Sunday, February 28, 2010

ಮತ್ತೆ ಕಾಯುತಿರುವಳು ರಾಧೆ



ಹಸಿರಂಚಿನ ಲಂಗ ಘಲಘಲಿಸುವ ನೂಪುರ

ಕಣ್ಣಿಗೆ ನಿರೀಕ್ಷೆಯ ಕಾಡಿಗೆ ..

ಇನ್ನೂ ಕಾಯುತಿಹಳು ರಾಧೆ ವೃಂದಾವನದಲಿ

ಅದೇ ಕೃಷ್ಣನಿಗಾಗಿ .. ರಾಧೆಯ ಕೃಷ್ಣನಿಗಾಗಿ ...



ಎಲ್ಲಿಂದಲೋ ತೀಲಿಬರುತಿದೆ ವೇಣುಗಾನ

ಕಳೆದುಹೋಗಿದ್ದಾಳೆ ರಾಧೆ

ನೆನಪುಗಳ ಮೆರವಣಿಗೆಯಲ್ಲಿ

ಕನಸುಗಳ ಜಾತ್ರೆಯಲ್ಲಿ ..

ಕೃಷ್ಣ ಅರಮನೆಯನು ಬಿಟ್ಟು

ಭಾಮೆ- ರುಕ್ಮಿಣಿಯರ ಮರೆತು ಬಂದು

ಕೊಳಲನೂದುವನು....

ಕಾಲ ಗೆಜ್ಜೆಯ ದನಿಗೆ ಮರುಳಾಗುವನು

ಕೇದಗೆ,ಜಾಜಿಯ ಮಾಲೆ ಕಟ್ಟಿ ಮುಡಿಸುವನು

ಕಣ್ಣಲಿ ಕಣ್ಣಿಟ್ಟು ಚಂದಿರನ ಬಿಂಬವ ಹುಡುಕುವನು

ತೋಳ ತೆಕ್ಕೆಯಲಿ ಬಂಧಿಸುವನು ..

ಅದೇನೋ ಮಂಪರು ...

ಸೆರಗಿನಂಚನು ಯಾರೋ

ಹಿಡಿದೆಳೆದಂತೆ ಭಾಸವಾಗುತಿದೆ

ಹೃದಯ ತಾಳ ತಪ್ಪಿದೆ

ಕಣ್ಣೆವೆಗಳು ಅರೆಮುಚ್ಚಿ, ಗಲ್ಲಗಳು ಕೆಂಪೇರಿವೆ

ಇನ್ನೇನು ಬಂಧಿಸಿ ಬಿಡುವನು ಬಾಹುಗಳ ಬಿಗಿಯಲ್ಲಿ...


ಅರೆ ಏನಾಗಿದೆ ?

ಗೋಪಾಲನ ಮೈಯಲರಿಲ್ಲ

ಬಿಸಿಯುಸಿರೂ ಇಲ್ಲ !

ಹಿಂದಿರುಗಿ ನೋಡಿದರೆ ...

ಮುಳ್ಳಿಗೆ ಸಿಕ್ಕಿಕೊಂಡಿದೆ ಸೆರಗು

ಬಿಡಿಸುವಾಗ ಕೈಗೆ ಮುಳ್ಳೊಂದು ಚುಚ್ಚಿದೆ..

ಅದಾವುದರ ಪರಿವೆಯಿಲ್ಲ ರಾಧೆಗೆ ...

ಕಣ್ಣಂಚಲಿ ಅದೇ ನಿರೀಕ್ಷೆ ....

ಮತ್ತೆ ಕಾಯುತಿರುವಳು ರಾಧೆ ಕೃಷ್ಣನಿಗಾಗಿ

ಅದೇ ರಾಧೆಯ ಕೃಷ್ಣನಿಗಾಗಿ ...














Saturday, February 27, 2010

stupid miss u... ಎಂದು ಬಿಡು ....





Hello ಬೊಡ್ಡ ,
ಯಾಕೋ ಏನಾಗಿದೆ ನಿನಗೆ ? ಮಾತಿಲ್ಲ, ಕಥೆಯಿಲ್ಲ.. ಕೊನೆಪಕ್ಷ ಒಂದು message ಕೂಡ ಮಾಡೋದು ಮರೆತು ಹೋಯ್ತಾ ?ನಂಗೊತ್ತು ಕಣೋ ಜೀವದ ಗೆಳತಿ ಸಿಕ್ಕಿದ್ದಾಳೆ ನಿನಗೆ ಅಂತಾ. ಆದರೂ ನಿನ್ನ ಪ್ರಾಣ ಸ್ನೇಹಿತರನ್ನ ಮರ್ತೋಗಿ ಬಿಡೋದಾ ? ಮೊನ್ನೆ ಆಗ್ನೇಯ phone ಮಾಡಿದ್ದ ಅವ್ನೂ ಹೇಳ್ತಿದ್ದ ಮಾರಾಯ "ನಿಶು ಕಳ್ದೋಗಿದಾನೆ ಸುಮಿ ಮೊದಲಿನ ಥರ ಇಲ್ಲ ಅವ್ನು" ಅಂದಿದ್ದ .! But ನಾನು ಒಪ್ಪಲೇ ಇಲ್ಲ . "no no he can't change " ಅಂದಿದ್ದೆ. ಆದ್ರೆ ಮೊನ್ನೆ ಅನಿಸ್ತು ನೀನು ಬದಲಾಗಿದ್ದೀಯ, avoid ಮಾಡ್ತಾ ಇದ್ದೀಯ ಎಂದು .

ಅತ್ತು ಬಿಟ್ಟೆ ನಿಶು ... ನಿನ್ನೆ ರೂಮನಲ್ಲಿ . ಯಾಕೆ ನಿನ್ನನ್ನು ಅಷ್ಟೊಂದು ಹಚ್ಕೊಂಡೆ ಗೊತ್ತಿಲ್ಲ . mostly ನಮ್ಮಿಬ್ಬರ nature ಒಂದೇ ಆಗಿತ್ತು, or ನಿನ್ನಂಥ ಗೆಳೆಯನ ನಿರೀಕ್ಷೆಯಲ್ಲಿದ್ದೆ ..ನೀನು ಸಿಕ್ಕಿಬಿಟ್ಟಿದ್ದೆ.



Best friends ಅನ್ನೋ ಹಣೆಪಟ್ಟಿ ನಾವೆಂದೂ ಕಟ್ಕೊಳ್ಳಿಲ್ಲ . ಆದರೆ ನಾನು ಮನೆಗೆ ಹೋದಾಗ ಒಬ್ಬರನ್ನೊಬ್ರು ಅದೆಷ್ಟು ಮಿಸ್ ಮಾಡ್ತಾ ಇದ್ದೆವು ಹೇಳು.


ಮೊನ್ನೆ ideals ವರೆಗೆ ಹೋಗಿ ವಾಪಸ್ ಬಂದೆ ಕಣೋ ನಿನ್ನ ಜೊತೆ ಕಿತ್ತಾಡದೇ,'ಶಾಲು' ಹೊಟ್ಟೆ ಉರಿಸದೇ ಹೇಗೋ ತಿನ್ನಲಿ 'tiraamisu' ice-cream..! Friendship day, valentine day ಗಳಿಗೆ ನೀನು ಕೊಟ್ಟ 'ಹಳದಿ ' ಗುಲಾಬಿ ಹೂಗಳು ಅಳ್ತಾ ಇವೆ ಡೈರಿ ಹಾಳೆಗಳ ಮಧ್ಯೆ .ನನ್ನ ಕಳೆದ ಹುಟ್ಟಿದ ಹಬ್ಬಕ್ಕೆ ನೀನು ಕೊಟ್ಟ card ನಲ್ಲಿ ಹಲ್ಕಿರಿದುಕೊಂಡಿರೋ ಚಿಂಪಾಂಜಿ ನಗೋದನ್ನ ನಿಲ್ಸಿರಬಹುದು . ಜೋರು ಮಳೆಯಲ್ಲಿ ನಿನ್ನ ಜೊತೆ ಜಗಳ ಆಡ್ತಾ ice-cream ತಿಂದದ್ದು, M.G.roadನ ಕೊನೆಯಲ್ಲಿನ ಭೇಲ್ ಪುರಿ stallನಲ್ಲಿ ಕಿತ್ತಡ್ಕೊಂಡು 'ಶೇವು ಪುರಿ'ತಿಂದದ್ದು ಇನ್ಮುಂದೆ ಬರೀ ನೆನಪು ಮಾತ್ರಾನಾ ?'ಹೌದು' ಅನ್ನೋ ಉತ್ತರ ಬರದಿರಲಿ ಎಂದು fingers cross ಮಾಡಿದೇನೆ .
ಅದ್ಯಾಕೆ ನಿನ್ನ ಅಷ್ಟೊಂದು ಮಿಸ್ ಮಾಡ್ತೇನೆ ಅಂತ ಯೋಚನೆ ಮಾಡಿದಾಗ, ನೆನಪುಗಳೊಂದಿಗೆ ಗುದ್ದಾಡಿದಾಗ ಹೊಳೆದದ್ದು ಇಷ್ಟು ..! ನಿನ್ನ ಜೊತೆ ಇರೋವಾಗ ನಾನೊಬ್ಳು ಹುಡುಗಿ ಅನ್ನೋ ಫೀಲಿಂಗ್ ಯಾವತ್ತು ಬಂದಿಲ್ಲ .ಹುಡುಗರ ಥರಾನೆ treet ಮಾಡ್ತಾ ಇದ್ದೆ. ಅದೆಷ್ಟು ತಲೆ ತಿಂತಿದ್ದೆ ನಾನು. 'ನಗುವನ್ನ ಮಾತ್ರ ಹಂಚಬೇಕು ಅಳುವನ್ನಲ್ಲ' ಎನ್ನುವ ನನ್ನ theory ಬುಡಮೇಲಾದದ್ದು ನಿನ್ನ ನಿಷ್ಕಲ್ಮಶ ಸ್ನೇಹದ ಧಾರೆಯಲ್ಲಿ.ನನ್ನ ಮನದೊಳಗಿನ ನಿಷ್ಕಲ್ಮಶ ಸ್ನೇಹದ definitionಗೆ ನೀನು ಉದಾಹರಣೆ. ಕಣ್ಣೀರಿನ ಸಿಂಚನ, ನಗುವಿನ ಎಳೆಬಿಸಿಲಿಗೆ ಮೂಡಿದ ಕಾಮನ ಬಿಲ್ಲಿನ ಸ್ನೇಹ ನಮ್ಮದು ಅನ್ಕೊಂಡಿದ್ದೆ . . ನನ್ನ ಕಣ್ಣೀರನ್ನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ.ಎಷ್ಟು ಸಲ ಜಗಳಾಡಿದ್ದೇವೋ ಲೆಕ್ಕಕ್ಕಿಲ್ಲ. ನಿನ್ನ ಜೊತೆ ಕಣ್ಣೀರಾದ ಘಳಿಗೆಗಳನ್ನು ಹೇಗೋ ಮರೆಯಲಿ ?


ಅದೆಷ್ಟು ತಲೆ ತಿಂತಿದ್ದೆ ನಾನು. ಆ ದಿನ ಒಂದೇ messageನ್ನು 50 ಸಲ ಕಳುಹಿಸಿ ನೀನೂ cellphone switch off ಮಾಡಿದ್ದೆ ನೋಡು . ಮತ್ತೆ land line ನಿಂದ ಫೋನ್ ಮಾಡಿ ಬಯ್ದಾಗ ನಾನು ಕಣ್ಣಲ್ಲಿ ನೀರು ಬರೋವಷ್ಟು ನಕ್ಕಿದ್ದೆ. ಉದ್ದ ಸ್ಕರ್ಟ್ ಹಾಕೆ 'ಬೊಮ್ಮರಿಲ್ಲು' ಜೆನಿಲಿಯ ಥರ,ನಿಂಗೆ push up bottom ಸಲ್ವಾರ್ ಚೆನ್ನಾಗಿ ಕಾಣತ್ತೆ,ಈ earing ಚೆನ್ನಾಗಿದೆ. ಅಂತ ಹೇಳೋವಾಗ ನಂಗೆ control ಮಾಡೋಕೆ ಆಗದಿರೋ ಅಷ್ಟು ನಗು ಬರ್ತಿತ್ತು .


ನನ್ನ stupid poemಗಳ ಕೇಳುಗ ನೀನಾಗಿದ್ದೆ, ನಿನ್ನ ಪ್ರೀತಿಯ ಹುಡುಗಿ ಮೈಥಿಲಿಯ ಮದುವೆಯ ದಿನ ರಾತ್ರಿ ೯ ಗಂಟೆಗೆ "ಸುಮಿ ಒಂದ್ಸಲ ಮಾತಾಡಬೇಕು ನಿನ್ನತ್ರ ಪ್ಲೀಸ್ ಹಾಸ್ಟೆಲ್ ನಿಂದ ಹೊರಗೆ ಬಾರೆ" ಅಂದಾಗ ಅದೇನೇನೋ ಹೇಳಿ ಹೊರಗೆ ಬಂದು ಒಂದು ಪುಟ್ಟ walk ಬಂದಿದ್ದೆನಲ್ವಾ? ಇಡೀ ದಿನ F.M ಥರ ವಟವಟ ಅನ್ನೋಳು ಮೌನವಾಗಿ ನಡೆದಿದ್ದೆ ನಿನ್ನ ಜೊತೆ .!ಕೊನೆಗೆ ನೀನು "ಥ್ಯಾಂಕ್ಸ್ ಸುಮೀ" ಅನ್ನೋವಷ್ಟರಲ್ಲಿ ರಸ್ತೆಯ ದೀಪದ ಬೆಳಕಿಗೆ ಕಂಡದ್ದು ಒದ್ದೆ ಕಂಗಳು ..!


ಮನದಲ್ಲಿ ಅದೆಂಥ ನೋವಿದ್ದರೂ ಹೊರಗಡೆಯಿಂದ ನಗುತ್ತಲೇ ಇರುತ್ತಿದ್ದ ನಿನಗೆ ಯಾವತ್ತೋ ಮನದಲ್ಲೇ hats off ಹೇಳಿದ್ದೆ .ನಿನ್ನಿಂದ ಎಷ್ಟೋ ಕಲ್ತಿದೇನೆ ನಿಶು ... ಬರೀ best friend ಅಲ್ಲ ನೀನು the Bestest friend .!


ನೀನು ಹೇಳ್ತಿದ್ದೆ ಅಲ್ವಾ ? "ಯಾವತ್ತೂ ಬದಲಾಗಬೇಡ ಸುಮಿ ..ಈಗ ಇದ್ದಂಗೆ ಇರು.. ನನ್ನ ಮಕ್ಕಳಿಗೆ ''jub v met'ಫಿಲ್ಮ್ ತೋರಿಸಿ ನಂಗೂ ಒಬ್ಳು ಥೇಟ್ 'ಗೀತ್' ನಂಥ best friend ಇದ್ಳು ಅಂತ ಹೇಳ್ತೇನೆ "ಎಂದು ..


ತುಂಬಾ ಮಿಸ್ ಮಾಡ್ತಿದೇನೆ ಕಣೋ ನಿನ್ನ .ನೀ ಜೊತೆಗಿಲ್ಲದ m.g road ಬೇಡ ಅನ್ಸ್ತಿದೆ. ಒಮ್ಮೆ ಮೆಸೇಜ್ ಮಾಡಿ "stupid miss u too" ಅಂದುಬಿಡೋ. . ಎಲ್ಲೋ ಒಂದು ಕವನ ಓದಿದಾಗ , ಉದ್ದ skirtನ ಹುಡುಗಿಯ ಕಂಡಾಗ ಮಳೆಗಾಲದಲ್ಲಿ ice-cream ನೆನಪಾದಾಗ .ನಾನು ಕಾಡಬಹುದು. ನನ್ನ ಮಿಸ್ ಮಾಡಬಹುದು ಆಗ ಒಂದೇ ಒಂದು message ಮಾಡಿಬಿಡು "stupid miss you " ಎಂದು .ಕಾಯ್ತಾ ಇರ್ತೇನೆ ಅದೇ 'ಸೈಬಿನ್ ' complexನ ಅದೇ ನಾಲ್ಕನೆ ಖುರ್ಚಿಯಲ್ಲಿ ..!








Your stupid friend
ಸುಮಿ...







Tuesday, February 23, 2010

ಚುಕ್ಕಿಗೊಂದು ಚಂದ್ರಮ ಸಿಕ್ಕ ...!








ಪುಟ್ಟಿ ಕೂತಿದ್ದಾಳೆ ಗೊಂಬೆಗಳ ಜೊತೆಗೆ, ಕೈಯಲ್ಲಿ ಅದೇ ಅವಳ favorite ಹಳದಿ ಬಣ್ಣದ teddy bear. ಹಳೆಯ teddy ಅದು.ಬಣ್ಣ ಸ್ವಲ್ಪ ಮಾಸಿದೆ. ಆದರೂ ಅದೇಕೋ ಈ ಪೋರಿಗೆ ಉಳಿದ ಬಣ್ಣ ಬಣ್ಣದ modern ಗೊಂಬೆಗಳಿಗಿಂತ ಅದೇ teddy ಇಷ್ಟ .ಹೆಸರು ಬೇರೆ ಇಟ್ಟಿದ್ದಾಳೆ 'ಚುಕ್ಕಿ' ಎಂದು.! ಆಟ,ಊಟ,ಪಾಠ ಕೊನೆಗೆ ನಿದ್ದೆ ಮಾಡುವಾಗಲೂ 'ಚುಕ್ಕಿ' ಇರಲೇಬೇಕು .!


ಅಮ್ಮನ ಕಾಯುತ್ತ ಕೂತಿದ್ದಾಳೆ ಪುಟ್ಟಿ ಮಂಚದಮೇಲೆ . ಸಂಜೆ ಬಂದು ರೂಮಿನ ಬಾಗಿಲಲ್ಲಿ ಇಣುಕಿದ ಅಮ್ಮನಿಗೆ ಕಂಡಿದ್ದು 'ಚುಕ್ಕಿ' ಯನ್ನು ಎದೆಗವಚಿಕೊಂಡು ಮಲಗಿದ್ದ ಪುಟ್ಟಿ . ಮಂಚದ ಬದಿಗೆ ಜರುಗಿದ ಅಮ್ಮ 'ಚುಕ್ಕಿ'ಯನ್ನು ಪುಟ್ಟಿಯ ಕೈಗಳಿಂದ ಬಿಡಿಸಿದ್ದಾಳೆ . ಮುದ್ದು ಪುಟ್ಟಿಯ ಹಣೆಗೆ ಹೂಮುತ್ತನಿಕ್ಕಿ 'ಚುಕ್ಕಿ'ಯನ್ನು ಎದೆಗವಚಿಕೊಂಡಿದ್ದಾಳೆ..! ನೆನಪಿನ ತೆಕ್ಕೆಗೆ ಜಾರಿದ್ದಾಳೆ ..!
ಅದೇ ಆ ಹಳದಿ teddy ಪುಟ್ಟಿಯ ಅಮ್ಮನದು ..! ಅವಳು ಮನಸಾರೆ ಪ್ರೀತಿಸಿದ್ದ ಹುಡುಗ ಅವಳ ಹುಟ್ಟಿದಹಬ್ಬಕ್ಕೆ ಚೆಂದನೆಯ cardನೊಂದಿಗೆ ಈ teddyಯನ್ನು ಅವಳ ಕೈಗಿತ್ತಿದ್ದ .ಆ ಹುಡುಗ ಅಮ್ಮನನ್ನು ಕರೆಯುತ್ತಿದ್ದದ್ದು 'ಚುಕ್ಕಿ' ಎಂದೇ ..! ಕೊನೆಗೆ ಮನೆಯವರ ಒತ್ತಾಯಕ್ಕೆ ಮಣಿದು ಮುದ್ದಾದ cardಗಳೊಂದಿಗೆ ಆ ಮುಗ್ಧ ಪ್ರೀತಿಯನ್ನು ಸುಟ್ಟುಬಿಟ್ಟಿದ್ದಳು.ಆದರೆ ಹುಡುಗನ ನೆನಪುಗಳನ್ನು ಈ ಹಳದಿ teddy ಯಲ್ಲಿ ಬಚ್ಚಿಟ್ಟಿದ್ದಳು. ಗಂಡನೊಂದಿಗೆ ಬರುವಾಗ teddyಯನ್ನೂ ಜೊತೆಗೆ ತಂದಿದ್ದಳು . ಅವಳ wardrobeನಲ್ಲಿ teddy ಬೆಚ್ಚಗೆ ಕುಳಿತಿತ್ತು .

ಪುಟ್ಟಿ ಹುಟ್ಟಿದ ನಂತರ ಲಾಲನೆ, ಪೋಷಣೆಗಳ ಮಧ್ಯೆ ಕಳೆದು ಹೋಗಿದ್ದಳು ಅಮ್ಮ . ಹಳೆಯ ನೆನಪುಗಳ ಮೇಲೆ ಮಂಜಿನ ಪದರವೊಂದು ಹಾಸಿತ್ತು .


ಅದೆಲ್ಲಿ ಕಂಡಿದ್ದಳೋ ಪುಟ್ಟಿ ಆ ಹಳದಿ teddyಯನ್ನು ಗೊತ್ತಿಲ್ಲ . ತನ್ನ ಐದನೇ ಹುಟ್ಟಿದ ಹಬ್ಬದ ದಿನ ಅದು ಬೇಕೆಂದು ಹಠ ಹಿಡಿದು ಕೂತಿದ್ದಳು ಕೊನೆಗೆ ಮಣಿದ ಅಮ್ಮ teddyಯನ್ನು ಪುಟ್ಟಿಯ ಕೈಗೆ ಕೊಟ್ಟಾಗ ಪುತ್ತಿಗೆ ಜಗತ್ತನ್ನೇ ಗೆದ್ದ ಖುಷಿ .ಮುದ್ದು ಮುದ್ದಾಗಿ 'ಚುಕ್ಕಿ' ಎಂದು ನಾಮಕರಣ ಮಾಡಿದಾಗ ಅಮ್ಮನಿಗೆ ಘೋರ ಆಚ್ಚರಿ ..! ನಂತರದ ದಿನಗಳಲ್ಲಿ 'ಚುಕ್ಕಿ' ಪುಟ್ಟಿಯ ಸರ್ವಸ್ವವಾಗಿತ್ತು.


ಇಂದು ಪುಟ್ಟಿಯ 19ನೇ ಹುಟ್ಟಿದ ಹಬ್ಬ ಅವಳ ಜೀವದ ಗೆಳೆಯ ಮುದ್ದಾದ cardನೊಂದಿಗೆ ತಿಳಿ ಗುಲಾಬಿ ಬಣ್ಣದ teddy bear ಒಂದನ್ನು ತಂದು ಪುಟ್ಟಿಯ ಕೈಗಿತ್ತಿದ್ದಾನೆ . ಪುಟ್ಟಿಯ ಕಣ್ಣುಗಳಲ್ಲಿ ಮಿಂಚು ..!


ರೂಮಿನೊಳಗೆ ಓಡಿ ಬಂದು 'ಚುಕ್ಕಿ'ಯಪಕ್ಕ ಹೊಸ teddy bear ಇಟ್ಟಿದ್ದಾಳೆ. ಬಾಗಿಲಿಗೊರಗಿ ನಿಂತ ಗೆಳೆಯ ನಗುತ್ತಿದ್ದಾನೆ. ಕಣ್ಣ ಅಂಚಲ್ಲಿ ನೀರ ಪಸೆ .

'ಚುಕ್ಕಿ'ಗೆ 'ಚಂದ್ರಮ' ಸಿಕ್ಕ ಸಂತಸ.. !!!!

Sunday, February 14, 2010

ಪಕ್ಕಾ ಪ್ರೇಮ ಕವನ ,,!













ನಮ್ಮ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು "ಕವನ ರಚನಾ ಸ್ಪರ್ಧೆ".ಒಂದು ರೂಮಿನೊಳಗೆ ಕೂರಿಸಿ ಒಂದು ವಿಷಯವನ್ನು ಕೊಟ್ಟಿದ್ದರು .ಒಂಥರಾ ಆಶು ಕವನ ಬರೆದಂತೆ . ಆ ದಿನದ ವಿಷಯ "ಪ್ರೇಮ ಕವನ ". in English the subject was "the love " . ಸ್ವಲ್ಪ ಹೊತ್ತು ತಲೆಯೊಳಗೆ ಎಲ್ಲ ಖಾಲಿಯಾದ ಭಾವ. ನಂತರ ನಾನು ಬರೆದದ್ದು ಹೀಗೆ :






ನನ್ನ ಮನದ ಭಾವನೆಗಳು
ಕವನವಾಗಿ ಹೊರ ಹೊಮ್ಮುತಿವೆ
ಪ್ರಿಯೆ ನಿನ್ನ ಕಂಡ
ಆ ಕ್ಷಣದಿಂದ ..!
ನಿನ್ನ ತುಟಿಯಂಚಿನ
ಮುಗುಳು ನಗೆಯೊಂದು
ಕನಸುಗಳ ಅಲೆಯನೆಬ್ಬಿಸಿದೆ
ಮನದ ಸಾಗರದಲ್ಲಿ ..

ನಿನ್ನ ಕಂಗಳ ಕುಡಿನೋಟವದು
ನನ್ನ ನಿದ್ದೆಯ ಹರಣ ಮಾಡಿ
ಚುಕ್ಕಿಗಳನೆಣಿಸುವಂತೆ ಮಾಡಿದೆ
ನಿಶೆಯ ಬಾನಂಗಳದಲ್ಲಿ

ವಿವಶವಾಗಿದೆ ಮನಸು
ನಿನ್ನ ನಗು ನೋಟಗಳಲ್ಲಿ
ಜೀವ ತುಂಬಿರುವೆ
ಮನದ ಭಾವಗಳಿಗೆ
ಈ ಪುಟ್ಟ ಕವನದಲ್ಲಿ ..!

ಮಧುರ ಪ್ರೇಮ ಅಮರವಾಗಲು
ತಾಜಮಹಲನ್ನು ನಾನು ಕಟ್ಟಲಾರೆ
ಬಾನತಾರೆಗಳ ಹೊಳಪನ್ನು ನಾಚಿಸುವ
ಹರಳ ಹಾರವ ತಂದು
ಕೊರಳಿಗೆ ತೊಡಿಸಲಾರೆ .!
ಆದರೆ .....
ನನ್ನ ಕನಸುಗಳ
ನರುಗಂಪ ತುಂಬಿರುವ
ಚೆಂಗುಲಾಬಿ ಹೊವೊಂದ ಕೊಡಬಲ್ಲೆ
ನಿನ್ನ ಚಿಗುರು ಬೆರಳುಗಳಿಗೆ
ಮುತ್ತೊಂದ ನೀಡಿ ಧನ್ಯನಾಗಬಲ್ಲೆ ...!
ಪ್ರೀತಿಯಿರಲಿ ಈ ಭೂಮಿಯಲ್ಲಿ
ಪ್ರೀತಿಯಿರಲಿ ವಿಶ್ವ ಶಾಂತಿಯಲ್ಲಿ ..!



ನನಗೆ first prize ಬಂದಿತ್ತು.






Thursday, February 11, 2010

ಪ್ರೀತಿ ನೀನು ಹೀಗೇಕೆ ?.............?







"ಪ್ರೀತಿ ಪ್ರೀತಿ ನಿನ್ನ ಆಟ ಸಾಕು ನಿಲ್ಲಿಸು ...!"ಮೊನ್ನೆ ಅಣ್ಣನಂತಿರುವ ಗೆಳೆಯನೊಬ್ಬ ಅವನ ಪ್ರೀತಿಯ ಬಗ್ಗೆ ಹೇಳಿ "ಈ ಪ್ರೀತಿ ಹಿಂಗೇಕೆ ಮಾಡತ್ತೆ ?" ಎಂದು ಕೇಳಿದಾಗ ಆ ಕ್ಷಣಕ್ಕೆ ಮೌನವೇ ನನ್ನ ಉತ್ತರವಾಗಿತ್ತು . ನಂತರ ಮನಸ್ಸು ಹಿಡಿದದ್ದು ಯೋಚನೆಯ ಹಾದಿಯನ್ನು .

"Love can't be explained but it can be expressed..! "ಪ್ರೀತಿಯ ರೂಪ ವಿವಿಧವಾದರೂ, ಗುಣ ಒಂದೇ .!ಪ್ರೀತಿ ಪ್ರೀತಿನೇ ಅಲ್ವಾ? ಅಂಗುಲಿಮಾಲನಂಥ ಅಂಗುಲಿಮಾಲನೆ ಭಗವಾನ್ ಬುದ್ಧನ ಪ್ರೀತಿಗೆ ಕರಗಿರುವಾಗ ಇನ್ನು ನಮ್ಮ ನಿಮ್ಮಂಥವರ ಪಾಡೇನು .?

ಇಲ್ಲಿ ನಾನು ಹುಡುಗರ ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದೇನೆ .ಒಂದು ಶುದ್ಧ ಪ್ರೀತಿ ಏಕೆ ಕಾಡತ್ತೆ ? ಹೇಗೆ ಕಾಡತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೇನೆ .. ಓದಿ ..


ಈ ಹುಡುಗರಿದ್ದರಲ್ವಾ?ನಿಜಕ್ಕೂ ಅಜೀಬ್ ಅನಿಸಿ ಬಿಡ್ತಾರೆ ಕಣ್ರೀ ."ಹೆಣ್ಣಿನ ಮನಸು ಮೀನಿನ ಹೆಜ್ಜೆ ಒಂದೇ ಥರ" ಅಂತ ಹೇಳ್ತಾರೆ . ಆದ್ರೆ ಹುಡುಗರು ನಿಜಕ್ಕೂ ಇನ್ನೂ ನಿಗೂಢ !.ಇವ್ನನೆಂಥ ಒರಟ.! ಎಂದು ಅನ್ಕೊಳ್ಳೋವಷ್ಟರಲ್ಲೇ ಅವನ ಮುಗ್ಧ ಮಗುವಿನ ಮನಸಿನ ಅನಾವರಣವಾಗಿರುತ್ತದೆ .!cute and sweet boy ಅನ್ಕೊಂಡಿರ್ತೇವೆ ..ಆದರೆ ಅವ್ನಲ್ಲಿರೋ ತಾರಕಾಸುರನ ದರ್ಶನ ಆಗಿರತ್ತೆ.!

ಸುಮ್ಮನೆ flirt ಮಾಡೋಕೆ, bikeನಲ್ಲಿ ಕೂರಿಸ್ಕೊಂಡು ಓಡಾಡಲಿಕ್ಕೆ ಚೆಂದದ ಹುಡುಗಿ ಬೇಕೆಂದರೂ. ಮನಸಿನ ಹುಡುಗಿ ಆರಿಸಿಕೊಳ್ಳುವಾಗ ಮಾತ್ರ ಅವಳ ಗುಣಕ್ಕೆ ಪ್ರಾಧಾನ್ಯತೆ. !ಅವಳ ಮುಗ್ಧ ಮೊಗಕ್ಕಿಂತ ಮನಸ್ಸಿಗೆ ಸೋತಿರ್ತಾರೆ .ಈ ಹುಡುಗರು .!ಕೆಲವು ಹುಡುಗರಿಗೆ 'ಬೊಮ್ಮರಿಲ್ಲು' ಫಿಲ್ಮಿನ 'ಹಾಸಿನಿ' ಇಷ್ಟ ಆದರೆ, ಇನ್ನು ಕೆಲವರಿಗೆ 'ವಿವಾಹ್'ನ 'ಪೂನಂ' ಇಷ್ಟ ಆಗ್ತಾಳೆ, ಮತ್ತೂ ಕೆಲವರಿಗೆ 'jub we met'ನ 'ಗೀತ್' ಇಷ್ಟ ಆಗ್ತಾಳೆ .!

ಹುಡುಗರು ಬೇಜಾನ್ ಪ್ರೀತಿ ಮಾಡೋದು ಅವರ ಮೊದಲ ಪ್ರೀತಿಯನ್ನ . ಅದೊಂಥರ innocent ಲವ್ .ಆದರೆ ವಿಪರ್ಯಾಸ ನೋಡಿ most of the time ಆ ಪ್ರೀತಿ ಅವರಿಗೆ ಸಿಕ್ಕಿರೋದಿಲ್ಲ ..! ಕಣ್ಣುಮುಚ್ಚಾಲೆ ಆಡತ್ತೆ ಆ ಪ್ರೀತಿ . ..ಸಿಗದ ಪ್ರೀತಿಗೆ ಮನಸ್ಸು ಕನವರಿಸುತ್ತದೆ, ಹಪಹಪಿಸುತ್ತದೆ .. !, ಎಷ್ಟರವರೆಗೆ ಅಂದ್ರೆ life partner ಅಂತ ಅನಿಸಿಕೊಂಡವರ ಜೊತೆಗೂ ಆ ಅದೇ ಪ್ರೀತಿಯನ್ನು ಮನಸು ಬಯಸುತ್ತದೆ . ಜೀವನದ ಕೊನೆ ಉಸಿರಿರೋ ವರೆಗೂ ಅದೊಂಥರ 'sweet pain' ಆಗೇ ಕಾಡ್ತಾ ಇರತ್ತೆ .
ಆ ಮೊದಲ ಪ್ರೀತಿ ಮೂಡಿರೋ ಹೊತ್ತಿನಲ್ಲಿ life settle ಆಗಿರೋದಿಲ್ಲ ..!

ಪ್ರೀತಿಯನ್ನು ಕಳೆದುಕೊಂಡ ಹುಡುಗನ ದುಃಖ ಇನ್ನೊಬ್ಬರಿಗೆ ಅರ್ಥವಾಗೋದು ಕಷ್ಟ .!ಒಬ್ಬಳು ಹುಡುಗಿ ಇಡೀ ಮನಸ್ಸನ್ನೆಲ್ಲ ಆವರಿಸಿ ಕೊನೆಗೆ ದೊಡ್ಡದೊಂದು ಶೂನ್ಯ ಬಿಟ್ಹೊಗಿರ್ತಾಳೆ..!ಅವಳಿಲ್ಲದ ಬದುಕನ್ನು ಎದುರಿಸೋದು ಹೇಗೆ ? ಅನ್ನೋ ಪ್ರಶ್ನೆ ಎದ್ದಿರುತ್ತದೆ .ಒಂದು ಮುಗ್ಧ ಪ್ರೀತಿ ಸದ್ದಿಲ್ಲದೇ ಬಾಡಿರುತ್ತದೆ, ಮನಸು ಸದ್ದಿಲ್ಲದೇ ಒಡೆದಿರುತ್ತದೆ,ಕಣ್ಣೀರು ಸದ್ದಿಲ್ಲದೇ ಹರಿದಿರುತ್ತದೆ ."ಪ್ರೀತಿ ಕುರುಡಾದರೆ, break up ಮೂಕಾಗಿರುತ್ತದೆ.!"

ಅವಳಿನ್ನು ನನ್ನ ಪಾಲಿಗಿಲ್ಲ ಅನ್ನೋ ಯೋಚನೆಗೆ ಜೀವ ಬರಡಾಗುತ್ತದೆ. ಉಸಿರಾಗಿ ಇದ್ದವಳು ಹೊರತು ನಿಂತಾಗ ಜೀವ ಚಡಪಡಿಸದೇ ಇರತ್ತಾ?

ಜಗಳ, ಅವಳ ಕಣ್ನೀರು,ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು(ಪುಟ್ಟ ಮನೆ,ಸಂಸಾರ ಮಕ್ಕಳ ಹೆಸರು ),ಆ possessiveness, ಒಟ್ಟಿಗೆ ಕೂತು ಕೇಳಿದ ಹಾಡುಗಳು ,ನೋಡಿದ ಸಿನೆಮಾಗಳು, ಅವನಿಗಾಗಿ ಇವಳು, ಇವಳಿಗಾಗಿ ಅವನು ಹಾಡಿದ ಹಾಡುಗಳು,ಚೆಂದನೆಯ giftsಗಳು (teddy bear ಕೊಡೋದು ಜಾಸ್ತಿ ಅಲ್ವಾ?)ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ garden bench, ಅಥವಾ ಯಾವುದೋ ಒಂದು ಮಾಮೂಲಿ ಜಾಗ,"ನನ್ನ ಬಿಟ್ಟು chocolate ತಿನ್ನ ಬೇಡವೋ" ಅಂದ ಹುಡುಗಿಯ ಮಾತು, ಬೆನ್ನಿಗೆ ಬೆನ್ನು ಕೊಟ್ಟು ಕುಳಿತ ಸಮುದ್ರದ ದಂಡೆ .ಇವೆ ಅಲ್ವಾ ಕಾಡೋದು ಕಂಗೆಡಿಸೋದು ...!?

ಪ್ರೀತಿ ಇಲ್ಲದ ಮೇಲೆ ? ಬಾಳಿಗೆಲ್ಲಿದೆ ಅರ್ಥ ?show me the meaning of being lonely ಹಾಡು ಇಷ್ಟ ಆಗತ್ತೆ ಅಲ್ವಾ? ಮನಸಿನ ಮೂಲೆಯಲ್ಲಿ 'ಹುಡುಗೀರೆಲ್ಲ ಹೀಗೆ' ಅನ್ನೋ ಭಾವ. ಪ್ರೀತಿಯ ಗಂಗೆ ಹರಿಯುತ್ತಿದ್ದರೂ ಕುಡಿವವರಿಲ್ಲ ..!

ಹುಡುಗಿ ಕೊಟ್ಟ ಗ್ರೀಟಿಂಗ್ ಕಾರ್ಡ್ ಇನ್ನೂ ಭದ್ರವಾಗಿದೆ ಹುಡುಗನ ಬಳಿ .ಹಲವು ವರ್ಷಗಳ ನಂತರ ಗಡಿಬಿಡಿಯ ಜೀವನದಲ್ಲೋ ಆ ಕಾರ್ಡು ಕೈಗೆ ಸಿಕ್ಕಾಗ ಮುಖದಲ್ಲೊಂದು ಮುಗುಳು ನಗೆಯ ಸುಳಿ.ಅವಳ ನೆನಪುಗಳನ್ನು ಭದ್ರವಾಗಿ ಇಟ್ಟಿದ್ದಾನೆ .ಸಮುದ್ರದಂಚಲಿ ಒಮ್ಮೊಮ್ಮೆ ಹೋದಾಗ ಗೊತ್ತಾಗುತ್ತದೆ ಕಣ್ನೀರು ಉಪ್ಪು ಎಂದು .!ಅದೇ ಕಲ್ಲು ಬೆಂಚನ್ನು ಸವರಿ ಬರ್ತಾನೆ . ನಿರ್ಜೀವ ಕಲ್ಲಿನಲ್ಲೂ ಹುಡುಗಿಯ ನೆನಪು ...FM ನಲ್ಲಿ ಅವಳು ಹಾಡಿದ ಹಾಡು ಕೇಳಿದಾಗ ಹಳೆಯ ನೆನಪುಗಳು ಮತ್ತೊಮ್ಮೆ ಕಾಡುತ್ತವೆ .!ತನ್ನಷ್ಟಕ್ಕೆ ನಗ್ತಾನೆ ಹುಡುಗ .. !


ಮುಂದೆ ಕೂದಲು ಬೆಳ್ಳಗಾಗಿ ,ಬಾಯಿ ಬೊಚ್ಚಾಗಿ (ಹಲ್ಲು set ಇರತ್ತೆ ಬಿಡಿ ) ,ಅರವತ್ತರ ಅರಳು-ಮರಳಿನಲ್ಲೂ ಮೊದಲ ಪ್ರೀತಿ ಕಾಡ್ತಾನೇ ಇರತ್ತೆ 'ಅದೇ ಹುಡುಗಿಯ' ಹೆಸರು ಕೇಳಿದಾಗ ಅಜ್ಜ ನಗ್ತಾನೆ ..!ಗಲ್ಲ ಕೆಂಪಾಗಲೂಬಹುದು ..!ಪ್ರೀತಿ ನೀ ಹೀಗೇಕೆ ???








Monday, February 8, 2010

ನಾನು ಹೇಳುವುದ ಕೇಳು ಒಮ್ಮೆ..!!



ನನ್ನ ಕಣ್ಣ ಅಂಚಿನಲಿ
ಹನಿಯು ಜಾರುವ ಮುನ್ನ
ನಿನ್ನ ಅಂಗೈಯನ್ನು ಹಿಡಿದುಬಿಡು ಒಮ್ಮೆ .!


ನನ್ನ ಮನದ ಹಾಡು
ಮರೆತು ಹೋಗುವ ಮೊದಲು
ನನ್ನೆದುರು ಕುಳಿತು ಕೇಳಿಬಿಡು ಒಮ್ಮೆ..!

ನನ್ನೊಳಗಿನ ನಾನು
ಕಳೆದು ಹೋಗುವ ಮೊದಲು
ಓಡಿಬಂದೆನ್ನನು ಅಪ್ಪಿಬಿಡು ಒಮ್ಮೆ ..!


ನನ್ನ ಮನದ ಕನಸುಗಳು
ಬಾಡಿ ಹೋಗುವ ಮುನ್ನ
ನಿನ್ನ ಪ್ರೀತಿಯ ಜಲವ ಸುರಿದುಬಿಡು ಒಮ್ಮೆ .!




ನನ್ನೆದೆಯ ಬಡಿತವದು
ನಿಂತು ಹೋಗುವ ಮೊದಲು
ನಿನ್ನ ಹೆಸರನ್ನು ಕೇಳಿಬಿಡು ಒಮ್ಮೆ.. !




























Saturday, February 6, 2010

ಸಂಜೆ ಮುಳುಗುವ ಮುನ್ನ...!!









ಅಂದು ಶನಿವಾರ ..ಸುಮ್ಮನೆ ನಡೆಯುತ್ತಿದ್ದೆ ನನ್ನ ನೆಚ್ಚಿನ M.G roadನ ಉದ್ದಕ್ಕೆ, ಸಂಜೆ ಬೀಳುವುದರಲ್ಲಿತ್ತು , ಅದೇನೋ ಖುಷಿ ಆ ಜನಜಂಗುಳಿಯಲ್ಲಿ ಒಂಟಿಯಾಗುವುದು .! ವಾಹನಗಳಲ್ಲಿ ಓಡಾಡುವ ನಮಗೆ ಒಂದು ರಸ್ತೆ ತನ್ನಲ್ಲಿ ಏನೆಲ್ಲವನ್ನು ಬಚ್ಚಿಟ್ಟುಕೊಂಡಿರುತ್ತದೆ ಎಂದು ತಿಳಿದೇ ಇರುವುದಿಲ್ಲ.!

ದಿನದ ಗಲಾಟೆಯ ಮುಗಿಸಿ ಪಡುವಣದ ಬಾನಲ್ಲಿ ತನ್ನ ರುಜು ಹಾಕಿ ಹೊರಡಲು ತಯಾರಿಯಲ್ಲಿದ್ದ ಸೂರ್ಯ . ಮನೆಯ ಸೇರುವ ಗಡಿಬಿಡಿಯಲ್ಲಿದ್ದ ಮಹಿಳೆಯರು ,ಟ್ಯೂಶನ್ ಮುಗಿಸಿ ಸುಸ್ತಾಗಿದ್ದ ಮಕ್ಕಳು . ನಾನು high school ನಲ್ಲಿ ಇದ್ದಾಗ ಚಿತ್ರಕಲಾ ಪ್ರದರ್ಶನದಲ್ಲಿ 'ಜನಸಂಖ್ಯಾ ಸ್ಪೋಟ ' ತಲೆಬರಹದ ಅಡಿ ಜನರನ್ನು ಭರ್ತಿ ತುಂಬಿಕೊಂಡು ಒಂದು ಕಡೆ ವಾಲಿಕೊಂಡಿದ್ದ ಬಸ್ಸು ಇಲ್ಲಿ ಜೀವಂತವಾಗಿತ್ತು . !
ಬಹುಮಹಡಿಯ ಕಟ್ಟಡದ ತುದಿಗೆ ಏರಿ ಬಣ್ಣ ಬಳಿಯುವುದರಲ್ಲಿ ನಿರತರಾಗಿದ್ದ ಮೂವರು , ಅಜ್ಜನ ಕೈಹಿಡಿದು walking ಗೆ ಹೊರಟಿದ್ದ ಕೆಂಪು ಅಂಗಿಯ ಪೋರಿಯ ಹೆಜ್ಜೆಗಳಲ್ಲಿ ಅದೇನೋ ಹುರುಪು .!ಗೂಡಂಗಡಿಯ ಬಳಿ ನಿಂತು ಬೀಡಿ ಎಳೆಯುತ್ತಿರುವ ಕೂಲಿಯ ಮುದುಕನ ಹಣೆಯಲ್ಲಿ ನೆರಿಗೆಗಳ ಮೆರವಣಿಗೆ. courierಗಳ ಹಾವಳಿಯಿಂದಾಗಿ ಮೆಲ್ಲನೆ ಉಸಿರಾಡುತ್ತಿರುವ ಅಂಚೆ ಕಚೇರಿಯ ಪಕ್ಕದ ಖಾಲಿ ಜಾಗದಲ್ಲಿ ಒಲೆ ಹೊತ್ತಿಸಿರುವ ಜೋಪಡಿ ಕುಟುಂಬ. ಮೂರುವರೆ ಕಾಲುಗಳಲ್ಲಿ ಓಡಾಡಿಕೊಂಡಿದ್ದ ನಾಯಿಯನ್ನು ಕಂಡು ಮನಸು 'ಅಯ್ಯೋ' ಅಂದರೂ, ಬದುಕುವ ಪರಿ ಕಂಡು ಖುಷಿಗೊಂಡಿತು. ರಸ್ತೆಯ ಪಕ್ಕದ ಮನೆಯೊಂದರಲ್ಲಿ ಕಂಪೌಂಡಿನ ಈಚೆ ಇಣುಕುತ್ತಿದ್ದ 'ಬೋಗನ್ವಿಲ್ಲಾ'(ಮಾಮೂಲಿ ಕನ್ನಡದಲ್ಲಿ ಕಾಗದದ ಹೂವು ) ಹೂಗಳ ಕಂಡು ನಮ್ಮಮನೆಯಲ್ಲಿರದ ಬಣ್ಣವನ್ನು ಹುಡುಕುತ್ತಿದ್ದ ನನ್ನ ಕಂಗಳು.ಮಂಗಳೂರಿನ ಮನೆಗಳಲ್ಲಿ ನಮ್ಮ ಮನೆಯ ಬಿಂಬವ ಹುಡುಕುವ ಕಳ್ಳ ಮನಸಿನ ಪರಿಗೆ ನಕ್ಕು ಮುಂದೆ ನಡೆದಿದ್ದೆ.
Infosysನ ಎದುರುಗಡೆಯ ಅಂಗಡಿ ಸಾಲುಗಳಲ್ಲಿ ಸಿಗರೇಟ್ ಸುಡುತ್ತ stress free ಆಗುತ್ತಿದ್ದ ನಮ್ಮ software ಯುವಕರು . ರೊಯ್ಯನೆ ಸದ್ದು ಮಾಡುತ್ತಾ ಸಾಗುವ bikeಗಳ ಮೌನ ಲಹರಿ ನನ್ನ ಮನಸ್ಸಿಗೆ ಅದೇನೋ ವಿಚಿತ್ರ ಆನಂದವನ್ನು ಕೊಟ್ಟಿತ್ತು.. !ಬೆನ್ನಿಗಂಟಿ ಕುಳಿತಿದ್ದ girl friend ಜೊತೆ ಬೈಕೇರಿದ್ದ ಹುಡುಗನ ಕಣ್ಣುಗಳು ಮಂಗಳೂರಿನ low waist pant ಹುಡುಗಿಯರ ಗುಂಪಿನಲ್ಲಿ. !
virgin mobile ಜಾಹಿರಾತಿನ ದೊಡ್ಡ ಪೋಸ್ಟರಿನಲ್ಲಿ ಜೆನಿಲಿಯಾ ಮತ್ತು ರಣಭೀರ್ ಜೋಡಿಯನ್ನು ನೋಡಿ ಕಣ್ಣು ಮಿಟುಕಿಸಿದೆ . !foot pathನಲ್ಲಿಯ ಪುಸ್ತಕಗಳ ರಾಶಿಯಲ್ಲಿ 'wings of fire' .!softballಗಳನ್ನು ಮಾರುತ್ತಿದ್ದ ಬಿಹಾರಿ ಹುಡುಗನ ಕಂಗಳಲ್ಲಿ ನಿರೀಕ್ಷೆ, ಯಾಚನೆ.. !'ಶಿವ ಕೈಲಾಸ್ ' ಭೇಲ್ ಪುರಿಯ ಅಂಗಡಿಯ ಬಳಿ ಘಮ್ಮೆನುವ ಮಸಾಲೆಯ ಪರಿಮಳ .!

ಹಾಗೆ ನಡೆಯುತ್ತಾ ನಾನು ಬಂದು ನಿಂತದ್ದು ಬೊಂಡ (ಎಳನೀರು ) ಕುಡಿಯಲು ಮಾಮೂಲಿ ಅಜ್ಜನ ಅಂಗಡಿಯ ಹತ್ತಿರ, ಸಾವಿರ ನೆರಿಗೆಗಳು ಬಿದ್ದ ಕೈಗಳು ಕೆಲಸ ಮಾಡುತ್ತಿದ್ದರೂ ನನ್ನನು ಕಂಡ ಅಜ್ಜನ ಮುಖದಲ್ಲಿ ಆತ್ಮೀಯತೆಯ ನಗು. "ಎಂಚ ಉಲ್ಲೆರ್?" ಎಂದು ಕೇಳುತ್ತಲೇ ಅಜ್ಜನ ಬೊಚ್ಚು ಬಾಯಿ ಇನ್ನಷ್ಟು ಅಗಲ. ಇಳಿವಯಸ್ಸಿನಲ್ಲೂ ತಣಿಯದ ಅವರ ಜೀವನೋತ್ಸಾಹ ನನಗೆ ಅಚ್ಚರಿ ತರುತ್ತದೆ .!

ಬೊಂಡ ಕುಡಿದು,ಅವರ ಕಷ್ಟ-ಸುಖ ವಿಚಾರಿಸಿ ನಗಿಸಿ,ರೂಮಿಗೆ ಬಂದ ನನಗೆ,ಮೈಯೆಲ್ಲಾ ಬೆವರಿ ಅಂಟಂಟು ಆದದ್ದು ನೆನಪಾಯಿತು . ಹಾಗೆ ತಣ್ಣೀರು ಸ್ನಾನ ಮಾಡಿದ ನನ್ನಲ್ಲಿ . ಮುಂದಿನ ಒಂದು ವಾರಕ್ಕಾಗುವಷ್ಟು ಚೈತನ್ಯ ತುಂಬಿತ್ತು .!ಮನಸ್ಸು ಆಗ ತಾನೇ ಸೋನೆ ಮಳೆಯಲ್ಲಿ ಮಿಂದ ಚಿಗುರಿನಂತಾಗಿತ್ತು .!










Wednesday, February 3, 2010

Its all about Friendship..!






freinds ಅನ್ನೋ ಜೀವಿಗಳೇ ವಿಚಿತ್ರ..!Friendship ಬೆಳೆಯೋ ರೀತಿ ಇನ್ನೂ ವಿಚಿತ್ರ ..!ರಕ್ತ ಸಂಬಂಧದ ವಯ್ಯಾರವಿಲ್ಲದೆ,ಜಾತಿ,ಮತ ,ಧರ್ಮ,ದೇಶ, ಭಾಷೆ ಇವೆಲ್ಲವುಗಳ ಬೇಲಿಯನ್ನು ದಾಟಿ ಹಬ್ಬಿ ಬೆಳೆಯೋ ಬಳ್ಳಿ ಈ 'ಸ್ನೇಹ' !.ಅಣ್ಣ ತಮ್ಮಂದಿರು ದಾಯಾದಿಗಳಾಗಬಹುದು,ಜೀವದಂತೆ ಪ್ರೀತಿಸಿದ ಹುಡುಗ /ಹುಡುಗಿ ಕೈಕೊಟ್ಟವರು ಎನಿಸಿ ಕೊಳ್ಳಬಹುದು ಆದರೆ 'Friends' ಮಾತ್ರ ಯಾವತ್ತು Friends .! .

True friends ಅನಿಸಿಕೊಂಡಿರ್ತಾರಲ್ವಾ? ಅವ್ರು ನಿಮ್ಮ boy/girl friendಗಿಂತ ಜಾಸ್ತಿ ಪ್ರೀತಿಸಿರ್ತಾರೆ ! ನಮ್ಮ ಬಗ್ಗೆ posessive ಆಗಿರ್ತಾರೆ, ಅಕ್ಕ ತಂಗಿಯರಿಗಿಂತ ಜಾಸ್ತಿ ಕಾಡ್ತಾರೆ, ಅಣ್ಣ ತಮ್ಮಂದಿರ ಥರ ಜಗಳ ಆಡ್ತಾರೆ, ಅಪ್ಪನ ಥರ guide ಮಾಡ್ತಾರೆ ,ಎಲ್ಲೋ ಒಂದು ಹತಾಶ ಗಳಿಗೆಯಲ್ಲಿ ಅವರ ಮಡಿಲಲ್ಲೋ ,ಭುಜದ ಮೇಲೋ ತಲೆಯಿಟ್ಟು ಮಲಗಿದಾಗ ಅಮ್ಮನ ಥರ ಅನಿಸಿದರೂ ಅದ್ರಲ್ಲಿ ಆಶ್ಚರ್ಯವಿಲ್ಲ .!
ಅದೇ ಸ್ನೇಹಿತರು ನಿಮ್ಮನ್ನ ಒಂದು dipression ನಿಂದ ಎತ್ತಿರ್ತಾರೆ , 'i can't ' ಎಂದು ಕುಸಿದು ಕುಳಿತ ಘಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ 'you can'ಎಂದು ಹೇಳ್ತಾರೆ . ಅಂಥಾ ಸ್ನೇಹಿತರು ಜೀವನದ ಯಾವುದೋ ಒಂದು ತಿರುವಿನಲ್ಲಿ ಕಳೆದುಹೋಗ್ತಾರೆ ಅಲ್ವಾ? ಎಲ್ಲೋ ಒಂದು ದಿನ ಫಕ್ಕನೆ ನೆನಪಾಗ್ತಾರೆ ..! ಅವರೊಂದಿಗೆ ಗಂಟೆಗಟ್ಟಲೆ ಹರಟಿದ ಘಳಿಗೆ ,small stupid fights, ಅಡ್ಡಹೆಸರು , long ride, ಯಾವುಒದೋ ಒಂದು trip, ಅವರೊಂದಿಗೆ ಕುಡಿದ ಬೈ-ಟು ಕಾಫಿ,ಸೇದಿದ ಬೈ-ಟು ಸಿಗರೇಟ್,(it shows the depth of the friendship it seams),class ನಲ್ಲಿ ಹೊರಗೆ ಹಾಕಿದಾಗ ಬೇಕಾಬಿಟ್ಟಿ ಅಡ್ಡಾಡಿದ್ದು,ಯಾವ್ದೋ ಬಾರಲ್ಲಿ ಗುಂಡು ಹಾಕಿದ್ದು ,ಹುಡುಗೀರನ್ನು follow ಮಾಡಿದ್ದು..... ಇವನ್ನೇ ಅಲ್ವಾ? ನಾವು ಕೊನೆಗೆ ಮಿಸ್ ಮಾಡೋದು ?
ನಮ್ಮ ಜೀವನದಲ್ಲಿ ಯಾರೋ ಒಂದು ಹೊಸ ವ್ಯಕ್ತಿಯ ಆಗಮನವಾದಾಗ ಗೆಳೆಯರನ್ನು ಮರೆತಿರ್ತೇವೆ ಅಥವಾ ಒಂದು ಜಗಳ, ಭಿನ್ನಾಭಿಪ್ರಾಯಕ್ಕೆ ಅದ್ಭುತ ಸ್ನೇಹಿತರನ್ನ ಕಳೆದುಕೊಂಡಿರ್ತೇವೆ . ಆ ಕ್ಷಣಕ್ಕೆ ಮನಸು ಅವರನ್ನು ಕ್ಷಮಿಸಿಯೇ ಇರುವುದಿಲ್ಲ .ಸ್ನೇಹದ ಸೇತುವೆ ಸದ್ದಿಲ್ಲದೇ ಮುರಿದು ಬಿದ್ದಿರುತ್ತದೆ . ನಮ್ಮ ego,attitudeಗಳ ನಡುವೆ ಸ್ನೇಹದ ಹೂವು ಬಾಡಿರುತ್ತದೆ .
Dear friends ನಿಮ್ಮ ಜೀವನದಲ್ಲೂ ಇಂಥ ಘಟನೆಗಳು ಆಗಿದ್ದಿರಬಹುದು ಅಥವಾ ಮುಂದೆ ಆಗಲೂಬಹುದು..ಗೆಳೆಯರನು ಅವರ ಸಣ್ಣ ತಪ್ಪುಗಳಿಗೆ ಕಣ್ಮುಚ್ಚಿ ಕ್ಷಮಿಸಿಬಿಡಿ. ಯಾಕೆಂದ್ರೆ life is too short .! ಈ ಭೂಮಿಯಲ್ಲಿ ಮಾನವರಾಗಿ ಹುಟ್ಟಿದ್ದೇವೆ. ಹೃದಯಗಳನ್ನು ಗೆಲ್ಲೋಣ ,ಸ್ನೇಹ ಪ್ರೀತಿಗಳನ್ನು ಹರಡೋಣ.. ನಾಳೆ ಎಂಬುದು ಯಾರಿಗೆ ಗೊತ್ತು ? ಬಂದಾಗಲೇ ನಿಜ ಅಲ್ವಾ? A Friend is some one with whom you can dare to be yourself ..! Hats off to Friends and Friendship..!!

Monday, February 1, 2010

ಅದ್ಯಾಕೆ ಹಾಗಾಗುತ್ತದೆ ??



ಮನೆಗೆ ಹೋದರೆ ಹಾಗೆ,ವಾಪಾಸ್ ಮಂಗಳೂರಿಗೆ ಬರಬೇಕೆಂದು ಅನಿಸುವುದೇ ಇಲ್ಲ . ಅಲ್ಲೇ ತೋಟ,ಗದ್ದೆ,ನದಿ,ಬೆಟ್ಟ ಎಂದು ಓಡಾಡಿಕೊಂಡು ಇರಬೇಕು ಎಂದೆನಿಸುತ್ತದೆ .



ಅದ್ಯಾಕೆ ಹಾಗಾಗತ್ತೋ ಗೊತ್ತಿಲ್ಲ ಪ್ರತಿಸಲ ರಜ ಮುಗಿಸಿ ಮಂಗಳೂರಿಗೆ ಹೊರಡುವ ಹಿಂದಿನ ದಿನ ನನ್ನ ರೂಮು,ನನ್ನ ಮನೆ, ನನ್ನೂರು, ಅದೆಲ್ಲವನ್ನು miss ಮಾಡ್ತೇನೆ . ಕೊನೆಗೆ ನನ್ನ ಡ್ರೆಸ್ಸಿಂಗ್ ಟೇಬಲ್ ,ಮಂಚ, PC ಎಲ್ಲವನ್ನೂ ಪ್ರೀತಿಯಿಂದ ಸವರಿ ಮನೆಯ ಮಹಡಿಯ ಗ್ಯಾಲರಿಯಲ್ಲಿರುವನನ್ನ ಆರಾಮ ಖುರ್ಚಿಯಲ್ಲಿ ಕೂತ್ಕೊಂಡು ನಕ್ಷತ್ರಗಳು ತುಂಬಿದ ಆಕಾಶವನ್ನು ನೋಡುತ್ತಿದ್ದರೆ ಮನದೊಳಗೆ ಯೋಚನೆಗಳು ಮೆರವಣಿಗೆ ಹೊರಡುತ್ತವೆ . ಕಣ್ಣೇರು ತುಂಬಿ ನಕ್ಷತ್ರಗಳು ಮಸುಕಾಗಿ ಕಾಣುವಾಗಲೇ ಗೊತ್ತಾಗೋದು ನಾನು ಅಳುತ್ತಿದ್ದೆನೆಂದು. 'ಭಾವನೆಗಳ ಮೂಕ ರೂಪವೇ ಈ ಕಣ್ಣೀರ ಹನಿಗಳು.'! ಸಾವಿರ ಶಬ್ದಗಳಲ್ಲಿ ಹೇಳಲಾಗದ ಮಾತುಗಳನ್ನು ಒಂದು ಹನಿ ಕಣ್ಣೀರು ಹೇಳುತ್ತದೆ ಅಲ್ವಾ?



ನಾಳೆ ಇದೇ ಆಗಸವನ್ನು ಮಂಗಳೂರಿನಲ್ಲಿ ನೋಡಬೇಕಲ್ಲ ಎನ್ನುವ ಯೋಚನೆಗೆ ಕಣ್ಣೀರು ಗಲ್ಲವನ್ನು ತೋಯಿಸಿಬಿಡುತ್ತದೆ. bag pack ಮಾಡಲಂತೂ ಮನಸೇ ಬರುವುದಿಲ್ಲ . ಅದ್ಯಾಕೆ ಮನೆ , ನಮ್ಮೂರು ಅಂದರೆ ಅಷ್ಟೊಂದು attachment ? ಪ್ರಶ್ನೆಯನ್ನು ಕೇಳಿ ನಾನೇ ಉತ್ತರವನ್ನು ನನಗೆ ತೋಚಿದ ರೀತಿಯಲ್ಲಿ ಹೇಳಿ ಬಿಡುತ್ತೇನೆ ಕೇಳಿ.

ಬಾಲ್ಯದಲ್ಲಿ ಆಡಿದ ಮನೆಯಂಗಳ , ಆತ್ಮೀಯವಾಗಿ ಬರಮಾಡಿಕೊಂಡಂತೆ ಕಾಣುವ ನಮ್ಮ ರೂಮು, ನೆಟ್ಟಿ ಬೆಳೆಸಿದ ಹೂಗಿಡಗಳು,ಹೊಳೆದಂಡೆಯ ಅಂಚಿನಲ್ಲಿ ಬಾಗಿರುವ ತೆಂಗಿನ ಮರ, ಕನಸುಗಳ ಕಟ್ಟಿಕೊಂಡ ಜಾಗ, ಗೆಳೆಯರೊಂದಿಗೆ cricket ಆಡಿದ ಬಯಲು, ಬಾಲ್ಯದ ಗೆಳತಿ/ ಗೆಳೆಯರೊಂದಿಗೆ ಅಡ್ಡಾಡಿದ ಜಾಗ, ಹೊಳೆದಂಡೆಯ ಹಸಿಮರಳು , ಗೆಳತಿಯೊಂದಿಗೆ ಬೆಚ್ಚಗೆ ಅಡ್ಡಾಡಿದ ಕಾಲುದಾರಿ , ಗುಡ್ಡದ ಸೂರ್ಯಾಸ್ತ , ಚಳಿಗಾಲದ ಇಬ್ಬನಿಯ ಬಿಂದುಗಳ ಹೊತ್ತ ಜೇಡರ ಬಲೆ ರಕ್ತ ಸಂಬಂಧಗಳು .. ಇನ್ನೂ ಏನೇನೋ ..... ನೆನಪಾಗಿ ನಮ್ಮ ಸುಪ್ತ ಮನಸಿನ ಮೂಲೆಯೊಂದರಲ್ಲಿ ಅಡಗಿ ಕುಳಿತಿರುತ್ತವೆ . ಮನೆಯಿಂದ ಹೊರಡೋದು ಒಂದು ನೆಪವಾಗಿ ಕಾಡುತ್ತವೆ .

ಮೊನ್ನೆ ನನಗಾದದ್ದೂ ಅದೇ ಎಲ್ಲವನ್ನೂ ಬಿಟ್ಟು ಹೊರಡಬೇಕಲ್ಲ ಎಂದು ಮೌನವನ್ನು ಅಪ್ಪಿದ್ದೆ. bustandಗೆ ಬಿಡಲು ಬಂದ ತಮ್ಮನಿಗೆ ಟಾಟಾ ಹೇಳಿ ಬಸ್ ಏರಿ ಕುಳಿತಿದ್ದ ನನಗೆ ಊರನ್ನು ಎಲ್ಲೋ ಖಾಯಂ ಆಗಿ ಬಿಟ್ಟು ಹೋಗೋ ಭಾವನೆ ಆವರಿಸಿಬಿಟ್ಟಿತ್ತು .! ಕಣ್ಣಲ್ಲಿ ಜೋಗ ಜಿನುಗಲು ರೆಡಿ.

ಈ ಭಾವನೆಗಳ ಸುಳಿಯಲ್ಲಿ ಸಿಕ್ಕಿ ಕಂಗಾಲಾಗಿದ್ದ ನನಗೆ ನನ್ನ moible ಕರೆದಾಗಲೇ ಎಚ್ಚರವಾದದ್ದು .! 'chaitu calling' ಎಂದು ತೋರಿಸುತ್ತಿತ್ತು . "ಎಂತಾ ಸೌಮ್ಯ ಯಾವಾಗ ಬರುವುದು ಮಂಗಳೂರಿಗೆ, ನಮ್ಮದೆಲ್ಲ ನೆನೆಪೆ ಇಲ್ಲವಾ ? , ಮರ್ಯಾದೆಯಿಂದ ಬರ್ತೀಯ ಅಥ್ವ ಒದ್ದು ಕರೆದುಕೊಂಡು ಬರಬೇಕಾ?" ಎಂದು ಪ್ರೀತಿಯಿಂದ ಗದರಿದ ಗೆಳತಿಗೆ "ಬರ್ತಿದೇನೆ ಮಾರಾಯ್ತಿ " ಎಂದೆ. ಅಷ್ಟರಲ್ಲಿ ಗೆಳೆಯನೊಬ್ಬನ message "missing u stupid..come soon " ಎಂದು .'ಕಣ್ಣೀರ ಸಿಂಚನವಾದ ಮೊಗದಲ್ಲಿ ನಗೆಯ ಕಾಮನ ಬಿಲ್ಲು !'



ಜೀವನ ಅಂದ್ರೆ ಹೀಗೆ ಅಲ್ವಾ? ಒಂದನ್ನು ಕಿತ್ಕೊಂಡು ಇನ್ನೊಂದನ್ನು ಕೊಡತ್ತೆ .. ಮನೆ ,ಊರನ್ನ ನಾನು miss ಮಾಡೋವಂತೆಮಾಡಿ ಸ್ನೇಹಿತರ ಪ್ರೀತಿಯನ್ನು ಕೊಟ್ಟಿತ್ತು ' कुछ पाने के लिए कुछ खोनातो पड़ेगा ना ?'