Sunday, June 20, 2010

ಮತ್ತೆ ನಾನು ನಾನಾದೆ.. !


ಅದೆನಾಗಿತ್ತೋ.. ಕಳೆದ ಐದಾರು ದಿನಗಳಿಂದ ನಾನು ನಾನಾಗಿರಲಿಲ್ಲ. ಮನಸು ತಳಮಳದಲ್ಲಿತ್ತು.. ಹಗ್ಗ ಹರಿದ ನಾವೆಯಂತಾಗಿತ್ತು. ಪರೀಕ್ಷೆಯನ್ನು ಮುಗಿಸಿ ಬಂದ ನಾನು ಖುಷಿಯಿಂದಿರುವ ಬದಲು ಖಿನ್ನತೆಗೆ ಒಳಗಾಗಿದ್ದೆ . ಹೆಚ್ಚಾಗಿ 'ವಟವಟ' ಎನ್ನುತ್ತಲೇ ಇರುವ ನಾನು ಮೌನಿಯಾಗಿದ್ದೆ. ಮಳೆಯ 'ಚಟಪಟ' ನನ್ನ 'ವಟವಟ'ವನ್ನು ನಿಲ್ಲಿಸಿಬಿಟ್ಟಿತ್ತು. ನನ್ನ ಮನದೊಳಗಿದ್ದ ಒಂದು ಪುಟ್ಟ ಐದರ ಮಗುವೊಂದು ಕಳೆದು ಹೋಗಿತ್ತು. ಸ್ನೇಹಿತರ phone call ಗಳನ್ನೂ ಅಲಕ್ಷಿಸಿದ್ದೆ. ಕೊನೆಗೆ ಸ್ನೇಹಿತರಿಬ್ಬರು ಬೈದೂ ಆಗಿತ್ತು. ಏನಾಗಿದೆ ನಿನಗೆ ಎಂದರೆ ನನ್ನಲ್ಲಿ ಉತ್ತರವಿರಲಿಲ್ಲ. "nothing man, i'll be alright" ಎಂಬ ಹಾರಿಕೆಯ ಉತ್ತರ ಬೇರೆ ನನ್ನಿಂದ. ಅರ್ಧದಲ್ಲಿ ಬಿದ್ದ ಒಂದು stupid painting ಪ್ರಯತ್ನ, ಮುಗಿಸಲಾರದೆ ಹಾಗೆ ಅರ್ಧದಲ್ಲಿ ಬಿಟ್ಟ ೨ ಲೇಖನಗಳು, ಯಾಕೋ ನನ್ನೊಳಗಿದ್ದ ಒಂದು ಪುಟ್ಟ ಹುಡುಗಿ ಕಳೆದೆ ಹೋಗಿದ್ದಳು ಎಂದುಕೊಂಡಿದ್ದೆ, ಕಂಗಾಲೂ ಆಗಿದ್ದೆ.



ಏನಾಗಿತ್ತು ನನಗೆ ?? ಸಂಬಂಧಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆನೆ? ಒಟ್ಟಿನಲ್ಲಿ ಇಲ್ಲಸಲ್ಲದ್ದಕ್ಕೆ ಸುಖಾಸುಮ್ಮನೆ ತಲೆ ಕೆಡಿಸಿಕೊಂಡಿದ್ದೆ . . ನಗು ಮರೆತು ಹೋದಂತಿತ್ತು. ಭಾವನೆಗಳು ಎಲ್ಲೋ ನಿಯಂತ್ರಣ ತಪ್ಪಿದಂತಿತ್ತು . ಮನಃ ಪೂರ್ತಿಯಾಗಿ ಅಳಲೂ ಆಗುತ್ತಿರಲಿಲ್ಲ. ನನ್ನನ್ನು ನಾನು ಹೊರಗೆಳೆಯಬೇಕಿತ್ತು. ನನ್ನ ಆರಾಮ ಖುರ್ಚಿಯಲ್ಲಿ ಕುಳಿತು ನೀಲಾಕಾಶವನ್ನು ದಿಟ್ಟಿಸುತ್ತಿದ್ದೆ. ..


ಮತ್ತೆ ಕರೆಯತೊಡಗಿತು ನನ್ನ phone, ನೋಡಿದರೆ ನನ್ನ ಆತ್ಮೀಯ ಗೆಳೆಯ. ವಿಧಿಯಿಲ್ಲದೇ recieve ಮಾಡಿದೆ. "ಏನಾಗಿದ್ಯೇ ನಿಂಗೆ ? ಬ್ಲಾಗ್ ನಲ್ಲಿ ಏನೇನೋ ಬರೆದಿದೀಯ ಅಷ್ಟೊಂದು ಸೀರಿಯಸ್ಸಾಗಿ "ಎಂದ." ಏನಿಲ್ವೋ ಸುಮ್ಮನೆ " ಎಂದುತ್ತರಿಸಿದೆ . "ನಿನ್ನ 'ಏನಿಲ್ಲ' ಅಂದ್ರೆ ತುಂಬಾ ವಿಷ್ಯ ಇದೆ ಅಂತಾನೆ ಅರ್ಥ ಹೇಳೇ ಮಹಾರಾಯ್ತೀ " ಎಂದ.


ನಾನು ಪಕ್ಕಾ ಬಹಿರ್ಮುಖಿ. ಖುಷಿಯಾದರೆ ಕುಣಿದು ಕೇಕೆ ಹಾಕಿಬಿಡುತ್ತೇನೆ. ಬೇಸರವಾದರೆ ಕಣ್ಣೀರು ಹರಿಯದೆ ಸಮಾಧಾನವಿಲ್ಲ. ಅದು -ಇದು ಮಾತನಾಡುತ್ತಲೇ ವಿಷಯವನ್ನೆಲ್ಲ ಹೇಳಿದ್ದೆ .ಮನಸಿಗೆ ಆದ ಬೇಸರದ ಭಾವಗಳೆಲ್ಲ ಮಾತಿನ ಮೂಲಕ ಹೊರಬಿದ್ದಿದ್ದವು. ನಾನು ತಡೆಯಿಲ್ಲದೆ ಮಾತನಾಡುತ್ತಿದ್ದೆ ಆತ 'ನಂತ್ರ', 'ಹೂಂ', 'ಸರಿ' ಎಂದಷ್ಟೇ ಹೇಳುತ್ತಿದ್ದ. ವಿಷಯ ಮುಗಿವ ಹೊತ್ತಿಗೆ ನನ್ನ ಕಣ್ಣ ಅಂಚೂ ಒದ್ದೆಯಾಗಿ ಆಗಿತ್ತು. ಆದರೂ ಮಾತಾಡುತ್ತಿದೆ. ಮನಸು ಬೇಸರದ ಮೋಡವನ್ನು ಬಿಟ್ಟು ಆಚೆ ಬಂದಿತ್ತು. FIFA WC ಸುದ್ದಿ. ಮತ್ತದೇ ಮೆಸ್ಸಿ, ಕ್ರಿಸ್ಟಿಯಾನೋ ರೋನಲ್ದೋ, ಕಾಕಾ,ರೂನಿ ಎಲ್ಲರಿಗೂ ನನ್ನ ಮಾಮೂಲಿ ಸ್ಟೈಲಿನಲ್ಲಿ ಲೈನ್ ಹೊಡೆಯ ತೊಡಗಿದೆ. ಅವನ ತಲೆ ತಿನ್ನತೊಡಗಿದೆ. ಗೆಳೆಯ ನಗುತ್ತಿದ್ದ ಜೋರಾಗಿ "ಅದ್ಯಾಕೋ ಹಲ್ಕಿರೀತಿಯಾ ನೀನೊಬ್ನೇ brush ಮಾಡ್ತೀಯ ಅನ್ನೋ ಥರ" ಎಂದಿದ್ದೆ. ನಗುವಿನ ಅಲೆ ಇನ್ನೂ ಜೋರಾಯ್ತು . ಜೊತೆಗೆ ಇನ್ನೊಂದು ಪರಿಚಯದ ಧ್ವನಿ.


"ನೀನು ಹೀಗೆ ತಲೆ ತಿಂತಾ ಇದ್ರೇನೆ ಚಂದ ನಮಗೆ .ನಿನ್ನ ಮೌನ ಸಹಿಸಲು ಅಸಾಧ್ಯ ಗೆಳತೀ " ಎಂದು ನಾಟಕೀಯವಾಗಿ ಎಂದಿದ್ದಳು ನನ್ನೊಲವಿನ ಗೆಳತಿ 'ಸಂಧ್ಯಾ'. "ಹೇಯ್ ಕತ್ತೆ ನೀನೆಲ್ಲೇ ಇದೀಯಾ.. ?" ಎಂದೆ. icecream ತಿನ್ತಿದೇನೆ ಬೇಕಾ ?"ಎಂದಳು. "ಪಿಶಾಚೀ ನನ್ನ ಬಿಟ್ಟು ತಿಂದರೆ ನೀ ಉದ್ಧಾರ ಆಗೋದಿಲ್ಲ ಎನ್ನುತ್ತಲೇ " ಅಕ್ಷರಶಃ ಕೂಗಿಬಿಟ್ಟಿದ್ದೆ ನಾನು ..! "ಅಂತೂ ನಮ್ ಟ್ರೈನ್ track ಗೆ ಬಂದು speed pick up ಮಾಡ್ತು "ಅಂದಳು ಅವಳು. ನಕ್ಕು ಬಿಟ್ಟಿದ್ದೆ . " ನಿನ್ನನ್ನೇ ಕಾಯ್ತಾ ಇದ್ದೇವೆ stupid ಬೇಗ ಹೊರಡು.. ಹೋಗಿ ಮುಖ ತೊಳ್ಕೋ. ಬರೋವಾಗ ನಿನ್ನ ಗುಳ್ಳೆ (bubbler) ಬಾಟಲಿ ತಗೊಂಡು ಬಾರೆ " ಅಂದಿದ್ದಳು. ಮನಸು ಸುಟ್ಟ ಬೂದಿಯಿಂದೆದ್ದು ಬರುವ 'ಫೀನಿಕ್ಸ್' ಪಕ್ಷಿಯಂತೆ ಹಾರುತ್ತಿತ್ತು ಮುಗಿಲೆತ್ತರಕ್ಕೆ..!


ಸಂಬಂಧಗಳ ಜಂಜಾಟವಿಲ್ಲದೆ ಬೆಳೆಯುವ ಸ್ನೇಹಕ್ಕೆ ಅದೆಷ್ಟು ಶಕ್ತಿ ?ಅದಕ್ಕೆ ನಾನು ಸಂಬಂಧಗಳಿಗಿಂತ ಸ್ನೇಹಿತರನ್ನೇ ಹೆಚ್ಚು ನಂಬುವುದು. ಬರೋಬ್ಬರಿ ಐದಡಿ ಎಂಟು ಇಂಚು ಎತ್ತರದ ನನ್ನಲ್ಲಿ ಪುಟ್ಟ ಹುಡುಗಿಯನ್ನೇ ಹುಡುಕುವ ನನ್ನ ಆ ಎರಡು ಸ್ನೇಹಿತರಿಗೆ ಮನದಲ್ಲಿ ಥ್ಯಾಂಕ್ಸ್ ಹೇಳುತ್ತಲೇ ನನ್ನ 'ಗುಳ್ಳೆ ಬಾಟಲಿಯನ್ನು' ಹುಡುಕಲು ಕುಣಿಯುತ್ತಲೇ ಸಾಗಿದ್ದೆ ...! ಮತ್ತೆ ನಾನು ನಾನಾದೆ.. !

12 comments:

  1. hi soumya,

    nanage nambalu agtha ella...nijavagiyu..engg.exams mugisi immediate agi e ondu article bareyalu nimage thalme/inspiration yellinda banthu!!!!
    really great!!!bhavane galannu thumba chennagi baraha da mulaka mudisidhira!!!!
    Kshamisi...kannadavannu english nalli baredu Kondadakke!!!

    damodar

    ReplyDelete
  2. tumba chennaagide.... kushi aaytu neenu vaapas bandidakke... pls don stop talking not writing...innestu kannannu vadde maadtiya... saaku... inta senti blogs tumba touch aagatte...!!!neenu yaavaaglu lively aagidrenne chanda... :)

    ReplyDelete
  3. Kumata Mangalore express right poyi.............

    ReplyDelete
  4. ಸೌಮ್ಯ,
    ತುಂಬಾ ಹೊಟ್ಟೆಕಿಚ್ಚಾಗುತ್ತದೆ ನಿಮ್ಮ ಬರಹ ನೋಡಿ..... ತುಂಬಾ ಚೆನ್ನಾಗಿ ಬರೆಯುತ್ತೀರಾ.... ಕಳೆದ ಸಾರಿಯ ಕವನ ನೋಡಿ ಸ್ವಲ್ಪ ಗಾಬರಿಯಾದದ್ದು ನಿಜ...... ಅಂತೂ ರೈಲು ಹಳಿ ಹತ್ತಿದೆಯಲ್ಲ.. ಅದೇ ಸಮಾದಾನ............

    ReplyDelete
  5. ಕೆಲವೊಂದು ಸರಿ ಹೀಗೇನೆ,, ಆದರೆ,, ಮನಸಿನಲ್ಲಿ ಇರುವುದನ್ನ ಹೇಳಿಬಿಡಬೇಕು,,,, ಹಾಗೆ ಮುಚ್ಚಿಟ್ಟು ಕೊಂಡರೆ,,, ನಾವು ನಾವಗಿರುವುದಿಲ್ಲ... its all ಪಾರ್ಟ್ of life .....ತುಂಬಾ ಇದೆ,,,ತಿಳಿದುಕೊಳ್ಳಲು,,,, ನೀವು ನೀವಾಗಿ,, ನಿದಾನಕ್ಕೆ ತಿಳಿದುಕೊಳ್ಳಿ.....
    ಬರಹ ಚೆನ್ನಾಗಿ ಇದೆ... :-)

    ಗುರು

    ReplyDelete
  6. ನಿನ್ನ ಯಥಾಪ್ರಕಾರದ ವಟ ವಟ ಇಲ್ಲೇ ಅಂದ್ರೆ 'ನೀನು' ಅಂತ ಊಹಿಸೋದೇ ಕಷ್ಟ...ಬದಲಾಗುವ ಸೌಮ್ಯ ಊಹಿಸಲಸಾಧ್ಯ..!!ಎಲ್ಲೇ ಇರು..ಹೇಗೆ ಇರು... ವಟಗುಟ್ಟುತ್ತಿರು!:P

    ReplyDelete
  7. Hmm uttama snehitariddare enu bandaru edurisabahudu... summane manadalli bachchittukollade ella helikollabeku .. avara samadhana kooda bekagolla.. summane kelidaroo saku...

    baraha chennagide
    pravi

    ReplyDelete
  8. ನಮ್ಮ ನೋವುಗಳೆ ಹಾಗೆ ಮೇಡಂ, ಅದನ್ನ ಎಲ್ಲರಲ್ಲಿಯೂ ಹಂಚಿಕೊಳ್ಳುವುದಿಲ್ಲ ಗೆಳೆಯ/ಗೆಳತಿಯರನ್ನು ಹೊರತುಪಡಿಸಿ. ಆದರೆ ನಮಗೆ ಹತ್ತಿರದ ಗೆಳೆಯ/ಗೆಳತಿಯು ನಮ್ಮ ನೋವುಗಳಿಗೆ ಸ್ಪಂದಿಸದಿದ್ದಾಗ ನಿಮ್ಮ ಸಾವಿನ ಕವನದ ತರವಾಗುವುದು ಸಹಜ.

    ಇನ್ನೂ ಹೇಳಬೆಕಂದ್ರೆ ನಿಮ್ಮ ಸಾವಿನ ಕವನಗಿಂತ ನಿಮ್ಮ ಇಂದಿನ ಲೇಖನ ತುಂಬಾನೆ ಚನ್ನಾಗಿದೆ.

    ಹೊನ್ನ ಹನಿ
    http://honnahani.blogspot.com
    ನನ್ನ ಬ್ಲಾಗಿಗೂ ಬೇಟಿ ಕೊಡಿ

    ReplyDelete
  9. nice imagination sowmya good keep it up

    ReplyDelete
  10. ಕೆಲೊಮ್ಮೆ ಒಂಟಿಯಾಗಿ ಇದ್ದಾರೆ ಮನಸ್ಸು ಬೇಗ ಸರಿಯಾಗುತ್ತೆ..ಅಲ್ವ..?
    ಚೆನ್ನಾಗಿದೆ ನಿಮ್ಮ ಲೇಖನ.
    ನಿಮ್ಮವ,
    ರಾಘು.

    ReplyDelete