ ಸಾಲುಗಳು ಎನ್ನುವುದು ಸೂಕ್ತ ಪದ ಬಳಕೆ. ಒ೦ದೊ೦ದು ಮುರಿದ-ಸಾಲುಗಳೂ ಒ೦ದು ದೊಡ್ಡ ಕಥೆ-ಕವನಕ್ಕೆ ಮೂಲ ಹ೦ದರವಿದ್ದ೦ತಿದೆ. ಈ ಬೋರ್ ಹೊಡಿಸೋ subjectsಗಳೇ.. ಲೆಕ್ಚರರುಗಳೇ.. ನಿಮ್ಮ ಈ ಭಾವೋತ್ಪಾದನೆಗೆ ಪ್ರೇರಕವಾಗಿದ್ದವೆ?

    ಶುಭಾಶಯಗಳು
    ಅನ೦ತ್

    ReplyDelete
  5. Soumya,,,fantastic..

    Last pages reminded me of my college days..

    ಅದಾವುದೋ ಹಾಡಿನ ರಾಗದೊಂದಿಗೆ ಹುಡುಗಿ ನೆನಪಾಗುತ್ತಿದ್ದಾಳೆ ಅವನಿಗೆ, ಹಾಡಿನೆ ಸಾಲುಗಳೇ ಮರೆತುಹೋಗಿವೆ ಜೊತೆಗೆ ಹುಡುಗಿಯ ಮುಖವೂ ....!

    ಈ ಸಾಲುಗಳು ತುಂಬಾ ಇಷ್ಟವಾದವು..ಕೆಲವೊಂದು ಹಾಡುಗಳೇ ಹಾಗೆ.. ಕೇಳುತ್ತಿದ್ದಂತೆ ನಿರ್ದಿಷ್ಟ ವ್ಯಕ್ತಿಯ ವ್ಯಕ್ತಿಯ ನೆನಪಾಗಿಬಿಡುತ್ತದೆ..

    ReplyDelete
  6. thank you Ananth Sir.... irabahudu bhaavanegalu ello hutti biduttave alwa?

    ReplyDelete
  7. Thanks somya ....
    ನಿಮ್ಮ ಲೇಖನ ಓದುತ್ತಾ..... ಓದುತ್ತಾ ... ನನ್ನ ಕಾಲೇಜಿನ ಬಾಲ್ಯ ನೆನಪಾಯಿತು ......

    SATISH N GOWDA

    http://nannavalaloka.blogspot.com/

    ReplyDelete
  8. thanks a lot ಚೇತನಕ್ಕ ...:)
    ಧನ್ಯವಾದಗಳು ಸತೀಶ್ ಸರ್....

    ReplyDelete
  9. ಮುರಿದ ಸಾಲುಗಳೆಲ್ಲಾ ಹೊಸ ಭಾವಗಳನ್ನೇ ಹುಟ್ಟುಹಾಕುವಂತಿವೆ. ಕೆಲವೊಂದು ಸಾಲುಗಳು ತುಂಬಾ ಇಷ್ಟವಾದವು.

    ReplyDelete
  10. ನಿಮ್ಮ ಕೊನೆಯ ಪೇಜ್ ನಲ್ಲಿ ಬರೆದ ಎಲ್ಲಾ ಮುರಿದ ಸಾಲುಗಳನ್ನು ಓದಿದೆ ತುಂಬಾ ಚನ್ನಾಗಿದೆ ಅದ್ರಲ್ಲಿ ತುಂಬಾ ಇಷ್ಟ ಆಗಿದ್ದು ಈ ಸಾಲು
    **ಸಂಜೆ ಮುದುಡುವ ಚಿಂತೆ ಇಲ್ಲದೆ, ಅರಳುವ ಹೂಗಳು**


    ಶುಭವಾಗಲಿ

    ReplyDelete
  11. murida ella saalugaloo very nice sowmya..

    ReplyDelete
  12. ಸೌಮ್ಯ ,
    ಮುರಿದ ಸಾಲುಗಳೇ ಇಷ್ಟು ಅದ್ಭುತವಾಗಿರ್ಬೇಕಾದ್ರೆ, ಮುರಿದೇ ಇದ್ರೆ ಏನಾಗ್ತಿತ್ತು ????? ಹ ಹ ಹ ಹ....ಎಲ್ಲಾ ಸಾಲುಗಳು ಸೊಗಸಾಗಿವೆ....

    ReplyDelete
  13. ಥ್ಯಾಂಕ್ಸ್ ಟು ಯುವರ್ ಟೀಚರ್ಸ್ ಅಂದು ಅವರು ಅಷ್ಟು ಬೋರ್ ಹೊದೆಸದಿದ್ದರೆ ನಮಗೆ ಇಷ್ಟು ಚಂದದ ಸಾಲುಗಳು ಸಿಗುತ್ತಿರಲಿಲ್ಲ.ಕೊನೆಯ ಪುಟದ ಸಾಲುಗಳು ಸುಂದರ ನೆನಪಿನ ಚಿತ್ತಾರಗಳು ಅಲ್ವ!!!.ಚೆನ್ನಾಗಿದೆ. ಬರೆದದ್ದಕ್ಕೆ ನಿಮಗೆ ಥ್ಯಾಂಕ್ಸ್.

    ReplyDelete
  14. Broken lines ಒಂಥರದ ಬೇಸರದ ಭಾವಗಳನ್ನು ಹೇಳುತ್ತದೆ ....
    ಮುರಿಯದೆ ಇರೋ ಸಾಲುಗಳನ್ನು ಇನ್ನೊಮ್ಮೆ ಹಾಕ್ತೇನೆ .... thanks a lot Ashok..........:)

    ReplyDelete
  15. ಕ್ಲಾಸಿನಲ್ಲಿ ಎಲ್ಲರೂ ಬೋರಾಗಿ ಗಡದ್ದಾಗಿ ನಿದ್ದೆ ಹೊಡೀತಾ ಹತ್ತೆಂಟು ಕನಸು ಕಾಣ್ತಿದ್ರೆ ಹುಚ್ಚು ಹುಡುಗಿ ಕೊನೆಯ ಪುಟಗಳನ್ನ ಸುಂದರ ಸಾಲುಗಳಿಂದ ಅಲಂಕಾರ ಮಾಡ್ತಾ ಕುಳಿತಿರ್ತಾಳೆ ಅಂತಾಯ್ತು... ಎಲ್ಲ ಸಾಲುಗಳೂ ಸೂಪರ್..

    ReplyDelete
  16. ಸೌಮ್ಯಾ ಅವರೇ, ಎಲ್ಲ ಸಾಲುಗಳು ಸೂಪರ್. ನೀವು ಕ್ಲಾಸ್ ನಲ್ಲಿ last bench student ಆಗಿದ್ರ? ಯಾಕ೦ದ್ರೆ ಮೊದಲನೇ ಬೆ೦ಚಲ್ಲಿ ಕೂತಿದ್ದರೆ ಅದ್ಯಾಪಕರು ಈ ಸಾಲುಗಳನ್ನು ಮೂಡಲು ಬಿಡ್ತಾ ಇರ್ಲಿಲ್ಲ ಅನ್ನಿಸತ್ತೆ ..ಇದನ್ನು ಓದಿ ನನ್ನ ಬುಕ್ ನ ಕೊನೆಯ ಪುಟದ ಕೆಲ ಸಾಲುಗಳನ್ನು ಹಾಕೋಣ ಅನ್ನಿಸ್ತು , ಅಮೆಲೇನೆ ನೆನಪಾಗಿದ್ದು ಕ್ಲಾಸಿಗೆ ಬುಕ್ ತಗೊ೦ಡು ಹೋಗಿದ್ದೆ ಬಲು ಅಪರೂಪ ಅ೦ತ :-(

    ReplyDelete
  17. 'ಕೊಳಲು' ಅದ್ಭುತ..


    ..ನನ್ನ ಮನಸಿನಮನೆ'ಗೆ ಬನ್ನಿ..

    ReplyDelete
  18. thanks you Dileep........ :)
    Ya you r right sri...... M a LLB student... ( Lord of the Last Bench)...:)

    ReplyDelete
  19. **ಉಸಿರೊಂದಕ್ಕೆ ತಾನು ದನಿಯಾಗಬಹುದು ಎಂಬುದನ್ನು ಮರೆತು, ದನಗಾಹಿ ಹುಡುಗನೊಬ್ಬನ ಕೊಳಲ ಗಾನವ ಕೇಳುತ್ತ ಮೈಮರೆತ ಬಿದಿರ ಕೋಲು ..!

    **ಭಾವನೆಗಳಿಗೆ ಆಣೆಕಟ್ಟು ಕಟ್ಟಿದೆ ಮನಸು ಮರುಭೂಮಿಯಾಯ್ತು,ಮಾತಿಗೆ ಮೌನದ ಫ್ರೇಮು ಹಾಕಿದೆ ಕಣ್ಣೀರಾಯ್ತು...!

    *ಹಸಿ ಮಣ್ಣಿಗೂ,ಹಸಿ ಮನಸಿಗೂ ಎಲ್ಲಿಯ ಸಂಬಂಧ ? ಎರಡರಲ್ಲೂ ಹೆಜ್ಜೆ ಗುರುತುಗಳು

    **ಅದ್ಯಾರದೋ ಕನಸು ಉರಿದು ಉಲ್ಕೆಯಾಗಿ ಬೀಳುತ್ತಿರುವಾಗ ಹುಡುಗನೊಬ್ಬ ಕನಸೊಂದರ ನನಸಿಗಾಗಿ ಪ್ರಾರ್ಥಿಸುತ್ತಿದ್ದ
    ee salugalu tumba channagi mudibandidae

    ReplyDelete
  20. This comment has been removed by the author.

    ReplyDelete
  21. Hay, I never imagined dat words can be so effective if arranged in a right manner with a bonding of dreams..... Tooo Goooood....

    U really made my day....

    ReplyDelete
  22. hi,sowmya,,,simply,,superb kanri,,,,,,even,,i too have the,,,same,,hobby,,,,,,,,but,,i never,,,got an idea to post in blog,,
    your,,broken lines,,inspired,me to express my broken ideas,,,,
    thanks a... lot,,,,,

    ReplyDelete
  23. ಕೆಲವು ಸಾಲುಗಳು ಲಂಕೇಶರ ’ನೀಲು’ವನ್ನು ನೆನಪಿಸಿದವು. ಮುರಿದಸಾಲುಗಳು ಮುಂದುವರಿಯಲಿ.

    ReplyDelete
  24. ತುಂಬಾ ಆಪ್ತತೆಯ ತೀಕ್ಷ್ಣ ಭಾವದ ಬರಹಗಳು.
    ನನಗೂ ಕೊನೆಯ ಪುಟದಲ್ಲಿ ಬರೆವ ಮತ್ತು ಚಿತ್ರ ಗೀಚುವ ಅಭ್ಯಾಸವಿತ್ತು. ಅವುಗಳನ್ನೂ ಕಾಯ್ದಿರಿಸದ ನನ್ನ ಬಗ್ಗೆ, ನಿಮ್ಮ ಲೇಖನ ನೋಡಿದ ಮೇಲೆ, ಈಗ ಬೇಜಾರೆನಿಸುತ್ತಿದೆ.
    ಚೆಂದದ ಸಾಲುಗಳು.

    ReplyDelete
  25. soumya,
    onderaDu post miss maaDikondidde...

    tumbaa ishTa aaytu....

    ee phoTo murudeshwar ddaa..... compound wall idda haagide ....

    ReplyDelete
  26. Thank u Satya and Sitaram sir :)
    Dinakar sir u r right that pic is of Murudeshwar thank u :)

    ReplyDelete
  27. ನಾನು ನೋಟ್ಸ ಮಾಡಿದ್ದು ಕಡಿಮೆ, ಮನಸ್ಸಿಗೆ ಬಂದದ್ದನ್ನು ಗಿಚಿ ಕೊಂಡಿದ್ದೆ ಜಾಸ್ತಿ. ಶಾಲಾ ದಿನಗಳಲ್ಲಿ ಇದಕ್ಕಾಗಿ ಛಡಿಯ ಏಟು ತಿಂದದ್ದೂ ಇದೆ. ಆದರೆ ಕಾಲೇಜು ದಿನಗಳಲ್ಲಿ ಗಿಚಿಕೊಂಡಿರೋದು ಜಾಸ್ತಿನೇ ಇದೆ. ನಿಮ್ಮ ಹಾಗೆ ನಾನು ಅವುಗಳನ್ನೆಲ್ಲ ಒಟ್ಟುಗೂಡಿಸಿ ಬ್ಲಾಗಿನಲ್ಲಿ ಸಮಯ ಸಿಕ್ಕಾಗ ಪ್ರಕಟಿಸುತ್ತೇನೆ.

    ಇಂತಾ ಒಂದು ಹೊಸ ಯೋಚನೆಗೆ ನಾಂದಿ ಹಾಡಿದ ತಮಗೆ ಧನ್ಯವಾದ.

    ReplyDelete