ಸೀದಾ ಸಾದಾ ಹುಡುಗನೊಬ್ಬನ ಮನದ ತಳಮಳ ಪ್ರೀತಿಯ ಕಲರವ . ಓದಿ ನೋಡಿ ಹೇಗಿದೆ ಹೇಳಿ.
ಜೋಡಿ ನಕ್ಷತ್ರಗಳ ಕಿವಿಯೋಲೆಯ ಹುಡುಗಿಗೆ,
ಹೇಗಿದೀಯೇ ? ಚಿಕ್ಕ ಚಿಕ್ಕ ಮೊನಚು ಕಂಗಳ ಇನ್ನೂ ಕಿರಿದಾಗಿಸಿ ನಗುತ್ತಿರಬೇಕು. ಈ ಸ್ನೇಹ ಅದ್ಯಾವಾಗ ಪ್ರೀತಿಯಾಗಿ ಬದಲಾಗುತ್ತದೆ ಎಂದೆ ತಿಳಿಯುವುದಿಲ್ಲವಂತೆ ಹೌದೇನೆ ? ಸಾಹಿತ್ಯದ ಗಂಧ ಗಾಳಿ ಇಲ್ಲದ ಹುಡುಗ ಮನದ ಭಾವನೆಗಳಿಗೆ ಅಕ್ಷರ ರೂಪ ಕೊಡುವಷ್ಟರ ಮಟ್ಟಿಗೆ ಬಂದಿದ್ದಾನೆ ಎಂದರೆ. ಅದೆಂಥ ಪ್ರೀತಿಯ ಅನುಭೂತಿಯಲ್ಲಿರಬೇಕು ಆತ ಅಲ್ವಾ ?
ಹೌದೇ ಹುಡುಗಿ ಮೊನ್ನೆ ಬಸ್ಸಿನಲ್ಲಿ ಶಿರಾಡಿ ಘಟ್ಟವಿಳಿವಾಗ ನನ್ನೆದೆಯೊಳಗೆ ನಿನ್ನದೇ ನೆನಪುಗಳ ವರ್ಷಧಾರೆ. ನೆನಪುಗಳ ಮೆರವಣಿಗೆಯಲ್ಲಿ ನಿನ್ನದೇ ಅಂಬಾರಿ.!
ಎಳೆ ಬಿಸಿಲ ಕೋಲಿಗೆ ಮಿರುಗುತ್ತಿರುವ ಚಿಗುರುಗಳು, ನೀಲ ಗಗನವ ಮುಟ್ಟಲು ತವಕಿಸುವ ಎತ್ತರದ ಮರಗಳು. ಆ ನೀರ ಪಸೆ, ಮಣ್ಣ ಕಂಪು, ನೀಲಿ ಬೆಟ್ಟ, ಬೆಳ್ಳಿ ಮೋಡಗಳು, ಥೇಟ್ ನಿನ್ನ ಮಾತುಗಳಂತೆ ಕೇಳುವ, ರಸ್ತೆಯುದ್ದಕ್ಕೂ ಪಕ್ಕದಲ್ಲೇ ಹರಿಯುವ ನದಿಯ ನಾದ. ಇವೆಲ್ಲವೂ ರಾಡಿ ರಾಡಿಯಾದ ಶಿರಾಡಿಯ ರಸ್ತೆಯ ಪರಿವೆಯೇ ಇಲ್ಲದಂತೆ ಮಾಡಿ ಬಿಟ್ಟಿದ್ದವು ನನಗೆ.!
ಶಿರಾಡಿ ಘಟ್ಟದಲ್ಲಿ ದ್ವಿಚಕ್ರ ವಾಹನವೋಡಿಸುವ ಮಜವನ್ನು ಅನುಭವಿಸುತ್ತಿದ್ದ ಹುಡುಗ ಬಸ್ಸಿನಲ್ಲಿ ಕುಳಿತು ಕವಿಯಂತೆ ಆಲೋಚಿಸುತ್ತಿದ್ದನೆಂದರೆ ?! ಪ್ರಕೃತಿಯನ್ನು ಮಗುವಿನ ಕುತೂಹಲದಲ್ಲಿ ನೋಡುತ್ತಿದ್ದನೆಂದರೆ ? ಅದ್ಯಾವ ಮಟ್ಟಕ್ಕೆ ಬದಲಾಗಿರಬೇಡ ಹೇಳು ನಾನು? 'ಪ್ರೀತಿ ಪ್ರಕೃತಿಯಂತೆ. ಅಲ್ಲಿ ಸೌಂದರ್ಯವಿದೆ, ನವನವೀನತೆಯಿದೆ, ದುರಂತವಿದೆ', ಎಂದೆಲ್ಲ ಅನಿಸುತ್ತಿತ್ತು. Bike rideನ ಥ್ರಿಲ್ಲಿಗಿಂತ ಆ ಶಿರಾಡಿ ಘಟ್ಟದಲ್ಲಿ ನಿನ್ನ ನೆನಪುಗಳ ಮಳೆಯಲ್ಲಿ ಮಿಂದೇಳುವುದು ಹಿತವೆನಿಸುತ್ತಿತ್ತು.
ಇನ್ನೂ ನೆನಪಿದೆ ಹುಡುಗಿ ನನ್ನ ಬಲಗೈ ಹಿಡಿದು ನನ್ನ ಹೆಗಲಿಗೆ ನೀನು ಒರಗಿದ್ದ ದಿನ, ಅದೇ ಶಿರಾಡಿ ಘಟ್ಟದಲ್ಲಿ. ತೊಟ್ಟಿಲಿನಂತೆ ತೂಗುತ್ತಿದ್ದ ಬಸ್ಸು ನಿನ್ನ ನಿದ್ದೆಯ ಲೋಕಕ್ಕೆ ಜಾರಿಸಿ ಬಿಟ್ಟಿತ್ತು. ಒಮ್ಮೆ ದಿಟ್ಟಿಸಿದ್ದೆ ನಿನ್ನ. ನಿದ್ರಾದೇವಿಯ ಮಡಿಲಲ್ಲಿ ಥೇಟ್ ಮಗುವೇ ನೀನು.! ನಿನ್ನ ನೀಳ ಕಣ್ರೆಪ್ಪೆಗಳು, ನನ್ನ ಬಲ ಕೈಯನ್ನು ಮಗುವಿನಂತೆ ಹಿಡಿದಿದ್ದ ನೀಳ ಚಿಗುರು ಬೆರಳುಗಳ ನಿನ್ನ ಆ ಕೈ. ಅಲೆ ಅಲೆಯಾಗಿ ಮುಖದ ಮೇಲೆಲ್ಲಾ ಹರಡಿದ್ದ ತಲೆಗೂದಲು, ಆ ಕೂದಲ ರಾಶಿಯಿಂದ ಇಣುಕುತ್ತಿದ್ದ, ರಾತ್ರಿಯಾಗಸದಲ್ಲಿ ತಾರೆಗಳ ನೆನಪಿಸುವ , ಜೋಡಿ ನಕ್ಷತ್ರಗಳ ಕಿವಿಯೋಲೆ. ಅದನೊಮ್ಮೆ ಸ್ಪರ್ಶಿಸುವ ಹಂಬಲವನ್ನು ಅದ್ಹೇಗೋ ತಡೆ ಹಿಡಿದಿದ್ದೆ. ಮೊದಲ ಬಾರಿಗೆ ಹುಡುಗಿಯೊಬ್ಬಳ ಮೊಗವನ್ನು ಹೀಗೆ ದಿಟ್ಟಿಸಿದ್ದಿರಬೇಕು. ಅದೆಷ್ಟು ತೊಂದರೆ ಕೊಡುತ್ತಿತ್ತು ನಿನ್ನ ಮೊಗದ ಮೇಲೆ ಹಾರಾಡುತ್ತಿದ್ದ ಕೂದಲ ರಾಶಿ. ಅದರಿಂದಲೇ ಅಲ್ಲವೇನೆ ನಿನ್ನ ನಿದ್ದೆಗೆ ಭಂಗವಾಗಿ, ಎಚ್ಚೆತ್ತು. 'ನಿದ್ದೆಗಣ್ಣಿನ ನಗು' ನಕ್ಕು. ತುಸು ಆಚೆ ಜರುಗಿ ಕಿಟಕಿಯತ್ತ ಮುಖ ಮಾಡಿ ಪ್ರಕೃತಿಯ ಹಂದರದಲ್ಲಿ ಜಾರಿದ್ದು. ಜಗತ್ತಿನ ಕುತೂಹಲವನ್ನೆಲ್ಲ ತುಂಬಿಕೊಂಡ ಬೊಗಸೆ ಕಂಗಳಲ್ಲಿ ಶಿರಾಡಿ ಘಟ್ಟದ ಪ್ರತಿಬಿಂಬವನ್ನು ಕಾಣಬೇಕೊಮ್ಮೆ ಅನಿಸಿತ್ತು.!
ಬೈಕ್ ಇರುವುದೇ ಓಡಿಸಲಿಕ್ಕೆ ಎಂದುಕೊಂಡು, ಕೂದಲನ್ನು ಬೇಕಾಬಿಟ್ಟಿ ತಿದ್ದಿಕೊಂಡು, ಮಣಿಸರಗಳನ್ನು ಸಿಕ್ಕಿಸಿಕೊಂಡು, heavy metal music ಕೇಳಿಕೊಂಡು, messi- football ಅಂತ ಆರಾಮಾಗಿ ಇದ್ದ ನನ್ನಲ್ಲಿ ಅದೆಂಥ ಬದಲಾವಣೆ ನೋಡು..!
ಈಗ ನನ್ನ ಐಪಾಡ್ ತುಂಬೆಲ್ಲ ಭಾವಗೀತೆಗಳೇ! ನೀಲಿ ಬೆಟ್ಟ, ಕೊನೆಯಿಲ್ಲದ ಗಗನ,
ಬೋರ್ಘರೆವ ಸಮುದ್ರ.ಮುಂಜಾನೆಯ ಮಂಜು, ಸೂರ್ಯೋದಯ ಎಲ್ಲವೂ ಇಷ್ಟ
ಆಗಲಿಕ್ಕೆ ಶುರುವಾಗಿದೆ ನೋಡು.! ನಾನು ನೀನಾಗುತ್ತಿದ್ದೆನಾ ? ಅದೆಲ್ಲಿ ಸಾಧ್ಯ? ನಿನ್ನ ಆ ಮಗುವಿನಂಥ ನಗು, ಮನಸು ನನಗೆಲ್ಲಿಂದ ಬರಬೇಕು ಹೇಳು?
ಬೋರ್ಘರೆವ ಸಮುದ್ರ.ಮುಂಜಾನೆಯ ಮಂಜು, ಸೂರ್ಯೋದಯ ಎಲ್ಲವೂ ಇಷ್ಟ
ಆಗಲಿಕ್ಕೆ ಶುರುವಾಗಿದೆ ನೋಡು.! ನಾನು ನೀನಾಗುತ್ತಿದ್ದೆನಾ ? ಅದೆಲ್ಲಿ ಸಾಧ್ಯ? ನಿನ್ನ ಆ ಮಗುವಿನಂಥ ನಗು, ಮನಸು ನನಗೆಲ್ಲಿಂದ ಬರಬೇಕು ಹೇಳು?
ಪಕ್ಕಾ practical ಸ್ವಭಾವದ, ಭಾವನೆಗಳೇ ಇಲ್ಲದಿದ್ದಂಥ ಹುಡುಗನ ಮನದಲ್ಲೀಗ ಭಾವನೆಗಳ ಮುಂಜಾವು. ನಿನ್ನ ನೆನಪುಗಳ ಕಚಕುಳಿ. ನಿನ್ನ ಹುಸಿಮುನಿಸು, ಮುಖವೂದಿಸುವ ಪರಿ, ಕಣ್ಣುಗಳಲ್ಲೇ ಕೊಲ್ಲುವ ದಾಟಿಗೆ ಸೋತು ಹೋಗಿದ್ದೇನೆ. ಮನಸು ಸ್ನೇಹದಿಂದ ಪ್ರೀತಿಯ ಕಡೆಗೇ ಜಾರುತ್ತಿದೆಯಲ್ಲೇ..!
ಹೌದು ಆ ದಿನವೇ ಕೇಳಬೇಕು ಅಂದು ಕೊಂಡಿದ್ದೆ ಅದ್ಯಾಕೆ ಕಾಡಿಗೆಯ ಹಚ್ಚುತ್ತೀಯೇ ನೀನು ? ನಿಜ್ಜ ಹೇಳಲಾ? ಯಾಕೋ ಗೊತ್ತಿಲ್ಲ ನಿನ್ನ ಕಾಡಿಗೆಯ ಕಂಗಳಿಗಿಂತ. ಆ ಮುಗ್ಧ ಅಬೋಧ ಕಂಗಳೇ ಇಷ್ಟ ಮಾರಾಯ್ತಿ.!
ಕಾಡು ಹೂಗಳ ಕಂಪಿಗೆ ನಿನ್ನ ನೆತ್ತಿಯ ಘಮದ ನೆನಪು.! ನನ್ನ ಭುಜಕ್ಕೂ
ನಿನ್ನದೇ ತಲೆ ಬೇಕಂತೆ ನೋಡು.
ಕೊನೆಗೂ ಶಿರಾಡಿ ಘಟ್ಟದ ಆರ್ದ್ರತೆಗೆ ನನ್ನ ಮನದಲ್ಲೂ ಪ್ರೀತಿಯ ಬೀಜ ಮೊಳೆತಿದೆ. ಜೋಡಿ ಕಿವಿಯೋಲೆಗಳ ಮೇಲೆ ಇಳಿಬೀಳುವ ನಿನ್ನ ಜೊಂಪೆ ಕೂದಲುಗಳ ಸರಿಸಬೇಕಿದೆ. ಜೀವನ ಪೂರ್ತಿ ನಿನ್ನದೇ ಜೊತೆ ಬೇಕು ಅನಿಸುತ್ತಿದೆಯಲ್ಲೇ. ಅರ್ಥ ಮಾಡ್ಕೊತೀಯ ಅಲ್ವಾ ?
ನಿನ್ನ ಪ್ರೀತಿಯ ಮಳೆಯಲ್ಲಿ ನೆನೆಯ ಬಯಸುವ
ಒರಟ
nice letter ..... i like it ...
ReplyDeleteಓದುತ್ತಿದ್ದಂತೆ ಮನಸ್ಸು ತೇವವಾಯಿತು! ಪ್ರೀತಿಯು ಮನದೊಳಗೆ ನುಸುಳಿದ ಎಳೆಯನ್ನು ಚೆನ್ನಾಗಿ ಬಿಡಿಸಿ ವಿವರಿಸಿದ್ದಿಯ. ನಿನ್ನ ಬರವಣಿಗೆ ಎಂದಿನಂತೆ ಆತ್ಮೀಯವಾಗಿದೆ! ಇಷ್ಟ ಆಯಿತೆ ಹುಡುಗಿ! ಒರಟ ಯಾರೆಂದು ನಾನಂತು ಕೇಳ್ತಾ ಇಲ್ಲ ನೋಡು ;)
ReplyDeleteಬರೀ ’ಚೆನ್ನಾಗಿದೆ’ ಎಂದರೆ ನಿಮ್ಮ ಬರಹವನ್ನು ಕಡಿಮೆ ತೂಗಿದಂತಾಗಬಹುದು, ಅದ್ಭುತವವಾಗಿದೆ, ಯಾವಾಗಿನ ಹಾಗೇ. ಸುಮಾರು ದಿನವಾಯ್ತು ನಿಮ್ಮ ಬರಹವನ್ನು ಓದಿ ಎನ್ನಿಸುತ್ತಿತ್ತು, ಮತ್ತೆ ಬರೆದಿರಿ ನೀವು. ಮನಸ್ಸು ತೇವವಾಗಿದ್ದು ಹೌದು. ನಿಮ್ಮ ಫ಼್ಯಾನು ನಾನು. ಸಮಯವಾದರೆ ಬಂದು ಹೋಗಿ ನಮ್ಮನೆಗೆ.http://subrahmanyahegde.blogspot.com/
ReplyDeleteನಿಮ್ಮ ಬರಹ ಓದಿ `ಪೂರ್ಣಾ೦ತರಿಕ ಪ್ರತಿಫಲನ' ದ (total internal reflection ) ನೆನಪಾಯ್ತು! ಅಭಿನ೦ದನೆಗಳು.
ReplyDeleteThank u sapna :)
ReplyDeleteಒರಟ ಯಾರೂ ಇಲ್ಯೇ ಸುಮನಕ್ಕ :) ಆದರೂ ಒರಟೊರಟಾಗಿ ಇರೋವ್ರು ಇಷ್ಟಾ ..! ;) thank u so much :)
ReplyDeleteಧನ್ಯವಾದಗಳು ಸುಬ್ರಮಣ್ಯರವರೆ :) ಇಲ್ಲಿ ಬಂದು ಅಭಿಪ್ರಾಯ ತಿಳಿಸಿದ್ದಕ್ಕೆ. :) ಖಂಡಿತ ಬರುತ್ತೇನೆ. ಓದುತ್ತೇನೆ.
ReplyDeleteಪೂರ್ಣಾ೦ತರಿಕ ಪ್ರತಿಫಲನ... :)) ಚೆನ್ನಾಗಿ ಹೇಳಿದಿರಿ ಪ್ರಭಾಮಣಿ ಮೇಡಂ. ನನ್ನ ವಾಯದ ಎಲ್ಲ ಹುಡುಗಿಯರಿಗೂ ಇಂಥವನೇ ಒಬ್ಬ ಹುಡುಗ ಪ್ರೀತಿಸಬೇಕೆನ್ನುವುದು ಸಹಜ ತುಡಿತ ಎಂದುಕೊಂಡಿದ್ದೇನೆ:) ಧನ್ಯವಾದಗಳು :)
ReplyDeleteoraTana muddu patra tumbaa chennaagide...
ReplyDeleteಒರಟ ನಿಮ್ಮೆದುರು ಬಂದು ಹೀಗೆ ಭಾವಗಳನ್ನು ಹರಿವಿಟ್ಟು ಕುಳಿತುಬಿಟ್ಟಿದ್ದಾನೇನು..?!
ReplyDeleteಅಷ್ಟು ಚೆನ್ನಾಗಿ ಹುಡುಗನ ಮನಸ್ಸೊಳಗೆ ಇಳಿದು ಬಿಟ್ಟಂತೆ ವಿವರಿಸಿದ್ದಿರಲ್ಲ....ಇಷ್ಟವಾಯ್ತು ಅಕ್ಕಾ...
ಪ್ರೀತಿಯ ಮಧುರತೆಯನ್ನು ನಿಮ್ಮ ಬರಹದಲ್ಲಿ ಆಸ್ವಾದಿಸುವುದು ಇನ್ನು ಮೃದು ಮಧುರ....
ಸೂಪೆರ್ಬ್...
ಚೆನ್ನಾಗಿದೆ:-) ಶಿರಾಡಿ ಘಾಟಿಯಲ್ಲಿ ಬೈಕು ಓಡಿಸುತ್ತಿದ್ದ ಹುಡುಗ ಬಸ್ಸಲ್ಲಿ ಹೋಗೋಕೆ ಇಷ್ಟಪಡುವಂತ ಬದಲಾವಣೆ!!! .. ಪ್ರೀತಿ ಅನ್ನೋದೇ ಹಾಗಾ ಅಂತ.. ಸುಮಾರಷ್ಟು ಇಂತಹ ಬದಲಾವಣೆಗಳನ್ನು ನಮ್ಮ ಸುತ್ತಮುತ್ತಲೇ ನೋಡಿರುತ್ತೇವೆ ..
ReplyDeleteಸೌ......
ReplyDeleteನಿಜವಾಗಿಯೂ ಪ್ರೀತಿಯಲ್ಲಿ ಮಿಂದಂತಾಯ್ತು.....
ಹೂಂ. ಪ್ರೀತಿ ಎಲ್ಲರನ್ನೂ ಮೃದುವಾಗಿಸುತ್ತಂತೆ.....
ನಿನ್ನ ಬರಹವೂ ಥೇಟ್ ಪ್ರೀತಿಯಂತೆಯೇ......
ಮೃದು ಒಂದೇ ಅಲ್ಲ ಮಧುರವಾಗಿಸಿಬಿಟ್ಟಿದೆ....
rhank u for giving a ಸಕತ್ article
Thank u Dinakar sir :)
ReplyDeleteನಿಮ್ಮ ಬ್ಲಾಗ್ ಸುಂದರವಾಗಿದೆ ಸೌಮ್ಯ. ನಿಮ್ಮ ಚಿತ್ರಗಳೂ ಸಹ (FB ನಲ್ಲಿ ನೋಡಿದೆ)
ReplyDeleteಹಲವು ಪೋಸ್ಟ್ಗಳನ್ನ ಓದಿದೆ, ತುಂಬಾ ಚೆಲುವಾದ ಸಾಲುಗಳನ್ನ ಬರಿದಿದ್ದಿರಿ.
ಹೀಗೆ ಬರೆಯುತ್ತಿರಿ.
ನಿಮ್ಮನ್ನ ಹೆಚ್ಚೆಚ್ಚು ಕನಸಗಳು ತಾಕಲಿ :)
ಸ್ವರ್ಣ
ಈ ಲೇಖನ ತು೦ಬಾ ಚನ್ನಾಗಿದೆ. ಯಾವುದೇ ವ್ಯಕ್ತಿ ಪ್ರೀತಿಯಲ್ಲಿ ಬಿದ್ದಾಗ ಅದು ಅದ್ಭುತ ಅನುಭೂತಿಯನ್ನು ನೀಡುತ್ತದೆ ಎ೦ದು ಕೇಳಿದ್ದೆ, ನಿಮ್ಮ ಲೇಖನ ಓದಿದ ಮೇಲೆ ನಿಜ ಎನಿಸುತ್ತಿದೆ...........:) ಧನ್ಯವಾದಗಳು ಈ ಅದ್ಭುತ ಲೇಖನಕ್ಕೆ....
ReplyDeleteಚೆನ್ನಾಗಿ ಬರೆಯುತ್ತೀರಿ ಸೌಮ್ಯಾ.. ನಿಮ್ಮ ಬ್ಲಾಗಿನ ಬರಹಗಳನ್ನೆಲ್ಲಾ ಓದಿದೆ. ಸಮಯವಿದ್ದರೆ ನನ್ನ ಮನೆಗೂ ಒಮ್ಮೆ ಬನ್ನಿ..:)
ReplyDeleteanusha-ale.blogspot.com
ಈ ಪತ್ರರೂಪದ ಬರಹ; ಕವನದ ಲಯ ಪಡೆದುಕೊಂಡಿದೆ. ಪ್ರೇಮದ ಆರ್ದ್ರತೆಯನ್ನು ಓದುಗರ ಅರಿವಿಗೂ ಮುಟ್ಟಿಸುವಲ್ಲಿ ಸಫಲವಾಗಿದೆ.
ReplyDeletesakat aagide......nim padagala jnana ke salam....odta idre time agidde gottagalla....superb!!!!
ReplyDeletesakat aagide......nim padagala jnana ke salam....odta idre time agidde gottagalla....superb!!!!
ReplyDelete'ಪ್ರೀತಿ ಪ್ರಕೃತಿಯಂತೆ. ಅಲ್ಲಿ ಸೌಂದರ್ಯವಿದೆ, ನವನವೀನತೆಯಿದೆ, ದುರಂತವಿದೆ',ಎನ್ನುವ ವಾಕ್ಯ ಸತ್ಯವಾದದ್ದು. ಸುಂದರವಾದ ಪತ್ರ ಬರಹಕ್ಕೆ ಧನ್ಯವಾದ...
ReplyDeleteಒಟ್ಟಿನಲ್ಲಿ ಒಬ್ಬ ಒರಟ ಹುಡುಗನ ಮನಸ್ಸಿನೊಳಗೇ ಇಳಿದಿದ್ದೀರಿ ಎಂದಾಯಿತು.. ಹುಡುಗನ ಭಾವನೆಗಳಿಗೆ ಚೆನ್ನಾಗಿ ಪುಟವಿಟ್ಟಿದ್ದೀರಿ. ಬೈಕಿನಿಂದ ಬಸ್ಸಿನೆಡೆಗಿನ ಒಲವನ್ನು ಚೆನ್ನಾಗಿ ವಿವರಿಸಿದ್ದೀರಿ.
ಧನ್ಯವಾದಗಳೊಂದಿಗೆ,
ಗೆಳೆಯ
ಅನಂತ್ ಹೆಗಡೆ
ಸೌಮ್ಯನಿಗೆ ಒರಟನ ಅಭಿನಂದನೆಗಳು... ಬಹಳ ಚನ್ನಾಗಿದೆ, ಈ ವಿರೋಧಾಭಾವ ಸಾಮಾನ್ಯ ಅಂದ್ಕೋತೀನಿ ಅದೂ ಹೆಸರಲ್ಲೂ ಆಗಿದೆ ಅಷ್ಟೇ ...!! ಸೌಮ್ಯ ಲೈಕ್ಸ್ ಒರಟ... ಬಳಸಿದ ಭಾಷೆ ಮತ್ತು ಶೈಲಿ ಇಷ್ಟ ಆದವು.
ReplyDelete