

ನಿನ್ನೆ ನನ್ನ ರೂಮ್ clean ಮಾಡ್ತಾ ಇದ್ದೆ . ಕಣ್ಣು albumಗಳ ಸಾಲಿನತ್ತ ಹಾಯಿತು . ಯಾಕೋ ನನ್ನ ಬಾಲ್ಯದ ಫೋಟೋಗಳನ್ನು ನೋಡಬೇಕು ಅನಿಸಿಬಿಡ್ತು. album ತೆರೆದು ನೋಡತೊಡಗಿದೆ . ಅದೆಷ್ಟು ಮುದ್ದಾಗಿದ್ದೆ ನಾನು ..! ನೋಡಿದ ತಕ್ಷಣವೇ ಎಲ್ಲರೂ ನನ್ನ nick-name 'ಪುಟ್ಟಿ' ಎಂದು ಕರೆಯುವಷ್ಟು ..! ಹಾಗೇ ಪುಟಗಳನ್ನೂ ತಿರುವುತ್ತಿದ್ದ ನಾನು, ಒಂದು ಕಡೆ ನಿಂತುಬಿಟ್ಟಿದ್ದೆ . ಆ ಫೋಟೋದಲ್ಲಿ ನನ್ನ ಕೈಯಲ್ಲಿದ್ದ ಎರಡು ಗೊಂಬೆಗಳು ನನ್ನನ್ನು ಸೆಳೆದಿದ್ದವು ಮತ್ತೊಮ್ಮೆ. ಸುಮಾರಾಗಿ ನನ್ನನ್ನೇ ಹೋಲುತ್ತಿದ್ದ 'ಜುಟ್ಟು ಗೊಂಬೆಗಳು' ಅವು ನಾನು ಅವುಗಳನ್ನು ಕರೆಯುತ್ತಿದ್ದದ್ದೂ ಅದೇ ಹೆಸರಿನಿಂದಲೇ. ಪುಟ್ಟದಾದ ಅಂಗಿ, ಕಪ್ಪನೆಯ ಒಂದು ಜುಟ್ಟು ಇದ್ದು ,ಲಕ್ಷಣವಾಗಿದ್ದ ಪುಟ್ಟ ಹೆಣ್ಣು ಗೊಂಬೆಗಳು ಅವು . .! ಫೋಟೋದಲ್ಲಿ ಪುಟ್ಟಿಯ ಪುಟ್ಟ ಪುಟ್ಟ ಕೈಗಳಲ್ಲಿ ಕಂಗೊಳಿಸುತ್ತಿದ್ದವು .
ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಡುವುದನ್ನು ಹಾಗೂ ಅಡುಗೆ ಆಟವನ್ನು ಇಷ್ಟ ಪಡುತ್ತಾರೆ ಇದನ್ನು ನೀವೂ ನೋಡಿರಬಹುದು. ಒಂದು ಮಗು ಅನುಕರಣೆಯ ಮೂಲಕವೇ ಎಲ್ಲವನ್ನು ಕಲಿಯುವುದಲ್ಲವೇ ? ಹೆಣ್ಣು ಮಗುವಿಗೆ ತನ್ನ ಹಾಗೇ ಇರುವ ಅಮ್ಮ role model ಆಗಿ ಬಿಡುತ್ತಾರೆ. ಅವರನ್ನೇ ಅನುಕರಿಸುತ್ತದೆ ಅದು . ಅಮ್ಮ ಅಡುಗೆಮನೆಯಲ್ಲಿ ಅಡುಗೆ ಮಾಡುವುದನ್ನು, ಪುಟ್ಟ ಪಾಪುವನ್ನು ಮಲಗಿಸುವುದನ್ನು ನೋಡುತ್ತಾ ಹೆಣ್ಣು ಮಗು ಅದರದೇ ಜಗತ್ತಿನಲ್ಲಿ,ಅದರದೇ ಆದ ರೀತಿಯಲ್ಲಿ ಅಮ್ಮನನ್ನು ಅನುಕರಿಸುತ್ತದೆ . ಅಮ್ಮ ತನ್ನ ಉದ್ದನೆಯ ಜಡೆಗೆ ಮೊಳ ಉದ್ದದ ಹೂ ಮಾಲೆ ಮುಡಿದರೆ, 'ಪುಟ್ಟಿ' ತನ್ನ ಬಾಬ್ ಕೂದಲಿಗೂ ಅಷ್ಟೇ ಉದ್ದದ ಹೂ ಬೇಕೆಂದು ಹಠ ಮಾಡುತ್ತಾಳೆ. ಗೊಂಬೆಗಳನ್ನು ಮಗುವಿನ ತರಹ ಜೋಪಾನ ಮಾಡುತ್ತದೆ . ಆ ಹೆಣ್ಣು ಮಗು ಆ ಗೊಂಬೆಗೆ ಪುಟ್ಟ ಅಮ್ಮನೇ ಆಗಿಬಿಡುತ್ತಾಳೆ.
ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ ? ನಾನು ನನ್ನ ಬಾಲ್ಯದಲ್ಲಿ (ಸುಮಾರು ೩-೪ ತರಗತಿಯವರೆಗೂ ) ಗೊಂಬೆಗಳ ಜೊತೆ ಆಡಿದ್ದೆ, ಅವುಗಳಿಗೆ ಊಟ ಮಾಡಿಸಿದ್ದೆ, ಸ್ನಾನ ಮಾಡಿಸಿದ್ದೆ ಮಲಗಿಸಿದ್ದೆ (ನಂತರ ಕ್ರಿಕೆಟ್ ಆಡುತ್ತಿದ್ದೆ ಆ ಮಾತು ಬೇರೆ ). ಹೂ ಮುಡಿಯಲು ಅಮ್ಮನೊಂದಿಗೆ ಜಗಳವಾಡಿದ್ದೆ . ಗೊಂಬೆಗೂ ಹೂ ಮುಡಿಸಿದ್ದೆ, ಅವುಗಳೊಂದಿಗೆ ಮಾತನಾಡಿದ್ದೆ. ನನ್ನದೇ ಲೋಕದಲ್ಲಿ ಆ 'ನಿರ್ಜೀವ ಗೊಂಬೆಗಳ ಜೊತೆ ಜೀವಂತ ಗೊಂಬೆ ನಾನಾಗಿದ್ದೆ ..!' ಒಟ್ಟಿನಲ್ಲಿ ಅವು ನನ್ನ ನೆಚ್ಚಿನ ಗೊಂಬೆಗಳಾಗಿದ್ದವು. ಮೌನವಾಗಿ ನನ್ನ ಜೊತೆ ಸಂಭಾಷಿಸುತ್ತಿದ್ದವು.
ನಂತರದ ದಿನಗಳಲ್ಲಿ ಹೊನ್ನಿನ ಕೂದಲಿನ ವಿದೇಶಿ ಗೊಂಬೆಯೊಂದು ನನ್ನ ಕೈಸೇರಿತ್ತು . ನಾವು ಬಾಡಿಗೆ ಮನೆಯಿಂದ ಸ್ವಂತ ಮನೆಗೆ shift ಆಗುವಾಗ. ನನ್ನ ಜುಟ್ಟು ಗೊಂಬೆಗಳು ಕಳೆದು ಹೋಗಿದ್ದವು, ಮರೆತು ಹೋಗಿದ್ದವು .
ಮತ್ತೆ ನಿನ್ನೆ ಯಾಕೋ ನೆನಪಾಗಿ ಕಾಡಿದ್ದವು . ಆಲ್ಬಮ್ ತೆಗೆದಿಟ್ಟು ಸೀದಾ ಅಮ್ಮನ ಬಳಿ ಓಡಿದ್ದೆ "ಆಯಿ, ನನ್ನತ್ರ ಎರಡು ಜುಟ್ಟು ಗೊಂಬೆ ಇದ್ದಿತ್ತು ನೆನಪಿದ್ದಾ ?" ಎಂದೆ . "ರಾಶಿ ಚಂದಕಿದ್ದಿತ್ತು ಅಲ್ದಾ ?" ಎಂಬುದು ಅಮ್ಮನ reply.ನಾನು ಮುಂದುವರೆದು "ಈಗ ಸಿಕ್ತಿಲ್ಯಾ ಅದು? ನಂಗೆ ಬೇಕಾಗಿತ್ತು " ಎಂದು ಕೇಳಿದ್ದೆ. ಅಮ್ಮ ನಕ್ಕು "ಸಿಕ್ಕಗು ಜಾತ್ರೇಲಿ, ಕುಮಟಾದಲ್ಲಿ ಕೇಳಿ ನೋಡು " ಎಂದರು . ಸಂಜೆ ತಮ್ಮನ ಜೊತೆ ಕುಮಟ ಸುತ್ತುತ್ತ ಎಲ್ಲ fancy ಅಂಗಡಿಗಳನ್ನು ಕೇಳಿದ್ದೆ . ಎಲ್ಲ ಕಡೆ ಹೊನ್ನ ಕೂದಲ ಗೊಂಬೆಗಳದ್ದೇ ಕಾರುಬಾರು . ಅದು ಬಿಟ್ಟರೆ sexy lookನ ಬಾರ್ಬಿ ಗೊಂಬೆಗಳು, teddy bear ಗಳು. ಯಾವುದೂ ಇಷ್ಟ ಆಗಲೇ ಇಲ್ಲ. ಅದೆಲ್ಲ ಚಿಕ್ಕ ಮಕ್ಕಳು ಆಡೋದು ಅನಿಸಿ ಬಿಡ್ತು . ನನ್ನ ಕಂಗಳು ನನ್ನ 'ಜುಟ್ಟು ಗೊಂಬೆಯನ್ನು ' ಹುಡುಕುತ್ತಿದ್ದವು. ಎಲ್ಲೋ ಸಿಗಲೇ ಇಲ್ಲ . ಸಿಗಬಹುದೆಂಬ ಆಸೆಯಿಂದ ತಮ್ಮನ ಬೈಕ್ ಏರಿದವಳಿಗೆ ನಿರಾಸೆ ಕಾಡಿತ್ತು .
ವಾಪಸ್ ಮನೆಗೆ ಬಂದವಳಿಗೆ ಬಾಗಿಲು ದಾಟುತ್ತಲೇ ಅಮ್ಮನ ಪ್ರಶ್ನೆ "ಸಿಕ್ತನೆ ಜುಟ್ಟು ಗೊಂಬೆ ?" ನನ್ನ ಮುಖದಲ್ಲಿನ ನಿರಾಸೆ, ಧುಮುಕಲು ರೆಡಿ ಆಗಿರುವ ಜೋಗವನ್ನು ಕಂಡೇ ಅಮ್ಮನಿಗೆ ತಿಳಿದಿರಬೇಕು "don't worry ಪುಟ್ಟಿ,paper evaluation ಗೆ ಹೋದಾಗ ಅಲ್ಲಿ ಸಿಕ್ರೆ ತರ್ತೆ ಅಥವಾ ಮತ್ತೆಲ್ಲಿನ್ದಾರೂ ತರಿಸುವಾ "ಎಂದಾಗ ಒಂದು ಬಗೆಯ ನಿರಾಳ ಭಾವ . ಗಂಟಿಕ್ಕಿದ್ದ ಹುಬ್ಬು ಸಡಿಲವಾಗಿತ್ತು.
ಇನ್ನೂ ನೆನಪಾಗಿ ಕಾಡುತ್ತಿದ್ದೆ ಆ 'ಜುಟ್ಟುಗೊಂಬೆ'. ಯಾವಾಗ ನನ್ನ ಕೈಗೆ ಸಿಗುತ್ತದೋ ಕಾದು ಕುಳಿತಿದ್ದೇನೆ . ನಿಮಗೆಲ್ಲಿಯಾದರೂ ಸಿಕ್ಕರೆ ಪ್ಲೀಸ್ ತಿಳಿಸ್ತೀರಾ?
tumba chendada baraha !!!
ReplyDeleteಈ ಜುಟ್ಟುಗೊಂಬೆ ನಮ್ಮನೆಲ್ಲಿ ಒಂದು ಕಾಲಕ್ಕೆ ಇದ್ದಂಗೆ ನೆನ್ಪು. ಈಗ ಎಲ್ ಹೋತೆನ ಗೊತ್ತಿಲ್ಲೆ :). ಸಿಕ್ರೆ ಕೊಡ್ತಿ .
ReplyDeletethanks a lot..... [:)]
ReplyDeleteನನ್ನ ಹಳೆಯ, ನನ್ನಕ್ಕನ ಜೊತೆ ಆಡಿದ ಆಟವನ್ನು ಕೆದಕಿದ ಬರಹ ಇದು........... ತುಂಬಾ ಜಾತ್ರೆಗಳಲ್ಲಿ ಈಗ 'ದೇಸೀ ಜುಟ್ಟಿನ'' ಗೊಂಬೆಗಳು ಕಾಣೆಯಾಗುತಿದೆ...... ಭಟ್ಕಳ, ಕುಮಟ, ಹೊನ್ನಾವರದ ಜಾತ್ರೆಯಲ್ಲಿ ಸಿಗಬಹುದು.. ಯಾಕಂದ್ರೆ ಅಲ್ಲಿ ನಮ್ಮತನ ಇನ್ನೂಉಳಿದಿದೆ......
ReplyDeletebalyada nenapu gale haage mogedashtu mooduttave... sundara vaada baraha soumya..
ReplyDeletethank u... dinakar and vanishree
ReplyDeleteಚಂದದ ಬರಹ :)
ReplyDeleteso nice...:):)
ReplyDeleteReally nice !!
ReplyDeleteodthaa idda haange baalya nenpaathu
ReplyDeleteಮುದ್ದು ಹುಡುಗಿಯ ಚೆಂದದ ಮುಖ ನೋಡಿ 'ಜುಟ್ಟಿನ ಗೊಂಬೆ' ಯ ಸೆಳೆತ ಎಷ್ಟಿರಬಹುದೆಂಬ ಅಂದಾಜು ಆಯಿತು. ಒಮ್ಮೆಗೇ ನಿನ್ನ ಬಾಲ್ಯದೆಡೆಗೆ ( ಮತ್ತು ನನ್ನ ಬಾಲ್ಯದೆಡೆಗೂ) ನನ್ನನ್ನು ನಿನ್ನ ಬರಹ ಎಳೆದೊಯ್ಯಿತು! ತೀರಾ ಹತ್ತಿರಕ್ಕೆ ಬಂದು ತಟ್ಟುವ ವಿವರಣೆ! "ಅಳಡ ಪುಟ್ಟಿ..ನಾನು ಹುಡುಕ್ತಿ ನಿನ್ನ ಗೊಂಬೆನ" ಅಂತ ಅನ್ನುವಷ್ಟು ನಾನು ಭಾವುಕಳಾದೆ!!
ReplyDeleteಬರವಣಿಗೆಯ ಶೈಲಿ ಛೊಲೊ ಇದ್ದು. ಆದರೆ ಲೇಖನದ ಆಳ ಇನ್ನಷ್ಟು ಇದ್ದಿದ್ರೆ ಛೊಲೊ ಇತ್ತು. ಆ ನಿಟ್ಟಿನಲ್ಲಿ ಪ್ರಯತ್ತ್ನ ಸಾಗಲಿ.
ReplyDeleteಗ್ರಾಮ್ಯದ ಬಳಕೆ ಮನಸ್ಸಿಗೆ ಹತ್ತಿರವಾಗಿ ಒಂದು ವಿಷಯವನ್ನು ನಿವೇದಿಸುತ್ತದೆ. ಹೀಗೆ ಬರಯುತ್ತಿರು.
ಗೆಳೆಯ
ಶಿಶಿರ ಹೆಗಡೆ ಮೂರೂರು.
ಸೌಮ್ಯ, ಚನ್ನಾಗಿದೆ ಬಾಲ್ಯದ ನೆನಪುಗಳೊಂದಿಗೆ ನಿಮ್ಮ ಈ ಲೇಖನ...ಇವನ್ನು ತೆರೆದಿಡುವ ವಿಧಾನವೂ ಮುಖ್ಯ...ಇದರಲ್ಲಿ ನೀವು ಯಶಸ್ವಿ ಆಗಿದ್ದೀರ.
ReplyDeleteಆಪ್ತವಾದ ಲೇಖನ..ನಂಗೆ ಸಣ್ಣ ಇರುವಾಗ ಗೊಂಬೆಗಳು ಅಷ್ಟೊಂದು ಸಿಕ್ಕಿರಲಿಲ್ಲ!! ಈಗ ನನ್ನ ಮಗಳ ಪಕ್ಕ ಸಾಲು ಸಾಲು ಗೊಂಬೆಗಳು..ಅದ್ರಲ್ಲಿ ಒಂದು Barbie., ಅದಿಕ್ಕೆ ಜುಟ್ಟು ಇದೆ..next ಬರುವಾಗ ತರ್ಲಾ..??
ReplyDeletethank u so much vanitha....:)
ReplyDeleteThis comment has been removed by the author.
ReplyDeleteHey soumy bhavanegalannu,nenapugalannu tumba channagi vyktpadisidiya.... adu yall sari ri juttu gombe sigta?
ReplyDelete