Thursday, July 22, 2010

ಮಳೆಹನಿಗಳ ಜೊತೆಯಲಿ ....


ಭೂಮಿಯಲ್ಲಿನ ನೀರು ಆವಿಯಾಗಿ, ಮೋಡವಾಗಿ ವಿಶ್ವಪರ್ಯಟನೆ ಕೈಗೊಂಡು, ತಂಪು ಸಿಕ್ಕಾಗ ಮಳೆ ಹನಿಯಾಗಿ ಭೂಮಿಗೆ ಮರಳುತ್ತದೆ. ಇದೆಲ್ಲ school daysನಲ್ಲೆ ಗೊತ್ತಿದೆ ಅಂತೀರಾ ? ಇಲ್ಲಿ ನಾನು ಮಳೆಹನಿಗಳಿಗೆ ಭಾವನೆಯನ್ನು ಕೊಡಲು ಹೊರಟಿದ್ದೇನೆ . ನೋಡಿ ....

ಕೆಲವು ಮಳೆಹನಿಗಳು ಸಮುದ್ರ, ನದಿಗಳಲ್ಲೇ ಬಿದ್ದು ಅಖಂಡ ಜಲರಾಶಿಯಲ್ಲಿ ಒಂದಾಗುತ್ತದೆ. ಹನಿ ಹನಿ ಕೂಡಿ ಹಳ್ಳ ಎಂದು ಹೇಳುತ್ತವೆ.ಇನ್ನು ಕೆಲವು ಗುಡ್ಡ, ಬೆಟ್ಟ, ಮಳೆ ಕಾಡುಗಳ ನಡುವೆ ಬಿದ್ದು ಒಂದಾಗಿ ಜಲಪಾತವಾಗಿ ಧುಮ್ಮಿಕ್ಕುತ್ತವೆ. . ಇನ್ನೂ ಕೆಲವು ಮಣ್ಣಲ್ಲಿ ಇಂಗಿಹೋಗುವ ಮೊದಲು, ನಮ್ಮ-ನಿಮ್ಮ ಮನೆಯ ಅಂಗಳದ ಹೂಗಿಡಗಳ ಮೇಲೆ, ಎಲೆಗಳ ಮೇಲೆ ಬಿದ್ದು ನಲಿಯುತ್ತವೆ. ಒಣಗಲು ಹಾಕಿದ ಬಟ್ಟೆಯಮೇಲೆ ಬಿದ್ದು ಗೋಳು ಹೊಯ್ಸುತ್ತವೆ ಅಲ್ವಾ ? ಸೊಕ್ಕು ,ಮುಗ್ಧತೆ, ಅಸಹಾಯಕತೆ , ಅಟ್ಟಹಾಸ, ಅಸೂಯೆ, ಎಲ್ಲ ಭಾವಗಳನ್ನು ಹೊರಸೂಸುವ ಮಳೆಹನಿಗಳು ನನ್ನ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ ...!





ಇನ್ನೂ ಅರಳಬೇಕಿರುವ ಗುಲಾಬಿ ಮೊಗ್ಗಿನ ಮೇಲೆ ಮುಗುಮ್ಮಾಗಿ ಕುಳಿತು ಸುತ್ತಲಿನ ಜಗತ್ತನ್ನು ಕುತೂಹಲದಿಂದ ನೋಡುತ್ತಿರುವ ಪುಟ್ಟ ಮಳೆ ಹನಿ ಆರಿಹೊಯಿತೋ, ಮಣ್ಣು ಸೇರಿತೋ ನೋಡಿದವರಿಲ್ಲ. .!

ಗಿಡವೊಂದರ ಬಣ್ಣದ ಎಳೆಗಳ ಮೇಲೆ ಕುಳಿತಿರುವ ಮಳೆಹನಿಗಳು ಕಾಯುತ್ತಿರುವುದಾದರೂ ಯಾರನ್ನು ?
ಸುಂದರಿಯ ಮೂಗುತಿಯೋ ಇದು.? ಮಣ್ಣು ಸೇರಲು ಕಾತುರದಿಂದ ಕಾಯುತ್ತಿರುವ ಮಳೆಹನಿ ಬಾನಂಚಿನ ಉಲ್ಕೆಯಂತೆ ಜಾರಿ ಬೀಳಬಹುದು ..!

ಅದ್ಯಾವುದೋ ಹಕ್ಕಿಯ ಬಿದ್ದ ರೆಕ್ಕೆಯ ಮೇಲೆ ಬಿದ್ದಿರುವ ಅಸಹಾಯಕ ನೀರಹನಿ... ಇದರ ಗೋಳನ್ನು ಕೇಳುವವರಿಲ್ಲ ..!
ಹೂಗಳ ರಾಣಿ ತಾನೆಂದು ಬೀಗುವ, ಅದೀಗ ಬಿರಿದ ಗುಲಾಬಿ ಪಕಳೆಗಳ ಮಧ್ಯೆ ವಯ್ಯಾರ ತೋರುವ ಮಳೆಹನಿಗಳು..!
ಅಪ್ಸರೆಯೊಬ್ಬಳ ಮುತ್ತಿನ ಹಾರವೆಲ್ಲೋ ಹರಿದು ಮುತ್ತುಗಳೆಲ್ಲ ಚೆಲ್ಲಾಪಿಲ್ಲಿ ಆದಂತೆ ಕಾಣುವ ಕೆಸುವಿನ ಎಲೆಗಳ ಮೇಲೆ ಬಿದ್ದ ನೀರ ಹನಿಗಳು .! ನೀರಲ್ಲಿ ಮುಳುಗಿಸಿದರೆ ಒದ್ದೆಯಾಗದ ಕೆಸುವಿನ ಎಲೆಗಳಿಗೆ ಅದೇನೋ ಪ್ರೀತಿಯಂತೆ ಮಳೆಹನಿಗಳ ಮೇಲೆ ..!


ಹೋಳಿಹಬ್ಬದ ನೆನಪಾಗಿ ಮನೆಯಂಗಳದ ಚೆಂದದ ಬಣ್ಣದ ಕೆಸುವಿನ ಎಲೆಗಳ ಮೇಲೆ ಬಂದು ಬಿದ್ದ ಮಳೆಹನಿಗಳು ..!
ಪುಟ್ಟ ಪುಟ್ಟ ಎಳೆಗಳ ಮೇಲೆ ಹರಡಿರುವ, ಜಾರಿ ಬೀಳುವ ಭಯದಲ್ಲಿರುವ ಮಳೆಹನಿಗಳು ....!
ಮದುಮಗಳ ಬೈತಲೆಯ ಸಿಂಗರಿಸಲು ಹೊರಟ ಮಳೆಹನಿಗಳಿಗೆ ಹೊರಡುವ ತರಾತುರಿ ..!
ಹೂವಿನ ಕೇಸರಗಳ ಮೇಲೆ ಕುಳಿತು ಬೀಗುತ್ತಿರುವ ಮಳೆಹನಿಗಳು ...!
ನಾವೆಲ್ಲಾ ಮುಟ್ಟಿದೊಡನೆ ಮುನಿಯುವ ವಯ್ಯಾರಿಗೆ ಮಳೆಹನಿಗಳು ಮುಟ್ಟಿದರೆ ತೊಂದರೆ ಇಲ್ಲವಂತೆ ..!
ಭಯಂಕರವಾದ ತಪಸ್ಸಿಗೆ ಕುಳಿತಂತೆ ಕಾಣುವ ಮಳೆಹನಿ, ಪರಿಸರ ಮಾಲಿನ್ಯ ತಡೆಗಟ್ಟುವಂತೆ ವರ ಕೇಳಬಹುದೇ ದೇವರು ಪ್ರತ್ಯಕ್ಷನಾದರೆ ...!
ಸ್ಪಟಿಕದ ಹರಳುಗಳಂತೆ ಕಾಣುವ ಮಳೆಹನಿಗಳಿಗೆ ತಮ್ಮ ಬಿಂಬವ ನೋಡುವ ಆಸೆ ಆಗಿದೆಯಂತೆ ..!



ಮಳೆಹನಿಗಳು ಜೀವ ಜಾಲಕ್ಕೆ ಅಮೃತ ಬಿಂದುಗಳು. ದೈತ್ಯಾಕಾರದ ಆ ಕಪ್ಪು ಮೋಡಗಳು ಹೊತ್ತುತರುವ ಕೋಟಿ ಜಲಬಿಂದುಗಳಲ್ಲಿ ಕೇವಲ ಒಂದೇ ಒಂದು ಮಳೆಹನಿಗಾಗಿ ಎಲ್ಲೊ ಒಂದು ಚಾತಕ ಪಕ್ಷಿಯು ಕಾಯ್ದಿರುತ್ತದೆ, ಯಾವುದೋ ಒಂದು ಹೂವು ಆ ಮಳೆಹನಿಗಾಗಿ ತಲೆಬಾಗುತ್ತದೆ. ಭುವಿಯಲ್ಲಿ ಇಳಿಯುವ ಮಳೆಹನಿ ಸುತ್ತಲು ಹಸಿರಿನ ಚಾದರವನ್ನು ಹಾಸುತ್ತದೆ.
ಮಳೆಯಿಲ್ಲದೆ ಬಾಯಾರಿಕೆಯಿಂದ ಸಾಯುವ ಜೀವಗಳು ಅದೆಷ್ಟೋ ..... ಮನೆಯ ನಲ್ಲಿಯನ್ನು ತಿರುಗಿಸಿದೊಡನೆ ನೀರ ಹರಿವನ್ನು ಕಾಣುವ ನಾವು ನೀರನ್ನು ಅದೆಷ್ಟು ಪೋಲು ಮಾಡುತ್ತೇವೆ ಅಲ್ವಾ ?


16 comments:

  1. Superb Photos and suitable writings Soumya.. Keep writing..

    ReplyDelete
  2. ಮನಮೋಹಕ ಸೌಮ್ಯಾರವರೇ, ಯಾರು ಈ ಹೆಸರು ಕೊಟ್ಟಿದ್ದು 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು' ಅಂತ ಕೇಳಬಹುದೇ ?

    ReplyDelete
  3. ವ್ಹಾವ್...........
    ವ್ಹಾವ್............
    ಮನಮೋಹಕ ಚಿತ್ರಗಳ ಸರಮಾಲೆ..............ಮಳೆಯ ತುಂತುರು ಹನಿಗಳ ಲೀಲೆ!
    ಚಿತ್ರಕ್ಕೊಪ್ಪುವ ಬರಹ........

    ReplyDelete
  4. mmm ಮೊದಲು ಫೋಟೋಸ್ ತುಂಬಾ ಚನ್ನಾಗಿವೆ,ಜೊತೆಗೆ ನಿಮ್ಮ ಸಾಲುಗಳು ಅದಕ್ಕಿಂತ ಚನ್ನಾಗಿವೆ, ನಾವೆಲ್ಲಾ ಮುಟ್ಟಿದೊಡನೆ ಮುನಿಯುವ ಈ ವಯ್ಯಾರಿಗೆ ಮಳೆಹನಿಗಳು ಮುಟ್ಟಿದರೆ ತೊಂದರೆ ಇಲ್ಲವಂತೆ ..! ಚಿತ್ರ ಮತ್ತು ಈ ಸಾಲು ತುಂಬಾ ಚನ್ನಾಗಿದೆ,ಮಳೆ ಹನಿಯ ಪುಣ್ಯ ಅಲ್ಲವ.ಕೊನೆಗೆ ಒಂದು ಸಂದೇಶ ,,,,thank u for sharing these:)

    ReplyDelete
  5. R.V bhat sir.... that name is my selection

    ReplyDelete
  6. thanks a lot naveen, praveen, and srikanth

    ReplyDelete
  7. ಸೌಮ್ಯ,
    ಫೋಟೋಗಳ ಜೊತೆ ವಿವರಣೆಯೂ ಚೆನ್ನಾಗಿವೆ......ಫೋಟೋ ತೆಗೆಯುವ ಹುಚ್ಚೂ ಹಿಡಿದರೆ ತುಂಬಾ ತಲೆ ಕೆಡಿಸತ್ತೆ...... ನನಗೂ ಇದರ ಹುಚ್ಚೂ ಇದೆ.....
    ನಾನೂ ಸಹ ಮಳೆ, ನೆನಪಿನ ಬಗ್ಗೆ ಬರೆದಿದ್ದೇನೆ..... ಸಮಯ ಇದ್ದರೆ ಬಂದು ಓದಿ....

    ReplyDelete
  8. Saumya...Sumagala saumya chitrakke nimma sumadhura manasina chitra vivaragalu...Nice

    ReplyDelete
  9. ಮನಮೋಹಕ ಚಿತ್ರಗಳು.. ಮನತಟ್ಟುವ ಬರಹ..

    ReplyDelete
  10. beautiful photos with good explanation. keep going.

    ReplyDelete
  11. ಮನಮೋಹಕ ಚಿತ್ರಗಳು ಮತ್ತು ಶೀರ್ಷಿಕೆಗಳು ಸೌಮ್ಯ ಅವರೆ.

    ಶುಭಾಶಯಗಳು

    ಅನ೦ತ್

    ReplyDelete
  12. ಸೌಮ್ಯ,
    ಫೋಟೋಗಳ ಜೊತೆ ವಿವರಣೆಯೂ ಚೆನ್ನಾಗಿವೆ.
    ಅಭಿನಂದನೆಗಳು.
    ಇಷ್ಟವಾಯಿತು.
    ಮುಂದೆಯೂ ಇಂತಹ
    ಬರಹಗಳೂ,ಭಾವಚಿತ್ರಗಳು
    ಹರಿದುಬರಲಿ.

    ReplyDelete
  13. Very nice and colourful post kane.... :-)
    liked it..

    ReplyDelete
  14. ಒಳ್ಳೆಯ ಫೋಟೋಗಳು,, ಹಾಗೆ ಅದಕ್ಕೆ ಪೂರಕವಾದ ಬರಹ.... ಚೆನ್ನಾಗಿದೆ...

    ReplyDelete
  15. ಚಂದದ ಫೋಟೊಗಳು...
    ಅಂದದ ಒಕ್ಕಣಿಕೆಗಳು...

    ಎಲ್ಲವೂ ಚಂದ...!

    ಅಭಿನಂದನೆಗಳು...

    ReplyDelete
  16. ಮಳೆಗಾಲದಲ್ಲಿ ಮಳೆ ಹನಿಗಳ ಸುಂದರ ಚಿತ್ರಗಳು ಹಾಗೂ ಚೆಂದದ ಬರೆಹ ಇಷ್ಟವಾಯಿತು...

    ReplyDelete