Tuesday, January 19, 2010

ಹಳ್ಳಿಗಳು ಹಳ್ಳಿಗಳಾಗೆ ಇರಲಿ


ಮಂಗಳೂರಿನ ಜನಜಂಗುಳಿಯಮಧ್ಯೆ ಓಡಾಡುವಾಗಲೂ ಒಮ್ಮೊಮ್ಮೆ ಒಂಟಿ ಎನಿಸಿಬಿಡುತ್ತೇನೆ. ಅವರವರ ಪಾಲಿನ ಗಡಿಬಿಡಿಯ ಜೀವನದ ಮಧ್ಯೆ. ಸುಂದರ ಸಂಬಂಧಗಳು ಅಪರೂಪ. ವ್ರದ್ಧಾಶ್ರಮಗಳು ಹೆಚ್ಚಾಗುತ್ತಿವೆ . ಅದ್ಕ್ಯಕೋ ಬೇಜಾರು ತರುವ ವಿಷಯ ನನಗೆ. private ಬಸ್ಸುಗಳಲ್ಲಿ ಓಡಾಡುವಾಗ ಎಲ್ಲಾದರೂ ನಮ್ಮ ಕಡೆಯ (ಉತ್ತರ ಕನ್ನಡದ ) ಕನ್ನಡ ಕೇಳಿದರೆ ಕತ್ತು ನೋವು ಬರುವಷ್ಟು ಹಿಂತಿರುಗಿ ನೋಡುತ್ತೇನೆ ಅವರನ್ನು ಪತ್ತೆ ಮಾಡುವವರೆಗೂ.

ಮೊದಲೆಲ್ಲ ಮನೆಗೆ ಬರುವಾಗ ರೈಲು ನಿಲ್ದಾಣಕ್ಕೆ ತಮ್ಮನನ್ನೋ, ಅಪ್ಪನನ್ನೋ ಬರಹೇಳುತ್ತಿದ್ದ ನಾನು. ಮೊನ್ನೆ ತಮ್ಮ ಫೋನ್ ಮಾಡಿ "ಬೈಕ್ ತರಲಾ? "ಅಂದಾಗ "ಬೇಡ ಬಸ್ಸಿಗೆ ಬರುತ್ತೇನೆ" ಅಂದುಬಿಟ್ಟೆ. ಅದ್ಯಾಕೋ ನಮ್ಮೂರ ಕೆಂಪು ಬಸ್ಸು ತುಂಬಾ ಚೆಂದಕ್ಕೆ ಕಂಡಿತ್ತು , ಕಿಟಕಿಗಳಿಗೆ ಗಾಜಿಲ್ಲದೆ 'ತಾಡಪತ್ರೆ' ಹಾಕುವ ಮಂಗಳೂರಿನ ಬಸ್ಸುಗಳಿಗೆ ಹೋಲಿಸಿದರೆ . ಆ ದಿನದ ಕೊನೆಯ ಬಸ್ಸಾಗಿತ್ತು ಅದು . ಅದ್ಯಾಕೋ ಮಂಗಳೂರಿನ ಪ್ರೈವೇಟ್ ಬಸ್ಸಿನಲ್ಲಿ ಬರುವ perfume, powder ಪರಿಮಳಕ್ಕಿಂತ ಹಳ್ಳಿಜನರ ಬೆವರು ವಾಸನೆ, ಸರಕಾರಿ ಸಾರಾಯಿ ವಾಸನೆ ಪ್ರಿಯವೆನಿಸಿತ್ತು ನನಗೆ. ಶ್ರಮದ ಬೆವರಲ್ವಾ?? ಸರಕಾರಿ ಸಾರಾಯಿ ಕುಡಿಯುವವರು ಬೆವರಿಳಿಸಿ ದುಡಿವ ಜನರು . ಲಂಚದ ಜನರಿಗೆ ಅಥವಾ ದುಡ್ಡಿದ್ದವರಿಗೆ ಮಾತ್ರ ವಿಸ್ಕಿ, scotch,rum ಇವೆಲ್ಲ ಅಲ್ವಾ? ಒಂದು ಲುಂಗಿಯಲ್ಲಿ ಎಲ್ಲಿಬೇಕಾದರೂ ಹೋಗುವ ಸರಳ ಜನ ನಮ್ಮ ಹಳ್ಳಿ ಜನ. ಕಂಡಕ್ಟರ್ ಜೊತೆ ೫ ರುಪಾಯಿ ಟಿಕೆಟ್ ಗೆ "ಮೂರು ರುಪಾಯಿ ತಗಳ್ರ ಆಗಲಿ " ಎನ್ನುವಾಗ ಒಂದು ಅಜ್ಜಿಯ ಮುಗ್ಧತೆಗೆ ಏನೆನ್ನಬೇಕೋ ಗೊತ್ತಾಗಲಿಲ್ಲ .
ಕೊನೆಯ ಸೀಟಿನಲ್ಲಂತೂ 'love birds'ಗಳದ್ದೇ ಕಾರುಬಾರು. ಕಣ್ ಕಣ್ಣು ಬಿಟ್ಟು ನೋಡುವ ಹಿರಿಯ ಜೀವಗಳು flash backಗೆ ಹೋಗಬೇಕಷ್ಟೆ.!

ಆದ್ರೆ ಬದಲಾವಣೆ ನಿರಂತರ ಅಲ್ವಾ? ಪಟ್ಟಣದ ಗಾಳಿ ಹಳ್ಳಿಗೂ ಬೀಸುತ್ತಿದೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್ಗಳ ಹಾವಳಿ . ಪತ್ರ ಓದದೆ ವರುಷಗಳು ಕಳೆದು ಹೋಗಿವೆ. ಸಂಕ್ರಮಣಕ್ಕೆ ಬರುತ್ತಿದ್ದ greeting cardಗಳ ಪತ್ತೆಯೇ ಇಲ್ಲ .!ಎಲ್ಲೆಲ್ಲೂ ಮೆಸ್ಸೇಜುಗಳದ್ದೆ ದರ್ಬಾರು. ಯಾಕೋ ಸಿಟ್ಟು ಬಂದಿದೆ ಈ ಮೊಬೈಲ್ ಗಳಮೇಲೆ . ಕಾತುರತೆ, ಆ ಗ್ರೀಟಿಂಗ್ಸ್ಗಳ ಕಾಲ ಮುಗಿದೊಯ್ತ ಅಂತ ಅಂತ ಬೇಜಾರಾಗ್ತಿದೆ .ಪತ್ರ, ಗ್ರೀಟಿಂಗ್ಸ್, ಏನೋ ಒಂಥರದ ಖುಷಿ ಎಲ್ಲವನ್ನು ಕಸಿದುಕೊಂಡಿದೆ.

ಇಷ್ಟು ಯೋಚಿಸಿತ್ತಿರುವಾಗಲೇ ನನ್ನ ಮನೆಯ stop ಬಂದಿತ್ತು . ಒಮ್ಮೆ ತಲೆಕೊಡವಿಕೊಂಡು ಎದ್ದೆ ನಾ ಕುಳಿತಿದ್ದ ಸೀಟಿನಿಂದ .
ಹಳ್ಳಿ ಹಳ್ಳಿಯಾಗೆ ಇರಲಿ . ಎಂದು ಹಾರೈಸುವುದೊಂದೇ ನನ್ನ ಪಾಲಿಗೆ ಉಳಿದದ್ದು.

1 comment:

  1. nija badvar oota chann,sirivantar mane channa,
    halli baduku aa vishal manobhavaney jangalu, nijvagiyu adu 1 sundarvad jeevan

    ReplyDelete