ಮೊನ್ನೆ ಹೊಳೆದಂಡೆಯಂಚಿನಲಿ ಹೋಗಿ ಕುಳಿತಿದ್ದಾಗ,ರಾತ್ರಿ ಆರಾಮ ಕುರ್ಚಿಯಲಿ ಕುಳಿತು ಬೆಳದಿಂಗಳನು ಸವಿಯುತ್ತಿದ್ದಾಗ ಕೆಲವು ಸಾಲುಗಳು ಹಾದು ಹೋದವು. ಕೆಲವು ಸಾಲುಗಳು ಮಾಗಿಯ ಮೂಡಣದ ಗಾಳಿಗೆ ಉದುರುವ ಹಾರಾಡುವ ತರಗೆಲೆಗಳಂತೆ ಕಾಣಬಹುದು. ಹಾಗೆ ನಾನು ಸೆರೆ ಹಿಡಿದ ಮಾಗಿಯ ಕೆಲವು ಚಿತ್ರಗಳನ್ನೂ ಹಾಕಿದ್ದೇನೆ ಓದಿ ನೋಡಿ ಹೇಗಿದೆ ಹೇಳಿ.
**ಬಾನಲ್ಲಿ ಬಿಳಿಯ ಮೋಡಗಳ ಮೆರವಣಿಗೆ. ಕ್ಷಣಕ್ಕೂ ಬದಲಾಗುವ ಚಿತ್ರಪಟಗಳು.
**ತಿಳಿನೀರ ಹೊಳೆಯಲ್ಲಿ ತನ್ನ ಬಿಂಬವ ನೋಡಿ ಮುಗುಳುನಗುತ್ತಾ ಸಾಗುವ ಹಾಯಿದೋಣಿಗೆ ತೀರವ ಸೇರುವ ಹಂಬಲ.
**ಹಗಲಲ್ಲಿ ಯಾರೋ ಹತ್ತಿಯ ಮೂಟೆಯನ್ನು ಬಾನಿಗೆಸೆದಂತೆ ಚೆಲ್ಲಾಪಿಲ್ಲಿ ಮೋಡಗಳು. ಅದೇ ಆಗಸವು ರಾತ್ರಿಯಾಗುತ್ತಿದ್ದಂತೆ ಅಲೆಗಳ ಅಬ್ಬರವೇ ಇಲ್ಲದ ಶಾಂತ ಸಮುದ್ರ.
**ಇನ್ನೆರಡು ದಿನಗಳಲಿ ಭೂಮಿಗೆ ಬೀಳಲಿರುವ ಹಳದಿ ಎಲೆಯೊಂದಕ್ಕೆ ಬಂಗಾರದ ಬಣ್ಣ ಬಳಿದ ಸಂಭ್ರಮದಲ್ಲಿದ್ದ ಸೂರ್ಯ.
**ಮುಂಜಾವಿನ ಹೊಂಬಿಸಿಲಿಗೆ ವಜ್ರದ ಹರಳುಗಳಂತೆ ಹೊಳೆವ, ಜೇಡರ ಬಲೆಯ ಮೇಲಿನ ಇಬ್ಬನಿ ಹನಿಗಳು.
**ಯಾವುದೊ ಒಬ್ಬ fashion designerನ ಹೊಸ ಸೀರೆಯ ವಿನ್ಯಾಸದಂತೆ ಕಾಣುವ ಬಾನಿಗೆ ಮೋಡ ಹಾಗೂ ನಕ್ಷತ್ರಗಳ ಕಸೂತಿ, ಚಂದಿರನ ಬೆಳದಿಂಗಳ ಜರತಾರಿ.
**ಬಾನಲ್ಲಿ ಮಿನುಗುತ್ತ ಸಾಗಿದ ವಿಮಾನವೊಂದರ ಕಂಡ ಹುಡುಗಿಯೊಬ್ಬಳು ಸ್ತ್ರೀ ವಿಮೋಚನೆಯ ಕವನ ಬರೆದಳು. ವಿಮಾನದ ಗಗನಸಖಿಯ ಕಣ್ಣ ಹನಿ ಕರಗಿ ಕೆನ್ನೆಯ ಮೇಲೆ ಕರೆಯಷ್ಟೇ ಉಳಿದಿತ್ತು.
**ನಕ್ಷತ್ರಗಳ ಮೀರುವ ಹಂಬಲದಲ್ಲಿದ್ದವಳಿಗೆ ಅವಳ ಪ್ರೀತಿ ಉಲ್ಕೆಯಾಗಿ ಉರಿದದ್ದು ತಿಳಿಯಲೇ ಇಲ್ಲ .
**ಹುಡುಗನ ಭುಜಕ್ಕೊರಗಿ ಕುಳಿತ ಹುಡುಗಿಯ ಕಂಡ ಬಾನ ಚಂದಿರ ರೋಹಿಣಿಯ ನೋಡಿ ಮುಗುಳ್ನಕ್ಕ !
**ರಾತ್ರಿಯಲಿ ಮಿನುಗುತ್ತ ಹೊರಟ ವಿಮಾನವೊಂದರ ಕಂಡ ಮೋಡದ ಮರೆಯಲ್ಲಿನ ಚುಕ್ಕಿಯ ಹೊಟ್ಟೆಯೊಳಗೆ ತಣ್ಣನೆಯ ಹೊಟ್ಟೆಕಿಚ್ಚು.
**ಹುಣ್ಣಿಮೆಯ ಚಂದಿರನಲ್ಲಿ ಹುಡುಗಿಯ ಮೊಗ ಕಂಡವನಿಗೆ, ಅಮಾವಾಸ್ಯೆಯ ರಾತ್ರಿ ಆಕೆಯ ಸೆರಗಿನ ಜರತಾರಿ ಕಸೂತಿಯಂತೆ ಕಂಡಿತು.
**ರಾತ್ರಿ ಕಣ್ಣು ಬಿಟ್ಟಾಗಲೆಲ್ಲ ರಸ್ತೆಯ ದೀಪದಂತೆ ಇಣುಕುವ ನಿನ್ನ ನೆನಪುಗಳು..
**ನಿನ್ನ ನೆನಪುಗಳನ್ನು ಬಾನಿಗೆ ಎಸೆದೆ ಚುಕ್ಕಿಗಳಾಗಿ ನನ್ನ ಕಾಡತೊಡಗಿದವು ..
**ನಿನ್ನೆ ಬಿದ್ದ ನಿನ್ನ ಕನಸುಗಳ ಮಳೆಗೆ ನೆನಪುಗಳು ಹಸಿರಾಗಿ ಬಿಟ್ಟಿವೆ.
**ಗಿಡದ ಎಲೆಗಳನ್ನು, ತಾರಸಿಯ ಮೇಲಿನ ಬಟ್ಟೆಗಳನ್ನು ಹಾರಿಸಿಕೊಂಡು ಹೋಗುವ ಮೂಡಣದ ಗಾಳಿಗೆ ನಿನ್ನ ನೆನಪನ್ನು ಮಾತ್ರ ಅಲ್ಲಾಡಿಸುವ ತಾಕತ್ತು ಇಲ್ಲ.
**ನಿನ್ನ ಕಣ್ಣಲ್ಲಿ ತಾರೆಗಳು ಮಿನುಗುತ್ತವೆ, ನಿನ್ನ ನಗೆಗೆ ಕಾಮನಬಿಲ್ಲಿನ ಬಣ್ಣಗಳು, ಮೊಗವು ಚಂದಿರನಂತೆ, ಒಟ್ಟಿನಲ್ಲಿ ನೀನು ಬಾಂದಳದ ಬೆಡಗಿ ಆಗಸದ ಹುಡುಗಿ, ಮಳೆಯಾಗಿ ಸುರಿದರೆ ಮಾತ್ರ ನನ್ನ ಬೊಗಸೆಯಲ್ಲಿ ಬಂಧಿ.
**ಅದ್ಯಾರದ್ದೋ ಮನೆಯ ಸೋರುವ ನಲ್ಲಿಯಲ್ಲಿ ನೀರು ಹನಿಯುವ ಶಬ್ದವ ಹುಡುಕುತ್ತ ಹೊರಟಂತಿದ್ದಾನೆ ಬಾನಲ್ಲಿ ಚಂದಿರ.
**ರಾತ್ರಿ ಬಾಂದಳದಿ ಮಿನುಗುವ ತಾರೆಗಳೇ ನಿಮಗೂ ಆಗುವುದಿಲ್ಲವೇ ಛಳಿ? ಹೊದ್ದು ಮಲಗಿಬಿಡಿ ಬೆಳ್ಳಿ ಮೋಡಗಳ ಕಂಬಳಿ.
**ಸಧ್ಯಕ್ಕೆ ಮನದ ಭಾವನೆಗಳು ಗೋಡೆಯ ಮೇಲಿನ ಚಿತ್ರದಂತೆ ಮನದ ಫ್ರೇಮೊಳಗೆ ಬಂಧಿ.
**ನೀ ಬಂದು ಮನದಲ್ಲಿ ರಂಗೋಲಿಯ ಚುಕ್ಕಿಗಳ ಇಟ್ಟೆ, ಅದಕ್ಕೆ ಬಣ್ಣಗಳ ತುಂಬಿದ್ದು ನನ್ನ ತಪ್ಪೇ ?
**ಗಂಡನ ಭುಜಕ್ಕೊರಗಿ ಧ್ರುವ ನಕ್ಷತ್ರವ ನೋಡುತ್ತಿದ್ದವಳಿಗೆ ನೆನಪಾದವನು, ಹಿಂದೊಮ್ಮೆ ಪ್ರೀತಿಸಿದ್ದ 'ಧ್ರುವ'ನೆಂಬ ಹುಡುಗ.
**ನನ್ನ ಮನದ ನೆರಳು ನಿನ್ನ ನೆನಪು.
**ಮೂಡಣದ ಗಾಳಿಯ ಜೋಗುಳಕೆ ಸೂರ್ಯನಿಗೂ ಎಚ್ಚರವಾಗುವುದು ತಡವಾಗಿಯೇ .!
**ಕಾರಿರುಳ ರಾತ್ರಿಯಲಿ ಬಿದ್ದ ಉಲ್ಕೆಯೊಂದರ ಕಂಡು ಚುಕ್ಕಿಯೊಂದು ನಕ್ಕಿತು.
**ಕಾರಿರುಳ ರಾತ್ರಿಯಲಿ ಬಿದ್ದ ಉಲ್ಕೆಯೊಂದರ ಕಂಡು ಚುಕ್ಕಿಯೊಂದು ನಕ್ಕಿತು.
**ನಿನ್ನ ನಗೆ, ಪ್ರೀತಿ, ಮಾತು, ನೀ ಕೊಟ್ಟ ಕಾಣಿಕೆಗಳು ಯಾವುದು ಬೇಡ ನನಗೆ ನಿನ್ನ ನೆನಪೊಂದರ ಹೊರತು..
**ಕಪಾಟಿನಿಂದ ಇಣುಕುವ ಅಜ್ಜನ ಸ್ವೆಟರ್, ಮಫ್ಲರ್ಗಳು.
**ಮುಂಜಾವಿನಲಿ ಮಂಜಿನ ಮುಸುಕೆಳೆದು ಮಲಗಿಬಿಡುವ ಭೂರಮೆ .
ಹೀಗೆ ಸಾಲುಗಳು ಮ್ಯಾರಥಾನ್ ಓಡುತ್ತಲೇ ಇದ್ದವು ಮನಸಿನಲ್ಲಿ. ಆದರೆ ಹಿಡಿದಿಡುವವರು ಬೇಕಲ್ಲ.! ಮಾಗಿಯ ಚಳಿಯನ್ನು ನಡುಗುತ್ತಲೇ, ಹಬೆಯಾಡುವ ಕಾಫಿಯೊಂದಿಗೆ ಸ್ವಾಗತಿಸಿ. Happy winter :)
Hi! really beautiful series.. some are very artistic.. i liked..
ReplyDeleteGud work,..grammer mistakes in btw.. english words mean while eg:Fashon designer:-Vastra vinyasagara/garti
ReplyDeleteಸೌಮ್ಯ,
ReplyDeleteಫೊಟೊಸ್ ತು೦ಬಾ ಚೆನ್ನಾಗಿವೆ.
ಮಾಗಿಯ ಸಾಲುಗಳು ಇನ್ನೂ ಸು೦ದರವಾಗಿವೆ.
ತು೦ಬಾ ಇಷ್ಟವಾಯಿತು.
sooperro sooper
ReplyDeleteಸೌಮ್ಯ, ಫೋಟೋಗಳು ಹಾಗೂ ಸರಳ ಸುಂದರ ಸಾಲುಗಳು ಇಷ್ಟವಾಯ್ತು...
ReplyDeleteNice photos and good artcile.
ReplyDeleteBeautiful Photo Clicks................!!!!!
ReplyDeleteತುಂಬಾ ಚನ್ನಾಗಿದೆ... ಹೀಗೆ ಬರೆಯುತ್ತ್ತಾ ಇರಿ...
ReplyDeletegood going...
ReplyDeletenice photos and lines soumya .
ReplyDeleteBeatiful snaps and nice lines :)
ReplyDeletethank u Dejemonos :)
ReplyDeletesundara saalugalu matte chitragaLu...
ReplyDeletethank you..
ಸರಳ ಹಾಗು ಸುಂದರ...
ReplyDeleteNature snaps are really good.all d best
ReplyDeleteRAGHU-www.ragat-paradise.blogspot.com
ಮಾಗಿಯ ಸಾಲುಗಳು ಅದ್ಭುತ
ReplyDeleteಫೋಟೋಗಳು ಸುಂದರವಾಗಿವೆ
chitragalu mattu uktigalu sundaravaagive.
ReplyDeleteನಮಸ್ತೆ ಸೌಮ್ಯರಿಗೆ. ನಿಮ್ಮ ಲೇಖನ,ತೆಗೆದ ಚಿತ್ರಗಳು ತುಂಬಾ ಚೆನ್ನಾಗಿದೆ.
ReplyDeletethank u satish. yeah some times i do use english words for the efficiency of the line.
ReplyDeleteಧನ್ಯವಾದಗಳು ಕವಿತಾ,ಶ್ರೀಧರ್,ಜಿತೇಂದ್ರ ,ಶಿವು ಸರ್,ಅನಂತ್ ,no-one :)
ReplyDeleteಪ್ರಗತಿ ಮೇಡಂ,ಸುಮಕ್ಕ,ತೇಜಕ್ಕ,ದಿನಕರ್ ಸರ್ ,ಅಪರಿಚಿತ,Raghu, ಗುರು ಸರ್,ಸೀತಾರಾಮ್ ಸರ್, ಮಹೇಶ್
ReplyDeleteಎಲ್ಲರಿಗೂ ಧನ್ಯವಾದಗಳು :)
ಫೋಟೋಗಳೂ, ಜೊತೆಗೆ ಚಳಿಯನ್ನು ಸ್ವಾಗತಿಸಿದ್ದು ಆಹ್ಲಾದಕರವಾಗಿತ್ತು...:)
ReplyDeleteಕವಿ ಮನಗಳ ರೋಮಾಂಚನ ಗೊಳಿಸುತ್ತದೆ ನಿಮ್ಮ ಈ ಸಾಲುಗಳು..
ReplyDeleteಫೊಟೊಸ್ ತು೦ಬಾ ಚೆನ್ನಾಗಿವೆ.
ReplyDeleteಮಾಗಿಯ ಸಾಲುಗಳು ಇನ್ನೂ ಸು೦ದರವಾಗಿವೆ.
ತು೦ಬಾ ಇಷ್ಟವಾಯಿತು.
ಬಿಸಿ ಕಾಪಿಯನ್ನು ಹೀರುತ್ತಾ ಓದಿದೆ ಬಿಡಿ..
ಚಿತ್ರಗಳು ಸೂಪರ್.... ಮಾಗಿಯ ಚಳಿಯಲ್ಲಿ ಸಾಲುಗಳು ಅದ್ಭುತವಾಗಿ ಮೂಡಿವೆ..ಬಿಸಿ ಕಾಫಿಯ ಕಪ್ ಜೊತೆ ಈ ಸಾಲುಗಳನ್ನು ಬರೆದಿರಾ :-)...?.ಚಳಿಯ ಇನ್ನೊ೦ದು ಮುಖವನ್ನು ತೆರೆದಿಡೋ ಪ್ರಯತ್ನವನ್ನು http://taralegalu.blogspot.com/2010/12/blog-post.html ನಲ್ಲಿ ಮಾಡಿದ್ದೇನೆ. ಸಾದ್ಯವಾದರೆ ಒಮ್ಮೆ ಬೇಟಿ ಕೊಡಿ
ReplyDelete---ಶ್ರೀ:-)
ಹೀಗೇ ಮಾಗಿಯ ಬಗ್ಗೆ ಗೂಗಲಿಸುತ್ತಾ ನಿಮ್ಮ ಬ್ಲಾಗಿಗೆ ಕಾಲಿಟ್ಟೆ. It is really captivating. ಸೊಗಸಾದ ನುಡಿ-ಚಿತ್ರಗಳು.
ReplyDeletegeleya nijavagiyu tumba chanagide
ReplyDelete