ಮರಳ ಗಡಿಯಾರದಲ್ಲಿನ ಕಣಗಳಂತೆ ಸೋರಿಹೋಗುವ ಕಾಲ
ಇತಿಹಾಸವಾಗಿ ಭೂತದೊಳಗೆ ಸೇರಿಹೋಗುವ ಕ್ಷಣಗಳು
ಅದೆಲ್ಲೋ ಎಚ್ಚರಿಸುತ್ತಿದೆ ಸಾವಿನ ಗಂಟೆಯ ಸದ್ದು.
ಸರಿಯುತ್ತಿದ್ದೇವೆ ನಾವು ಸತ್ಯದ ಅಂಚಿಗೆ ..
ಸಾವೊಂದು ನಗ್ನ ಸತ್ಯ ಉಳಿದಿದ್ದೆಲ್ಲವೂ ಸುಳ್ಳು !
ಕೆಲವರಿಗೆ ಕೈಲಾಸ, ವೈಕುಂಠ, ದೇವರ ಸಹವಾಸ..
ಕೆಲವರಿಗೆ ಜಗತ್ತಿನ ಯಾವುದರ ಪರಿವೆಯಿಲ್ಲದ ಗೋರಿಯೊಳಗಿನ ಸುಖ ನಿದ್ರೆ ...
ಯೋಧರಿಗೆ ಸೋಲೇ ಸಾವು ....
ಹುಟ್ಟಿನೊಂದಿಗೆ ಸಾಗುವ ನೆರಳು ಈ ಸಾವು
ಸಾವೆಂದರೆ ಯಮಪಾಶ,ನರಳಾಟ,ರಕ್ತದೋಕುಳಿ
ಕೊನೆಗೆ ಸಾವೆಂದರೆ ಮುಕ್ತಿ ..
ಆತ್ಮಕ್ಕೆ ಮರುಹುಟ್ಟುಕೊಡುವ ಶಕ್ತಿ ..!
ಕಂಸನನ್ನು ಕಾಡಿದ್ದು ಇದೇ ಸಾವು ..
ಸಾವಿತ್ರಿ ಗೆದ್ದದ್ದು ಇದೇ ಸಾವು ..
ಹಿಟ್ಲರ್, ಸದ್ದಾಂ, ಇದಿ ಅಮಿನ್ ,ಸ್ಟಾಲಿನ್ ರ ಕ್ರೌರ್ಯದ ಕೊನೆ ಸಾವು..
ರಾತ್ರಿ ರಾಹುಲನ ಬಿಟ್ಟು ಹೊರಟ ಸಿದ್ಧಾರ್ಥನ ಬುದ್ಧನನ್ನಾಗಿಸಿದ್ದು ಒಂದು ಸಾವು ..!
ನಮ್ಮೆಲ್ಲರ ಎದುರಿಗಿರುವ ಸತ್ಯ ಸಾವು ..!
ಸತ್ಯಂ ಶಿವಂ ಸುಂದರಂ ..!
writing ishta aaytu kane...:)
ReplyDeleteಜೀವನದ ಸಣ್ಣ-ಪುಟ್ಟ ವಿಷಯಗಳನ್ನು ತನ್ಮಯತೆಯಿಂದ ಮುಗ್ದ ಹುಡುಗಿಯಂತೆ ಆನಂದಿಸುತ್ತಾ, ಕನಸುಗಳ ಮಣಿಗಳನ್ನು ಭಾವನೆಗಳಿಗೆ ಪೋಣಿಸಿ ಪ್ರಭಾವಿತಳೆನಿಸಿ ಆತ್ಮೀಯಳಾಗಿದ್ದ ಸೌಮ್ಯ ಇದ್ದಕ್ಕಿದ್ದಂತೆ 'ಸಾವಿನ' ಬಗ್ಗೆ ಚಿಂತಿಸಿ ಬರೆದಿರುವುದಕ್ಕೆ ಕಾರಣ?
ReplyDeleteಸೌಮ್ಯ,
ReplyDeleteಉತ್ತಮ ಕವನ..... ಉತ್ತಮ ಅಭಿವ್ಯಕ್ತಿ.....ಕಾಲನ ವಿಕರಾಳ ಮುಖದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ......
ಸೌಮ್ಯ ;ಕವನ ತುಂಬಾ ಅರ್ಥ ಪೂರ್ಣವಾಗಿದೆ.ನನ್ನಬ್ಲಾಗಿನಲ್ಲಿ ತುಷಾರದಲ್ಲಿ ಹತ್ತು ವರುಷಗಳ ಹಿಂದೆ ಪ್ರಕಟವಾದ 'ಕಾಲ'ಎಂಬ ಕವಿತೆಯನ್ನು ಪೋಸ್ಟ್ ಮಾಡಿದ್ದೇನೆ .ಬ್ಲಾಗಿಗೆ ಭೇಟಿ ಕೊಡಿ .ನಮಸ್ಕಾರ.
ReplyDeleteನಮಸ್ಕಾರ ಸೌಮ್ಯ ರವರೆ
ReplyDeleteನಿಮ್ಮ ಕವನ ಚನ್ನಾಗಿದೆ.
ಹೊನ್ನ ಹನಿ
http://honnahani.blogspot.com
ಸಮಯ ಸಿಕ್ಕಾಗ ನನ್ನ ಬ್ಲಾಗಿಗೂ ಬೇಟಿ ಕೊಡಿ
Kavana tumba chennaagi moodi bandide... but at the same time bhayanu huttisotte...!!!! yaakendare...naanaagale omme saavanna tumba hattiradinda noodidakkaagi... ee kavana aa nenapanna taajagolisutte..!!!! Keep writing Somi..!!! Nice article...
ReplyDeleteSOUMYAA.....
ReplyDeleteಯಾರಿಗೂ..
ಇಲ್ಲಿ
ಯಾರೂ..
ಅನಿವಾರ್ಯವಲ್ಲ...
ಇದ್ದಾಗ..
ಪ್ರೀತಿ..ಪ್ರೇಮ..
ಇಲ್ಲದುದಗಳ
ನಡುವಿನ
ಬದುಕೂ..ಇಲ್ಲಿದೆ..
ಬದುಕಬೇಕಾಗುತ್ತದೆ...
ಬೇಡವೆಂದರೂ..
ಬಿಡದ...
ಬಾ..
ಎಂದರೆ..
ಬಾರದ...
ಸಾವು..
ನಮ್ಮ ಎಣಿಕೆಯಲ್ಲಿಲ್ಲ...
ನಮ್ಮಿಷ್ಟದ..
ಬದುಕು.. ನಮಗಿರುವಾಗ..
ನಮ್ಮಿಷ್ಟದವರು..
ನಮ್ಮನ್ನು ಇಷ್ಟಪಡುವಾಗ...
ಬದುಕಿನಲ್ಲಿ..
ಆಸಕ್ತಿ ಇರುವಾಗಲೇ...
ಹೊರಟು ಹೋಗುವದು ಒಳ್ಳೆಯದಲ್ಲವೆ..?
ಚಂದದ ಕವನಕ್ಕೆ...
ಅದರ ಭಾವಗಳಿಗೆ ಅಭಿನಂದನೆಗಳು.....
Nice Writing..........
ReplyDelete