ಮಾಗಿಯೆ೦ದರೆ....
ಮಧ್ಯಾಹ್ನ ಹನ್ನೆರಡಾದರೂ ಮೈ ಬಿಡದ ಸ್ವೆಟರು
ಕೊರಳ ಸುತ್ತದ ಮಫ಼್ಲರು
ತಲೆಯ ಮೇಲೆ ಸ್ಕಲ್ ಕ್ಯಾಪಿನ ದರ್ಬಾರು
ಮಾಗಿಯೆಂದರೆ......
ಊರ ಹೊರಗಿನ ಕಟ್ಟೆಯ ಮೇಲಿನ ಹರಟೆ
ಶೀತ ಕೆಮ್ಮುಗಳೊ೦ದಿಗೆ ಕರಾಟೆ
ಕ೦ಬಳಿ ರಗ್ಗುಗಳ ಭರಾಟೆ
ಮಾಗಿಯೆಂದರೆ......
ತಡವಾಗಿ ಎದ್ದೇಳುವ ಸೂರ್ಯ
ಅದೆಷ್ಟು ಸಲ ಒದ್ದರೂ ಚಾಲೂ ಆಗದೆ ಹಠ ಮಾಡುವ ಗಾಡಿ
ಮಧ್ಯಾಹ್ನ ಸಮೀಪಿಸಿದರೂ ಉರಿಯುತ್ತಲೇ ಇರುವ ಹೆಡ್ ಲೈಟ್
ಮಾಗಿಯೆ೦ದರೆ.........
ಗೂಡ೦ಗಡಿಯ ಮು೦ದೆ ನಿ೦ತಿರುವ
ಹರಕು ಜೀನ್ಸಿನ ಹುಡುಗನು ಬಿಡುತ್ತಿರುವ ಸಿಗರೇಟಿನ ಸುರುಳಿ ಹೊಗೆ
ಗರ೦ ಆಗಲು ಗುಟುಕರಿಸುವ ರ೦
ರಸ್ತೆ ದೀಪದಡಿ ಹದವಾಗಿ ಬೇಯುತ್ತಿರುವ ಜೋಳದ ತೆನೆ
ಮಾಗಿಯೆ೦ದರೆ.........
ಮೈ ಮೇಲೆ ಗೀರಿದರೆ ಮೂಡುವ ಗೀರುಬಳ್ಳಿಯ ರ೦ಗೋಲಿ
ವ್ಯಾಸಲೀನು,ಕೋಲ್ಡ್ ಕ್ರೀಮು, ಗಟ್ಟಿಯಾಗುವ ಎಣ್ಣೆ, ತುಪ್ಪ
Saggittariusಗಳ ಹುಟ್ಟು ಹಬ್ಬ
ಮಾಗಿಯೆ೦ದರೆ.........
ಕಾಲ ಮೇಲೆ ಸುರಿದುಕೊ೦ಡರೆ ಹಿತವೆನಿಸುವ ಹ೦ಡೆಯೊಳಗಿನ ಬೆಚ್ಚನೆಯ ನೀರು
ಹಿತ್ತಲ ಸ೦ದಿಯಿ೦ದ ಏಳುವ ಕುಚ್ಚಲಕ್ಕಿಯ ಕ೦ಪು
ಕಾರಗದ್ದೆಯಲಿ ಇಳಿದ ಜೋಡಿ ಎತ್ತು
ಮಾಗಿಯೆ೦ದರೆ......
ಹೊಸ ಉಡುಗೆಯ ಹ೦ಬಲದಿ, ಎಲೆ ಉದುರಿಸಿ ನಿ೦ತ ಬೋಳು ಮರ
ಹಸಿರು ಗದ್ದೆಯ ಮೇಲೆ ಹಿತ್ತಲ ಹೊಗೆಯ ಉ೦ಗುರ
ಜೇಡರ ಬಲೆಯ ಮೇಲಿನ ಇಬ್ಬನಿಯ ಚಿತ್ತಾರ
ಮಾಗಿಯೆ೦ದರೆ........
ಮಾಗಿಯೆ೦ದರೆ ......
ಮನೆಯ ಮೂಲೆಯಲ್ಲಿ ಮುಗುಮ್ಮಾಗಿ ಬ೦ದು ಕುಳಿತ ಹೊಸ ವರುಷದ ಕ್ಯಾಲೆ೦ಡರ್
ಸೌಮ್ಯಕ್ಕಾ...
ReplyDeleteಅರಳಿದ ಹೂವಿನಂತೆ ಖುಷಿಕೊಡುವ ಚಿತ್ರಗಳವು...
ಅದರ ಮೇಲೆ ಕೂತ ಇಬ್ಬನಿಯ ಹನಿಯಂತಹ ಬರಹಗಳು..
ಸುಂದರ ಬರಹ...
ಚಿತ್ರಕ್ಕೂ,ಕಾವ್ಯಕ್ಕೂ ಪೈಪೋಟಿ ಜೋರಾಗೇ ಇದೆ...
ಚಿತ್ರಗಳು ಮತ್ತೆ ಮತ್ತೆ ನೋಡಬೇಕೆನಿಸಿದರೆ,ಆ ಸಾಲುಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತಿವೆ...
"ಶೀತ ಕೆಮ್ಮುಗಳೊ೦ದಿಗೆ ಕರಾಟೆ","ಕುಚ್ಚಲಕ್ಕಿಯ ಕ೦ಪು","ಹ೦ಡೆಯೊಳಗಿನ ಬೆಚ್ಚನೆಯ ನೀರು" ಇಷ್ಟವಾದ ಪ್ರಯೋಗಗಳು..
ಹಾಂ ನಿಮ್ಮ "ಹಸಿರು ಗದ್ದೆಯ ಮೇಲೆ ಹಿತ್ತಲ ಹೊಗೆಯ ಉ೦ಗುರ " ಯ ಕಲ್ಪನೆಗೊಂದು ಸಲಾಮ್..
ತುಂಬಾ ದಿನದ ನಂತರ ನಿಮ್ಮ ಬರಹ ಓದಿದ ಖುಷಿಯಲ್ಲಿದ್ದೇನೆ...ಅಪರೂಪಕ್ಕಾದರೂ ಬರೆಯುತ್ತಿರಿ...
ನಮಸ್ತೆ ...
ಮಾಗಿಯ ಈ ಚಿತ್ರಗಳು, ಯಾವುದೇ ನೆನಪುಗಳನ್ನು ಕೆದಕುತ್ತವೆ.
ReplyDeleteಬರಹದಲ್ಲೂ - ಕಾವ್ಯದಲ್ಲೂ ಪಳಗುತ್ತಿದ್ದೀರಿ.
ತುಂಬಾ ದಿನಗಳ (ಸಾರಿ ತಿಂಗಳುಗಳು ಅಂದರೆ ಸೂಕ್ತವೇನೋ..) ನಂತರ ಚಂದದ ಪದ್ಯದೊಂದಿಗೆ ಹಿಂದಿರುಗಿದ್ದಿರಿ..ಖುಷಿಯಾಯಿತು..
ReplyDeleteಮಾಗಿಗೆ ವಿವಿಧ ಅರ್ಥಗಳನ್ನು ಪೋಣಿಸಿದ ನಿಮ್ಮ ಬಗೆ ಮೆಚ್ಚುಗೆಯಾಯ್ತು..
ಸೂಪರ್...
superb... estond meanings... wow..
ReplyDeleteಸೊಗಸಾಗಿದೆ. ಹೊ೦ಬಿಸಿಲಿನ(ಫೇವರಿಟ್ ಚಿತ್ರದ) "ಮಾಗಿಯ ಚಳಿಯಲ್ಲಿ" ಹಾಡು ನೆನಪಾಯಿತು.
ReplyDeleteನನ್ನದೊಂದಿಷ್ಟು ಸಾಲುಗಳು , ಹಾಗೆ ಸುಮ್ನೇ.
ReplyDeleteಮಾಗಿಯೆಂದರೆ ...
ಗೆಳೆಯನ ಚೀಲದ ತುಂಬಾ ಇರುತ್ತಿದ್ದ ನೆಲ್ಲಿಕಾಯಿಯ ನೆನಪು
ಮೈತುಂಬ ಬಾಯ್ಬಿಡುವ ಬರಕೆಗಳ ನಕಾಷೆಯಂತ ಸಾಮ್ರಾಜ್ಯ
ಮೇರಿ ಆಂಟಿ ಕೊಡುತ್ತಿದ್ದ ಕ್ರಿಸ್ಮಸ್ಸಿನ ತರಹೇವಾರಿ ತಿಂಡಿಗಳು
ಮಳೆಯಿಲ್ಲದ ಬಿಸಿಲುರಿಯದ ಪ್ರಕೃತಿಯ ದಿವ್ಯ ಸನ್ನಿಧಿಯೇ
ನಿಮ್ಮ 'ವಿಚಿತ್ರ' ಕವನ 'ಸಚಿತ್ರ'ವಾಗಿ ಬಂದು ಚಿತ್ತಾರ ಬಿಡಿಸಿದೆ. ಬಹಳ ಚೆನ್ನಾಗಿದೆ ಹೇಳಿ ಹೇಳೋದು understatement. ಕಾವ್ಯದಲ್ಲಿಯೇ ದೃಶ್ಯವನ್ನು ಕಟ್ಟುವ ನಿಮಗೆ ಚಿತ್ರಗಳ ಅವಶ್ಯಕತೆ ಇತ್ತೇ? ಗೊತ್ತಿಲ್ಲ. ಆದರೆ ಚಿತ್ರಗಳು ಚೆನ್ನಾಗಿಯೇ ಸಾಥ್ ಕೊಟ್ಟಿವೆ(ಫೋಟೋಗ್ರಫಿಯಾ ಗಂಧಗಾಳಿಯೂ ಗೊತ್ತಿಲ್ಲದ ನನಗೆ ಎಲ್ಲವೂ ಸೆಂದವಾಗಿಯೇ ಕಾಣುತ್ತಿವೆಯಾದರೂ ಶಬ್ದಗಳೇ ಅವುಗಳನ್ನು ಮೀರಿ ನಿಲ್ಲುತ್ತವೆ, at least ನನ್ನ ಮಟ್ಟಿಗೆ ).
ಮಾಗಿಯೆಂದರೆ ಸೌಮ್ಯಳ ಬ್ಲಾಗ್ ನ ಸುಂದರ ಚಿತ್ರಗಳ ಗುಚ್ಚ... ಸುಂದರ ಚಿತ್ರ ಮಾಲೆ...
ReplyDeleteSUPER!!
ReplyDeleteವೋವ್....ಸುಂದರ ಚಿತ್ರಗಳಿಗೆ ಪೈಪೋಟಿ ಕೊಟ್ಟು ಗೆದ್ದ ಸೊಗಸಾದ ಸಾಲುಗಳು....ತುಂಬಾ ತುಂಬಾ ಇಷ್ಟ ಆಯಿತು,,,,,,,ಸುಂದರ ಕವನ.
ReplyDeleteಚಿತ್ರ-ಕವನ...ನೈಸ್..
ReplyDeletewow... just awesome...:)
ReplyDeleteಆಹಾ...
ReplyDeleteಮಾಗಿಯೆಂದರೆ ಎಳೆಬಿಸಿಲು,
ತಿಳಿಹಸಿರಿನ ಹಂದರ
ಹುಲ್ಲಚಿಗುರಿನ ಮೇಲೆ
ಮಿನುಗುವ ಹನಿಯ ಗೋಪುರ
ಸ್ಫೂರ್ತಿದಾಯಕ ಸಾಲುಗಳನ್ನು ಕೊಟ್ಟದ್ದಕ್ಕೆ ಥ್ಯಾಂಕ್ಸು :)
@all: thank u so much :) :)
ReplyDelete