
ಮೊದಲ ಮಳೆಗೆ
ಮನದ ಒಳಗೆ
ಏನೋ ಭಾವ ಸುಳಿಯುತಿದೆ..
ವಿರಸ ಕಳೆದು
ಕನಸು ಮೊಳೆತು
ಜೀವ ಭಾವ ತುಡಿಯುತಿದೆ..
ಕನಸು ಕಮರಿ
ಮನಸು ಬಳಲಿ
ಮರುಭೂಮಿಯಾಗಿತ್ತು ಮನಸು
ಮಳೆಯ ತಂಪು
ಮಣ್ಣ ಕಂಪು
ಮತ್ತೆ ಮೊಳೆಯಿತು ಕನಸು..
ಕಾದ ಭುವಿಗೆ ಮಧುರ ಸ್ಪರ್ಶ
ಎಲ್ಲಿಂದಲೋ ಇಳಿವ ಮಳೆಹನಿ
ದಣಿದ ಕಣ್ಣಿಗೆ ಏನೋ ಹರ್ಷ
ಕಣ್ಣಂಚಿನಲ್ಲಿ ಹೊಳೆವ ಹನಿ..
ಎಲ್ಲೋ ಹೊಯ್ದ ಮಳೆಯ ಕುರುಹು
ಇಲ್ಲಿ ಸುಳಿವ ತಂಗಾಳಿ ..
ಯಾರದೋ ನೆನಪು ನನ್ನ ಮನದಿ
ಅಂಚಿನಲಿ ಮುಗುಳು ನಗೆಯ ಸುಳಿ..!!
ಅಂಚಿನಲಿ ಮುಗುಳು ನಗೆಯ ಸುಳಿ..!!