Thursday, September 23, 2010

ಬೊಗಸೆ ಪ್ರೀತಿಯೊಂದಿಗೆ ....


ಮುಗ್ಧ ಹುಡುಗಿಯೊಬ್ಬಳ ಪ್ರೀತಿಯ ಕಲ್ಪನೆ, ಅದಕ್ಕೆ ಸಾಥ್ ನೀಡುವ ಒಬ್ಬ ಹುಡುಗ. ಅವನ ನಿಷ್ಕಲ್ಮಶ ಪ್ರೀತಿ ಅವಳ ಅರಿವಿಗೆ ಬರುವುದು ತಡವಾಗಿ. ಮಾಮೂಲಿ ಪ್ರೇಮಕಥೆಯಂತೆ ಕಾಣುವ ಇಂಥದ್ದೊಂದು ಕಥೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅದ್ಯಾಕೋ ಕಥೆ ರೂಪವನ್ನು ಕೊಡಲುಸಾಧ್ಯವಾಗಲೇ ಇಲ್ಲ. ಒಂದು ಪತ್ರದ ರೂಪದಲ್ಲಿ ಆ ಹುಡುಗಿಯ ಮನದಲ್ಲಿ ಪರಕಾಯ ಪ್ರವೇಶ ಮಾಡಿದ್ದೇನೆ. ಓದಿ ನೋಡಿ :
ಕನಸು ಕಂಗಳ ಹುಡುಗ,


ನನ್ನ ಕ್ಷಮಿಸು ಎಂದು ಕೇಳುತ್ತಲೇ, ನನ್ನ ಮನದ ಭಾವನೆಗಳಿಗೆ ಅಕ್ಷರದ ಪ್ರವಾಹ ರೂಪ ಕೊಟ್ಟಿದ್ದೇನೆ. ನಿಜ ಕಣೋ ಅದೆತ್ತಲೋ ಸಾಗಿತ್ತು ನನ್ನ ಮನಸು ನಿನ್ನ ಪ್ರೀತಿಯ ಬಿಟ್ಟು. ನೀನೆಲ್ಲೋ ನಿನ್ನ ಪ್ರಪಂಚದಲ್ಲಿ ಕಳೆದುಹೋಗಿದ್ದೀಯ ಎಂದು ಎಣಿಸಿದ್ದೆ. ನನ್ನೆಡೆಗಿನ ನಿನ್ನ ಪ್ರೀತಿ ಬರಡಾಗಿದೆ ಎಂದುಕೊಂಡಿದ್ದೆ. ಆದರೆ ನಿನ್ನೆ ಅನಿಸಿಬಿಟ್ಟಿತು ನೀನೆಂಥ ಪ್ರೀತಿ ನನಗೆ ಕೊಟ್ಟಿದ್ದು ಎಂದು..! ಅತ್ತುಬಿಟ್ಟಿದ್ದೆ.ನನ್ನ ಮೇಲೆ ನನಗೆ ಸಿಟ್ಟು ಕೂಡ ಬಂದಿತ್ತು. ಮನದಲ್ಲಿ ಪ್ರೀತಿಯೆಂದರೆ ಇದಿಷ್ಟೇ ಎಂದು ಕನಸಿಗೆ ಚೌಕಟ್ಟು ಹಾಕಿಕೊಂಡವಳು ನಾನು. ನೀನು ನನಗೆ ಧಾರೆ ಎರೆದದ್ದು ಅಂಥದ್ದೇ ಪ್ರೀತಿ.


ಚೌಕಟ್ಟಿನ ಒಳಗಿನ ಕನಸನ್ನು ಬಿಚ್ಚಿಟ್ಟರೆ ತಲೆಸರಿಯಿಲ್ಲದ ಹುಡುಗಿ ಎಂದೇ ಹೇಳುತ್ತದೆ ಸಮಾಜ. ನಿನ್ನ ಎದುರಿಗೆ ಹೇಳಿದಾಗ ಅದೆಷ್ಟು ಸಲೀಸಾಗಿ ಒಪ್ಪಿ ಬಿಟ್ಟಿದ್ದೆ ನೀನು.ಇನ್ನೂ ನೆನಪಿದೆ ಆ ದಿನ ನನ್ನ ಮೆಚ್ಚಿನ M.G ರೋಡಿನ ಉದ್ದಕ್ಕೆ ನಡೆಯುತ್ತಿದ್ದಾಗ ನೀ ಅಂದದ್ದು , "ನನಗೆ ನಿನ್ನ ದೇಹ ಮುಖ್ಯವಲ್ಲ, ನೀ ನನ್ನ ಬದುಕು ಪೂರಾ ಜೊತೆಯಿರು, ಜೀವದ ಗೆಳತಿಯಾಗಿ ನೋಡಿಕೊಳ್ಳುತ್ತೇನೆ".ನನ್ನ ಕಣ್ಣಲ್ಲಿ ಅಪರೂಪಕ್ಕೆಂಬಂತೆ ಜೋಗ ಜಿನುಗಿತ್ತು ಅಂದು, ಖುಷಿಯಿಂದ. ಗೊತ್ತಿಲ್ಲದಂತೆ ಆಡಿದ್ದೆ. ಮತ್ತೆ ಪಾನಿಪುರಿ ತಿನ್ನುವ ಅಂಗಡಿಯಲ್ಲಿ ಜಗಳ ತೆಗೆದಿದ್ದೆ ನಾನು .! ಅಕ್ಷರಶಃ ಮಗುವಾಗಿ ಬಿಡುತ್ತಿದ್ದೆ ನಿನ್ನ ಜೊತೆಯಲ್ಲಿರುವಾಗ. ನಮ್ಮಲ್ಲಿಯ ಜಗಳಕ್ಕೆ ಕಾರಣವೇ ಬೇಕಿದ್ದಿರಲಿಲ್ಲ, ಮತ್ತೆ ಜೊತೆಯಾಗಲೂ ಕಾರಣ ಬೇಕಿದ್ದಿರಲಿಲ್ಲ. ಅಂತಹ stupid ಜಗಳಗಳೇ ಇರಬೇಕು ನಮ್ಮಲ್ಲಿ ಒಂದು ಬೆಚ್ಚಗಿನ ಆತ್ಮೀಯತೆಯನ್ನು ಹುಟ್ಟಿಸಿದ್ದು. ನೀನೆ ಹೇಳುವಂತೆ bestest (superlative form of best) friends ನಾವು.

ನಿನ್ನ ಮೊದಲ ಸಲ ಭೆಟ್ಟಿಯಾದಾಗಲೇ ಅದೆಷ್ಟು ನಡೆಸಿದ್ದೆ. ಏನಿಲ್ಲವೆಂದರೂ ಆರು ಕಿಲೋಮೀಟರುಗಳು !ನಾನು ನಿನ್ನ ತಲೆ ತಿನ್ನುತ್ತ ನಡೆದಿದ್ದೆ ..ನೀನೆ ಕೊಡಿಸಿದ ice-cream ಹಿಡಿದು. ಅದು ಖಾಲಿಯಾಗುವ ಹೊತ್ತಿಗೆ ಕೈ, ಮೂಗು ಮುಖವೆಲ್ಲ ರಾಡಿ. ನಿಧಾನಕ್ಕೆ ನಿನ್ನ t-shirt ಗೆ ನನ್ನ ಕೈ ಒರಿಸಿದ್ದೆ. ಅಮ್ಮನ ಸೆರಗಿಗೆ ಕೈ ಒರೆಸುವ ಪುಟ್ಟಿಯಂತೆ.! ನೀ ಎಲ್ಲಿ ಬೈಯುತ್ತೀಯೋ ಎಂದು ಹೆದರಿದ್ದೆ ಕೂಡ. ನೀನು ಭಗವಾನ್ ಬುದ್ಧನಂತೆ ಮುಗುಳ್ನಕ್ಕು ನನ್ನ ತಲೆಯನ್ನೊಮ್ಮೆ ತಟ್ಟಿ stupid ಎಂದಿದ್ದೆ. ನಂತರ ನೀ ice-cream ಕೊಡಿಸಿದಾಗಲೆಲ್ಲ ರಾಡಿಯಾದ ನನ್ನ ಕೈ ತನಗರಿವಿಲ್ಲದಂತೆ ಹೋಗುತ್ತಿದ್ದದ್ದು ನಿನ್ನ t-shirt ಕಡೆಗೇ.!'ಬೊಮ್ಮರಿಲ್ಲು 'ಫಿಲ್ಮಿನಲ್ಲಿ ಹಾಸಿನಿ ರಾತ್ರೆ ice-cream ತಿನ್ನಲು ಎದ್ದು ಹೋಗೋವಾಗ ನನ್ನ ನಿನಪಾಗಿರಬೇಕು ನಿನಗೆ. ಕೇಳುತ್ತಿದ್ದೆನಲ್ವಾ ?ನಾನು ನಿನ್ನ ಹತ್ರ "ಒಂದು ವೇಳೆ ನಿನ್ನ ನಾನು ಮದ್ವೆ ಆಗಿ , ರಾತ್ರೆ 2 ಗಂಟೆಗೆ ಎದ್ದು icecream ಬೇಕು ಅಂತ ಕೇಳಿದ್ರೆ ಏನ್ ಮಾಡ್ತೀಯಾ?" ಅದೆಷ್ಟು ಸಲೀಸಾಗಿ ಉತ್ತರಿಸಿಬಿಟ್ಟಿದ್ದೆ... "ಫ್ರಿಜ್ ನಿಂದ icecream ತಂದು ಅದ್ರ ಮೇಲೆ ಚಾಕಲೇಟ್ ಹಾಕಿ ಕೊಡ್ತೇನೆ.!"

ಸಮುದ್ರದಂಚಿಗೆ ನಾವು ನಿಂತಾಗಲೆಲ್ಲ. ನಾನು ಅಲೆಯ ಜೊತೆಗೆ ಆಡುತ್ತಿದ್ದರೆ. ನೀನು ಹಸಿಮರಳಿನಲ್ಲಿ ಅದೇನೇನೋ ಗೀಚುತ್ತಿದ್ದೆ. ನಾನು ಮರಳಿನಲ್ಲಿ ಮನೆ ಮಾಡಿ ಅಲಂಕರಿಸಲು ಚಿಪ್ಪಿಗಳ ಹುಡುಕಾಟದಲ್ಲಿರುವಾಗಲೇ ನೀನು ಬೊಗಸೆ ತುಂಬಾ ಚಿಪ್ಪಿಯನ್ನು ನನ್ನ ಮುಂದೆ ಹಿಡಿದದ್ದು. ನನಗೆ ನಿನ್ನ ಪಿಂಕಿ ಪಿಂಕಿ ಹಸ್ತಗಳನ್ನು ಕಂಡು " ಹೇಯ್ ನಿನ್ನ ಕೈ ತುಂಬಾ ಚೆನ್ನಾಗಿದೆ" ಎಂದು ಅರಚುತ್ತಲೇ ಚಿಪ್ಪಿಗಳನ್ನೆಲ್ಲ ಕೆಳಹಾಕಿದ್ದು. ಇದನ್ನೆಲ್ಲಾ ನೋಡುತ್ತಿದ್ದ 'ದಿಯಾ' "ಏನಾಯ್ತೇ ?"ಎನ್ನುತ್ತಾ ನೀರಿಗಿಳಿದಿದ್ದು. ನೀನು ಗೀಚಿದ್ದೇನು ಎಂದು ನೋಡುವಷ್ಟರಲ್ಲಿ ನಿನ್ನ ಹೆಸರ ಜೊತೆಗೆ "ಪುಟ್ಟಾ" ಎಂದು ಬರೆದು ಅದೆಲ್ಲ ಕಾಣದಂತೆ ಇನ್ನೊಂದಿಷ್ಟು ಹೆಸರುಗಳನ್ನ ಬರೆದದ್ದು.

ನನ್ನ ಆ ಜೋಡಿ teddyಗಳ ಮದುವೆ ಮಾಡಿ ಸಂಭ್ರಮಿಸಿದ್ದೆ ನೋಡು ..!ನಾನು ಆ ಪಿಂಕಿಯ ಜೊತೆ. ಅದನ್ನು ನಾ ಹೇಳಿದಾಗ ಅದೆಷ್ಟು ಖುಷಿಯಾಗಿತ್ತು ನಿನಗೆ, ನಿನ್ನ ಆ ನಗು ಎಲ್ಲವನ್ನು ಹೇಳಿಬಿಟ್ಟಿತ್ತು ."ಪಿಂಕ್ ಟೆಡ್ಡಿ ಕುತ್ತಿಗೆಗೆ ಆ ಜರಿ ದಾರ ಕಟ್ಟು ಅನ್ನೋ ಸಲಹೆ ಬೇರೆ" ನಿನ್ನಿಂದ.

ಅದೆಷ್ಟು ಸಲ ನಿನ್ನ ಸತಾಯಿಸಿದ್ದೆ ನಾನು.. ನಿನ್ನ 'jyo' ನೆನಪಿನ ನೆಪವ ತೆಗೆದು. ನೀನು ಅತ್ತಿದ್ದು ಅದೆಷ್ಟು ಸಲವೋ ನನ್ನಿಂದ. ನಗುವಿನಷ್ಟೇ ಅಳುವನ್ನು ಕೊಟ್ಟಿದ್ದೇನೆ ಅಲ್ವಾ ?

ಇದೆಲ್ಲ ಈಗ್ಯಾಕೆ ನೆನಪಾಯ್ತು ಗೊತ್ತಾ? ಜೀವನದಲ್ಲಿ ಯಾರದ್ದೆಲ್ಲ ಪ್ರವೇಶವಾಗಿ ಬಿಡುತ್ತದೆ ಹುಡುಗ. ನಾನಂದುಕೊಂಡ ಪ್ರೀತಿಯ ಹುಡುಕಾಟದಲ್ಲಿ ನಿನ್ನ ಮರೆತು ಬಿಟ್ಟಿದ್ದೆ. ಕೈಯಲ್ಲಿ ಸುಂದರ ಹೂ ಹಿಡಿದುಕೊಂಡು ಯಾವುದೋ ಹೂವಿಗಾಗಿ ತೋಟವನ್ನೆಲ್ಲ ಅಲೆದಿದ್ದೆ. 'ಪುಟ್ಟಾ' ಎಂದು ಎಂದೇ ನನ್ನ ಕರೆದು. ಮಗುವಿನಂತೆ ನನ್ನ ನೋಡಿಕೊಂಡ. ನನ್ನ stupid thoughts & stupid ಕೆಲಸಗಳಿಗೆ ಮನಃ ಪೂರ್ತಿ ನಗುತ್ತಿದ್ದ ನಿನ್ನ ನಿಷ್ಕಲ್ಮಶ ಪ್ರೀತಿ ನನಗೇಕೆ ಅರ್ಥವಾಗಲೇ ಇಲ್ಲ. ?

ಇರುವುದೆಲ್ಲವ ಬಿಟ್ಟು ಇರದುದ ನಿನೆದು ತುಡಿವುದೇ ಜೀವನ.. ??ಅದೆಲ್ಲ ಇರಲಿ ಬಿಡು ಈಗ. ಅದೆಲ್ಲ ಓದಿ ಮುಗಿದ ,ಅರ್ಥವಾಗದ ಅಧ್ಯಾಯ. ಸುಖಾ ಸುಮ್ಮನೆ ತಲೆ ಕೆಡಿಸಿಕೊಂಡು ಬಿಟ್ಟೆ.!


ಒಮ್ಮೆ ನಿನ್ನ ಜೊತೆ ಮಾತನಾಡಬೇಕು , ice-cream ತಿನ್ನಬೇಕು( ಎರಡು ಕೈಯಲ್ಲಿ ಎರಡು ice-cream), ಅಪೂರ್ಣ ಕವನಗಳ ಸಾಲುಗಳ ನಿನ್ನ ಮುಂದೆ ಹೇಳಬೇಕು. ಅದನ್ನು ನೀನು ಪೂರ್ತಿ ಮಾಡಬೇಕು. ಒಂದಿಷ್ಟು ದೂರ ನಡೆಯಬೇಕು .ನಿನ್ನ ತಲೆ ತಿನ್ನಬೇಕು, ನೀನು ನನ್ನ ತಲೆಗೊಂದು ಮೊಟಕಬೇಕು. ಸಮುದ್ರದ ಹಸಿಮರಳಲ್ಲಿ ಮನೆಯೊಂದ ಕಟ್ಟಬೇಕು. ಅಬ್ಬಾ !!ಎಷ್ಟೊಂದು ಕೆಲಸಗಳಿವೆ ನಿನ್ನ ಜೊತೆ...! ಬೇಗಬಂದು ಬಿಡು ಮಾರಾಯ.!
ನಿನ್ನ ಹಳೆ ಹುಡುಗಿ 'jyo' ಬಗ್ಗೆ ತಣ್ಣನೆಯ ಹೊಟ್ಟೆ-ಕಿಚ್ಚು ಶುರುವಾಗಿಬಿಟ್ಟಿದೆ. ಆ ದಿನ ಹಸಿಮರಳಲ್ಲಿ ಅವಳದ್ದೂ ಹೆಸರು ಬರೆದಿದ್ಯಾ ?
ಮೋಡಗಳ ಮುಸುಕು..
ಸುರಿಮಳೆ ...
ಅಂಗಳದಲ್ಲಿ ನಿಂತ ನೀರು..
ಹಸಿರು ಹಳದಿ ಬಣ್ಣದ ಕಾಗದದ ದೋಣಿ..
ನನ್ನ ಬಣ್ಣದ ಛತ್ರಿ...
ನಿನ್ನ ಪ್ರೀತಿ .......... !
ಅಪೂರ್ಣ ಕವನವನ್ನು ಪೂರ್ತಿ ಮಾಡ್ತೀಯಲ್ವಾ ?

ಬೊಗಸೆ ಪ್ರೀತಿಯೊಂದಿಗೆ
ಪುಟ್ಟಾ

21 comments:

 1. ಬೊಗಸೆ ಪ್ರೀತಿ ಹೊತ್ತ ನಿಮ್ಮ ಬರಹ ಸೊಗಸಾಗಿದೆ :)

  ReplyDelete
 2. tummba channagide ree...jeevanmukhi barahagalu....

  ReplyDelete
 3. ತುಂಬಾ ಚೆನ್ನಾಗಿದೆ. ಇಷ್ಟು ಚಂದದ ಪತ್ರ ಓದಿದ ಮೇಲೆ ಖಂಡಿತಾ ಅಪೂರ್ಣ ಕವನವನ್ನು ಪೂರ್ಣಗೊಳಿಸುತ್ತಾರೆ ಬಿಡಿ!

  ReplyDelete
 4. super agide ri... heart ge hagu summane muttutade... nimma aa huduga ( kateya hudugiya huduga) kavite purna madkondu 2 ice-cream tagondu nimge bega sigali... :):)

  ReplyDelete
 5. ನಿರೂಪಣೆ ಸೊಗಸಾಗಿದೆ, ಅಪೂರ್ಣವಾಗಿರುವುದು ಬೇಗ ಪೂರ್ಣ ಆಗಲಿ..!

  ಶುಭಾಶಯಗಳು
  ಅನ೦ತ್

  ReplyDelete
 6. Soumya...Tumbaa sundara baraha, apoorna kavana poornavaagali....Nice....

  ReplyDelete
 7. ಹೌದು ಚೌಕಟ್ಟಿನ ಒಳಗಿನ ಕನಸನ್ನು ಬಿಚ್ಚಿಟ್ಟರೆ ತಲೆಸರಿಯಿಲ್ಲದ ಹುಡುಗಿ ಎಂದು ಸಮಾಜ ಹೇಳುವುದು ಖಂಡಿತ..
  ಸಖತ್ತಾಗಿದೆ ರೀ.. ಲೇಖನ.

  ReplyDelete
 8. ಸಖತ್ತಾಗಿದೆ ಬರಹ,ಮನಮುಟ್ಟುವಂತಿದೆ....

  ReplyDelete
 9. thank u... manju & amita.......:)

  ReplyDelete
 10. ತು೦ಬಾ ಚೆನ್ನಾಗಿದೆ ಕಣ್ರೀ...ತ೦ಪಾದ ICE CREAM ನ ಸುತ್ತ ಹೆಣೆದ ಮನದಾಳದ ಬೆಚ್ಚಗಿನ ಮಾತುಗಳು ಚೆನ್ನಾಗಿದ್ದವು. ನಿಮ್ಮ ಕವನ ಬೇಗನೆ ಪೂರ್ಣವಾಗಲಿ
  ....ಶ್ರೀ...:-)

  ReplyDelete
 11. ಸೌಮ್ಯ,
  ಇಷ್ಟು ಸುಂದರ ಪ್ರೇಮ ಪತ್ರ ನೋಡಿ ಯಾರಾದರೂ ಓಡಿ ಬರುತ್ತಾರೆ ಮತ್ತು ಕವನ ಪೂರ್ತಿ ಮಾಡುತ್ತಾರೆ.... ತುಂಬಾ ಸೊಗಸಾಗಿದೆ...... ರವಿ ಬೆಳೆಗೆರೆಯವರ ಲವ್ ಲವಿಕೆ ನೆನಪಾಯಿತು.....

  ReplyDelete
 12. Soumya

  nimma love letter tumba interesting agide

  bega kavana poorna agali

  ReplyDelete
 13. ಸುಂದರ ಪತ್ರಕಥೆ. ನಾಗಲೋಟದಲ್ಲಿ ಓದಿಸಿಕೊಂಡು ಓಡಿಸಿತು. ಭಾವನೆಗಳ ದಟ್ಟತೆಯ ಸೊಗಡು ಅಪ್ಯಾಯಮಾನವಾಗಿದೆ.
  ನನ್ನದೂ ಒಂದು ಪರಕಾಯ ಪ್ರವೇಶ ಪ್ರೇಮ ಪಾತ್ರವಿದೆ. ಬಿಡುವಾದಾಗ ಓದಿ:http://nannachutukuhanigavanagalu.blogspot.com/2010/03/blog-post_17.html

  ReplyDelete
 14. hi..soumya...odugarannu,,hidididutte,,nimma baravanige.....heart,,touching story,,kanri....keep writing,,

  ReplyDelete
 15. thank u seetaram sir and Satya :)

  ReplyDelete
 16. neevu nannolage parakaya pravesha madiruva hagithu !!!

  ReplyDelete