Tuesday, July 13, 2010

To sweet stupid putti ...


ಅದೀಗ ತಾನೇ ಮನೆಗೆ ಮಂಗಳೂರಿನಿದ ಬಂದಿದ್ದೆ ಸಂಜೆ 7ರ ಸಮಯವಾಗಿರಬಹುದು. trainನಲ್ಲಿ ಬಂದ ಕಾರಣ ಅಂಥದ್ದೇನು ಸುಸ್ತಾಗಿರಲಿಲ್ಲ, hallನಲ್ಲಿ ಕುಳಿತು T.V ನೋಡುತ್ತಿದ್ದೆ. ಅಡುಗೆಮನೆಯಲ್ಲಿ ಲಿಂಬೆ ಹಣ್ಣಿನ ಪಾನಕ ಮಾಡುತ್ತಿದ್ದ ಅಮ್ಮ ,ಅಲ್ಲಿಂದಲೇ ಹೇಳಿದರು "ವಿಶಾಲ್ ಬಂದಿದಿದ್ನೆ, ಮದುವೆ ಕರಿಯಲೇ ಅವನ ಮದುವೆನಡ "ಎಂದರು. ಸೀದಾ ಎದ್ದು ಅಡುಗೆಮನೆಯತ್ತ ನಡೆದಿದ್ದೆ ನಾನು "ಯಾವಾಗಲೇ ?" ಎಂದು ಕೇಳುತ್ತ. "ಈ ತಿಂಗಳು 26ಕ್ಕೆ,ನಿನಗೆ ಒಂದು invitation card ಕೊಟ್ಟಿದ್ದ ನಿನ್ ರೂಮಿನಲ್ಲಿದ್ದು ನೋಡು" ಅಂದಿದ್ದರು. ಪಾನಕದ ಗ್ಲಾಸನ್ನು ಹಿಡಿದು ಮೆಟ್ಟಿಲೇರಿ ನನ್ನ ರೂಮು ಸೇರುವುದಕ್ಕೂ ಕರೆಂಟು ಕೈಕೊಡುವುದಕ್ಕೂ ಸರಿ ಆಯಿತು. ಹಾಗೆ ಹೊರಕ್ಕೆ ಬಂದು ಬಾಲ್ಕನಿಯಲ್ಲಿನ ಆರಾಮ ಕುರ್ಚಿಯಲ್ಲಿ ಕುಳಿತ ನನ್ನ ಕಣ್ಣುಗಳು ಆಗಸದಲ್ಲಿ ನಕ್ಷತ್ರಗಳನ್ನು ಹುಡುಕ ತೊಡಗಿದರೆ, ಮನಸ್ಸು ಹಿಂದಕ್ಕೋಡಿತು. ಬೆಳಕಿನ ವೇಗಕ್ಕಿಂತ ಹೆಚ್ಚು ಈ ಹುಚ್ಚು ಮನಸಿನ ವೇಗ ..!


'ವಿಶಾಲ್ ಸರ್ ' ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ನಮಗೆ ಕಂಪ್ಯೂಟರ್ ವಿಷಯ ಕಲಿಸಲು ಬರುತ್ತಿದ್ದ tall, dark and handsome ಹುಡುಗ. ನಾನು ಕಲಿಯುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅವರು, ನನ್ನ ಅಮ್ಮನ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪಪ್ಪನಿಗೆ ವಿಚ್ಚೇದನ ಕೊಟ್ಟು ಹೋದ ಅಮ್ಮನ ಹಿಂದೆ ಹೋಗದ ದುರದೃಷ್ಟಕರ ಬಾಲ್ಯವನ್ನು ಕಂಡಿದ್ದ ಅವರು ಬೆಳೆದದ್ದೆಲ್ಲ ಚಿಕ್ಕಮ್ಮನ (ಅಮ್ಮನ ತಂಗಿ)ಅಕ್ಕರೆಯಲ್ಲೇ.



ನಾವು ಬಾಡಿಗೆಗಿದ್ದ ಮನೆಯ ಪಕ್ಕದ ರಸ್ತೆಯಲ್ಲೇ ಹಾದು ಶಾಲೆಗೆ ಹೋಗುವಾಗ ಪ್ರತಿದಿನ ಎಂಬಂತೆ ಮೂರು ಗುಲಾಬಿ ಹೂಗಳ ಗೊಂಚೊಂದನ್ನು ಅಮ್ಮನಿಗೆ ಕೊಟ್ಟು ಹೋಗುತ್ತಿದ್ದ 'ವಿಶಾಲ್'ನನ್ನು 5 ರ ಹರೆಯದ ನಾನು ಪಿಳಿಪಿಳಿ ನೋಡುತ್ತಿದ್ದೆ . ಬಣ್ಣ ಮಾಸಿದ ಆ ಸಮವಸ್ತ್ರ, ನೇರ ಕೂದಲು. ಮುಗ್ಧ ಕಣ್ಣುಗಳ ಮುಖ ನನ್ನ ಮನದಲ್ಲಿ ಅಚ್ಚೊತ್ತಿತ್ತು. 'ಬೂಟ್ ಪಾಲಿಶ್' ಪಾಠವನ್ನು ಅಮ್ಮ ಕಲಿಸುವಾಗ, ಉಳಿದ ಮಕ್ಕಳ ಕಂಗಳಲ್ಲಿ ನೀರಾಡಿದ್ದರೆ, ಈ ಹುಡುಗ ಬಿಕ್ಕಿ ಬಿಕ್ಕಿ ಅತ್ತಿದ್ದೂ , ಅಮ್ಮ ಸಮಾಧಾನಿಸಿದ್ದೂ ಎಲ್ಲವನ್ನೂ ಅಮ್ಮನ ಬಾಯಿಯಿಂದಲೇ ಕೇಳಿದ್ದ ನೆನಪಿತ್ತು.




ಅಂಥ ಹುಡುಗ ತನ್ನ ಶಿಕ್ಷಣವನ್ನು ಮುಗಿಸಿ ತಾತ್ಕಾಲಿಕ ಅವಧಿಗಾಗಿ ನಮಗೆ ಕಂಪ್ಯೂಟರ್ ಹೇಳಿಕೊಡಲು ಬರುತ್ತಿದ್ದ. 'ಅದೇ ಹಳೆಯ ಮುಖದ enlarged version' ಅಂದುಕೊಂಡಿದ್ದೆ ಮೊದಲ ಸಲ ಶಾಲೆಯಲ್ಲಿ ವಿಶಾಲನನ್ನು ಕಂಡಾಗ. ಆ ಕಣ್ಣುಗಳಲ್ಲಿ ಅದೇನೋ ಆಕರ್ಷಣೆಯಿತ್ತು (ಆ ವಯಸ್ಸಿಗೆ ನನಗೆ ಹಾಗನಿಸಿತ್ತೋ). ನಗುನಗುತ್ತಲೇ binary addition & subtraction ಕಲಿಸಲು ಆರಂಭಿಸಿದ ಆತ ನನಗೆ ಜಾಸ್ತಿ ಪ್ರಶ್ನೆಗಳನ್ನು ಕೇಳುತ್ತಿದ್ದ. ನೆಚ್ಚಿನ ಶಿಕ್ಷಕಿಯ ಮಗಳೆಂದೋ ಅಥವಾ ಉದ್ದಕಿದ್ದು ಹಿಂದಿನ ಬೆಂಚಿನಲ್ಲಿ ಕುಳಿತು ಕೀಟಲೆ ಕೊಡುತ್ತಿದ್ದೆ ಎಂದೋ..!



ಪ್ರಶ್ನೆ ಕೇಳಿದಾಗಲೆಲ್ಲ ಅವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸುತ್ತಿದ್ದೆ. ಕುಳಿತ ತಕ್ಷಣ ಮತ್ತೆ ಮಾತು, back bench comments,ಕೀಟಲೆ ಶುರು. ಒಮ್ಮೆ ನನ್ನ ತುಂಟತನ ಮೇರೆ ಮೀರಿದಾಗ "ಸೌಮ್ಯ ನಿಂದು ಜಾಸ್ತಿಯಾಯಿತು madam ಹತ್ರ ಹೇಳ್ತೇನೆ " ಎಂದಿದ್ದರು. ಹಾಗೆ ಅಮ್ಮನ ಹತ್ರ ಹೇಳಿದ್ದರು ಕೂಡ. ಆ ದಿನ ಮನೆಯಲ್ಲಿ ನನಗೆ ಅಮ್ಮನಿಂದ ಗೀತೋಪದೇಶ, ಹಿತೋಪದೇಶ, ಮಂತ್ರೋಪದೇಶ ಎಲ್ಲ ಆಗಿತ್ತು.



ನಂತರದ ದಿನಗಳಲ್ಲಿ ನನ್ನ ತುಂಟತನ ಕಡಿಮೆ ಆಗಿತ್ತು. ಅದೇನೋ ನವಿರಾದ ಭಾವ ಮನದ ಮೂಲೆಯೊಳಗೆ. ಮನಸಿನಲ್ಲೇ ಇಷ್ಟ ಪಡುತ್ತಿದ್ದೆ ಅವರನ್ನು. That was a stupid 'crush'..! ನನ್ನ ಆರಾಧನೆಯ ಭಾವ ಕಣ್ಣಲ್ಲೇ ತಿಳಿಯುತ್ತಿತ್ತೋ ಏನೋ ..! ಅಮ್ಮನಿಗೂ ಗೊತ್ತಿತ್ತು ನನ್ನ crush ಕಥೆ. ಮನದಲ್ಲೇ ನಗುತ್ತಿದ್ದರು ನಾನು 'ವಿಶಾಲ್ ಸರ್ ' ಬಗ್ಗೆ ಮಾತನಾಡುತ್ತಿದ್ದರೆ.



ಹಾಗೆ ನಾನು ಹತ್ತನೇ ತರಗತಿಗೆ ಬರುವ ವೇಳೆ 'ವಿಶಾಲ್ ಸರ್ ' ಮುಂಬೈಗೆ ಹಾರಿದ್ದರು. ಹೋಗುವ ಮೊದಲು ಅಮ್ಮನಿಗೆ ಹೇಳಲು ಬಂದಿದ್ದರು."ಚೆನ್ನಾಗಿ ಓದು ಪುಟ್ಟಿ, ಕವನ, ಕಥೆಗಳನ್ನೂ ಮುಂದುವರೆಸು" ಎಂದು ಹೇಳಿ ಹೊರಟಿದ್ದರು. ಖಾಲಿ ಖಾಲಿ ಆದ ಭಾವ ಕಂಪ್ಯೂಟರ್ ಕ್ಲಾಸ್, ಮನಸು ಎಲ್ಲ. ಅತ್ತು ಬಿಟ್ಟಿದ್ದೆ ಬಿಕಿ ಬಿಕ್ಕಿ . ಕಾಲದ ಹಾದಿಯಲ್ಲಿ ವಿಶಾಲ್ ಸರ್ ನೆನಪು ಹಿಂದೆ ಹೋಗಿತ್ತು. ಸವೆದಿತ್ತು ...ಹೈಸ್ಕೂಲಿನ ಗೇಟು ದಾಟಿದಂತೆಲ್ಲ ಶಾಲಾ ದಿನಗಳ ನೆನಪಿನ ಬಾಗಿಲು ಮುಚ್ಚಿಕೊಂಡಿತ್ತು.
ಕಾಲೇಜು ಜೀವನದ ಗಡಿಬಿಡಿಯಲ್ಲಿ 'ವಿಶಾಲ್ ಸರ್ ' ಮೆಲ್ಲನೆ ಹಿಂದೆ ಸರಿದಿದ್ದರು. ಈಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಧುತ್ತೆಂದು ಪ್ರತ್ಯಕ್ಷವಾಗಿತ್ತು ಅವರ ನೆನಪು. ಅದೂ ಅವರ ಮದುವೆಯ ಜೊತೆಗೆ, ಕರೆಯೋಲೆಯ ಜೊತೆಗೆ. ಶಾಲಾ ದಿನಗಳ flash back ge ಕರೆದುಕೊಂಡು ಹೋಗಿತ್ತು ಅವರ ನೆನಪು. ಎಲ್ಲವನ್ನು ಕತ್ತಲೆಯ ರಾತ್ರಿಯ ತಾರೆಗಳ ಬೆಳಕಲ್ಲಿ ನೆನೆಸಿಕೊಂಡಿದ್ದೆ. ಹದಿಹರೆಯದಲ್ಲಿ ಸಾಮಾನ್ಯ ಈ ಒಂಥರಾ stupid crushಗಳು ಅಲ್ವಾ?. ಉದ್ದ-ನೇರ ಕೂದಲು, ಉದ್ದನೆಯ ದೇಹ ,ಕನಸು ಕಂಗಳು,ನಗು, ಕೂದಲನ್ನು ಹಿಂದಕ್ಕೆ ತೀಡೋ ಸ್ಟೈಲು ಏನೋ ಒಂದು ಇಷ್ಟವಾಗಿ ಬಿಡುತ್ತದೆ . ಮನಸ್ಸು ಅದರತ್ತ ವಾಲುತ್ತದೆ. ನನಗೂ ಆದದ್ದು ಅದೇ ಆಗಿತ್ತು .

ಇಷ್ಟೆಲ್ಲಾ ನೆನಪಾಗೋ ಹೊತ್ತಿಗೆ ನನ್ನ ಮೊಗದಲ್ಲೊಂದು ತುಂಟನಗೆ ಸದ್ದಿಲ್ಲದೇ ಹಾದು ಹೋಗಿರಬೇಕು, ನಮ್ಮನೆಯ ತೋಟದಂಚಿನ ನದಿಯಲ್ಲಿ ಹಾದು ಹೋಗುವ ಹಾಯಿದೋಣಿಯಂತೆ ...!ಅಷ್ಟರಲ್ಲೇ ಕರೆಂಟು ಬಂದಿತ್ತು . ಥಟ್ಟನೆ ಎದ್ದು ನನ್ನ ರೂಮಿಗೆ ಹೋಗಿ ಕರೆಯೋಲೆಯನ್ನು ಕೈಗೆತ್ತಿಕೊಂಡೆ. ವಿಳಾಸ ಬರೆವಲ್ಲಿ ಬರೆದಿತ್ತು : To 'Sweet Stupid Putti' ..!

15 comments:

  1. ನಿರರ್ಗಳವಾದ ಬರವಣಿಗೆ ಶೈಲಿ, ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅನುಭವಿಸುವಂತೆ ಮಾಡಿತು. ಉತ್ತಮ ಬರವಣಿಗೆ 'putti' :o)

    ReplyDelete
  2. houdallava.. hadihareyadalli ellaru sharukh khan gale... tumba sundaravaagi barediddiri "putti"

    ReplyDelete
  3. ತುಂಬಾ ಅದ್ಬುತವಾಗಿ ಬರೆದಿದ್ದೀರಾ "ಪುಟ್ಟಿ"..ಓದುತ್ತಾ ಓದುತ್ತಾ ನಾನು ಯಾವುದೋ ಲೋಕಕ್ಕೆ ಹೋಗಿದ್ದೆ :)

    ReplyDelete
  4. nice..ಪುಟ್ಟೀ...ಆ ವಯಸ್ಸಿನಲ್ಲಿ ಇಂತಹ ಕ್ರಶ್ ಸಹಜ... ಅದರ ಅರಿವಿದ್ದು ಮನವನ್ನು ಹಿಡಿತದಲ್ಲಿಟ್ಟುಕೊಳ್ಳುವ ತಿಳುವಳಿಕೆ ಎಲ್ಲರಿಗೂ ಇರಬೇಕು.

    ReplyDelete
  5. ಎಲ್ಲರ ಜೀವನದಲ್ಲೂ ಇಂತ ಭಾವನೆಗಳ ನರ್ತನ ಸಹಜ....ಅಂದಿನದನ್ನು ಇಂದು ನೆನದರೆ ನಮ್ಮ ತಲೆಯ ಮೇಲೆ ನಾವೇ ಮೆಲಗ್ಗೆ ಏಟು ಕೊಟ್ಟುಕೊಂಡು ಮೆಲ್ಲಗೆ ನಗುತೇವೆ.ಚನ್ನಾಗಿದೆ

    ReplyDelete
  6. ಎಷ್ಟು ಸ್ವೀಟ್ ಆಗಿ ಬರದ್ದೆ ಪುಟ್ಟಿ:))..

    ReplyDelete
  7. nimma anubhava hancho dhairya mechchuvanthahadhdhu...

    ReplyDelete
  8. ತುಂಬಾ ನೈಸ್...! ಹಾಗೆಂದು ನಾನೇನು ನಿಮ್ಮ ನೈಸ್ ಮಾಡ್ತಾ ಇಲ್ಲಾ ಮತ್ತೆ..!

    ಬಾಲ್ಯವೇ ಹಾಗೆ, ಬಹಳ ಜನ ಅದನ್ನು ಅನುಭವಿಸಿರತ್‌ಋವೆ, ಆದರೆ ಅದನ್ನು ಅಭಿವ್ಯಕ್ತಪಡಿಸುವವರು ಕಡಿಮೆ ಅಲ್ವಾ??

    ReplyDelete
  9. ಸೌಮ್ಯ,
    ಕಥೆ ಚೆನ್ನಾಗಿದೆ.
    ನೆನಪು ಮಧುರ,
    ನೆನೆಯುತ ಸಾಗಿದರೆ ಜೀವನನು ಮಧುರ.
    ನಿಮ್ಮವ,
    ರಾಘು.

    ReplyDelete
  10. ಸೌಮ್ಯ,
    ಇದು ನನ್ನ ಮೊದಲ ಭೇಟಿ. ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ. ಮದುರವಾಗಿ ನಿಮ್ಮ ಭಾವನೆಗಳನ್ನು ವರ್ಣಿಸಿದ್ದೀರ. ಮುಂದುವರೆಯಲಿ :)

    ReplyDelete
  11. very good, ur articles r really gd.keep it up
    csr.murthy)@ gmail.com

    ReplyDelete
  12. "ಬೂಟ್ ಪಾಲಿಶ್" ಪಾಠ ಮೊದಲ ಬಾರಿ ಓದಿದ್ದಾಗ ಕಣ್ಣಲ್ಲಿ ನೀರಾಡಿದ್ದು.. "ಬಡವರ ಮನೆಗಳು..." ಎನ್ನುತ್ತ ಮನ ಮುಟ್ಟಿದ್ದ ಆ ಸಾಲುಗಳು ೧೦ ವರ್ಷ ಕಳೆದರೂ ಮನದಲ್ಲಿ ಹಸಿರಾಗಿವೆ..

    ಸುಂದರ ಬರಹ "ಪುಟ್ಟಿ".. ಚೊಲೋ ಬರದ್ದೆ :-)

    ReplyDelete