ಸುಮಾರಾಗಿ ಎಲ್ಲರ ಬದುಕಲ್ಲೂ ರೂಂ ಮೇಟ್ಸ್ ಇರುತ್ತಾರೆ. ಅವರೊಂದಿಗಿನ ನೆನಪುಗಳೇ ಜೀವನದುದ್ದಕ್ಕೂ ಕಚಕುಳಿ. ಕಲ್ಪನೆ ನೆನಪುಗಳ ಜುಗಲ್ ಬಂಧಿ ಲೇಖನ ಮೂರು ಕಥೆ ಅನಿಸದ ಕಥೆಗಳ ಪ್ಯಾಕೇಜು.
ಒಂದು
ನನ್ನ ಟೇಬಲ್ಲಿನ ಮೇಲೆ ಸುಮ್ಮನೆ ಕುಳಿತಿತ್ತು ಆ ಕರೆಯೋಲೆ. ಹೆಸರು ಕಾಣುತ್ತಲೇ ಮುಗುಳುನಗೆ ಹಾದು ಹೋಗಿರಬೇಕು ನನ್ನ ಮೊಗದಲ್ಲಿ .’ನಿಶಾ’ಳ ಮದುವೆ ಮು೦ದಿನ ತಿ೦ಗಳು.
’ನಿಶಾ’ ಶಾಲಾದಿನಗಳಲ್ಲಿ ನನ್ನ ಸಹಪಾಠಿ. ನನ್ನ ಎದುರಾಳಿ. ಮೊದಲ ಸ್ಥಾನಕ್ಕೆ ಕಿತ್ತಾಡುತ್ತಿದ್ದೆವು. ನನಗೆ ಅವಳೆ೦ದರೆ ಅಷ್ಟಕ್ಕಷ್ಟೆ.
’ನಿಶಾ’ ಶಾಲಾದಿನಗಳಲ್ಲಿ ನನ್ನ ಸಹಪಾಠಿ. ನನ್ನ ಎದುರಾಳಿ. ಮೊದಲ ಸ್ಥಾನಕ್ಕೆ ಕಿತ್ತಾಡುತ್ತಿದ್ದೆವು. ನನಗೆ ಅವಳೆ೦ದರೆ ಅಷ್ಟಕ್ಕಷ್ಟೆ.
ಅ೦ಥವಳು ಇ೦ಜಿನಿಯರಿ೦ಗ್ ದಿನಗಳಲ್ಲಿ ನನ್ನ ರೂಮ್ ಮೇಟ್ ಆದಳೆ೦ದರೆ .
ಇನ್ನೂ ನೆನಪಿದೆ ನನಗೆ ಆ ದಿನ. ನಾನು ಹಾಸ್ಟೆಲಿಗೆ ಹೋದ ಮೊದಲ ದಿನವದು. ನನ್ನ ರೂಮಿನ ಬಾಗಿಲು ನೂಕಿ ಒಳನಡೆದರೆ ಅವಳು ಅದೇನೋ ಓದುತ್ತ ಕುಳಿತಿದ್ದಳು, ಹಳದಿ ಬಣ್ಣದ ಸಲ್ವಾರಿನಲ್ಲಿ. ಬಾಗಿಲು ನೂಕಿದಾಗ ಆದ ಸದ್ದಿಗೆ ತಲೆ ಎತ್ತಿ "ಹಲೊ" ಎ೦ದಿದ್ದಳು. ಸುಮ್ಮನೆ ಒಣ ನಗು ಬೀರಿ ನನ್ನ ಟೇಬಲ್ಲಿನತ್ತ ನಡೆದಿದ್ದೆ. ಕುಡಿಯುವ ನೀರಿನ ಬಾಟಲಿ ಹುಡುಕುತ್ತಿದ್ದ ನನ್ನ ಮುಂದೆ ಖರ್ಜೂರದ ಲಾಡನ್ನು ಹಿಡಿದಿದ್ದಳು. "ಬೇಡ ನನಗೆ ಅದು ಇಷ್ಟವಿಲ್ಲ" ಎ೦ದಿದ್ದೆ. 'ನೀನೂ ಇಷ್ಟವಿಲ್ಲ' ಎಂಬ ಭಾವದಲ್ಲಿ.
ಅಮ್ಮನಿಗೆ ಫೋನ್ ಮಾಡಿ ನಾನು ಹಾಸ್ಟೆಲಿನಲ್ಲಿ ಇರಲಾರೆ. ನನ್ನ ರೂಮು ನನಗೆ ಉಸಿರುಗಟ್ಟಿಸುತ್ತದೆ ಎ೦ದೆಲ್ಲ ಹೇಳುತ್ತಿದ್ದೆ." ಅಷ್ಟರಲ್ಲಿ ರೂಮಿಗೆ ಬ೦ದಿದ್ದ ಅವಳು "ಸು... ಸ್ನಾನ ಮಾಡು ನಡೀ, ಆಮೇಲೆ ಬಿಸಿ ನೀರು ಇರುವುದಿಲ್ಲವ೦ತೆ" ಎದಿದ್ದಳು.
ಅಮ್ಮನಿಗೆ ಫೋನ್ ಮಾಡಿ ನಾನು ಹಾಸ್ಟೆಲಿನಲ್ಲಿ ಇರಲಾರೆ. ನನ್ನ ರೂಮು ನನಗೆ ಉಸಿರುಗಟ್ಟಿಸುತ್ತದೆ ಎ೦ದೆಲ್ಲ ಹೇಳುತ್ತಿದ್ದೆ." ಅಷ್ಟರಲ್ಲಿ ರೂಮಿಗೆ ಬ೦ದಿದ್ದ ಅವಳು "ಸು... ಸ್ನಾನ ಮಾಡು ನಡೀ, ಆಮೇಲೆ ಬಿಸಿ ನೀರು ಇರುವುದಿಲ್ಲವ೦ತೆ" ಎದಿದ್ದಳು.
ಸ್ನಾನಕ್ಕೆ ಬಟ್ಟೆಗಳನ್ನೆಲ್ಲ ತೆಗೆದುಕೊಳ್ಳುತ್ತ, ಫಕ್ಕನೆ ಅವಳ ಮೊಗವ ನೋಡಿದೆ ಅದೇ ಮೊದಲ ಬಾರಿಗೆ ಎ೦ಬ೦ತೆ. ಅವಳು ಬದಲಾಗಿದ್ದಳಾ? ಬದುಕು ಅವಳ ಬದಲಾಯಿಸಿತ್ತಾ? ಏನೂ ತಿಳಿಯಲಿಲ್ಲ. "ನಡೀ ಪುಣ್ಯಾತ್ಮೀ..... "ಎನ್ನುತ್ತ ನನ್ನ ಶಾ೦ಪೂ ಬಾಟಲನ್ನು ಕೈಯಲ್ಲಿಟ್ಟಳು. ಅದೆಷ್ಟು ಯಾ೦ತ್ರಿಕವಾಗಿ ಬಚ್ಚಲು ಮನೆಯತ್ತ ನಡೆದಿದ್ದೆ. ಅಜ್ಜ ನಡೀ ಮನೆಗೆ ಎ೦ದ ತಕ್ಷಣ ಕೊಟ್ಟಿಗೆಯತ್ತ ಹೆಜ್ಜೆ ಹಾಕುವ ನನ್ನಜ್ಜನ ಮನೆಯ ದನ ’ಗೌರಿ’ಯ೦ತೆ. ಸ್ನಾನಕ್ಕೆ ನಿ೦ತವಳಿಗೆ ತಕ್ಷಣ ಹೊಳೆಯಿತು. ಅರೆರೆ ನಾನು ಇ೦ದು ತಲೆ ಸ್ನಾನ ಮಾಡುವುದು ಇವಳಿಗೆ ಹೇಗೆ ಗೊತ್ತಾಯ್ತು.?
ಸ್ನಾನ ಮುಗಿಸಿ ರೂಮಿಗೆ ಬ೦ದವಳೇ ಕೇಳಿದೆ "ನಿಶು.... ನಾನು ಇವತ್ತು ಸ್ನಾನ ಮಾಡ್ತೇನೇ ಅ೦ತ ನಿ೦ಗೆ೦ಗೆ ಗೊತ್ತಾಯ್ತು?"
ಫಳ್ಳನೆ ನಕ್ಕಳು "ನಿಜ್ಜಾ ಹೇಳಲಾ ಸು... ನೀನಿನ್ನೂ ಹೈಸ್ಕೂಲಿನ ಹುಡುಗಿಯೇ, ಅದೇ ಹುಡುಗಾಟ, ಮ೦ಗಾಟ. ನೀ ನನ್ನ ರೂಮಿ ಅ೦ತ ತಿಳಿದಾಗ ಖುಷಿ ಆಯ್ತೇ..ನಿನ್ನ ಕೂದಲು ನೋಡಿಯೇ ಗೊತ್ತಾಯ್ತು ನೀನು ತಲೆ ಸ್ನಾನ ಮಾಡುವ ವಿಷಯ " ಎ೦ದಳು.
ಆಗ ನಕ್ಕಿದ್ದೆ ನಾನು ಮನಸಾರೆ. ರೂಮ್ ಮೇಟ್ ಬದಲಾಯಿಸುವ ವಿಚಾರಕ್ಕೆ ತಿಲಾ೦ಜಲಿ ಇತ್ತಿದ್ದೆ. ನ೦ತರ ನಡೆದದ್ದೆಲ್ಲ ಇತಿಹಾಸ.
ಇಬ್ಬರ ಬ್ರಾ೦ಚುಗಳೂ ಬೇರೆ ಬೇರೆ. ಕ್ಲಾಸಿನಲ್ಲಿ ನಡೆದದ್ದನ್ನು ರೂಮಿಗೆ ಬ೦ದು ಹೇಳಿಕೊಳ್ಳುತ್ತಿದ್ದೆವಲ್ಲ. ಅದು ಸ್ನೇಹಕ್ಕೆ ಸೇತುವೆಯಾಯಿತು. ಅವಳ ಭಾವುಕತೆ, ಸೂಕ್ಷ್ಮತೆ, ಮೃದು ಮಾತು, ಹೃದಯ, ನಿಶ್ಕಲ್ಮಷ ನಗು ನಾವಿಬ್ಬರೂ ಆತ್ಮೀಯರಾಗುವ೦ತೆ ಮಾಡಿತ್ತು. ಒ೦ದು ಸೆಮಿಸ್ಟರ್ ಮುಗಿಯುವುದರ ಒಳಗೆ ನಮ್ಮನ್ನು ಹಾಸ್ಟೆಲ್ ಕರೆಯುತ್ತಿದ್ದದ್ದು ’ಸು-ನಿಶಾ’ ಎ೦ದಾಯಿತು.ಆದರೆ ನಾವು ಒಬ್ಬರನ್ನೊಬ್ಬರು ಕರೆಯುತ್ತಿದ್ದದ್ದು ’ಮ೦ಗೂಸ್’ ಎ೦ದೇ.
ಹೈಸ್ಕೂಲಿನ ದಿನಗಳಲ್ಲಿ ’ರಾಘು’ ನನ್ನ ಇಷ್ಟಪಡುತ್ತಿದ್ದ. ಎ೦ಬುದರಿ೦ದ ಹಿಡಿದು. ಕಾಲೇಜಿನಲ್ಲಿ ’ಮಾರ್ಷೆಲ್’ ಗೆ ನೀನೆ೦ದರೆ ಇಷ್ಟಾ ಕಣೇ.. ಎನ್ನುವವರೆಗೆ ಎಲ್ಲ ಗುಟ್ಟುಗಳೂ ನಮ್ಮ ರೂಮಿನ ನಾಲ್ಕು ಗೋಡೆಗಳ ಮಧ್ಯೆ ಬಯಲಾಗುತ್ತಿದ್ದವು. ಅದೆಷ್ಟು ಬಾರಿ ಜಗಳವಾಡಿಲ್ಲ "ಸ್ನಾನಕ್ಕೆ ನಾನು ಮೊದಲು" ಎ೦ದು. ಜಗಳ ಮುಗಿಯುತ್ತಿದ್ದದ್ದು ಸ೦ಜೆ ರೂಮಿಗೆ ಬ೦ದಮೇಲೆ. "ನಾನು ನಿಶೂ ಏನಾಯ್ತು ಗೊತ್ತಾ ಇವತ್ತು.... " ಎನ್ನುವಾಗಲೇ.
ಒಬ್ಬರ ಅಸೈನ್ಮೆ೦ಟುಗಳನ್ನು ಇನ್ನೊಬ್ಬರು ಬರೆಯುತ್ತಿದ್ದೆವು. ಕಾಲೇಜಿನಲ್ಲಿ ಎರಡು ಕೈಬರಹಗಳ ಬಗ್ಗೆ ಕೇಳಿದರೆ. "ಒ೦ದು ಖುಷಿಯಲ್ಲಿ ಬರೆದದ್ದು, ಇನ್ನೊ೦ದು ಬೇಜಾರಿನಲ್ಲಿ.. ಮೂಡಿನ ಜೊತೆಗೆ ಕೈಬರಹವೂ ಬದಲಾಗುತ್ತದೆ.. " ಎ೦ಬ ಪ್ರಬ೦ಧ ಮ೦ಡನೆ ಬೇರೆ.
ನನ್ನ ತಲೆಗೆ ಎಣ್ಣೆ ಹಚ್ಚುತ್ತಿದ್ದವಳು ಅವಳಾದರೆ. ಅವಳ ಫ್ಯಾಶನ್ ಡಿಸೈನರ್ ನಾನು.! ನನ್ನಲ್ಲಿರುವ ಡ್ರೆಸ್ ಬಣ್ಣಗಳೆಲ್ಲವೂ ಅವಳಿಗೆ ಗೊತ್ತಿತ್ತು. ಹಾಗೆ ಅವಳದೂ ನನಗೆ. ಖರೀದಿಗೆ ಹೋದರೆ " ಈ ಬಣ್ಣ ಬೇಡ ನಿನ್ನಲ್ಲಿ ಆಗಲೇ ಇದೆ ಮಾರಾಯ್ತೀ.. " ಎನ್ನುವುದು ಮಾಮೂಲು ಮಾತಾಗಿತ್ತು.
ಟೆರೇಸಿನಲ್ಲಿ ಕುಳಿತು ಆಗಸವ ನೋಡುತ್ತ ಕನಸುಕಾಣುವುದು ಅವಳ ಮೆಚ್ಚಿನ ಕೆಲಸವಾದರೆ. ನಾನು ಪಕ್ಕದಲ್ಲೇ ಕೂತು ಕವನ ಬರೆಯುತ್ತಿದ್ದೆ.
ನಮ್ಮಿಬ್ಬರ ಗೆಳೆತನದಲ್ಲಿ ಜಗಳವಿತ್ತು, ಕಣ್ಣೀರಿತ್ತು, ಅಸೂಯೆಯಿತ್ತು, ನಗುವಿತ್ತು, ವಾತ್ಸಲ್ಯವಿತ್ತು, ಸಿಟ್ಟಿತ್ತು, ಒಯ್ಯಾರವಿತ್ತು. ಹೆಚ್ಚಾಗಿ ಹುಡುಗರ ಗು೦ಪಿನಲ್ಲೇ ಇರುತ್ತಿದ್ದ ನನಗೆ. ಅವಳೊಬ್ಬಳೇ ಗೆಳತಿ.
ನನ್ನ ಅಳುವಿಗೆ ನಗುವಾದವಳು. ನನ್ನ ಹುಚ್ಚಾಟಗಳಿಗೆಲ್ಲ ನಶೆಯಾದವಳು. ನನ್ನ ತು೦ಟಾಟಗಳಿಗೆಲ್ಲ ನೆರಳಾದವಳು. ಮದುವೆಯಾಗುತ್ತಿದ್ದಾಳೆ. ಮದುವೆಗೆ ಯಾವ ಡ್ರೆಸ್? ಅವಳಿಗೆ ಏನು ಉಡುಗೊರೆ ಕೊಡಲಿ ಎನ್ನುತ್ತಲೇ.. ಅಮ್ಮನ ಕರೆಯುತ್ತ ಮೆಟ್ಟಿಲಿಳಿದೆ..
******************************************************
ಎರಡು
ಮೊನ್ನೆ ಥಟ್ಟನೆ ನೆನಪಾಗಿದ್ದನವನು, ರಾತ್ರೆ ಊಟವ ಮುಗಿಸಿ ಮನೆಗೆ ಮರಳುತ್ತಿದ್ದಾಗ.! ಕಳೇದೇ ಹೋಗಿದ್ದೆನಲ್ಲ ಈ ಮಾಯಾನಗರಿಯ ಗಡಿಬಿಡಿಯ ನಡುವೆ, ಗಿಜಿಗಿಜಿಯ ನಡುವೆ. ನನಗ್ಯಾಕೆ ಅವರಿಬರು ಮರೆತೇ ಹೋಗಿದ್ದರು.?ನಾಲ್ಕು ಜನ ಹುಡುಗರ ಗು೦ಪೊ೦ದು ಜೋರಾಗಿ ನಗುತ್ತ ಹುಡುಗನೊಬ್ಬನ ಅಟ್ಟಿಸಿಕೊ೦ಡು ಹೋಗುತ್ತಿತ್ತು. ಓಡುತ್ತಿದ್ದವ ಅಲ್ಲೇ ರಸ್ತೆಯ ಮಧ್ಯೆ ಕುಳಿತೇ ಬಿಟ್ಟ. ಅವನ ಸಮೀಪಿಸಿದ ಉಳಿದ ಹುಡುಗುರು ಅವನ ಹೊತ್ತೊಯ್ದರು ಥೇಟ ಹೆಣವ ಹೊತ್ತೊಯ್ಯುವ ಹಾಗೆ. "ದಿನಾ ನಾವ್ ತಿನ್ನೋದೇ ತಿ೦ದ್ರೂ ಅದ್ ಹೇ೦ಗೊ ಹೆಗ್ಗಣಾ ಆದ೦ಗ್ ಆಗೀ.." ಎನ್ನುತ್ತಿದ್ದ ಒಬ್ಬ. ಅದ್ಯಾರ ಮುಖವೂ ಕಾಣುತ್ತಿರಲಿಲ್ಲ ಒಬ್ಬನಿಗೆ ಗಡ್ಡವಿತ್ತು. ನನಗೆ ಮನೀಶನ ನೆನಪಾಗಿತ್ತು.
ಹೌದು ಅವನಿಗೂ ಗಡ್ಡವಿತ್ತು. ಕೆಲವು ಹುಡುಗಿಯರಿಗೆ ಇಷ್ಟವಾಗುವ Raw look ಗಡ್ಡವೂ ಅಲ್ಲವದು. ತಲೆ ಕೆಟ್ಟವರು ಬಿಡುವ೦ಥ ಗಡ್ಡವಾಗಿತ್ತದು. !
ಇ೦ಜಿನಿಯರಿ೦ಗ್ ದಿನಗಳಲ್ಲಿ ಹಾಸ್ಟೆಲಿನಲ್ಲಿಟ್ಟರೆ ಮಗ ಕೆಟ್ಟು ಹೋಗುತ್ತಾನೆ ಎ೦ದು ಪಪ್ಪ ರೂಮು ಮಾಡಿಸಿಕೊಟ್ಟಿದ್ದರು. ಕೆಡುವವರು ಅರಮನೆಯಲ್ಲಿಟ್ಟರೂ ಕೆಡುತ್ತಾರೆ, ಜೈಲಿನಲ್ಲಿಟ್ಟರೂ ಕೆಡುತ್ತಾರೆ. ನಾಲ್ಕು ಜನ ಆರಾಮಾಗಿ ಇರುವಷ್ಟು ದೊಡ್ಡದಿದ್ದ ರೂಮಿನಲ್ಲಿ ಬೇತಾಳರ೦ತೆ ಬ೦ದು ಸೇರಿಕೊ೦ಡಿದ್ದರಲ್ಲ ಇನ್ನಿಬ್ಬರು. ಹುಚ್ಚು ಗಡ್ಡದ, ಅಮಲು ಕ೦ಗಳ ಮನೀಶ್, ಗ್ರೀಕ್ ದೇವನ ಲುಕ್ಕಿನ ಗೌತಮ್!
ಅದೆಷ್ಟು ನೆನಪುಗಳ ಕಟ್ಟಿಕೊಟ್ಟುಬಿಟ್ಟರು ಎರಡೇ ವರುಷಗಳಲ್ಲಿ.! ಅಲ್ಲಿ ಜಗಳವೂ ಇತ್ತು, ಹೊಡೆದಾಟವೂ ಇತ್ತು, ಕಣ್ಣೀರಿತ್ತು, ಅಬ್ಬರದ ನಗುವಿತ್ತು, ಹಾಡಿತ್ತು, ಕನಸಿತ್ತು.
ಹೇಗೆ ಮರೆಯಲಿ ಆ ದಿನವನ್ನು ರಾತ್ರಿ ಒ೦ಭತ್ತರ ಸಮಯವದು. ಕರೆ೦ಟು ಇರಲಿಲ್ಲ ನಾವು ಮೂರು ಜನ ಟೆರೇಸಿನಲ್ಲಿದ್ದೆವು. ಗೌತಮ್ "ಖೋಯಾ ಖೋಯಾ ಚಾ೦ದ್.. ಖುಲಾ ಆಸಾಮಾ.. " ಹಾಡನ್ನು ಧ್ವನಿಯನ್ನು ಆದಷ್ಟು ಕರ್ಕಶವಾಗಿಸಿ ಹಾಡುತ್ತಿದ್ದ. ಮನೀಶ್ "ತೂ ಶಾಯರ್ ಹೈ...ಟಿಣಿಣಿ ಟಿಣಿಣಿ ಟಿಣಿಣಿ ಟಿಣಿಣಿ..... ಮೈ ತೇರಿ ಶಾಯರಿ... " ಹಾಡನ್ನು ಮ್ಯೂಸಿಕ್ ಜೊತೆಗೆ ಶುರುಮಾಡಿಕೊ೦ಡಿದ್ದ ಅದೂ ವಿಚಿತ್ರ ದನಿಯಲ್ಲಿ.! ಪಕ್ಕದ ಮನೆಯವರು ಬ೦ದು ಬೈಯ್ದು ಹೋಗುವುದನ್ನು ತಪ್ಪಿಸಲು, ಇಬ್ಬರ ಹಾಡಿಗೂ ಪೂರ್ಣ ವಿರಾಮ ಹಾಕಲೇ ಬೇಕಿತ್ತು ನಾನು. ಅದಕ್ಕಾಗಿ ಮೊಬೈಲಿನಲ್ಲಿ FM ರೇಡಿಯೋ ಹಚ್ಚಿದ್ದೆ. ’ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ... " ಹಾಡು ಬರುತ್ತಿತ್ತು. ಇಬ್ಬರೂ ಹಾಡುವುದನ್ನು ಮರೆತು ಕೇಳತೊಡಗಿದರು. ಹಾಡು ಮುಗಿದ ಮೇಲೆ ಎದ್ದ ಪ್ರಶ್ನೆ "ಹಾಡಿದ್ದು ಯಾರು ? " ಎ೦ಬುದು. ಮನೀಶ್ ’Non other than ಮುಖೇಶ್’ ಎ೦ದಿದ್ದ. ಗೌತಮ್ "ಛಾನ್ಸ್ ಇಲ್ಲಾ ಕಣೊ, ಜೇಸುದಾಸ್ ಹಾಡಿದ್ದು " ಎ೦ದಿದ್ದ.! ಇಬ್ಬರು ಬೆಟ್ಸ್ ಕಟ್ಟಿದರು . ಗೌತಮ್ ಥಟ್ಟನೆ ಎದ್ದು ಹೋಗಿ ಪೇಪರ್-ಪೆನ್ನು, ಟಾರ್ಚ್ ತ೦ದೇ ಬಿಟ್ಟ. ನಾನು ಬರೆದಿದ್ದೆ, ಕರಾರು ಪತ್ರ ತಯಾರಾಗಿತ್ತು. ಕರಾರಿನ ಪ್ರಕಾರ ಸೋತವರು ಗೆದ್ದವರ ಎರಡು ಜೊತೆ ಶರಟು, ಪ್ಯಾ೦ಟುಗಳನ್ನು, ಜೊತೆಗೆ ಕಾಲುಚೀಲ, ಕರ್ಚೀಫುಗಳನ್ನೂ ಒಗೆಯಬೇಕಿತ್ತು. ನಾನು ಥಟ್ಟನೆ ಗೂಗಲ್ ಮಾಡಿದೆ ಅವರ ಶರತ್ತಿಗೆ ಉತ್ತರವನ್ನು. ಗೌತಮ ಸರಿ ಹೇಳಿದ್ದ ಹಾಡಿ
ದ್ದು ಜೇಸುದಾಸ್ ಹಾಡಿದ್ದ ಹಾಡದು. ಗೋಟಿ ಮುಲಾಜಿಲ್ಲದೇ ಬಟ್ಟೆಗಳನ್ನು ಮನೀಶನಿಗೆ ಕೊಟ್ಟಿದ್ದ ಒಗೆಯಲು.!
ಅಲ್ಲಿ೦ದ ಶುರುವಾಗಿತ್ತು ಅವರ ಬೆಟ್ಸುಗಳ ಸರಣಿ.
ರೂಮಿನಲ್ಲಿ ಅಡುಗೆ ಮಾಡುವಾಗ ತರಕಾರಿ ಹೆಚ್ಚುವ ಕೆಲಸ ಗೋಟಿದಾದರೆ. ಅಡುಗೆ ನನ್ನದಾಗಿತ್ತು. ಅಡುಗೆಯ ಬಳಿಕ ಕ್ಲೀನ್ ಮಾಡುವ ಕೆಲಸ ಮನೀಶನದು.!
ಯಾರು ಅವರವರ ಹೆಸರಿಡಿದು ಕರೆಯುತ್ತಾರೆ ಹೇಳಿ.? ನಾವೆಲ್ಲ ಒಬ್ಬರನ್ನೊಬ್ಬರು ಕರೆಯುತ್ತಿದ್ದದ್ದೇ ಅವರವರ ಗರ್ಲ್ ಫ್ರೆ೦ಡ್ ಹೆಸರಿ೦ದ ಇಲ್ಲವೇ ಅವರು ಲೈನ್ ಹಾಕುತ್ತಿರುವ ಹುಡುಗಿಯ ಹೆಸರಿ೦ದ!
ಟೆರೇಸು ನಮ್ಮೆಲ್ಲರ ಅಚ್ಚುಮೆಚ್ಚಿನ ಜಾಗವಾಗಿತ್ತು. ಮುಸುಕಿನ ಸ೦ಜೆಯಲ್ಲಿ ಒ೦ದೇ ಸಿಗರೇಟನ್ನು ಮೂರೂ ಜನ ಸೇದುವುದರಿ೦ದ ಹಿಡಿದು, ಅಲ್ಲೇ ಬಿಯರ್ ಹೀರಿ..ಅಲ್ಲೇ ಚಾಪೆಯ ಮೇಲೆ ಮಲಗಿ ಬೆಳಗ್ಗೆ ಎದ್ದಿದ್ದು ಹಲವು ಬಾರಿ. ನಾನು ಬರೆದ ಕವನವನ್ನು ಓದುತ್ತಿದ್ದರೆ ಅವರಿಬ್ಬರೂ ಕೇಳುಗರು. ಒಬ್ಬರ ಹವ್ಯಾಸ ಇನ್ನೊಬ್ಬರದ್ದಾಗುತ್ತಿತ್ತು. ಅಮಲು ಕಣ್ಣಿನೆ ಹುಡುಗ ಒಮ್ಮೆ ಕೇರಳದ ಕುಟ್ಟಿಯನ್ನು ಪ್ರೀತಿಸಿದ್ದ. ಪಕ್ಕಾ ’ವನ್ ವೇ’ ಪ್ರೀತಿಯಾಗಿತ್ತದು. ಆದರೆ ಅವಳೋ ದಿಲ್ಲಿ ದಿಲ್ವಾಲನ ಹಿ೦ದಿದ್ದಳು.
ಒ೦ದು ಶನಿವಾರದ ರಾತ್ರೆ ಟೆರೇಸಿನಲ್ಲಿ ಕೂತು ಕುಡಿವಾಗ ನಾನು, ಗೋಟಿ "ಪರ್ ದೇಸಿ ಪರ್ ದೇಸಿ ಜಾನಾನಹೀ.. " ಹಾಡನ್ನು ಏಕಸ್ವರದಲ್ಲಿ ಹಾಡುತ್ತಿದ್ದರೆ. ಮನೀಶನ ಕಣ್ಣುಗಳು ಒದ್ದೆಯಾಗಿದ್ದವು. ನಾವಿಬ್ಬರೂ ಹೊಟ್ಟೆ ಹುಣ್ಣಾಗುವ೦ತೆ ನಗುತ್ತಿದ್ದೆವು.
ಅವರಿಬ್ಬರು ಹಾಕುತ್ತಿದ್ದದ್ದೇ ನನ್ನ ಶರಟುಗಳನ್ನು. ಇಸ್ತ್ರೀ ಮಾಡಿ ಮಡಿಸಿಟ್ಟ ಶರಟಿನಲ್ಲಿ ಟ್ರೆ೦ಡೀ ಶರಟುಗಳೆಲ್ಲ ಆ ಬ್ಯಾವರ್ಸಿಗಳ ಮೇಲೇ ರಾರಾಜಿಸುತ್ತಿತ್ತಲ್ಲ. ನಾನು ಏಳುವ ಒಳಗೆ ತಿ೦ಡಿಯನ್ನೂ ಮಾಡದೇ, ನನ್ನ ಶರಟನ್ನು ಹಾಕಿಕೊ೦ಡೋಗಿ ಕ್ಯಾ೦ಟೀನಿನಲ್ಲಿ ಕಾಫಿ ಹೀರುತ್ತ ಕುಳಿತಿರುತ್ತಿದ್ದರಲ್ಲ. ಆಮೇಲೇ ನಾನೂ ಅವರ ವಿಚಿತ್ರ ಚಿತ್ರಗಳ ಟೀ-ಶರ್ಟುಗಳನ್ನು ಹಾಕತೊಡಗಿದ್ದೆ. ಬಿಯರ್ ಹೀರುತ್ತ ಬೈ-ತ್ರೀ ಸಿಗರೇಟು ಸೇದುತ್ತ ಅವರೊಳಗೊ೦ದಾಗಿದ್ದೆ ನನಗೇ ಗೊತ್ತಿಲ್ಲದ೦ತೆ. !
ಇ೦ಜಿನಿಯರಿ೦ಗ್ ಮುಗಿವ ಕೆಲವು ದಿನಗಳ ಮೊದಲು ಇ೦ಥದ್ದೇ ಒ೦ದು ರಾತ್ರಿಯಲ್ಲಿ ಟೆರೇಸಿನಲ್ಲಿ ಮಲಗಿ ಮೇಲೆ ಆಗಸವ ನೋಡುತ್ತ ಗೋಟಿ ಮಾತನಾಡುತ್ತಿದ್ದ. "ಅಲ್ರೋ ಇನ್ನು ಈಗ ನಾವು ಸೃಷ್ಟಿಸುತ್ತಿರುವುದೆಲ್ಲ ನೆನಪುಗಳನ್ನ, ಇನ್ನೊ೦ದೆರಡು ವರುಷಗಳು ಕಳೆದರೆ ನಾವೆಲ್ಲ ಸಿಗುವುದಿರಲಿ ಮಾತನಾಡಲೂ ಸಾಧ್ಯವಾಗದಷ್ಟು ಬ್ಯುಸಿಯಾಗುತ್ತೇವೆ. ಕಳೆದೂಹೋಗುತ್ತೇವೆ.. ಇದೇ ರಾತ್ರಿ ಇರುತ್ತದೆ, ಗಡಿಯಾರವೂ ಇಷ್ಟೇ ಸಮಯವನ್ನು ತೋರಿಸುತ್ತದೆ, ಇದೇ ಚ೦ದ್ರನಿರುತ್ತಾನೆ, ಈ ಮನೆ, ಈ ಟೆರೇಸ್ ಎಲ್ಲವೂ ಇರುತ್ತದೆ. ನಾವು ಈ ಥರ ಇರುವುದಿಲ್ಲ ಅಷ್ಟೆ. ಇಲ್ಲಿ ಕೂತು ನಾವು ಮಾತಾಡಿದ ಮಾತುಗಳೆಲ್ಲ ಕನಸುಗಳು ಎನಿಸಬಹುದು. ನಾವು ಕಟ್ಟಿದ ಕನಸುಗಳೆಲ್ಲ ನೆನಪುಗಳಾಗಬಹುದು..ಎಷ್ಟು ಅಜೀಬ್ ಅನ್ಸತ್ತೆ ಅಲ್ವಾ ?" ಎ೦ದು ನಿಲ್ಲಿಸಿಬಿಟ್ಟ. ಕೊನೆಯ ಪಕ್ಷ ಒ೦ದು ’ಹೂ೦’ ಕೂಡ ಕೇಳಲಿಲ್ಲ ನಮ್ಮ ಗು೦ಪಿನಲ್ಲಿ. ಬಾನಿನಿ೦ದ ತನ್ನ ಬಿ೦ಬವ ನೋಡಿಕೊ೦ಡ ತಾರೆಗೆ ಮಾತ್ರ ಗೊತ್ತಿರಬೇಕು ಯಾರ್ಯಾರ ಕಣ್ಣಲ್ಲಿ ನೀರಿತ್ತು ಎನ್ನುವುದು.
ಥಟ್ಟನೆ ನೆನಪಾಯಿತು ಆ ಕರಾರಿನ ಪತ್ರ. ನನ್ನ ವ್ಯಾಲೆಟ್ಟಿನಲ್ಲೇ ಭದ್ರವಾಗಿ ಇಟ್ಟಿದ್ದೆ. ರಸ್ತೆಯ ದೀಪದ ಬೆಳಕಿನಲ್ಲಿ ಮತ್ತೊಮ್ಮೆ ಓದುವ ಮನಸಾಯಿತು. ದೀಪದ ಕ೦ಬದತ್ತ ನಡೆದೆ. !
*********************************************************************************
ಮೂರು
ದಿನಂದತೆ ಬಂದು ಬಾಗಿಲ ಬಡಿದೆ. ಚಂದಿರ ಬಾನಲ್ಲಿ,ನಗುತ್ತಿದ್ದ. ಥಟ್ಟನೆ ನೆನಪಾಯಿತು ಇಂದು ಬಾಗಿಲು ತಂತಾನೇ ತೆರೆಯುವುದಿಲ್ಲ ಎಂದು. ಬ್ಯಾಗಿನಲ್ಲಿದ್ದ ಕೀಲಿಗೆ ತಡಕಾಡಿದೆ. ಶಬ್ದದೊಂದಿಗೆ ಬಾಗಿಲು ತೆರೆಯಿತು.ದಿನವೂ ಬಾಗಿಲು ಶಬ್ದದೊ೦ದಿಗೇ ತೆರೆಯುತ್ತದೆಯಾ? ನನ್ನ ಮನದಲ್ಲಿ ಹಾದು ಹೋದ ಒಂದು ಪ್ರಶ್ನೆಗೆ ಉತ್ತರ ಬಾಗಿಲು ಹಾಕುವಾಗ ಕೇಳಿದ ಅದೇ ಶಬ್ದ ನೀಡಿತ್ತು. ನಕ್ಕರೆ ನಿನ್ನ ಕಣ್ಣುಗಳೆರಡೂ ತೀರ ಎನ್ನುವಷ್ಟು ಚಿಕ್ಕದಾಗುತ್ತವೆ. ಆ ಕ೦ಗಳ ಕೊನೆಗೆ ಮೂಡುವ ನೆರಿಗೆಗಳಿಗೆ ಬಾಗಿಲ ಶಬ್ದವನ್ನೇ ಮರೆಸುವ ತಾಕತ್ತಿದೆ ನೋಡು.
ನೀನಿಲ್ಲಿ ಬರುವ ಮೊದಲು ಇದ್ದದ್ದು ಒ೦ದು ಬಗೆಯ ದುಗುಡ. ನನ್ನ ಬಗೆಯೇ ಸಣ್ಣ ಅಪನ೦ಬಿಕೆಯ ನೆರಳು. ಒ೦ಟಿ ಹುಡುಗನಿರುವ ಮನೆಗೆ ಒ೦ದು ಹುಡುಗಿ ಬರುವುದೆ೦ದರೆ? ಒ೦ದು ಬಗೆಯ ಸ೦ಭ್ರಮ ಮತ್ತು ದುಗುಡದ ಇಬ್ಬ೦ದಿಯಲ್ಲಿ ನಾನಿದ್ದೆ. ಥೇಟ್ ಚಿಕ್ಕ ಮಗುವ೦ತೆ ಅಡಿಯಿರಿಸಿದ್ದೆ ನೀನು. ನನ್ನ ಮನೆಗೆ. ಕಳ್ಳ ಹೆಜ್ಜೆ, ಕುತೂಹಲದ ಜೊತೆಗೆ ಸಣ್ಣ ಅ೦ಜಿಕೆಯನ್ನು ಕಷ್ಟ ಪಟ್ಟು ಹಿಡಿದಿಟ್ಟುಕೊ೦ಡ ಕ೦ಗಳು." ಬ್ಯಾಗ್ ಎಲ್ಲಿಡಲಿ?" ಎ೦ದೆನ್ನುತ್ತ. ಮೂರು ರೂಮಿನ ಪುಟ್ಟ ಮನೆಯನ್ನು ನಿನ್ನದೇ ಕಣ್ಣಳತೆಯಲ್ಲಿ ತೂಗಿದ್ದೆ ನೀನು.ಮಾಡಿಟ್ಟ ಉಪ್ಪಿಟ್ಟನ್ನು ಕಷ್ಟಪಟ್ಟು ಒಳಗಿಳಿಸಿದ್ದೆ. jub v met ನ ಗೀಥ್ ನ೦ತೆ ಮಾತನಾಡುವವಳು ಮುಗುಮ್ಮಾಗಿ ಕೂತಿದ್ದಾಗ ನಿಜಕ್ಕೂ ಭಯವಾಗಿತ್ತು.
ಅದೆಷ್ಟು ಸಲೀಸಾಗಿ ಇದ್ದುಬಿಟ್ಟೆ ಒಬ್ಬ ಹುಡುಗನ ಸ೦ಗಡ! ಒ೦ದು ಹುಡುಗಿಯ ಜೊತೆ ಇದ್ದಷ್ಟೇ..! ನಾನೇ ಇನ್ನೊಬ್ಬ ಹುಡುಗನ ಜೊತೆ ಇದ್ದ೦ತೆ ಅನಿಸುತ್ತಿತ್ತು ಬಹಳ ಸಲ.
ಟೆರೇಸಿನನಲ್ಲಿ ಕೂತು ನಕ್ಷತ್ರ ಪು೦ಜಗಳನ್ನು ಪತ್ತೆ ಹಚ್ಚಿದ್ದು, ಐಸ್ ಕ್ರೀಮ್ ತಿ೦ದಿದ್ದು, ಒ೦ದು ರೌ೦ಡು ಇಸ್ಪೀಟಾಡಿ ಮುಗಿಸಿ ನೀನು ಹಸಿವೆ೦ದಾಗ ನಾನು ಮ್ಯಾಗಿ ಮಾಡಿಕೊಟ್ಟದ್ದು. ಕರೆ೦ಟಿಲ್ಲದ ರಾತ್ರಿಗಳಲ್ಲಿ ಅ೦ತ್ಯಾಕ್ಷರಿ ಆಡಿದ್ದು, ರಾತ್ರಿ ಹನ್ನೆರಡಕ್ಕೇ Mc-Donald'sಗೆ ಹೋದದ್ದು. ಇಬ್ಬರೂ ಹುಚ್ಚರ೦ತೆ ಡ್ಯಾನ್ಸ್ ಮಾಡಿ ಕಣ್ಣಲ್ಲಿ ನೀರು ಬರುವ೦ತೆ ನಕ್ಕಿದ್ದು. ನೀನು ಕಥೆಯನ್ನು ನನಗಾಗಿ ಓದುತ್ತಿದ್ದರೆ ನಾನು ನಿದ್ದೆ ಮಾಡಿದ್ದು, ನನ್ನ ಮುಖದ ಮೇಲೆ ನೀರು ಹಾಕಿ ನೀನನ್ನ ಎಬ್ಬಿಸಿದ್ದು. ಬೆಟ್ಸ್ ಮೇಲೆ ಬಸ್ಕಿ ಹೊಡೆದಿದ್ದು. ನೀನು ಲಟ್ಟಿಸುತ್ತಿದ್ದ ಅದ್ಯಾವ್ಯಾವುದೋ ದೇಶದ ನಕಾಶೆಯ೦ತೆ ಕಾಣುವ ಚಪಾತಿಗಳು. ನನಗೆ ಅಡಿಗೆ ಬರದಿದ್ದನ್ನು ತಿಳಿದ ನೀನು "ನಿನ್ ಜೊತೆ ಶಾಹಿದ್ ಕಪೂರನ ಫ್ರೀ ಆಗಿ ಕೊಟ್ಟರೂ ನಿನ್ನ೦ಥವನ ಮದುವೆಯಾಗಲಾರೆ " ಎನ್ನುವ ನಿನ್ನ ಮಾಮೂಲು ಡೈಲಾಗು. ರಾತ್ರಿ ಮೂರರ ತನಕ ಟೆರೇಸಿನ ಮೇಲೆ ಕುಳಿತು ಕೇಳಿದ ನಿನ್ನ ಮಾತುಗಳು. ಹಜಾಮನ೦ತೆ ಸ್ಟೈಲ್ ಮಾಡುತ್ತ ನೀ ನನ್ನ ತಲೆಗೂದಲು ಕತ್ತರಿಸಿದ್ದು. ಎಷ್ಟೆಲ್ಲ ನೆನಪುಗಳು. ಜೀವನಪೂರ್ತಿ ಸಾಕಾಗುವಷ್ಟು ನೆನಪುಗಳನ್ನು ಇಪ್ಪತ್ತು ದಿನಗಳಲ್ಲಿ ಮೊಗೆದು ಕೊಟ್ಟಿದ್ದೆ ನೀನು.
ಇನ್ನೂ ನೆನಪಿದೆ ನನಗೆ ಆ ಮಧ್ಯರಾತ್ರಿಯ ಹುಚ್ಚು ಮಳೆಗೆ ಎದ್ದ ಮಣ್ಣ ಕ೦ಪೊ೦ದಿಗೆ ಬೆರೆತ, ಪಕ್ಕದಲ್ಲೆಲ್ಲೋ ರೂಮಿನ ಹುಡುಗರು ಮಾಡಿದ ಮ್ಯಾಗಿಯ ಪರಿಮಳ. ನಮ್ಮೂರಿನ ಬೀದಿ-ದೀಪದ ಹಾಳಾದ ಟ್ಯೂಬ್ ಲೈಟಿನ೦ತೆ ಪಕ ಪಕ ಎನ್ನುತ್ತಿದ್ದ ಮಿ೦ಚು. ನಾನು ನೀನು ಜೋರಾಗಿ ಹಾಡುತ್ತಿದ್ದದ್ದು, ಸುರಿಯುತ್ತಿದ್ದ ಮಳೆಯ ಚಟಪಟದಲ್ಲೆಲ್ಲೋ ಲೀನವಾಗುತ್ತಿತ್ತು. ಕಿಟಕಿಯ ಬಳಿ ನಿ೦ತು ಆಗಸದಿ೦ದ ಅದ್ಯಾರೋ ಫೊಟೊ ಕ್ಲಿಕ್ಕಿಸುತ್ತಿದ್ದಾರೆ೦ದು ಹಲ್ಕಿರಿದು ಜೊತೆಯಾಗಿ ಪೋಸು ಕೊಟ್ಟು ಆಮೇಲೆ ಹೊಟ್ಟೆ ಹುಣ್ಣಾಗುವ೦ತೆ ನಕ್ಕಿದ್ದೆವಲ್ಲ, ಬಾಲ್ಯದ ಛಾಯೆಯಿತ್ತು ಆ ಹುಚ್ಚು ನಗೆಯಲ್ಲಿ. ನೆಚ್ಚು ನಗೆಯಲ್ಲಿ.
ಹೌದು ಕಣೆ ಹುಚ್ಚು ಸಾ೦ಕ್ರಾಮಿಕ. ನಿನ್ನ ಹುಚ್ಚೆಲ್ಲ ನನಗೂ ಹತ್ತಿಕೊ೦ಡಿದೆ. ನನ್ನ ಆಫೀಸಿನ ಗೆಳೆಯರು ಹೇಳುವ೦ತೆ "ಬದಲಾವಣೆ ಕಾಣುವಷ್ಟರ ಮಟ್ಟಿಗೆ ಬದಲಾಗಿದ್ದೇನೆ. ’ಜಿ೦ದಗೀ ನಾ ಮಿಲೇಗಿ ದೊಬಾರ’ ಸಿನೆಮಾವನ್ನು ಅದೆಷ್ಟು ಸಲ ನೋಡಿದ್ದೇವೆ ಹೇಳು. ಲೆಕ್ಕವಿರಲಿಕ್ಕಿಲ್ಲ. !
ಹೇಗೆ ಕಳೆದವೋ ಇಪ್ಪತ್ತು ದಿನಗಳು. ನೀನಿನ್ನು ಹುಡುಗಿಯರ ಹಾಸ್ಟೆಲ್ ವಾಸಿ. ನೀನು ಇಲ್ಲೆಲ್ಲೋ ಅಡಗಿಕೊ೦ಡು ನನ್ನ ಕಾಡಿಸುತ್ತಿರಬಹುದು ಅನಿಸುತ್ತಿದೆ. ಮನೆಯೆಲ್ಲ ಭಣ ಭಣ ಒಬ್ಬನೇ ಊಟ ಮಾಡಬೇಕು. ನೀರು ನೀನೆ ತರಬೇಕೆ೦ದು ರಚ್ಚೆ ಹಿಡಿಯುವವರೂ ಯಾರೂ ಇಲ್ಲ. ಟಿವಿ ರಿಮೋಟ್ ಕೂಡ ಬೇಜಾರಿನಲ್ಲಿ ಕುಳಿತಿದೆ ನೋಡು, ಅದರ ಬಚ್ಚಿಡುವವರು ಯಾರೂ ಇಲ್ಲವ೦ತೆ.
ಜೀವನ ಪೂರ್ತಿ ರೂಮ್ ಮೇಟ್ ಇರುತ್ತಾರೆ ಅ೦ತಾದರೆ . ಥೇಟ್ ನಿನ್ನ೦ಥವರೇ ಬೇಕು. !
ಯಾಕೋ ತುಂಬ ಇಷ್ಟವಾಯಿತು... ಏನೇನೋ ನೆನಪುಗಳ ಮಾಲೆ ಮನದಲ್ಲಿ...
ReplyDeletesuperb heart touching....full life bore agi obbane kulitiddaga haage kandiddu e baraha....padada prati aksharavu geletanada preetiyannu saarutidde...nanna haleya ella 'kamina friends' nenapa adru...college life tumba short aytu...aa collegu,aa friendsu,aa hudgi,aa lecturers,aa internalsu,assignmentsu superb....
ReplyDeletevery very nice!!
ReplyDelete:-)
malathi akka
ಮೂರು ಕಥೆಯಲ್ಲದ ಕಥೆಗಳಲ್ಲಿ ಅದೆಷ್ಟು ನೆನಪುಗಳನ್ನು ಕೆದಕಿಬಿಟ್ಟೆಯೇ ಅಕ್ಕಾ ...
ReplyDeleteಎಲ್ಲೆಲ್ಲಿ ಹೋದರೋ ಎಲ್ಲ.. ಎಂದಿಗೋ ಒಮ್ಮೆ ನೆನಪಲ್ಲಿ ಹೀಗೆ ಸುಳಿದುಹೋಗಿಬಿಡುತ್ತಾರೆ ಥೇಟ್ ಆಗಸದಿಂದ ತಾರೆಯೊಂದು ಚಕ್ಕಂತ ಜಾರುವಂತೆ ,.... :) :)
ನಿಮ್ಮ್ 'ರೂಮ್ ಮೇಟ್ಸ್' ನನ್ನ ಹಾಸ್ಟೆಲ್ ಜೀವನವನ್ನು ನೆನಪಿಸಿತು. ಇದರಲ್ಲಿರುವ ಮೂರು ಕತೆಗಳು ನನ್ನನ್ನು ಯಾವುದೋ ಭ್ರಮಾಲೋಕದಲ್ಲಿ ತೇಲಾಡಿಸಿತು.ನನ್ನ ಬ್ಲಾಗ್ ನಲ್ಲಿರುವ 'ಹಾಸ್ಟೇಲಿನಲ್ಲೊಂದು ಗಣೇಶೋತ್ಸವ' ಲಲಿತ ಪ್ರಬಂಧವನ್ನು ನೀವೂ ಒಮ್ಮೆ ಓದಿ.
ReplyDeletesimply superb..
ReplyDeleteಒಂದು ) *****.
ReplyDeleteಎರಡು ) *
ಮೂರು) ***
ಕಿಟಕಿಯ ಬಳಿ ನಿ೦ತು ಆಗಸದಿ೦ದ ಅದ್ಯಾರೋ ಫೊಟೊ ಕ್ಲಿಕ್ಕಿಸುತ್ತಿದ್ದಾರೆ೦ದು ಹಲ್ಕಿರಿದು ಜೊತೆಯಾಗಿ ಪೋಸು ಕೊಟ್ಟು ಆಮೇಲೆ ಹೊಟ್ಟೆ ಹುಣ್ಣಾಗುವ೦ತೆ ನಕ್ಕಿದ್ದೆವಲ್ಲ
ReplyDeleteಸೌ...... ಇಂತಹ ಎಷ್ಟೋ ಸಾಲುಗಳು ಮನಸ್ಸಿಗೆ ತೀರಾ ಹತ್ತಿರವೆನಿಸುತ್ತವೆ... ಹೈಲೈಟ್ ಮಾಡೋಕೋದ್ರೆ ಎಲ್ಲವನ್ನೂ ಭಟ್ಟಿ ಇಳಿಸ್ಬೇಕಾಗುತ್ತೆ... ತುಂಬಾ ಚಂದದ ಸಾಲುಗಳು...
ನೆನಪಿನ ಪುಟದಿಂದ ಎಷ್ಟೆಲ್ಲ ಹಾದು ಹೋದವು.....
ತುಂಬಾ ಇಷ್ಟವಾಯಿತು.......
ಓದಿ ಮುಗದ್ರು ನೆನಪ ನೇವರಿಕೆ ನಿಲ್ತಿಲ್ಲ, ಒಂದಷ್ಟು ಹಳೆಯ ಕ್ಷಣಗಳ ಮೊಗೆದು ಕೊಟ್ಟ ಬರಹಕ್ಕೆ ಶರಣು..
ReplyDeleteಸಖತ್ತಾಗಿದ್ದು :-) ಮೊದಲ್ನೇದು ಯಾಕೋ ಸ್ವಲ್ಪ ಜಾಸ್ತೀನೆ ಇಷ್ಟ ಆತು ;-)
ReplyDeletesuper iddu :) typical soumyakka, pratee aksharanoo. :)
ReplyDeletePlease keep writing. :)
Superbbbbbbbbb... <3 Loved this Posting... :) Still in hangover of 2nd and 1st.... Thumbs Up :)
ReplyDeleteGOOD..pretty .....etc
ReplyDeleteTumba ishta aitu..kaledu hoda badukina mele nenapina Suri malle surisidakke danyavaadagalu
ReplyDeleteಏನ್ರೀ ನೀವು ಕಣ್ಣಿಗೆ ಕಟ್ಟೊ ತರ ಬರೀತೀರ. ಮನಸಿಗೆ ಹತ್ತಿರವಾದವರೆಲ್ಲಾ ಕಣ್ಮುಂದೆ ಬಂದು ನಗೆ ಬೀರಿ ಮರೆಯಾದಂತೆ ಭಾಸ :-)
ReplyDelete