Thursday, July 29, 2010

ಜೀವನ್ಮುಖಿ .......!


ಅವನೊಬ್ಬ ಕಲಾವಿದ. ಐವತ್ತರ ಆಸುಪಾಸಿನ ವಯಸ್ಸಿರಬಹುದು ಅವನದು. ನಗರದ ಗಿಜಿಗಿಜಿ ಜನಜೀವನದ ಪರಿಧಿಯಿಂದ ದೂರವಿರುವ ಕಡಲ ತಡಿಯ ಪುಟ್ಟ ಮನೆಯೊಂದರಲ್ಲಿ ವಾಸ. ಜನರ ಮುಖಗಳನ್ನು ಭಾಗಶಃ ಮರೆತಂತಿದ್ದಾನೆ. ಕುಂಚ ಬಣ್ಣಗಳೊಂದಿಗೆ ಆಟ, ಒಡನಾಟ ಎಲ್ಲ. ಹಸಿವಾದದ್ದು ನೆನಪಾದರೆ ಏನಾದರೂ ತಿನ್ನುತ್ತಾನೆ, ಇಲ್ಲದಿದ್ದರೆ ಅದೂ ಇಲ್ಲ.!

ಉದ್ದನೆಯ ಕೋಲು ದೇಹಕ್ಕೆ ತಗುಲುಹಾಕಿದಂತಿರುವ ಬಣ್ಣ ಮಾಸಿದ T-shirt, ನೀರು ಕಂಡು ಅದೆಷ್ಟೋ ತಿಂಗಳಾಗಿರುವ ಒಂದು pant. ಅರೆಬರೆ ಗಡ್ಡದ ಮರೆಯಲ್ಲಿ ಇಣುಕುವ ಹೊಳಪುಳ್ಳ ಎರಡು ಕಂಗಳಲ್ಲಿ ಅದೇನೋ ಚಡಪಡಿಕೆ, ನಿರೀಕ್ಷೆ, ಅಸಹಾಯಕತೆ, ನಶೆ ಎಲ್ಲ ಭಾವಗಳ ಮಿಶ್ರಣ. ಕೆಲವರಿಗೆ ಅವನ ಪರಿಚಯವಿದೆ ನಗರದಲ್ಲಿ ಅದೇನೇನೋ ಕಥೆಗಳು ಅವನಹಿಂದೆ. ಹಿಂದೊಮ್ಮೆ ಪ್ರಖ್ಯಾತನಾಗಿದ್ದ ತನ್ನ ವಿಶಿಷ್ಟ ಶೈಲಿಯ ಚಿತ್ರಗಳಿಂದ.

ಅವನ ಚಿತ್ರಗಳೇ ಹಾಗೆ, ಮಾನವನ ಮನದಾಳದ ಭಾವನೆಗಳನ್ನು ನವರಸಗಳನ್ನು ಪ್ರಕೃತಿಯೊಂದಿಗೆ ಬೆರೆಸುತ್ತಿದ್ದ. ಬಾಡಿದ ಕಮಲಗಳು, ಸೋತ ತಾಳೆಮರ ಅವನ ಮನದ ಬೇಸರದ ಭಾವಗಳಿಗೆ;ಅಸಹಾಯಕತೆಗೆ ಬಲೆಯೊಳಗಿನ ಮೀನು, ಹಕ್ಕಿಗಳು; ಮನದೊಳಗಿನ ಸಿಟ್ಟು ಸೆಡವುಗಳಿಗೆ ಭುಗಿಲೆದ್ದ ಜ್ವಾಲಾಮುಖಿ, ರೌದ್ರಾವತಾರದ ಸಮುದ್ರದಲೆಗಳು;ಒಮ್ಮೊಮ್ಮೆ ಮೂಡುವ ಪ್ರೀತಿಗೆ ಕೊಳದಲ್ಲಿ ಜೊತೆಯಾಗಿ ಈಜುತ್ತಿರುವ ಹಂಸಗಳು ಹೀಗೆ ಹಲವಾರು ಭಾವಗಳು ಕುಂಚದಲ್ಲಿ ಮೂಡುತ್ತಿದ್ದವು.

ಕೆಲವು ಕಲಾಕೃತಿಗಳನ್ನು ಮಾರುತ್ತಿದ್ದ, ಇನ್ನು ಕೆಲವು ಅವನ ನೆಚ್ಚಿನ ಕಲಾಕೃತಿಗಳನ್ನು ಬಚ್ಚಿಟ್ಟಿದ್ದ. ಇತ್ತೀಚಿಗೆ ವಿಪರೀತ ಎನ್ನುವಷ್ಟು ಖಿನ್ನತೆಗೆ ಒಳಗಾಗಿದ್ದ ಅವನಲ್ಲಿ ಜೀವನಪ್ರೀತಿ,ಸ್ಪೂರ್ತಿಯೇ ಕಳೆದುಹೋದಂತಿತ್ತು. ಬಣ್ಣ-ಕುಂಚಗಳ ಜೊತೆಗೆ ಆಟವಾಡದೆ ಹಲವು ಹುಣ್ಣಿವೆಗಳು ಕಳೆದು ಹೋಗಿದ್ದವು. ಬೇಸರದ ಜೀವನಕ್ಕೆ ಒಂದು ಕೊನೆ ಕಾಣಿಸಲು ನಿರ್ಧರಿಸಿದ್ದ. 'ಬಚ್ಚಿಟ್ಟ ಕಲಾಕೃತಿಯಲ್ಲಿ ಒಂದನ್ನು ಮಾರಿ 'ವಿಷವನ್ನು' ತರುವುದೆಂದು'...!
ನಿಧಾನಕ್ಕೆ ಎದ್ದು ಹಳೆಯ ಪೆಟ್ಟಿಗೆಯೊಂದನ್ನು ಹೊರತೆಗೆದ. ಒಂದೊಂದು ಕಲಾಕೃತಿಗಳ ಮೇಲಿನ ಧೂಳನ್ನು ಒರೆಸುತ್ತಾ ಬಂದ. ಅದ್ಭುತ ಕಲಾಕೃತಿಗಳು ಅವು.! ಅವುಗಳ ಮೇಲಿನ ವ್ಯಾಮೋಹದಿಂದ ಮಾರದೆ ಎತ್ತಿಟ್ಟಿದ್ದ . ಈಗ ಯಾವುದನ್ನು ಮಾರುವುದೆಂದೇ ತಿಳಿಯುತ್ತಿರಲಿಲ್ಲ ಅವನಿಗೆ.!

ಗೊಂದಲದಲ್ಲಿರುವಾಗಲೇ ಕಂಡದ್ದು ಪೆಟ್ಟಿಗೆಯಲ್ಲಿ ಇನ್ನೂ ಒಂದು ಬಾಕಿ ಇದ್ದದ್ದು. ಅದನ್ನು ಎತ್ತಿ ಒರೆಸತೊಡಗಿದ." ಅರೆ ಇದರಲ್ಲಿ ನಾನೂ ಇದ್ದೆನಲ್ಲವೇ?" ಮುಖದಲ್ಲಿ ಕಂಡೂ ಕಾಣದಂಥ ಒಂದು ಮುಗುಳ್ನಗು ಹಾದು ಹೋಗಿತ್ತು..!ಮನಸ್ಸು ಹಿಂದೆ ಓಡಿತ್ತು.

ಹಲವು ವರ್ಷಗಳ ಹಿಂದಿನ ಘಟನೆಯದು. ಹೀಗೆ ಒಮ್ಮೆ ಅವನ ಬದುಕಿನಲ್ಲಿ ಕಾಡಿತ್ತು ಅಸಹಾಯಕತೆ, ಭಗ್ನ ಪ್ರೇಮ, ಖಿನ್ನತೆ ಎಲ್ಲ ..! ಒಂದು ಸಂಜೆ ಹೊರಟುಬಿಟ್ಟಿದ್ದ ಕಡಲ ಅಲೆಗಳಲ್ಲಿ ಒಂದಾಗಲು. ದಾಪುಗಾಲು ಹಾಕುತ್ತ ಸಾವನ್ನು ಹುಡುಕಲು ಹೊರಟವನ ಕಣ್ಣಿಗೆ ಅದೇನೋ ಕಂಡಿತ್ತು ದೂರದಲ್ಲಿ. ಅದರ ಹತ್ತಿರ ಸಾಗುತ್ತಿದ್ದಂತೆ ಕಂಡದ್ದಿಷ್ಟು:ಸುಮಾರು ಎಂಟು ಒಂಭತ್ತರ ಹರೆಯದ ಪೋರಿಯೋಬ್ಬಳು ಮರಳಿನಲ್ಲಿ, ಸಮುದ್ರದ ಅಲೆಗಳ ಜೊತೆ ಆಡುತ್ತಿದ್ದಳು.ರಾಶಿ ರಾಶಿ ಮರಳಲ್ಲಿ ಅದೇನೋ ಗೀಚುತ್ತಿದ್ದಳು,ಅಲೆ ಬಂದು ಒರೆಸಿಕೊಂಡು ಹೋದಾಗ ಕೇಕೆ ಹಾಕಿ ನಗುತ್ತಿದ್ದಳು.ಮರಳ ಗೋಪುರವನ್ನು ಕಟ್ಟುತ್ತ ಅದು ಕುಸಿದು ಬಿದ್ದರೂ ನಗುತ್ತಲೇ ತನ್ನ ಆಟವನ್ನು ಮುಂದುವರೆಸಿದ್ದಳು ಹುಡುಗಿ. ಕಲಾವಿದ ನೋಡುತ್ತಲೇ ಇದ್ದ..... ಸಾವಿನ ನೆನಪು ಕಳೆದುಹೋಗಿತ್ತು. ಮನೆಯ ಹಾದಿ ಹಿಡಿದವನ ಮನದಲ್ಲಿ ಅದಾಗಲೇ ಕಲಾಕೃತಿಯೊಂದು ಮೂಡಿತ್ತು. ಮನೆಸೇರುತ್ತಲೇ ಬಣ್ಣಗಳಲ್ಲಿ ಜೀವ ತಳೆದಿತ್ತು ಕೂಡ. ..! ಅದೇ ಮರಳ ರಾಶಿಯಲ್ಲಿ ಆಡುತ್ತಿರುವ ಹುಡುಗಿ ಸಾಗರದ ಹಿನ್ನೆಲೆಯಲ್ಲಿ ಮೂಡಿಬಂದಿದ್ದಳು.ಆಟವನ್ನು ನೋಡುತ್ತಾ ನಿಂತಿದ್ದ ಇನ್ನೊಂದು ಮಾನವಾಕೃತಿಯನ್ನೂ ಮೂಡಿಸಿಬಿಟ್ಟಿದ್ದ ತನಗೆ ಗೊತ್ತಿಲ್ಲದಂತೆ ಕಲಾವಿದ..!

ಅದೇ ಕಲಾಕೃತಿ ಇಂದು ಅವನ ಕೈಯಲ್ಲಿ ಮತ್ತೊಮ್ಮೆ ಬಂದು ಕೂತಿದೆ. ಹಿಂದಿನದೆಲ್ಲ ನೆನಪಾಗಿ ಮನಸಾರೆ ನಕ್ಕುಬಿಟ್ಟ. ಎಲ್ಲ ಚಿತ್ರಗಳನ್ನು ಪುನಃ ಜೋಡಿಸಿ ಮತ್ತದೇ ಹಳೆಯ ಪೆಟ್ಟಿಗೆಯಲ್ಲಿ ಇಟ್ಟುಬಿಟ್ಟ. ಮತ್ತೊಂದು ಚಿತ್ರ ಬರೆಯಲು ಮನಸು ತಯಾರಾಗಿತ್ತು. ಖಿನ್ನತೆ ತಂತಾನೇ ಮಾಯವಾಗಿತ್ತು..! ಮನಸು ಜೀವನ್ಮುಖಿಯಾಗಿತ್ತು ..!

30 comments:

  1. ಮರಳ ಗೋಪುರವನ್ನು ಕಟ್ಟುತ್ತ ಅದು ಕುಸಿದು ಬಿದ್ದರೂ ನಗುತ್ತಲೇ ತನ್ನ ಆಟವನ್ನು ಮುಂದುವರೆಸಿದ್ದಳು ಹುಡುಗಿ..ಮನಸು ಜೀವನ್ಮುಖಿಯಾಗಿತ್ತು ..ಈ ಸಾಲುಗಳು ತು೦ಬಾ ಇಷ್ಟವಾದವು ಸೌಮ್ಯ ಅವರೆ. ಬೀಳುವುದು ಏಳುವುದರ ನಡುವೆ ಗೆಲ್ಲುವುದೇ ಮನದ ಛಲವಾಗಬೇಕೆ೦ಬ ಸ೦ದೇಶ ತುಮ್ಬಾ ಅರ್ಥಪೂರ್ಣ.

    ಶುಭಾಶಯಗಳು
    ಅನ೦ತ್

    ReplyDelete
  2. ಮನ ಮುಟ್ಟುವ ಲೇಖನ ..ಒಂದು ಪ್ರಶ್ನೆ ಇದು ಸತ್ಯ ಘಟನೆ ಅಥವಾ ನಿಮ್ಮ ಕಲ್ಪನೆ ??
    -- Day dreamer

    ReplyDelete
  3. ಸೌಮ್ಯ,
    ಎಲ್ಲರ ಹಾಗೆ ಬರೆಯದೆ, ಇನ್ನಷ್ಟು ವಿಶಿಷ್ಟವಾಗಿ ಬರೆಯೋದು ನಿಮ್ಮ ಖಾಸಿಯತ್..... ಹಾಗೆ ಇದನ್ನು ಮಾಮೂಲಿ ಕಥೆಯಾಗಿ ಬರೆಯಬಹುದಿತ್ತು.... ಅದರೂ ಇದನ್ನ ವೈಶಿಷ್ಟಪೂರ್ಣವಾಗಿ ಬರೆದಿದ್ದೀರಿ..... ಚಿತ್ರ ಪೂರಕವಾಗಿದೆ ಬರಹಕ್ಕೆ....

    ReplyDelete
  4. ತುಂಬಾ ಇಷ್ಟ ಆಯಿತು
    ಓದುತ್ತಾ ಓದುತ್ತಾ ವಾವ್ ಅಂದಿದ್ದು ಸುಳ್ಳಲ್ಲ.
    ತುಂಬಾ ತುಂಬಾ ಚೆನ್ನಾಗಿದೆ.

    ReplyDelete
  5. ಚೆನ್ನಾಗಿದೆ ಸೌಮ್ಯ ಮೇಡಂ,
    ಆ ಖಿನ್ನತೆಯ ಮೂಡ್ನಿಂದ ಒಂದ್ಸಾರಿ ಹೊರಗ್ ಬಂದ್ರೆ ಅದೇ ಜೀವನಕ್ಕೆ turningpoint ... ಸೊಗಸಾಗಿ ಬರೆದಿದ್ದೀರಿ..

    ReplyDelete
  6. ಅನಂತರಾಜ್ ಅವರಿಗೆ ಧನ್ಯವಾದಗಳು. ಏಳುವುದು ಬೀಳುವುದನ್ನು ಬದುಕು ಚಿಕ್ಕವರಿರುವಾಗಲೇ ಕಲಿಸುತ್ತದೆ ಅಲ್ಲವೇ ?

    ReplyDelete
  7. ನಡೆದ ಘಟನೆಯಲ್ಲ srikanth ಸುಮ್ಮನೆ ಒಂದು ಕಲ್ಪನೆ, ಭಾವಲಹರಿ.ಅಷ್ಟೇ . ಧನ್ಯವಾದಗಳು.

    ReplyDelete
  8. ಧನ್ಯವಾದಗಳು. ದಿನಕರ್ ಹಾಗು ಬಾಲು ಅವರಿಗೆ ..

    ReplyDelete
  9. ನಾಗರಾಜ್ ಅವರಿಗೆ ಧನ್ಯವಾದಗಳು

    ReplyDelete
  10. ಹೌದು ಖಿನ್ನತೆಯಿಂದ ಹೊರಬಂದರೆ ಬದುಕಿನ ಬೆಳಕು ಕಾಣುತ್ತದೆ ಅಲ್ಲವಾ ? ಧನ್ಯವಾದಗಳು ಪ್ರಗತಿ ಹೆಗಡೆ ಅವರಿಗೆ

    ReplyDelete
  11. Good.. :) I m happy tat i did a good thing by asking you to start blog...:-) keep it up dear!!

    ReplyDelete
  12. Hi Soumya,

    sanna katheyadaru vishista vagide artha vishalavagide.. vasatavavagide...

    dhanyavada
    pravi

    ReplyDelete
  13. suicide maada bayasuvavaru kadayavagi oda bekada jeevanmukhi katheyanu post madidere uttama.
    Keep it up.

    ReplyDelete
  14. ಸಂಪೂರ್ಣ ಜೀವನವೇ ಮುಗಿದು ಹೋಯಿತೆಂದು ತಪ್ಪು ದಾರಿಯಲ್ಲಿ ನಡೆಯುವಾಗ ಒಮ್ಮೆ ಯೋಚಿಸಿದರೆ ಎಷ್ಟೊಂದು ಒಳ್ಳೆಯದು ಆಲ್ವಾ?
    ವಿಶಿಷ್ಟ ಶೈಲಿಯ ಕತೆ. ಅಷ್ಟೇ ಚಂದದ ನಿರೂಪಣೆ.

    ReplyDelete
  15. thank u divya....really i am thankful to u

    ReplyDelete
  16. ವಿಪರ್ಯಾಸ ಯಾವುದೂ ಇಲ್ಲ ತಂತ್ರಜ್ಜಾನದಲ್ಲೂ ..ಸಾಹಿತ್ಯದಲ್ಲೂ...ಏಕೆಂದರೆ...ಮರಳಲ್ಲಿ ಆಟವಾಡಿ ಮನೆಕಟ್ಟುವ ಮನಸು ಕಲೆ..ಕಟ್ಟುವ ಕ್ರಿಯೆ ತಂತ್ರ...
    ಸೌಮ್ಯ ಮುಂದುವರೆಯಲಿ ವಿಪರ್ಯಾಸ...ಹಹಹ

    ReplyDelete
  17. soumya ..

    Kathe bahala chennagide . kalapne ishta aytu ...

    ReplyDelete
  18. ಕಥೆ ಚೆನ್ನಾಗಿ ಮೂಡಿಬಂದಿದೆ, ಥ್ಯಾಂಕ್ಸ್

    ReplyDelete
  19. bahala arthapurna kathe soumya..tumba ista aatu.

    ReplyDelete
  20. Hi,
    ತುಂಬ ಚೆನ್ನಾಗಿದೆ ಕಥೆ.. ಧನಾತ್ಮಕ. ಮತ್ತೆ ನಿಮ್ಮ ಬರವಣಿಗೆ ಶೈಲಿ ತುಂಬಾ ಹಿಡಿಸಿತು :)

    ReplyDelete
  21. ಎದೆಕದ ತಟ್ಟಿದಂತಿದೆ..

    ReplyDelete
  22. ಧನ್ಯವಾದಗಳು ಆಜಾದ್ ಅವರೆ.....

    ReplyDelete
  23. ಧನ್ಯವಾದಗಳು ಶ್ರೀಧರ್ ಅವರೆ ..........

    ReplyDelete
  24. ಸೋಮ್ಯ ಸೂಪರ್ ಕಣ್ರೀ ನಿಮ್ಮ ಈ ಅರ್ಟಿಕಾಲ್ ನಾನಾತುಂಬಾನೇ ಇಷ್ಟ ಆಯಿತು ಇಷ್ಟು ಚಂದದ ಬರವಣೆಗೆ ಬರೆಯಲು ಸ್ಪೂರ್ತಿ ಯಾರು ಅಥವಾ ಏನೂ ಇರಲೇಬೇಕಲ್ಲವೇ .......? ದಯವಿಟ್ಟು ತಿಳಿಸುವಿರ ನಿಮ್ಮ ಉತ್ತರಕ್ಕೆ ಕಾಯುತ್ತೇನೆ ... ಹಾಗೇ ಬಿಡುವು ಮಾಡ್ಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .........
    SATISH N GOWDA
    www.nannavalaloka.blogspot.com

    ReplyDelete
  25. ಚೆಂದದ ಲೇಖನ.. ಹೀಗೇ ಬರೆಯುತ್ತಿರಿ..

    ReplyDelete
  26. most of the time, jeevanadalli besarvadavru kalavidaru agtare.... yake anta gotilla pa...
    (ellarigu anvayisuvudilla...)

    ReplyDelete