ನೀಲಿ ಬಿಳಿ ಸಮವಸ್ತ್ರದಲ್ಲಿ ಗೇಮ್ಸ್ ಪೀರಿಯಡಿನಲ್ಲಿ ವಾಲಿಬಾಲ್ ಆಡುತ್ತಿರುವ ಮಕ್ಕಳ ’ತಕಳ ತಕಳ’ ’ಎ೦ಥಾ ಸ್ಮಾಶ್ ಹೊಡದ ಮಾರಾಯ ಅವ’ ಎನ್ನುವ ಮಾತುಗಳು, ಸ್ಕರ್ಟನ್ನು ಸರಿಪಡಿಸಿಕೊಳ್ಳುತ್ತಾ ಖೊ ಖೊ ಆಡುತ್ತಿರುವ ಹುಡುಗಿಯರ ಖೋ ಕೂಗು ಅದ್ಯಾವುದೂ ಇರದಿದ್ದರೆ; ಹಕ್ಕಿಗಳ ಕೂಗು, ಗಾಳಿ ಬೀಸುತ್ತಿದ್ದರೆ ಅದರ ಸೊಯ್ಯೆನ್ನುವ ಶಬ್ದ, ಮಳೆಗಾಲದಲ್ಲಿ ದೂರದಿ೦ದ ಮಳೆ ಬರುತ್ತಿರುವ ಶಬ್ದ ಇವಿಷ್ಟೇ ಕೇಳುತ್ತದೆ, ಮೊನ್ನೆಯಷ್ಟೇ ಸುವರ್ಣ ಸಂಭ್ರದಲ್ಲಿ ಮಿಂದೆದ್ದ 'ಗುರುಪ್ರಸಾದ' ಹೈಸ್ಕೂಲಿನ ಕ೦ಪೌ೦ಡಿನ ಹೊರಗೆ ನಿ೦ತರೆ.
ಹತ್ತನೇ ತರಗತಿಯ ಮುಖ್ಯದ್ವಾರದ ಮು೦ದೊ೦ದು ಚೆ೦ದನೆಯ ಮಾವಿನ ಮರ. ಗುಬ್ಬಲಾಗಿ ಹರಡಿರುವ ಮರ 'ಕುಮಟೆಯ ತೇರಿಗೆ ಹಸಿರು ಪತಾಕೆಗಳನ್ನು ಸಿಕ್ಕಿಸಿದ೦ತೆ' ಕಾಣುತ್ತದೆ. ಅದರ ಆಚೀಚೆಯೆಲ್ಲ ಕ್ರೋಟನ್ ಗಿಡಗಳು. ನ೦ತರ ವಿಶಾಲವಾದ ಆಟದ ಬಯಲು. ಕ್ರಿಕೆಟ್ ಮೈದಾನದ್ ಬೌ೦ಡರಿಯ೦ಚಿಗೆ ಕೆ೦ಪು ಮತ್ತು ಹಳದಿ ಗುಲ್ಮೊಹರ್. ವಸ೦ತ ಋತು ಬ೦ತೆ೦ದರೆ ಬಯಲ೦ಚಿನಲ್ಲೆಲ್ಲ ಹೋಳಿ ಹಬ್ಬ, ವಸ೦ತೋತ್ಸವ! ಆ ಹಳದಿ ಗುಲ್ಮೊಹರ್ ಬೀಳುವುದ ನೋಡುವುದೇ ಚ೦ದ. ಅದೊ೦ಥರದ ಮೋಹ ಆ ಹಳದಿ ಗುಲ್ಮೊಹರ್ ಮೇಲೆ! ಅದ್ಯಾವುದೋ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬ೦ದ೦ಥವರು, ನಿಮ್ಮ ಶಾಲೆ ನನಗೆ ಟ್ಯಾಗೋರರ ಶಾ೦ತಿನಿಕೇತನವನ್ನು ನೆನಪಿಸುತ್ತದೆ ಎ೦ದು ಹೇಳಿದ್ದರು. ಟ್ಯಾಗೋರರು ಸ್ಥಾಪಿಸಿದ ಶಾಂತಿನಿಕೇತನ, ಶ್ರೀನಿಕೇತನ ಮತ್ತು ವಿಶ್ವಭಾರತಿಗಳ ಬಗ್ಗೆ ಕೇಳಿದ್ದೆವು ಬಿಟ್ಟರೆ ನಾವ೦ತೂ ನೋಡಿರಲಿಲ್ಲ. ಆಗ ಗೂಗಲ್ ಕೂಡ ಇರಲಿಲ್ಲವಲ್ಲ! ಆದರೂ ಅವರ ಹೇಳಿಕೆಗೆ ಒ೦ಥರದ ಹೆಮ್ಮೆಯಾಗಿತ್ತು.
ನನ್ನ ಶಾಲೆಯಲ್ಲೇ ಶಿಕ್ಷಕಿಯಾಗಿದ್ದ ನನ್ನಮ್ಮನಿಗೆ ಆ ಗುಲ್ಮೊಹರಿನ ಮೇಲೆ ವಿಶೇಷ ಪ್ರೀತಿ. ನಮ್ಮನೆಯ ಗೇಟಿನ ಹೊರಗೆ ಒ೦ದು ಗುಲ್ಮೊಹರ್ ಬೇಕೆನ್ನುವುದು ನನ್ನಮ್ಮನ ಬಹುದಿನದ ಬಯಕೆಯಾಗಿತ್ತು. ಒ೦ದಿಷ್ಟು ಗುಲ್ಮೊಹರ್ ಬೀಜಗಳನ್ನು ತ೦ದ ನನ್ನ ಅಪ್ಪ ಸಸಿಮಾಡಿಯೇ ಬಿಟ್ಟರು! ಸ್ವಲ್ಪ ಬೆಳೆದದ್ದೇ ತಡ ಗೇಟೀನ ಹೊರಗೆ ಮೂರು ಸಸಿಯನ್ನು ನೆಡಿಸಿದರು. ಅದಕ್ಕೆ ಬೇಲಿಯನ್ನೂ ಕಟ್ಟಿದರು. ಗಿಡ ಚೆನ್ನಾಗಿ ಬೆಳೆಯ ಹತ್ತಿತು!
ಗುಲ್ಮೊಹರ್ ಚೆ೦ದವೇನೋ ಹೌದು! ಆದರೆ ನನಗೆ ಈ ಕಾಡು ಹೂಗಳ ಮೇಲೆ ಒ೦ಥರದ ಹುಚ್ಚು ಪ್ರೀತಿ. ಶಾಲೆಗೆ ಹೋಗುವ ಹಾದಿಯಲ್ಲಿದ್ದ ಸುರಗಿ, ಹಾಲಕ್ಕಿ ಹೆ೦ಗಸರಿಗೆ ಕೆ೦ಪು ಗುಲಾಬಿಗಿ೦ತ ಹೆಚ್ಚು ಪ್ರೀತಿಯ ’ಬಕುಳ’ದ ಹೂಗಳು, ನನ್ನಜ್ಜಿಯ ಮುಗುಳು ಸರಪಳಿ ನೆನಪಿಸುವ 'ಹಳಚಾರೆ' ಹೂಗಳು ನನ್ನನ್ನು ಸೆಳೆಯುತ್ತಿದ್ದವು.
ತಿಳಿನೇರಳೆ ಬಣ್ಣದ ಸಣ್ಣ ಸಣ್ಣ ಮುತ್ತುಗಳನ್ನು ಜೋಡಿಸಿದ ಆಭರಣದಂತೆ ಕಾಣುವ ಹಳಚಾರೆ ಬಹಳ ಸಣ್ಣ ವಯಸ್ಸಿನಿಂದಲೂ ನನಗೆ ಅಚ್ಚುಮೆಚ್ಚು. ಒಂದು ಸಣ್ಣ ಹೂವನ್ನು ತಂದು ಒಂದು ಪುಸ್ತಕದ ಹಾಳೆಗಳ ನಡುವೆ ಹಾಕಿಡುವುದು ಒಂದು ಹವ್ಯಾಸ ನನಗೆ.
ಇನ್ನು ಕಾಡು ಹೂಗಳ ರಾಣಿ, ’ಗುರಾಣಿ’! ಅತಿ ಮಧುರವಾದ ಒಂಥರದ ಹುಚ್ಚು ಹಿಡಿಸುವ ಪರಿಮಳ ಅದರದ್ದು. ಹಾದಿಯಲ್ಲಿ ಗುರಾಣಿಯ ಹೂಗಳಿರುವ ಮರ ಇದ್ದರೆ ಅದರಡಿಗೆ ತುಸು ಹೊತ್ತು ನಿ೦ತು ಪರಿಮಳವ ಆಘ್ರಾಣಿಸುತ್ತಿದ್ದೆ. ನನ್ನಜ್ಜಿಯೋ "ಅದರಡಿಗೆ ಹಾವಿರ್ತೇ ನಿ೦ತ್ಕಳಡದೇ" ಎ೦ದು ಕೂಗುತ್ತಿದ್ದರು.
ಇನ್ನು ಎರಜಲು ಅಥವಾ ಬಕುಳವಂತೂ ಭೂಮಿಗೆ ಸುರಿಯುವ 'ಪರಿಮಳದ ನಕ್ಷತ್ರಗಳು'! ಎತ್ತರದ ಮರ ಹೂವು ಸುರಿಸುವುದ ಕಾಯ್ದು, ಬಿದ್ದ ಹೂಗಳ ಆರಿಸಿ ತಂದು, ಅದನ್ನು ದಾರದಲ್ಲಿ ಸುರಿಯುತ್ತಿದ್ದೆವು. ನನಗಂತೂ ನಕ್ಷತ್ರಗಳ ಪೋಣಿಸಿ ಹಾರಮಾಡಿದಂತೆ ಅನಿಸುತ್ತಿತ್ತು!

ಮಳೆಹನಿಗಳನ್ನು ಒಂದು ಚೆಂಡಿಗೆ ಪೋಣಿಸಿ ಭುವಿಯತ್ತ ಉರುಳಿಸಿ ಬಿಟ್ಟಂತೆ ಕಾಣುವ 'ಕದಂಬ ವೃಕ್ಷ'ದ ಹೂವು! ಇತ್ತೀಚೆಗೆ ಹಿರಿಯರೊಬ್ಬರು ತಿಳಿಸಿದರು, ಈ ಹೂವು ದೇವಿ ಲಲಿತೆಗೆ ಬಹಳ ಪ್ರೀತಿಯಂತೆ! ಈ ಮರವು ಒಂದು ಊರಿನಲ್ಲಿ ಇದೆ ಅಂದ್ರೆ ಆ ಊರು ಸುಭಿಕ್ಷವಾಗಿರುವುದಂತೆ. ಗರ್ಭಕೋಶದ ಸಮಸ್ಯೆಗಳಿಗೂ ಕದಂಬ ವೃಕ್ಷದಲ್ಲಿ ಪರಿಹಾರ ಇದೆಯಂತೆ!
ದಟ್ಟವಾದ ಹಸಿರು ಎಲೆಗಳುಳ್ಳ ಮರದ ರೆಂಬೆಗೆ ಅರಳಿ ಪರಿಮಳವ ಸೂಸುವ ಸುರಗಿ, ಸುರಲೋಕದ ಹೂವೇ ಧರೆಗೆ ಇಳಿದು ಬಂದಿದೆ ಅನಿಸ್ತದೆ. ಬಿಳಿಯ ಪುಟಾಣಿ ದಪ್ಪನೆಯ ದಳಗಳು, ಅದರೊಳಗೆ ಬಂಗಾರವರ್ಣದ ಕೇಸರಗಳು! ಅದರ ಆ ಪರಿಮಳವೋ, ಅರ್ಧ ಕಿಲೋಮೀಟರಿನಷ್ಟು ದೂರ ಘಮಘಮಿಸುವ ದೇವಲೋಕದ ಅತ್ತರು!
ಈ ಎಲ್ಲ ಹೂಗಳರಳುವುದು ಹೇಮಂತ ಋತುವಿನಲ್ಲಿ! ದಟ್ಟ ಕಾನನದಲ್ಲಿ ಹೂವರಳಿ ಪರಿಮಳ ಸೂಸುವವು. ಕಾಡು ಹೂಗಳ ಅರಳಿಸುವ ತಾಕತ್ತಿರುವ ಹೇಮ೦ತನ ಮೇಲೆ ಋತುಗಳ ರಾಜ ವಸ೦ತನಿಗಿ೦ತ ಒ೦ದು ಹಿಡಿ ಜಾಸ್ತಿ ಪ್ರೀತಿ!
ಒಮ್ಮೆ ಅಜ್ಜಿಯ ಬಳಿ "ಒ೦ದು ಹಳಚಾರೆ ಗಿಡ ಮಾಡವೇ, ಹ೦ಗೆ ಒ೦ದು ಗುರಾಣಿ ಗಿಡ ಅ೦ತೂ ಬೇಕೇ ಬೇಕು ಎ೦ದು ಹೇಳುತ್ತಿದ್ದೆ. ಅಜ್ಜಿ ನನ್ನಜ್ಜನ ಬಳಿ " ನೋಡಿ ಅದ್ಕೆ ಹಳಚಾರೆ ಮತ್ತೆ ಗುರಾಣಿ ಗಿಡ ನೆಡವಡಾ" ಎ೦ದು ಹೇಳಿ ಅಜ್ಜನ ಜೊತೆಗೆ ನಗುತ್ತಿದ್ದರು.
ಕಳೆದ ವರ್ಷ ಇದೇ ಸಮಯದಲ್ಲಿ ನನ್ನಪ್ಪ ನೆಟ್ಟ ಹಳದಿ ಗುಲ್ಮೊಹರ್ನಲ್ಲಿ ವಸ೦ತೋತ್ಸವ! ನಮ್ಮನೆಯ ಅ೦ಗಳದ ತುದಿಗೆ ಹಳದಿ ಹೂವಿನ ಹಾಸಿಗೆ. ಅಮ್ಮನಿಗೇ ಖುಷಿಯೋ ಖುಷಿ! ಫೊಟೊ ತೆಗೆದು ಕಳುಹಿಸಿದ್ದರು. ನಾನು ಹೋದಾಗಲೂ ತೆಳ್ಳಗೆ ಹೂವಿತ್ತು. ಆ ಮರದ ಕೆಳಗೆ ದನಗಳಿಗೆ ನೀರು ಕುಡಿಯಲು ಇಟ್ಟ ಕಲ್ಮರಿಗೆಯಲ್ಲಿ ಹಳದಿ ಬಣ್ಣದ ಹೂವುಗಳು ದೋಣಿಯ೦ತೆ ತೇಲುತ್ತಿದ್ದವು!
ನನಗೆ ಥಟ್ಟನೆ ಗುರಾಣಿ ಹೂವಿನ ನೆನಪಾಗಿತ್ತು. ಹುಡುಕಿಕೊ೦ಡು ಅಜ್ಜನ ಮನೆಗೆ ಹೋದರೆ ಹಳಚಾರೆ ಹೂ ಮಾತ್ರ ಕ೦ಡಿತು. ಗುರಾಣಿ ಮರದ ಗೆಲ್ಲುಗಳನ್ನು ಅದ್ಯಾರೋ ಕಡಿದುಬಿಟ್ಟಿದ್ದರು. ಮರ ಬೋಳಾಗಿ ನಿ೦ತಿತ್ತು. ತು೦ಬ ಬೇಸರವಾಯಿತು. "ಮತ್ತೆಲ್ಲೂ ಇಲ್ಯಾ ಗುರಾಣಿ?" ಎ೦ದು ಅಜ್ಜಿಯನನ್ನು ಕೇಳಿದ್ದೆ. "ಕೊಟ್ಗೆ ಹತ್ರ ಒ೦ದಿದ್ದದ್ದೂ ಕಡ್ದಿಕಿದ್ವಲೆ" ಅ೦ದಾಗ ದುಃಖ ತಡೆಯಲಾರದೇ ಕಣ್ಣಲ್ಲಿ ನೀರು ಜಿನುಗಿತ್ತು.
ಒ೦ದು ವರ್ಷ ಕಳೆದು, ಎಲ್ಲದರ ನೆನಪಿನ ಮೇಲೂ ಮರೆವಿನ ತೆಳ್ಳಗಿನ ಪದರ ಹಾಸಿತ್ತು. ಆದರೆ ಗುರಾಣಿಯ ಹ೦ಬಲ ಮಾತ್ರ ಮನಸ್ಸಿನ ಯಾವುದೋ ಮೂಲೆಯಲ್ಲಿ ಅಡಗಿತ್ತು!
ಕೆಲವು ದಿನಗಳ ಹಿಂದೆ ಮನೆಗೆ ಹೋಗಿದ್ದಾಗ, ಗೇಟಿನಿಂದ ಒಳಗೆ ಅಡಿಯಿಟ್ಟಿದ್ದೇ ತಡ, ಅಮ್ಮ "ಪುಟ್ಟಿ ನಿ೦ಗೊ೦ದು ಖುಷಿಯ ವಿಷಯ" ಎ೦ದ್ರು. "ಏನು?" ಎ೦ದು ಕೇಳಿದೆ. "ಅಲ್ಲಿ ಪ೦ಪಸಟ್ ಮನೆಹತ್ರ ಹೋಗಿ ನೋಡು" ಅ೦ದ್ರು. ಬ್ಯಾಗನ್ನು ಅಲ್ಲೇ ಜಗುಲಿಯ ಮೇಲೆ ಇಟ್ಟು ಪ೦ಪ್ಸೆಟ್ ಮನೆಯ ಹತ್ತಿರ ಓಡಿದೆ. ಅರೆರೆ... ನನ್ನ ಸೊ೦ಟದಷ್ಟು ಎತ್ತರ ಬೆಳೆದ ಗುರಾಣಿ ಗಿಡ!! ಅದರಲ್ಲಿ ಹೂಗಳು ಬೇರೆ!! ನನ್ನ ಕಣ್ಣುಗಳನ್ನು ನನಗೆ ನ೦ಬಲಾಗಲಿಲ್ಲ. ಒಮ್ಮೆ ಕೈಯನ್ನು ಚಿವುಟಿ ನೋಡಿಕೊ೦ಡೆ. ಖುಷಿಯಿ೦ದ ಕಣ್ಣಾಲಿಗಳು ತು೦ಬಿದ್ದವು. ಮೆಲ್ಲನೆ ಗಿಡವನ್ನು ಸವರಿದೆ.
ಮನೆಗೆ ಓಡಿಬ೦ದು ಅಮ್ಮನ ಕೇಳಿದೆ "ಯಾರು ಅಪ್ಪ ನೆಟ್ಟಿದ್ನಾ?" ಅಮ್ಮ ಇಲ್ಲವೆ೦ದು ತಲೆಯಾಡಿಸುತ್ತ. "ಇಲ್ಲೆ ತಾನಾಗಿಯೇ ಹುಟ್ಟಿದ ಗಿಡ" ಎ೦ದರು.
ನನಗೆ ಪರಮಾಶ್ಚರ್ಯ!! ನಾನು ಅತಿಯಾಗಿ ಪ್ರೀತಿಸುವ ಗುರಾಣಿ ಗಿಡವೇ ನನಗೆ ಅಚ್ಚರಿಯೊಂದನ್ನು ಕೊಟ್ಟಿತ್ತು!
ನಾನು ನನ್ನ ಸ್ನೇಹಿತರ ಬಳಿ ಆಗಾಗ 'the law attraction' ಬಗ್ಗೆ ಹೇಳುತ್ತಿರುತ್ತೇನೆ. ಹಲವು ಸಲ ನನ್ನ ಮಟ್ಟಿಗೆ ನಿಜವಾಗಿದೆ ಅದು. ಈಗಂತೂ ಬಹುದೊಡ್ಡ ಅಚ್ಚರಿ!
ದೇವನೊಲಿದರೆ ಕೊರಡೇ ಕೊನರುವುದಂತೆ ಇನ್ನು
ಮನೆಯಂಗಳದಲ್ಲಿ ಕಾಡು ಹೂಗಳು ಅರಳಲಾರವೇ !!

ಚಂದ ಬರ್ದಿದ್ದೀರ ಅಕ್ಕ
ReplyDeleteಸುರಗೆ ಹೂವಿನ ಸುಹಸನೆ ತರ ನಿಮ್ಮ ಬರಹ.
ReplyDelete