Saturday, July 3, 2010

ಸಸ್ಯಶಾಸ್ತ್ರಜ್ಞೆ ನನ್ನ ಅಜ್ಜಿ

ನಿನ್ನೆ ಅಜ್ಜಿ ಮನೆಗೆ ಹೋಗಿದ್ದೆ .ಅದೇನೋ ನಂಟು ಈ ಮಳೆಗಾಲಕ್ಕೆಮತ್ತು ಅಜ್ಜಿ ಮನೆಗೆ. ಹೆಚ್ಚೇನು ದೂರವಿಲ್ಲ ನನ್ನ ಅಜ್ಜಿ ಮನೆ, ಹೆಚ್ಚೆಂದರೆ ೧೦ ಕಿಲೋ ಮೀಟರುಗಳು ಇರಬಹುದು ನಮ್ಮ ಮನೆಯಿಂದ.


ಮಧ್ಯಾಹ್ನ ಮೊಸರನ್ನ, ಪಲ್ಯ ಉಪ್ಪಿನಕಾಯಿ,ಹಪ್ಪಳಗಳ ಭರ್ಜರಿ ಊಟ ಆದ ನಂತರ ಅಜ್ಜಿಯ ಹತ್ತಿರ " ಒಂದು ರೌಂಡ್ ಬೆಟ್ಟಕ್ಕೆ ಹೋಗಬಪ್ಪ ಬಾರೆ " ಎಂದೆ. ತುಂತುರು ಮಳೆ ಹನಿಸುತ್ತಲೇ ಇತ್ತು, ಅಜ್ಜಿಗೆ ಎಲ್ಲಿ ಮೊಮ್ಮಗಳಿಗೆ ಶೀತವಾದರೆ ಎಂಬ ಕಾಳಜಿ. " ಇವತ್ತು ಮಳೆನಲೇ , ಜ್ವರ ಬತ್ತು ನೆನೆಯಡ" ಎಂದರು. ಇದೆ ಮಾತನ್ನು ನಿರೀಕ್ಷಿಸುತ್ತಿದ್ದೆ ನಾನು. "ಮಳೆಗಾಲದಲ್ಲಿ ಮಳೆ ಸುರಿಯೋದೆಯ, ಬಾ ನೀನು" ಎನ್ನುತ್ತಲೇ ಅಂಗಳಕ್ಕೆ ಇಳಿದುಬಿಟ್ಟಿದ್ದೆ . ನನ್ನ ಬಣ್ಣದ ಬಂದೂಕನ್ನು (ಕೊಡೆ)ಹಿಡಿದು.ಬೆಳೆಯನ್ನೇ ಬೆಳೆಯದೆ ಹಾಗೆ ಬಯಲಾದ ಗದ್ದೆಯಲ್ಲಿ ನಮ್ಮನ್ನು ಸ್ವಾಗತಿಸಿದ್ದು 'ಅಲೆ ಹಗ್ಗ' ಹಾಕಿ ಕಟ್ಟಿ ಮೇಯಲು ಬಿಟ್ಟ ಒಂದು ಎಮ್ಮೆ. "ನಿನ್ನ ನೆಮ್ಮದಿಗೆ ಭಂಗವಿಲ್ಲ. ..ಎಮ್ಮೆ ನಿನಗೆ ಸಾಟಿಯಿಲ್ಲ" ಎಂದು ನಾನು ಹಾಡಲು ಶುರುವಿಟ್ಟುಕೊಂಡರೆ. ಅಜ್ಜಿ " ಕೊಡೆ ಬಿಡಸೆ ಮಳೆ ಬತ್ತಿದ್ದು" ಎನ್ನುತ್ತಿದ್ದರು. ನೀರು ಹರಿದಲ್ಲೆಲ್ಲ ಕೆರೆ. ಪುಟ್ಟ ಝರಿ... ಇನ್ನೂ ಹೇಳಬೇಕೆಂದರೆ ನೈಸರ್ಗಿಕ water park.

ಅದೇನೋ ಖುಷಿ ತುಂತುರು ಮಳೆಯಲ್ಲಿ ನೆನೆಯುವುದೆಂದರೆ, ಅಮ್ಮನ ಜೊತೆ ಪೇಟೆಯಲ್ಲಿ ಅಡ್ಡಾಡುವುದೆಂದರೆ,ಅಜ್ಜಿಯ ಜೊತೆ ಬೆಟ್ಟಕ್ಕೆ, ಅಜ್ಜನ ಜೊತೆ ತೋಟಕ್ಕೆ ಹೋಗುವುದೆಂದರೆ. ಅದೊಂಥರ default combination.
ಹಾದಿ ಬದಿಯ ಹೂ ಕಾಯಿಗಳನ್ನು ನೋಡುತ್ತಾ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತ, ಅದರ ಹೆಸರುಗಳನ್ನು ಅಜ್ಜಿಯ ಹತ್ತಿರ ವಿಚಾರಿಸುತ್ತಾ ನಡೆಯುತ್ತಿದ್ದೆ. ಅಜ್ಜಿಯೂ ಉತ್ಸಾಹದಿಂದ ವಿವರಿಸುತ್ತಲೇ ಹೋದರು. ಕೆಲವು ಚಿತ್ರಗಳು ನಿಮಗಾಗಿ.

ಬೇಲಿಬದಿಯ ಮಾಮೂಲಿ ಸುಂದರಿ: ತೇರು ಹೂವು
ಅಂಗಳದ ಅಥಿತಿ: ಅವಲಕ್ಕಿ ಹುಲ್ಲು


ಬೇಲಿಸುಂದರಿ: ನುಕ್ಕಿ ಗಿಡದ ಹೂವು

ಕಾಡು ಲವಂಗ (ಗೆಣಸಲೆ ಎಲೆ )


ಹಾವಿನ ಹಣ್ಣು

ಹಳಚಾರೆ ಹಣ್ಣು ಕೊಂಬ್ಲಾರಜ್ಜಿ (ವಿಷದ ಹೂವು ) ಅದರ ಗಿಡ
ಕಾಡು ಗಿಡಗಳಿಗೆ ಹಿಂದಿನ ತಲೆಮಾರಿನ ಜನರಿಟ್ಟ ಹೆಸರುಗಳೇ ವಿಚಿತ್ರ. ಆದರೆ ಸಸ್ಯಶಾಸ್ತ್ರೀಯ ಹೆಸರುಗಳಿಗಿಂತ ತುಂಬಾ ಇಷ್ಟವೂ, ಅತ್ಮೀಯವೂ ಆಗುವಂತ ಹೆಸರುಗಳು ಅವು. ಅಜ್ಜಿ ಅದರ ಉಪಯೋಗಗಳನ್ನೂ ಹೇಳುತ್ತಿದ್ದರು. ತನ್ಮಯತೆಯಿಂದ ಪಕ್ಕಾ ವಿದ್ಯಾರ್ಥಿಯಾಗಿ ಕೇಳುತ್ತಿದ್ದೆ. ಮಳೆಯ ಹನಿಯಲ್ಲಿ ತೋಯ್ದಿತ್ತು ನೆಲ, ಗಿಡ, ಹೂವು, ಹಣ್ಣು, ನನ್ನ ಮೈ-ಮನಸ್ಸು ಎಲ್ಲ. 'ಮುಂಗಾರು ಮಳೆಯೇ...' ಎಂದು 'ಸೋನು ನಿಗಮ್ ' ಹಾಡಿದಂತೆ ಆಯಿತು.


ನೆಕ್ಕರಕದ ಹೂ

ಬೆಳ್ಳಟ್ಟೆ ಹೂವು

ಕುಸುಮಾಲೆ ಹೂವು
ವಾಪಸ್ ಮನೆಗೆ ಮರಳುವ ಹೊತ್ತಿಗೆ ನನ್ನ ನನಗೆ ಅಜ್ಜಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿ ಕಂಡದ್ದಂತೂ ಸುಳ್ಳಲ್ಲ ...!


13 comments:

 1. ಎಷ್ಟು ಚೆನ್ನಾಗಿದ್ದೆ article ಮತ್ತೆ fotos..ನಿನ್ನ ಬರಹದಲ್ಲಿ "ಹಾಗೆ ಜೊತೆಗೆ ಕರ್ಕೊಂಡು ಹೋಪ" knack ಇದ್ದು!!!
  ಹೀಂಗೆ ಬರೀತಾ ಇರು!!

  ಹೆಮ್ಮೆಯಿಂದ
  -ಸುಮನಕ್ಕ

  ReplyDelete
 2. ಮಳೆಗಾಲದ ಸುಂದರ ಚಿತ್ರಣ.
  ಅಜ್ಜಿಯ ಅನುಭವದ ಮಾತುಗಳು ಚಲೋ ಬಯಿಂದು.

  ReplyDelete
 3. ನಾನು first time ಈ ಬ್ಲಾಗ್ ನೊಡಿದ್ದು,ಓದಿದ್ದು.ತು0ಬ ಚೆನ್ನಗಿದೆ.ಎಲ್ಲವನ್ನು ಓದಲು ಸಾದ್ಯ ಆಗಿಲ್ಲ,ಓದಬೇಕು...

  ReplyDelete
 4. ಸೌಮ್ಯ,
  ತುಂಬಾ ಸುಂದರ ಫೋಟೋಗಳು.... ನನ್ನ ಮನೆಯ ಸುತ್ತಲ ದ್ರಶ್ಯ ನೆನಪಿಗೆ ಬಂತು........ ಧನ್ಯವಾದಗಳು........ ಸುಂದರ ವಿವರಣೆ ಕೂಡ...... ಅಜ್ಜಿಗೆ ಥ್ಯಾಂಕ್ಸ್ ಹೇಳಿ.....

  ReplyDelete
 5. ಸೌಮ್ಯ
  ಎಂತದೆ ನೀನು, ಮನೆ ನೆನಪು ಮಾಡಿಬಿಟ್ಟೆ
  ಊರಿನ ಮಳೆಗಾಲ, ಹಲಸಿನ ಹಣ್ಣಿನ ಕಡುಬು, ಹಲಸಿನ ಹಪ್ಪಳ
  ಬೆಚ್ಚಗಿನ ಬೆಂಕಿ

  ಎಲ್ಲ ನೆನಪಾತು
  ಚೊಲೋ ಬರದ್ದೆ

  ReplyDelete
 6. Next time ajji manege hogakkaare nannu karkandu hogu.. :) nice article somi :)

  ReplyDelete
 7. ಸೌಮ್ಯ,,, ನಿಮ್ಮ ಜೊತೆ ನಾನು ಇದ್ದೆ ಅನ್ನೋ ಭಾವನೆ ಬರೋ ಹಾಗಾಯ್ತು ಫೋಟೋಸ್ ನೋಡಿ...

  ReplyDelete
 8. ಸೌಮ್ಯ್ ಬಹಳ ಒಳ್ಲೆಯ ಚಿತ್ರಗಳು ಅವಕ್ಕೆ ವಿವರಣೆ ಹಚ್ಚಿ ನೀವೂ ಒಳ್ಲೆಯ ಚಿತ್ರ ಬರಹಗಾರ್ತಿ ಎನ್ನುವುದಕ್ಕೆ ಪಾತ್ರರಾಗುವ ಜೊತೆಗೆ..ಅಜ್ಜಿಗೆ ಕ್ರೆಡಿಟ್ ಕೊಟ್ಟಿದ್ದು ನಿಮ್ಮ ಸಂಸ್ಕಾರಕ್ಕೆ ಹಿಡಿದ ಕನ್ನಡಿ..ಒಳ್ಳೆಯದಾಗಲಿ...

  ReplyDelete
 9. ಅಂದ್ರೆ ನಮ್ ಅಪ್ಪ ನಿನ್ ಅಜ್ಜಿಗಿರೋ ಅಷ್ಟ
  ಬುದ್ದಿನು ನಿನಗಿಲ್ವಲೋ.. ಅಂತ ಅಂದಿದ್ ನಿಜ!!!

  ReplyDelete