Sunday, July 18, 2010

ಪ್ರಚಂಡ ಪೋರನೀತ .....



ಅವನ ಹರೆಯದ ಮಕ್ಕಳು ಪೆಪ್ಪರಮೆಂಟು ಚೀಪುತ್ತ, ಗೋಲಿ ಆಡುತ್ತ , ಗಣಿತದ ಕೂಡಿಸುವ,ಕಳೆಯುವ ಲೆಕ್ಕಗಳನ್ನು ಬಿಡಿಸಲು ಪರದಾಡುತ್ತಿದ್ದರೆ,ಅವನು ಸರ್ ಅಲ್ಬರ್ಟ್ ಐನಸ್ಟೀನರ 'photo-electric effect ' ನ ಮೇಲೆ ನಿರರ್ಗಳವಾಗಿ ಭಾಷಣವನ್ನು ಮಾಡುತ್ತಿದ್ದ. ತನ್ನ ಒಂಬತ್ತನೇ ಹರೆಯದಲ್ಲೇ 10ನೆಯ ತರಗತಿ ಪಾಸು ಮಾಡಿದ ಪೋರ, 21ನೆಯ ವಯಸ್ಸಿನಲ್ಲಿ doctorate ಪಡೆದು,ಈಗ ಪ್ರತಿಷ್ಠಿತ IIT ಮುಂಬೈನಲ್ಲಿ ತನಗಿಂತ ದೊಡ್ಡವರಿಗೆ ಮಾರ್ಗದರ್ಶನ ಮಾಡುತ್ತಾನೆ .


ನೀವೆಣಿಸಿದ್ದು ಸರಿ, ಅವನೇ 'ತಥಾಗತ್ ಅವತಾರ್ ತುಳಸಿ' . ಜಗತ್ತು ಕಂಡ ಪ್ರಚಂಡ ಪೋರರಲ್ಲಿ ಇವನೂ ಒಬ್ಬ . ಅದರಲ್ಲೂ ಭಾರತೀಯ..!ಬಿಹಾರದ ಪಾಟ್ನಾದಲ್ಲಿ ಸಪ್ಟೆಂಬರ್ 7,1987 ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ 'ತಥಾಗಥ್' ಹುಟ್ಟಿನಿಂದಲೇ ಅಪ್ರತಿಮ ಬುದ್ಧಿಶಾಲಿ. ಅವನ ಬುದ್ಧಿಮತ್ತೆಗೆ ಬೆಂಬಲವಾಗಿ ನಿಂತವರು ತಂದೆ ಪ್ರೊ. ತುಳಸಿ ನಾರಾಯಣ್ ಪ್ರಸಾದ್. ನ್ಯಾಯಾಲಯದ ಅನುಮತಿ ಪಡೆದು ಅತೀ ಚಿಕ್ಕ ವಯಸ್ಸಿನಲ್ಲೇ (ಹತ್ತನೇ ವಯಸ್ಸಿಗೆ )ಪದವಿಯನ್ನು ಪಡೆದಾಗ ದೇಶವೇ ಬೆರಗಾಗಿ ನಿಂತಿತ್ತು. ಮುಂದೆ ತನ್ನ ಹನ್ನೆರಡನೆಯ ವಯಸ್ಸಿಗೆ ಸ್ನಾತಕೋತ್ತರ ಪದವಿಯನ್ನು ಪಡೆದ ಈತ, doctorate ಪಡೆದದ್ದು 'quantum computing' ವಿಷಯದಲ್ಲಿ .ಪ್ರತಿಷ್ಠಿತ times ಪತ್ರಿಕೆ ಹೊರಡಿಸಿದ ಜಗತ್ತಿನ 7 ವರ ಸಂಭೂತ (most gifted youngsters) ಯುವಕರಲ್ಲಿ ಈತನೂ ಒಬ್ಬ ..!


Waterloo University, ಕೆನಡದಿಂದ ಬಂದ ಆಮಂತ್ರಣವನ್ನು ನಯವಾಗಿಯೇ ತಿರಸ್ಕರಿಸಿಈತ, ಭಾರತದಲ್ಲೇ ಸೇವೆ ಸಲ್ಲಿಸುತ್ತಾನಂತೆ..!ಅದ್ವಿತೀಯವಾದ ಸಾಧನೆಯನ್ನು ಮಾಡಿ ಭಾರತಕ್ಕೆ ಇನ್ನೂ ಒಂದು 'ನೊಬೆಲ್ ' ಪಾರಿತೋಷಕವನ್ನು ಕೊಡಿಸುವ ಮಹದಾಸೆ ಈತನದು ..!


ಇದೇ ದೇಶದ ಅನ್ನವನ್ನು ಉಂಡು, ತಮ್ಮ ನೆಲವನ್ನೇ ದೂರುತ್ತಾ ವಿದೇಶಕ್ಕೆ ಹಾರುವ ಇಂದಿನ ಯುವಜನಾಂಗಕ್ಕೆ ತಥಾಗಥನಂಥವರು 'role model ' ಯಾಕಗಲಾರರು ?

8 comments:

  1. wah..Good good.
    nijavaagiyu eetha yuva janangakke role model.
    Raaghu

    ReplyDelete
  2. hey nice article... i liked the way you put it together.

    Keep up the good work...

    ReplyDelete
  3. tumba olleya vishayavannu blog nalli prakatisiddiri.. hanavonde gamanadallittukondu desh toreyuva yuva janangakke,bari horadeshadalle odidarene bele ennuva mandige really he is role modell.. hatts off to him...

    ReplyDelete
  4. my salute to him. and a hearty thanks to you for the good info.

    ReplyDelete
  5. ಲೇಖನ ಚೆನ್ನಾಗಿದೆ.. good luck to him...

    ReplyDelete
  6. ಬಿಹಾರದ ಹೆಸರು ಹಾಳು ಮಾಡುತಿರುವವರ(ಲಾಲು ತರಹದ ವ್ಯಕ್ತಿಗಳ) ನಡುವೆ ಒಳ್ಳೇ ವ್ಯಕ್ತಿ ಪರಿಚಯ ಮಾಡಿಸಿದ್ದೀರ:)
    -- Day dreamer

    ReplyDelete
  7. thank you oLLeya vyaktiya parichaya maadisiddakke....

    ReplyDelete
  8. ನಿಜ ಎಂಥ ವಿಪರ್ಯಾಸ ಅಲ್ಲವೇ ನಮ್ಮ ದೇಶದಲ್ಲೇ ಹುಟ್ಟಿ , ನಮ್ಮ ದೇಶದಲ್ಲೇ ಬೆಳದು , ನಮ್ಮ ದೇಶದಿಂದ ಹೊರದೇಶಕ್ಕೆ ಹಾರಿ. ಅಲ್ಲಿ ಕೆಲಸ ಮಾಡುವವರಿಗೆ . ಒಂದು ಗುಣ ಪಾಠ ಕಲಿಸಿದ್ದಿರಿ .ಹಾಗಂತ ನಮ್ಮ ದೇಶದವರು ಹೊರದೇಶಕ್ಕೆ ಹೋಗಲೆಬರದು ಅಂತ ಅಲ್ಲಾ ನನ್ನ ಉದ್ದೇಶ ...ಅವರ ಬುದ್ದಿಶಕ್ತಿ ನಮ್ಮ ದೇಶಕ್ಕೆ ಮೊದಲ ಆದ್ಯತೆ ಯಾಗಬೇಕು ಅನ್ನುವ ಉದ್ದೇಶ ದಿನಾ ಹೇಳಿದ್ದು ..... ಉತ್ತಮ ಬರವಣಿಗೆ ಧನ್ಯವಾದಗಳು ಸೋಮ್ಯ ...
    ಹಾಗೇ ಬಿಡುವು ಮಾಡ್ಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .........
    SATISH N GOWDA
    www.nannavalaloka.blogspot.com

    ReplyDelete