ಬಹಳ ದಿನಗಳಿಂದ ನನ್ನ ಮನದಲ್ಲಿ ಕುಳಿತಿದ್ದ ಅನುವಾದಿತ ಕವನವಿದು. Jalal al-Din Rumi ಯವರು ಬರೆದ ಇಂಗ್ಲಿಷ್ ಕವನ 'Forest and River' ಬಹಳ ದಿನದಿಂದ ನನ್ನ ಮನದಲ್ಲಿ ಅಚ್ಚೊತ್ತಿತ್ತು.ರುಮಿ ಓರ್ವ ಪರ್ಷಿಯನ್ ಕವಿ ಹಾಗೂ ಸೂಫಿ ಸಂತ. ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಅವರು ಬರೆದ ಕವನಗಳು ಹಲವು. ಅದೆಲ್ಲೋ ಅಚಾನಕ್ ಆಗಿ ಸಿಕ್ಕ ಈ ಕವನ ಅದೇನೋ ಮೋಡಿ ಮಾಡಿ ಬಿಟ್ಟಿತ್ತು ನನ್ನ ಮೇಲೆ..! ಕವನದ ಭಾವ ನನ್ನನ್ನು ಕಾಡುತ್ತಿತ್ತು. ಅಲ್ಲಮ ಪ್ರಭುಗಳ ವಚನಗಳ ನೆನಪಿಸುವ ಸಾಲುಗಳು, ಪ್ರಕೃತಿಯ ಸುಂದರ ವರ್ಣನೆಯೊಂದಿಗೆ ಮನುಸ್ಯನ ಮನೋ-ಸಹಜ ನಡವಳಿಕೆ ಥಳುಕು ಹಾಕಿ ಕೊಂಡಿರುವುದು ವಿಶೇಷ. ಮೂಲ ಕವಿಗೆ ನಮಿಸುತ್ತಾ, ಅನುವಾದಿಸಿದ್ದೇನೆ. ಓದಿ ಹೇಗಿದೆ ಹೇಳಿ :
ಅರಣ್ಯ ಭೋರ್ಗರೆವ ನದಿಗೆ ಹೇಳಿತು
'ನಾನು ನೀನಾಗಬೇಕಿತ್ತು' ಎಂದು.
"ಸದಾ ಸಾಗುತ ರಮಣೀಯ ದೃಶ್ಯ ಸವಿಯುತ
ಕೊನೆಗೆ ಅಖಂಡ ಜಲರಾಶಿಯನು ಸೇರುವ
ನಿನ್ನ ಪಯಣ ಅದೆಷ್ಟು ಚೆನ್ನ .!
ಲವಲವಿಕೆ, ಉತ್ಸಾಹ ಜೀವ ಚೈತನ್ಯ,
ನಿರಂತರ ಹರಿಯುತ
ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಕಂಗೊಳಿಸುವ ನೀನು ಧನ್ಯ ..!
ನನ್ನ ನೋಡು ನೀನು ಒಮ್ಮೆ
ಭೂಮಿಯ ಬಂಧನದಲ್ಲಿ ಸಿಲುಕಿದ
ಮೌನದಲ್ಲೇ ಮುದಿಯಾಗುವ
ಮೌನದಲ್ಲೇ ಒಣಗಿ ನಶಿಸುವ
ಸತ್ತ ನಂತರ ಬೊಗಸೆ ಬೂದಿಯ ಹೊರತು
ಇನ್ನೇನೂ ಉಳಿಯದ ಬರಡು ನಾನು ..!"
ನದಿಯು ಉತ್ತರಿಸಿತು ಅರಣ್ಯದ ಪ್ರಶ್ನೆಗೆ,
" ಅರ್ಧ ಮಲಗಿ, ಅರ್ಧ ಎಚ್ಚೆತ್ತು
ಏಕಾಂತವ ಅನುಭವಿಸುವ ಅರಣ್ಯವೇ
ನನಗೆ ನಿನ್ನಂತೆ ಇರಬೇಕು ಎಂಬ ಆಸೆ,
ಬೆಳದಿಂಗಳ ರಾತ್ರಿಯಲಿ ಕಂಗೊಳಿಸುವ,
ವಸಂತದ ಚೆಲುವನ್ನು ಪ್ರತಿಫಲಿಸುವ
ಪ್ರೇಮಿಗಳಿಗೆ ನೆರಳಿನ ತಾಣವನ್ನು ನೀಡುವ
ನೀನು ಧನ್ಯ ..!
ಪ್ರತಿ ವರುಷ ಹೊಸ ಚಿಗುರಿನ ಹೊಸತನ,
ನಿನ್ನ ಬದುಕಿನ ಪರಿ ಅನನ್ಯ.
ಜೀವನವೆಲ್ಲ ಬರೀ ಓಟದಲ್ಲೇ ಕಳೆವ ನಾನೆಲ್ಲಿ ?
ನಾನು ನನ್ನಿಂದಲೇ ದೂರ ಓಡುತ್ತೇನೆ..!
ಗೊಂದಲದ ಭಾವದೊಂದಿಗೆ ಸಾಗುತ್ತದೆ ನನ್ನ ಓಟ ..!
ಕೊನೆಗೆ ನಾನು ಪಡೆಯುವುದಾದರೂ ಏನನ್ನು ?
ಒಂದು ಕ್ಷಣವೂ ಬಿಡುವು -ಶಾಂತಿಯಿಲ್ಲದ
ಒಂದು ನಿಷ್ಪ್ರಯೋಜಕ ಓಟದ ಹೊರತು ?"
ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ
'ನದಿ ಮತ್ತು ಅರಣ್ಯ'....!
ಅರಣ್ಯ ಭೋರ್ಗರೆವ ನದಿಗೆ ಹೇಳಿತು
'ನಾನು ನೀನಾಗಬೇಕಿತ್ತು' ಎಂದು.
"ಸದಾ ಸಾಗುತ ರಮಣೀಯ ದೃಶ್ಯ ಸವಿಯುತ
ಕೊನೆಗೆ ಅಖಂಡ ಜಲರಾಶಿಯನು ಸೇರುವ
ನಿನ್ನ ಪಯಣ ಅದೆಷ್ಟು ಚೆನ್ನ .!
ಲವಲವಿಕೆ, ಉತ್ಸಾಹ ಜೀವ ಚೈತನ್ಯ,
ನಿರಂತರ ಹರಿಯುತ
ಹಸಿರು ಮಿಶ್ರಿತ ನೀಲಿ ಬಣ್ಣದಿಂದ ಕಂಗೊಳಿಸುವ ನೀನು ಧನ್ಯ ..!
ನನ್ನ ನೋಡು ನೀನು ಒಮ್ಮೆ
ಭೂಮಿಯ ಬಂಧನದಲ್ಲಿ ಸಿಲುಕಿದ
ಮೌನದಲ್ಲೇ ಮುದಿಯಾಗುವ
ಮೌನದಲ್ಲೇ ಒಣಗಿ ನಶಿಸುವ
ಸತ್ತ ನಂತರ ಬೊಗಸೆ ಬೂದಿಯ ಹೊರತು
ಇನ್ನೇನೂ ಉಳಿಯದ ಬರಡು ನಾನು ..!"
ನದಿಯು ಉತ್ತರಿಸಿತು ಅರಣ್ಯದ ಪ್ರಶ್ನೆಗೆ,
" ಅರ್ಧ ಮಲಗಿ, ಅರ್ಧ ಎಚ್ಚೆತ್ತು
ಏಕಾಂತವ ಅನುಭವಿಸುವ ಅರಣ್ಯವೇ
ನನಗೆ ನಿನ್ನಂತೆ ಇರಬೇಕು ಎಂಬ ಆಸೆ,
ಬೆಳದಿಂಗಳ ರಾತ್ರಿಯಲಿ ಕಂಗೊಳಿಸುವ,
ವಸಂತದ ಚೆಲುವನ್ನು ಪ್ರತಿಫಲಿಸುವ
ಪ್ರೇಮಿಗಳಿಗೆ ನೆರಳಿನ ತಾಣವನ್ನು ನೀಡುವ
ನೀನು ಧನ್ಯ ..!
ಪ್ರತಿ ವರುಷ ಹೊಸ ಚಿಗುರಿನ ಹೊಸತನ,
ನಿನ್ನ ಬದುಕಿನ ಪರಿ ಅನನ್ಯ.
ಜೀವನವೆಲ್ಲ ಬರೀ ಓಟದಲ್ಲೇ ಕಳೆವ ನಾನೆಲ್ಲಿ ?
ನಾನು ನನ್ನಿಂದಲೇ ದೂರ ಓಡುತ್ತೇನೆ..!
ಗೊಂದಲದ ಭಾವದೊಂದಿಗೆ ಸಾಗುತ್ತದೆ ನನ್ನ ಓಟ ..!
ಕೊನೆಗೆ ನಾನು ಪಡೆಯುವುದಾದರೂ ಏನನ್ನು ?
ಒಂದು ಕ್ಷಣವೂ ಬಿಡುವು -ಶಾಂತಿಯಿಲ್ಲದ
ಒಂದು ನಿಷ್ಪ್ರಯೋಜಕ ಓಟದ ಹೊರತು ?"
ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ
'ನದಿ ಮತ್ತು ಅರಣ್ಯ'....!
ಚೆನ್ನಾಗಿದೆ ಕವಿತೆ ಕೊನೆಯ ಪ್ಯಾರಾದಲಿ ಬರೋ ಪ್ರಶ್ನೆ ಯಾಕೋ ಮತ್ತ ಮತ್ತ ಕಾಡಿತು
ReplyDeleteತು೦ಬಾ ಮೆಚ್ಯೂರಡ್ ಥಾಟ್ ಸೌಮ್ಯ..ಮನ ಮುಟ್ಟಿತು.
ReplyDeleteಶುಭಾಶಯಗಳು
ಅನ೦ತ್
ಹರಿದು ಹೋಗಿ ಬೇಗ ಗುರಿ ಮುಟ್ಟುವ ನದಿಯೂ,
ReplyDeleteನಿಂತಲ್ಲೆ ದ್ರಡವಾಗಿ ನಿಂತಿರುವ ಅರಣ್ಯವೂ,
ನಮಗೆ ಮಾದರಿ ಅಲ್ಲವೇ?
ಮತ್ತೆ,
"ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?"
ಮೂರ್ನಾಕು ಆರ್ಥದಲ್ಲಿ ,ನನಗೆ ತಿಳಿದ ಬಗೆ, ಹೀಗೆ
ಈಗಿನ ನದಿ ,ಆರಣ್ಯಗಳಿಗೆ ಈ ಪರಿಸ್ತಿತಿ ಸ್ವಲ್ಪ ಬೇರೆ..
"ಮಾನವನಲ್ಲಿ ನಿಜವಾಗಿ ಮಾನವತೆ ಇದೆಯೊ
ಅದೊಂದು ತೋರಿಕೆ ಮಾತ್ರವೋ?"
ಎನಂತೀರಿ?
ಬನ್ನಿ ನಮ್ಮನೆಗೂ,
http://chinmaysbhat.blogspot.com/
ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ReplyDeleteನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ
'ನದಿ ಮತ್ತು ಅರಣ್ಯ'....! ವಾವ್ ಸುಂದರ ಕವಿತೆ. ಕಾಕತಾಳಿಯ ಎಂಬಂತೆ ನನ್ನ ಬ್ಲಾಗಿನಲ್ಲಿ ಕಾಡಿನ ಕಥೆ ಸರಣಿ ಪ್ರಾರಂಭ ಮಾಡಿದ ಸಮಯದಲ್ಲಿ ನನ್ನ ಕಣ್ಣಿಗೆ ಬಿದ್ದ ಈ ಸುಂದರ ಕವಿತೆ ಚೆನ್ನಾಗಿದೆ. ಈ ಕವಿತೆಯನ್ನು ನನ್ನ ಮುಂದಿನ ಸಂಚಿಕೆಯಲ್ಲಿ ಉಪಯೋಗಿಸಿಕೊಳ್ಳಲು ನಿಮ್ಮ ಅನುಮತಿ ನೀಡಲು ಕೋರುತ್ತೇನೆ.ಕಾಡಿನ ಕಥಾ ಶ್ರೇಣಿಗೆ ನನ್ನ ಪುಟಕ್ಕೆ ಬನ್ನಿ.
Super dear...loved it...
ReplyDeleteನಾನು ನನ್ನಿಂದಲೇ ದೂರ ಓಡುತ್ತೇನೆ..! adbhuta kalpane...very nice :)
ಸೌಮ್ಯ ಅವರೇ, ತುಂಬಾ ಚೆನ್ನಾಗಿದೆ ಕವನದ ತಾತ್ಪರ್ಯ... ಇಷ್ಟವಾಯಿತು..
ReplyDeleteಜೀವನವೇ ಹೀಗೆ, ಎಲ್ಲರಿಗೂ ತಾವಲ್ಲದೆ ಬೇರೆಯವರ ರೀತಿಯಲ್ಲಿ ಬದುಕುವ ಆಸೆ... ಕೊನೆಯಲ್ಲಿ ಸಿಗುವ ಉತ್ತರ "ನದಿ ಮತ್ತು ಅರಣ್ಯ". ಅರ್ಥಪೂರ್ಣ ಕವನ. ಮೂಲ ಕವನ ಹೇಗಿದೆಯೋ ಗೊತ್ತಿಲ್ಲ, ಆದರೆ ನೀವು ಅನುವಾದಿಸಿದ ಶೈಲಿ ಚೆನ್ನಾಗಿದೆ. ಅನುವಾದ ಅನ್ನುವುದಕ್ಕಿಂತ ಭಾವಾನುವಾದ ಎನ್ನುವುದೇ ಸರಿ.
ReplyDeleteಸುಂದರ ಕವನ ...ಚನ್ನಾಗಿ ಅನುವಾದ ಮಾಡಿದ್ದೀರಾ...ಕನ್ನಡಿ ಮುಂದೆ ನಿತ ಮಾನವನಿಗೆ ಬಿಂಬ ಹಿಡಿವ ಕನ್ನಡಿ ಹಾಗೋ ಆಸೆ....ಕನ್ನಡಿಗೆ ಚಂದದ ಬಿಂಬ ಹಾಗುವ ಆಸೆ
ReplyDelete--
Day dreamer
super agide madam... anuvaada super... tumba chenagide ...
ReplyDeleteದನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು
ನಿಜವಾಗಿಯೂ ಕವನ ಚೆನ್ನಾಗಿ ಮೂಡಿ ಬಂದಿದೆ ರೀ , ಬದುಕಿನಲ್ಲಿ ಕೆಲ ಮಾತುಗಳಿಗೆ ಅರ್ಥವೇ ಇರುವುದಿಲ್ಲ ಹಾಗೆ ಕೆಲ ಪ್ರಶ್ನೆಗಳಿಗೆ ಉತ್ತರ ಸಿಗೋದಿಲ್ಲ , ಹುಡುಕಾಟದಲ್ಲೇ ಕಳೆದು ಹೋಗುವ ಬದುಕು ಎಷ್ಟು ನಿರರ್ಥಕ......
ReplyDeleteಸುಂದರ ಸಾಲುಗಳಲ್ಲಿನ ವರ್ಣ ರಂಜಿತ ಅರ್ಥ ತುಂಬಾ ಸೊಗಸಾಗಿ ಮೂಡಿಬಂದಿದೆ ..... ನಿಮ್ಮ ಕಲ್ಪನೆ ನಿಜಕ್ಕೂ ಚನ್ನಾಗಿದೆ , keep writing sowmya .
ReplyDelete4m SATISH N GOWDA
http://nannavalaloka.blogspot.com/
ಧನ್ಯವಾದಗಳು ಅನಂತ್ ಸರ್ ಹಾಗು ಉಮೇಶ್ ಸರ್ ಅವರಿಗೆ ..:)
ReplyDeleteಚಿನ್ಮಯ್ ನೀವು ಹೇಳಿದ್ದು ಸರಿ ನಮಗೆ ಅದೆರಡೂ ಮಾದರಿ. ಇದನ್ನೇ ಹದಿಮೂರನೇ ಶತಮಾನದಲ್ಲಿ ಜಲಾಲ್ ರವರು ಹೇಳಿದ್ದು .. :)
thanks a lot shantu..:) ಪ್ರಗತಿ ಹೆಗಡೆಯವರಿಗೂ ಧನ್ಯವಾದಗಳು ..:)
ಧಾರಾಳವಾಗಿ ಬಳಸಿಕೊಳ್ಳಿ ಈ ಕವನವನ್ನು ಸರ್ .. :)
ReplyDelete@ಶರತ್ ಇನ್ನೊಬ್ಬರಂತೆ ಬದುಕಬಯಸುವುದು ಮಾನವನ ಸಹಜ ಗುಣ. ಭಾವಾನುವಾದವೇ ಎಂಬ ಶಬ್ದವೇ ಸರಿ ... :)
thanks a lot tarun, revan,and satish ..:)
thank u srikant .. :)
ReplyDeleteಸೌಮ್ಯಾ ರವರೆ ನಿಮ್ಮ ಕವನದ ಕೆಲವು ಸಾಲುಗಳನ್ನು ನನ್ನ ಕಾನನದ ನೆನಪಿನ ಲೇಖನಕ್ಕೆ ಬಳಸಿಕೊಂಡಿದ್ದೇನೆ. ಸಾಧ್ಯವಾದರೆ ನನ್ನ ತಾಣಕ್ಕೆ ಭೇಟಿಕೊಡಿ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.
ತುಂಬಾ ಅದ್ಭುತ ವೈಚಾರಿಕ ಚಿಂತನೆ ಹಚ್ಚುವ ಸಾಲುಗಳು. ಮುಳಕವಿಗೆ ವಂದಿಸುತ್ತಾ ಅದನ್ನು ಅತುತ್ತಮವಾಗಿ ಅನುವಾದಿಸಿ ನಮಗೆ ನೀಡಿದ ತಮಗೂ ವಂದನೆ ಸಲ್ಲಿಸುತ್ತೇನೆ.
ReplyDeleteಕೊನೆಯ ಪ್ರಶ್ನೆಗಳು ನಮ್ಮ ಮನದ ತಾಕಲಾಟ. ಉತ್ತರ ನಿರುತ್ತರ.
Excellent :)
ReplyDeleteThank u Balu, Sitaram and Shiv :)
ReplyDeletesakhattaagide 'bhavaanuvaada'..
ReplyDeleteJeevanada prati hantadallu ee dwandva ನಾನು ಯಾರು ?
ನದಿಯೋ? ಅರಣ್ಯವೋ? annodu irutte.. aa kshanakke hege beko haage naavu iddu bitre jeevana sulabha!!
Keep posting Soumya!