Wednesday, March 9, 2011

ಅಲೆಮಾರಿ ಸಾಲುಗಳು

ಅಲ್ಲಿ ನೀಲಿ ಕಡಲ ಭೋರ್ಗರೆತವಿದೆ, ಕಡಲ ನಿರ್ಭೀತ ಅಲೆಗಳಿಗೆ ದಡದ ಸ್ವಾಗತವಿದೆ. ನೀಲಿ ಕಡಲು ನೀಲ ಆಗಸವ ಸೇರಿದಂತೆ ಭಾಸವಾಗುವ ದೃಶ್ಯವನ್ನು, ಹಲವು ಜೊತೆ ನೀಲಿ 'ಅಮಲು ಕಂಗಳು ನೋಡುತ್ತವೆ. ಅದೇನನ್ನೋ ಯೋಚಿಸಿ ಮುಗುಳು ನಗುತ್ತವೆ.

ಆಗಸದ ನೀಲಿ, ಸುರಗಿ ಮರದ ಹಸಿರು, ಗೌಡರ ಮನೆಯ ಕಂದು ಬಣ್ಣದ ಆಕಳಿನ ಕಣ್ಣ ಕೆಂಪು,  ರಥಬೀದಿಯ ರಂಗೋಲಿಯ ಹಿಟ್ಟಿನ ಬಿಳಿ, ಗುಲ್ಮೊಹರ್ ಗಿಡದ ಹೂವಿನ ಹಳದಿ ಬಣ್ಣಗಳನ್ನೆಲ್ಲ ಹೊತ್ತ ಬಣ್ಣ ಬಣ್ಣದ ಅಂಗಡಿ ಸಾಲುಗಳಿವೆ. ಅಲ್ಲಿ ಚಿತ್ರ ವಿಚಿತ್ರ ವಿನ್ಯಾಸದ ಅಂಗಿಗಳಿವೆ. 

ಹೌದು ಅದು ಗೋಕರ್ಣ.! 'ದಕ್ಷಿಣ ಕಾಶಿ',' ಹಿಪ್ಪಿಗಳ ಸ್ವರ್ಗ' ಎಂದೆಲ್ಲ ಕರೆಯಿಸಿಕೊಂಡ ಗೋಕರ್ಣ. ಇದೊಂದು ಪುಣ್ಯ ಭೂಮಿ. ಜೊತೆಗೆ ವಿವಾದವನ್ನು ಬೆನ್ನಿಗೆ ಹೊತ್ತುಕೊಂಡಿರುವ ನೆಲ. ಇತ್ತೀಚಿಗೆ ನನ್ನನ್ನು ಪದೇ ಪದೇ ತನ್ನತ್ತ ಸೆಳೆದ ಭೂಮಿ. ಅಲ್ಲೊಂದು ಪ್ರವಾಸಿಯಾಗಿಯೂ ಹೋಗಿಲ್ಲ, ಭಕ್ತಳಾಗಿಯೂ ಹೋಗಿಲ್ಲ. ಸುಮ್ಮನೆ ಕರೆದಿತ್ತು ಗೋಕರ್ಣ,ನಾನೂ ಸುಮ್ಮನೆ  ಹೋಗಿದ್ದೆ, ಅಲೆದೆ. ..ಮುಗುಮ್ಮಾಗಿ ಅಲೆದೆ.

ಹಿಂತಿರುಗಿ ಬರುವಾಗ ನನ್ನಲ್ಲಿ ಇದ್ದದ್ದು ಇಷ್ಟು  ಕ್ಯಾಮೆರಾದಲ್ಲಿ ಒಂದಿಷ್ಟು ಚಿತ್ರಗಳು,ಮನದಲ್ಲಿ ನೆನಪುಗಳು.
ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕಾಗಿ ನೆನಪುಗಳ, 
ನಾ ಕಂಡ ದೃಶ್ಯಗಳ ಒಂದಿಷ್ಟು ಸಾಲುಗಳಾಗಿಸುತ್ತಿದ್ದೇನೆ. ಕೆಲವೊಂದು ಚಿತ್ರಗಳ ನಿಮ್ಮ ಮುಂದೆ ಇಡುತ್ತಿದ್ದೇನೆ.

ಒಂದಕ್ಕೊಂದು ಸಂಬಂಧವಿಲ್ಲದ ಸಾಲುಗಳು ಇವು. ಹಿಪ್ಪಿಗಳಂತೆ ಅಲೆಮಾರಿಗಳು. ಅದಕ್ಕೆ 'ಅಲೆಮಾರಿ ಸಾಲುಗಳು' ಎಂದು ಕರೆಯ ಬೇಕೆನ್ನಿಸಿತು. !
ನೀವು ಒಮ್ಮೆ ಗೋಕರ್ಣದ ಬೀದಿಗಳಲ್ಲಿ ಕಳೆದು ಹೋಗಿ. ಓದಿ ನೋಡಿ ಹೇಗಿದೆ ಹೇಳಿ. **  ಮನಸ್ಸನ್ನು ಹೊಸತೊಂದು ಲೋಕಕ್ಕೆ ಎಳೆದೊಯ್ಯುವ, ಅದ್ಯಾವುದೋ ಕಾದಂಬರಿಯಲ್ಲಿ ವರ್ಣಿಸಿದಂತೆ ಕಾಣುವ ಬೀದಿಗಳು.

**ನನ್ನ ಕಣ್ಣ ಕಾಡಿಗೆಯ ಕಪ್ಪು ಬಣ್ಣ, ಮೂಲಂಗಿ ಎಲೆಯ ಹಸಿರುಬಣ್ಣಗಳ ನಾಚಿಸುವ ಹಾಲಕ್ಕಿ ಹೆಂಗಸರ ಕೊರಳ ಮಣಿಗಳು.

**  ಬದುಕಿನ ಬಗೆಗಿರುವ ದ್ವೇಷವನ್ನು ಕಾರುತ್ತಿರುವಂತೆ ಕಾಣುತ್ತಿದ್ದ ನೀಲಿಕಂಗಳ ಹುಡುಗಿಯ ಸೊಂಟದ ಮೇಲಿದ್ದ 'ಡ್ರ್ಯಾಗನ್ ಹಚ್ಚೆ' !

** ಕಿವಿಗೆ ನಾಲ್ಕಾರು ಆಭರಣಗಳ ಚುಚ್ಚಿಸಿಕೊಂಡು rock singerನಂತೆ ಪೋಸ್ ಕೊಡುತ್ತ . 'garlick' ಬೇಕಾ?  ಎಂದು ಕೇಳುತ್ತಿದ್ದ ಹೋಟೆಲಿನ ಹುಡುಗ..!

**ಅದೇನೋ ತಪಸ್ಸನ್ನು ಮಾಡುತ್ತಿರುವಂತೆ ಕಾಣುತ್ತಿದ್ದ ಸಾಣಿಕಟ್ಟದ ಗದ್ದೆಗಳಲ್ಲಿನ ಉಪ್ಪಿನ ರಾಶಿಗಳು. ನೆನಪಾದ ಗಾಂಧೀಜೀ,ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ.!

** ಮುಟ್ಟಾಟವನಾಡುವ ಅಲೆಗಳ ಮೇಲೆ, ಬಾನಾಡಿಗಳ ನಾಚಿಸುತ್ತ ಹಾರುತ್ತಿದ್ದ ಈ ವಿದೇಶಿ ಸಾಹಸಿಗೆ ಅನಂತ ಕಡಲು ಅದ್ಹೇಗೆ ಕಂಡಿರಬಹುದು?
**ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ.  
**ಜಗತ್ತಿನ ಕುತೂಹಲಗಳೆಲ್ಲವನ್ನೂ ತನ್ನ ಬೊಗಸೆ ಕಂಗಳಲ್ಲಿ ತುಂಬಿಕೊಂಡ೦ತೆ ಕಾಣುತ್ತಿದ್ದ  ಕನ್ನಡಿಯ ಕಿನ್ನರಿ..! 
**ಒಂದು ಪಕ್ಕದಲ್ಲಿ ಮಗು, ಇನ್ನೊಂದು ಪಕ್ಕದಲ್ಲಿ ಮಂಗ. ಮನುಕುಲದ ಮನವ ಕಲಕುವ ಕರಾಳ ಚಿತ್ರ ..!  ಬದುಕಿನ ಕಥೆ ..ಇಲ್ಲೆಲ್ಲವೂ ವ್ಯಥೆ .....
**ಸೂರ್ಯಕಿರಣಗಳಿಗೆ ಪುಳಕಗೊಂಡು ಹೊಳೆದು ಶೋಭಿಸುತ್ತಿರುವ, ವಜ್ರದ ಬೆಳಕನ್ನು ನಾಚಿಸುವ ಸ್ಪಟಿಕದ ಮಣಿಗಳು...
** ಅಲೆಗಳ ಆಟವ ನೋಡುತ್ತ, ವಿಶ್ರಾಂತಿ ಪಡೆಯುತ್ತ ನಿಂತ ಈ ದೋಣಿಯ ಕಂಡಾಗ, ನನ್ನಜ್ಜ ನೆನಪಾಗಿದ್ದ !
**.ತನ್ನದೇ ಲೋಕದಲ್ಲಿ ಇರುವ ಇಹದ ಪರಿವೆ ಇದ್ದಂತಿಲ್ಲದ ಅಲೆಮಾರಿ ....
ಬದುಕನ್ನು ವಿರೋಧಿಸುತ್ತಿರುವಂತೆ ಭಾಸವಾಗುವ ಧರಿಸಿರುವ ಕಪ್ಪು ಬಟ್ಟೆ ... 
**  ವಿದೇಶಿಗರ ನೀಲಿ ಕಂಗಳಿಗೆ ಪೈಪೋಟಿ ಕೊಡುತ್ತಿರುವ, ಕಾಡಿಗೆಯ ಕಪ್ಪು ಕಂಗಳು !

**ಅದೆಷ್ಟೋ ನಿಗೂಢಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಸಮುದ್ರ ಮಾನವನ ಮನಸ್ಸಿನ ಪ್ರತಿರೂಪ..!  ಜೀವನದ ಚೇತನ ಸಿಗುವುದೇ ಈ ಕಡಲಿನಿಂದ. ದಡದ ಮೇಲೆ ಪ್ರೀತಿಯಿದೆ, ಒಂದು ಬಗೆಯ ಹುಚ್ಚಿದೆ. ಮರಳಿ ಯತ್ನವ ಮಾಡು ಎನ್ನುವ ಸಂದೇಶವ ಸಾರುವ ಕಡಲ ಅಲೆಗಳ ಭೋರ್ಗರೆತದಲ್ಲಿ ತನ್ನ ಮೌನದ ದೋಣಿಯ ತೇಲಿ ಬಿಟ್ಟು. ಕುಳಿತಿರುವ ವಿದೇಶಿಗ !

** ಮಮ್ಮಿ- ಅಮ್ಮ
ಒಂದೇ ಬೀದಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು.

** ಬಾಲ್ಯ.... 'ಮುಗ್ಧತೆ' ಎರಡು ಚಿತ್ರಗಳಲ್ಲಿನ ಸಮಾನ ಗುಣವಾದರೆ ... 'ಬದುಕು' ವ್ಯತಾಸ ... 
 
**ಬಣ್ಣ ಬಣ್ಣದ ಚಿತ್ರಗಳನ್ನೆಲ್ಲ ಕ್ಯಾಮೆರಾದ ಕಣ್ಣೊಳಗೆ ಸೆರೆಹಿಡಿಯುತ್ತಿದ್ದ ವಿದೇಶಿಗರು ..!


**ಅದ್ಯಾರದ್ದೋ ಮನೆಯ ಬಾಗಿಲ ರಂಗೋಲಿಗೆ ರಂಗು ತುಂಬಲು ತಯಾರಾಗಿರುವ ಬಣ್ಣಗಳ ರಾಶಿ ..!
**ಸೃಷ್ಟಿ-ಬದುಕು (ಅದೇನು ಸಾಲುಗಳ ಬರೆಯಬೇಕೆಂದು ತೋಚಲಿಲ್ಲ )
** ಭಕ್ತರ ಮನೋ ನಿಗ್ರಹ ಪರೀಕ್ಷಿಸಲೆಂದು ಭಗವಂತ ಈ ರೂಪಿಯೇ ??
**ಬಯಲು ಸೀಮೆಯಲೂ ನಾದ ಹೊರ ಹೊಮ್ಮಿಸಲಿ . ಕೊಳಲ ನಾದಕ್ಕೆ ಎಲ್ಲೆ ಎಲ್ಲಿದೆ ? 
**ನೀನು ಒಂಟೆ, ನಾನು ಒಂಟಿ --ಸಮುದ್ರ ತಟದಲ್ಲಿ ಅದೆಷ್ಟೋ ಹೊತ್ತು ಒಂಟೆಯೊಂದಿಗೆ ಸಂಭಾಷಿಸುತ್ತಿದ್ದ ಹೆಂಗಸು.
**ಎರಡು ತಂತಿಗಳ ನಾದದಿಂದಲೇ ಜನರ ಸೆಳೆಯುತ್ತಿದ್ದ, ಕನಸುಕಂಗಳ ಹುಡುಗ ..!
**ತನ್ನ ಕೆಂಬಣ್ಣವನೆಲ್ಲ ರಥದ ಪತಾಕೆಗಳ ಅಂಚಿಗೆ ಸುರಿದು ಪಡುವಣದ ಕಡಲಿಗೆ ಜಾರಲು ಧಾವಿಸುತ್ತಿದ್ದ ರವಿ.
** ನೀಲ ಕಡಲ ತಡಿಯ ಬಂಡೆಯ ಮೇಲೆ ಕೂತು, ಬಾನಲ್ಲಿ ಮಿನುಗುವ ಹಗಲು ಕನಸು ಕಾಣುತ್ತಿರುವಂತೆ ಕಾಣುವ ನಕ್ಷತ್ರ ಮೀನು.

**ಹಳ್ಳಿ ಹೈದರ ಬಾಯಿಯಲ್ಲೂ ಸಲೀಸಾಗಿ ಆಂಗ್ಲಭಾಷೆ ಅಪಭ್ರ೦ಶವಾಗಿ ನಲಿದಾದುವಷ್ಟು ವಿದೇಶೀಯರ ಛಾಯೆ..!

**ಬೆವರು ಇಳಿಸುವ ಬಿಸಿಲಿದೆ, ಒಣ ಹಸಿ ಮೀನುಗಳ ವಾಸನೆಯಿದೆ,ದುಡ್ಡು ಗೋಚಲು ಹವಣಿಸುತ್ತಿದ್ದವರಿದ್ದಾರೆ. ಅಮಲು ಕಂಗಳ ಅರೆಬರೆ ಬಟ್ಟೆಯ ವಿದೇಶಿಯರಿದ್ದಾರೆ..!
** Study circle Libraryಯ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳ ಒಡೆಯ 81 ರ ಹಿರಿಯ ಚೇತನ, ಜೀವನ ಸ್ಪೂರ್ತಿಯ ಚಿಲುಮೆ ವೇದೆಶ್ವರರಿದ್ದಾರೆ. ಅವರ ಪುಸ್ತಕ, ಅಂಚೆ ಚೀಟಿ, ನಾಣ್ಯ,painting ಅದ್ಭುತ ಸಂಗ್ರಹ ನೋಡಿದಾಗ 'ಹಿತ್ತಲ ಗಿಡ ನಮಗೇಕೆ ಮದ್ದಲ್ಲ?' ಎಂದೂ ಎನಿಸುತ್ತದೆ.


**ಜಗತ್ತಿನ ಎಲ್ಲ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಂತೆ ಕಾಣುವ ಜಾಗ ಗೋಕರ್ಣ. ಬದುಕಿನ ಆದ್ಯಾವುದೋ ತಿರುವಿನಲ್ಲಿ ಏನನ್ನೋ ಕಳೆದುಕೊಂಡು ಹುಡುಕಲು ಬಂದಂತೆ ಕಾಣುವ ಜನರು.
ಹರಕೆಯನ್ನು ಕಟ್ಟಲು ಬಂದವರು ಕೆಲವರು, ಹಿರಿಯ ಆತ್ಮಗಳಿಗೆ ಶಾಂತಿ ಕೊಡಲು ಬಂದವರು ಹಲವರು. ಎಲ್ಲ ಕಳೆದುಕೊಂಡು, ಅದೇನನ್ನೋ ಹುಡುಕಿಕೊಂಡು ನಶೆಯ ಜೀವನವ ಕಂಡುಕೊಂಡವರು ಹಲವರು. ಆಧ್ಯಾತ್ಮ ಚಿಂತನೆಯ ಮೂಲ ತತ್ವಗಳ ಅರಸಿ ಬಂದವರು ಒಂದಿಷ್ಟು ಜನ. ಗೋಕರ್ಣ ಸರಳತೆ, ಜಟಿಲತೆ ಹಾಗೂ ವಿಚಿತ್ರಗಳ ಸಂಗಮ.

**ಅಲ್ಲಿನ ಜನರ ಕಣ್ಣಲ್ಲಿ ಹಣದ ದಾಹವಿದೆ, ಹುಡುಕಾಟವಿದೆ, ಕಣ್ಣೀರಿದೆ, ಕನಸುಗಳಿವೆ, ತುಡಿತಗಳಿವೆ, ಪ್ರೀತಿಯಿದೆ, ನಶೆಯಿದೆ. ಕಣ್ಣಿನ ಬಣ್ಣಗಳನ್ನು ನೋಡುವುದಿದ್ದರೆ ಅಲ್ಲಿಯೇ ಅನಿಸಿದ್ದಿದೆ ನನಗೆ.

**'ಬದುಕು' ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳನ್ನು ಕೊಡುವ ತಾಕತ್ತು ಗೋಕರ್ಣಕ್ಕಿದೆ..!

ಕುಟುಂಬದ ಜೊತೆ ಹೋದರೆ 'ತೀರ್ಥಯಾತ್ರೆ'. ಗೆಳೆಯರ ಗುಂಪಲ್ಲಿ ಹೋದರೆ 'ಮೋಜು ಮಜಾ, ಗಮ್ಮತ್ತು'. ಒಬ್ಬರೇ ಅಡ್ಡಾಡಿದರೆ  ಹೊಸ ಲೋಕದ ದರ್ಶನ. !

ಕೊನೆಯಲ್ಲಿ ರಾಮತೀರ್ಥದ ತುದಿಯಲ್ಲೊಮ್ಮೆ ಕುಳಿತು ಇಹವ ಮರೆತು ನೀಲ ಕಡಲ ಕೊನೆಯ ಹುಡುಕಿ. ಅನಂತ ಕಡಲ ರಾಶಿ, ಮೇಲೆ ನೀಲ ನಭ. ಈ ಜಗದಲ್ಲಿ ನಾವೊಂದು 'ಚುಕ್ಕಿ' ಎನಿಸಿಬಿಡುತ್ತೇವೆ.

ಸಂಜೆಯ ರಂಗು ಕಡಲ ಅಲೆಗಳ ಮೇಲೆ ನರ್ತಿಸುತ್ತಿತ್ತು.  ಒಂದಿಷ್ಟು ನೆನಪುಗಳ, ಕಣ್ಣ ಮುಂದೆ, ಕ್ಯಾಮೆರಾದ ಒಳಗೆ ಇರುವ ಚಿತ್ರಗಳ ಹೊತ್ತು ನಾನು ವಾಹನವನೇರಿದ್ದೆ.

ಆದರೆ ...ಮತ್ತೆ ಮತ್ತೆ ಕರೆಯುತ್ತಲೇ ಇರುತ್ತದೆ ಗೋಕರ್ಣ..... ನೀಲಿ ಕಡಲ ನೀಲ ನಭದ.. ಗೋಕರ್ಣ .. !39 comments:

 1. Sooper..

  ee sala adre hogavu..

  ReplyDelete
 2. channgide annodu kadime agutte sowmya.....yavaga nanu oorige barteenoo...yavaga gokarna nodteeno anisitu...allna koti teertha..mattu aparoopada devala gala chitra ni clickisiddi antadare pls adannu serisibidu....
  THANK you.....

  ReplyDelete
 3. @ ಸೌಮ್ಯ, ತುಂಬಾ ಚೆನ್ನಾಗಿ ಬರೆದಿದ್ದೀರ. ಕನಸುಗಳ ಅರ್ಥದ ಹುಡುಕಾಟ ನಿಜಕ್ಕೂ ಉತ್ತಮ ನಿರ್ವಹಣೆ. ಕನಸು ವಿಶಾಲ, ಅನಂತ ಅನ್ನಬಹುದೇನೋ... ಯಾಕಂದರೆ ಸಾಗರಕ್ಕಿಂತ ಆಚೆಯೂ ಕನಸುಗಳು ಹರಿದಾಡುತ್ತವೆ, ಹುಡುಕಾಟ ನಡೆಸುತ್ತವೆ. ಕನಸು ಕಾಣದ ಕೂಸು... ಹೌದಲ್ವಾ...?

  ReplyDelete
 4. ಚೆನ್ನಾಗಿದೆ, ಆದರೆ ನಿಮ್ಮ:'**ಬಯಲು ಸೀಮೆಯಲೂ ನಾದ ಹೊರ ಹೊಮ್ಮಿಸಲಿ . ಕೊಳಲ ನಾದಕ್ಕೆ ಎಲ್ಲೆ ಎಲ್ಲಿದೆ ?' ಈ ಸಾಲಿನ ಬಗ್ಗೆ ನನಗೆ ಸ್ವಲ್ಪ ಗೊಂದಲವಿದೆ ಬಿಡಿಸಿ ಹೇಳಿ; ಕಾರಣ: 'ಬಯಲು ಸೀಮೆಯಲೂ' ಎಂಬ ಪದ ಬಳಕೆ ಮತ್ತು ನಾನು ಬಯಲು ಸೀಮೆಯ ಹುಡುಗ.

  ReplyDelete
 5. ಧನ್ಯವಾದಗಳು ವಿ.ರಾ.ಹೆ,ಚೇತನಕ್ಕ,ದಿವ್ಯಾ ,ವನಿತಕ್ಕ..:)
  @ಅಮಿತಾ ಧನ್ಯವಾದಗಳು, ಸಿಕ್ಕಿದಾಗ ಖಂಡಿತ upload ಮಾಡುತ್ತೇನೆ :)
  ಜಿ.ಎಸ್.ಬಿ.ಅಗ್ನಿಹೋತ್ರಿಯವರೇ ಧನ್ಯವಾದಗಳು :)

  ReplyDelete
 6. @ನಾಗರಾಜ್ ಧನ್ಯವಾದಗಳು. ಕೊಳಲು ಹರಿಯ ಸಂಕೇತ. ಬಂದದ್ದು ಶಿವನ ದರ್ಶನಕ್ಕೆ. ಕರಾವಳಿಯ ಕಡಲ ತಡಿಯಲ್ಲಿ ಕೊಂದ ಕೊಳಲ ನಾದ. ಬಯಲು ಸೀಮೆಯ ತಲುಪುವುದೆಂದರೆ ಖುಷಿಯ ವಿಚಾರವೇ.... ಕೊಂಡುಕೊಳ್ಳುವ ಮೊದಲು ಪರೀಕ್ಷಿಸುತ್ತಿದ್ದ ಚಿತ್ರ ಅದು ..

  ReplyDelete
 7. Yestu chennagive photogalu nodidre noduttale erabeku annisuttade.....tumba sundarvaagi mudibandide........great work hena continue........

  ReplyDelete
 8. Little fuzzy in ur line, it may mislead the feel. for me its clear now,thanks.

  ReplyDelete
 9. Sooper Soumya liked all the lines.. kelvondu chitra nodi badukestu vichitra.. badukinallestu chitra anisuddu sullalla...

  **ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ.
  wav... estu chandada salu koose !!!..

  ReplyDelete
 10. ಅತ್ಯುತ್ತಮ ಲೇಖನ ಸೌಮ್ಯ . ಅಲೆಮಾರಿ ಸಾಲುಗಳಲ್ಲಿ ಗೋಕರ್ಣ ದರ್ಶನ ಮಾಡಿಸಿದ್ದೀಯ . ತುಂಬ ಇಷ್ಟ ಆಯ್ತು.

  ReplyDelete
 11. waav...
  tumbaa chennaagide....

  kelavondu photo bhaavukavaagittu....

  SHRISHTI BADUKU chitra noDi mUkanaade...

  wonderful....

  ReplyDelete
 12. chennagide.. bareda salugalu.. clickkisida chitragalu...

  ReplyDelete
 13. naanua deshto baari Gokarnakke Hogiddene . magummagi alediddene .. alliya vaichitryavannu savididdene .. aadaru nimma drashtiya bagge shahabbas helale beku .. sundara chitragaLodane ...sundara saalugalu kooda .

  Just one word " WOW" .

  ReplyDelete
 14. Sowmya,

  Nanu allige kelavomme hogidde, tumbaa sundara taana, aadre nivu adannu innu sundaravagi varnisddiri, ella photogalau superrr...

  ReplyDelete
 15. ತುಂಬಾ ಇಷ್ಟವಾಯ್ತು ಸೌಮ್ಯ,ಒಂದೊಂದು ಚಿತ್ರವೂ ಒಂದೊಂದು ಕಥೆ ಹೇಳುತ್ತಿವೆ.
  ಸಾಲುಗಳ ನಿರೂಪಣೆಯಲ್ಲಿ ಸೊಗಸಿದೆ..ದೈನಿಕದ ಕ್ಷಣಗಳನ್ನು ಗ್ರಹಿಸಿದ,ಸೆರೆಹಿಡಿದ ಕ್ಯಾಮೆರಾ ಕಣ್ಣುಗಳಿಗೆ ಮರುಳಾದೆ.

  ReplyDelete
 16. ಚಿತ್ರಕ್ಕೊಪ್ಪುವ ಸುಂದರ ಸಾಲುಗಳು..ತುಂಬಾ ಇಷ್ಟವಾಯಿತು.

  ReplyDelete
 17. ಬದುಕು' ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳನ್ನು ಕೊಡುವ ತಾಕತ್ತು ನಿಮ್ಮ ಕೆಮರಾ ಮತ್ತು ಪೆನ್ನಿನ ಮೊನೆಗಿದೆ :-)

  ReplyDelete
 18. ಕೊಲಾಜ್ ತಂತ್ರಗಾರಿಕೆ ಚೆನ್ನಾಗಿದೆ. ಫೋಟೊಗಳೂ ಬೊಂಬಾಟಾಗಿವೆ, ಈ ಲೇಖನವು ಸಂಗ್ರಹ ಯೋಗ್ಯ ಮತ್ತು ಸಂಶೋಧನಾ ಯೋಗ್ಯ.

  ದಯಮಾಡಿ ನನ್ನ ಬ್ಲಾಗಿಗೂ ಬನ್ನರಿ :
  www.badari-poems.blogspot.com
  www.badari-notes.blogspot.com
  www.badaripoems.wordpress.com

  ReplyDelete
 19. Super! Wonderful! ನಿಮ್ಮ ಛಾಯಾಚಿತ್ರಗಳನ್ನೂ, ಆ ಚೆಂದದ ಸಾಲುಗಳನ್ನು.. ಹೊಗಳಲು ಪದಗಳೇ ಸಿಗುತ್ತಿಲ್ಲ!

  ReplyDelete
 20. Tumba creative baraha GokarNada bagge.. Illi tanaka GokarNa andre ondu negative image kattikodo antha articles ne papernalli, alli illi odi saakaagitthu.. Innu matte GokarNakke hodaaga mostly nanu 'SOUMYA KANNU'gala kannadaka hakkand hogte annistu!!

  ReplyDelete
 21. ಧನ್ಯವಾದಗಳು GILIYA,ಪ್ರವೀಣ, ಸುಮಕ್ಕ,ದಿನಕರ್ ಸರ್,ಡಾ. ಚಂದ್ರಿಕಾ ಹೆಗಡೆ ,ವಾಣಿ ,ಶ್ರೀಧರ್ ,ಅಶೋಕ್ ಸರ್ ,ವೆಂಕಟ್ ,ನಾಗರಾಜ ಭಟ್

  ReplyDelete
 22. ನಿಜಕ್ಕೂ ಅತಿ ಉತ್ತಮ ಚಿತ್ರಗಳು. ಅಷ್ಟೇ ಸೊಗಸಾಗಿದೆ ಅಡಿಬರಹ. ನಿಮ್ಮ ಚಿತ್ರಗಳು, ಬರಹಗಳು ಪ್ರಬುದ್ಧತೆ ತೋರುತ್ತದೆ. ಹೀಗೆ ಮುಂದುವರೆಸಿ

  ReplyDelete
 23. Nice snaps, Soumya. Nice perspectives.

  ReplyDelete
 24. ಎರಡು ಫೋಟೋಗಳನ್ನು ಹಾಕಿ....
  ** ಮಮ್ಮಿ- ಅಮ್ಮ
  ಒಂದೇ ಬೀದಿಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು. ಅಂತಾ ಬರ್ದಿದೀಯಲ್ಲಾ.... ತುಂಬಾ ಇಷ್ಟವಾಯ್ತು....

  ಚನ್ನಾಗಿದೆ ಲೇಖನ......

  ReplyDelete
 25. ಗೆಳತಿ ಸೌಮ್ಯಾ,

  "ಅಲೆಮಾರಿ ಸಾಲುಗಳು" ತುಂಬಾ ಚೆನ್ನಾಗಿವೆ. ನೀನೆನೋ ಅವಕ್ಕೆ ಅಲೆಮಾರಿ ಸಾಲುಗಳು ಅಂತ ಹೆಸರಿಸಿ ಆಗಿದೆ. ಆದರೆ ಆ ಸಾಲುಗಳಲ್ಲೇ ಗೋಕರ್ಣದ ಅಗಾಧ ವಿಸ್ತಾರವನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀಯಾ. ನಿಜವಾಗಿಯೂ ಈ ಅಲೆಮಾರಿ ಸಾಲುಗಳಲ್ಲಿ ತುಂಬಾ ಗಹನವಾದ ವಿಚಾರಗಳನ್ನು ಹೇಳಿದ್ದೀಯಾ ಗೆಳತಿ.


  "ಮೀನುಗಾರರ ಶ್ರಮದ ಬೆವರ ಹನಿಯಿಂದಲೇ ಕಡಲ ನೀರು ಉಪ್ಪಾಗಿದೆ." - ಇದಂತೂ ತುಂಬಾ ಅದ್ಭುತವಾದ ತಲೆಬರಹ.
  ಜಗತ್ತಿನ ಕುತೂಹಲಗಳೆಲ್ಲವನ್ನೂ ತನ್ನ ಬೊಗಸೆ ಕಂಗಳಲ್ಲಿ ತುಂಬಿಕೊಂಡ೦ತೆ ಕಾಣುತ್ತಿದ್ದ ಕನ್ನಡಿಯ ಕಿನ್ನರಿ..! - ಇದೂ ಚೆನ್ನಾಗಿದೆ...

  ನಿಜವಾಗಿಯೂ ಗೋಕರ್ಣ ಸರಳತೆ, ಜಟಿಲತೆ ಹಾಗೂ ವಿಚಿತ್ರಗಳ ಸಂಗಮ.

  ನಿನ್ನ "ಅಲೆಮಾರಿ ಸಾಲು" ಗಳಲ್ಲಿ ಇವೆಲ್ಲಾ ವಿಚಾರಗಳನ್ನ ಮನಮುಟ್ಟುವಂತೆ ಹೇಳಿದ್ದೀಯಾ.

  ಧನ್ಯವಾದ ಗೆಳತಿ,
  ಮುಂದೆ ಇನ್ನು ಒಳ್ಳೊಳ್ಳೆ ಬರಹಗಳು ನಿನ್ನಿಂದ ಬರಲಿ, ಎನ್ನುವ ಆಶಯದೊಂದಿಗೆ,

  ಗೆಳೆಯ,
  ಅನಂತ್ ಹೆಗಡೆ.

  ReplyDelete
 26. REALLY I FEEL GREATLY BECAUSE YOU ARE MY 'FRIEND . WHAT A CREATIVITY , HUMANITY, HUMAN BEING ETC......

  THANK GOD.....

  ReplyDelete
 27. Nice photos... specially the black and white ones.. just perfect..
  chitrakke honduva salugalu thumba istavayithu...

  ReplyDelete
 28. ಅದ್ಭುತ ಚಿತ್ರಗಳು. ಅದಕ್ಕೊಪ್ಪುವ, ಅನನ್ಯವಾದ ಸಾಲುಗಳು! ನಿಮ್ಮ ವಿಶಿಷ್ಟ ಚಿ೦ತನೆ ಮನಸೆಳೆಯಿತು. ಅಭಿನ೦ದನೆಗಳು.

  ReplyDelete
 29. ಧನ್ಯವಾದಗಳು ರವಿ,ಅನಂತ್, ನಾಯ್ಡು ಸರ್,ಮಹೇಶ್, & ನಾಗರಾಜ :))

  ReplyDelete
 30. Onde parisaradalli intha vibhinnavada jeevana namge ella kade kanasiguthave. Naavu nodova reethi inda jeevana enu, heege...antha artha maadisuthe. Adanna neevu thumba chennagi heliddira/thorisiddira.
  Good job.... keep writing..
  by Renu

  ReplyDelete
 31. ಚಿತ್ರಗಳು ಅದ್ಬುತ...ಅದರ ಕೆಳಗಿನ ಸಾಲುಗಳು ತು೦ಬಾ ಇಷ್ಟವಾದವು.ಬದುಕಿನ ಬಗೆ ಬಗೆಯ ಬಣ್ಣ ಗಳನ್ನು ಸರಿಯಾಗಿ ಸೆರೆ ಹಿಡಿದಿದ್ದೀರಿ....

  ------ಶ್ರೀ :-)

  ReplyDelete
 32. ಜಯಂತ್ ಕಾಯ್ಕಿಣಿಯವರು ವರ್ಣಿಸುತ್ತಿದ್ದ ಗೋಕರ್ಣದ ಬೀದಿಗಳ ನೆನಪಾಯ್ತು..
  ನಿಜಕ್ಕೂ ಚಂದನೆಯ ಬರಹ...

  ReplyDelete
 33. yes.. Neev baradiradella odta edre Hale nenepella Chuchi chuchi kannu tumbi battu

  ReplyDelete