Wednesday, December 29, 2010

ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು!'ನಿಮ್ಮ ಬ್ಲಾಗನ್ನು ಪ್ರತಿದಿನವೂ ತೆಗೆದು ನೋಡುತ್ತೇನೆ' 'ಹೊಸ ಲೇಖನವನ್ನು ಪೋಸ್ಟ್ ಮಾಡಿದ ದಿನ ದಯವಿಟ್ಟು ಒಂದು message ಹಾಕಿ' 'ತುಂಬಾ ಸುಂದರವಾದ blog' 'ನೀವು ಪತ್ರಿಕೆಯಲ್ಲಿ ಬರೆಯುತ್ತೀರಾ?' 'ಪ್ರೀತಿಸಿದವರೆಲ್ಲ ಸಿಗಲೇಬೇಕೆ೦ದೇನಿಲ್ಲ ಓದುವಾಗ ಕಣ್ಣು ತುಂಬಿ ಬಂತು' 'ಹೊಸ ಲೇಖನನವುನ್ನು ಅದೇಕೆ ಅಷ್ಟು ಬೇಗ ಮುಗಿಸಿಬಿಟ್ಟಿರಿ ?' ಹೀಗೆ ಸಾಗುತ್ತದೆ ನನ್ನ facebook inbox ನಲ್ಲಿಯ ಮೆಸೇಜುಗಳು. ಖುಷಿಯೂ ಆಗುತ್ತದೆ, ಅಂತಹವುಗಳನ್ನು ಓದುವಾಗ. ಹೊಗಳಿಕೆಗೆ ಖುಷಿಯಾಗುವುದು ಸಾಮಾನ್ಯ ಮನುಷ್ಯರ ಲಕ್ಷಣಗಳಲ್ಲಿ ಒಂದು. ಅಲ್ವಾ? ಇದೆಲ್ಲ ಯಾಕೆ ಹೇಳ್ತಾ ಇದೇನೆ ಅಂದ್ರೆ ನನ್ನ blog ಶುರು ಮಾಡಿ ಇವತ್ತಿಗೆ ಒಂದು ವರ್ಷ ಆತು ನೋಡ್ರಿ.!
ತುಂಬಾ ಜನರು ಕೇಳುತ್ತಿದ್ದರು ಸ್ಪೂರ್ತಿ ಯಾರು? ಬರೆಯಲು ಶುರು ಮಾಡಿದ್ದು ಯಾವಾಗ? ಬಹಳ ಓದುತ್ತೀರಾ? 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು' ಎಂಬ ಹೆಸರು ಯಾಕೆ? ಅವರೆಲ್ಲರ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ.

ಒಂದಿಷ್ಟು ವರ್ಷಗಳ ಹಿಂದೆ ಪುಟ್ಟದಾದ ಎರಡು ಜುಟ್ಟು ಕಟ್ಟಿಕೊಂಡು ಆಗಸವ, ತಾರೆಗಳ, ಮೋಡಗಳ ಚಿತ್ತಾರವ ಕುತೂಹಲದ ಕನ್ನಡಕದೊಳಗಿನಿಂದ ನೋಡುತ್ತಿದ್ದ ಹುಡುಗಿ ನಾನಾಗಿದ್ದೆ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಬಾನ ಬೆಳ್ಳಿ ಮೋಡಗಳು ಕೆಂಪು ಕೆಂಪಾದಾಗ ಸಂಸ್ಕೃತ ಹಾಗೂ ಕನ್ನಡ ಕಲಿಸುವ ನನ್ನ 'ಆಯಿ'( ಅಮ್ಮ) "ಪುಟ್ಟಿ ಗಪ್ಪತಿ ಚಾಮಿ ಬಣ್ಣ ಚೆಲ್ಲಿದ್ದ ನೋಡು, ಬಕೆಟ್ ತಗಂಡು ಬಣ್ಣ ತೋಕಿಕಿದ ಆಕಾಶಕ್ಕೆ..! " ಎಂದು ತೋರಿಸಿದಾಗ. ಅದೇನೋ ಸುಳ್ಳು ಸುಳ್ಳೇ ಪದ್ಯಗಳನ್ನು ಹಾಡುತ್ತಿದ್ದೆನಂತೆ ನಾನು ...!

ನನ್ನೊಳಗೆ ಪ್ರಕೃತಿ ಪ್ರೇಮವನ್ನು ಹುಟ್ಟು ಹಾಕಿದವಳು ಹೂವಿನ ಗಿಡಗಳನ್ನು ಅತಿಯಾಗಿ ಪ್ರೀತಿಸುವ ನನ್ನ ಆಯಿ. ಸಾಹಿತ್ಯ ಸ್ಪೂರ್ತಿಯೂ ಅವಳೇ. ನಾಲ್ಕರ ಹರೆಯದಲ್ಲೇ ಸರಾಗವಾಗಿ ಕನ್ನಡವನ್ನು ಓದಿ-ಬರೆದು ಮಾಡುತ್ತಿದ್ದ ನನಗೆ ಪುಸ್ತಕದ ಗೀಳು ಹತ್ತಿಸಿದ್ದವಳೂ ಅವಳೇ. ಮೂರನೇ ತರಗತಿಯಲ್ಲಿ ಇರುವಾಗಲೇ ಅಮ್ಮನ ಬಳಿಯಿದ್ದ 8,9,10 ನೇ ತರಗತಿಗಳ ಕನ್ನಡ ಪುಸ್ತಕಗಳನ್ನು ಓದಿ ಮುಗಿಸಿದ್ದೆ. 'ಜನನಿ ತಾನೇ ಮೊದಲ ಗುರುವು' ನನ್ನ ಪಾಲಿಗೆ ಎಲ್ಲ ರೀತಿಯಲ್ಲೂ ಸತ್ಯ. ಹೌದು! ನಾನು ನನ್ನ ಆಯಿಯ ವಿದ್ಯಾರ್ಥಿನಿ. ಹೈಸ್ಕೂಲಿನ ದಿನಗಳಲ್ಲಿ ನನ್ನ ಆಯಿಯ ಸಂಸ್ಕೃತ,ಕನ್ನಡ ಪಾಠಗಳನ್ನು ತರಗತಿಯ ಹಿಂದಿನ ಬೆಂಚಿನಲ್ಲಿ ಕುಳಿತು ಕೇಳಿದ್ದೇನೆ. (ಬಹಳ ಉದ್ದಕಿದ್ದೆ ಅದಕ್ಕೆ ಹಿಂದಿನ ಬೆಂಚು). ಅವರು ಕಲಿಸಿದ ಪ್ರತಿಯೊಂದು ಪಾಠವೂ ನೆನಪಿದೆ. ಅವರು ಬೂಟ್ ಪಾಲಿಶ್,ನ್ಯಾಯದ ಬಾಗಿಲಲ್ಲಿ, ಪಾಠಗಳನ್ನು ಕಲಿಸುವಾಗ ಇತರ ವಿದ್ಯಾರ್ಥಿಗಳ ಜೊತೆಗೆ ನನ್ನ ಕಣ್ಣ೦ಚು ಒದ್ದೆಯಾಗಿತ್ತು. ನಾಣಿ, ಕೊಡೆಯ ವಿಚಾರ, ಕಲಿಸುವಾಗ ನಕ್ಕು ನಕ್ಕು ಸುಸ್ತಾಗಿದ್ದೆ. ನಾನು ಬಹುವಾಗಿ ಮೆಚ್ಚುವ ಶಿಕ್ಷಕರಲ್ಲಿ ನನ್ನ ಆಯಿಯೂ ಒಬ್ಬಳು.ಅವಳೊಬ್ಬ ಅಪರೂಪದ ಶಿಕ್ಷಕಿ.!


ಒಂದನೇ ತರಗತಿಗೆ ಹೋಗುವಾಗಿನಿದ ನನ್ನ ಮೆಚ್ಚಿನ ಪಾಕ್ಷಿಕ, ಚಿಣ್ಣರ ಪತ್ರಿಕೆ 'ಬಾಲಮಂಗಳ'ವನ್ನು ಓದುತ್ತಿದ್ದೆ. ಡಿಂಗ, ಲಂಬೋದರ, ಇಲಿ ಮತ್ತು ಬೆಕ್ಕು, ಫಕ್ರು, ನನ್ನ ಗೆಳೆಯರಾಗಿದ್ದರು.ನನ್ನ imagination power ಜಾಸ್ತಿಯಾದದ್ದು, ಬಾಲಮಂಗಳ ಕಾರ್ಟೂನುಗಳನ್ನು, ಕಥೆಗಳನ್ನು ಅದರಲ್ಲಿಯ ಪಾತ್ರವಾಗಿ ಓದುತ್ತಿದ್ದೆನಲ್ಲ ಅದರಿಂದ ! ತನ್ನ ತೊದಲು ನುಡಿಯಲ್ಲಿ "ಅಕ್ಕಾ ....ಬಾಲಮಂಗಲ ಬಂತು ದಿಂಗ ಓದೇ.......ದೊದ್ದಕೆ ಓದೇ.." ಎಂದು ಅರಚುತ್ತಲೇ ನನ್ನ ಪಕ್ಕ ಬಂದು ಕೂರುತ್ತಿದ್ದ ನನ್ನ ತಮ್ಮನಿಗೆ, ದೊಡ್ಡದಾಗಿ ಧ್ವನಿಯ ಏರಿಳಿತದ ಜೊತೆಗೆ ಡಿಂಗ,ಶಕ್ತಿಮದ್ದು ಓದಿ ಹೇಳುತ್ತಿದ್ದೆ. 'ಪುಟ್ಟು ಪಟಾಕಿ', ಚಿತ್ರಬರಹ, ಪದಬಂಧಗಳಲ್ಲಿ ಬಹುಮಾನ ಬಂದಾಗ ಕುಣಿದಾಡಿದ್ದೆ ಹಾರಡಿದ್ದೆ, ಥೇಟ್ ನಮ್ಮನೆಯ ಎದುರಿನ ಗಿಡದಲ್ಲಿ ಬರುವ ಉದ್ದನೆಯ ಬಿಳಿಯ ಬಾಲದ ಹಕ್ಕಿ ಮರಿಯಂತೆ...!ನನ್ನ ಬಳಿ ಹದಿನೈದು ವರುಷಗಳ ಬಾಲಮಂಗಳದ ಬೃಹತ್ ಸಂಗ್ರಹವಿದೆ. 'ಪಪ್ಪ' ಅದನ್ನು ರದ್ದಿಯವನಿಗೆ ಕೊಡುತ್ತೇನೆ ಎಂದರೆ ಸಾಕು,ಈಗಲೂ ನನ್ನ ಕಣ್ಣಲ್ಲಿ ಜೋಗ ಜಿನುಗುತ್ತದೆ. ಈಗಲೂ ಅಪರೂಪಕ್ಕೆ ಅದನ್ನು ಕೊಂಡು ಓದುತ್ತೇನೆ. ಒಂದು ಬಗೆಯ ಆತ್ಮೀಯ ಸಂಬಂಧವದು.!

ಇನ್ನೂ ಸರಿಯಾಗಿ ನೆನಪಿದೆ ನನಗೆ, ಏಳನೇ ತರಗತಿಯ ಅಕ್ಟೋಬರ್ ರಜೆಯದು. ಅಚಾನಕ್ ಆಗಿ ನನ್ನ ಕೈಗೆ ಹಳೆಯ ಸಿಲೆಬಸ್ಸಿನ ಹತ್ತನೇ ತರಗತಿಯ ಕನ್ನಡ-೨ ಪುಸ್ತಕ ಸಿಕ್ಕಿತ್ತು. 'ಗಿರಿ-ಶಿಖರ, ವಿಜ್ಞಾನ-ಶಿಖರ, ಹಾಗೂ ಆಧ್ಯಾತ್ಮ-ಶಿಖರಗಳೆಂದು ತೇನಸಿಂಗ,ಜಗದೀಶಚಂದ್ರ ಬೋಸ್ ಹಾಗೂ ಅರವಿಂದ್ ಘೋಷ್ ಈ ಮೂವರ Biography ಆಗಿತ್ತದು. ಒಂದೇ ದಿನದಲ್ಲಿ ಓದಿ ಮುಗಿಸಿದ್ದೆ. ನನ್ನ ಪುಸ್ತಕ ಸಂಗ್ರಹದಲ್ಲಿ ಇರುವ ಅತ್ಯಮೂಲ್ಯ ಪುಸ್ತಕಗಳಲ್ಲಿ ಅದೂ ಒಂದು.ವರ್ಷಕ್ಕೆ ಒಮ್ಮೆಯಾದರೂ ಅದನ್ನು ಓದುತ್ತೇನೆ, ಅದೇ ಹಳೆಯ ಕುತೂಹಲದಿಂದ,ಪ್ರೀತಿಯಿಂದ..!ವೀನ್-ಡುಪ್ಲಾ ಜೋಡಿ ಹಿಮದಲ್ಲಿ ಕಳೆದು ಹೋಗುವಾಗ ಕಂಗಳು ಈಗಲೂ ಹನಿಗೂಡುತ್ತವೆ. ಅರವಿಂದರು ಧ್ಯಾನದಲ್ಲಿರುವಾಗ ನೆಲವ ಬಿಟ್ಟು ಒಂದು ಅಡಿ ಮೇಲೆ ಏಳುವುದನ್ನು ಓದುವಾಗ ಇನ್ನೂ ಮೈ ರೋಮಾಂಚನವಾಗುತ್ತದೆ. ಇಡೀ ಜೀವನಕ್ಕೆ ಸಾಕಾಗುವಷ್ಟು ಜೀವನ ಪ್ರೀತಿಯನ್ನು ತುಂಬಿಕೊಡುವ ತಾಕತ್ತು ಆ ಒಂದು ಪುಸ್ತಕಕ್ಕಿದೆ.!
ನನ್ನ ಹದಿಮೂರನೆಯ ವಯಸ್ಸಿನಲ್ಲಿ ಚುಟುಕಗಳನ್ನು ಬರೆಯಲು ಆರಂಭಿಸಿದ್ದು. ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಚುಟುಕಗಳ ಪ್ರೇರಣೆಯಿಂದ. ಆಯಿಯ ಪ್ರೋತ್ಸಾಹದಿಂದ.ಆಗ ನನ್ನ ಅಂತ್ಯ ಪ್ರಾಸಗಳ ಜೋಡಣೆ ಹೀಗಿತ್ತು ನೋಡಿ :
ನಮ್ಮೂರ ರಸ್ತೇಲಿ ನೂರಾರು ಹೊಂಡ
ಬೀಳುವರು ಜನ ಕುಡಿಯದಿದ್ದರೂ ಹೆಂಡ
ಇಲ್ಲಿ ವಾಹನವನೋಡಿಸುವುದೊಂದು ಮೋಜು
ಒಮ್ಮೆ ಬಿದ್ದರೆ ಮಾತ್ರ ಗತಿ ಗ್ಯಾರೇಜು..!
ಒಮ್ಮೆ ಬಂದಿದ್ದರೆ ಗಾಂಧೀಜಿ ಈಗ
ಏರುತ್ತಿತ್ತು ಅವರ ಹೃದಯ ಬಡಿತದ ವೇಗ
ಭಾರತದ ಇಂದಿನ ಸ್ಥಿತಿಯನ್ನು ಕಂಡು
ಹೊಡೆದುಕೊಳ್ಳುತ್ತಿದ್ದರು ಅವರೇ ತಲೆಗೆ ಗುಂಡು..!
ಕಂಡ ವಿಷಯಗಳ ಕುರಿತೆಲ್ಲ ನಾಲ್ಕು ಸಾಲುಗಳ ಪ್ರಾಸ ಪದಗಳನ್ನು ಜೋಡಿಸುತ್ತಿದ್ದೆ. ನಂತರ ನಾನು ವಿಜ್ಞಾನ-ತಂತ್ರಜ್ಞಾನಗಳ ವಿದ್ಯಾರ್ಥಿನಿ. ಸಾಹಿತ್ಯ-ವಿಜ್ಞಾನ ಎರಡರಲ್ಲೂ ಸಮಾನ ಆಸಕ್ತಿಯಿದೆ. ನಂತರ ಚುಕ್ಕಿ-ತಾರೆ,ಚಂದ್ರಮರ ಕುರಿತು ಕವನಗಳು, ಕಾಲೇಜಿನಲ್ಲಿ ಆಶು ಕವನ ಸ್ಪರ್ಧೆಯಲ್ಲಿ ಕವನಗಳನ್ನು ರಚಿಸುತ್ತಿದ್ದೆ. ಕುಮಟಾದಿಂದ ಮಂಗಳೂರಿಗೆ ಪಯಣಿಸುವಾಗ ಬೇಸರ ಕಳೆಯಲು ಒಂದಿಷ್ಟು ಸಾಲುಗಳನ್ನು ಗೀಚುತ್ತಿದ್ದೆ.


ಜಯಂತ್ ಕಾಯ್ಕಿಣಿಯವರ ತೂಫಾನ್ ಮೇಲ್, ಬೊಗಸೆಯಲ್ಲಿಮಳೆಹನಿ, ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸು, ಮಣಿಕಾಂತ್ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಇವುಗಳನ್ನು ಬಿಟ್ಟರೆ ಪುಸ್ತಕಗಳನ್ನು ಓದಿದ್ದು ಕಡಿಮೆ. ಆದರೆ ಪತ್ರಿಕೆಗಳನ್ನು ಓದುವ ಗೀಳು ಮೊದಲಿನಿಂದಲೂ ಇದೆ. ಸುಧಾ ತರಂಗಗಳಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬಿಟ್ಟರೆ ಇನ್ನೂ ಯಾವ ಕನ್ನಡ ಕಾದಂಬರಿಯನ್ನೂ ಓದಿಲ್ಲ.
orkut ಸೇರಿದಮೇಲೆ 'ರಾಕೇಶ್ ಹೆಗಡೆ' ಒಡೆತನದ 'ಕವನ ಪ್ರಪಂಚ' ಎಂಬ ಕಮ್ಯೂನಿಟಿಯಲ್ಲಿ ಬರೆದ ಕವನಗಳನ್ನು ಹಾಕುತ್ತಿದ್ದೆ.ಬಹಳ ಜನ blog ಶುರು ಮಾಡು ಎಂದರೂ, ತಲೆ ಕೆಡಿಸಿಕೊಂಡಿರಲಿಲ್ಲ.orkut ನಲ್ಲಿ ಪರಿಚಯವಾದ 'ಮನಸಿನ ಮಾತುಗಳು' blog ಒಡತಿ 'ದಿವ್ಯಾ ಹೆಗಡೆ' ನೀನೇಕೆ blog ಶುರು ಮಾಡಬಾರದು? ಎಂದು ಕೇಳಿದಾಗ,ಹೌದೆನಿಸಿತು. ಗೆಳೆಯನೊಬ್ಬ blog ಲೋಕಕ್ಕೆ ಪರಿಚಯಿಸಿದ. ಅವರಿಬ್ಬರಿಗೂ ಮನಃ ಪೂರ್ವಕವಾದ ಧನ್ಯವಾದಗಳು. ಇಲ್ಲಿ ನೋಡಿದರೆ ಅಬ್ಬಬ್ಬಾ .!!! ಎನಿಸುವಷ್ಟು ಕನ್ನಡ ಬ್ಲಾಗುಗಳು..! ಒಂದಕ್ಕಿಂತ ಒಂದು ಸುಂದರ .ಕತ್ತಲೆಯಲ್ಲಿ ಕಣ್ಣು ಬಿಟ್ಟ ಅನುಭವ. ನಿಧಾನಕ್ಕೆ ಅರಿತುಕೊಂಡೆ blog ಲೋಕದ 'ಅ ಆ ಇ ಈ'ಗಳನ್ನು.'ಇಲ್ಲೇ ಮಳೆಯಾಗಿದೆ ಇಂದು' ಎಂಬ ಒಂದು ಲೇಖನವನ್ನು ನನ್ನ ಬ್ಲಾಗಿನ ಮೊದಲ ಪೋಸ್ಟ್ ಮಾಡುತ್ತಿದ್ದೆ ಕಳೆದ ಡಿಸೆಂಬರಿನ ಇದೇ ದಿನ...!
ಪುಟ್ಟ ಪುಟ್ಟ ಕವನಗಳನ್ನು ಬರೆಯುತ್ತಿದ್ದ 'ಪುಟ್ಟಿ' ಲೇಖನಗಳನ್ನು ಬರೆಯಲು ಕಲಿತಿದ್ದು ಬ್ಲಾಗಿನಿಂದಲೇ.! ಬರಹಗಳಿಗೆ ಸಿಕ್ಕ ಅದ್ಭುತ ಎನ್ನುವ ಪ್ರತಿಕ್ರಿಯೆ ನನ್ನನ್ನು ಬರೆಯಲು ಪ್ರಚೋದಿಸಿತು. ಸುಮಕ್ಕ,ತೇಜಕ್ಕ ,ಅಜಾದ್ ಸರ್,ದಿನಕರ್ ಸರ್, ಸುಮನಕ್ಕ, ದಿವ್ಯಾ,ಪ್ರಕಾಶಣ್ಣ,ವಾಣಿ,ಶರತ್,ವನಿತಕ್ಕ,ಸೀತಾರಾಮ್ ಸರ್,ತರುಣ್,ಪ್ರವೀಣ್,ದಿಲೀಪ್,ಪ್ರಗತಿ,ಶ್ರೀ ಇನ್ನೂ ಹಲವಾರು ಜನ ನನ್ನ ತಿದ್ದಿದರು, ಪ್ರೋತ್ಸಾಹಿಸಿದರು.ಅವರಿಗೆಲ್ಲ ನನ್ನ ಮನಃ ಪೂರ್ವಕ ಕೃತಜ್ಞತೆಗಳು. ೫-೬ ಕಥೆಗಳು,ಚಿತ್ರಬರೆಹಗಳು,ಸಾಲುಗಳು,ಕವನಗಳು,ಲೇಖನಗಳು,ಹನಿಗಳು,ಪತ್ರ ಬರೆಹ,ವ್ಯಕ್ತಿಪರಿಚಯ,ಲಹರಿ,ಕಥನ ಕವನ ಹೀಗೆ ಸಾಗುತ್ತದೆ ನನ್ನ ಬ್ಲಾಗು.
ಹುಡುಗಿಯರ ಜೊತೆ ಅಡುಗೆಯಾಟ ಹಾಗೆ ಹುಡುಗರ ಜೊತೆ ಕ್ರಿಕೆಟ್ ಎರಡನ್ನೂ ಆಡುತ್ತ ಬೆಳೆದ ನನಗೆ ಜೀವನದ ಬಗ್ಗೆ ಹುಚ್ಚು ಪ್ರೀತಿಯಿದೆ. ನನ್ನದೇ ಆದ ಜಗತ್ತಿದೆ..I am crazy about life. ಕಂಡ ಎಲ್ಲ ಕನಸುಗಳೂ ನನಸಾಗಲೇ ಬೇಕೆಂದಿಲ್ಲ. ಕನಸ ಕಾಣುವುದನ್ನು ಅದರೆಡೆಗೆ ಸಾಗುವುದನ್ನು ಮಾತ್ರ ನಿಲ್ಲಿಸಲಾರೆ.ಅದಕ್ಕೆ ನನ್ನ ಬ್ಲಾಗಿನ ಹೆಸರು 'ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು'.
ಒಂದು ವರ್ಷದಲ್ಲಿ 79 ಎಳೆಗಳ ಗೂಡನ್ನು ಹೆಣೆದಾಗಿದೆ, ಕನ್ನಡ ಬ್ಲಾಗ್ ಲೋಕವೆಂಬ ಬೃಹತ್ ಮರದ ಆಶ್ರಯದಲ್ಲಿ.
ಈ ಬ್ಲಾಗ್ ಜಗತ್ತು ವಿಶಿಷ್ಟವಾದ ಜ್ಞಾನವನ್ನು,ಮಾಹಿತಿಗಳನ್ನು ನೀಡಿದೆ. ಅನೇಕ ಸ್ನೇಹಿತರನ್ನು ಕೊಟ್ಟಿದೆ, ಬೆಂಗಳೂರಿಗೆ ಬಂದರೆ ನೆಂಟರ ಮನೆಗಿಂತ, ಸ್ನೇಹಿತರ ಮನೆಯಲ್ಲೇ ಉಳಿಯುವಷ್ಟು ಆತ್ಮೀಯವೆನಿಸುವ ಬೆಚ್ಚನೆಯ ಸಂಬಂಧಗಳನ್ನು ಕೊಟ್ಟಿದೆ. ಪ್ರೀತಿಯನ್ನು ಕೊಟ್ಟಿದೆ. ಸಂಬಂಧದ ನಾಜುಕುತನವನ್ನು ಹೇಳಿದೆ. ಜೀವನದ ಅತ್ಯಮೂಲ್ಯ ಪಾಠಗಳನ್ನು ಕಲಿಸಿದೆ. ಇನ್ನೂ ಏನು ಬಯಸಲಿ ಹೇಳಿ ಇದಕ್ಕಿಂತ ಹೆಚ್ಚಾಗಿ ?

ಜೀವನವನ್ನು ಪುಟ್ಟ ಹುಡುಗಿಯಂತೆ ನೋಡಿ, ಅನುಭವಿಸಿ ಬರೆಯುತ್ತೆನಂತೆ ನಾನು. ಜೀವನದ ಕೆಲವೊಂದು ಸತ್ಯಗಳ ಅನುಭವವೇ ಇಲ್ಲದಂತೆ. !ಕೆಲವು ದಿನಗಳ ಹಿಂದೆ ಅಕ್ಕನಂಥಿರುವ ಗೆಳತಿಯೊಬ್ಬಳು ನನ್ನ face book wall ಮೇಲೆ ಹೀಗೆ ಬರೆದಿದ್ದಳು "ಹಾಯ್, ಸೌಮ್ಯ, ನಿಮ್ಮ ಬ್ಲಾಗ್ ನೋಡ್ತಾ ಇದ್ದೆ. ತುಂಬಾ ಚೆನ್ನಾಗಿದೆ. ಎಸ್ಟೋ ಕಡೆ ನನ್ನ ಬಾವನೆಗಳಿಗೆ ಅಕ್ಷರ ಕೊಟ್ಟಿದ್ದೀರ ಅನ್ನಿಸುತ್ತೆ. ಬದುಕನ್ನು ನೋಡುವ, ಪ್ರೀತಿಸುವ, ಕಳಕಲಿಸುವ ಪರಿ ವಯಸ್ಸಿನ ಜೊತೆಗೆ ಬದಲಾಗುತ್ತೆ, ಆದರೆ ಬದುಕುವ ಹುಮ್ಮಸ್ಸು, ಭಾವಿಸುವ ರೀತಿ ಮಾತ್ರ ಎಂದೂ ಹೀಗೆ ಇರಲಿ ಎಂದು ಆಶಿಸುತ್ತೇನೆ. ಜೀವನದ ಕೆಲವೊಂದು ಸತ್ಯಗಳು ನಿನಗೆ ಸೋಕದಿರಲಿ.!"
ಕಣ್ಣಂಚಿನ ಹನಿಯೊಂದಿಗೆ ಮುಖದಲ್ಲೊಂದು ಮುಗುಳುನಗೆ ಹಾಯಿದೋಣಿಯಂತೆ ಹಾದು ಹೋಗಿತ್ತು .ಇಂಥಹ ಒಂದು ಕ್ಷಣಗಳೇ ಅಲ್ಲವೇ ಜೀವನದಲ್ಲಿ ಅತ್ಯಮೂಲ್ಯ ಎನಿಸುವುದು..! ಇಂಥ ಒಂದು ನಿಷ್ಕಲ್ಮಶ ಹಾರೈಕೆಯನ್ನೇ ಅಲ್ಲವೇ ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನಿಂದ ಬಯಸುವುದು ?ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ನನ್ನ ಮೇಲೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ.

47 comments:

 1. Keep it growing/going :)

  ReplyDelete
 2. ಸೌಮ್ಯಾ,
  ನಿಜ ಹೇಳ್ಬೇಕು ಅಂದ್ರೆ ನಾನು ನಿನ್ನ ಆರ್ಕುಟ್ಟಿನ " about me " section ಓದಿದಾಗಲೇ ನನಗೆ ನೀನು 'ಇಷ್ಟ ಆದೆ'.ಎಲ್ಲೋ ಒಂದು ಕಡೆ ಒಬ್ರು ಇಷ್ಟ ಆಗ್ಬೇಕು ಅಂದ್ರೆ ನಮ್ಮಲ್ಲಿ ಇರೋ ಗುಣ ಅವರಲ್ಲೂ ಕಾಣಬೇಕಂತೆ,ಇಲ್ಲಾ ನಮ್ಮಲ್ಲಿ ಇಲ್ದೆ ಇರೋ ಗುಣ ಅವರಲ್ಲಿ ಇದೆಯಲ್ಲ ಅಂತ ಇಷ್ಟ ಆಗ್ತಾರಂತೆ.ಬಹುಷಃ ನೀನು ನನಗೆ ಮೊದಲನೇ ರೀತಿಯಲ್ಲಿ ಇಷ್ಟ ಆದೆ.ಚನ್ನಾಗಿ ಬರಿತಿಯ.ನೀನ್ಯಾಕ್ ಬ್ಲಾಗ್ ಬರಿಬಾರ್ದು ಅಂತ ಅನ್ನಿಸಿದ್ದು ಸುಳ್ಳಲ್ಲ.ಎಷ್ಟಾದರೂ ನಾನೂ ನಿನ್ನ ಹಾಗೆ 'ಹುಚ್ಚು ಹುಡುಗಿ"ನೆ ತಾನೇ?

  ಬರಿತಾ ಇರು...ನಾನಂತೂ ನಿನ್ನ ಪೋಸ್ಟ್ ಕಂಡ ಕೂಡಲೇ ಓದುತ್ತೇನೆ."ಭಾವನೆಗಳು,ಅವುಗಳ ಬೆಲೆ"..ಇವು ನಿನಗೆ ಚನ್ನಾಗಿ ಅರ್ಥ ಆಗುತ್ತೆ.ಯಾವತ್ತೂ ಈ ಪ್ರವ್ರತ್ತಿಯನ್ನ ಕಳ್ಕೋಬೇಡ.ಜಗತ್ತನ್ನು,ಜೀವನವನ್ನು ವಿಸ್ಮಯ ಕಣ್ಣುಗಳಿಂದ ನೋಡೋ ನಿನ್ನ ಕೊತೂಹಲ ಬತ್ತದಿರಲಿ. ಇನ್ನು ಚನ್ನಾಗಿ ಬರಿ... all the best...love you kane..:-)

  ReplyDelete
 3. ನಿಮ್ಮ ಚಂದದ ಬರಹಕ್ಕೆ, ಕವನಗಳಿಗೆ ಧನ್ಯವಾದಗಳು ... ನಿಮ್ಮ ಬ್ಲಾಗು ಹೀಗೆ ಮುಂದುವರೆಯುತ್ತಿರಲಿ... ಉತ್ತಮ ಬರವಣಿಗೆಗಳು ನಿಮ್ಮಿಂದ ಬರಲಿ.. ಶುಭ ಹಾರೈಕೆಗಳು :)

  ReplyDelete
 4. ನಮಸ್ಕಾರ. ನಿಮ್ಮದು ಉತ್ತಮ ಬ್ಲಾಗ್.
  ವೆರಿ ಇಂಟರೆಸ್ಟಿಂಗ್!!
  (ಆ ವರ್ಡ್ ವೆರಿಫಿಕೇಶನ್ ಡಿಸೇಬಲ್ ಮಾಡಿ. ಕಾಮೆಂಟ್ ಬರೆದಾದ ಮೇಲೆ ಬರಿ ಕಿರಿಕಿರಿ-ಫಾಂಟ್ ಚೇಂಜ್ ಮಾಡ್ಬೇಕಾಗುತ್ತೆ)
  ನನ್ನ ಬ್ಲಾಗಿಗೆ ಸ್ವಾಗತ.(ಬರೆದಿದ್ದು ಕಡಿಮೆ-ಓದುವುದೇ ಹೆಚ್ಚು!!)
  http://machikoppa.blogspot.com/

  ReplyDelete
 5. ಚ೦ದ ಬರೆದಿದ್ದೀರಿ..
  ಬರೀತಾ ಇರಿ.. ಮತ್ತಷ್ಟು.. ಬರ್ತಾ ಇರ್ತೇನೆ ಮತ್ತೆ ಮತ್ತೆ..
  ಹ್ಯಾಪ್ಪಿ ಬರ್ತಡೇ.....:-)

  ReplyDelete
 6. ನಿಮ್ಮ ಜೀವನದ ಹಾಗೂ ಬ್ಲಾಗ್ ಪಯಣವನ್ನು ಅದ್ಬುತ ರೀತಿಯಲ್ಲಿ ತಿಳಿಸಿದ್ದಿರಿ... ನಿಮ್ಮ ಲೇಖನಗಳನ್ನು ಓದುತ್ತಿದ್ದರೆ ಮನಸ್ಸಿಗೆ ಒಂದು ರೀತಿ ಉಲ್ಲಾಸವಾಗುತ್ತದೆ...ಹೀಗೆ ನಿಮ್ಮ ಬರಹ, ಸಾಗರದ ಹಾಗೇ ಹರಿಯುತ್ತಿರಲಿ...

  ReplyDelete
 7. tumba chennagi bareyutteeri.. heege nimma blog munduvareyuttirali..

  ReplyDelete
 8. ಹಾಯ್ ಸೌಮ್ಯ,

  ಮೊದಲನೆಯದಾಗಿ ನೀನು ಬ್ಲಾಗ್ ಪ್ರಾರಂಭಿಸಿದ ರೀತಿ,ಈ ಬರಹದ ನಿನ್ನ ಶೈಲಿ ತುಂಬಾನೇ ಇಷ್ಟಾತು.
  ನನಗೆ ನಿನ್ನ ಬ್ಲಾಗ್ title ಮೊದಲು ಇಷ್ಟಾಗಿದ್ದು..ಬರಿತಾನೆ ಇರು..
  ಮುಂದಿನ ವರ್ಷ ನಿನ್ನ ಕಡೆಯಿಂದ ಇನ್ನಷ್ಟು ಬರಹಗಳು ಬರಲಿ..
  ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳಲ್ಲಿ ಹತ್ತಾದರೂ ನನಸಾಗಲಿ..

  ReplyDelete
 9. ಸೌಮ್ಯ..ನಿಮ್ಮ ಕನಸುಗಳು ಹೀಗೇ ಸರಾಗವಾಗಿ ಸುಲಲಿತವಾಗಿ ಸಾಗುತ್ತಿರಲಿ..ನಿಮ್ಮ ಎಲ್ಲಾ ಆಯಾಮಗಳ ಬೆಳವಣಿಗೆಯ ವರ್ಷಗಳೂ ಮುಂಬರುವ ಹೊಸವರ್ಷದಂತೆ ಫಲಪ್ರದವಾಗಿ ಜೀವನ ಆರೋಗ್ಯಾನಂದ ಸಕ್ಷೇಮವಾಗಲಿ ಎಂದು ಹಾರೈಸುತ್ತೇನೆ.

  ReplyDelete
 10. ಸೌಮ್ಯ ರವರೆ ನಿಮ್ಮ ಬ್ಲಾಗ್ ಬರಹಕ್ಕೆ ಒಂದು ವರುಷ ವಾಗಿದ್ದು ತುಂಬಾ ಖುಷಿಯಾಗಿದೆ.ಒಂದುವರುಷದಲ್ಲಿ
  ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು! ಬ್ಲಾಗಿನ ಒಡತಿ ಹಲವು ವಿಚಾರಗಳನ್ನು ನಮ್ಮೊಡನೆ ನಮ್ಮ ಕುಟುಂಬದ ಸಹೋದರಿಯಂತೆ ಸಮಾಜದ ಹಾಗು ತನ್ನ ಭಾವನೆಗಳನ್ನು /ಜೀವನದ ಅನಿಸಿಕೆಗಳನ್ನು ಹಂಚಿ ಕೊಂಡಿದ್ದಾಳೆ .ಒಂದು ವರ್ಷದ 79 ಎಳೆಗಳಲ್ಲಿ ಬಹಳಷ್ಟು ಓದಿದ್ದೇನೆ [ ಎಲ್ಲವನ್ನೂ ಎಂದು ಸುಳ್ಳು ಹೇಳಲು ಮನಸ್ಸಿಲ್ಲ.] ಬ್ಲಾಗ್ ಚೆನ್ನಾಗಿದೆ. ನಿಮಗೆ ಶುಭಾಶಯಗಳು.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 11. Enu helali putti...thumba thumba ishta aatu:)
  - Vanitha.

  ReplyDelete
 12. All the best
  wish you happy birthday
  keep writing
  odalu nanga sadaa idya

  ReplyDelete
 13. ಸೌಮ್ಯ ಅವರಿಗೆ ನಮಸ್ಕಾರ. ಆಗಾಗ ನಿಮ್ಮ ಬ್ಲಾಗ್ ಗೆ ಬಂದಿದ್ದೆ. ಇಂದು ನೋಡಿದಾಗ ನೀವು ಬರೆದ ಬರಹದಲ್ಲಿ ಈ ಪ್ಯಾರಾ ಕಾಣಿಸಿತು. (ಇನ್ನೂ ಸರಿಯಾಗಿ ನೆನಪಿದೆ ನನಗೆ, ಏಳನೇ ತರಗತಿಯ ಅಕ್ಟೋಬರ್ ರಜೆಯದು. ಅಚಾನಕ್ ಆಗಿ ನನ್ನ ಕೈಗೆ ಹಳೆಯ ಸಿಲೆಬಸ್ಸಿನ ಹತ್ತನೇ ತರಗತಿಯ ಕನ್ನಡ-೨ ಪುಸ್ತಕ ಸಿಕ್ಕಿತ್ತು. 'ಗಿರಿ-ಶಿಖರ, ವಿಜ್ಞಾನ-ಶಿಖರ, ಹಾಗೂ ಆಧ್ಯಾತ್ಮ-ಶಿಖರಗಳೆಂದು ತೇನಸಿಂಗ,ಜಗದೀಶಚಂದ್ರ ಬೋಸ್ ಹಾಗೂ ಅರವಿಂದ್ ಘೋಷ್ ಈ ಮೂವರ Biography ಆಗಿತ್ತದು. ಒಂದೇ ದಿನದಲ್ಲಿ ಓದಿ ಮುಗಿಸಿದ್ದೆ. ನನ್ನ ಪುಸ್ತಕ ಸಂಗ್ರಹದಲ್ಲಿ ಇರುವ ಅತ್ಯಮೂಲ್ಯ ಪುಸ್ತಕಗಳಲ್ಲಿ ಅದೂ ಒಂದು.ವರ್ಷಕ್ಕೆ ಒಮ್ಮೆಯಾದರೂ ಅದನ್ನು ಓದುತ್ತೇನೆ, ಅದೇ ಹಳೆಯ ಕುತೂಹಲದಿಂದ,ಪ್ರೀತಿಯಿಂದ..!ವೀನ್-ಡುಪ್ಲಾ ಜೋಡಿ ಹಿಮದಲ್ಲಿ ಕಳೆದು ಹೋಗುವಾಗ ಕಂಗಳು ಈಗಲೂ ಹನಿಗೂಡುತ್ತವೆ. ಅರವಿಂದರು ಧ್ಯಾನದಲ್ಲಿರುವಾಗ ನೆಲವ ಬಿಟ್ಟು ಒಂದು ಅಡಿ ಮೇಲೆ ಏಳುವುದನ್ನು ಓದುವಾಗ ಇನ್ನೂ ಮೈ ರೋಮಾಂಚನವಾಗುತ್ತದೆ. ಇಡೀ ಜೀವನಕ್ಕೆ ಸಾಕಾಗುವಷ್ಟು ಜೀವನ ಪ್ರೀತಿಯನ್ನು ತುಂಬಿಕೊಡುವ ತಾಕತ್ತು ಆ ಒಂದು ಪುಸ್ತಕಕ್ಕಿದೆ.!) ನನ್ನ ಬಳಿಯೂ ಆ ಪುಸ್ತಕ ಇತ್ತು. ಆದರೆ ಅದರ ಕೆಲವು ಪುಟಗಳು ಹರಿದು ಪುಸ್ತಕ ಎಲ್ಲೋ ನಾಪತ್ತೆಯಾಗಿದೆ. ಸಾಧ್ಯವಾದರೆ ನನಗೆ ಆ ಪುಸ್ತಕ ಜೆರಾಕ್ಸ್ ಪ್ರತಿ ಕಲಿಸಲು ಸಾಧ್ಯವೇ ? ತಿಳಿಸಿ. ಧನ್ಯವಾದಗಳು. ಇದು ನನ್ನ ಮಿಂಚಂಚೆ ವಿಳಾಸ ravindra783@gmail.com
  @ ರವೀಂದ್ರ ಭಟ್ ಮಾವಖಂಡ

  ReplyDelete
 14. of course u r a very good writer.. keep it up..wish u happy new year..
  keep giving good articles..good luck :)

  ReplyDelete
 15. thank u ದಿವ್ಯಾ :) ನಿನ್ನ ಬರಹಗಳೂ ನಂಗೆ ಬಹಳ ಇಷ್ಟ. ಹೌದು ಇಬ್ಬರಲ್ಲೂ ಸಾಮ್ಯತೆ ರಾಶಿ ಇದ್ದು ಅನ್ನಿಸ್ತು. love you too :))

  ReplyDelete
 16. thanks a lot ಶರತ್ :)
  @ಸುಬ್ರಮಣ್ಯ, ಧನ್ಯವಾದಗಳು ನಿಮ್ಮ ಸಲಹೆಗೆ.ತಿದ್ದುಪಡಿ ಮಾಡಿದ್ದೇನೆ.ಖಂಡಿತ ಬರುತ್ತೇನೆ ನಿಮ್ಮ ಬ್ಲಾಗಿಗೆ :)

  ReplyDelete
 17. ಧನ್ಯವಾದಗಳು ವಿಜಯಶ್ರೀಯವರೇ , ಯಾವತ್ತೂ ನಿಮಗೆ ಸ್ವಾಗತ ಇದ್ದೇ ಇದೆ ಬರುತ್ತಲೇ ಇರಿ :)

  ReplyDelete
 18. ತುಂಬಾ ಧನ್ಯವಾದಗಳು ಕನ್ನಡಬ್ಲಾಗ್ ಲಿಸ್ಟ್ :)
  thanks a lot ಜ್ಯೋತಿ ಶೀಗೆಪಾಲ್ :)

  ReplyDelete
 19. ಧನ್ಯವಾದಗಳು ವಾಣಿ :)

  ReplyDelete
 20. ನಿಮ್ಮ ಹಾರೈಕೆಗೆ ಧನ್ಯವಾದಗಳು ಆಜಾದ್ ಸರ್ :)

  ReplyDelete
 21. ಬಾಲು ಸರ್,
  ನಾವೆಲ್ಲಾ ಒಂದೇ ಕುಟುಂಬದವರಂತೆ ಆಗಿದ್ದೇವೆ ಅಲ್ಲವೇ ? ತುಂಬಾ ಧನ್ಯವಾದಗಳು ನಿಮ್ಮ ಹಾರೈಕೆಗೆ, ಪ್ರೋತ್ಸಾಹಕ್ಕೆ :)

  ReplyDelete
 22. Thanks a lot ವನಿತಕ್ಕ :)

  ReplyDelete
 23. ನಮಸ್ಕಾರ ರವೀಂದ್ರರೆ,
  ಖಂಡಿತ ಆ ಅದರ ಫೋಟೋ ಕಾಪಿ ಕಳಿಸುತ್ತೇನೆ ನಿಮಗೆ :)

  ReplyDelete
 24. ಅದ್ಭುತ ಲೇಖನಗಳು.....nice blog

  ReplyDelete
 25. ಸೌಮ್ಯ ಅವರೇ,
  ಹುಚ್ಚು ಹುಡುಗಿ ಕನಸು ಕಾಣುತ್ತಾ ಒಂದು ವರ್ಷವಾಯಿತೇ?
  ಅಭಿನಂದನೆಗಳು...........
  ಬ್ಲಾಗ್ ಲೋಕದಲ್ಲಿ ನಡೆದು ಬಂದ ದಾರಿಯನ್ನು ಮರೆಯದೆ, ನಮ್ಮೊಂದಿಗೆ ಹಂಚಿಕೊಂಡಿದ್ದೀರಾ. ಬರೆಯುವ ಮನಸ್ಸೊಂದಿದ್ದರೆ ಸಾಕು, ಪದಗಳು ತಾವಾಗೆ ಉದ್ಬವಿಸುತ್ತವೆ ಎಂಬುವುದು ನನ್ನ ಅನಿಸಿಕೆ.
  ಉತ್ತಮ ಬರಹಗಳನ್ನು ನಮ್ಮೊಂದಿಗೆ ಹೀಗೇ ಹಂಚಿಕೊಳ್ಳುತ್ತಿರಿ.......
  ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು ನನಸಾಗಲಿ............

  ReplyDelete
 26. ನಿಮ್ಮ ಬರಹ ಚೆನ್ನಾಗಿರುತ್ತದೆ...ಒಂದು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು.

  ReplyDelete
 27. ಮೆಟ್ಟಿಲು ಮೆಟ್ಟಿಲಾಗಿ ಹತ್ತಿ ಬಂದು ಬ್ಲಾಗಿನ ಈ ಅಂಗಳದಲ್ಲಿ ನಿಂತಿರುವ ನಿನ್ನ ಕಲ್ಪನೆಗಳಿಗೆ ನನ್ನ ಹ್ರುತ್ಪೂರ್ವಕ ಪ್ರೊತ್ಸಾಹ. ಬಾಲಮಂಗಳ, ಚಂಪಕ, ಬಾಲಮಿತ್ರ, ಬೊಂಬೆಮನೆ, ಚಂದಮಾಮ ಇವುಗಳನ್ನು ಓದುತ್ತಲೇ ಬೆಳೆದ ನನಗೆ ಈಗಲೂ ಊರಿಗೆ ಬಂದಾಗ ಅವುಗಳನ್ನು ಕೊಂದು ಓದುವ ಹುಚ್ಚು. ಅದರ ಮೇಲಿನ ಪ್ರೀತಿಯೆ ಹಾಗೆ. ನಿನ್ನ ಈ ಲೇಖನವನ್ನು ಓದಿದ ಮೇಲೆ ನೀನೂ ಕೂಡ ಕೆಲವು ವಿಷಯಗಳಲ್ಲಿ ನನ್ನ್ಂತೆಯೆ ಅಂತ ತಿಳಿದು ಸಂತೋಷವಾಯಿತು. ಬಿಚ್ಚು ಮನಸ್ಸಿನ, ಹತ್ತಾರು ಕನಸುಗಳ, ಕಲ್ಪನಾ ಲೋಕದ ನನ್ನ ಕಿರಿಯ ಸ್ನೇಹಿತೆ ನೀನು ಸದಾ ಹೀಗೆ ಜೀವನದ ವಿವಿಧ ಮುಖಗಳನ್ನು ನಿನ್ನ ನೋಟದಿಂದ ನೋಡಿ, ಆನಂದಿಸಿ ಬರಹಗಳ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ, ಆಯಿಯ ಪ್ರೀತಿಯ ಮಗಳಾಗಿ, ವಿಧ್ಯಾರ್ಥಿಯಾಗಿ ಇರು.

  ReplyDelete
 28. tumba chenagi barediddira.. nimma ee baravanigeya hindina ondondu hejjeyannu gurutu tappade heliddirra..

  ondu varush puryasiddakke shubhashayagalu... baravanige tumba chennagide....

  danyavadagalu....

  ReplyDelete
 29. ನಿಮ್ಮ ಬರಹವನ್ನು ಓದುವಾಗ ಎನೋ ಒಂದು ಆಪ್ತತೆ ಬರುತ್ತದೆ ... ಇನ್ನಷ್ಟು , ಮಗದಷ್ಟು ಬರಹಗಳು ನಿಮ್ಮಿಂದ ಬರಲಿ ..
  ಹುಚ್ಚು ಹುಡುಗಿಗೆ ಶುಭ ಹಾರೈಕೆಗಳು ..

  ReplyDelete
 30. ಸೌಮ್ಯ ಅವರೇ,
  ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ. ನಿಮ್ಮಲ್ಲಿ ಕನ್ನಡ ಪ್ರೀತಿಯನ್ನು ಬಿತ್ತಿದ ನಿಮ್ಮ ತಾಯಿಯವರಿಗೆ ನಮ್ಮ ಧನ್ಯವಾದಗಳು...
  ನಿಮ್ಮ ಬ್ಲಾಗ್ ವಾರ್ಷಿಕೋತ್ಸವದ ಶುಭಾಶಯಗಳು..
  ಹೀಗೆ ಬರೆಯುತ್ತಿರಿ...

  --ಶಿವಪ್ರಕಾಶ್

  ReplyDelete
 31. ಅಭಿನಂದನೆಗಳು...:) ತುಂಬಾ ಇಷ್ಟವಾಯ್ತು ಈ ಬರಹ ಕೂಡ. ನನ್ನ ಸಾಹಿತ್ಯಾಭಿರುಚಿಗೂ ನನ್ನ ಅಪ್ಪ ಅಮ್ಮನೇ ಕಾರಣ. ಅದರಲ್ಲ್ ವಿಶೇಷವಾಗಿ ಅಮ್ಮ. ಯಾರೂ ಕದಿಯಲಾಗದ ಐಶ್ವರ್ಯ ಅಂದರೆ ವಿದ್ಯೆ. ಅದು ಬರೀ ಪುಸ್ತಕದ ಬದನೇಕಾಯಿ ಆಗಬಾರದೆಂದು ಹೇಳುತ್ತಾ ವಿವಿಧ ರೀತಿಯ ಪುಸ್ತಕಗಳ ಓದಿನ ಗೀಳನ್ನು ಹಚ್ಚಿದವರು. ನಾನೂ ಅಷ್ಟೇ.. ಒಂದನೇ ತರಗತಿಯಿಂದಲೇ ಓದಿನ ಹುಚ್ಚಿಗೆ ಬಿದ್ದವಳು.

  ಹೀಗೇ ಬರಿಯುತ್ತಿರು. ಕನಸುಗಳು ಬತ್ತದಿರಲಿ.

  ReplyDelete
 32. thank you Digwas :) ಧನ್ಯವಾದಗಳು ಪ್ರವೀಣ್ ಗೌಡ್ರೆ :)

  ReplyDelete
 33. ರಂಜನಕ್ಕ ನಿನ್ನ ಪ್ರೀತಿ ತುಂಬಿದ ಪ್ರೋತ್ಸಾಹಕರ ಮಾತುಗಳಿಗೆ ಧನ್ಯವಾದಗಳು. ಅದು ಸದಾ ಹೀಗೆ ಇರಲೆಂದು ಆಶಿಸುತ್ತೇನೆ :)

  ReplyDelete
 34. Thanks a lot ಶಿವು ಸರ್ & ತರುಣ್ :)

  ReplyDelete
 35. ಧನ್ಯವಾದಗಳು ಶ್ರೀಧರ್ ಮತ್ತು ಶಿವಪ್ರಕಾಶ್ :)

  ReplyDelete
 36. ಧನ್ಯವಾದಗಳು ತೇಜಕ್ಕ :)

  ReplyDelete
 37. ನಿಮ್ಮ ಬ್ಲಾಗಿನ ಶೀರ್ಷಿಕೆಯ ಅಡಿಬರಹ ನನಗೆ ವಿಶೇಷವಾಗಿ ಕಂಡಿತ್ತು.. ಆದ್ದರಿಂದಲೇ ನಾನು ನಿಮ್ಮ ಒಂದು ಬರಹ ಓದಿ ಕಾಮೆಂಟ್ ನೀಡಿದ್ದೆ.. ನಂತರ ನೀವು ನನ್ನ ಬ್ಲಾಗಿಗೆ ಭೇಟಿ ಕೊಟ್ಟಮೇಲೆ.. ನಾನು ನಿಮ್ಮ ಬ್ಲಾಗನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡೆ..
  ಅಭಿನಂದನೆಗಳು..
  ಶುಭಾಶಯಗಳು..

  ReplyDelete
 38. ಗುಲ್ಜಾರ್ ಸಾಬ್ ಅವರ ಕೆಲವು ಸಾಲುಗಳು ನೆನಪಾದವು..

  "ದಿಲ್ ತೋ ಆಖೀರ್ ದಿಲ್ ಹೈ ನ, ಮೀಟ್ಹಿ ಸಿ ಮುಶ್ಕಿಲ್ ಹೈ ನ.."

  "ದಿಲ್ ಹೈ ತೋ ಫಿರ್ ದರ್ದ್ ಹೋಗಾ, ದರ್ದ್ ಹೈ ತೋ ದಿಲ್ ಭೀ ಹೋಗಾ.."

  "ದಿಲ್ ತೋ ಬಚ್ಚ ಹೈ ಜಿ, ಥ್ಹೋಡಾ ಕಚ್ಚಾ ಹೈ ಜಿ"
  -----
  ಸೌಮ್ಯ, ಶುಭಾಶಯಗಳು..
  ಸದಾ ನಗುವಿರಲಿ..

  ReplyDelete
 39. ಸೌಮ್ಯ......
  "ಹುಚ್ಚು ಹುಡುಗಿಯ ನೂರೆಂಟು ಕನಸುಗಳು"-
  ಎನ್ನುವ ತಲೆಬರಹವೆ ನನ್ನನ್ನು ಈ ಒಂದು ಬ್ಲಾಗ್ ನೆಡೆಗೆ ನೋಡುವಂತೆ ಮಾಡಿದ್ದು.ಮೊದಲು ನೋಡುವಾಗ ಇದ್ದದ್ದು ಬ್ಲಾಗ್ ನೆಡೆಗೆ ಒಂದು ಸಣ್ಣ ಕುತೂಹಲ, ಓದಿದ ನಂತರ ಬೆಳೆದಿದ್ದು ಒಂದು ಮೆಚ್ಚುಗೆ, ಆದರೆ ಈಗ ಮತ್ತೆ ಇರುವುದು ಕುತೂಹಲವೇ, ಬ್ಲಾಗ್ ನ ಮುಂದಿನ ವಿಷಯ ಯಾವುದು ಎನ್ನುವುದರ ಬಗ್ಗೆ.

  ಈ ಒಂದು ವರುಷದ ಅವಧಿಯಲ್ಲಿ ಬ್ಲಾಗ್ ನಲ್ಲಿ ಹಲವು ಕನಸುಗಳು ಬಂದಿವೆ. ಮೊದಲನೆಯ ಕನಸಿನಿಂದ ಹಿಡಿದು ತೀರಾ ಇತ್ತೀಚಿನ ಕನಸಿನವರೆಗೂ ಎಲ್ಲವು ಚೆನ್ನಾಗಿಯೆ ಬಂದಿವೆ.ಎಲ್ಲದರಲ್ಲೂ ನಿನ್ನದು ಅತ್ಯಂತ ಪ್ರೌಢ ಹಾಗೂ ಅಸ್ಟೆ ಪರಿಣಾಮಕಾರಿ ಶೈಲಿಯ ಬರವಣಿಗೆ ಮತ್ತು ನಾನು ಮೆಚ್ಚಿದ್ದು ಅದನ್ನೇ, ಆ ಶೈಲಿಯನ್ನಾ.

  ಇನ್ನು ಮುಂದೆಯೂ ಇದೆರೀತಿಯಲ್ಲಿ ನಿನ್ನ ಕನಸುಗಳ ಓಟ ಮುಂದುವರಿಯಲಿ, ನಿನ್ನ ಕನಸುಗಳ ಹಿಂದೆ ನಾವೆಲ್ಲಾ ಬರುವಂತಾಗಲಿ ಎನ್ನುವ ಆಶಯದೊಂದಿಗೆ,

  ಗೆಳೆಯ,
  ಅನಂತ ಹೆಗಡೆ

  ReplyDelete
 40. really awesome work done by u..... its just amazing..... wow..... keep doing good work... "all d very best"

  ReplyDelete
 41. ಸೌ......
  ಭಾವಗಳು ಉಕ್ಕಿದಾಗ... lonely feel ಆದಾಗ....
  ಯಾಕೋ ಸುಮ್ನೆ ಬೇಜಾರಾದಾಗ.... full ಖುಷಿಯಾದಾಗ
  ಎಷ್ಟೆಷ್ಟೋ ಬಾರಿ ಮನಸಿಗೆ ತಾಗುವ ಹುಚ್ಚು ಹುಡುಗಿಯ ಕನಸಿನ ಸಾಲುಗಳು ನೆನಪಾಗ್ತು.... ಪದೇ ಪದೇ ಓದುವ ಹಾಗೆ ಮಾಡ್ತು....
  ಅಯ್ಯೋ.... ನಿನ್ writting ಬಗ್ಗೆ ನಾ ಏನೂ ಹೇಳ್ತ್ನಿಲ್ಲೆ....
  ಹೇಳೋಕೋದ್ರೆ ಮೇಲೆ 30 ಜನ ಹೇಳಿದ್ದೆಲ್ಲಾ ಹೇಳೆಕಾಗ್ತು....

  simply supper yaar.... and
  ಹುಚ್ಚು ಹುಡುಗಿಯ ಪುಟ್ಟ ಪುಟ್ಟ ಕನಸುಗಳೆಲ್ಲಾ ನನಸಾಗಲಿ....

  ReplyDelete
 42. thanks a lot, anant,nagaraj and ravi :)

  ReplyDelete
 43. ಏನ್ರಿ ಈ ತರಹ ಬರಿತೀರಾ., ಸುಮ್ನೆ ಹಾಗೆ ನೋಡೋಣ ಅಂತಹ ನೋಡಿದ್ರೆ, ಇಲ್ಲಿಯೇ ಬಿಗಿಯಾಗಿ ಮನಸ್ಸು ಹಿಡಿದುಕೊಂಡುಬಿಡೋದಾ.. ನನ್ನ ಬೇರೆಯ ಬ್ಲಾಗಿನ ಸ್ನೇಹಿತರಿಗೆ ನಿಮ್ಮ ಬಗ್ಗೆ ದೂರು ಹೇಳ್ತಿನಿ.. ಆಯ್ತಾ..

  ReplyDelete